30 June 2021

ಹರಿ. ಹನಿ

 ವೈದ್ಯೋನಾರಾಯಣೋ

 ಹರಿ| 

ಅವರ ಸೇವೆಯನು ನೀ 

 ಅರಿ||


#ಸಿಹಿಜೀವಿ

ಸಿ ಜಿ ವೆಂಕಟೇಶ್ವರ

 ತುಮಕೂರು

ತಿರುಗುಬಾಣ ಹನಿ

 


*ತಿರುಗುಬಾಣ* ಹನಿಗವನ



ಅರಿತು ವಿವೇಚನೆಯಿಂದ 

ಬಳಸಿದರೆ

 ಸಾಮಾಜಿಕ ಜಾಲತಾಣ|

ಮೈ ಮರೆತರೆ 

ಆಗುವುದು

 ತಿರುಗುಬಾಣ| |


ಸಿಹಿಜೀವಿ

*ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ* ೩೦/೬/೨೧


 

28 June 2021

ಪರೀಕ್ಷೆ ಹೇಗಿರಬೇಕು? ಲೇಖನ


 



ಕೋವಿಡ್ ಸಂಧರ್ಭದಲ್ಲಿ ದೇಶಾದ್ಯಂತ ಎಲ್ಲೆಡೆ ಒಂದೇ ಚರ್ಚೆ, ಪರೀಕ್ಷೆ ಮಾಡಬೇಕೆ ?ಬೇಡವೇ? ಮಾಡಿದರೆ ಹೇಗೆ ಮಾಡಬೇಕು ? ಅದರ ಸಾಧಕ ಬಾಧಕಗಳೇನು ? ಎಂಬುದನ್ನು ಜನಸಾಮಾನ್ಯರಿಂದ ಹಿಡಿದು ತಜ್ಞರು ತಮ್ಮದೇ ಆದ ವಾದ ,ಅಭಿಪ್ರಾಯ, ಸಲಹೆಗಳನ್ನು ನೀಡುವರು.

ಹಾಗಾದರೆ ಪರೀಕ್ಷೆ ಎಂದರೇನು ಅದರ ಒಳ ಹೊರಗುಗಳು ಏನೆಂದು ನೋಡೋಣ


ಪರೀಕ್ಷೆ ಎಂಬುದು ಜ್ಞಾನ, ಸಾಮರ್ಥ್ಯ, ಮತ್ತು ಪ್ರದರ್ಶನವನ್ನು ಅಳೆಯುವ ಯಾವುದೇ ಒಂದು ವಿಧಾನ ಎಂದು ಹೇಳಬಹುದು. ಆದರೆ ವಿಪರ್ಯಾಸವೆಂದರೆ ಇಂದು ಕೇವಲ ಜ್ಞಾನವನ್ನು ಅಳೆಯಲು, ಅಂಕಿ ಸಂಖ್ಯೆಗಳಲ್ಲಿ , ಮಕ್ಕಳ ಮತ್ತು ವ್ಯಕ್ತಿಗಳ ಸಾಧನೆಯನ್ನು ಅಳೆಯುವ ಮಾಪಕವಾಗಿ ಬಳಸುತ್ತಿದ್ದೇವೆ.


ಹಲವಾರು ಶಿಕ್ಷಣ ತಜ್ಞರು ಮತ್ತು ಮನಶ್ಶಾಸ್ತ್ರಜ್ಞರು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಶಾಲೆ ,ಕಾಲೇಜು ಗಳಲ್ಲಿ ಮಕ್ಕಳ ಜ್ಞಾನ, ಕೌಶಲ್ಯ, ಭಾವನಾತ್ಮಕ ,ಅನ್ವಯ ಮುಂತಾದ ಅಂಶಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲು ಪರೀಕ್ಷೆಯನ್ನು ಬಳಸಲು ಸೂಚಿಸಿದ್ದಾರೆ. ಆದರೆ ಇಂದಿನ ಬಹುತೇಕ ಪರೀಕ್ಷಾ ಪದ್ದತಿಗಳು ಕೇವಲ ಜ್ಞಾನ ಪರೀಕ್ಷೆ ಮಾಡುವಲ್ಲಿ ನಿರತವಾಗಿವೆ 

ಸಾಮಾಜಿಕ ಕೌಶಲ್ಯಗಳು,ಸಂಘಟನಾ ಕೌಶಲ್ಯ, ವೈಜ್ಞಾನಿಕ ಕೌಶಲ್ಯ,ಲಲಿತಕಲೆಗಳು, ಸೃಜನಶೀಲತೆ,ಮನೋಧೋರಣೆ ಮೌಲ್ಯಗಳು ಮುಂತಾದ ಅಂಶಗಳು ಮೌಲ್ಯಮಾಪನದ ವೇಳೆ ಗೌಣವಾಗಿರುವುದನ್ನು ಗಮನಿಸಬಹುದು.


ಹಾಗಾದರೆ ಪರೀಕ್ಷೆಯ ಪದ್ದತಿಯಲ್ಲಿ ಸುಧಾರಣೆ ಆಗಿಲ್ಲವೆ? ಎಂಬ ಪ್ರಶ್ನೆ ಸಹಜ ಖಂಡಿತವಾಗಿಯೂ ಪರೀಕ್ಷಾ ಪದ್ದತಿಯಲ್ಲಿ ಕೆಲ ಸುಧಾರಣೆ ಆಗಿವೆ .ಹಿಂದಿನ ಕಾಲದಲ್ಲಿ ಕೇವಲ ಒಂದು ಅರ್ಧವಾರ್ಷಿಕ ಮತ್ತು ಒಂದು ವಾರ್ಷಿಕ ಪರೀಕ್ಷೆ ಮಾಡಿ ಪಾಸು ,ನಪಾಸು ಮಾದರಿಯ ಮೌಲ್ಯಮಾಪನ ನಡೆಯುತ್ತಿತ್ತು. ಹಲವಾರು ಶಿಕ್ಷಣ ತಜ್ಞರು, ಇದನ್ನು ವಿರೋಧಿಸಿದ ಪರಿಣಾಮವಾಗಿ "ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ "ಜಾರಿಗೆ ಬಂದಿದೆ.

ಇದು ನಿಜಕ್ಕೂ ಸ್ವಾಗತಾರ್ಹ ಕ್ರಮ ಇಲ್ಲಿ ಮೌಲ್ಯಮಾಪನ ಕಲಿಯುವಾಗಲೇ ನಿರಂತರವಾಗಿ ನಡೆಯುತ್ತಲೇ ಇರುತ್ತದೆ ,ಇದರಲ್ಲಿ ರೂಪಣಾತ್ಮಕ ಅಂದರೆ ತರಗತಿಯಲ್ಲಿ ಕಾಲಕಾಲಕ್ಕೆ ನಡೆಯುವ ಚಟುವಟಿಕೆಗಳ ಮೂಲಕ ಕಿರುಪರೀಕ್ಷೆಗಳ ಮೂಲಕ ಮಕ್ಕಳ ಕಲಿಕೆಯನ್ನು ಪರೀಕ್ಷೆ ಮಾಡಲಾಗುತ್ತದೆ, ಮತ್ತು ಸಂಕಲಾನಾತ್ಮಕ ಮೌಲ್ಯಮಾಪನವು ನಿಗದಿಯಾದ ಸಮಯದಲ್ಲಿ ಲಿಖಿತ ಮತ್ತು ಮೌಖಿಕವಾಗಿ ಪರೀಕ್ಷೆಗಳನ್ನು ನಡೆಸಿ ಮಕ್ಕಳ ಕಲಿಕಾ ಪ್ರಗತಿಯನ್ನು ದಾಖಲು ಮಾಡಲಾಗುತ್ತದೆ.

ಇದು ಹಳೆಯ ಪರೀಕ್ಷಾ ಪದ್ದತಿಗಿಂತ ಉತ್ತಮವಾದರೂ ಇದರಲ್ಲಿ ಕೂಡ ದೋಷಗಳು ಇಲ್ಲದಿಲ್ಲ, ಉದಾಹರಣೆಗೆ ಈ ಪದ್ದತಿಯಲ್ಲಿ ನಾವು 90 ರಿಂದ 99 ಅಂಕ ಪಡೆದವರಿಗೆಲ್ಲಾ A+ ಗ್ರೇಡ್ ನೀಡಲಾಗುತ್ತದೆ ,ವರ್ಷ ಪೂರ್ತಿ ಪ್ರಾಜೆಕ್ಟ್ ಗಳನ್ನು ಮಾಡಿ ಮಕ್ಕಳು ಒತ್ತಡಕ್ಕೆ ಸಿಲುಕಬಹುದು.ಮಾಹಿತಿ ಸಂಗ್ರಹ ಮಾಡಲು ಗೂಗಲ್ ಮತ್ತು ಇಂಟರ್ ನೆಟ್ ಹೆಚ್ಚು ಬಳಕೆ ಮಾಡಿ ಇತರೆ ಜ್ಞಾನದ ಮೂಲಗಳನ್ನು ನಿರ್ಲಕ್ಷ್ಯ ಮಾಡುವ ಸಾದ್ಯತೆಯಿದೆ.


ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ನಾವು ಕಂಡಿದ್ದೆವೆ ಅದರಲ್ಲಿ "ಸಮನ್ವಯ ಶಿಕ್ಷಣ" ಸಹ ಒಂದು ಇದರ ಪ್ರಕಾರ ವಿಶೇಷ ಚೇತನ ಮಕ್ಕಳು ಸಾಮಾನ್ಯ ಮಕ್ಕಳ ಜೊತೆಯಲ್ಲಿ ಕಲಿಯುವ ಉತ್ತಮ ಯೋಜನೆ ಇಂತಹ ಮಕ್ಕಳು ಬುದ್ದಿ ಶಕ್ತಿಯಲ್ಲಿ, ಮತ್ತು ಇತರೆ ಅಂಶಗಳಲ್ಲಿ ಸಾಮಾನ್ಯ ಮಕ್ಕಳಿಗಿಂತ ಕಡಿಮೆ ಇದ್ದರೂ ಅವರು ಇತರೆ ಕೌಶಲ್ಯಗಳಲ್ಲಿ ಮುಂದಿರುವರು.ಇಂತಹ ಮಕ್ಕಳ ಸಾಮರ್ಥ್ಯ ಅಳೆಯುಲು ಕೇವಲ ಲಿಖಿತ ಪರೀಕ್ಷೆ ಸೂಕ್ತ ಅಲ್ಲ, ಉದಾಹರಣೆಗೆ ತನ್ನ ದೈನಂದಿನ ಕೆಲಸ ಕಾರ್ಯಗಳನ್ನು ಮೊದಲು ಬೇರೆಯವರ ಸಹಾಯದಿಂದ ಮಾಡಿಕೊಳ್ಳವ ಬುದ್ದಿ ಮಾಂದ್ಯ ಮಗು ಶಾಲಾ ಜೀವನದಲ್ಲಿ ಸ್ನೇಹಿತರೊಡನೆ ಬೆರೆತು ಶಿಕ್ಷಕರ ಮಾರ್ಗದರ್ಶನದಲ್ಲಿ ವರ್ಷದ ಕೊನೆಯಲ್ಲಿ ಅವನ ಕೆಲಸ ಅವನೇ ಮಾಡಿಕೊಂಡರೆ ಅದೇ ಅವನಿಗೆ ರ‌್ಯಾಂಕ್!

ಈ ನಿಟ್ಟಿನಲ್ಲಿ ಸ್ವಲ್ಪ ಪ್ರಗತಿ ಆಗಿರುವುದು ಆಶಾದಾಯಕವಾದ ಬೆಳವಣಿಗೆ.


ಹಾಗಾದರೆ ಆದರ್ಶ ಪರೀಕ್ಷಾ ಪದ್ದತಿ ಯಾವುದು? ಎಂಬ ಪ್ರಶ್ನೆ ಏಳುವುದು ಸಹಜ .ಇದಕ್ಕೆ ಉತ್ತರ ಯಾವುದೂ ಇಲ್ಲ ಎಂತಲೇ ಹೇಳಬೇಕಾಗುತ್ತದೆ , ಬದಲಾದ ಕಾಲಘಟ್ಟದಲ್ಲಿ ಇಂದು ಇರುವ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಮುಂದಿನ ದಿನಗಳಲ್ಲಿ ಔಟ್ ಡೇಟೆಡ್ ಆಗಬಹುದು, ತಾಂತ್ರಿಕತೆ, ಕೃತಕ ಬುದ್ದಿ ಮತ್ತೆ , ಹೆಚ್ಚುತ್ತಿರುವ ಸಾಂಪ್ರದಾಯಿಕವಲ್ಲದ ಉದ್ಯೋಗಗಳು ಮುಂದಿನ ದಿನಗಳಲ್ಲಿ ನಮ್ಮ ಪಠ್ಯಕ್ರಮವನ್ನು ಪುನರ್ ಪರಿಶೀಲಿಸಬೇಕಾಗಬಹುದು,ಆಗ ಅನಿವಾರ್ಯವಾಗಿ ಹೊಸ ಪರೀಕ್ಷಾ ಪದ್ದತಿ ಹೊಸ ಮೌಲ್ಯಮಾಪನ ತಂತ್ರ ಮತ್ತು ಸಾಧನಗಳ ಮೊರೆ ಹೋಗಬೇಕಾದೀತು, ಇದಕ್ಕೆ ಮುನ್ಸೂಚಿಯಾಗಿ ಭಾರತದ ಹೊಸ ಶಿಕ್ಷಣ ನೀತಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಾಣುತ್ತಿದ್ದೇವೆ ಅದರ ಸಮರ್ಪಕವಾದ ಅನುಷ್ಠಾನದಿಂದ ಕಲಿಕೆ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಹೊಸ ಯುಗ ಆರಂಭವಾಗುವುದು ಎಂಬ ಆಶಯ ನಮ್ಮದು.


ಮಕ್ಕಳ ಸರ್ವತೋಮುಖ ಬೆಳವಣಿಗೆಯೆ ಶಿಕ್ಷಣ ಎಂಬ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮಾತುಗಳು ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಮೌಲ್ಯಮಾಪನ ಕ್ಕೆ ಬುನಾದಿಯಾಗಬೇಕಿದೆ,

ಮಹಾತ್ಮ ಗಾಂಧಿಜಿಯವರು ಹೇಳಿರುವ ಮೂಲ ಶಿಕ್ಷಣ ಪರಿಕಲ್ಪನೆಗಳಾದ

ಕರ( ಕೈ) ಉರ( ಹೃದಯ) ಶಿರ( ಜ್ಞಾನ) 

ಇವುಗಳ ಸಮನ್ವಯವಿರುವ 

ಯಾವುದೇ ಪದ್ದತಿಯ ಶಿಕ್ಷಣ ಮತ್ತು ಪರೀಕ್ಷಾ ಪದ್ದತಿಗಳು ಇಂದಿಗೂ ಪ್ರಸ್ತುತ ಎಂಬುದರಲ್ಲಿ ಎರಡು ಮಾತಿಲ್ಲ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


ಜನಮಿಡಿತ . ಲೇಖನ ೨೮/೬/೨೧


 

ತಿಪ್ಪೇರುದ್ರಸ್ವಾಮಿ .ಲೇಖನ .ಜನಮಿಡಿತ . ೨೮/೬ /೨೧


 

ತಿಪ್ಪೇರುದ್ರಸ್ವಾಮಿ .ಲೇಖನ ವೈಬ್ರಂಟ್ ಮೈಸೂರು


 

ಹನಿಗವನ ಪ್ರಜಾಪ್ರಗತಿ ೨೭/೬/೨೧


 

ವಿಶ್ವವಾಣಿ ಕವನ ೨೭/೬/೨೧


 

27 June 2021

ನಂಬಿಕಾರ್ಹ ಗೋಡೆ.ಲೇಖನ


 


ನಂಬಿಕಾರ್ಹ ಗೋಡೆ! ಲೇಖನ


ನನ್ನಿಷ್ಟದ ಕ್ರೀಡಾಪಟು ಭಾರತದ ಗೋಡೆ ,ಆನ್ ಫೀಲ್ಡ್ ಮತ್ತು ಆಫ್ ಪೀಲ್ಡ್ ನಲ್ಲೂ ಸಂಭಾವಿತ ಸಿಂಪಲ್ , ವಿವಾದಗಳಿಂದ ಮುಕ್ತ ರಾಹುಲ್ ದ್ರಾವಿಡ್.


ಕರ್ನಾಟಕದ ರಾಹುಲ್ ದ್ರಾವಿಡ್ ಅವರ ಸ್ಥಿರ ಬ್ಯಾಟಿಂಗ್ ಪ್ರದರ್ಶನದಿಂದ ಪ್ರಪಂಚಾದ್ಯಂತ ಮನೆ ಮಾತಾಗಿದ್ದಾರೆ, ಎಲ್ಲಾ ರೀತಿಯ ಫಾರ್ಮ್ಯಾಟ್ ನಲ್ಲಿ ಆಡಿರುವ ದ್ರಾವಿಡ್ ರವರು ಟೆಸ್ಟ್ ಕ್ರಿಕೆಟ್ ನಲ್ಲಿ ಅವರು ಬ್ಯಾಟ್ ಹಿಡಿದು ವಿಕೆಟ್ ಮುಂದೆ ನಿಂತರೆ ವಿಕೆಟ್ ಗಳು ಅಲುಗಾಡುವುದೇ ಇಲ್ಲ ಚೆಂಡು ಎಸೆಯುವವರು ಬಸವಳಿದು ಬಿಡುವರು .ಎಲ್ಲಾ ಬೌಲರ್‌ಗಳಿಗೆ ಚೆನ್ನಾಗಿಯೇ ನೀರು ಕುಡಿಸಿದ ಕೆಲವೇ ದಾಂಡಿಗರಲ್ಲಿ ನಮ್ಮ ದ್ರಾವಿಡ್ ಕೂಡ ಒಬ್ಬರು ಎಂದರೆ ತಪ್ಪಲ್ಲ, ಕೆಲವೊಮ್ಮೆ ವಿರೋಧಿ ಡ್ರೆಸಿಂಗ್ ರೂಮ್ ಗಳಲ್ಲಿ ರಾಹುಲ್ ರವರನ್ನು ಔಟ್ ಮಾಡುವುದು ಹೇಗೆಂದು ರಾತ್ರಿಯೆಲ್ಲಾ ಪ್ಲಾನ್ ಮಾಡಿದ ತಂಡಗಳೂ ಉಂಟು ಆದರೆ ಹಗಲಿನಲ್ಲಿ ಮೈದಾನದಲ್ಲಿ ಯಥಾಪ್ರಕಾರ ಬಂಡೆ ವಿಕೆಟ್ ಮುಂದೆ ಲೀಲಾಜಾಲವಾಗಿ ಬ್ಯಾಟ್ ಹಿಡಿದು ನಿಲ್ಲುತ್ತಿತ್ತು. ವಿರೋಧಿ ಪಡೆ ರಾತ್ರಿಯೆಲ್ಲಾ ಮಾಡಿದ ತಂತ್ರಗಳು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಇರುತ್ತಿತ್ತು.


ಟೆಸ್ಟ್ ಕ್ರಿಕೆಟ್ ನಲ್ಲಿ ಹತ್ತು ಸಾವಿರ ರನ್ ಗಳಿಸಿದ ಕೆಲವೇ ಆಟಗಾರರಲ್ಲಿ ನಮ್ಮ ರಾಹುಲ್ ಕೂಡಾ ಇದ್ದಾರೆ , ದ್ರಾವಿಡ್ ರವರು ಕ್ರೀಸ್ ನಲ್ಲಿ ಇದ್ದರೆ ಫಲಿತಾಂಶ ಖಂಡಿತವಾಗಿಯೂ ನಮ್ಮ ಪರ ಎಂದು ನಾವು ನಂಬುತ್ತಿದ್ದೆವು , ಅವರ ಆಟ ನಮಗೆ ಭರವಸೆ ಮೂಡಿಸಿತ್ತು, ಅದಕ್ಕೆ ಅವರನ್ನು "ಮಿಸ್ಟರ್ ಡಿಪೆಂಡಬಲ್" ಎಂದು ಖ್ಯಾತಿಯನ್ನು ಪಡೆದಿದ್ದರು. ಕೆಲವೊಮ್ಮೆ ವಿಕೆಟ್ ಹಿಂದೆ ಕೀಪರ್ ಆಗಿಯೂ ತಮ್ಮ ಕೈಚಳಕ ತೋರಿರುವ ,ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ನಾಯಕನಾಗಿಯೂ ಅಡಿದ ಆಲ್ರೌಂಡರ್ ನಮ್ಮ ದ್ರಾವಿಡ್.



ಅವರ ಸಾಧನೆ ಕಂಡು ಹಲವಾರು ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿವೆ ಅವುಗಳೆಂದರೆ


೧೯೯೯: ಸಿಯೆಟ್ ಕ್ರಿಕೆಟರ್ ಆಫ್ ೧೯೯೯ ವರ್ಲ್ಡ್ ಕ

೨೦೦೦: 'ವಿಸ್ಡನ್ ವರ್ಷದ ಕ್ರಿಕೆಟಿಗ' ಪ್ರಶಸ್ತಿ.

೨೦೦೪: 'ಸರ್ ಗಾರ್ಫೀಲ್ಡ್ ಸೋಬರ್ಸ್' ಪ್ರಶಸ್ತಿ.( ವರ್ಷದ ಐಸಿಸಿ ಕ್ರಿಕೆಟಿಗನಿಗೆ ಕೊಡಲಾಗುತ್ತದೆ)

೨೦೦೪: ಭಾರತ ಸರ್ಕಾರದ ಪದ್ಮಶ್ರಿ ಪ್ರಶಸ್ತಿ.

೨೦೦೪; ವರ್ಷದ ಐಸಿಸಿ ಟೆಸ್ಟ್ ಆಟಗಾರ.

೨೦೦೬: ಐಸಿಸಿ ಟೆಸ್ಟ್ ತಂಡದ ನಾಯಕ.

೨೦೧೩: ಪದ್ಮಭೂಷಣ ಪ್ರಶಸ್ತಿ


ಪ್ರಸ್ತುತ ಕೋಚ್ ಆಗಿ, ಐ ಪಿ ಎಲ್ ನಲ್ಲಿ ಐಕಾನ್ ಆಟಗಾರ ನಾಗಿ ,ವೀಕ್ಷಕ ವಿವರಣೆ ಕಾರರಾಗಿ, ಸಲಹೆಗಾರರಾಗಿ, ಈಗೆ ವಿವಿಧ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿದ್ದಾರೆ.


ಬೆಂಗಳೂರಿನಲ್ಲಿ ಪತ್ನಿ ಮತ್ತು ಇಬ್ಬರು. ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿರುವ ರಾಹುಲ್ ದ್ರಾವಿಡ್ ರವರೆಗೆ ಭಗವಂತ ಆಯುರಾರೋಗ್ಯ ಐಶ್ವರ್ಯ ಕರುಣಿಸಲೆಂದು ಬೇಡೋಣ.


ಇತ್ತೀಚಿನ ಯುವ ಆಟಗಾರರು ಮ್ಯಾಚ್ ಪಿಕ್ಸಿಂಗ್ , ಡ್ರಗ್ಸ್ ದಂದೆ, ಯಂತಹ ಅನೈತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಕ್ರಿಕೆಟ್ ನ ಪಾವಿತ್ರತೆಯನ್ನು ಹಾಳುಮಾಡಿರುವುದನ್ನು ನೋಡಿದಾಗ ಯಾಕೋ ರಾಹುಲ್ ದ್ರಾವಿಡ್ ನೆನಪಾಗುತ್ತಾರೆ, ಇವರಂತಹ ಮಾದರಿ ಆಟಗಾರರು ಹೆಚ್ಚು ಉದಯವಾಗಲಿ ಎಂಬುದೇ ಕೋಟ್ಯಂತರ ಭಾರತೀಯರ ನಿರೀಕ್ಷೆ.


"ಸಿಹಿಜೀವಿ"

ಸಿ ಜಿ ವೆಂಕಟೇಶ್ವರ

ತುಮಕೂರು











https://kannada.pratilipi.com/story/%E0%B2%A8%E0%B2%82%E0%B2%AC%E0%B2%BF%E0%B2%95%E0%B2%BE%E0%B2%B0%E0%B3%8D%E0%B2%B9-%E0%B2%97%E0%B3%8B%E0%B2%A1%E0%B3%86-2i677dznmv9n?utm_source=android&utm_campaign=content_share
*ನಂಬಿಕಾರ್ಹ ಗೋಡೆ*
ಲೇಖನ
ಸಿಹಿಜೀವಿ ಸಿ ಜಿ ವೆಂಕಟೇಶ್ವರ

26 June 2021

ಮಾದಕ ವಸ್ತು ಮುಕ್ತ ಭಾರತ .

 #ಮಾದಕದ್ರವ್ಯಮುಕ್ತಭಾರತ 

ಮಾದಕ ವಸ್ತುಗಳ

 ಸೇವಿಸಿ ಹಾಳು

 ಮಾಡಿಕೊಳ್ಳಬೇಡ

 ನಿನ್ನ ಜೀವನ|

 ಉತ್ತಮ ಹವ್ಯಾಸ

 ಬೆಳಿಸಿಕೊಂಡು ಮುನ್ನಡೆ

ಲಭಿಸುವುದು 

 ನಂದನವನ||


#ಸಿಹಿಜೀವಿ

 ಸಿ ಜಿ ವೆಂಕಟೇಶ್ವರ

ತುಮಕೂರು

 

ಪವಾಡ ಪುರುಷ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಗಳು.ಲೇಖನ


 ಪವಾಡ ಪುರುಷ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಗಳು 


ನಮ್ಮ ಕರ್ನಾಟಕದಲ್ಲಿ ಸಹ ಹಲವಾರು ಸಿದ್ದ ಸಾಧಕರು, ಪವಾಡ ಪುರುಷರು ಪವಾಡಗಳನ್ನು ಮಾಡಿ ಮನೆ ಮಾತಾಗಿದ್ದಾರೆ, ಪೂಜ್ಯರಾಗಿದ್ದಾರೆ, 

ಅಂತಹ ಹಲವಾರು ಪವಾಡ ಪುರುಷರಲ್ಲಿ ನನಗೆ ತಿಳಿದ ಕೆಲವರ ಹೆಸರು ಹೇಳುವುದಾದರೆ, ನಾಯಕನ ಹಟ್ಟಿ ತಿಪ್ಪೇರುದ್ರಸ್ವಾಮಿ, ಕೊಳಾಳು ಕೆಂಚವಧೂತರು ,ಕಂದೀಕೆರೆ ಶಾಂತಜ್ಜ ಇತ್ಯಾದಿ...


ನಾಯಕನ ಹಟ್ಟಿ ತಿಪ್ಪೇರುದ್ರಸ್ವಾಮಿ ರವರ ಕೆಲ ಪವಾಡಗಳನ್ನು ನೋಡುವುದಾದರೆ


೧ ಬೆಂಗಾಡಾದ ನಾಯಕನ ಹಟ್ಟಿ ಪ್ರದೇಶದಲ್ಲಿ ಕೆರೆಕಟ್ಟಿಸುವ ಕಾರ್ಯ ಜಾರಿಯಲ್ಲಿತ್ತು ,ಕಾರ್ಮಿಕರು ಸಂಜೆ ಕೂಲಿಗಾಗಿ ನಿರೀಕ್ಷೆಯಲ್ಲಿ ಇದ್ದರು, ಆಗ ಸ್ಥಳಕ್ಕೆ ಬಂದ ತಿಪ್ಪೇರುದ್ರಸ್ವಾಮಿಗಳು ,ಎಲ್ಲರೂ ಕುಳಿತುಕೊಂಡು ನಿಮ್ಮ ಮುಂದೆ ಒಂದೊಂದು ಮಣ್ಣಿನ ಗುಡ್ಡೆ ಮಾಡಿಕೊಳ್ಳಲು ಹೇಳಿದರು, ಏನೂ ಅರ್ಥವಾಗದೆ ಕುಳಿತ ಕಾರ್ಮಿಕರು ತಮ್ಮ ಮುಂದೆ ಮಣ್ಣ ರಾಶಿ ಮಾಡಿದರು, ತಮ್ಮ ಕೈಯಲ್ಲಿ ಹಿಡಿದ ಬೆತ್ತದಿಂದ ಎಲ್ಲಾ ಮಣ್ಣಿನ ರಾಶಿಗಳಿಗೆ ಮಂತ್ರಿಸಿ, ಈಗ ಮಣ್ಣಿನ ರಾಶಿಯಲ್ಲಿ ನಿಮ್ಮ ಕೂಲಿಯಿದೆ ನೋಡಿ ಎಂದರು. ಕುತೂಹಲದಿಂದ ಕಾರ್ಮಿಕರು ಮಣ್ಣ ರಾಶಿ ತೆರೆದರೆ ಕೆಲವರಿಗೆ ಬಂಗಾರದ ನಾಣ್ಯಗಳು, ಕೆಲವರಿಗೆ ಬೆಳ್ಳಿಯ ನಾಣ್ಯಗಳು ಲಬಿಸಿದ್ದವು! ಇನ್ನೂ ಕೆಲವರ ಮಣ್ಣಿನ ರಾಶಿಯಲ್ಲಿ ಏನೂ  ಇರಲಿಲ್ಲ, ಅಂತವರಿಗೆ ಕೆಲಸದಲ್ಲಿ ನಾವು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಅರ್ಥವಾಗಿತ್ತು, ಓರ್ವ ಪ್ರಾಮಾಣಿಕ ಮಹಿಳೆ ಸ್ವಾಮಿ ಗಳ ಬಳಿ ಬಂದು" ಸ್ವಾಮಿ ನನಗೆ ಹೆಚ್ಚು ನಾಣ್ಯ ಬಂದಿದೆ ತೆಗೆದುಕೊಳ್ಳಿ" ಎಂದರು ಆಗ ಸ್ವಾಮಿ ಗಳು "  ನೋಡಮ್ಮ ನೀನು ಗರ್ಭಿಣಿ ಯಾದರೂ ಪ್ರಾಮಾಣಿಕವಾಗಿ ಕೆಲಸ ಮಾಡಿರುವೆ ಆ ಹೆಚ್ಚಿನ ನಾಣ್ಯ     ನಿನ್ನ ಹೊಟ್ಟೆ ಯಲ್ಲಿ ಕೆಲಸ ಮಾಡಿದ ಮಗುವಿಗೆ" ಎಂದರು . ಇದನ್ನು ತಿಪ್ಪೇರುದ್ರಸ್ವಾಮಿ ಗಳು " ಮಾಡಿದಷ್ಟು ನೀಡು ಭಿಕ್ಷೆ " ಎಂದು ಕರೆದರು.


೨ ಒಮ್ಮೆ ಒಂದು ಹಳ್ಳಿಯಲ್ಲಿ ಒಂದು ಕುಟುಂಬ ಎಮ್ಮೆಯ ಸಾಕಾಣಿಕೆ ಮಾಡಿ ಜೀವನ ಸಾಗಿಸುತ್ತಿತ್ತು, ಈಗಿರುವಾಗ ಒಂದು ದಿನ ಎಮ್ಮೆ ಅಕಾಲಿಕವಾಗಿ ಮರಣ ಹೊಂದಿತು, ಕುಟುಂಬದ ಸದಸ್ಯರು ಚಿಂತಾಕ್ರಾಂತರಾಗಿ ಅಳುತ್ತಾ ಕುಳಿತರು, ಅದೇ ದಾರಿಯಲ್ಲಿ ಬಂದ ತಿಪ್ಪೇರುದ್ರಸ್ವಾಮಿ ಗಳು ತಮ್ಮ ಬೆತ್ತದಿಂದ ಎಮ್ಮೆಯನ್ನು ಬದುಕಿಸಿ  ಹಾಲು ಕರೆದು ಕುಟುಂಬದ ಸದಸ್ಯರಿಗೆ ನೀಡಿದರು ." ಇದು ಸತ್ತೆಮ್ಮೆ ಬದುಕಿಸಿದ ಪವಾಡ" ಎಂದು ಹೆಸರು ಪಡೆಯಿತು.


೩ ತಿಪ್ಪೇರುದ್ರಸ್ವಾಮಿಗಳು ಪಂಚಗಾಣಾಧೀಶರಲ್ಲಿ  ಒಬ್ಬರು ಎಂದು ಹೇಳುವರು ಅವರು ಒಮ್ಮೆ ದೇಶ ಸಂಚಾರ ಮಾಡುತ್ತಾ ನಾಯಕನ ಹಟ್ಟಿ ಗೆ ಬಂದಾಗ ರಾತ್ರಿಯಲ್ಲಿ ತಂಗಲು ಸ್ತಳ ಹುಡುಕುವಾಗ ಒಂದು ಮಾರಮ್ಮನ ದೇವಾಲಯ ನೋಡಿ ಒಳಹೋಗಲು ಸಿದ್ದರಾದಾಗ ಮಾರಮ್ಮ ನಿರಾಕರಿಸಿದರು," ಹೋಗಲಿ ಒಂದು ಬೆತ್ತ ಮತ್ತು ಜೋಳಿಗೆ ಇಡಲು ‌ಗುಡಿಯಲ್ಲಿ ಅವಕಾಶವನ್ನು ನೀಡು " ಎಂಬ ಮನವಿಗೆ ಮನ್ನಿಸಿ ಜೋಳಿಗೆ ಮತ್ತು ಬೆತ್ತ ಗುಡಿಯಲ್ಲಿ ಇಟ್ಟ ತಕ್ಷಣ ಗುಡಿಯಲ್ಲಿ ಅಸಂಖ್ಯಾತ ಬೆತ್ತ, ಜೋಳಿಗೆ ತುಂಬಿದವು, ಕೊನೆಗೆ  ಮಾರಮ್ಮನವರಿಗೆ ಇವರು ಪಂಚಗಣಾದೀಶರಲ್ಲಿ ಓರ್ವರು ಎಂದು ತಿಳಿದು   ಆ ದೇಗುಲ ಬಿಟ್ಟು ಹೊರಬಂದರು.


೪ ಒಮ್ಮೆ ಗ್ರಾಮದ ಓರ್ವ ವ್ಯಕ್ತಿಯು ಬಡತನದ ಬೇಗೆಯಲ್ಲಿ ಬೆಂದು ಬೇಸತ್ತು ಕುಳಿತಿದ್ದಾಗ ತಿಪ್ಪೇರುದ್ರಸ್ವಾಮಿ ರವರು ಅವರಿಗೆ ಧಾನ್ಯ ನೀಡುವ ಅಕ್ಷಯ ವಾಡೆ( ಧಾನ್ಯ ಸಂಗ್ರಹ ಮಾಡುವ ಸಾಧನ) ನೀಡಿದರು." ಪ್ರತಿದಿನ ಈ ವಾಡೆಯ ಕೆಳಭಾಗದಲ್ಲಿರುವ ಚಿಕ್ಕ ತೂತಿನ ಬಳಿ ಮೊರ ಹಿಡಿದರೆ ಅಂದು ನಿಮಗೆ ಬೇಕಾದ ದವಸ ಧಾನ್ಯ ಬರುವುದು , ಆದರೆ 

..ಎಚ್ಚರಿಕೆ ಯಾವುದೇ ಕಾರಣದಿಂದ ವಾಡೆಯ ಬಾಗಿಲು ತೆರೆಯಬಾರದು" ಎಂದು ಹೇಳಿ ಆಶೀರ್ವದಿಸಿ ಸ್ವಾಮಿಗಳು ಹೊರಟರು, ಹದಿನೈದು ದಿನ ಸಮಯಕ್ಕೆ ಸರಿಯಾಗಿ ಪವಾಡದ  ದವಸ ಧಾನ್ಯಗಳನ್ನು ಪಡೆದ ದಂಪತಿಗಳು ಸುಖವಾಗಿದ್ದರು ,ಒಂದು ದಿನ ಆ ಮನೆಯ ಗೃಹಿಣಿ ಕುತೂಹಲದಿಂದ ವಾಡೆಯ ಬಾಗಿಲು ತೆರದರು, ಇಡೀ ವಾಡೆ ಸುಟ್ಟ ಬೂದಿಯಾಯಿತು!



ಇಂತಹ ಅಸಂಖ್ಯಾತ ಪವಾಡಗಳನ್ನು ಮಾಡಿರುವ  ತಿಪ್ಪೇರುದ್ರಸ್ವಾಮಿಗಳು ಕೋಟ್ಯಂತರ ಭಕ್ತಾದಿಗಳಿಗೆ ಇಂದಿಗೂ ವರ ನೀಡುವ ದೇವರು , 


ನೀವು ಕೂಡ ಒಮ್ಮೆ ಈ ಪವಾಡಪುರುಷರ ನೆಲೆ ಕಾಣಲು ಉತ್ಸುಕರಾಗಿದ್ದರೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮಕ್ಕೆ ಬರಬೇಕು ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ ಮೂವತ್ತೈದು ಕಿಲೋಮೀಟರ್   ದೂರವಿದೆ ,ಉತ್ತಮ ಸಾರಿಗೆ ಸಂಪರ್ಕವಿದೆ , ಬನ್ನಿ ತಿಪ್ಪೇರುದ್ರಸ್ವಾಮಿ ರವರ ಮಠಕ್ಕೆ ಭೇಟಿ ನೀಡಿ ಗದ್ದುಗೆ ದರ್ಶನ ನೀಡಿ ಪುನೀತರಾಗೋಣ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

21 June 2021

ಸೈಕಲ್ ಹನಿ.


 ht*ಸೈಕಲ್*


ಈ ಲಾಕ್ಡೌನ್

ಸಮಯದಲ್ಲಿ

ಹೆಚ್ಚಾಗುತ್ತಿದೆ

ಹೊಟ್ಟೆಯ ಸೈಜು

ರೇಟಾಗುತ್ತಿದೆ

ಪೆಟ್ರೋಲ್|

ಇವೆರಡಕ್ಕೂ

ಒಂದೇ ಮದ್ದು

ಸೈಕಲ್||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

20 June 2021

ಯೋಗಿಗಳಾಗೋಣ


 



ಯೋಗಿಗಳಾಗೋಣ 


ಯೋಗವು ಪ್ರಪಂಚಕ್ಕೆ ಮನು ಕುಲಕ್ಕೆ ಭಾರತ ನೀಡಿದ ಹೆಮ್ಮೆಯ ಕೊಡುಗೆ ಎಂದು ಹೇಳಲು ಭಾರತೀಯರಾದ ನಮಗೆ ಹೆಮ್ಮೆ ಇದೆ.ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ವಿಶ್ವ ಸಂಸ್ಥೆಯಲ್ಲಿ ಹಕ್ಕೊತ್ತಾಯ ಮಾಡಿದ ಪರಿಣಾಮವಾಗಿ ಪ್ರತಿ ವರ್ಷ ಜೂನ್ ಇಪ್ಪತ್ತೊಂದನೇ ದಿನ "ವಿಶ್ವ ಯೋಗ ದಿನ" ಎಂದು ಘೋಷಣೆ ಮಾಡಿದೆ.


ಪತಂಜಲಿ ಯೋಗ ಶಿಕ್ಷಣ ಸಮಿತಿ ಇಂದು ದೇಶಾದ್ಯಂತ ಯೋಗಾಭ್ಯಾಸ ಶಿಬಿರಗಳನ್ನು ಹಮ್ಮಿಕೊಂಡು ಉಚಿತವಾಗಿ ಯೋಗಾಸ‌ನ ತರಗತಿಗಳನ್ನು ಹಮ್ಮಿಕೊಂಡಿವೆ ಇದರ ಪ್ರಯೋಜನ ಪಡೆವುದು ನಮ್ಮೆಲ್ಲರ ಆದ್ಯ ಕರ್ತವ್ಯ.


ಮೊದಲು ನಾನೂ ಯೋಗಾಭ್ಯಾಸ ಮಾಡುತ್ತಿರಲಿಲ್ಲ, ನಾಲ್ಕು ವರ್ಷಗಳ ಹಿಂದೆ ಹೈದರಾಬಾದ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡಾಗ ಕೆಲವು ಆಸನಗಳ ಪರಿಚಯ ಆಗಿತ್ತು, ನಿರಂತರ ಅಭ್ಯಾಸ ಇರಲಿಲ್ಲ, ಮೊದಲ ಮತ್ತು ಎರಡನೇ ಅಂತರರಾಷ್ಟ್ರೀಯ ಯೋಗ ದಿನದಂದು ಮಾತ್ರ ಯೋಗಾಸನ ಮಾಡಿದ್ದೆ. ಇತ್ತೀಚಿನ  ಕೋವಿಡ್ ಪ್ರಯುಕ್ತ ಲಾಕ್ಡೌನ್ ಕಾಲದಲ್ಲಿ ಯೂತ್ ಪಾರ್ ಸೇವಾ( ವೈಪಿಎಸ್) ಸಂಘಟನೆಯ ಆನ್ಲೈನ್ ಯೋಗ ತರಬೇತಿ ಶಿಬಿರದಲಿ ಹತ್ತು ದಿನಗಳ ಕಾಲ ತರಬೇತಿಯನ್ನು ಪಡೆದು ದಿನವೂ ಕನಿಷ್ಠ ಒಂದು ಗಂಟೆಯ ಕಾಲ ಯೋಗಾಭ್ಯಾಸ ಮಾಡುತ್ತಿರುವೆ , ಅದರಿಂದ ಹಲವಾರು ಪ್ರಯೋಜನಗಳನ್ನು ಅನುಭವಿಸುತ್ತಿರುವೆ. ಬಂಧುಗಳೆ ನೀವೂ ಸಹ ಈ ದುರಿತ ಕಾಲದಲ್ಲಿ ನಮ್ಮ ದೈಹಿಕ ಮತ್ತು ಮಾನಸಿಕ ಅರೋಗ್ಯ ಕಾಪಾಡಿಕೊಳ್ಳಲು, ಸಂಸ್ಕಾರ ಬೆಳೆಸಿಕೊಳ್ಳಲು ಖಂಡಿತವಾಗಿಯೂ ಯೋಗ ಮಾಡಲು ಪ್ರಯತ್ನ ಮಾಡಿ.


ನಾನು ತಿಳಿದಂತೆ ಅಷ್ಟಾಂಗ ಮಾರ್ಗಗಳನ್ನು ಈ ಕೆಳಗಿನಂತೆ ಹೇಳಬಹುದು


ಅಷ್ಟಾಂಗ ಯೋಗ ಎಂದರೇನು?


ಪತಂಜಲಿಯಿಂದ ಪರಿಚಯಿಸಿದ  ಯೋಗಪದ್ಧತಿ ಇಂದು ಪ್ರಪಂಚದಲ್ಲಿ ಹಬ್ಬಿದೆ ಯೋಗವೆಂದರೆ ಚಿತ್ತವೃತ್ತಿನಿರೋಧವೆಂದು ವಿವರಿಸಿದ್ದಾರೆ,ಯೋಗ ಸಾಧನೆ ಮಾಡಲು ಅಷ್ಟಾಂಗ ಮಾರ್ಗ ಅನುಸರಿಸಬೇಕು ಅವೆಂದರೆ ಯಮ, ನಿಯಮ , ಆಸನ , ಪ್ರಾಣಾಯಾಮ , ಪ್ರತ್ಯಾಹಾರ , ಧ್ಯಾನ , ಧಾರಣ , ಸಮಾಧಿ .


 ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಇವು ಯಮದಲ್ಲಿ ಆಚರಿಸಬೇಕಾದ ಅಂಶಗಳು.


 ವಿಹಿತ ಕಾರ್ಯಗಳ ಆಚರಣೆ ನಿಯಮ. ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ,ಈಶ್ವರಪ್ರಣಿಧಾನ-ಇವು ನಿಯಮಗಳು. 


ಆಸನವೆಂದರೆ ನಿಯಮಗಳ ಅಭ್ಯಾಸಕ್ಕೆ ಅನುಕೂಲವಾದ ಸ್ಥಿರವೂ ಸುಖವೂ ಆದ ಭಂಗಿ. ಆಸನಗಳಲ್ಲಿ ಸಿದ್ಧಾಸನ, ಪದ್ಮಾಸನ, ಸ್ವಸ್ತಿಕಾಸನ ಮೊದಲಾದ ವೈವಿಧ್ಯವುಂಟು. 


ಆಸನಸಿದ್ಧಿಯಾದ ಅನಂತರ ಶ್ವಾಸ-ಉಚ್ವಾಸ  ಗಮನಾಗಮನಗಳನ್ನು ತಡೆಯುವುದನ್ನು (ಶ್ವಾಸಪ್ರಶ್ವಾಸಯೋರ್ಗತಿವಿಚ್ಛೇದಃ) ಪ್ರಾಣಾಯಾಮವೆಂದು ಕರೆದಿದ್ದಾರೆ


ಪ್ರಾಣಾಯಾಮದಿಂದ ಶುದ್ಧವಾದ ಚಿತ್ತವನ್ನು ಒಂದೆಡೆ ನಿಲ್ಲಿಸುವುದೇ ಧಾರಣ.


 ಪಂಚೇಂದ್ರಿಯಗಳು ತಂತಮ್ಮ ವಿಷಯಗಳ ಕಡೆ ಒಲಿಯದಂತೆ ತಡೆಹಿಡಿದು, ಧಾರಣದಲ್ಲಿರುವ ಚಿತ್ತದಲ್ಲಿಯೇ ನಿಲ್ಲುವಂತೆ ಮಾಡುವುದು ಪ್ರತ್ಯಾಹಾರ. 



  ಧಾರಣೆಯ ಸ್ಥಳದಲ್ಲಿ ಏಕತಾನತೆಯನ್ನು ಅವಲಂಬಿಸಿ ಚಿತ್ತವನ್ನು ಸ್ಥಿರವಾಗಿ ನಿಲ್ಲಿಸುವುದೇ ಧ್ಯಾನ.


ಧ್ಯಾನ ಧ್ಯಾನವಸ್ತುವಿನ ಸ್ವರೂಪವನ್ನೇ ಪಡೆದು ಚಿತ್ತದ ಸ್ವರೂಪವನ್ನು ಕಳೆದುಕೊಳ್ಳುವುದು ಸಮಾಧಿ (ತದೇವಾರ್ಥ ಮಾತ್ರ ನಿರ್ಭಾಸಂ ಸ್ವರೂಪಶೂನ್ಯಮಿವ ಸಮಾಧಿಃ). 


ಹೀಗೆ ಎಂಟು ಅಂಗಗಳನ್ನು ಆಚರಣೆ ಮಾಡಿದರೆ ಇದು ಮೋಕ್ಷಕ್ಕೆ ದಾರಿಯಾಗುವುದು ನಾವು ಬಹಳಷ್ಟು ಜನ ಈ ಎಂಟು ಅಂಗಗಳಲ್ಲಿ ಕೆಲವೊಮ್ಮೆ ಪ್ರಾಣಾಯಾಮದ ವರೆಗೆ ತಲುಪಿರುವೆವು, ಇದೂ ಸಹ ಕಡಿಮೆ ಸಾಧನೆಯೇನಲ್ಲ, ಮುಂದಿನ ಹಂತಗಳನ್ನು ಅಭ್ಯಾಸ ಮಾಡಿದರೆ ಸಮಾಧಿ ಸ್ಥಿತಿ ತಲುಪುವುದು ಕಷ್ಟವೇನಲ್ಲ ,  


ಯೋಗಾಭ್ಯಾಸ ದ ಹೆಸರಲ್ಲೇ ಅಭ್ಯಾಸ ಇರುವುದು ಪ್ರತಿದಿನ ಯೋಗಾಭ್ಯಾಸವನ್ನು ವೃತದಂತೆ ಪಾಲಿಸಿದರೆ ಭಗವಂತ ನೀಡಿದ ಶರೀರವನ್ನು ಆರೋಗ್ಯ ಪೂರ್ಣವಾಗಿ ಇಟ್ಟುಕೊಳ್ಳುವ ಜೊತೆಗೆ ಮಾನಸಿಕ ಆರೋಗ್ಯದ ವೃದ್ಧಿಯಾಗಿ , ನಮ್ಮ ಆತ್ಮ ಶುದ್ದಿಯಾಗಿ ಮುಂದೆ ಪರಮಾತ್ಮನಲ್ಲಿ ಸುಲಭವಾಗಿ ಲೀನವಾಗುತ್ತದೆ.

ನಮ್ಮದು ಯೋಗಿಗಳ ನಾಡು ಯೋಗಾಚರಣೆ ಮಾಡುವರೆಲ್ಲರೂ ಯೋಗಿಗಳೆ,ಭೋಗದಿಂದ ತರ ತರದ ರೋಗಗಳು ನಮ್ಮನ್ನು ಕಾಡುವವು, ಯೋಗಕ್ಕೆ ರೋಗ ನಿವಾರಣೆ ಮಾಡುವ ತಾಕತ್ತು ಇದೆ, ಮತ್ತೇಕೆ ತಡ ಬನ್ನಿ ಯೋಗಿಗಳಾಗೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

19 June 2021

ಮಲ್ಲಿಗೆ .ಹನಿ

 *ಮಲ್ಲಿಗೆ*


ಪರಿಮಳದಲಿ

ಸೌಂದರ್ಯದಲಿ

ಸಾಟಿಯುಂಟೆ

ದುಂಡು ಮಲ್ಲಿಗೆ|

ಇಂದೇ ನೀಡುವೆ 

ನೀಡುವೆ ಇದನು

ಮನಗೆದ್ದ"ಮಲ್ಲಿ"ಗೆ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಕಾಮನಬಿಲ್ಲಾಗೋಣ .ಲೇಖನ


 


*ಕಾಮನಬಿಲ್ಲಾಗೋಣ*


ಕೆಲವು ವ್ಯಕ್ತಿಗಳನ್ನು ನೋಡಿದಾಗ, ಅವರ ವಿಚಿತ್ರ ನಡವಳಿಕೆಗಳು, ಮಾತುಗಳು ಹಾವ ಭಾವಗಳನ್ನು ನೋಡಿದಾಗ ದೇವರು ಹೋಮೋಸೇಪಿಯನ್ಸ್ ನಲ್ಲೇ ಎಂತೆಂಥ ಸ್ಪೀಸೀಸ್ ಸೃಷ್ಟಿ ಮಾಡಿರುವನಪ್ಪ ಎನಿಸುವುದು,


ರೇವತಿಗೆ ಮದುವೆಯಾಗಿ ಐದು ವರ್ಷಗಳಾದರೂ ಮಕ್ಕಳಾಗದಿರುವುದು ತಿಳಿದಿದ್ದರೂ ಸುಚಿತ್ರ  ಅವಳ ಮುಂದೆ ತನ್ನ ಮಕ್ಕಳ ಬಗ್ಗೆ ಕೊಚ್ಚಿ ಕೊಳ್ಳುತ್ತಿದ್ದಳು.


ಸತೀಶನಿಗೆ ಜೀವನ ನಡೆಸುವುದೇ ಕಷ್ಟದ ಪರಿಸ್ಥಿತಿ ಇರುವುದನ್ನು ತಿಳಿದೂ ಸಹ ಅವನ ಗೆಳೆಯ ರವಿ "ನೀನೇಕೆ ಈ ವರ್ಷ ಮನೆ ಕಟ್ಟಬಾರದು? ನೋಡು ನಾನೆಂಥಹ ಬಂಗಲೆಯಂತಹ ಮನೆ ಕಟ್ಟಿಸಿರುವೆ" ಎಂದು ಹಂಗಿಸುತ್ತಿದ್ದ. 


ಇವು ಕೇವಲ ಸ್ಯಾಂಪಲ್ ,ದಿನನಿತ್ಯ ಇಂತವರು ನಮ್ಮ ಮಧ್ಯ ಬಹಳ ಜನ ಸಿಗುತ್ತಾರೆ,

ನಾವು ಸಮಾಜ ಜೀವಿಯಾದರೂ ಕೆಲವೊಮ್ಮೆ ನಮ್ಮ ನಡವಳಿಕೆಗಳು ಇತರರಿಗೆ ಕಿರಿಕಿರಿ ಉಂಟುಮಾಡುವವು 

ಇಂತವರಿಗೆ ಸೋಶಿಯಲ್ ಮ್ಯಾನರ್ಸ್ ಇರುವುದಿಲ್ಲ ಎಂದು ವಿಶೇಷವಾಗಿ ಹೇಳಬೇಕಿಲ್ಲ.


ಇಂತಹ ವ್ಯಕ್ತಿಗಳ ನಡವಳಿಕೆಗಳನ್ನು ನೋಡಿದಾಗ ಇತ್ತೀಚಿಗೆ ನನ್ನ ಗೆಳೆಯ ಕಳಿಸಿದ  ವಾಟ್ಸಪ್ ಸಂದೇಶ ಓದಿ ಅದರ ಆಧಾರದಲ್ಲಿ ನಮ್ಮ ಸಾಮಾಜಿಕ ನಡವಳಿಕೆಗಳನ್ನು ಈ ಕೆಳಗಿನಂತೆ ಅಳವಡಿಸಿಕೊಳ್ಳಬಹುದು ಅನಿಸಿತು.


 ಕೆಲವೊಮ್ಮೆ ನಾವು ಯಾರಿಗಾದರೂ ಎರಡು ಬಾರಿಗಿಂತಲೂ ಹೆಚ್ಚು  ಕರೆ ಮಾಡಿದಾಗ  ಅವರು ನಮ್ಮ ಕರೆಯನ್ನು ಸ್ವೀಕರಿಸದಿದ್ದರೆ ಅವರಿಗೆ  ಏನಾದರೂ ಮುಖ್ಯವಾದ ಕೆಲಸವಿದೆ ಎಂದು ತಿಳಿದು ನಂತರ ಪ್ರಯತ್ನ ಮಾಡೋಣ.


ಹಲವಾರು ಬಾರಿ ನಾವು ನಮ್ಮ ಸ್ನೇಹಿತರಿಂದ ತುರ್ತು ಬಳಕೆ ಗಾಗಿ ಹಣವನ್ನೋ, ಕೊಡೆಯನ್ನೋ ಲಂಚ್ ಬಾಕ್ಸನ್ನೋ ಪಡೆದಿರುತ್ತೇವೆ ಆದರೆ ಅದನ್ನು ಬಹಳ ಸಲ ಸಮಯಕ್ಕೆ ಸರಿಯಾಗಿ ಹಿಂತಿರುಗಿಸಿರುವುದಿಲ್ಲ, 


ನಾನು ನನ್ನ

ಗೆಳೆಯನಿಂದ

ಪಡೆದ ಕೊಡೆ|

ಅವನಿಗೆ ಎಂದಿಗೂ

ಹಿಂತಿರುಗಿ ಕೊಡೆ||


ಎಂಬಂತಾಗುವುದು ಬೇಡ ಪಡೆದ ವಸ್ತುಗಳನ್ನು ಹಿಂತಿರುಗಿಸುವುದು ನಮ್ಮ ವ್ಯಕ್ತಿತ್ವದ ಪ್ರತಿಬಿಂಬವಾಗುವುದು.


 ಯಾರಾದರೂ ನಮ್ಮ ಪರಿಚಿತರು ಸ್ನೇಹಿತರು ಪಾರ್ಟಿ ಕೊಡುವೆವು ಎಂದರೆ ಬೇಕಂತಲೇ ದುಬಾರಿ ತಿನಿಸುಗಳನ್ನು ಕೇಳದೇ ಇರೋಣ ಏಕೆಂದರೆ ಮಾನವನ ಗುಣವೇ ಹಾಗೆ ಪುಕ್ಕಟೆ ಸಿಗುವುದೆಂದರೆ ನನಗೂ ಇರಲಿ ನನ್ನ ಮೊಮ್ಮಕ್ಕಳಿಗೂ ಇರಲಿ ಎಂಬ ಜಾಯಮಾನದವರು ನಾವು, ಬೇರೆಯವರ ಅರ್ಥಿಕ ಪರಿಸ್ಥಿತಿಯನ್ನು ಸಹ ಗಮನದಲ್ಲಿಟ್ಟುಕೊಂಡು ನಮ್ಮ ಬೇಡಿಕೆ ಸಲ್ಲಿಸೋಣ.


ನಮ್ಮ ಕೆಲವು ಸ್ನೇಹಿತರು ಹೊಟೆಲ್ ನಲ್ಲಿ ಬಿಲ್ ಕೊಡುವಾಗ, ಟ್ಯಾಕ್ಸಿಗೆ  ಹಣ ನೀಡುವಾಗ ಮೊದಲೇ ಹೊರಬಂದಿರುತ್ತಾರೆ,ಇಲ್ಲವೇ ಪರ್ಸ್ ಮರೆತುಬಂದಿರುತ್ತಾರೆ! ಹೀಗಾಗುವುದು ಬೇಡ ,ಒಮ್ಮೆ ಅವರು ಹಣ ನೀಡಿದರೆ ಮತ್ತೊಮ್ಮೆ ನಾವು ಕೊಡೋಣ ,ಯಾರಿಗೂ ಹೊರೆಯಾಗುವುದು ಬೇಡ.


ನಮ್ಮ ಕೆಲವು ಸ್ನೇಹಿತರು ತಮ್ಮದೇ ಸರಿ ಎಂದು ವಾದ ಮಾಡುವುದು ಸಾಮಾನ್ಯ 

 ಅದರ ಬದಲಾಗಿ ನಾವು ಇತರರ  ಅಭಿಪ್ರಾಯಗಳನ್ನು ಗೌರವಿಸಬೇಕು . ನಮಗೆ 6  ಕಾಣುವುದು ಎದುರಾಗಿರುವ ಯಾರಿಗಾದರೂ 9 ಕಾಣಿಸುತ್ತದೆ. ಅದಕ್ಕಾಗಿ ಮುಕ್ತ ಮನಸ್ಸು ಹೊಂದೋಣ ಇತರರ ಅಭಿಪ್ರಾಯಗಳನ್ನು ಸ್ವೀಕರಿಸೋಣ, ಆದರೆ ವಿತಂಡವಾದಗಳನ್ನಲ್ಲ.


ಕೆಲವೊಮ್ಮೆ ನಾವು ವಟ ವಟ ಮಾತನಾಡುತ್ತಾ ಇರುವೆವು ನಮ್ಮ ಜೊತೆಯಲ್ಲಿರುವವರು ಮಾತನಾಡಲು ಪ್ರಯತ್ನ ಪಟ್ಟರೂ ಅವರ ಬಾಯಿ ಮುಚ್ಚಿಸಿ ಮಾತನಾಡುತ್ತಲೆ ಇರುವೆವು, ಇದು ನಮ್ಮ ವ್ಯಕ್ತಿತ್ವಕ್ಕೆ ಶೋಭೆ ತರದು, ದೇವರು ನಮಗೆ ಒಂದು ಬಾಯಿ ,ಎರಡು ಕಿವಿಕೊಟ್ಟಿರುವನು,ಹೆಚ್ಚು ಕೇಳಿಸಿಕೊಳ್ಳೋಣ ಕಡಿಮೆ ಮಾತನಾಡೋಣ.


ದೇವರೂ ಸಹ ಹೊಗಳಿಕೆಗೆ ಮಾರು ಹೋಗುವನು ಅದಕ್ಕಾಗಿ ಅಷ್ಟೋತ್ತರ,ಸಹಸ್ರ ನಾಮಗಳ ಉದಯವಾಗಿವೆ ,ಇನ್ನೂ ಮಾನವರಾದ ನಾವೂ ಹೊಗಳಿಕೆ ಬೇಡವೆನ್ನಲಾದೀತೆ ?


ತನ್ನ ಸಾಧನೆ ಕಂಡು

ಗೆಳೆಯರಿಂದ ಅವನು

ನಿರೀಕ್ಷಿಸಿದ್ದ ಹೊಗಳಿಕೆ|

ಪಾಪ ಅವನ 

ಸ್ನೇಹಿತರಿಗೆ ಹೊಗಳಲು

ಹೊರಟರೆ ಬರುವುದು

ಆಕಳಿಕೆ||


ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಕಂಜ್ಯೂಸ್ ಆಗದೆ ಎಲ್ಲರ ಮುಂದೆ ಹೊಗಳೋಣ, ತೆಗಳುವುದಿದ್ದರೆ ಒಬ್ಬರೆ ಇದ್ದಾಗ ತೆಗಳೋಣ.


ನಮ್ಮ ಜೀವನದಲ್ಲಿ ಪ್ರತಿ ಕ್ಷಣ ನಮಗೆ ಯಾರಾದರೂ ಯಾವುದಾದರೂ ಸಹಾಯ ‌ಮಾಡುತ್ತಲೇ ಇರುವರು ಅವರಿಗೆ ಕೃತಜ್ಞತೆ ಸೂಚಿಸುವುದು ನಮ್ಮ ಕರ್ತವ್ಯ, ಜಸ್ಟ್ ಅವರಿಗೊಂದು ತ್ಯಾಂಕ್ಸ್ ಹೇಳಿ ಅವರ ಸಂತೋಷವನ್ನು ಗಮನಿಸಿ, ನೀವೂ ತ್ಯಾಂಕ್ಸ್ ಪಡೆದುಕೊಂಡಾಗ ನಿಮಗಾದ ಆನಂದ ಅನುಭವಿಸಿ, ಇದಕ್ಕೇನು ಖರ್ಚಾಗುವುದಿಲ್ಲ ಬದಲಾಗಿ ಆನಂದದ ಕ್ಷಣಗಳು ಲಬ್ಯವಾಗುವವು.


ನಮ್ಮ ಪರಿಚಯದವರು ಸಹೋದ್ಯೋಗಿಗಳು ಆಸ್ಪತ್ರೆಗೆ ಹೊರಟಾಗ ನಾವು ಯಾಕೆ? ಎಲ್ಲಿ? ಹೇಗೆ ? ಎಂದು ಸಿ ಬಿ ಐ ಅಧಿಕಾರಿಗಳ ರೀತಿಯಲ್ಲಿ ತನಿಖೆ ಮಾಡುವುದು ಸಾಮಾನ್ಯ, ಈ ರೀತಿಯ ಪ್ರಶ್ನೆಗಳನ್ನು ಕೆಲವೊಮ್ಮೆ ಕೆಲವರು ಇಷ್ಟ ಪಡುವುದಿಲ್ಲ ಬೇರೆಯರ ಭಾವನೆಗಳನ್ನು ಗೌರವಿಸೋಣ, ಎಲ್ಲಾ ಸರಿಯಾದಾಗ ಕೆಲವೊಮ್ಮೆ ಅವರೆ ನಮಗೆ ಮುಂದೆ ವಿಷಯ ತಿಳಿಸುವರು.


ಐದಾರು ಜನ ಒಟ್ಟಿಗೆ ಸೇರಿದಾಗ ಸುಮ್ಮನೆ ಹೊಟ್ಟೆ ನೋವು ಎನ್ನಿ ,ಕನಿಷ್ಠ ನಾಲ್ಕು, ಮದ್ದು, ಐದು ಸಲಹೆ , ಮೂರು ಊಹೆ ಖಂಡಿತವಾಗಿಯೂ ಸಿಗುತ್ತದೆ ,ನಮ್ಮೂರಲ್ಲಿ ಯಾಕೋ ನೀರು ಸರಿಯಾಗಿ ಬರುತ್ತಿಲ್ಲ ಎಂದಿರೋ ಪಿ ಡಿ ಓ ಇಂದ ಹಿಡಿದು ಸಿ ಇ ಓ ಸೇರಿಸಿ ಕಂಪ್ಲೇಂಟ್ ಕೊಡಿ ಎಂಬ ಸಲಹೆ ವೀರರು ಅಪಾರ, ನಮ್ಮನ್ನು ಕೇಳದ ಹೊರತು ಮತ್ತೊಬ್ಬರ ವ್ಯವಹಾರಗಳಲ್ಲಿ ಮೂಗು ತೂರಿಸದೇ ಇರೋಣ ಅನವಶ್ಯಕ ಸಲಹೆಗಳನ್ನು ನೀಡದಿರೊಇಣ.ಇದು ನಮ್ಮ ವ್ಯಕ್ತಿತ್ವ ಸೂಚಕವಾಗುತ್ತದೆ.


ನಮ್ಮ ಕಣ್ಣುಗಳು ಆರೋಗ್ಯವಾಗಿದ್ದು ಬಿಸಿಲಿನ ತಾಪ ತಡೆಯಲು ಸನ್ಗ್ಲಾಸ್ ಹಾಕಿದ್ದರೆ ರಸ್ತೆಯಲ್ಲಿ ಯಾರಾದರೂ ಪರಿಚಿತರು ಭೇಟಿಯಾದರೆ 

ಅವರೊಂದಿಗೆ ಮಾತನಾಡುತ್ತಿದ್ದರೆ ನಮ್ಮ ಸನ್ಗ್ಲಾಸ್ ತೆಗೆದು ಮಾತನಾಡೋಣ.  ಇದು ಗೌರವದ ಸಂಕೇತ. ಜೊತೆಗೆ ಕಣ್ಣಲ್ಲಿ ಕಣ್ಣಿಟ್ಟು ಮಾತಾನಾಡುವವುದು  ಉತ್ತಮ ಸಂಪರ್ಕಕ್ಕೆ ಪೂರಕ.


ನಮ್ಮಲ್ಲಿ ಕೆಲವರಿಗೆ ನಮ್ಮ ಸಿರಿವಂತಿಕೆಯನ್ನು ಪ್ರದರ್ಶನ ಮಾಡುವ ಖಯಾಲಿ,

 ಬಡವರ ಮಧ್ಯೆ ನಮ್ಮ ಸಂಪತ್ತಿನ ಬಗ್ಗೆ ಎಂದಿಗೂ ಮಾತನಾಡದಿರೋಣ.  ಅದೇ ರೀತಿ, ಮದುವೆಯಾಗಿ ಮಕ್ಕಳಾಗದವರ ಮುಂದೆ   ಮಕ್ಕಳ ಸಾಧನೆಗಳ ಬಗ್ಗೆ ಪದೇ ಪದೇ  ಮಾತನಾಡದಿರೋಣ.


 ಈ ಮೇಲಿನ ಕೆಲ ಸಾಮಾಜಿಕ ನಡವಳಿಕೆಗಳು ಸಣ್ಣ ಸಣ್ಣವು ಎಂದುಕೊಂಡರೂ ಬದಲಾವಣೆ ಚಿಕ್ಕ ಅಂಶಗಳಿಂದಲೇ ಅರಂಭವಾಗುವುದು ಈ ಅಂಶಗಳನ್ನು ಅಳವಡಿಸಿಕೊಂಡು ನೋಡೋಣ , ಬದಲಾವಣೆಗೆ ಪ್ರಯತ್ನ ಮಾಡೋಣ.ನಮ್ಮ ಸಮಾಜದಲ್ಲಿ ನಮ್ಮಿಂದ ಬೇರೆಯವರಿಗೆ ತೊಂದರೆಯಾಗಿ ಮನಸ್ಸು ನೋವು ಮಾಡಿಕೊಂಡಿದ್ದರೆ ನಾವೇಗೆ ಸಂತಸವಾಗಿರಲು ಸಾದ್ಯ? ಕೇವಲ ಒಂದು ಬಣ್ಣ ಸೇರಿ ಕಾಮನಬಿಲ್ಲು ಆಗಲು ಸಾಧ್ಯವೇ? ಪ್ರತಿಯೊಬ್ಬರೂ ಸೇರಿ ಅರ್ಥಪೂರ್ಣವಾದ ಕಾಮನ ಬಿಲ್ಲಾಗೋಣ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


 

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*೧೯/೬/೨೧


 

ಸಮ ಸಮಾಜಕ್ಕೆ ಪಣ ತೊಡೋಣ .ಲೇಖನ


 ಸಮ ಸಮಾಜಕ್ಕೆ ಪಣತೊಡೋಣ ಲೇಖನ

ಶತಮಾನಗಳಿಂದ ವಿವಿಧ ರೀತಿಯಲ್ಲಿ ತುಳಿತಕ್ಕೊಳಗಾದ ಜನರ ಮೇಲೆ ಶೋಷಣೆಗಳು ನಡೆದುಕೊಂಡೇ ಬಂದಿವೆ ಅದು ಇಂದಿಗೂ ಮುಂದುವರೆದಿರುವುದು ಶೋಚನೀಯ ಮತ್ತು ಆತಂಕಕಾರಿಯಾಗಿದೆ.


ಬುದ್ದ, ಬಸವಣ್ಣ, ವಿವೇಕಾನಂದರಾದಿಯಾಗಿ ಗಾಂದೀಜಿ, ಅಂಬೇಡ್ಕರ್ ರಂತಹ ಮಹಾನ್ ಚೇತನಗಳು ತುಳಿತಕ್ಕೊಳಗಾದವರ ಏಳಿಗೆಗೆ ಶ್ರಮಿಸಿದರು, ಇವರ ಶ್ರಮದ ಪರವಾಗಿ ಇಂದಿನ ದಿನಗಳಲ್ಲಿ ಸ್ವಲ್ಪ ಶೋಷಣೆಯ ಪ್ರಮಾಣದಲ್ಲಿ ಕಡಿಮೆಯಾದರೂ ಪೂರ್ಣವಾಗಿ ನಿಂತಿಲ್ಲ.


ಸಾಮಾಜಿಕ ,ಆರ್ಥಿಕ, ರಾಜಕೀಯ, ಶೈಕ್ಷಣಿಕ. ಔದ್ಯೋಗಿಕ ಹೀಗೆ ವಿವಿದ ರಂಗಗಳಲ್ಲಿ ಶೋಷಣೆ ಅವ್ಯಾಹತವಾಗಿ ಮುಂದುವರೆದಿದೆ.


ಇದಕ್ಕೆ ಹಲವಾರು ಕಾರಣಗಳನ್ನು ನೀಡಬಹುದು ಶಿಕ್ಷಣದ ಕೊರತೆ, ಮಾಹಿತಿ ಕೊರತೆ, ಅಜ್ಞಾನ, ಆರ್ಥಿಕ ಅವಲಂಬನೆ ಮೂಲಭೂತ ಸೌಲಭ್ಯಗಳ ಕೊರತೆ, ಮೂಢನಂಬಿಕೆಗಳು, ಉಳ್ಳವರ ದರ್ಪ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.


ಹಾಗಾದರೆ ಹೀಗೆ ತುಳಿತಕ್ಕೊಳಗಾದವರ ಶೋಷಣೆಗೆ ಕೊನೆ ಇಲ್ಲವೆ ?


ನಮ್ಮ ನಾಡಿನ ಚಿಂತಕರು, ಕವಿಗಳು, ಈ ಶೋಷಣೆಯ ವಿರುದ್ಧವಾಗಿ ದ್ಚನಿ ಎತ್ತಿದ್ದಾರೆ ಇದರಲ್ಲಿ ರಾಷ್ಟ್ರಕವಿ ಕುವೆಂಪು ,ಶಿವರಾಮ ಕಾರಂತರು ಹಾಗೂ ಇತರೆ ಕವಿಗಳು ತಮ್ಮ ಕೃತಿಗಳಲ್ಲಿ ತುಳಿತಕ್ಕೊಳಗಾದವರ ಬವಣೆಗಳನ್ನು ಚಿತ್ರಿಸಿ ಅವರು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರೇರಣೆ ನೀಡಿದರು.


ಇತ್ತೀಚಿನ ನಮ್ಮನಗಲಿದ  ದಿವಂಗತ ಕವಿಗಳಾದ ಸಿದ್ದಲಿಂಗಯ್ಯ ರವರು ಶೋಷಣೆ ವಿರುದ್ಧದ ಧ್ವನಿಯನ್ನು ಜೋರಾಗಿ ಮೊಳಗಿಸಿ ಉಳ್ಳವರು ಮಾಡುವ ಶೋಷಣೆ  ವಿರುದ್ಧವಾಗಿ " ಇಕ್ರಲಾ... ಒದಿರಲ...." ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇವನೂರ ಮಹಾದೇವ ರವರು ಸಹ ಈ ನಿಟ್ಟಿನಲ್ಲಿ ಸಂಘಟನೆ, ಸಾಹಿತ್ಯದ ಮೂಲಕ ತುಳಿತಕ್ಕೊಳಗಾದವರ ಜಾಗೃತಿ ಮೂಡಿಸುತ್ತಿದ್ದಾರೆ.

ಹೌದು ನಾನು ತುಳಿತಕ್ಕೊಳಗಾದವರ ಪರ ಇರುವೆನುಅವರ ಶೋಷಣೆ ವಿರುದ್ಧ ಹಲವಾರು ಬಾರಿ ಧ್ವನಿ ಎತ್ತಿದ್ದೇನೆ.
ಶಿಕ್ಷಕನಾಗಿ ,ಸಾಹಿತಿಯಾಗಿ ನಾನು ನೇರವಾಗಿ ತರಗತಿಯಲ್ಲಿ   ನನ್ನ ವಿದ್ಯಾರ್ಥಿಗಳಿಗೆ ತುಳಿತಕ್ಕೊಳಗಾದವರ ಏಳ್ಗೆಗೆ ಪಣ ತೊಡಲು ಕರೆ ನೀಡುತ್ತಾ, ಪರೋಕ್ಷವಾಗಿ ಸಾಹಿತ್ಯದಲ್ಲೂ ಸಹ ವಿವಿದ ಕೃತಿಗಳಲ್ಲಿ ತುಳಿತಕ್ಕೊಳಗಾದವರ ಶೋಷಣೆಯ ವಿರುದ್ಧ ಧ್ವನಿ ಎತ್ತಿರುವೆ , ಹಾಗೂ ತುಳಿತಕ್ಕೊಳಗಾದವರಿಗೆ ಆರ್ಥಿಕ ಸಹಾಯವೂ ಸೇರಿದಂತೆ ವಿವಿಧ ರೀತಿಯಲ್ಲಿ ನೆರವಾಗಿರುವೆನು .

ಸಂವಿಧಾನ ಶಿಲ್ಪಿ ಡಾ. ಬಿ ಆರ್. ಅಂಬೇಡ್ಕರ್ ರವರು ಹೇಳಿದಂತೆ ತುಳಿತಕ್ಕೊಳಗಾದವರು ಮೇಲೆ ಬರಲು ಮೂರು ದಾರಿಗಳು  ಅವು " ಶಿಕ್ಷಣ, ಸಂಘಟನೆ , ಹೋರಾಟ" ಬನ್ನಿ ಆ ಮಹಾಚೇತನ ನೀಡಿರುವ ದಾರಿಯಲ್ಲಿ ಸಾಗಿ ಸಮ ಸಮಾಜದ ನಿರ್ಮಾಣಕ್ಕಾಗಿ ಪಣ ತೊಡೋಣ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

17 June 2021

ಅಸ್ತವ್ಯಸ್ತ.ಹನಿ


 *ಅಸ್ತವ್ಯಸ್ತ*


ಕೆಲ ಶಾಸಕರಿಗೆ

ನಾಯಕತ್ವ

ಬದಲಾಗಬೇಕಂತೆ

ಕೆಲವರಿಗೆ ಬೇಡವಂತೆ

ಮತ್ತೂ ಕೆಲವರು

ತಟಸ್ಥ|

ಇವರ ದೊಂಬರಾಟದಲ್ಲಿ

ಆಡಳಿತ ಆಗದಿರಲಿ

ಅಸ್ತವ್ಯಸ್ತ|


#ಸಿಹಿಜೀವಿ

ಸಿ ಜಿ ವೆಂಕಟೇಶ್ವರ

 ಸಿ ಜಿ ಹಳ್ಳಿ

 

 

ಮರಳು ಉಳಿಸು ಓ ಮರುಳೆ


 ಮರಳು ಮರಳೆಂದೇಕೆ ಮರುಗುವೆ ಓ ಮರುಳೆ ಲೇಖನ



ಅಕ್ರಮ ಮರಳು ಗಣಿಗಾರಿಕೆ ಇಂದು ಒಂದು ಮಾಫಿಯಾ ಅಗಿ ಪರಿವರ್ತನೆಯಾಗಿದೆ ,ಇಲ್ಲಿ ಎಲ್ಲಾ ಸುವ್ಯವಸ್ಥಿತ ಯಾರಿಗೆ ಎಷ್ಟು ಬೇಕೋ ಅಷ್ಟು ತಲುಪಿ ಸಾವಿರಾರು ಕೋಟಿ ರೂಪಾಯಿಗಳು ಕೈ ಬದಲಾಗುತ್ತವೆ.


ಇದಕ್ಕೆ ಹಲವಾರು ಕಾನೂನಿನ ಬಲವಿದ್ದರೂ  ಬೇಲಿಯೇ ಎದ್ದು ಹೊಲ ಮೇದರೆ ಕಾವಲುಗಾರನೇನು ಮಾಡಿಯಾನು,


ನಮ್ಮ ಅಂತರ್ಜಲ ಈ ಮಟ್ಟಿಗೆ ಕುಸಿಯಲು ಮರಳು ಗಣಿಗಾರಿಕೆಯ ಕೊಡುಗೆಯೂ ಬಹಳ ಇದೆ.


ಹಾಗಾದರೆ ಇದಕ್ಕೆ ಕೊನೆಯೆಂದು


೧ ನಾವೂ ನೀವು ಮನಸ್ಸು ಮಾಡಬೇಕು

೨ ಎಂ ಸ್ಯಾಂಡ್ ವ್ಯಾಪಕವಾಗಿ ಬಳಕೆಯಾಬೇಕು

೩ ಒಳ್ಳೆಯ ಗುಣಮಟ್ಟದ ಎಂ ಸ್ಯಾಂಡ್ ಲಬ್ಯವಾಗುವಂತೆ ನೋಡಿಕೊಳ್ಳಬೇಕು.

೪ ತಜ್ಞರು ಎಂ ಸ್ಯಾಂಡ್ ಬಳಕೆ ಬಗ್ಗೆ ಜನರ‌ ಮನ ಒಲಿಸಬೇಕು.

೫ ನದೀ ಪಾತ್ರದಲ್ಲಿ ಮರಳು ಗಣಿಗಾರಿಕೆ ಮಾಡಿದವರಿಗೆ ಶೀಘ್ರವಾಗಿ ಕಠಿಣವಾದ ಶಿಕ್ಷೆ ವಿಧಿಸಬೇಕು.

೬ ಪರಿಸರದ ಅಮೂಲ್ಯವಾದ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವೆ ಎಂದು ನಾವೆಲ್ಲರೂ ಪಣತೊಡಬೇಕಿದೆ.


ಮುಗಿಸುವ ಮುನ್ನ ಒಂದು ಹನಿ


ನಿರ್ಮಾಣ ಕಾಮಗಾರಿಗೆ

ನದಿಯ ಬಯಲಿನದೇ

ಆಗಬೇಕೆಂದು ಬಯಸುವೆಯೇಕೆ?

ಓ ಮರುಳೆ|

ಯಂತ್ರಗಳಿಂದ ತಯಾರಿಸದ

ಎಂ ಸ್ಯಾಂಡ್ ಕೂಡ

ಮರಳೆ|



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ಮರುಳೆ .ಹನಿ


 ನಿರ್ಮಾಣ ಕಾಮಗಾರಿಗೆ

ನದಿಯ ಬಯಲಿನದೇ

ಆಗಬೇಕೆಂದು ಬಯಸುವೆಯೇಕೆ?

ಓ ಮರುಳೆ|

ಯಂತ್ರಗಳಿಂದ ತಯಾರಿಸದ

ಎಂ ಸ್ಯಾಂಡ್ ಕೂಡ

ಮರಳೆ|



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

16 June 2021

ನಿರ್ಲಕ್ಷ್ಯ ಬೇಡ .ಹನಿ


 #ಜನರ ನಿರ್ಲಕ್ಷ್ಯ

 

ಅನವಶ್ಯಕವಾಗಿ 

ಗುಂಪು ಸೇರದಿರಿ

 ಓ ನನ್ನ ಬಾಂಧವರೆ|

ಮೈಮರೆತು ವರ್ತಿಸಿದರೆ

 ತಪ್ಪಿದ್ದಲ್ಲ ತೊಂದರೆ||


#ಸಿಹಿಜೀವಿ

ಸಿ ಜಿ ವೆಂಕಟೇಶ್ವರ

 ಸಿ ಜಿ ಹಳ್ಳಿ

 

 

ಗಜಲ್ ಪ್ರತಿನಿಧಿ ೧೫/೬/೨೧


 

ಸಿಂಹ ಧ್ವನಿ ಲೇಖನ ೧೫/೬/೨೧


 

15 June 2021

ಮಾದರಿಯಾಗೋಣ .ಲೇಖನ


 *ಮಾದರಿಯಾಗೋಣ"

ನಾನು ಇದುವರೆಗೆ ವೃದ್ದಾಶ್ರಮಕ್ಕೆ ಭೇಟಿ ನೀಡಿಲ್ಲ
ಆದರೆ ಆ ಪದ ಕೇಳಿಯೇ ಮನದಲ್ಲಿ ಬೇಸರ ಮೂಡುವುದು, ಮಾನವನು ಏಕೆ ಹೀಗೆ ಸ್ವಾರ್ಥಿಯಾದ? ಎಂದು ಪ್ರಶ್ನೆ ಏಳುವುದು ,

ಹೆತ್ತು, ಹೊತ್ತು ಸಾಕಿ ಸಲಹಿದ  ತಂದೆ ತಾಯಿಗಳು ಅವರ ಸಂಧ್ಯಾ ಕಾಲದಲ್ಲಿ ಮಕ್ಕಳಿಗೆ ಬೇಡವಾಗುವುದು ವಿಪರ್ಯಾಸ,

ಮೌಲ್ಯಗಳ ಅಧಃಪತನ, ಆಧುನಿಕ ಸಮಾಜದ ಪ್ರಭಾವ ಪಾಶ್ಚಾತ್ಯ ಸಂಸ್ಕೃತಿಗಳ ಪ್ರಭಾವ, ಹೆಚ್ಚಾದ ವಿಭಕ್ತ ಕುಟುಂಬಗಳ ಒಲವು ಹೀಗೆ ವೃದ್ದಾಶ್ರಮಗಳು ಹೆಚ್ಚಾಗಲು ನಾನಾ ಕಾರಣಗಳನ್ನು ನೀಡಬಹುದು.

ಈ ಸಂಧರ್ಭದಲ್ಲಿ ಡುಂಡಿರಾಜ್ ರವರ ಹನಿಗವನ ನೆನಪಾಯಿತು

"ಜನ ಆದರೂ ಅಷ್ಟೇ
ದನ ಆದರೂ ಅಷ್ಟೇ
ಒಂದೇ ಲಾಜಿಕ್ಕು
ಲಾಭ ಇರುವವರೆಗೆ
ಸಾಕು|
ಆಮೇಲೆ

ಬಿಸಾಕು||"


ಹೌದಲಲ್ಲವೆ ? ನಾವೆಲ್ಲರೂ ಇದನ್ನೇ ಮಾಡುವುದು ನಮ್ಮ ಪಾಲಕರಿಂದ ನಮಗೆ ಲಾಭ ಆಗುವಂತಿದ್ದರೆ ಮಾತ್ರ ಅವರನ್ನು ಸಾಕುವೆವು ಅವರಿಂದ ನಮಗೆ ಉಪಯೋಗ ಇಲ್ಲವೆಂದು ಗೊತ್ತಾದ ನಂತರ ವೃದ್ದಾಶ್ರಮದ ಕಡೆ ಸಾಗಹಾಕುವೆವು, ಈ ವಿಚಾರದಲ್ಲಿ ನಮ್ಮ ನಡವಳಿಕೆಗಳು ಪ್ರಾಣಿಗಳಿಗಿಂತ ಕಡೆಯಾಗಿವೆ ಎಂದು ಹೇಳಲು ಬೇಸರವಾಗುತ್ತದೆ.


ವೃದ್ದಾಶ್ರಮಗಳು ಹೆಚ್ಚಾಗಲು ಕುಟುಂಬದ ಕಲಹಗಳು ಕೆಲವೊಮ್ಮೆ ಕಾರಣವಾಗುತ್ತವೆ ,ಹೊಸದಾಗಿ ಮದುವೆಯಾಗಿ ಬಂದ ಸೊಸೆಗೆ ಅತ್ತೆ ಮಾವ ಹೊರೆಯಾಗಿ ಅವರಿಂದ ದೂರ ಸರಿಯಲು ಸಂಚು ರೂಪಿಸುವರು( ಎಲ್ಲರೂ ಅಲ್ಲ) ಇಲ್ಲವೇ ಹಿರಿಜೀವಗಳಿಗೆ ಕಿರಿ ಜೀವಗಳು ಕಿರುಕುಳ ನೀಡಿ ಅವರೆ ವೃದ್ದಾಶ್ರಮದ ಕಡೆ ಹೋಗುವಂತೆ ಮಾಡುವರು.


ವಯಸ್ಸಾದ ಅಪ್ಪ ಅಮ್ಮನ


ವೃದ್ದಾಶ್ರಮಕ್ಜೆ ಸೇರಿಸಿ


ಬಂದ ಮಗ ಅಂದುಕೊಂಡ


ತಪ್ಪಿತು ಒಂದು ಯೋಚನೆ |


ಮರುಗುತ್ತಾ ಅಮ್ಮ
ಮನದಲ್ಲೇ ಹಾರೈಸಿದಳು
ನಿನ್ನ ಮಕ್ಕಳು ನಿನ್ನಂತೆ
ಮಾಡದಿರಲಿ ಯೋಜನೆ||

ಕೆಲವು ಕಡೆ, ಕೋರ್ಟ್ ಗಳು ,ಇನ್ನೂ ಕೆಲವು ಕಡೆ ಕಾನೂನುಗಳ ಮೂಲಕ ಪೋಷಕ ರನ್ನು ನೋಡಿಕೊಳ್ಳಲು ಬಲವಂತವಾದ ಪ್ರಯತ್ನ ನಡೆದಿವೆ ,ಆದರೆ ಮಾನವನ ಹೃದಯದಾಂತರಾಳದಿ ಪೋಷಕರ ಮೇಲಿನ ಪ್ರೀತಿಯಿಂದ ಪೋಷಕರ ಹಾರೈಕೆ ಮಾಡದಿದ್ದರೆ ಎಷ್ಟೇ ಕಾನೂನು ಮಾಡಿದರೂ ವ್ಯರ್ಥ.

ನಾವು ಎಷ್ಟೇ ಅನಾಧರ ಮಾಡಿದರೂ ನಮ್ಮ ಪೋಷಕರು ನಮ್ಮ ಏಳ್ಗೆ ಬಯಸುತ್ತಾರೆ, ಒಂದು ಬಾರಿ ನಾವೂ ಅವರ ಸ್ಥಾನದಲ್ಲಿ ನಿಂತು ಯೋಚಿಸಿದರೆ, ನಮಗೂ ವಯಸ್ಸಾಗುವುದು, ಎಂದು ಅರಿತರೆ ನಮ್ಮ ತಂದೆ ತಾಯಿಗಳು ನಮಗಾಗಿ ಮಾಡಿದ ತ್ಯಾಗ, ಕಷ್ಟಗಳನ್ನು ನೆನೆದರೆ ಖಂಡಿತವಾಗಿಯೂ ನಾವು ನಮ್ಮ ತಂದೆ ತಾಯಿಗಳನ್ನು ವೃದ್ದಾಶ್ರಮಗಳಿಗೆ ಸೇರಿಸುವುದಿಲ್ಲ, ಬದಲಾವಣೆ ಯಾವಾಗ ಬೇಕಾದರೂ ಯಾರಿಂದ ಬೇಕಾದರೂ ಆಗಬಹುದು, ಅದು ನಮ್ಮಿಂದಲೇ ಆಗಲಿ, ನಾವು ಪ್ರತಿಯೊಬ್ಬರೂ ನಮ್ಮ ತಂದೆ ತಾಯಿಗಳನ್ನು ಹಾರೈಕೆ ಮಾಡುವುದನ್ನು ಆಂದೋಲನ ರೂಪದಲ್ಲಿ ಜಾರಿಗೊಳಿಸಿಕೊಳ್ಳೋಣ , ಒಳ್ಳೆಯ ಆಚರಣೆಗಳು ಬೇಗ ಎಲ್ಲೆಡೆಗೂ ವಿಸ್ತಾರವಾಗಿ ಹರಡದಿದ್ದರೂ ಕ್ರಮೇಣವಾಗಿ ಒಳ್ಳೆಯದಾಗುತ್ತದೆ, ನಾವೆಲ್ಲರೂ ನಮ್ಮ ಪೋಷಕರನ್ನು ಅವರ ಇಳಿವಯಸ್ಸಿನಲ್ಲಿ ಹಾರೈಕೆ ಮಾಡುವ ಪಣ ತೊಡೋಣ ಇತರರಿಗೆ ಮಾದರಿಯಾಗೋಣ .

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಸಿ ಜಿ ಹಳ್ಳಿ
ಚಿತ್ರದುರ್ಗ

14 June 2021

ರಕ್ತದಾನ ಮಾಡಲೇಬೇಕು .ಲೇಖನ


 


ರಕ್ತದಾನ  ಮಾಡಲೇಬೇಕು


ಅನ್ನದಾನ ,ವಿದ್ಯಾದಾನ ದಂತೆ ಬಹಳ ಪ್ರಮಖ ವಾದುದು ರಕ್ತದಾನ 

ಕೋವಿಡ್ ನ ಈ ದುರಿತ ಕಾಲದಲ್ಲಿ ರಕ್ತದಾನಕ್ಕೆ ಇನ್ನಿಲ್ಲದ ಮಹತ್ವ ಬಂದಿದೆ ರಕ್ತದ ಕೊರತೆಯೂ ಉಂಟಾಗಿದೆ , ಇದಕ್ಕೆ ಪರಿಹಾರವೆಂದರೆ ಅರ್ಹ ವಯಸ್ಕರು ರಕ್ತದಾನ ಮಾಡಬೇಕು. 


ಹಾಗಾದರೆ ಯಾರು ರಕ್ತದಾನ ಮಾಡಬಹುದು.


ಉಳಿಸಲಾಗುವುದಿಲ್ಲ

ಅಮೂಲ್ಯವಾದ ಪ್ರಾಣವ

ನಮ್ಮಲ್ಲಿ ಎಷ್ಟಿದ್ದರೂ 

ಮನಿ|

ಜೀವವುಳಿವುದು

ಸೂಕ್ತ ಸಮಯದಲ್ಲಿ

ದೊರೆತರೆ ರಕ್ತದ 

ಹನಿ|


ಎಂಬ ಹನಿಯು ರಕ್ತದ ಮಹತ್ವ ಸಾರುವುದು. ಆದ್ದರಿಂದ ಅರ್ಹರು ರಕ್ತದಾನ ಮಾಡಬಹುದು


ನಲವತ್ತೈದು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಆರೋಗ್ಯಕರವಾಗಿರುವವರು,

ರಕ್ತದ ಒತ್ತಡ ನಿಯಂತ್ರಣದಲ್ಲಿ ಇರುವವರು,ಕಳೆದ ಒಂದು ತಿಂಗಳುಗಳ ಯಾವುದೇ ಸಾಂಕ್ರಾಮಿಕ ರೋಗದಿಂದ ಬಳಲದೆ ಇರುವವರು ಮಾನಸಿಕವಾಗಿ ಸದೃಢವಾಗಿರುವ ಯಾರಾದರೂ ರಕ್ತದಾನ ಮಾಡಬಹುದು.ರಕ್ತ ದಾನ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ  ರೆಡ್ ಕ್ರಾಸ್ ಸಂಸ್ಥೆ ಅಮೂಲ್ಯವಾದ ಜೀವವುಳಿಸುವ  ಕೈಂಕರ್ಯದಲ್ಲಿ ತೊಡಗಿದೆ.


ರಕ್ತ ದಾನದ ಉಪಯೋಗಗಳು


ಇತರರ  ಅಮೂಲ್ಯವಾದ ಜೀವ ಉಳಿಸಲು ಸಾಧ್ಯವಾಗುತ್ತದೆ.

ಹೊಸರಕ್ತ ಉತ್ಪಾದನೆ ಆಗಲು ಸಾಧ್ಯವಾಗುತ್ತದೆ.

ರಕ್ತದಾನದಿಂದ ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಶೇ. 80ರಷ್ಟು ಹೃದಯಾಘಾತ ಕಡಿಮೆ.

ರಕ್ತದ ಒತ್ತಡ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳಿಂದಾಗುವ ತೊಂದರೆ ಸಮಸ್ಯೆಗಳು ಕಡಿಮೆಯಾಗುತ್ತವೆ.



ರಕ್ತದಾನ ಮಾಡಲು ದಾನ ಮಾಡುವ ವ್ಯಕ್ತಿಯ ರಕ್ತದ ಗುಂಪು A , B, AB, ಮತ್ತು ಮಾದರಿಯ ಯಾವುದಾದರೂ ಗುಂಪು ಆದರೂ ದಾನ ಮಾಡಬಹುದು ,ಅದನ್ನು ಸೂಕ್ತವಾಗಿ ಸಂಸ್ಕರಿಸಿ ಅಗತ್ಯವಿರುವ ರೋಗಿಗಳಿಗೆ ನೀಡುವರು.


ಕೆಲ ಸಹೃದಯರು ಐವತ್ತಕ್ಕೂ ಹೆಚ್ಚು ಬಾರಿ ರಕ್ತ ದಾನ ಮಾಡಿ ಮಾನವೀಯತೆ ಮೆರೆದಿರುವರು ನಮ್ಮ ಭಾಗದಲ್ಲಿ ಮಧುಗಿರಿ ಡಯಟ್ ನಲ್ಲಿ ಹಿರಿಯ ಉಪನ್ಯಾಸಕರಾಗಿ ಕಾರ್ಯ ನಿರ್ವಹಣೆ ಮಾಡುವ  ಶ್ರೀಕೃಷ್ಣಪ್ಪ ರವರು ಈಗಾಗಲೇ 26 ಬಾರಿ ರಕ್ತದಾನ ಮಾಡಿ ನಿಮಗೆಲ್ಲಾ ಪ್ರೇರಣೆಯಾಗಿರುವರು.


ನಮ್ಮ ದೇಶದಲ್ಲಿ ಪ್ರತಿವರ್ಷ5 ಕೋಟಿ ಯುನಿಟ್ ರಕ್ತ ಅಗತ್ಯವಿದೆ,ಆದರೆ ಸಂಗ್ರಹವಾಗುವುದು ಕೇವಲ 2.5 ಕೋಟಿ ಯುನಿಟ್ ಅದರಲ್ಲೂ ಕೋವಿಡ್ ಸಮಯದಲ್ಲಿ ಇನ್ನೂ ಕಡಿಮೆ ಸಂಗ್ರಹವಾಗುತ್ತದೆ ಇದಕ್ಕೆ ಕಾರಣ

ರಕ್ತದಾನಕ್ಕೆ ಸಂಬಂದಿಸಿದ ಕೆಲವು ವದಂತಿಗಳು . 


ರಕ್ತ ವೃದ್ಧಿಯಾಗಲು ಯಾವ ಆಹಾರವನ್ನು ಸೇವಿಸಬೇಕು.


ಆರೋಗ್ಯಕರವಾದ ಮತ್ತು ಸಮತೊಲನ  ಅಹಾರವು ರಕ್ತ ವೃದ್ಧಿ ಗೆ ಸಹಾಯಕ ಇದರ ಜೊತೆಗೆ ದಾಳಿಂಬೆ ,ಬೆಳ್ಳುಳ್ಳಿ,ಅರಿಷಿಣ, ಸೊಪ್ಪು ತರಕಾರಿಗಳು,ಶುಂಠಿ, ವಿಟಮಿನ್ ಸಿ ಇರುವ ಹಣ್ಣುಗಳಾದ ಮೊಸಂಬಿ, ಕಿತ್ತಳೆ ಹಣ್ಣುಗಳು ರಕ್ತ ವೃದ್ಧಿ ಮಾಡುವವು.


ವೈಯಕ್ತಿಕವಾಗಿ ನಾನು ಈಗಾಗಲೇ ಎರಡು ಬಾರಿ ರಕ್ತ ದಾನ ಮಾಡಿರುವೆ, ಅವಕಾಶ ಸಿಕ್ಕಾಗ ಪುನಃ ರಕ್ತ ದಾನ ಮಾಡಲು ಸಿದ್ದನಿರುವೆ 


ನಮ್ಮ ಬಾಂಧವರಿಗೆ

ಅಪಘಾತವಾದಾಗ

ಅನಾರೋಗ್ಯದಿಂದ

ಆಸ್ಪತ್ರೆಯಲ್ಲಿರುವಾಗ

ರಕ್ತ ಬೇಕೇ ಬೇಕು|

ಅದಕ್ಕಾಗಿ ಸಮಯ

ಸಂದರ್ಭಕ್ಕೆ ತಕ್ಕಂತೆ

ನಾವೂ ರಕ್ತದಾನ

ಮಾಡಲೇಬೇಕು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


11 June 2021

ಗಜಲ್ (ಸಿದ್ದಲಿಂಗಯ್ಯ ರವರಿಗೆ ನುಡಿ ನಮನ)


 


*ಗಜಲ್*


*ಊರು ಕೇರಿಯ* ತೋರಿಸಿದವರೆ ನಿಮಗೆ ನಮನ

*ಕಪ್ಪು ಕಾಡಿನ ಹಾಡನ್ನು* ಹಾಡಿದವರೆ ನಿಮಗೆ ನಮನ


*ಹೊಲೆಮಾದಿಗರ ಹಾಡು* ಗುನುಗಿದವರೆ ನಿಮಗೆ ನಮನ

ಕವಿತೆಗಳಲಿ *ಸಾವಿರಾರು ನದಿಗಳ* ಹರಿಸಿದವರೆ ನಿಮಗೆ ನಮನ


ಜಾತಿಭೂತದ  *ನೆಲಸಮಕೆ* ಪಣತೊಟ್ಟವರೆ ನಿಮಗೆ ನಮನ

*ರಸಗಳಿಗೆಗಳನು* ನಮಗೆ ಕಟ್ಟಿಕೊಟ್ಟವರೆ ನಿಮಗೆ ನಮನ


*ಗ್ರಾಮ ದೇವತೆಗಳ* ದರ್ಶನ ಮಾಡಿಸಿದವರೆ ನಿಮಗೆ ನಮನ

*ಏಕಲವ್ಯನಂತೆ* ಕಲಿಕೆ ಮಾಡಿರೆಂದವರೆ ನಿಮಗೆ ನಮನ


ದುರ್ಜನರ *ಅವತಾರಗಳ* ಬಯಲಿಗೆಳೆದವರೆ ನಿಮಗೆ ನಮನ

ಸಿಹಿಜೀವಿಗಳಿಗೆ *ಜನಸಂಸ್ಕೃತಿಯ* ಪರಿಚಯಿಸಿದವರೆ ನಿಮಗೆ ನಮನ


(ಸಿದ್ದಲಿಂಗಯ್ಯ ರವರ ಕೃತಿಗಳ ಅಧಾರವಾಗಿ ಬರೆದ ಗಜಲ್)


ಸಿಹಿಜೀವಿ

ಸಿ ಜಿ ವೆಂಕಟೇಶ್ವರ



ಅವಿಸ್ಮರಣೀಯ ರೈಲು ಪಯಣ. ಲೇಖನ


 

*ಅವಿಸ್ಮರಣೀಯ  ರೈಲು ಪ್ರಯಾಣ.*

ಅರೆ ಮಲೆನಾಡಿನವನಾದ ನಾನು ಮೊದಲಿನಿಂದಲೂ ನಿಸರ್ಗ ಪ್ರಿಯ ಕಾಡು, ಮರ ಗಿಡಗಳೆಂದರೆ ಪ್ರಾಣ, ತೊಂಭತ್ತರ ದಶಕದಲ್ಲಿ ಟಿ ಸಿ ಎಚ್ ಓದುವಾಗ ಟೂರ್ ಹೋದಾಗ ಮೊದಲ ಬಾರಿಗೆ ಪಶ್ಚಿಮ ಘಟ್ಟಗಳ ಹಸಿರ ಸಿರಿಯ ಕಂಡು ಪಂಪ ಯಾಕೆ "ಆರಂಕುಷಮಿಟ್ಟೊಡಂ ನೆ‌‌ನೆವುದೆನ್ನ ಮನಮಂ ಬನವಾಸಿ ದೇಶಮಂ" ಎಂದು ಹೇಳಿದನೆಂದು ಅರ್ಥವಾಯಿತು.

ನಂತರ ಹಲವಾರು ಬಾರಿ ಪಶ್ಚಿಮ ಘಟ್ಟಗಳ ಕಾಡಿನ ಸವಿ ಕಣ್ತುಂಬಿಕೊಂಡಿರುವೆ, ಮಗಳು ಮೂಡುಬಿದಿರೆಯಲ್ಲಿ ಓದುವಾಗ ಅವಳನ್ನು ನೋಡುವ ನೆಪದಲ್ಲಿ, ಪಶ್ಚಿಮ ಘಟ್ಟಗಳ ಕಾಡಿನ  ಸೌಂದರ್ಯವನ್ನು ಹಲವು ಬಾರಿ ಸವಿದಿರುವೆ.

ಬಸ್, ಕಾರ್ ,ಮೂಲಕ ಘಟ್ಟಗಳ ಸೌಂದರ್ಯ ಸವಿದ ನಾನು ಗೆಳೆಯರ ಅನುಭವದ ಮಾತು ಕೇಳಿ ಒಮ್ಮೆ ರೈಲಿನಲ್ಲಿ ಪ್ರಯಾಣ ‌ಮಾಡುತ್ತಾ ಕಾಡಿನ ಸೊಭಗು ಸವಿಯಲು ಯೋಜಿಸಿದೆ.

ಅಂದು ಗೌರಿಬಿದನೂರು ಬಿಟ್ಟಾಗ ಬೆಳಗಿನ ಜಾವ ಮೂರು ಮೂವತ್ತು, ಗೌರಿಬಿದನೂರಿನಿಂದ ರೈಲಿನ ಮೂಲಕ ಯಶವಂತ ಪುರ ತಲುಪಿ ಅಲ್ಲಿಂದ ರೈಲಿನಲ್ಲಿ ಮಂಗಳೂರು ರೈಲಿನಲ್ಲಿ ಪ್ರಯಾಣ ಮಾಡುವುದು ನನ್ನ ಯೋಜನೆ, ರಾತ್ರಿ ಒಬ್ಬನೇ ಮನೆಯಿಂದ ಒಂದೂವರೆ ಕಿಲೊಮೀಟರ್ ಇರುವ ರೈಲು ನಿಲ್ದಾಣಕ್ಕೆ ಹೋದಾಗಲೆ ನನಗೆ ಗೊತ್ತಾಗಿದ್ದು ಆಂದ್ರ ಪ್ರದೇಶದಲ್ಲಿ ಅತಿಯಾದ ಮಳೆಯ ಕಾರಣದಿಂದಾಗಿ ಅಂದಿನ ರೈಲು ರದ್ದಾದದ್ದು, ಪ್ರಥಮ ಚುಂಬನಂ ದಂತಭಗ್ನಂ ಎಂಬಂತೆ ಮತ್ತೆ ಬಸ್ ಹಿಡಿದು ಬೆಂಗಳೂರಿನ ಮೆಜೆಸ್ಟಿಕ್ ತಲುಪಿ ,ಯಶವಂತಪುರ ಕ್ಕೆ ಬಸ್ ಹಿಡಿದು  ,ರೈಲು ಟಿಕೆಟ್ ಪಡೆದು ಏಳನೇ ಪ್ಲಾಟ್ ಪಾರಂ ಕಡೆ ಹೆಜ್ಜೆ ಹಾಕಿದೆ ಸೈರನ್ ನೊಂದಿಗೆ ರೈಲೊಂದು ಹೊರಡಲು ಸಿದ್ಧವಾಗಿತ್ತು. ಅದೇ ರೈಲು ನಾನು ಪ್ರಯಾಣ ಮಾಡಬೇಕಿರುವುದು ಎಂದು ಗೊತ್ತಾದ ತಕ್ಷಣ ,ನನ್ನ ಕಾಲುಗಳು ತಾವೇ ಓಡಲಾರಂಬಿಸಿದವು, ಜಸ್ಟ್, ಮಿಸ್ ಆಗದೆ ರೈಲು ಹತ್ತಿ ಏದುಸಿರು ಬಿಟ್ಟು ಕುಳಿತೆ.

ಸುಧಾರಿಸಿಕೊಂಡು ನೀರು ‌ಕುಡಿದ ನಂತರ  ನನ್ನ ಪಕ್ಕದ ಆಸನದಲ್ಲಿ ಕುಳಿತಿದ್ದ ತಿಪಟೂರಿನ ಕೊಬ್ಬರಿ ವರ್ತಕರ ಪರಿಚಯವಾಯಿತು, ಅವರು ಒಮ್ಮೆ ನನ್ನೊಂದಿಗೆ  ಕನ್ನಡದಲ್ಲಿ ,ಕೆಲವೊಮ್ಮೆ ಮುಂಬೈನ ವರ್ತಕರೊಂದಿಗೆ ಹಿಂದಿಯಲ್ಲಿ ಮಾತನಾಡುತ್ತಾ ಇದ್ದರು  ,ಕುಣಿಗಲ್ ಸ್ಟೇಷನ್ ಬಂದಾಗ ಪ್ಲಾಟ್ ಪಾರ್ಮ್ ಮೇಲೆ ಮಾರುವ  ಇಡ್ಲಿ ವಡೆ ಖರೀದಿಸಿ ರೈಲಿನಲ್ಲಿ ತಿಂದು ,ಕಿಟಕಿಯಾಚೆ ನೋಡುವಾಗ ಅಲ್ಲಲ್ಲಿ ಕಂಡು ಬಂದ ಕೆರೆ, ತೆಂಗು ಅಡಿಕೆಯ ತೋಟ ನೋಡಿ ,"ಬಹಳ ಸೂಪರ್ ಈ ಸೀನ್ ಅಲ್ವ?" ಅಂದೆ
" ಇದೇನ್ ಸೀನ್ ಸ್ವಾಮಿ ,ಸಕಲೇಶಪುರ ದಾಟಲಿ ಇರಿ ನೋಡುವಿರಂತೆ" ಎಂದರು ವರ್ತಕರು, ಅವರು ಹೇಳಿದ ಮಾತು ನನ್ನ ಗೆಳೆಯರ  ಮಾತಿಗೆ ತಾಳೆಯಾಗಿದ್ದು ಮತ್ತೂ ನನ್ನಲ್ಲಿ ಕುತೂಹಲ ಉಂಟಾಯಿತು, ಹತ್ತು ಮುಕ್ಕಾಲಿಗೆ ಸಕಲೇಶಪುರ ತಲುಪಿತು ನಮ್ಮ ಮಂಗಳೂರು ಎಕ್ಸ್ಪ್ರೆಸ್ ರೈಲು,
" ಇಲ್ಲಿ ಅರ್ಧ ಗಂಟೆ ರೈಲು ನಿಲ್ಲುತ್ತದೆ, ನೀವು ಬೇಕಾದರೆ ನೀರಿನ ಬಾಟಲ್ ಇತರೆ ವಸ್ತು ಕೊಳ್ಳಬಹುದು " ಎಂದರು ಸಹಪ್ರಯಾಣಿಕರು.

ನಾನು ಎರಡು ಲೀಟರ್ ರೈಲ್ ನೀರು ನಾಲ್ಕು ಬಾಳೆ ಹಣ್ಣು ತಂದೆ , ವರ್ತಕರಿಗೆ ಒಂದು ನೀಡಿ ನಾನೂ ತಿನ್ನುವಾಗ ರೈಲು ನಿಧಾನವಾಗಿ ಮಂಗಳೂರು ಕಡೆಗೆ ಚಲಿಸಿತು .

ರೈಲಿನ ವೇಗ ಕ್ರಮೇಣ ಕಡಿಮೆಯಾಯಿತು, ಯಶವಂತಪುರದಿಂದ ಹಾರಿ ಕೊಂಡು ಬಂದ ರೈಲು ಇದೇನಾ? ಸಕಲೇಶಪುರದಲ್ಲಿ ಇಂಜಿನ್ ಸಮಸ್ಯೆ ಆಗಿರಬಹುದಾ ಎಂದು ಅನುಮಾನ ವ್ಯಕ್ತಪಡಿಸಿದೆ ,
"ಇಲ್ಲಿಂದ ಇಷ್ಟೇ ವೇಗ , ಗಂಟೆಗೆ ಹೆಚ್ಚೆಂದರೆ ಇಪ್ಪತ್ತು ಕಿಲೋಮೀಟರ್ ಅಷ್ಟೇ, ಈಗ ಈ ರೈಲು ಹೆಸರಿಗೆ ಮಾತ್ರ ಮಂಗಳೂರು ಎಕ್ಸ್ಪ್ರೆಸ್ " ಎಂದು ಜೋರಾಗಿ‌ ನಕ್ಕರು ನನ್ನ ಪಕ್ಕದಲ್ಲೇ ಕುಳಿತ ಬೆಂಗಳೂರಿನಿಂದ ಬಂದ ಯಜಮಾನರು.

ರೈಲು  ಆಮೆ ವೇಗದಲ್ಲಿ  ಚಲಿಸುವಾಗ ಇದ್ದಕ್ಕಿದ್ದಂತೆ ಕತ್ತಲಾದ ಅನುಭವ ಪಕ್ಕದ ಭೋಗಿಯ ಯುವಕರು ಜೋರಾಗಿ ಕಿರುಚುವ ಸದ್ದು ! ಗಾಬರಿಯಿಂದ ನಾನು ಏನಾಯಿತೆಂದು ಕೇಳುವ ಮೊದಲು ಬೆಳಕು ಬಂತು ," ಇದು ಮೊದಲ ಟನಲ್
ಇಂತಹ ಹತ್ತಾರು ಟನಲ್ ಒಳಗೆ ‌ನಮ್ಮ ರೈಲು ಹೋಗಿ ಮುಂದೆ ಸಾಗಲಿದೆ, ಕೆಲವು ಟನಲ್ ಐನೂರು ಮೀಟರ್ ಗಿಂತ ಉದ್ದ ಇವೆ, ನೀವು ಎಂಜಾಯ್ ಮಾಡಿ,‌ಬೇಕಂದರೆ ಜೋರಾಗಿ ಕೂಗಿ ನಮ್ಮದೇನೂ ಅಭ್ಯಂತರವಿಲ್ಲ" ನಕ್ಕರು ವರ್ತಕರು.

ನಾನು ನಕ್ಕು ಕಿಟಕಿಯ ಹೊರಗೆ ಕಣ್ಣು ಹಾಯಿಸಿದರೆ ಸ್ವರ್ಗ ಸದೃಶ ದೃಶ್ಯಗಳು! ಅಲ್ಲಲ್ಲಿ ಜುಳು.. ಜುಳು...ಹರಿವ ಝರಿಗಳು ರೈಲಿನ ಮೇಲೆ ಬಿದ್ದು ,ಕೊಟಕಿಯ ಮೂಲಕ ನಮ್ಮ ಮೈ ಸೋಕುತ್ತಿದ್ದವು, ನಾ ನೋಡದ ಎಷ್ಟೋ ಜಾತಿಯ ಮರ ಗಿಡಗಳ ನೋಡಿದೆ, ಕಣ್ಣು ಹಾಯಿಸಿದಷ್ಟೂ ಕಾಡು , ಅಲ್ಲಲ್ಲಿ ಜರುಗಿದ ಗುಡ್ಡ, ಮೈಮರೆತು ಪ್ರಕೃತಿ ಸೌಂದರ್ಯ ಸವಿಯುತ್ತಿದ್ದ ನನಗೆ ನನ್ನ ಸಹಪ್ರಯಾಣಿಕ ಕೆಮಾರಾದಲ್ಲಿ ಪೋಟೋವನ್ನು ಕ್ಲಿಕ್ಕಿಸುವಾಗ ನೆನಪಾಗಿ ನಾನೂ ನನ್ನ ರೆಡ್ಮಿ ನೋಟ್ ೪ ಮೊಬೈಲ್ ತೆಗೆದು ಪೋಟೋ ಕ್ಲಿಕಿಸಲು ರೈಲಿನ ಬೋಗಿಯ ಬಾಗಿಲ ಬಳಿ ಬಗ್ಗಿದಾಗ" ದು ತಪ್ಪು, ಬೇಕಾದರೆ ಕಿಟಕಿಯ ಒಳಗೇ ಎಷ್ಟಾದರೂ ಪೋಟೋ ತೆಗೆದುಕೊಳ್ಳಿ, ಈ ಜಾಗದಲ್ಲಿ ಸೆಲ್ಪಿ, ಪೋಟೋ ಎಂದು ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ, ಮೊದಲು ಜೀವ ನಂತರ  ನೋಟ " ಎಂದು ಅನುಭವದ ಮಾತು ಹೇಳಿದರು ವರ್ತಕರು ಅಲ್ಲಿಂದ ಮೊಬೈಲ್ ಚಾರ್ಜ್ ಮುಗಿಯುವವರೆಗೆ ಸುರಕ್ಷಿತವಾಗಿ ತೆಗೆದ ಪೋಟೋಗಳು ಈಗಲೂ ನನ್ನ ಮನದಲ್ಲಿ ಮತ್ತು ಹಾರ್ಡ್ ಡಿಸ್ಕ್ ನಲ್ಲಿ ಸುರಕ್ಷಿತವಾಗಿವೆ.

ಸುಮಾರು ಮೂರೂವರೆ ಘಂಟೆಗಳ ಪ್ರಕೃತಿ ಸೊಬಗಿನ ಊಟದ ಮುಂದೆ ಹಸಿವೆಯೇ ಕಾಣಲಿಲ್ಲ ,ವಾಚ್ ನೋಡಿದೆ ಸಂಜೆ ನಾಲ್ಕು ಗಂಟೆ, ಕೆಲವರು ಇಳಿಯಲು ಲಗೇಜ್ ಸಿದ್ದಪಡಿಸಿಕೊಳ್ಳುತ್ತಿದ್ದರು, ನಾನು ಮುಂದಿನ ನಿಲ್ದಾಣ ಯಾವುದು? ಎಂದು ಕೇಳುವ ಮೊದಲೇ ರೈಲು ನಿಂತಿತು, ಇದೇ ಸುಬ್ರಹ್ಮಣ್ಯ ರೋಡ್ ಎಂದರು, ನಾನು ಅಲ್ಲೇ ಇಳಿಯಬೇಕೆಂದು ದಡಬಡನೆ ಇಳಿಯಲು ಹೊರಟೆ ,ಇಳಿಯುವಾಗ ವರ್ತಕರಿಗೆ ನಮಸ್ಕಾರ ಹೇಳಲು ಅಲ್ಲಾಡಿಸಿದೆ ಅವರು ಕಣ್ಣು ಮುಚ್ಚಿದ್ದರು  ಮಾತನಾಡಲಿಲ್ಲ .....
ರೈಲಿನಿಂದ ಇಳಿದು ಧರ್ಮಸ್ಥಳದ ‌ಕಡೆ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ,ಮತ್ತದೇ ರೈಲಿನ ಪಯಣದ ನೆನಪು, ಕುಟುಂಬ ಸಮೇತ ಮತ್ತೆ ಅದೇ ಮಾರ್ಗದಲ್ಲಿ ಪ್ರಯಾಣ ಮಾಡಲು ಯೋಜನೆ ರೂಪಿಸಿದರೂ ಸಾದ್ಯವಾಗಿಲ್ಲ, ನೋಡೋಣ, ಯಾವಾಗ ಪ್ರಕೃತಿ ಮಾತೆ,ಘಾಟಿ ಸುಬ್ರಮಣ್ಯ ಸ್ವಾಮಿ ,ಮತ್ತು ಧರ್ಮಸ್ಥಳದ ಮಂಜುನಾಥಸ್ವಾಮಿ,ರವರುಗಳು  ಯಶವಂತಪುರ ಮಂಗಳೂರು ಮಾರ್ಗದ ರೈಲು ಪ್ರಯಾಣಕ್ಕೆ ಅಸ್ತು ಎನ್ನುವರೋ ನಾನಂತೂ  ಕಾತುರನಾಗಿ ಕಾದಿರುವೆ.....

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಸಿ ಜಿ ಹಳ್ಳಿ
ಚಿತ್ರದುರ್ಗ

10 June 2021

ದೇವರ ಪೂಜೆ ಪ್ರಾರ್ಥನೆ ಏಕೆ ಮಾಡಬೇಕು.ಲೇಖನ


 ದೇವರ ಪೂಜೆ ಮತ್ತು ಪ್ರಾರ್ಥನೆ ಏಕೆ ಮಾಡಬೇಕು? ಲೇಖನ


ಪ್ರಪಂಚದ ಬಹುತೇಕ ಎಲ್ಲಾ ಧರ್ಮದ ಎಲ್ಲಾ ಜನರು ತಮ್ಮ ದಿನಚರಿಯಲ್ಲಿ ಪೂಜೆ ಮತ್ತು ಪ್ರಾರ್ಥನೆ ಗೆ ಕೆಲ ಸಮಯ ಮೀಸಲಿಟ್ಟಿರುವರು, ಪೂಜೆ ಮತ್ತು ಪ್ರಾರ್ಥನೆಯಿಂದ ನಮಗೆ ಅವ್ಯಕ್ತ ಆನಂದ, ನೆಮ್ಮದಿ ಸಿಗುವುದು ಸುಳ್ಳಲ್ಲ.


ಭಾರತದ ಸನಾತನ ಪರಂಪರೆಯ ಆಧಾರದ ಮೇಲೆ ಹೇಳುವುದಾದರೆ

ಪೂಜೆ ಎನ್ನುವುದು ಒಂದು ಯೋಗ ಶಾಸ್ತ್ರದ ಪದ್ಧತಿ ಸಾಧನೆಗೆ ಅನು ಸಂಧಾನವಾದ ಪ್ರಕ್ರಿಯೆಯಾಗಿದೆ. ಪರಮಾರ್ಥ ಸೃಷ್ಟಿ ಸ್ಥಿತಿ ಲಯಗಳೆಂಬ ಜೀವನ ವ್ಯವಸ್ಥೆಗೆ ಕಾರಣವಾದ ದೇವಾನು ದೇವನಿಗೆ ಸರ್ವೋತ್ತಮನಿಗೆ ಕೃತಜ್ಞತೆ ಸಲ್ಲಿಸುವ ಧಾರ್ಮಿಕ ವಿಧಾನಕ್ಕೆ ಪೂಜೆ ಎನ್ನಬಹುದು.


ಶಂಕರಾಚಾರ್ಯರು ಪೂಜೆಯನ್ನು ಎರಡು ವಿಧಗಳಾಗಿ ವಿಂಗಡಿಸಿ ಅರ್ಥೈಸಿದ್ದಾರೆ,ಮೊದಲ ಅರ್ಥದಲ್ಲಿ ನಾವು ಮಾಡುವ ಶಾಸ್ತ್ರೋಕ್ತವಾದ ಕರ್ಮ ಅಥವಾ ಕೆಲಸಗಳನ್ನು ಪೂಜೆ ಎಂದರು,ಇದು ನಾವು ಮಾಡುವ ,ಸ್ನಾನದಿಂದ ಹಿಡಿದು, ಸಂಧ್ಯಾವಂದನೆ, ಭೋಜನ, ಯಾತ್ರೆ,ಪರೋಪಕಾರ, ಅಂತ್ಯಸಂಸ್ಕಾರ, ಇತ್ಯಾದಿ, ನಾವು ಬಹುತೇಕರು ತಿಳಿದೋ ತಿಳಿಯದೆಯೇ ಒಂದಲ್ಲ ಒಂದು ರೀತಿಯಲ್ಲಿ ಈ ವಿಧವಾದ ಪ್ರಾರ್ಥನೆ ಮಾಡುತ್ತಲೇ ಇರುವೆವು.


ಎರಡನೇ ರೀತಿಯಲ್ಲಿ ಪ್ರಾರ್ಥನೆಯೆಂದರೆ ನಿಯಮಬದ್ದವಾಗಿ, ಸಾಲಿಗ್ರಾಮ, ಕಳಶ,ವಿಗ್ರಹಗಳಿಗೆ ಮಾಡುವ ಶೋಡಶೋಪಚಾರ ಪೂಜೆಯಾಗಿದೆ.


ಕೆಲ ನಾಸ್ತಿಕರು ದೇವರು ,ಪೂಜೆಗಳ ಬಗ್ಗೆ ನಂಬಿಕೆ ಇರದಿರಬಹುದು ಅದು ಅವರವರ ವೈಯಕ್ತಿಕ ವಿಚಾರವಾದರೂ ಪೂಜೆಯಿಂದ ಹಲವಾರು ಉಪಯೋಗವಿರುವುದನ್ನು ನಾವು ಒಪ್ಪಲೇಬೇಕು.

ಪೂಜೆ ಮಾಡುವುದರಿಂದ ನಮ್ಮಲ್ಲಿರುವ ನಕಾರಾತ್ಮಕ ಭಾವನೆಗಳು  ಕ್ರಮೇಣ ಕಡಿಮೆಯಾಗಿ,ಸಕಾರಾತ್ಮಕ ಗುಣಗಳು ಬೆಳೆದು ನಮ್ಮ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ,ಪೂಜೆಯ ಬಲದಿಂದ ದೇವರ ಅನುಗ್ರಹ ನಮ್ಮ ಮೇಲಿದೆ ಎಂಬ ಭಾವನಾತ್ಮಕ ಅಂಶದಿಂದ ಕೆಲವೊಮ್ಮೆ   ನಮ್ಮ ಕೆಲಸದಲ್ಲಿ ನಮಗೆ ಹೆಚ್ಚು ಆಸಕ್ತಿ ಬರಬಹುದು, ದೇಹ ಮತ್ತು ಆತ್ಮದ ಶುದ್ಧಿಗಾಗಿ‌ ಪೂಜೆಯ ಅಗತ್ಯವಿದೆ.


ಪೂಜೆ,ಪ್ರಾರ್ಥನೆ ಮುಂತಾದವು ಕೇವಲ ಸಮಯವನ್ನು ಹಾಳು ಮಾಡುವ ವ್ಯರ್ಥ ಕಸರತ್ತು ಎಂಬುವವರಿಗೇನು ಕಡಿಮೆಯಿಲ್ಲ ಅಂತವರಿಗೆ ಈ ಘಟನೆಯನ್ನು ಹೇಳಬಹುದು.


ಒಮ್ಮೆ ಗುರುಗಳ ಬಳಿ ಒಬ್ಬ ಶಿಷ್ಯ ನೇರವಾಗಿ ಪ್ರಶ್ನೆ ಮಾಡಿದ "ಗುರುಗಳೆ, ಈ  ಪೂಜೆ, ಪ್ರಾರ್ಥನೆ, ಭಗವದ್ಗೀತೆ ಓದುತ್ತಾ ಇಷ್ಟು ದಿನ ಕಳೆದರೂ ನನಗೇನು ಉಪಯೋಗವಿಲ್ಲ ನಾನೇಕೆ ಪೂಜೆ ಮಾಡಬೇಕು " ಎಂದನು .

ಗುರುಗಳು ಶಿಷ್ಯನನ್ನು ಹತ್ತಿರ ಕರೆದು ಒಂದು ಬಿಳಿ ಚೀಲ ಕೊಟ್ಟು, ಅದನ್ನು ಇದ್ದಿಲಿನ ಪುಡಿಯಲ್ಲಿ ಅದ್ದಿ, ಕಪ್ಪಾದ ಆ ಚೀಲವನ್ನು ಕೊಟ್ಟು ,ಒಂದು ವಾರಗಳ ಕಾಲ ಈ ಬಟ್ಟೆಯ  ಚೀಲದಲ್ಲಿ ಹತ್ತಿರದ ಕೊಳದಿಂದ ನೀರು ತುಂಬಿಸಿಕೊಂಡು ಬರಬೇಕು ಎಂದು ಆಜ್ಞೆ ಮಾಡಿದರು.


ಗುರುಗಳ ಆಜ್ಞೆಯಂತೆ ಕಪ್ಪಾದ ಚೀಲದಲ್ಲಿ ಕೊಳದಿಂದ ನೀರು ತರಲು ಹೊರಟ ಶಿಷ್ಯ ಗುರುಗಳ ಆಶ್ರಮ ತಲುಪುವ ಮೊದಲೇ ನೀರು ಸೋರಿತ್ತು, ಗುರುಗಳಿಗೆ ಈ ವಿಷಯ ತಿಳಿಸಿದರೂ ,ಚಿಂತಿಸದಿರು ನಾಳೆ ಮತ್ತೆ ಅದೇ ಚೀಲದಲ್ಲಿ ನೀರು  ತೆಗೆದುಕೊಂಡು ಬಾ ಎಂದರು. ಒಂದು ವಾರ ಹೀಗೆಯೆ ಕಳೆಯಿತು, ಶಿಷ್ಯನನ್ನು ಗುರುಗಳು ಅವರ ಬಳಿ ಕರೆದು ಶಿಷ್ಯನ ಇದ್ದಿಲಿನ ಪುಡಿಯಿಂದ ಕಪ್ಪಾಗಿದ್ದ ಚೀಲ ಕ್ರಮೇಣವಾಗಿ ಬಿಳಿಯಾಗಿ ಪರಿವರ್ತನೆ ಆಗಿರುವುದರ ಕಡೆಗೆ ಗಮನ ಸೆಳೆದು

" ನಾವೂ ಸಹ ಪ್ರತಿದಿನ, ಮಾಡುವ ,ಪೂಜೆ,ಪ್ರಾರ್ಥನೆ, ಧ್ಯಾನ, ಪ್ರಾಣಾಯಾಮ, ಸತ್ಸಂಗ, ಭಗವದ್ಗೀತೆ ಪಠಣ, ಮುಂತಾದವುಗಳು ಕ್ರಮೇಣ ನಮ್ಮಲ್ಲಿ, ಶಾಂತಿ, ನೆಮ್ಮದಿ, ತರುವವು,ನಾವು ಮಾಡಿದ ಪಾಪಕಾರ್ಯಗಳು ಕ್ರಮೇಣ ನಾಶವಾಗುವುವು,  ಅದಕ್ಕಾಗಿ ಎಲ್ಲರೂ ಪೂಜೆ ಮಾಡಬೇಕು " ಎಂದರು.


ಆದ್ದರಿಂದ ಸ್ನೇಹಿತರೆ ನಾವೆಲ್ಲರೂ ನಮ್ಮ ಶಕ್ತಾನುಸಾರ ಸರ್ವಶಕ್ತನಾದ ಭಗವಂತನ ನೆನೆಯುತ್ತಾ ಪೂಜೆ ,ಪ್ರಾರ್ಥನೆ, ಸತ್ಸಂಗ, ಯೋಗಾಸನ, ಪ್ರಾಣಾಯಾಮ, ಧ್ಯಾನ, ಮುಂತಾದವುಗಳನ್ನು ನಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳೊಣ, ತನ್ಮೂಲಕ ಭಗವಂತನ ಕೃಪೆಗೆ ಪಾತ್ರರಾಗಿ ಮುಕ್ತಿ ಹೊಂದಲು ಪ್ರಯತ್ನಿಸೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಸಿ ಜಿ ಹಳ್ಳಿ .ಚಿತ್ರದುರ್ಗ






ವೈಬ್ರಂಟ್ ಮೈಸೂರು .ಲೇಖನ ೧೦/೬/೨೧


 

ಸಿಂಹದ್ವನಿ ಕವನ .೧೦/೬/೨೧


 

09 June 2021

ಪ್ರೌಢಿಮೆ ಎಂದರೇನು.ಲೇಖನ


 


*ಪ್ರೌಢಿಮೆ ಎಂದರೇನು. ಲೇಖನ


ವ್ಯಕ್ತಿಯ ಪ್ರೌಡಿಮೆಯು ಅವರ ನಡವಳಿಕೆಯಿಂದ ನಿರ್ಧರಿತವಾಗುತ್ತದೆ, ನಡವಳಿಕೆಯಲ್ಲಿ, ಅವರ ಮಾತು, ಸಂಸ್ಕಾರ, ಸಹಾಯಮಾಡುವ ಗುಣ, ಇವುಗಳೂ ಸೇರಿರುತ್ತವೆ.

ಪ್ರೌಢಿಮೆ ಎಂದರೆ ಸಾಮರ್ಥ್ಯ, ಶಕ್ತಿ, ಅಥವಾ ಕೌಶಲ್ಯ ಎಂದು ಹೇಳಲಾಗುತ್ತದೆ. ಓದಿದವರು, ಬುದ್ದಿವಂತರು,

ಜ್ಞಾನವಂತರು ಪ್ರೌಢಿಮೆ ಹೊಂದಿರುವರು  ಎಂದು ಹೇಳಲಾಗುವುದಿಲ್ಲ, ಅನಕ್ಷರಸ್ಥರೂ ಕೂಡ ಉತ್ತಮ ಪ್ರೌಢಿಮೆ ಹೊಂದಿರುವುದನ್ನು ಕಾಣಬಹುದು.

ಉದಾಹರಣೆಗೆ ಅನಕ್ಷರಸ್ಥ ಗ್ರಾಮೀಣ ಜನರು ಉತ್ತಮ ಭಾಷಾಪ್ರೌಢಿಮೆ ಹೊಂದಿರುವರು, ಅವರು ಮಾತನಾಡುವಾಗ ನಾವು ತಲೆದೂಗದೆ ಇರಲಾರೆವು, ಹೈಸ್ಕೂಲ್ ಪೇಲಾದ ವ್ಯಕ್ತಿ ಕೆಟ್ಟ ಬಸ್, ಲಾರಿ ಇಂಜಿನ್ ರಿಪೇರಿ ಮಾಡುವುದನ್ನು ಕೆಲ ಮೆಕಾನಿಕಲ್ ಇಂಜಿನಿಯರ್ ಕಣ್ ಬಿಟ್ಟು ನೋಡುವುದನ್ನು ಕಂಡಿದ್ದೇವೆ.


ಪ್ರೌಢಿಮೆ  ವ್ಯಕ್ತಿಯ ವ್ಯಕ್ತಿತ್ವಕ್ಕೆ ಭೂಷಣ, ಅದು ಆತ್ಮ ಪ್ರೌಢಿಮೆ ಹಂತ ತಲುಪಿದರೆ ಅದು ವ್ಯಕ್ತಿಯ ನಾಶದ ಸೂಚಕ ಆದ್ದರಿಂದ ನಾವೆಲ್ಲರೂ ಪ್ರೌಢಿಮೆಯನ್ನು ಬೆಳೆಸಿಕೊಳ್ಳೋಣ ಆತ್ಮ ಪ್ರೌಢಿಮೆ ಕಡಿಮೆ ಮಾಡಿಕೊಳ್ಳೋಣ ಎಲ್ಲರೂ ಕಲಿಯೋಣ ,ಎಲ್ಲರೂ ಬೆಳೆಯೋಣ . ನೀವೇನಂತೀರಿ 


ಸಿಹಿಜೀವಿ

ಸಿ ಜಿ ಹಳ್ಳಿ


08 June 2021

ದೂರುವುದೀಗ ಯಾರನ್ನ?.ಕವನ


 


ದೂರುವುದೀಗ ಯಾರನ್ನ? 


ದೂರದೂರಿನಿಂದಲೇ

ನನ್ನವಳಿಗೆ ವಾರಕ್ಕೊಂದು

ಪತ್ರ ಬರೆಯುತ್ತಲೇ ಇದ್ದೆ.


ದೂರವಿದ್ದರೂ ನಾ ನಿನ್ನವನು

ನಂಬು ನೀ ನನ್ನ

ನಾ ನಿನ್ನವನೆಂದು


ದೂರುವವರ ಮಾತ ಕೇಳದಿರು

ಎಂದು ಬುದ್ದಿಮಾತನೇಳಿದೆ

ಅವಳು ದುಡುಕಿದಳು


ಅವಳೀಗೆ ದೂರ ದೂರ

ದೂರುವುದೀಗ ಯಾರನ್ನ

ದೂರಾಗಿದ್ದು ನಾನೋ? ಅವಳೋ?


ಸಿಹಿಜೀವಿ

ಸಿ ಜಿ‌ ವೆಂಕಟೇಶ್ವರ

ತುಮಕೂರು 

ನಾನೂ ಒಬ್ಬ ಕೋಟ್ಯಾದೀಶ ಲೇಖನ


 


*ನಾನೂ ಒಬ್ಬ ಕೋಟ್ಯಾದೀಶ*

ಒಮ್ಮೆ ನನ್ನ ಸ್ನೇಹಿತರು ಹೇಳಿದ್ದು ನೆನಪಿಗೆ ಬಂತು.

"ನೀವು ಮಲಗಿ ಅರ್ಧ ಗಂಟೆಯಲ್ಲಿ ನಿದ್ರೆ ಬಂದರೆ ನೀವೇ ಶ್ರೀಮಂತರು,
ಮಲಗಿದ ಹತ್ತು ನಿಮಿಷಗಳಲ್ಲಿ ‌ನಿದಿರಾದೇವಿ ನಿಮ್ಮನ್ನು ಆಲಂಗಿಸಿದರೆ ನೀವೇ ಲಕ್ಷಾದೀಶರು,
ಹಾಸಿಗೆಯಲ್ಲಿ ತಲೆ ಇಟ್ಟ ತಕ್ಷಣ ನಿದ್ರೆ ಬಂದರೆ ನೀವು ಕೋಟ್ಯಾದೀಶರು."

ಹೌದು ಈ ವಿಷಯದಲ್ಲಿ ನಾನು ಕೋಟ್ಯಾದೀಶನೆ . ದೇವರು ಮಾನವನಿಗೆ ಕೊಟ್ಟ ಹಲವು ವರಗಳಲ್ಲಿ ಈ ನಿದ್ರೆಯೂ ಒಂದು.

ದೇಹ ಮನಸ್ಸು ಸಂಪೂರ್ಣ ವಿಶ್ರಾಂತಿ ಪಡೆಯುವ ಸ್ಥಿತಿಯನ್ನು ಸಾಮಾನ್ಯವಾಗಿ ನಾವು ನಿದ್ರೆ ಎಂದು ಕರೆಯುತ್ತೇವೆ.

ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ಕನಿಷ್ಠ ಆರರಿಂದ ಎಂಟು ಗಂಟೆಗಳ ನಿದ್ರೆ ಅವಶ್ಯಕ ಎಂದು ಸಂಶೋಧನೆಗಳು ,ಮತ್ತು ವೈದ್ಯರು ಶಿಫಾರಸು ಮಾಡಿದ್ದರೂ ಕೆಲವೊಮ್ಮೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದು.

ನಿದ್ರೆಯಿಂದ ನಮಗೆ ನೂರಾರು ಪ್ರಯೋಜನಗಳಿವೆ ಅದಕ್ಕಾಗಿ‌ನಾವು ನಿದ್ರೆ ಮಾಡಲೇಬೇಕು.
ನಿದ್ರೆಯಿಂದ ನಮ್ಮ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ದೊರೆತು ಅದು ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ,ನಿದ್ರೆಯು ನಮ್ಮ ಮನಸ್ಸಿನ ಮತ್ತು ದೇಹಕ್ಕಾದ ನೋವಿನ‌ ಉಪಶಮನದಲ್ಲಿ ಪರಿಣಾಮಕಾರಿಯಾದ ಪಾತ್ರ ವಹಿಸುತ್ತದೆ,ನಿದ್ರೆ ಯ ನಂತರ ನಮ್ಮ ಮನಸ್ಸು ಮುದಗೊಂಡು ಯಾವುದೇ ಕೆಲಸ ಮಾಡಲು ಇನ್ನೂ ಹೆಚ್ಚಿನ ಆಸಕ್ತಿ ಬರುವುದು.

"ಚಿಂತೆ ಇಲ್ಲದೋನಿಗೆ ಸಂತೇಲೂ ನಿದ್ದೆ ಬಂತು " ಎಂಬ ಗಾದೆಯಂತೆ ಕೆಲವರು ಜನಜಂಗುಳಿ ಯಲ್ಲೇ ಗೊರಕೆ ಹೊಡೆಯುತ್ತಾ ನಿದ್ದೆ ಗೆ ಜಾರಿಬಿಡುವರು,ಇನ್ನೂ ಕೆಲವರು  ಬಸ್ನಲ್ಲಿ ನಿಂತೇ ನಿದ್ದೆಗೆ ಜಾರಿರುತ್ತಾರೆ, ಆಫೀಸ್ ನಲ್ಲಿ ಕೆಲ ಮಹಾಷಯರು ವೃತ್ತಪತ್ರಿಕೆಯನ್ನು ಅಡ್ಡವಿಡಿದು ಒಂದು ನಿದ್ದೆ ತೆಗೆದು ಆಕಳಿಸಿ ಆಮೇಲೆ  ಪೈಲ್ ಕಡೆ ನಿದ್ದೆಗಣ್ಣಲ್ಲೇ ನೋಡುವವರಾಗಿದ್ದರೆ ಇನ್ನೂ ಹಲವರು ನಿದ್ದೆಯಲ್ಲಿ ಕುಂಭಕರ್ಣರು .ಇಂತಿಪ್ಪ ನಿದ್ರೆ ಯು ಜನರಲ್ಲಿ ತಾರತಮ್ಯ ಮಾಡುತ್ತಿದೆ ಎಂಬುದು ಕೆಲವರ ಅಂಬೋಣ, ಅವರ ವಾದದಲ್ಲಿ ಹುರಳಿಲ್ಲ ಎಂದು ಹೇಳಲಾಗದು, ಏಕೆಂದರೆ ಐಷಾರಾಮಿ ಬಂಗಲೆಯಲ್ಲಿ ಮಲಗಿದರೂ ಸಾವಿರಾರು ರೂ ಬೆಲೆಯ ಸ್ಲೀಪ್ ವೆಲ್ ಬೆಡ್ ಮೇಲೆ ಮಲಗಿದರೂ ಸ್ಲೀಪ್ ಮಾತ್ರ ಮರ್ಸಿಲೆಸ್ ಆಗಿ   ಅಂತವರಿಂದ  ‌ನೂರು ಮೈಲು ದೂರ ಓಡುತ್ತಲೇ ಇರುತ್ತದೆ.

ಹೀಗೆ ಕೆಲವರಿಗೆ ನಿದ್ರೆ ಬರದಿರಲು ಕಾರಣಗಳು ಹಲವಾರು, ಅದು ಮಲಗುವ ಕೋಣೆ ಸರಿ ಇಲ್ಲದೇ ಇರಬಹುದು, ಮಾನಸಿಕವಾಗಿ ಚಿಂತೆಮಾಡುವುದಾಗಿರಬಹುದು,ಮೆದುಳಿನ ಕಾಯಿಲೆ ಇರಬಹುದು, ಖಿನ್ನತೆ ಇರಬಹುದು, ಚಟುವಟಿಕೆ ರಹಿತ ಜೀವನಶೈಲಿ ಇರಬಹುದು, ಖಿನ್ನತೆ ಇರಬಹುದು.

ಒಮ್ಮೆ ಒಬ್ಬ ಮಹಾರಾಜನು ತಿಂಗಳುಗಟ್ಟಲೆ ನಿದ್ರೆ ಬಾರದೆ ರಾಜ ವೈದ್ಯರಿಂದ ಚಿಕಿತ್ಸೆ ಪಡೆದರೂ ನಿದಿರೆ ಬಾರದಿರಲು ,ಕಡೆಯ ಪ್ರಯತ್ನ ಎಂಬಂತೆ   ಮಂತ್ರಿಯ ಸಲಹೆಯ ಮೇರೆಗೆ ಕಾಡಿನ ಅಂಚಿನಲ್ಲಿರುವ ಋಷಿಯ ಆಶ್ರಮಕ್ಕೆ ತೆರಳಿ ತನ್ನ ಸಮಸ್ಯೆ ಹೇಳಿಕೊಂಡನು,
" ಮಹಾರಾಜ ಇದೇನು ಸಮಸ್ಯೆಯೇ ಅಲ್ಲ, ನಾನು ಹೇಳಿದಂತೆ ಮಾಡು ನಿನಗೆ ನಿದ್ರೆ ಖಂಡಿತವಾಗಿಯೂ ಬರುವುದು, ಇಂದಿನಿಂದ ಬೇರೆಯವರ ಸಹಾಯವಿಲ್ಲದೆ  ನೀನೊಬ್ಬನೇ ಎಂಟು ಅಡಿ ಬಾವಿ ತೆಗೆದು ಅದರಿಂದ ನೀರು ಕುಡಿದು ಬಂದು ನನ್ನ ಕಾಣು" ಎಂದರು ಋಷಿ.

ಹದಿನೈದು ದಿನಗಳ ಕಾಲದಲ್ಲಿ ತಾನೊಬ್ಬನೆ ಬಾವಿ ತೆಗೆದು  ಬಾವಿಯಿಂದ
ನೀರು ಕುಡಿದು, ಲವಲವಿಕೆಯಿಂದ ಋಷಿಗಳ ಮುಂದೆ ನಿಂತು ನಮಸ್ಕಾರ ಮಾಡಿ, " ಗುರುವರ್ಯ ನೀವು ಹೇಳಿದಂತೆ, ದಿನವೂ ಬಾವಿ ತೆಗೆದ ದಣಿವಿನಿಂದ ಉತ್ತಮ ನಿದ್ರೆ ಬರುತ್ತಿದೆ, ನಿಮಗೆ ಧನ್ಯವಾದಗಳು" ಎಂದನು
ಸಂತೋಷ ಇದೇ ರೀತಿಯಲ್ಲಿ ದಿನವೂ ಯಾವುದಾದರೂ ಕೆಲಸವನ್ನು ಮಾಡು ನಿದ್ದೆ ನಿನ್ನ ಹುಡುಕಿಕೊಂಡು ಬರವುದು ಎಂದರು ಋಷಿಗಳು.

ಉತ್ತಮ ನಿದ್ರೆ ನಮ್ಮದಾಗಬೇಕಾದರೆ, ಶ್ರಮವಹಿಸಿ ಕೆಲಸಮಾಡಬೇಕು, ಉತ್ತಮ ಸಾತ್ವಿಕ ಆಹಾರ ಸೇವನೆ ಮಾಡಬೇಕು,ಆರೋಗ್ಯಕರ ಹವ್ಯಾಸಗಳಿರಬೇಕು, ಮಲಗುವ ವೇಳೆಯಲ್ಲಿ ನಿಯಮಿತವಾದ ವೇಳಾಪಟ್ಟಿ ಇರಬೇಕು, ಮನಸ್ಸು ಸಂತೋಷವಾಗಿರಬೇಕು ಸಾಧ್ಯವಾದರೆ, ಯೋಗಾಸಾನ, ಧ್ಯಾನ, ಪ್ರಾಣಾಯಾಮ, ಪ್ರಾರ್ಥನೆಗಳನ್ನು ರೂಢಿ ಮಾಡಿಕೊಳ್ಳಬೇಕು, ಇಷ್ಟೆಲ್ಲಾ ಮಾಡಿದ ಮೇಲೂ ನಿದ್ದೆ ಬರದಿದ್ದರೆ ವೈದ್ಯರ ಸಲಹೆ ಅಗತ್ಯವಿರುತ್ತದೆ.

ಒಟ್ಟಾರೆ ಮೊದಲ ಸಾಲಿನಲ್ಲಿ ಹೇಳಿದಂತೆ ಕೋಟಿ ಇರೋನು ಮಾತ್ರ  ಕೊಟ್ಯಾಧೀಶನಲ್ಲ  ನಿದ್ರೆ ಬಂದೋನೆ ಅದೃಷ್ಟವಂತ ,ಶ್ರೀಮಂತ, ಕೋಟ್ಯಾದೀಶ,
ಹಾಗಾಗಿ ನಾನು ಹೆಮ್ಮೆಯಿಂದ ಹೇಳುವೆ ನಾನೂ ಒಬ್ಬ ಕೋಟ್ಯಾದೀಶ . ನೀವು....?

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

*ಇಂದಿನ ಜನಮಿಡಿತ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ ಸಾವು ಗೆದ್ದ ಸುನಿತ* ಸಿಹಿಜೀವಿ ಸಿ ಜಿ ವೆಂಕಟೇಶ್ವರ ೮/೬/೨೧


 

07 June 2021

ನನ್ನ ಕುಟುಂಬಕ್ಕೊಂದು ಪತ್ರ


 


 


 ನನ್ನ ಕುಟುಂಬಕ್ಕೊಂದು ಪತ್ರ 


ಆತ್ಮೀಯ ಕುಟುಂಬಕ್ಕೆ

ನಮಸ್ಕಾರಗಳು....

ನೀನೀಗ ಸೌಖ್ಯವಾಗಿಲ್ಲ ಎಂದು ನನಗೆ ಗೊತ್ತು ಆದರೂ ನಿನ್ನ ಸಮಾಧಾನ ಮಾಡಲು ಈ ಪತ್ರ ಬರೆಯುತ್ತಿರುವೆ .

ಈ ಪತ್ರ ತಲುಪಿದ ಕೂಡಲೆ ಪತ್ರ ಬರೆಯುವುದನ್ನು ಮರೆಯದಿರು.


ನಮ್ಮದು ಜೇನು ಗೂಡು, ಅವಿಭಕ್ತ ಕುಟುಂಬದ ಸವಿಯನ್ನು ಸವಿದವರು ನಾವು , ಅಜ್ಜಿ, ಅಮ್ಮ,ಅಪ್ಪ, ದೊಡ್ಡಪ್ಪ,, ಚಿಕ್ಕಪ್ಪ, ಅಣ್ಣ, ತಂಗಿ, ಎಲ್ಲರೂ ಸೇರಿ ನಗು ನಗುತಾ ಬಾಳುತ್ತಿದ್ದೆವು, ಆರು ವರ್ಷಗಳ ಹಿಂದೆ ನಮ್ಮ ಅಜ್ಜಿ ದೈವಾದೀನರಾದರು, ಅಂದು ನಮ್ಮ ದೊಡ್ಡ ಕೊಂಡಿ ಕಳಚಿತು, ಅವರೊಂದಿಗಿನ ಒಡನಾಟದ ಸವಿನೆನಪುಗಳೊಂದಿಗೆ ಜೀವಿಸಿದೆವು, ಹಬ್ಬಹರಿದಿನಗಳಲ್ಲಿ ಸಂಭ್ರಮಿಸಿದೆವು, ಸಣ್ಣ ಪುಟ್ಟ ಮನಸ್ತಾಪಗಳನ್ನು ಕುಳಿತು ಮಾತನಾಡಿ ಸರಿಪಡಿಸಿಕೊಂಡೆವು, ನೆರೆಹೊರೆಯವರ, ಸಂಬಂಧಿಗಳ ಕಷ್ಟ ಸುಖಗಳಿಗೆ ಭಾಗಿಯಾದೆವು, ಮೂರು ವರ್ಷಗಳ ಹಿಂದೆ ನಮ್ಮ ಸಹೋದರಿ ನಮ್ಮ ಕುಟುಂಬವನ್ನು ಅಗಲಿದರು , ಅವರ ಅಗಲಿಕೆಯ ನೋವು ಮರೆತು ನಮ್ಮ ಕುಟುಂಬದಲ್ಲಿ ವಸಂತನಾಗಮನವಾಯಿತು ಎಂದು ಭಾವಿಸಿದ್ದ ನಮಗೆ ಹದಿನೈದು ದಿ‌ನಗಳ ಹಿಂದೆ ನಮ್ಮ ಅತ್ತೆಯವರು ನಿಧನರಾದ ಸುದ್ದಿಯನ್ನು ಅರಗಿಸಿಕೊಳ್ಳಲು ಸಾದ್ಯವೇ ಆಗಲಿಲ್ಲ,ಗಾಯದ ಮೇಲೆ ಬರೆ ಎಳೆದಂತೆ ನಮ್ಮ ಕುಟುಂಬಕ್ಕೆ ಬಂದ ಮತ್ತೊಂದು ಸಿಡಿಲಾಘಾತ,ಈ ಜೂನ್ ಮೂರು 2021 ರಂದು ನಮ್ಮ ಮಾವನವರು ನಮ್ಮನ್ನು ತೊರೆದು ನಡೆದು ಬಿಟ್ಟರು, ಈ ಆಘಾತದಿಂದ ನಾವೀಗ ಚೇತರಿಕೊಳ್ಳಬೇಕಿದೆ, 

ಸಾವು ಎಲ್ಲರಿಗೂ ನಿಶ್ಚಿತ ಎಂದು ತಿಳಿದಿದ್ದರೂ ಅಕಾಲಿಕ ಸಾವುಗಳು ಕುಟುಂಬಕ್ಕೆ ಬಹಳ ನೋವು ನೀಡುತ್ತವೆ , ಒಟ್ಟಿನಲ್ಲಿ ಈಗ ನಮ್ಮ ಕುಟುಂಬಕ್ಕೆ ಆಶಾಡದ ಕಾಲ ,ವಸಂತನಾಗಮನ ಬರುವುದು ಎಂಬ ನಿರೀಕ್ಷೆಯಲ್ಲಿ ಇರುವ ನಿನ್ನ ಕುಟುಂಬದ ಸದಸ್ಯ


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು 

06 June 2021

*ವೈಬ್ರಂಟ್ ಮೈಸೂರು ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕಥೆ " ಬಾಲಜಿಯು ಬಾಲಾಜಣ್ಣನಾದ "* ೬/೬/೨೧


 

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕಥೆ"ಪವಾಡದ ಪುಸ್ತಕ "* ೬/೬/೨೧


 

ಛಲಬಿಡದ ತ್ರಿವಿಕ್ರಮ ನಾರಾಯಣ ಮೂರ್ತಿ .ಲೇಖನ


 


ಛಲಬಿಡದ ತ್ರಿವಿಕ್ರಮ ಶ್ರೀ ನಾರಾಯಣ ಮೂರ್ತಿ ರವರು. ಲೇಖನ

"ಮನಸ್ಸಿದ್ದಲ್ಲಿ ಮಾರ್ಗ" , "ಕಾಯಕವೇ ಕೈಲಾಸ " ಎಂಬ ತತ್ತ್ವದಲ್ಲಿ ನಂಬಿಕೆ ಇಟ್ಟು ಕೆಲಸ ಮಾಡಿದರೆ ಸಾಮಾನ್ಯನೂ ಅಸಮಾನ್ಯ ಆಗುವನೆಂದು ಹಲವಾರು ಮಹಾತ್ಮರು ಸಾಧಿಸಿ ತೊರಿಸಿರುವರು. ಅಂತಹ ಸಾಧಕರ ಪಟ್ಟಿಯಲ್ಲಿ ಕಾಣಸಿಗುವ ಹೆಮ್ಮೆಯ ಕನ್ನಡಿಗರೇ ನಮ್ಮ ನಾರಾಯಣ ಮೂರ್ತಿ ರವರು.

ತಮ್ಮ ಬುದ್ದಿ ಮತ್ತು ಶ್ರಮದಿಂದ ಒಂದು ಚಿಕ್ಕ ಕಾರ್ ಶೆಡ್ ನಲ್ಲಿ ಆರಂಭವಾದ ಐಟಿ ಕಂಪನಿಯು ಇಂದು ಪ್ರಪಂಚದ ಟಾಪ್ ಟೆನ್ ಕಂಪನಿಗಳಲ್ಲಿ ಒಂದಾಗಿ ಬೆಳೆದಿರುವುದು ಭಾರತೀಯರಾದ ನಾವೆಲ್ಲರೂ ಹೆಮ್ಮೆ ಪಡುವ ಸಂಗತಿಯಾಗಿದೆ. ಇದಕ್ಕೆ ಅವರ ಧರ್ಮ ಪತ್ನಿ ಸುಧಾ ಮೂರ್ತಿ ರವರ ಸಹಕಾರ, ಪ್ರೋತ್ಸಾಹ, ಮತ್ತು ತ್ಯಾಗ ವನ್ನು ಸ್ಮರಿಸಲೇಬೇಕು,

 ಬೆಂಗಳೂರು ನಗರದಲ್ಲಿ ಕೇಂದ್ರೀಕೃತವಾದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಅತಿ ದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದ್ದು, ೧,೪೫,೦೦೦ ಕ್ಕೂ ಹೆಚ್ಚು ಕೆಲಸಗಾರರನ್ನು ಹೊಂದಿದೆ. ಭಾರತದಲ್ಲಿ ಒಂಬತ್ತು ತಂತ್ರಾಂಶ ಅಭಿವೃದ್ಧಿ ಕೇಂದ್ರ ಮತ್ತು ಪ್ರಪಂಚದಾದ್ಯಂತ ೨೯ ಕಛೇರಿಗಳನ್ನು ಭಾರತ, ಯುಸ್‌ಎ, ಚೀನಾ, ಆಸ್ಟ್ರೇಲಿಯಾ, ಯುಕೆ, ಕೆನಡ, ಜಪಾನ್ ಹಾಗೂ ಇನ್ನಿತರೆ ರಾಷ್ಟ್ರಗಳಲ್ಲಿದೆ. ಇನ್ಫೋಸಿಸ್‌ವು ೩೦ಕ್ಕೂ ಹೆಚ್ಚು ದೇಶದ ಕಂಪನಿಗಳಿಗೆ ವಾಣಿಜ್ಯ ವ್ಯವಹಾರ, ತಾಂತ್ರಿಕ, ಯಾಂತ್ರಿಕ, ಔಟ್ ಸೋರ್ಸ್‌ ಸೇವೆಗಳನ್ನು ಒದಗಿಸುತ್ತಿದೆ.

ಅಮೇರಿಕಾದ ಪ್ರತಿಷ್ಠಿತ ನಾಸ್ಡಾಕ್ ( ನಮ್ಮಲ್ಲಿ ಬಾಂಬೆ ಶೇರು ಮಾರುಕಟ್ಟೆಯ ತರಹ) ನಲ್ಲಿ ಲಿಸ್ಟ್ ಆದ ಮೊದಲ ಭಾರತೀಯ ಕಂಪನಿ ಎಂದರೆ ನಿಮಗೆ ಅರ್ಥವಾಗಬೇಕು ನಾರಾಯಣಮೂರ್ತಿ ರವರು ತಮ್ಮ ಕಂಪನಿಯನ್ನು ಬೆಳೆಸಿದ ಪರಿಯನ್ನು.

ಈಗಲೂ ಲಕ್ಷಗಟ್ಟಲೆ ಉದ್ಯೋಗಿಗಳು ಇನ್ಪೋಸಿಸ್ ಕಂಪನಿಯಿಂದ ಉದ್ಯೋಗ ಪಡೆದು ಜೀವನ ಮಾಡುತ್ತಿದ್ದಾರೆ, ಆ ಕಂಪನಿಯ ಶೇರುಗಳನ್ನು ಕೊಂಡ ಸಾವಿರಾರು ಮಂದಿ ಕೋಟ್ಯಾದಿಶರಾಗಿರುವರು.

ಸಿ ಎಸ್ ಆರ್ ಅಡಿಯಲ್ಲಿ ಕೋಟಿಗಟ್ಟಲೆ ಹಣವನ್ನು ನಾರಾಯಣ ಮೂರ್ತಿ ರವರು, ಮತ್ತು ತಮ್ಮ ಧರ್ಮ ಪತ್ನಿ ಸುಧಾ ಮೂರ್ತಿ ರವರು ಸಮಾಜಮುಖಿ ಕೆಲಸಗಳಿಗೆ ಮುಡಿಪಾಗಿಟ್ಟಿರುವುದು ಶ್ಲಾಘನೀಯ ಕಾರ್ಯ.

೧೯೯೬ರಲ್ಲಿ ಇನ್ಫೊಸಿಸ್  ಫೌಂಡೇಶನ್ ಸ್ಥಾಪಿಸಿ, ಆರೊಗ್ಯ, ಶಿಕ್ಷಣ, ಸಾಮಾಜಿಕ, ಕಲೆ, ಸಂಸ್ಕೃತಿ ಮತ್ತು ಹಳ್ಳಿಗಳ ಅಭಿವೃಧ್ಧಿ ಯೋಜನೆಗಳನ್ನು ಹಾಕಿಕೊಂಡಿದೆ. ಅಂದಿನಿಂದ ಈ ಪ್ರತಿಷ್ಠಾನವು, ತನ್ನ ಕಾರ್ಯಗಳನ್ನು ಕರ್ನಾಟಕ ಮುಖ್ಯಕೇಂದ್ರದಿಂದ ಭಾರತದ ಇತರೆ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಕೇರಳ, ಒರಿಸ್ಸ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಸಮಾಜದ ಅಭಿವೃದ್ಧಿಯ ಕಾರ್ಯಗಳನ್ನು ಕೈಗೊಳ್ಳುತ್ತಿದೆ.

ಕಂಪನಿಯನ್ನು ಆರಂಭಮಾಡಲು ಹಣಕಾಸಿನ ‌ಕೊರತೆ ಬಿದ್ದಾಗ ಹೆಂಡತಿಯ ಒಡವೆಗಳನ್ನು ಒತ್ತೆ ಇಟ್ಟು ಹಣ ಹೊಂದಿಸಿ ಛಲಬಿಡದ ತ್ರಿವಿಕ್ರಮನಂತೆ ಕಂಪನಿಯನ್ನು ಕಟ್ಟಿ ಬೆಳೆಸಿ ತೋರಿಸಿದವರು ನಮ್ಮ ನಾರಾಯಣ ಮೂರ್ತಿ ರವರು.

ಇಂದಿನ ಯುವ ಉದ್ದಿಮೆದಾರರಿಗೆ ಇಂತಹ ಕಷ್ಟದ ಪರಿಸ್ಥಿತಿಗಳಿಲ್ಲ, ಸರ್ಕಾರಗಳು ಸ್ಟಾರ್ಟ್ ಅಪ್, ಮೇಕ್ ಇನ್ ಇಂಡಿಯಾ, ಮುದ್ರಾ, ಸ್ಕಿಲ್ ಇಂಡಿಯಾ, ಮುಂತಾದ ಯೋಜನೆಗಳನ್ನು ಜಾರಿಗೆ ತಂದಿವೆ  ,ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ನಾರಾಯಣ ಮೂರ್ತಿ ರವರನ್ನು ರೋಲ್ ಮಾಡಲ್ ಆಗಿ ಸ್ವೀಕಾರ ಮಾಡಿ ವಿವಿಧ ರಂಗಗಳಲ್ಲಿ ಕಂಪನಿಗಳನ್ನು ಸ್ಥಾಪಿಸಿದರೆ ,ನಮ್ಮ ದೇಶದಲ್ಲಿ ಯುವ ಉದ್ದಿಮೆದಾರರು ಹೆಚ್ಚಾದರೆ, ಇನ್ಫೋಸಿಸ್ ನಂತಹ ನೂರಾರು ಕಂಪನಿಗಳು ದೇಶದಲ್ಲಿ ತಲೆ ಎತ್ತಿ ,ಉದ್ಯೋಗ, ಆರ್ಥಿಕ ಕ್ಷೇತ್ರದಲ್ಲಿ ನಮ್ಮ ದೇಶವು ಇನ್ನೂ ಪ್ರಗತಿ ಹೊಂದುವುದರಲ್ಲಿ ಸಂಶಯವಿಲ್ಲ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ 6/6/21


 

05 June 2021

ವಿಶ್ವ ವಾಣಿ 5/6/21


 

ಸಾವು ಗೆದ್ದ ಸುನಿತಾ.ಕಥೆ .ಲೇಖನ


 

*ಸಾವು ಗೆದ್ದ ಸುನಿತ*

ಒಂಭತ್ತು ವರ್ಷದ ಸುನಿತ ಕೈಚೀಲ ಹಿಡಿದು ರಾಜ್ಯ ಹೆದ್ದಾರಿ ದಾಟಿ ಮತ್ತೊಂದು ಬದಿ ಇರುವ  ಶಾಲೆಯ ಕಡೆ ಓಡಿ ಬರುತ್ತಿದ್ದಳು, ರಸ್ತೆಯಲ್ಲಿ ವೇಗವಾಗಿ ಬಂದ ಲಾರಿಯ ಚಾಲಕ ಬ್ರೇಕ್ ಹಾಕಿದರೂ ,  ಆ ಬಾಲಕಿಗೆ ಡಿಕ್ಕಿ ಹೊಡೆದ.ಡಿಕ್ಕಿಯ ರಭಸಕ್ಕೆ ಅವಳು ರಸ್ತೆಯ ಮತ್ತೊಂದು ಬದಿಗೆ ಬಿದ್ದು ಪ್ರಜ್ಞೆ ತಪ್ಪಿ ಬಿದ್ದಳು ,ರಸ್ತೆಯ ಪಕ್ಕದಲ್ಲೇ ಇರುವ ಶಾಲಾ ಕೊಠಡಿಯ ಮುಂದೆ ನಿಂತಿದ್ದ ನಾನು ಈ ಘಟನೆಯನ್ನು ನೋಡಿ, ಹೌಹಾರಿ ಸುನಿತಾಳತ್ತ ಓಡಿದೆ.

ಹಿರಿಯೂರು ತಾಲ್ಲೂಕಿನ ಹುಚ್ಚವ್ವನಹಳ್ಳಿಯ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುವಾಗ 2001 ನೇ ಇಸವಿಯ ಜನವರಿ ತಿಂಗಳ ಒಂದು ಸೋಮವಾರದಂದು  ನಾನೂ ಮತ್ತು ಮಕ್ಕಳು ರಜದ ಮಜಾ ಸವಿದು ಶಾಲೆಗೆ ಬರುವಾಗ ನಡೆದ ಈ ದುರ್ಘಟನೆ ಕಂಡು ಎಲ್ಲರಿಗೂ ಭಯದೊಂದಿಗೆ ಏನು ಮಾಡಬೇಕೆಂದು ತೋಚದೇ ನೋಡುತ್ತಾ ನಿಂತೆವು.

ಲಾರಿಯವನು ರಸ್ತೆಯ ಬದಿಗೆ ನಿಲ್ಲಿಸಿದ , ತಪ್ಪಾಯಿತೆಂದು ಹೇಳುವ ಮೊದಲೇ  ಸಿಟ್ಟಿನಲ್ಲಿದ್ದ ಊರ ಜನರು ಅವನಿಗೆ ಧರ್ಮದೇಟು ನೀಡಿ ಹಣ್ಣುಗಾಯಿ ನೀರುಗಾಯಿ ಮಾಡಿದ್ದರು.

ಆ ಬಾಲಕಿಯ ಕಡೆ ಯಾರಿಗೂ ಲಕ್ಷ್ಯ ಇಲ್ಲ
ನಾನು ಅವಳ ಬಳಿ ಹೋಗಿ ನೋಡಿದೆ ಉಸಿರಾಡುತ್ತಿದ್ದಳು, "ದಾದು ಬಾ ಇಲ್ಲಿ ಅಂದೆ" ನನ್ನ ಪರಿಚಿತ ಆಟೋ ಡ್ರೈವರ್ ಆಟೋ ತಂದ ,ನಾನೇ ಆ ಬಾಲಕಿಯನ್ನು ಆಟೋದಲ್ಲಿ ಕೂರಿಸಿಕೊಂಡು ನಮ್ಮ ಮುಖ್ಯ ಶಿಕ್ಷಕಿಯಾಗಿದ್ದ ಗಾಯತ್ರಿ ದೇವಿ ಮೇಡಂ ರವರ ಕಡೆ ನೋಡಿದೆ , ಅವರು ಸಹ ಬಂದು ಆಟೋ ದಲ್ಲಿ ಕುಳಿತರು, ಐದು ನಿಮಿಷಗಳಲ್ಲಿ ಹಿರಿಯೂರಿನ ತಾಲೂಕು ಆಸ್ಪತ್ರೆಗೆ ತಲುಪಿದೆವು, ಡ್ಯೂಟಿಯಲ್ಲಿದ್ದ ಡಾಕ್ಟರ್ ಕ್ಷಿಪ್ರವಾಗಿ ಸ್ಪಂದಿಸಿ ಬಾಲಕಿಗೆ ಚಿಕಿತ್ಸೆ ನೀಡಿದರು ,ನಮ್ಮ ಕಡೆ ತಿರುಗಿ ನೀವು ಅಂದರು?
"ಸರ್ ನಾನು ಶಿಕ್ಷಕ ,ಇವರು ನಮ್ಮ ಹೆಚ್, ಎಂ" ಅಂದೆ
" ನೀವು ಸಮಯಕ್ಕೆ ಸರಿಯಾಗಿ ಈ ಮಗುವನ್ನು ಕರೆದುಕೊಂಡು ಬಂದಿದ್ದೀರಿ ಇನ್ನೂ ಹತ್ತು ನಿಮಿಷ ಲೇಟ್ ಆಗಿದ್ರೆ ಈ ಮಗು ಜೀವಕ್ಕೆ ಅಪಾಯವಿತ್ತು, ಟ್ರಿಟ್ಮೆಂಟ್ ಕೊಟ್ಟಿದಿನಿ, ಈ ಡ್ರಿಪ್ ಮುಗಿಯೋ ಮುಂಚೆ ಪ್ರಜ್ಞೆ ಬರುತ್ತೆ , ನಥಿಂಗ್ ಟು ವರಿ" ಎಂದು ನನ್ನ ಭುಜ ತಟ್ಟಿ ಹೊರಟರು ಡಾಕ್ಟರ್,

ಇಪ್ಪತ್ತು ನಿಮಿಷಗಳ ನಂತರ ಸುನಿತಾ ಕಣ್ ಬಿಟ್ಟು ನನ್ನ ಮತ್ತು ನಮ್ಮ ಹೆಚ್. ಎಂ "ನೋಡಿ ನೀರು ಕುಡಿತಿನಿ ಸಾ" ಎಂದಳು
ನಾನು ಬೇಗ ಹೋಗಿ ಅಂಗಡಿಯಲ್ಲಿ ಒಂದು ಲೀಟರ್ ನೀರಿನ ಬಾಟಲ್ ತಂದು ಕೊಟ್ಟೆ ,ಸ್ವಲ್ಪ ಕುಡಿದು ಅಲ್ಲಲ್ಲಿ ಆಗಿದ್ದ ತರಚು ಗಾಯ ನೋಡಿಕೊಂಡು ಅಳಲು ಶುರುಮಾಡಿದಳು, ನಮ್ಮ ಹೆಚ್ ಎಂ ಮೇಡಂ ರವರು ಸಮಾಧಾನ ಮಾಡಿದರು.ಅಷ್ಟೊತ್ತಿಗೆ ವಿಷಯ ತಿಳಿದ ಅವರ ತಾಯಿ ಅಳುತ್ತಲೇ ಆಸ್ಪತ್ರೆಗೆ ಬಂದರು , ಮಗಳ ಸ್ಥಿತಿ ನೋಡಿ ಅಳಲು ಶುರುಮಾಡಿದರೂ ಜೀವಕ್ಕೇ ಏನೂ ತೊಂದರೆ ಇಲ್ಲವೆಂದು ತಿಳಿದು ಸ್ವಲ್ಪ ಸಮಾಧಾನದಿಂದ ನಮ್ಮಿಬ್ಬರ ಕಡೆ ಕೈಮುಗಿದು ಧನ್ಯವಾದ ಹೇಳಿದರು.

ಊರಿನ ಉದ್ರಿಕ್ತ ಜನರು ಲಾರಿಯವನ ವಿಚಾರಿಸಿದ ಬಳಿಕ ಆಸ್ಪತ್ರೆಗೆ ಲಗ್ಗೆ ಇಟ್ಟರು ಕೊಠಡಿಯ ತುಂಬಾ ಗಾಳಿಯಾಡದಂತೆ ನಿಂತರು ,ಇದನ್ನು ಕಂಡ ಡಾಕ್ಟರ್ ಬಂದು ಎಲ್ಲರೂ ಹೊರಹೋಗಲು ಹೇಳಿದರು.

ಹದಿನೈದು ದಿನಗಳ ನಂತರ ಸಂಪೂರ್ಣ ಗುಣಮುಖಳಾದ ನಂತರ  ಸುನಿತಾ ಳ ತಂದೆ ಮಗಳನ್ನು ಕರೆದುಕೊಂಡು ಬಂದು ಶಾಲೆಗೆ ಬಂದು ನನ್ನ ನೋಡಿ ಕೈ ಮುಗಿದು
" ನೀವು ನನ್ನ ಮಗಳ ಕಾಪಾಡಿದ ದೇವರು ಇದ್ದಂಗೆ ಸಾ, ನಿಮ್ ಋಣ ಎಂಗ್ ತೀರ್ಸ್ ಬೇಕೋ ಗೊತ್ತಾಗಲ್ಲ "ಎಂದರು
" ಅಂತ ದೊಡ್ ಮಾತು ಬೇಡ ಯಜಮಾನರೆ, ಅವಳು ನಮ್ಮ ಶಾಲೆ ಹುಡುಗಿ ಅವಳ ರಕ್ಷಣೆ ನಮ್ಮ ಹೊಣೆ " ಎಂದೆ .

"ಸಾ ,ನಿಮ್ದು ಯರಬಳ್ಳಿ ಅಂತೆ ಹೌದೆ , ಅಂಗಾದ್ರೆ ನೀವು ನಮ್ಮ ದೂರದ ಸಂಬಂಧ ಅಂತು ಗೊತ್ತಾತು " ಎಂದರು ಅವರು

" ಯಜಮಾನರೆ ನನ್ನ ಶಾಲೆಯ ಎಲ್ಲಾ ಶಿಕ್ಷಕರು, ಮತ್ತು ಮಕ್ಕಳು ನನ್ನ ಸಂಬಂಧಿಗಳೇ ಅಲ್ಲವೇ ?" ಎಂದೆ
"ಹೌದು ಸಾ ಅದು‌ ನಿಮ್ ದೊಡ್ ಗುಣ , ನಿಮ್ಮಂತಹ ಮೇಷ್ಟ್ರು ನಮ್ ಊರಿಗೆ ಬಂದಿದ್ದು ನಮ್ಮ ಪುಣ್ಯ " ಎಂದು ಹೇಳುವಾಗ ಅವರ ಕಣ್ಣುಗಳು ತೇವವಾಗಿದ್ದು ನನ್ನ ಗಮನಕ್ಕೆ ಬಂತು ಅದನ್ನು ನೋಡಿ ನಾನೂ ಭಾವುಕನಾಗಿ ಬಿಟ್ಟೆ ......

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

*ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳೊಂದಿಗೆ ಇಂದಿನ ಜನಮಿಡಿತ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಪರಿಸರ ಗೀತೆ👉* ೫/೬/೨೧


 

*ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳೊಂದಿಗೆ ಇಂದಿನ ಜನಮಿಡಿತ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಪರಿಸರ ಗೀತೆ👉*

04 June 2021

ಪ್ರೀತಿಯ ಆಶ್ರಮ .ಲೇಖನ


 



ಪ್ರೀತಿಯ ಆಶ್ರಮ..ಲೇಖನ, ಪತ್ರ


ನಿನಗೆ ಹೃತ್ಪೂರ್ವಕ ವಂದನೆಗಳು


ದೇಶ ವಿದೇಶಗಳಲ್ಲಿ ನೂರಾರು ಶಾಖೆಗಳ ಹೊಂದಿರುವ ಓ ನನ್ನ ಹೆಮ್ಮೆಯ ರಾಮಕೃಷ್ಣ ಆಶ್ರಮವೇ ನಿನಗೆ ನನ್ನ ಸಾಸಿರ ನಮನಗಳು.


೧೯೯೦ ದಶಕದಲ್ಲಿ ಹಿರಿಯರಿನಲ್ಲಿ  ನಾನು ಪದವಿ ಮತ್ತು ಟಿ ಸಿ ಎಚ್ ವ್ಯಾಸಾಂಗ ಮಾಡುವಾಗ ಗಾಯತ್ರಿ ದೇವಿ ಭಟ್ ಎಂಬ ಮಾತೆಯವರ ಸಂಪರ್ಕ ಲಬಿಸಿತು, ಪತಿಯು ಕೆನರಾ ಬ್ಯಾಂಕ್ ನಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದರು ಅವರ ಮನೆಯು ರಾಮಕೃಷ್ಣ ಶಾರದಾಶ್ರಮವಾಗಿತ್ತು, ಅಲ್ಲಿ ನಡೆವ ಸತ್ಸಂಗಗಳು ನನ್ನ ಜೀವನದ ದಿಕ್ಕನ್ನೇ ಬದಲಿಸಿದವು, ಅಲ್ಲಿ ನನಗೆ, ವೀರೇಶಾನಂದರು, ನಿರ್ಭಯಾನಂದರ ಪರಿಚಯವಾಯಿತು, ತನ್ಮೂಲಕ ತುಮಕೂರು, ಮತ್ತು ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮ ನೋಡುವ ಸೌಭಾಗ್ಯ ಲಬಿಸಿತು.


ಅದರಲ್ಲೂ ಪೊನ್ನಂಪೇಟೆ ಆಶ್ರಮದಲ್ಲಿ ಸ್ವಾಮಿ ಜಗದಾತ್ಮಾನಂದ ರ ದರ್ಶನ ಮಾಡಿ ಪುನೀತನಾದೆ .ಒಂದೆರಡು ದಿನ ಆಶ್ರಮದಲ್ಲಿ ವಾಸ ಮಾಡಲು ಅದೃಷ್ಟ ಲಭಿಸಿದ್ದು ನನ್ನ ಪೂರ್ವ ಜನ್ಮದ ಪುಣ್ಯವೇ ಸರಿ. ಆಶ್ರಮ ವಾಸಿಗಳ ದಿನಚರಿ ಬೆರಗು ಮೂಡಿಸುವಂತದು.ಬೆಳಿಗ್ಗೆ ನಾಲ್ಕು ವರೆಗೆ ಎದ್ದರೆ ನಿತ್ಯಕರ್ಮ ಮುಗಿಸಿ ಬೆಳಗಿನ ಭಜನೆ ಸತ್ಸಂಗ ದಲ್ಲಿ ಸಮಯ ಸೇರಿದ್ದದ್ದೇ ತಿಳಿಯುವುದಿಲ್ಲ, ಅಂದು ಸುಮಾರು ತೊಂಬತ್ತು ವರ್ಷ ವಯಸ್ಸಿನ ಸ್ವಾಮಿ ಗಳು ಭಜನೆ ಹೇಳಿಕೊಡುತ್ತಿದ್ಧರೆ ನಾವು ಮಂತ್ರ ಮುಗ್ದರಾಗಿ ಹಾಡುತ್ತಿದ್ದೆವು.


ಬೆಳಗಿನ ಉಪಾಹಾರವಾದ ಬಳಿಕ ಆಶ್ರಮದ ಸುತ್ತ ಇರುವ ತೋಟದಲ್ಲಿ ಆಸಕ್ತರು ಕೆಲಸ ಮಾಡಬಹುದಾಗಿತ್ತು, ಕೆಲವರು ಗ್ರಂಥಾಲಯಕ್ಕೆ ಭೇಟಿ ಕೊಟ್ಟು ಅಧ್ಯಯನ ಮಾಡುತ್ತಿದ್ದೆವು.


ಮಧ್ಯಾಹ್ನ ದ ಊಟದ ಬಳಿಕ ವಿಶ್ರಾಂತಿ ಸಂಜೆಯ ಸತ್ಸಂಗ ದೇವರ ನಾಮ ಹಾಡುವುದು ,ಸ್ವಾಮೀಜಿಯವರ ಪ್ರವಚನ ಊಟದ ನಂತರ ಅಂದಿನ ದಿನಚರಿ ಮೆಲುಕು ಹಾಕಿ ಮಲಗುವುದು.


ನಿಜಕ್ಕೂ ಆಶ್ರಮದಲ್ಲಿ ನಾನು ಕಳೆದ ಆ ದಿನಗಳು ನನ್ನ ಜೀವನದ ಸುವರ್ಣ ದಿನಗಳು 


ಮತ್ತೊಮ್ಮೆ  ಆಶ್ರಮಕ್ಕೆ ಬರಲು ನಾನು ಕಾತುರನಾಗಿರುವೆನು ನಿರೀಕ್ಷಿಸುತ್ತಿರು  


ಇಂತಿ‌ ನಿನ್ನ ವಿಶ್ವಾಸಿ


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ಬಾಲಜಣ್ಣ .ಕಥೆ


 



*ಬಾಲಾಜಣ್ಣ*


ಕುಂಟ , ಶ್ಯವ್ಟಾ, ಲಂಗ್ಡಾ, ಎಳವ , ಹೀಗೆ ದಿನಕ್ಕೊಂದು ಹೆಸರಿನಿಂದ ಕರೆದು ಅವಮಾನವನ್ನು ಬಾಲಾಜಿಯು ಮೊದ ಮೊದಲು ಅಳುತ್ತಲೇ ಸ್ವೀಕರಿಸಿ, ಬರು ಬರುತ್ತಾ, ಅದು ಮಾಮೂಲಿಯಾಗಿ ತನ್ನ ಹೆಸರೇ ಅವನಿಗೆ ಮರೆತುಹೋಗಿತ್ತು, ತಂದೆಯಿಲ್ಲದ ಮಗನನ್ನು ಅಮ್ಮ ಕೂಲಿ ನಾಲಿ‌ಮಾಡಿ ಸಾಕುತ್ತಿದ್ದರು, 


ಒಂದು ದಿನ‌ ರಾತ್ರಿ ಮನನೊಂದ ಮಗ ಅಮ್ಮನ ಕೇಳಿಯೇ ಬಿಟ್ಟ " ಅಮ್ಮ ನನ್ನ ಒಂದು  ಕಾಲೇಕೆ ಹೀಗಾಗಿದೆ? ನನ್ನ ಗೆಳೆಯರು ಮತ್ತು ಊರವರು ನಾನು ನಡೆಯುವುದನ್ನು ಹಂಗಿಸುವರು, ಮತ್ತು ನನ್ನ ಹೆಸರು ಹಿಡಿದು ಕರೆಯದೇ ಕೆಟ್ಟ ಪದಗಳಿಂದ ಬೈಯುವರು. ಅದನ್ನು ಕೇಳಿ ನನಗೆ ಅಳು ಬರುವುದು " ಎಂದು ಕಣ್ಣಲ್ಲಿ ನೀರು ಹಾಕುತ್ತಲೇ ಕೇಳಿದ.


ಮಗನ ಕಣ್ಣೀರ ವರೆಸಿ ತಾನೂ ತನ್ನ ಕಣ್ಣಲ್ಲಿ ಬಂದ ನೀರನ್ನು ಸೆರಗಿನಿಂದ ವರೆಸಿಕೊಂಡು ಮಗನ ಸಮಾಧಾನ ಮಾಡುತ್ತಾ 

"ಅಳಬ್ಯಾಡ ಕಣೋ ನನ್ ಮಗನೆ, ಇದ್ರಲ್ಲಿ ನಿಂದೇನೂ ತಪ್ಪಿಲ್ಲ ಕಣಪ್ಪ,ನೀನು ಹುಟ್ಟಿದಾಗಿಂದ ಒಂದು ಕಾಲು ಐಬು ಕಣಪ್ಪ, ತಾಲೂಕ್ ಆಸ್ಪತ್ರೆ, ದೊಡ್ ಆಸ್ಪತ್ರೆ ಎಲ್ಲಾ ತೋರ್ಸಿದೆ ಕಣಪ್ಪ , ಆ ಡಾಕ್ಟ್ರು ಅದೆಂತದೋ, ಪೋಲಿಯಾ ಅಂದ್ರು, ಅದು ವಾಸಿ ಆಗಲ್ಲಂತೆ ಕಣಪ್ಪ, ...

ಯಾರಪ್ಪ ನಿನ್ನ ಬೈದೋರು? ನಾಳೆ ಅವರ್ನ ನನಿಗೆ ತೋರ್ಸು ,ಅವ್ರ ಗಾಚಾರ ಬಿಡಿಸ್ತಿನಿ, ನೀನೇನು ಅದ್ನ ತಲೆಗೆ ಹಚ್ಕಬ್ಯಾಡ ಇವತ್ತಿಂದ ಇನ್ನೂ ಸೆನಾಗಿ ಓದು, ನಿನ್ ಬೈಯ್ಯೋ ಜನ , ಹಂಗ್ಸೋ ಜನ ಬಾಯ್ ಮುಚ್ಕೆಂಪ್ತಾರೆ, ಎಂದು ಮಗನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಸಮಾಧಾನ ಮತ್ತು ಧೈರ್ಯ ಹೇಳಿದರು ತಾಯಿ ದೇವಕ್ಕ  . ಅಮ್ಮನ ಧೈರ್ಯದ ಮಾತು ಕೇಳಿ ಮಗ ಹಾಗೆಯೇ ಅಮ್ಮನ ತೊಡೆಯ ಮೇಲೆ ನಿದ್ರೆಗೆ ಜಾರಿದ ಬಾಲಾಜಿ.


ಅಮ್ಮನಿಗೆ ನಿದ್ರೆ ಬರಲಿಲ್ಲ ಬದಲಿಗೆ ಪ್ರಶ್ನೆಗಳ ಸರಮಾಲೆ ಅವಳ ಮುಂದೆ ಬಂದು ನಿಂತಿತು, " ಸಿಕ್ ವಯಸ್ಸಲ್ಲೆ ಗಂಡನ್ ಕಳ್ಕೊಂಡು ಈ ಮಗನ್ ಸಾಕಕೆ ಕೂಲಿ ಮಾಡ್ಕಂಡು ಜೀವ್ನ ಮಾಡೋದು ನನ್ ತಪ್ಪೇ?

ನನ್ ಮಗಂಗೆ ಕಾಲ್ ಸೆನಾಗ್ ಇಲ್ದೇ ಇರೊಂಗಾಗಿದ್ ನಮ್ ತಪ್ಪೆ? 

ನಮ್ ಪಾಡಿಗೆ ನಾವ್ ಮರ್ವಾದೆಯಿಂದ ಜೀವ್ನ ಮಾಡ್ತಾ ಇದ್ರು ಈ ಜನ ಯಾಕ್ ನನ್ ಮಗನ್ನ ಇಂಗೆ ಮಾತಾಡ್ತಾರೆ? ಎಂದು ಮತ್ತೆ ಎರಡು  ಹನಿಗಳನ್ನು ಉದುರಿಸಿದರು,  ಆ ಹನಿಗಳು ಮಗನ ಕೈ ಮೇಲೆ ಬಿದ್ದು ನಿದ್ರೆಯಲ್ಲಿದ್ದ ಮಗ ಕೈ ಅಲುಗಾಡಿಸಿದ, ಮಗನನ್ನು ಎತ್ತಿ ಚಾಪೆಯ ಮೇಲೆ ಮಲಗಿಸಿ, ಉತ್ತರ ದಿಕ್ಕಿಗೆ ನಿಂತು " ತಾಯಿ ದೇವಸತ್ತಿ ಚೌಡವ್ವ ನನ್ ಮಗುಂಗೆ ,ನಂಗೆ ಯಾವ ತೊಂದ್ರೆ ಇಲ್ದೆ ಕಾಪಾಡವ್ವ ಎಂದು  ಕೈಮುಗಿದು ತನ್ನ ಬಲಗೈಯನ್ನು ಮಡಿಚಿ ತಲೆದಿಂಬಿನಂತೆ ತಲೆ ಕೆಳಗೆ ಇಟ್ಟುಕೊಂಡು ಮಗನ ಪಕ್ಕದಲ್ಲೇ ಮಲಗಿದರು ದೇವಕ್ಕ.


ಅಮ್ಮನ ಧೈರ್ಯದ ಮಾತುಗಳು, ಮಗನಿಗೆ ಮಾರ್ಗದರ್ಶನದಂತೆ ನಿಂತವು, ಆಗಾಗಾ ಜನರಾಡುವ ಕುಹಕದ ಮಾತುಗಳಿಗೆ ಬಾಲಜಿ ಕಿವುಡಾದ ಓದಿನ ಕಡೆ ಗಮನಹರಿಸಿದ.


" ನಾಲ್ಕನೇ ತರಗತಿಯಲ್ಲಿ ಈ ವರ್ಷ ಬಾಲಾಜಿ ಎಲ್ಲರಿಗಿಂತ ಹೆಚ್ಚು ಅಂಕ ಪಡೆದಿರುವನು ಎಲ್ಲರೂ ಚಪ್ಪಾಳೆ ಹೊಡಿಯಿರಿ " ಎಂದು ಶಿಕ್ಷಕರಾದ ತಿಪ್ಪೇಸ್ವಾಮಿ ಹೇಳಿದಾಗ ಮಕ್ಕಳು ಜೋರಾಗಿ ಚಪ್ಪಾಳೆ ತಟ್ಟಿದರು ,ಬಾಲಾಜಿ ಗೆ ತನಗರಿವಿಲ್ಲದೇ ಕಣ್ಣಲ್ಲಿ ನೀರು ಜಿನುಗಿದವು ಆದರೆ ಈ ಬಾರಿ ಆನಂದದಿಂದ.


ರಿಸಲ್ಟ್ ಕಾರ್ಡ್ ಹಿಡಿದು ಅಮ್ಮನ ಬಳಿ ಬಂದು ಅದನ್ನು ತೋರಿಸಿ "ಅಮ್ಮ ನೋಡು ನಾನು ಇಡೀ ಸ್ಕೂಲ್ ಗೆ ಪಸ್ಟ್ ಬಂದಿದಿನಿ" ಎಂದು ಮೊಗದಲ್ಲಿ ನಗುತುಂಬಿಕೊಂಡು ತೋರಿಸಿದ.


ಅಮ್ಮ ಹಿರಿಹಿರಿ ಹಿಗ್ಗುತ್ತಾ" ಬಾಳ ಸಂತೋಸ ಕಣಪ್ಪ, ನನಗೆಲ್ಲಿ ಇದುನ್ನ ಓದಾಕೆ ಬರುತ್ತೆ ,ಆದ್ರೂ ನೀನಿಗೆ ಸೆನಾಗಿ ನಂಬ್ರು ಬಂದಿರೋದು ಬಾಳ ಸಂತೋಸ ಕಣಪ್ಪ ,ಆ ನಮ್ ಸತ್ತಿ ಚೌಡವ್ವ   ಕಣ್ ಬಿಟ್ಲು ಕಣಪ್ಪ  ನಾಳಿಕೆ ಸುಕ್ರುವಾರ ಅವ್ವನ್ ಗುಡಿಗೆ ಹೋಗಿ ಹಣ್ಣು ಕಾಯಿ ಮಾಡಿಸ್ಕೆಂಡು ಬಾ, ಇಂಗೆ ಸೆನಾಗಿ ಓದಿ ,ಗೌರ್ಮೆಂಟ್ ಕೆಲ್ಸ ತಗಾಳಪ್ಪ " ಎನ್ನತ್ತಾ ತನ್ನ ಎರಡೂ ಕೈಗಳಿಂದ ಮಗನ ಮುಖವ ನೇವರಿಸಿ ತಲೆಗೆ ಒತ್ತಿಕೊಂಡು ನೆಟಿಕೆ ಮುರಿದರು ದೇವಕ್ಕ.


ಬಾಲಾಜಿಯ ಶೈಕ್ಷಣಿಕ ಪ್ರಗತಿಯನ್ನು ಕಂಡ ಅವನ ಸ್ನೇಹಿತರು ಐದನೆಯ ತರಗತಿಯಲ್ಲಿ ಅವನಿಗೆ ಗೌರವ ಕೊಡಲಾರಂಭಿಸಿದರು, ಕುಂಟ ಬಾಲ, ಬಾಲ, ಎಂದು ಹಂಗಿಸುವವರು ಕ್ರಮೇಣ ,ಬಾಲಾಜಿ, ಎನ್ನಲು ಆರಂಭ ಮಾಡಿದರು, ಇದಕ್ಕೆ ಪೂರಕವಾಗಿ ತರಗತಿಯ ಶಿಕ್ಷಕರಾದ ತಿಪ್ಪೇಸ್ವಾಮಿ ಮಾಸ್ಟರ್ " ಮಕ್ಕಳೇ ಅಂಗವಿಕಲತೆ ಶಾಪವಲ್ಲ, ಅವರೂ ನಮ್ಮಂತೆ ಮನುಷ್ಯರು ಅವರಿಗೂ ಜೀವಿಸುವ ಹಕ್ಕಿದೆ" ಎಂಬ ಮಾತುಗಳು ಸಹ ಮಕ್ಕಳ ಮನ ಪರಿವರ್ತನೆ ಗೆ ಸಾಕ್ಷಿಯಾಗಿದ್ದವು.


ಬಾಲಾಜಿಯು ಓದಿನಲ್ಲಿ ಹಿಂತಿರುಗಿ ನೋಡಲೇ ಇಲ್ಲ, ಅದಕ್ಕೆ ತಕ್ಕಂತೆ ಅಮ್ಮ ಕೂಲಿನಾಲಿ ಮಾಡಿ ಮಗನ ಓದಿಸಿದರು, ಹತ್ತನೇ ತರಗತಿಯಲ್ಲಿ ಮಗ ಇಡೀ ತಾಲೂಕಿಗೆ ಹೆಚ್ಚು ಅಂಕ ಪಡೆದು ಪಾಸಾಗಿದ್ದ, ಪತ್ರಿಕೆಯಲ್ಲಿ ಅವನ ಪೋಟೋ ಬಂದಿದ್ದನ್ನು ಕಂಡ ಅಕ್ಕ ಪಕ್ಕದ ಜನ ದೇವಕ್ಕನ ಮನೆಗೆ ಬಂದು ಮಗನ ಸಾಧನೆ ಹೊಗಳಿದಾಗ ಅಮ್ಮನಿಗೆ ಒಳಗೊಳಗೆ ಮಗನ ಸಾಧನೆ ಕಂಡು ಹೆಮ್ಮೆ ಉಂಟಾಯಿತು.


ಪಿಯುಸಿ, ಡಿಗ್ರಿಯಲ್ಲಿ ,ಅಂಗವಿಕಲ ವಿದ್ಯಾರ್ಥಿ ವೇತನ ಮತ್ತು ಅಮ್ಮನ ‌ನೆರವಿನಿಂದ ಚೆನ್ನಾಗಿ ಓದಿದ ಬಾಲಾಜಿ ಡಿಗ್ರಿಯಲ್ಲಿ ಬಂಗಾರದ ಪದಕ ಪಡೆದು , ಬಿ ಎಡ್ ಮಾಡಿದ ಒಂದೇ ವರ್ಷಕ್ಕೆ ಸರ್ಕಾರಿ ಶಾಲೆಯ ಶಿಕ್ಷಕನಾದ ,


ಊರವರ ಬಾಯಲ್ಲಿ ಬಾಲಾಜಿ ಕ್ರಮೇಣ "ಬಾಲಾಜಣ್ಣ " ಆಗಿದ್ದ ಇಡೀ ಊರಿಗೆ ಮೊದಲ ಸರ್ಕಾರಿ ಉದ್ಯೋಗ ಪಡೆದ ಬಾಲಜಣ್ಣ ಊರಿನ ಓದುವ ಹುಡುಗರ ಮಾದರಿಯಾಗಿ ನಿಂತಿದ್ದ, 


ಕೋಲಾರಕ್ಕೆ ಶಿಕ್ಷಕನಾಗಿ ನಿಯೋಜಿತವಾದ ನೇಮಕ ಪತ್ರ ಪಡೆದ ಬಾಲಾಜಿ ಅಮ್ಮನ ಪಾದದ ಬಳಿ ಆ ಪತ್ರ ಇಟ್ಟು ಕಾಲಿಗೆರಗಿ ಆಶೀರ್ವಾದ ಪಡೆದ


"ಬಾಲಾಜಿ, ಇದಕ್ಕೆಲ್ಲ ಕಾರಣ ಆ ಮಾ ಸತ್ತಿ  ಚೌಡಮ್ಮ ಆಯಮ್ಮನ ಗುಡಿಗೋಗಿ ಇದಕ್ಕೆ ಪೂಜೆ ಮಾಡಿಸ್ಕೆಂಡು ನೀನು ದೂಟಿ ಗೆ ಹೋಗಪ್ಪ" ಎಂದರು ದೇವಕ್ಕ.


"ಅಮ್ಮಾ... ನಾನ್ ಒಬ್ಬನೇ ಹೋಗಲ್ಲ ನೀನು ನನ್ ಜೊತೆಗೆ ಬಾ, ಇಬ್ರು ಅಲ್ಲೇ ಇರಾನಾ, " ಎಂದು ಮಗ ಹೇಳುತ್ತಲೇ ಆಗಲಿ ಎಂದು ತಲೆಯಾಡಿಸಿದರು ಅಮ್ಮ.


ಒಂದು ತಿಂಗಳು ಶಿಕ್ಷಕನಾಗಿ ಸಂಬಳ ಪಡೆದ ಬಾಲಾಜಿ  ಅಮ್ಮನಿಗೆ ರೇಷ್ಮೆ ಸೀರೆ ತಂದು ಕೊಟ್ಟನು.

 ಅಮ್ಮನ ಬಹುದಿನದ ಬಯಕೆಯಂತೆ ತಿರುಪತಿ ಗೆ ಕರೆದುಕೊಂಡು ಹೋದನು. ವೆಂಕಟರಮಣಸ್ವಾಮಿಯ ದರ್ಶನದಿಂದ ಭಾವಪರವಶರಾದ ದೇವಕ್ಕ ತಮಗರಿವಿಲ್ಲದೇ ಜೋರು ಧ್ವನಿಯಲ್ಲಿ ಗೋವಿಂದಾ...... ಗೋವಿಂದಾ..... ಎಂದು ಕೂಗಲಾರಂಬಿಸಿದರು, ಅಮ್ಮನ ಧ್ವನಿಗೆ ಬಾಲಜಿಯೂ ಧ್ವನಿಸೇರಿಸಿದ ಅಕ್ಕಪಕ್ಕದವರೂ ಗೋವಿಂದಾ.... ಎಂದು  ದೇವರ ಕೃಪೆಗೆ ಪಾತ್ರರಾಗಲು ಪ್ರಯತ್ನಿಸುತ್ತಿದ್ದರು....


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ನೇತಾಜಿ .ಹನಿ


 


*ನೇತಾ"ಜಿ"*


ಬಹಳ ಸಂತಸದ ವಿಷಯ

ಕನ್ನಡದಲ್ಲಿ ಧಾರಾವಾಹಿ 

ರೂಪದಲ್ಲಿ ‌ಬರಲಿದ್ದಾರೆ 

ನಮ್ಮ ನೇತಾಜಿ|

ದೇಶಭಕ್ತರ ಜೀವನವನ್ನು

ಪ್ರಸಾರ ಮಾಡುವ ನಿಮಗೆ

ನಮನ "ಜೀ "(Zee)||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

02 June 2021

ಮಹಿಮೆ ,ಕಥೆ


 


ಮಹಿಮೆ 


 ಕಥೆ 



ಮಗಳು ಮಲಗಿದ್ದಳು 

ಬೆಳಿಗ್ಗೆ ಎಂಟು ಗಂಟೆಯಾದರೂ ಎದ್ದಿರಲಿಲ್ಲ, ಸಾಮಾನ್ಯ ದಿನಗಳಲ್ಲಿ ಆರು,ಆರೂವರೆಗೆ ಎದ್ದು  ಅಮ್ಮನ ಮಾತು ದಿಕ್ಕರಿಸಿ, ಅಮ್ಮನಿಗೆ ಮನೆ ಅಂಗಳ ಗುಡಿಸಲು, ಮನೆ ಮುಂದೆ ನೀರು ಹಾಕಲು ಸಹಾಯ ಮಾಡುತ್ತಿದ್ದಳು ಗೌರಿ .


"ಈ ವರ್ಷ ಏಳನೇ ಕ್ಲಾಸ್ ಪಾಸಾಗಿದಿಯಾ, ಇನ್ನು ಎಂಟನೇ ಕ್ಲಾಸ್, ಸ್ಕೂಲ್ ಇನ್ನೂ ಓಪನ್ ಆಗಿಲ್ಲ, ಪಕ್ಕದ್ ಮನೆ ರಾಧಾ ಕೊಟ್ಟ ಹಳೇ  ಬುಕ್ ತೊಗೊಂಡ್  ಓದು ಹೋಗು" ಎಂದು ಗದರಿದರೂ ,

" ಓದ್ತಿನಿ ಇರಮ್ಮ ಹಗಲೊತ್ತು ಪೂರ್ತಿ ಟೈಮ್ ಇರುತ್ತೆ, ನೀ‌ನು ಪಾಪ ದಿನ ಪೂರ್ತಿ ಕೆಲಸ ಮಾಡಿ ಸುಸ್ತು ಆಗ್ತೀಯಾ ಅದಕ್ಕೆ ನಿನಗೆ ಸ್ವಲ್ಪ ಹೆಲ್ಪ್ ಮಾಡಿದೆ ಅಷ್ಟೇ " ಎಂದ ಮಗಳ ಮಾತ ಕೇಳಿ ತಾಯಿ ಒಳಗೊಳಗೆ ಖುಷಿ ಪಡುತ್ತಿದ್ದಳು.


ಅಂದೇಕೋ ಎಂಟಾದರೂ ಏಳದ ಮಗಳ ನೋಡಿ , ರಾತ್ರಿಯೆಲ್ಲಾ ತೋಟಕ್ಕೆ ನೀರು ಹಾಯಿಸಲು ಹೋದ ತಂದೆ , ಬೆಡ್ ಶೀಟ್ ತೆಗೆದು ಏಳಮ್ಮ ಚಿನ್ನು. ಎಂದು ಹಣೆ ಮೇಲೆ ಕೈಇಟ್ಟ, ಕಾದ ಕಾವಲಿಯಂತಾಗಿತ್ತು ಹಣೆ, ಗಾಬರಿಯಿಂದ ,ಏ ಇವಳೆ ಬಾರೆ ಇಲ್ಲಿ, ಚಿನ್ನುಗೇನೆ ಇಂಗೆ ಜ್ವರ ಬಂದಿದೆ? ನೋಡೋದಲ್ವ? ಬರೀ ನಿನಗೆ ಕಸ ಹೊಡೆಯೋದು, ನೆಲ ಗುಡಿಸೋದೆ ಕೆಲಸ"ಎಂದು  ಸಿಟ್ಟಿನಿಂದ ಆತಂಕದಿಂದ ನುಡಿದ ಜಗನ್ನಾಥ.


ಪೊರಕೆ ಬಿಸಾಕಿ ಓಡಿ ಬಂದ ತಾಯಿ ಮಗಳ ತಬ್ಬಿ ಅಯ್ಯೋ ಏನಮ್ಮ ಇದು ಮೈಯಿ ಕಾದ ಅಂಚಿನಂಗೈತೆ , ನಾನು ನೊಡ್ಲೇ ಇಲ್ಲ" ಎಂದು ಅಳುತ್ತಾ ಮಗಳ ತಬ್ಬಿಕುಳಿತಳು.


" ಅಳಬ್ಯಾಡ ಸುಮ್ನಿರು, ಆಸ್ಪತ್ರೆಗೆ ಕರ್ಕೊಂಡು ಹೋಗ್ತೀನಿ ಎಲ್ಲಾ ಸರಿಹೋಗುತ್ತೆ"  ಸಮಾಧಾನ ಹೇಳಿದ ಜಗನ್ನಾಥ .


ಎಂಟು ಮೈಲಿ ದೂರದಲ್ಲಿರುವ ಆಸ್ಪತ್ರೆಗೆ ಹೋಗಲು ಬಸ್ ಇರಲಿಲ್ಲ, ಪಕ್ಕದ ಬೀದಿಯ ದಾದು ಮನೆಗೆ ಹೋಗಿ , ಮಗಳ ಅನಾರೋಗ್ಯದ ಕಾರಣ ತಿಳಿಸಿ ಆಸ್ಪತ್ರೆಗೆ ಬರಲು ಕೇಳಿದ ಜಗನ್ನಾಥ,

"  ಅಣ್ಣ ಈಗ ಟೈಟ್ ಲಾಕ್ಡೌನ್ ಐತೆ,   ನಿ‌ನ್ನೆ ಇಂಗೆ ಹೋಗಿ ಪೋಲೀಸ್ ನವರ ಲಾಟಿ ಏಟು ತಿಂದು ,ಹಿಂಭಾಗದಲ್ಲಿ ನೀಲಿ ಬರೆ ಬಂದಿದೆ ನೋಡು "ಎಂದು ಬರ್ಮುಡ ಸರಿಸಿ ತೋರಿಸಿದ, 


ಬೇಸರದಿಂದ ಎದ್ದ ಜಗನ್ನಾಥ ದಾದು ಮನೆಯಿಂದ ಹೊರ ನಡೆದ , ಅಕ್ಕ ಪಕ್ಕದ ಮನೆಯವರ ಬೈಕ್ ನಲ್ಲಿ ತನ್ನ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪ್ರಯತ್ನ ಪಟ್ಟ  ಯಾರೂ ಒಪ್ಪದಿದ್ದಾಗ ಮಗಳ ತಲೆಯ ಮೇಲೆ ಒಂದು ಟವಲ್ ಹಾಕಿ , ತನ್ನ ಹೆಗಲ ಮೇಲೆ  ಕೂರಿಸಿಕೊಂಡು ಎಂಟು ಮೈಲಿ ದೂರದಲ್ಲಿರುವ ಆಸ್ಪತ್ರೆಗೆ ನಡೆಯಲು ಶುರುಮಾಡಿದ , ಬಾಯಾರಿಕೆ ಯಾದಾಗ ಅಲ್ಲೇ ರಸ್ತೆಯ ಪಕ್ಕದಲ್ಲಿ ಇರುವ ಬೋರ್ ವೆಲ್ ನೀರು ಕುಡಿದು ಮತ್ತೆ ನಡೆಯಲು ಶುರುಮಾಡಿದ , ಅಂತೂ ಆಸ್ಪತ್ರೆ ತಲುಪಿದ ಅಲ್ಲಿ ಜನಜಾತ್ರೆ ,ಮಗಳು ಸುಸ್ತಾದಂತೆ ಕಂಡಳು , ಬೆಳಿಗ್ಗೆಯಿಂದ ಇಬ್ಬರೂ ಏನೂ ತಿಂದಿಲ್ಲದಿರುವುದು ನೆನಪಾಯಿತು, ಅಲ್ಲೇ ಹತ್ತಿರವಿರುವ ಅಂಗಡಿಯಲ್ಲಿ ಒಂದು ಬಿಸ್ಕತ್ತಿನ ಪೊಟ್ಟಣ ತಂದು ತಿನ್ನಿಸಿದನು, 


" ರಾತ್ರಿಯಿಂದ ಜ್ವರ ಸ್ವಾಮಿ, ನೋಡಿ ಮೈ ಸುಟ್ ಹೋಗ್ತೈತೆ, ಒಂದ್ ಬಾಟ್ಲಿ ಹಾಕಿ ,ಎರಡು ಇಂಜೆಕ್ಷನ್ ಹಾಕಿ ಸ್ವಾಮಿ " ಒಂದೇ ಸಮನೆ ಹೇಳಿದ ಭಯಗೊಂಡ ತಂದೆ


" ಇಲ್ಲಿ ಡಾಕ್ಟರ್ ನಾನೋ ,ನೀನೋ"


"ನೀವೇನೆ ಸಾ, ಹೋದ್ ಸಲ ನನಗಿ ಜ್ವರ ಬಂದಾಗ ನೀವು ಬಾಟ್ಲಿ ಹಾಕಿದ್ರಿ ಅದಕ್ಕೆ ಅಂಗಂದೆ ಸ್ವಾಮಿ"


" ಈಗ ಕೋವಿಡ್ ಇದೆ ,ಯಾರಿಗೂ ಬಾಟ್ಲಿ ಹಾಕಲ್ಲ, ಇಂಜೆಕ್ಷನ್ ಮಾಡಿ ,ಮಾತ್ರೆ ಕೊಡ್ತೀನಿ ಮೂರ್ ದಿನ ಬಿಟ್ ಬನ್ನಿ"  ಎಂದರು  ಡಾಕ್ಟರ್.


ಮಗಳನ್ನು ಹೆಗಲಮೇಲೆ ಹೊತ್ತು ಮನೆಗೆ ಹಿಂತಿರುಗುವಾಗ ದಾರಿಯುದ್ದಕ್ಕೂ ಮಗಳ ಮೈ ಮುಟ್ಟಿ ನೋಡಿ ಜ್ವರ ಕಡಿಮೆಯಾಗದಿದ್ದನ್ನು ಅರಿತು ,ಡಾಕ್ಟರ್ ನನ್ನ ಬೈಯಲು ಶುರುಮಾಡಿದರು. ಊರು ಹತ್ತಿರವಾದಂತೆ ಸೂರ್ಯದೇವ ಗುಡ್ಡಗಳ ಮರೆಯಲ್ಲಿ ಅವಿತುಕೊಳ್ಳಲು ಹವಣಿಸುತ್ತಿದ್ದ, ದೂರದ ದಾರಿ ನಡೆದಿದ್ದರೂ ಮಗಳು ಕತ್ತಲಾದರೆ ಹೆದರಬಹುದೆಂದು ದೊಡ್ಡ ಹೆಜ್ಜೆ ಹಾಕಿ ನಡೆದ ಅಂತೂ ಕತ್ತಲಾಗುವುದರೊಳಗೆ ಮನೆ ಮುಂದೆ ಬಂದು ನಿಂತ.


ತಲೆಬಾಗಿಲಿನಲ್ಲೆ ಕಾಯುತ್ತಿದ್ದ ತಾಯಿಹೃದಯ ಮಗಳ ತಬ್ಬಿಕೊಂಡು ಇನ್ನೂ ಮೈ ಬಿಸಿಇರುವುದನ್ನು ಕಂಡು ಅಳುತ್ತಾ, ಇದೇನಿದು ಇವಳಿಗೆ ಜ್ವರ ಸ್ವಲ್ಪನೂ ಕಮ್ಮಿ ಆಗಿಲ್ಲ ಎಂಗೆ ತೋರಿಸಿದಿರಿ ನೀವು" ಎಂದು ಕೇಳಿದಳು ಪುಟ್ಟಮ್ಮ.


ಮನೆಯ ಪಡಸಾಲೆಯಲ್ಲಿ ಚಾಪೆಯ ಮೇಲೆ ಮಗಳ ಮಲಗಿಸಿ ಆಗ ತಾನೆ ಕಾಸಿದ್ದ ಗಂಜಿ ತಂದು ಕುಡಿಸಿದಳು ,ತಕ್ಷಣ ಏನೋ ಹೊಳೆದವಳಂತೆ ಕೈಕಾಲು ಮುಖ ತೊಳೆದುಕೊಂಡು, ನೀವು ಇಲ್ಲೆ ಮಗುನ ನೋಡ್ಕೊಂಡ್ ಇರ್ರಿ ನಾನು ಬರ್ತಿನಿ ಎಂದು ಹೊರಟೇ ಬಿಟ್ಟಳು, ಜಗನ್ನಾಥ ಎಲ್ಲಿಗೆ ಎಂದು ಕೇಳಲಿಲ್ಲ.


" ನೀನ್ ಇಂಗ್ ಮಾಡಿದರೆ ಎಂಗವ್ವ? ನಾನ್ ಏನ್ ಕಮ್ಮಿ ಮಾಡಿದಿನಿ ನಿನಿಗೆ, ವಾರ ವಾರ. ಮಂಗಳವಾರ, ಶುಕ್ರವಾರ ,ಪೂಜೆ ಮಾಡ್ತಾ ಇದಿನಿ, ವರ್ಷಕೊಂದ್ ಕೋಳಿ  ಕೊಯ್ದು ಜಾತ್ರೆ ಮಾಡಿದಿವಿ ,ಇನ್ನೇನು ಬೇಕು ನಿನಿಗೆ, ನನ್ ಮಗ ಚೆನ್ನಾಗಿ ಆಗ್ಬೇಕು ಅಷ್ಟೇ, ಅವಳು ಬೇಗ ಗುಣ ಆಗ್ತಾಳೆ ಅಂದ್ರೆ ಬಲಕ್ಕೆ ಪ್ರಸಾದ ಕೊಡು , ಲೇಟ್ ಆಗುತ್ತೆ ಕಷ್ಟ ಆಗುತ್ತೆ ಅನ್ನಂಗಿದ್ರೆ ಎಡಕ್ಕೆ ಕೊಡು" ಎಂದು ಮೂರು ಬಾರಿ ಅಡ್ಡ ಬಿದ್ದು ಗ್ರಾಮದೇವತೆ ಚೌಡೇಶ್ವರಿ ಯನ್ನು ಕೇಳಿದಳು ಪುಟ್ಟಮ್ಮ.


  ಅಮ್ಮನ ನೆತ್ತಿಯ ಮೇಲಿನಿಂದ ಬಲಬಾಗಲ್ಲಿ ಹೂ ಕೆಳಗೆ ಬಿದ್ದಿತು,

ನನ್ ತಾಯಿ ನೀನ್ ನಮ್  ಕೈ ಬಿಡಲ್ಲ ಅಂತ ಗೊತ್ತು ಕಣವ್ವ ಎಂದು ಮತ್ತೆ ಅಡ್ಡ ಬಿದ್ದು, ಪೂಜಾರಪ್ಪನಿಂದ ಭಂಡಾರ ಪಡೆದು ಸೀರೆ ಸೆರಗಿನ ತುದಿಗೆ ಗಂಟುಹಾಕಿಕೊಂಡು ಮನೆಗೆ ಬಂದು ಭಂಡಾರ ಮಗಳ ಹಣೆಗೆ ಇಟ್ಟಾಗ ಜಗನ್ನಾಥನಿಗೆ ಇವಳು ದೇವಾಲಯಕ್ಕೆ ‌ಹೋಗಿದ್ದು ತಿಳಿಯಿತು.


" ಇನ್ನೇನು ತೊಂದ್ರೆ ಇಲ್ಲ ಅಮ್ಮ ,ಎಲ್ಲಾ ಒಪ್ಕೊಂಡೈತೆ ಬೇಗ ವಾಸಿಯಾಗುತ್ತೆ" ಎಂದು ಗಂಡ ಮತ್ತು ಮಗಳಿಗೆ ಧೈರ್ಯ ಹೇಳಿ ಅಡುಗೆ ಮನೆಗೆ ತೆರಳಿದಳು.


ಮಗಳನ್ನು ಹೆಗಲ ಮೇಲೆ ಹೊತ್ತು

ಹದಿನಾರು ‌ಮೈಲಿ ದೂರ ನಡೆದು ಸುಸ್ತಾದ ಜಗನ್ನಾಥ ಊಟದ ನಂತರ ನೆಲಕ್ಕೆ ತಲೆ ಇಟ್ಟ ತಕ್ಷಣ ಗೊರಕೆ ಹೊಡೆಯಲು ಶುರು ಮಾಡಿದ, ಪುಟ್ಟಮ್ಮ ಅರ್ಧ ಗಂಟೆಗೊಮ್ಮೆ ಮಗಳ ಹಣೆ ಮೇಲೆ ಕೈ ಇಟ್ಟು ನೋಡಿದರು ಜ್ವರ ಕಡಿಮೆಯಾದ ಲಕ್ಷಣಗಳು ಕಾಣಲಿಲ್ಲ, ಮತ್ತೆ ರಾತ್ರಿ ಹನ್ನೆರಡರ ಸಮಯದಲ್ಲಿ ,ಮನೆಯ ಹೊರಬಂದು ಚೌಡೇಶ್ವರಿ ದೇವಿ ಗುಡಿಯ ಕಡೆ ನಿಂತು ಮನದಲ್ಲಿ ಬೇಡಿಕೊಂಡು ಮಗಳ ಪಕ್ಕದಲ್ಲೇ ಮಲಗಿದಳು, ನಿದ್ದೆ ಯಾವಾಗ ಬಂತೋ ಗೊತ್ತಾಗಲಿಲ್ಲ.


ಬೆಳಿಗ್ಗೆ ಆರು ಗಂಟೆಗೆ "ಅಮ್ಮ.. ಅಪ್ಪ... ಬೆಳಗಾಯ್ತು ಎದ್ದೇಳಿ" ಎಂದು ಮಗಳು ಕೂಗಿದಾಗ ಎದ್ದ ಪುಟ್ಟಮ್ಮ ಮೊದಲು ಮಗಳ ಹಣೆ ಮೇಲೆ ಕೈ ಇಟ್ಟು ನೋಡಿದಳು ಜ್ವರ ಇರಲಿಲ್ಲ... ಮಗಳ ಮುಖ ಗೆಲುವಾಗಿತ್ತು....



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು








ಸಿಂಹ ಧ್ವನಿ ಕಥೆ ೨/೬/೨೧


 

ಪತ್ಯಾಹಾರ .ಕಾದಂಬರಿ ವಿಮರ್ಶೆ


 


ಪ್ರತ್ಯಾಹಾರ

 ಕಾದಂಬರಿಯ ವಿಮರ್ಶೆ


ಈಗಾಗಲೇ ಭಾರತದ ಸಾರಸ್ವತ ಲೋಕಕ್ಕೆ ಎಂಟು ಕಾದಂಬರಿ ಮತ್ತು ಕವನ ಸಂಕಲನಗಳನ್ನು ನೀಡಿರುವ , ಕವಿ, ಕಾದಂಬರಿಕಾರರಾದ ಶ್ರೀ ವಿದ್ಯಾಧರ ದುರ್ಗೇಕರ್ ರವರು, ನನಗೆ ತಿಳಿದ ಮಟ್ಟಿಗೆ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಕಾದಂಬರಿ ಬರೆವ ಏಕೈಕ ಕಾದಂಬರಿ ಕಾರರು ಎನಿಸುತ್ತದೆ.


ಶ್ರೀಯುತರ   ಮೊದಲ ಕಾದಂಬರಿ "ಜೀವಾತ್ಮಗಳ ವಿಕ್ರಯ" ಓದಿದ್ದ ನನಗೆ ಅವರ ಮುಂದಿನ ಕಾದಂಬರಿಯ ಪ್ರಕಟಣೆಯನ್ನು ಉತ್ಸುಕತೆಯಿಂದ ನಿರೀಕ್ಷೆ ಮಾಡಿದ್ದೆ ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ, ಅವರ "ಪ್ರತ್ಯಾಹಾರ" ಕಾದಂಬರಿ ಪ್ರಕಟವಾದ ಸುದ್ದಿ ತಿಳಿದು ಅಮೆಜಾನ್ ನಲ್ಲಿ ಖರೀದಿ ಮಾಡಿ ಓದಿದೆ.


ಮೊದಲ ಕಾದಂಬರಿಯಲ್ಲಿ ಸಾಮಾಜಿಕ ಸಂದೇಶದ ಜೊತೆ ಒಂದು ಪ್ರೇಮ ಕಥೆ ಹೇಳಿದ್ದ ಕಾದಂಬರಿಕಾರರು ಈ ಬಾರಿ ಔಟ್ ಅಂಡ್ ಔಟ್ ಪ್ರೇಮ ಕಥೆ ನೀಡಿ ಓದುಗರ ಮನ ಗೆದ್ದಿದ್ದಾರೆ ,ಅದರಲ್ಲೂ ಯುವಜನಾಂಗ ಈ ಪುಸ್ತಕವನ್ನು ಬಹಳ ಇಷ್ಟ ಪಡುವರು.


ಕೆರೆಯಲ್ಲಿ ಮುಳುಗುತ್ತಿರುವ  ಸಾಂಡಿ, ಅಲಿಯಾಸ್ ಸಂದೇಶ್ ಮತ್ತು ಕಾವ್ಯ ರನ್ನು ರಕ್ಷಣಾ ಪಡೆಗಳು ರಕ್ಷಣೆ ಮಾಡುವ ಮನೋಹರ ವರ್ಣನೆಯಿಂದ ಆರಂಭವಾಗುವ ಕಾದಂಬರಿಯ ಮೊದಲ ಪುಟವು ಓದುಗರ ಸೆಳೆದು ಒಂದೇ  ಗುಕ್ಕಿನಲ್ಲಿ ಓದುವಂತೆ ಮಾಡುತ್ತದೆ.


ಅಲ್ಲಲ್ಲಿ ಬರುವ ಅನಿರೀಕ್ಷಿತ ತಿರುವುಗಳು ನಾಯಕ ನಾಯಕಿಯರ ಮನದ ತುಮುಲಗಳನ್ನು ಬಹಳ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ ಕಾದಂಬರಿಕಾರರು,


 ಇಂಜಿನಿಯರಿಂಗ್ ಓದುವ ಸ್ಯಾಂಡಿಗೆ ಕಾವ್ಯ ಳ ಮೇಲೆ ಪ್ರೀತಿ, ಡಾಕ್ಟರ್ ಓದುವ ರಶ್ಮಿ ಗೆ ಬಾಲ್ಯದಿಂದಲೂ ಸ್ಯಾಂಡಿ ಮೇಲೆ ಪ್ರೀತಿ, ಈ 

 ಏಳು ಬೀಳಿನ ಪ್ರೇಮ ಕಥೆಯಲ್ಲಿ ಸಾಂಡಿಗೆ ಕಾವ್ಯ ಸಿಗುವಳೆ ?  ಅಥವಾ ರಶ್ಮಿಗೆ ಸ್ಯಾಂಡಿ ಸಿಗುವನೆ  ಎಂಬುದನ್ನು ಕಾದಂಬರಿಯ ಓದಿಯೇ ಸವಿಯಬೇಕು .


ಕಾದಂಬರಿಯಲ್ಲಿ ಅಲ್ಲಲ್ಲಿ ಬರುವ ಕೆಲ ಸಾಲುಗಳು ನಮ್ಮನ್ನು ಚಿಂತನೆಗೆ ಹಚ್ಚುವ ಗುಣ ಹೊಂದಿವೆ ,ಅದು ಒತ್ತಡ ನಿವಾರಿಸಲು, ಯೋಗ ಧ್ಯಾನ, ಪ್ರಾಣಾಯಾಮ ಮಾಡಬೇಕು ಎಂಬ ಸಾಲುಗಳಿರಬಹುದು, 

ಶಿಕ್ಷಕರು ಮಕ್ಕಳಿಗೆ ಬೋಧಿಸುವಾಗ ಮೊದಲು ಅವರು ವಿದ್ಯಾರ್ಥಿಗಳಂತೆ ಸದಾ ಕಲಿಯುತ್ತಿರಬೇಕು, ಎಂಬ ಮಾತುಗಳಿರಬಹು. 


ಕಾದಂಬರಿಯಲ್ಲಿ ನಮ್ಮನ್ನು ಇಟಲಿಗೆ ಕರೆದುಕೊಂಡು ಹೋಗುವ ಕಾದಂಬರಿಕಾರರು ಅಲ್ಲಿನ ನಗರಗಳ ಸೌಂದರ್ಯ, ಕಲೆ ವಾಸ್ತುಶಿಲ್ಪ, ಮ್ಯೂಸಿಯಂ ಗಳು, ವಿಶ್ವ ವಿದ್ಯಾಲಯ ಗಳ ಬಗ್ಗೆ ಕಣ್ಣಿಗೆ ಕಟ್ಟುವಂತೆ ‌ಚಿತ್ರಣ ನೀಡಿರುವರು.


ಕಾದಂಬರಿಯು ಮೊದಲು ಆಂಗ್ಲದಲ್ಲಿ ನಂತರ ಕನ್ನಡದಲ್ಲಿ ಬರೆದಿರುವುದರಿಂದ ಕೆಲವೆಡೆ ಕನ್ನಡ ಸಾಲುಗಳ ನಿರಂತರತೆಯ ಕೊರತೆಯಾದಂತೆ ಕಂಡು ‌ಬಂತು ,ಉಳಿದಂತೆ ಕಾದಂಬರಿಯು ಓದಿಸಿಕೊಂಡು  ಹೋಗುತ್ತದೆ ,  ಕಾದಂಬರಿಯ ಕೊನೆಯ ಪ್ಯಾರಾವನ್ನು  ಓದುವಾಗ ಅನಿರೀಕ್ಷಿತವಾದ ಮುಕ್ತಾಯದೊಂದಿಗೆ  ಒಂದು ಉತ್ಕೃಷ್ಟ ಕನ್ನಡ ಕಾದಂಬರಿ ಓದಿದ ತೃಪ್ತಿ ನಮ್ಮದಾಗಲಿದೆ ನೀವೂ ಒಮ್ಮೆ ಓದಿ ...


ಕಾದಂಬರಿ: ಪ್ರತ್ಯಾಹಾರ


ಕಾದಂಬರಿ ಕಾರರು: ವಿದ್ಯಾಧರ ದುರ್ಗೇಕರ್


ಪ್ರಕಾಶನ : H S R A ಪ್ರಕಾಶನ ಬೆಂಗಳೂರು


ಬೆಲೆ: 200₹ 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು