ಛಲಬಿಡದ ತ್ರಿವಿಕ್ರಮ ಶ್ರೀ ನಾರಾಯಣ ಮೂರ್ತಿ ರವರು. ಲೇಖನ
"ಮನಸ್ಸಿದ್ದಲ್ಲಿ ಮಾರ್ಗ" , "ಕಾಯಕವೇ ಕೈಲಾಸ " ಎಂಬ ತತ್ತ್ವದಲ್ಲಿ ನಂಬಿಕೆ ಇಟ್ಟು ಕೆಲಸ ಮಾಡಿದರೆ ಸಾಮಾನ್ಯನೂ ಅಸಮಾನ್ಯ ಆಗುವನೆಂದು ಹಲವಾರು ಮಹಾತ್ಮರು ಸಾಧಿಸಿ ತೊರಿಸಿರುವರು. ಅಂತಹ ಸಾಧಕರ ಪಟ್ಟಿಯಲ್ಲಿ ಕಾಣಸಿಗುವ ಹೆಮ್ಮೆಯ ಕನ್ನಡಿಗರೇ ನಮ್ಮ ನಾರಾಯಣ ಮೂರ್ತಿ ರವರು.
ತಮ್ಮ ಬುದ್ದಿ ಮತ್ತು ಶ್ರಮದಿಂದ ಒಂದು ಚಿಕ್ಕ ಕಾರ್ ಶೆಡ್ ನಲ್ಲಿ ಆರಂಭವಾದ ಐಟಿ ಕಂಪನಿಯು ಇಂದು ಪ್ರಪಂಚದ ಟಾಪ್ ಟೆನ್ ಕಂಪನಿಗಳಲ್ಲಿ ಒಂದಾಗಿ ಬೆಳೆದಿರುವುದು ಭಾರತೀಯರಾದ ನಾವೆಲ್ಲರೂ ಹೆಮ್ಮೆ ಪಡುವ ಸಂಗತಿಯಾಗಿದೆ. ಇದಕ್ಕೆ ಅವರ ಧರ್ಮ ಪತ್ನಿ ಸುಧಾ ಮೂರ್ತಿ ರವರ ಸಹಕಾರ, ಪ್ರೋತ್ಸಾಹ, ಮತ್ತು ತ್ಯಾಗ ವನ್ನು ಸ್ಮರಿಸಲೇಬೇಕು,
ಬೆಂಗಳೂರು ನಗರದಲ್ಲಿ ಕೇಂದ್ರೀಕೃತವಾದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಅತಿ ದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದ್ದು, ೧,೪೫,೦೦೦ ಕ್ಕೂ ಹೆಚ್ಚು ಕೆಲಸಗಾರರನ್ನು ಹೊಂದಿದೆ. ಭಾರತದಲ್ಲಿ ಒಂಬತ್ತು ತಂತ್ರಾಂಶ ಅಭಿವೃದ್ಧಿ ಕೇಂದ್ರ ಮತ್ತು ಪ್ರಪಂಚದಾದ್ಯಂತ ೨೯ ಕಛೇರಿಗಳನ್ನು ಭಾರತ, ಯುಸ್ಎ, ಚೀನಾ, ಆಸ್ಟ್ರೇಲಿಯಾ, ಯುಕೆ, ಕೆನಡ, ಜಪಾನ್ ಹಾಗೂ ಇನ್ನಿತರೆ ರಾಷ್ಟ್ರಗಳಲ್ಲಿದೆ. ಇನ್ಫೋಸಿಸ್ವು ೩೦ಕ್ಕೂ ಹೆಚ್ಚು ದೇಶದ ಕಂಪನಿಗಳಿಗೆ ವಾಣಿಜ್ಯ ವ್ಯವಹಾರ, ತಾಂತ್ರಿಕ, ಯಾಂತ್ರಿಕ, ಔಟ್ ಸೋರ್ಸ್ ಸೇವೆಗಳನ್ನು ಒದಗಿಸುತ್ತಿದೆ.
ಅಮೇರಿಕಾದ ಪ್ರತಿಷ್ಠಿತ ನಾಸ್ಡಾಕ್ ( ನಮ್ಮಲ್ಲಿ ಬಾಂಬೆ ಶೇರು ಮಾರುಕಟ್ಟೆಯ ತರಹ) ನಲ್ಲಿ ಲಿಸ್ಟ್ ಆದ ಮೊದಲ ಭಾರತೀಯ ಕಂಪನಿ ಎಂದರೆ ನಿಮಗೆ ಅರ್ಥವಾಗಬೇಕು ನಾರಾಯಣಮೂರ್ತಿ ರವರು ತಮ್ಮ ಕಂಪನಿಯನ್ನು ಬೆಳೆಸಿದ ಪರಿಯನ್ನು.
ಈಗಲೂ ಲಕ್ಷಗಟ್ಟಲೆ ಉದ್ಯೋಗಿಗಳು ಇನ್ಪೋಸಿಸ್ ಕಂಪನಿಯಿಂದ ಉದ್ಯೋಗ ಪಡೆದು ಜೀವನ ಮಾಡುತ್ತಿದ್ದಾರೆ, ಆ ಕಂಪನಿಯ ಶೇರುಗಳನ್ನು ಕೊಂಡ ಸಾವಿರಾರು ಮಂದಿ ಕೋಟ್ಯಾದಿಶರಾಗಿರುವರು.
ಸಿ ಎಸ್ ಆರ್ ಅಡಿಯಲ್ಲಿ ಕೋಟಿಗಟ್ಟಲೆ ಹಣವನ್ನು ನಾರಾಯಣ ಮೂರ್ತಿ ರವರು, ಮತ್ತು ತಮ್ಮ ಧರ್ಮ ಪತ್ನಿ ಸುಧಾ ಮೂರ್ತಿ ರವರು ಸಮಾಜಮುಖಿ ಕೆಲಸಗಳಿಗೆ ಮುಡಿಪಾಗಿಟ್ಟಿರುವುದು ಶ್ಲಾಘನೀಯ ಕಾರ್ಯ.
೧೯೯೬ರಲ್ಲಿ ಇನ್ಫೊಸಿಸ್ ಫೌಂಡೇಶನ್ ಸ್ಥಾಪಿಸಿ, ಆರೊಗ್ಯ, ಶಿಕ್ಷಣ, ಸಾಮಾಜಿಕ, ಕಲೆ, ಸಂಸ್ಕೃತಿ ಮತ್ತು ಹಳ್ಳಿಗಳ ಅಭಿವೃಧ್ಧಿ ಯೋಜನೆಗಳನ್ನು ಹಾಕಿಕೊಂಡಿದೆ. ಅಂದಿನಿಂದ ಈ ಪ್ರತಿಷ್ಠಾನವು, ತನ್ನ ಕಾರ್ಯಗಳನ್ನು ಕರ್ನಾಟಕ ಮುಖ್ಯಕೇಂದ್ರದಿಂದ ಭಾರತದ ಇತರೆ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಕೇರಳ, ಒರಿಸ್ಸ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಸಮಾಜದ ಅಭಿವೃದ್ಧಿಯ ಕಾರ್ಯಗಳನ್ನು ಕೈಗೊಳ್ಳುತ್ತಿದೆ.
ಕಂಪನಿಯನ್ನು ಆರಂಭಮಾಡಲು ಹಣಕಾಸಿನ ಕೊರತೆ ಬಿದ್ದಾಗ ಹೆಂಡತಿಯ ಒಡವೆಗಳನ್ನು ಒತ್ತೆ ಇಟ್ಟು ಹಣ ಹೊಂದಿಸಿ ಛಲಬಿಡದ ತ್ರಿವಿಕ್ರಮನಂತೆ ಕಂಪನಿಯನ್ನು ಕಟ್ಟಿ ಬೆಳೆಸಿ ತೋರಿಸಿದವರು ನಮ್ಮ ನಾರಾಯಣ ಮೂರ್ತಿ ರವರು.
ಇಂದಿನ ಯುವ ಉದ್ದಿಮೆದಾರರಿಗೆ ಇಂತಹ ಕಷ್ಟದ ಪರಿಸ್ಥಿತಿಗಳಿಲ್ಲ, ಸರ್ಕಾರಗಳು ಸ್ಟಾರ್ಟ್ ಅಪ್, ಮೇಕ್ ಇನ್ ಇಂಡಿಯಾ, ಮುದ್ರಾ, ಸ್ಕಿಲ್ ಇಂಡಿಯಾ, ಮುಂತಾದ ಯೋಜನೆಗಳನ್ನು ಜಾರಿಗೆ ತಂದಿವೆ ,ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ನಾರಾಯಣ ಮೂರ್ತಿ ರವರನ್ನು ರೋಲ್ ಮಾಡಲ್ ಆಗಿ ಸ್ವೀಕಾರ ಮಾಡಿ ವಿವಿಧ ರಂಗಗಳಲ್ಲಿ ಕಂಪನಿಗಳನ್ನು ಸ್ಥಾಪಿಸಿದರೆ ,ನಮ್ಮ ದೇಶದಲ್ಲಿ ಯುವ ಉದ್ದಿಮೆದಾರರು ಹೆಚ್ಚಾದರೆ, ಇನ್ಫೋಸಿಸ್ ನಂತಹ ನೂರಾರು ಕಂಪನಿಗಳು ದೇಶದಲ್ಲಿ ತಲೆ ಎತ್ತಿ ,ಉದ್ಯೋಗ, ಆರ್ಥಿಕ ಕ್ಷೇತ್ರದಲ್ಲಿ ನಮ್ಮ ದೇಶವು ಇನ್ನೂ ಪ್ರಗತಿ ಹೊಂದುವುದರಲ್ಲಿ ಸಂಶಯವಿಲ್ಲ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment