30 September 2017

ಆತ್ಮೀಯ ಸ್ನೇಹಿತ (ಕವನ ನನ್ನಣ್ಣನ ಕುರಿತು)

               *ಆತ್ಮೀಯ ಸ್ನೇಹಿತ*

ಸರಳ ಸಜ್ಜನ ಜೀವಿ ನನ್ನಣ್ಣ
ತಾಳ್ಮೆಗೆ ಸಹಕಾರಕೆ ಹಿರಿಯಣ್ಣ
ನಮ್ಮ ಕುಟುಂಬದ ಕಣ್ಣು ಇವನು
ನಮಗೆಲ್ಲರಿಗಾಗಿ ಜೀವಿಸುವನು /

ಕಾಯಕ ಇವನದು ಹೆಮ್ಮೆಯ ಕೃಷಿ
ನಾಯಕ ಇವನು ಹಂಚಲು ಖುಷಿ
ಚಳಿ ಮಳೆ ಲೆಕ್ಕಿಸದೇ ದುಡಿವನು
ಕಷ್ಟ ಸುಖ ಒಂದೆ ಎಂದು ಹೇಳುವನು/


ಮನೆಯವರಿಗೆ ಮೆಚ್ಚಿನ ಯಜಮಾನ
ಊರಿಗೆ ಸಹಾಯ ಇವನ ಜಾಯಮಾನ
ನನಗೆ ಯಾವಾಗಲೂ ಆತ್ಮೀಯ ಸ್ನೇಹಿತ
ಕೋರುವನು ಯಾವಾಗಲೂ  ನನ್ನ ಹಿತ /

*ಸಿ .ಜಿ .ವೆಂಕಟೇಶ್ವರ*.
*ಗೌರಿಬಿದನೂರು*

29 September 2017

ನಮ್ಮನೆಯ ಪರಿಮಳ (ಕವನ)

               *ನಮ್ಮನೆಯ ಪರಿಮಳ*

ಇವಳೆ ನನ್ನ ಮುದ್ದಿನ ಹೆಂಡತಿ
ಕೆಲವೊಮ್ಮೆ ಮಾಡುವಳು ಅತಿ
ಒಲವಿನಲಿ ತಿದ್ದುವಳು ಮಕ್ಕಳ
ಇವಳೇ ನಮ್ಮನೆಯ ಪರಿಮಳ

ಮನೆಕೆಲಸವನೆಲ್ಲಾ ಮಾಡುವಳು
ಆದರೆ  ಇವಳು ಕೆಲಸದ ಆಳಲ್ಲ
ಸವಿಮಾತನಾಡಿ ಸೀರೆ ಕೇಳುವಳು
ಆದರೆ ಬೇಡುವ ಬಿಕ್ಷುಕಿಯಲ್ಲ ಇವಳು

ಬಂಗಾರದ ಮೇಲೆ ಬಲು ವ್ಯಾಮೋಹ
ಸಿಂಗಾರಗೊಂಡಾಗ ಇವಳೇ ಆಹಾ
ತಾಯಿಯಾದಳು ನನ್ನೆರಡು ಲಕ್ಷ್ಮಿಗಳಿಗೆ
ಬಿಟ್ಟಿರಲಾರೆ ನಾ    ನಿನ್ನ ಅರೆಘಳಿಗೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕನ್ನಡ ಸಾಹಿತ್ಯ ಪರಿಷತ್ತು ಗೌರಿಬಿದನೂರು ಘಟಕ ಆತ್ಮೀಯವಾಗಿ ಸನ್ಮಾನಿಸಿದ ಕ್ಷಣ (ಕೃಪೆ ಪ್ರಜಾವಾಣಿ)

28 September 2017

ಶ್ರೀ ದೇವಿ ಕವನದ ಸ್ವ ವಿಮರ್ಶೆ.

        *ಶ್ರೀದೇವಿ**(ಅಮ್ಮ)

ನನ್ನ ಗೀತೆಯ ವಿಮರ್ಶೆ

*ನೀ ನನ್ನ ಪಾಲಿನ ದೈವ*
*ತ್ಯಾಗಮಯಿ ಜೀವಿ ನನ್ನವ್ವ*

ಎಲ್ಲರಿಗೂ ಇರುವಂತೆ ನನಗೂ ನನ್ನವ್ಚ ದೇವರೇ ಆದರೆ ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡ ನನ್ನ ತಾಯಿ ತನ್ನ ಜೀವನವನ್ನು ನನಗಾಗಿ ತ್ಯಾಗಮಾಡಿರುವುದ ಮರೆಯಲಾರೆ.

*ಹಾರೈಕೆಯಲಿ ಬತ್ತದ ಒರತೆ
ನೀಗಿಸಿದೆ ಅಪ್ಪನ ಕೊರತೆ
ತಾಳ್ಮೆಯಲಿ ನಿಜದಿ ಭೂಮಾತೆ
ಒಳ್ಳೆ  ಗುಣಗಳ ನಿನ್ನಿಂದ ಕಲಿತೆ*

ನಾನು ಹದಿನೈದು ವರ್ಷದ ಹುಡುಗನಾದರೂ ನನಗೆ ಅನಾರೋಗ್ಯ ಕಾಡಿದಾದ ಕಂಕುಳಲ್ಲಿ ಎತ್ತಿಕೊಂಡು ಆಸ್ಪತ್ರೆಗೆ ಕೊಂಡೊಯ್ದು ನನ್ನ ಅಮ್ಮನವರ ಹಾರೈಕೆ ಹೇಗೆ ಮರೆಯಲಿ?
ನನಗೆ ಮೂರು ವರ್ಷದ ಪ್ರಾಯವಿದ್ದಾಗ ನನ್ನ ತಂದೆ ಕಾಲವಾದಾಗ ಆಕೊರತೆ ಕಾಣದಂತೆ ಅಪ್ಪನಾಗಿ ನನ್ನ ಸಲಹಿದ ಮಹಾ ಮಾತೆ ನನ್ನ ತಾಯಿ.
ಸಹಾಯ ಕರುಣೆ ಮುಂತಾದ ಸದ್ಗುಣಗಳ ಗಣಿ ನನ್ನವ್ವ ನಾನು ಕೆಲ ಗುಣಗಳನ್ನು ಬಳುವಳಿ ಪಡೆದಿರುವೆ

*ಮಾಡಿದೆ ಕೂಲಿನಾಲಿಯ ಜೀವನ
ದುಡಿದೆ ಹಗಲಿರುಳು ಕ್ಷಣ ಕ್ಷಣ
ನೀ ಹೊಸ ಬಟ್ಟೆ ಉಡಲಿಲ್ಲ
ನನಗುಡಿಸುವುದ ಮರೆಯಲಿಲ್ಲ*

ನನ್ನ ತಾಯಿ ಜೀವನ ಮಾಡಲು ನಮ್ಮ ಬೆಳೆಸಲು ಕೂಲಿ ಮಾಡಿದರು ಅವರಿಗೆ ಬಟ್ಟೆ ಇಲ್ಲದಿದ್ದರೂ ನಮಗೆ ಹೊಸ ಬಟ್ಟೆ ತೊಡಿಸಿ ಸಂಭ್ರಮಿಸುತ್ತಿದ್ದರು .

*ನಾನು ಹೆಸರಿಗಷ್ಟೇ ಅಕ್ಷರಸ್ಥ
ನೀ ಜೀವನ ಪಾಸಾದ ಅನಕ್ಷರಸ್ಥೆ
ಹೆತ್ತು ಹೊತ್ತು ಸಲಹಿದೆ ನನ್ನ
ಹೇಗೆ ತೀರಿಸಲಿ ನಿನ್ನ ಋಣವನ್ನ*

ನಮ್ಮಮ್ಮ ಓದು ಬರಹ ಬರದ ಅನಕ್ಷರಸ್ಥೆ ಆದರೂ ಜೀವನದ ವಿಶ್ವವಿದ್ಯಾಲಯದಲ್ಲಿ ನೀನು ಡಾಕ್ಟರೇಟ್ .ನಿನ್ನ ಋಣ ತೀರಿಸಲು ನನ್ನಿಂದಾಗದು .

**ಬಾಳಿ ತೋರಿಸಿದೆ ಸರೀಕರೊಡನೆ
ತಗ್ಗಿ  ಬಗ್ಗಿ ನಡೆದೆ ಹಿರೀಕರೊಡನೆ
ನನಗೆ ನೀಡಿದೆ ಜೀವನದ ಸವಿ
ನೀನೇ ನನ್ನ ಪಾಲಿನ ಶ್ರೀ ದೇವಿ*

ನಮ್ಮ ಊರಿನ ನಮ್ಮವರ ಕೊಂಕಿನ ನಡುವೆ ಬದುಕಿ ತೋರಿಸಿದೆ ನಮ್ಮಮ್ಮ ನಮಗೆ ಕಷ್ಟದ ಅನುಭವ ನೀಡದೆ ಬರೀ ಸುಖ ನೀಡಿದರು
ನಮ್ಮಮ್ಮನ ಹೆಸರೇ**ಶ್ರೀದೇವಮ್ಮ** ನನ್ನ ಪಾಲಿನ ದೇವಿ ನನ್ನ ಅಮ್ಮನಿದ್ದರೆ ಆನೆ ಬಲವಲ್ಲ ಇನ್ನೂ ಹೆಚ್ಚು ಬಲ.ಈಗ  ನನ್ನ ಅಮ್ಮ ನನ್ನೊಂದಿಗೆ ಇದ್ದಾರೆ ಎನ್ನುವುದು ಹೆಮ್ಮೆ.

ಶ್ರೀ ದೇವಿ (ಕವನ)

                *ಶ್ರೀ ದೇವಿ*

ನೀ ನನ್ನ ಪಾಲಿನ   ದೈವ
ತ್ಯಾಗಮಯಿ  ಜೀವಿ ನಮ್ಮವ್ವ

ಹಾರೈಕೆಯಲಿ ಬತ್ತದ ಒರತೆ
ನೀಗಿಸಿದೆ ಅಪ್ಪನ ಕೊರತೆ
ತಾಳ್ಮೆಯಲಿ ನಿಜದಿ ಭೂಮಾತೆ
ಒಳ್ಳೆ  ಗುಣಗಳ ನಿನ್ನಿಂದ ಕಲಿತೆ  /

ಮಾಡಿದೆ ಕೂಲಿನಾಲಿಯ ಜೀವನ
ದುಡಿದೆ ಹಗಲಿರುಳು ಕ್ಷಣ ಕ್ಷಣ
ನೀ ಹೊಸ ಬಟ್ಟೆ ಉಡಲಿಲ್ಲ
ನನಗುಡಿಸುವುದ ಮರೆಯಲಿಲ್ಲ/

ನಾನು ಹೆಸರಿಗಷ್ಟೇ ಅಕ್ಷರಸ್ಥ
ನೀ ಜೀವನ ಪಾಸಾದ ಅನಕ್ಷರಸ್ಥೆ
ಹೆತ್ತು ಹೊತ್ತು ಸಲಹಿದೆ ನನ್ನ
ಹೇಗೆ ತೀರಿಸಲಿ ನಿನ್ನ ಋಣವನ್ನ./

ಬಾಳಿ ತೋರಿಸಿದೆ ಸರೀಕರೊಡನೆ
ತಗ್ಗಿ  ಬಗ್ಗಿ ನಡೆದೆ ಹಿರೀಕರೊಡನೆ
ನನಗೆ ನೀಡಿದೆ ಜೀವನದ ಸವಿ
ನೀನೇ ನನ್ನ ಪಾಲಿನ ಶ್ರೀ ದೇವಿ /

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

27 September 2017

ಪ್ರೀತಿಯ ಮಳೆ (ಕವನ)

                     ೧
             *ಪ್ರೀತಿಯ ಮಳೆ*

ನಲ್ಲೆ ನೀನಿರಲು‌ ಸ್ವರ್ಗ ನನಗೇಕೆ
ಎಲ್ಲೆಡೆ ಸುಖ ಸಂತೋಷದ ಕೇಕೆ

ಬಳಿ ಸಾರಿ ಬಂದಾಗ ಹಬ್ಬ
ನೀ ನನ್ನ ತಬ್ಬಲು ಅಬ್ಬಬ್ಬಾ
ಇರುಳಲಿ  ಬೆಳಕು ಬೇಕಿಲ್ಲ
ನಿನ್ನ ಕಣ್ಣ ಮಿಂಚು ಸಾಕಲ್ಲ

ಸವಿ ನಗುವೆ ನವಸುಮ
ಕಣ್ಣಂಚಲ್ಲೇ ಸಮಾಗಮ
ಮಾತುಗಳೆಲ್ಲಾ ಸವಿಬೆಲ್ಲ
ಸಾಟಿ ನಿನಗೆ ಬೇರಾರಿಲ್ಲ

ನಿನ್ನ  ಒಲವೆನಗೆ ಅಮಲು
ನನ್ನ ಮನವೀಗ  ನವಿಲು
ಸುರಿಸು ಪ್ರೀತಿಯ ಮಳೆ
ತಬ್ಬುವಂತೆ ಇಳೆಯ ಮಳೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

25 September 2017

ನಮಗೆ ತರವೆ?(ಕವನ)



                 *ನಮಗೆ ತರವೆ*

ಯಾರೇ ಸಿಗಲಿ ಕೇಳುವೆವು ಕ್ಷೇಮವೇ
ಈ ಪ್ರಶ್ನೆ ನಮಗೆ ತರವೆ?

ಕಾನನವ ನಾಶಮಾಡಿಹೆವು
 ಮರಗಳಹನನ ಮಾಡಿಹೆವು
 ಮಳೆಯಿಲ್ಲ ಬೆಳೆಯಿಲ್ಲ
ಕ್ಷೇಮದ ಮಾತಿಲ್ಲವೇ ಇಲ್ಲ /

ನಗರೀಕರಣ ಜಾಗತೀಕರಣ
ನಮ್ಮ ಸಂಸ್ಕೃತಿಗಳ ಹರಣ
ಮೌಲ್ಯಗಳಿಗೆ ಬೆಲೆಯಿಲ್ಲ
ಅನೀತಿಗಳಿಗೆ ಎಣೆಯಿಲ್ಲ /

ಅವ್ಯಾಹತವಾಗಿದೆ ಅನಾಚಾರ
ನಿರಂತರವಾಗಿ ನಡೆದಿವೆ ಅತ್ಯಾಚಾರ
ಆಧುನಿಕ ಅಮಾನವೀಯ ಲೋಕದಲಿ
ಎಲ್ಲಿ ಹುಡುಕಲಿ ನೆಮ್ಮದಿ ಈ ನರಕದಲಿ /

ಮತಧರ್ಮದ ನಡುವೆ ಕಚ್ಚಾಟ
ನಿಂತಿಲ್ಲ ಅಶಾಂತಿಯ ಹುಚ್ಚಾಟ
ತಿಳಿದಿಲ್ಲ  ಮಾನವೀಯ ಮೌಲ್ಯ
ಉಳಿಸು ಈ ಜಗ ಅಮೂಲ್ಯ /

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

Honour by lions club

24 September 2017

*ಸನ್ಮಾನ ಸ್ವೀಕರಿಸಿದ ಕ್ಷಣಗಳು* ಲಯನ್ಸ್ ಕ್ಲಬ್ ಹಾಗೂ ಲಯೆನೆಸ್ ಕ್ಲಬ್ ವತಿಯಿಂದ Teachers, Docters, and Engineer's Day ಪ್ರಯುಕ್ತ ಆತ್ಮೀಯ ಸನ್ಮಾನ ಸ್ವೀಕಾರ . ಲಯನ್ಸ್ ಗೌರಿಬಿದನೂರು ಅಧ್ಯಕ್ಷರಾದ ಶ್ರೀ ಅಶ್ವತ್ಥ್ ರೆಡ್ಡಿ ಸರ್ .ಕಾರ್ಯದರ್ಶಿ ಆದ M.G.S Sir ಲಯೆನೆಸ್ ಅದ್ಯಕ್ಷೆಯಾದ ಅಂಬಿಕಾ ಮೇಡಂ.ಲಯೆನ್ ಸುವರ್ಣಮ್ಮ ಮೇಡಂ ಮತ್ತು ಎಲ್ಲಾ ಲಯನ್ಸ್ ಮತ್ತು ಲಯೆನೆಸ್ ಪದಾಧಿಕಾರಿಗಳಿಗೆ ಹೃತ್ಪೂರ್ವಕ ವಂದನೆಗಳು ಸಮಾರಂಭದಲ್ಲಿ ಹಾಜರಿದ್ದ ನನ್ನ ಸಹೋದ್ಯೋಗಿಗಳಾದ E.S. .M.G.M. Y.S.R. ಹಾಗೂ N.M ಇವರಿಗೂ ವಂದನೆಗಳು

https://m.facebook.com/story.php?story_fbid=1369023239862583&id=100002647591222

ಎಂದು ಬರುವೆ ?(ಕವನ)

             
             *ಎಂದು ಬರುವೆ?*

ಓ ಮೇಘ ರಾಜ ಬಾ ಧರೆಗೆ
ಈ ಇಳೆಯನೊಮ್ಮೆ ತಣಿಸು
ಜೀವಿಗಳಿಗೆ ಜಲವನುಣಿಸು
ಭುವಿ ಚೆಲ್ಲಲಿ ಹೂ ನಗೆ

ಬೆಳೆಗಳು ನೀರಿಲ್ಲದೆ   ಒಣಗುತಿವೆ
ಕಳೆ ಇಲ್ಲದೆ ಜೀವಿಗಳು  ನಲುಗುತಿವೆ
ಜಗದ ಕೊಳೆ ತೊಳೆಯಲು ನೀ ಬೇಕು
ಖಗಮೃಗಗಳು ಹೇಗೆ ಬದುಕಬೇಕು?

ಬರೀ ಮೋಡ ನೋಡಿ ಸಾಕಾಯಿತು
ಸರಿಯಾದ ಮಳೆ ಬರದಾಯಿತು
ವಸುಂಧರೆಗೆ ತಂಪನೆಂದು ತರುವೆ ?
ಕಾಯುತಿರುವೆ ನಿನ್ನ ಎಂದು ಬರುವೆ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕೊಡೆ (ಹನಿಗವನ) ರಾಜ್ಯ ಮಟ್ಟದ ಆನ್ಲೈನ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಹನಿ

          *ಕೊಡೆ*

ದೊಡ್ಡವರಾದರೆ ನೀಕೊಡೆ
ನಾ ಬಿಡೆ
ಮಕ್ಕಳಾದ ನಮಗೆ
ಒಂದೇ ಕೊಡೆ

          *ನಮ್ಮ ನಡೆ*

ನಮ್ಮಿಬ್ಬರಿಗೂ ಒಂದೇ ಕೊಡೆ
ಸರಿಯುವುದಿಲ್ಲ ನಾವು
ಆಕಡೆ ಈ ಕಡೆ
ಎಲ್ಲರಿಗೆ ಮಾದರಿ
ನಮ್ಮ ಈ ನಡೆ

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

22 September 2017

ಕಾಪಾಡು ತಾಯೆ (ಕವನ)


               *ಕಾಪಾಡು ತಾಯೆ*

ಮಹಿಷನ ಮರ್ಧಿಸಿದ ತಾಯೆ
ನಮ್ಮನೆಲ್ಲಾ ಅನವರತ ಕಾಯೆ .

ತ್ರಿಮೂರ್ತಿಗಳ ಹೆತ್ತವಳೆ
ನಮ್ಮನೆಲ್ಲ ಹೊತ್ತವಳೆ
ಚಿಕ್ಷುರ ಬಿಡಾಲರ ವಧಿಸಿದೆ ನೀನು
ಅಷ್ಟ ದಿಕ್ಪಾಲಕರ ಪೊರೆದೆ ನೀನು .

ಶುಂಭ ನಿಶುಂಭರ ಶಿರವ ತರಿದೆ
ದುರುಳ ದೈತ್ಯರ ಸೊಕ್ಕನಡಗಿಸಿದೆ
ಚಂಡ ಮುಂಡರ ಸಂಹಾರ  ಮಾಡಿದೆ
ಚಂಡಿ ಚಾಮುಂಡಿ ನಾಮ ಪಡೆದೆ .

ಕೂಳ ಮಧು ಕೈಟಬರ ಸಂಹರಿಸಿದೆ
ಕಾಳಿಕೆಯ ನಾಮದಿ ರಾರಾಜಿಸಿದೆ
ರಕ್ತ ಬೀಜನ ರಕ್ತವ ಕುಡಿದೆ
ಅಸುರರಿಂದ ಲೋಕವ ರಕ್ಷಿಸಿದೆ.

ನಿನ್ನ ದಯೆಯಿಲ್ಲದ ಜೀವನ ಬಿರುಗಾಳಿ
ನೀ ಹರಸಿದರೆ ನಮ್ಮ ಬಾಳು ತಂಗಾಳಿ
ಇಹಬಂಧನದಲಿ ಸಿಲುಕಿರುವೆವು ನಾವು
ಕಾಪಾಡು ಮರೆಸುತ ನಮ್ಮ ನೋವು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು.*

ಜನನಾಯಕರು (ಕವನ)


                    *ಜನನಾಯಕರು*

ಏರಿದರೆ ಅಧಿಕಾರದ ಅಮಲು
ಕಾಣುವುದಿಲ್ಲ ನಿಮಗೆ ಕಂಗಳು

ಒಡೆದು ಆಳದಿರಿ‌ ನಮ್ಮನ್ನು
ಮರೆಯದಿರಿ ನಮ್ಮ ಗೋಳನ್ನು
ಓಡದಿರಿ ನಮ್ಮಿಂದ ದೂರ
ನೀಡಿ ನಮ್ಮ ಸಮಸ್ಯೆಗಳಿಗೆ ಪರಿಹಾರ.

ದಲಿತರ ಏಳಿಗೆಗಾಗಿ ಪಣತೊಡಿ
ನೀವಾಗಿ ನಮ್ಮ ಒಡನಾಡಿ
ಗಮನವಿರಲಿ ನಿಮ್ಮ ಕಾರ್ಯ ಕ್ಷೇತ್ರ
ಮಾಡದಿರಿ ನಮ್ಮ ನಾಡ ಕುರುಕ್ಷೇತ್ರ

ನೀವಾಗಿ ನಮ್ಮ ಜನನಾಯಕರು
ನಮ್ಮ ಏಳ್ಗೆಯ ಸಹಾಯಕರು
ಇನ್ನಾದರೂ ಮಾಡಿ ನಮ್ಮ ಸೇವೆ
ಇಲ್ಲವಾದರೆ ನಮ್ಮ ಬಾಳೆಲ್ಲ ನೋವೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

21 September 2017

ಹಗಲಿರುಳು ಸಾಲದು( ಕವನ)



                  *ಹಗಲಿರುಳು ಸಾಲದು*

ನನ್ನವಳು  ಸೌಂದರ್ಯ ಲಾವಣ್ಯವತಿ
ನನ್ನದೆಯ ಅನುರೂಪ  ಸೌಭಾಗ್ಯವತಿ
ಉದಯಿಸುವ ಪೂರ್ಣ ಚಂದಿರನ ಬಣ್ಣ
ನನ್ನ ಲತಾಂಗಿಯ ಮೈಬಣ್ಣ

ಇವಳ ಹುಬ್ಬು ಮನ್ಮಥನ ಬಿಲ್ಲು
ಕಾಡುತ್ತಾಳೆ ಬಂದು ಕನಸಲ್ಲೂ
ಇವಳ ಕಣ್ಣು ಸುಂದರ ಮೀನು
ಕಾಯುತಿರುವೆನು ನಿನಗಾಗಿ ನಾನು

ಮೃಗರಾಜ ಸಿಂಹದಂತಹ ನಡುವು
ಸಮುದ್ರದ ತೆರೆ ನಿನ್ನ ಕೇಶವು
ದಾಳಿಂಬೆಫಲ ಇವಳ ದಂತಪಂಕ್ತಿಗಳು
ಇವಳ ವರ್ಣಿಸಲು ಸಾಲದು ಹಗಲಿರುಳು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

20 September 2017

ಮರ್ಕಟ (ಕವನ)

             
               *ಮರ್ಕಟ*

ಮನಸ್ಸೆಂಬ ಮರ್ಕಟ
ನಿಲ್ಲುತಿಲ್ಲ ಒಂದೆಡೆ ಅಕಟಕಟ
ಒಮ್ಮೆ ಓಡುವದು ಅತಿವೇಗ
ಮತ್ತೊಮ್ಮೆ ಕೇಳುವುದು  ಏನೀ ಆವೇಗ

ಒಂದು ಬಾರಿ ಹೇಳುವುದು ಸರಿ ನೀನು
ಮೂದಲಿಸುವುದು ಒಮ್ಮೆ ಸಾಚಾ ನೀನು?
ಚಂಚಲತೆಗೆ ನೀನೇ ಸರದಾರ
ಗೊಂದಲಗಳಿಗೆಲ್ಲಾ ನೀನೇ ಸೂತ್ರದಾರ

ಮಹಾನುಭಾವರಾದರೆ ಅಂಕುಶದಲ್ಲಿರುವೆ
ನನ್ನಂತಹವರಾದರೆ ಸವಾರಿ ಮಾಡುವೆ
ನಿನ್ನ ಮಹಾತ್ಮೆ ಒಂದಲ್ಲ ಎರಡಲ್ಲ
ನೀನೆಂದು ನಿಯಂತ್ರಣದಲ್ಲಿರುವೆ ತಿಳಿದಿಲ್ಲ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

19 September 2017

ಹಬ್ಬ ಮಾಡೋಣ (ಕವನ)

                  *ಹಬ್ಬ ಮಾಡೋಣ*

ಸರಿದು ಹೋಗುವ ಮುನ್ನ
ಯೌವನದ ಸವಿಯನ್ನ
ಸವಿವ ಬಾರೆ ಒಲವನ್ನ
ಕೂಡುವಾಸೆ ಇಂದು ನಾ ನಿನ್ನ .

ವಿರಸದ ಮಾತುಇಂದೇಕೆ?
ಸರಸಕೆ ಹಿಂದೇಟು ಏಕೆ?
ಸರಸರನೆ ಬಳಿ ಸಾರಿ
ಬಾರೆ ನನ್ನ ಸುಂದರಿ .

ಸರಿಸು ನಿನ್ನ ಲಜ್ಜೆಯನು
ಸುರಿಸು ಮುತ್ತಿನ ಮಳೆಯನು
ಬರಿ ಮಾತು ಬೇಕಿಲ್ಲ
ಸಾರಿ ಬಳಿ ಬಾರೆ ಹಬ್ಬ ಮಾಡೋಣ .

ಅತಿಕೋಪ ಬೇಕಿಲ್ಲ
ರತಿ ಮನ್ಮಥರಾಗೋಣ
ಮಿತಿಮೀರಿದ ನನ್ನ ಬಯಕೆಯ
ತಣಿಸಲು ಈಗಲೇ ಬಾರೆ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

17 September 2017

       
           ಚಿತ್ರ ಕವನ

*ಬಾ ಗೆಳೆಯ*

ಎಂದು ಬರುವೆ ಪ್ರಿಯಕರ
ಹಿಡಿಯಲು ನನ್ನ ಕರ

ಕಾದು ಕೂತಿಹೆ ಇಲ್ಲಿ
ಹಸಿವು ನಿದ್ರೆ ನನಗಿನ್ನೆಲ್ಲಿ
ದಾರಿಯನೆ ನೋಡುತಿಹೆ
ಆರಿಗೇಳದೇ ಸಾರಿ ಬಾ ಗೆಳೆಯ .

ಉಬ್ಬು ತಗ್ಗುಗಳ ದಾಟಿ
ಮಬ್ಬುಗತ್ತಲೆಗೆ ಮುನ್ನ
ತಬ್ಬಿ ಮುದ್ದಾಡಲು ನನ್ನ
ಒಬ್ಬಳೇ ಕಾದಿಹೆನು ಬಾ ಗೆಳೆಯ.

ದಾರಿ ಕಾದೆನು ನಾನು
ಯಾರ ಪರಿವೆಇಲ್ಲದೆ
ದೂರವಿರುವ ನೀ
ಬರುವೆ ಎಂದು  ಬಾ ಗೆಳೆಯ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
           
             ಹನಿಗವನ
            ದುಪ್ಪಟ್ಟು

ನನ್ನ ಹೆಜ್ಜೆಗೆ ಕಟ್ಟುವೆ ಗೆಜ್ಜೆ
ಮುಖದಲ್ಲಿದೆ ಲಜ್ಜೆ
ನನ್ನ ವದನಕೆ ಮರೆ ದುಪ್ಪಟ್ಟ
ನ‌ನ್ನವನು ಕಂಡರೆ ಸಂತೋಷ ದುಪ್ಪಟ್ಟು

ಸಿ‌.ಜಿ.ವೆಂಕಟೇಶ್ವರ
ಗೌರಿಬಿದನೂರು.

16 September 2017

ಕವನ "ಮನ್ನಿಸಿ ಬಾರೆ "

               ಮನ್ನಿಸಿ ಬಾರೆ


ಮುನಿಸು ಬಿಡು
ಮನ್ನಿಸಿ ಬಿಡು
ರಾಣಿ ನೀ ನನ್ನೆದೆಯ ಅರಮನೆಗೆ
ಬೋಣಿ ಮಾಡು ನನ್ನಧರಕೆ

ಮನ್ನಿಸಿಬಿಡು ನನ್ನ
ಇನ್ನು ನೋಯಿಸೆನು
ಚಿನ್ನದ ಮನಸೋಳೆ
ಬೆನ್ನು ತಿರುಗಿಸಬೇಡ ಬಾರೆ

ತಪ್ಪಾಗಿದೆ ನನ್ನಿಂದ ನನ್ನ
ಬೆಪ್ಪುತನವನು ಕ್ಷಮಿಸಿ
ಸಪ್ಪೆಯಾದ ನನ ಜೀವನದಿ
ಅಪ್ಪಿ ಮುದ್ದಾಡಲು ಬಾರೆ

ದೇವಾನುದೇವರು ತಪ್ಪೆಸಗಿಹರು
ನಾನಾವ ಲೆಕ್ಕ ಹುಲಮಾನವ
ಇನ್ನೆಂದು ನೋಯಿಸೆನು
ನನ್ನೊಂದಪರಾಧವ ಮನ್ನಿಸಿ ಬಾರೆ

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

15 September 2017

ಸಮಯ ಕುರಿತ ನನ್ನ ಕವನ *ಮನವಿ .*

                   * ಮನವಿ*

ಕಾಲವೇ ನಿಲ್ಲು ಓಡದಿರು
ನಿಂತಿಲ್ಲ ಅನ್ಯಾಯ ಬತ್ತಿಲ್ಲ ಕ್ರೌರ್ಯ
ಜಗದಿ ಶಾಂತಿ ನೆಲೆಸುವವರೆಗೆ
ಓಡದಿರು ನಿಲ್ಲು .

ಅರಿತಿಲ್ಲ ನಮ್ಮ ನಾವು
ಬೆರೆತಿಲ್ಲ ಪರಿಸರದಿ
ನಮಗರಿವು ಮೂಡಿ ಬೆರೆವವರೆಗೆ
ಓಡದಿರು ನಿಲ್ಲು.

ಬಂದಿಲ್ಲ ನಮ್ಮಲ್ಲಿ ಸಮಾನತೆ
ನಿಂತಿಲ್ಲ ದುರ್ಬಲರ ಶೋಷಣೆ
ಸರ್ವರಿಗೂ ಸಮಪಾಲು ಸಿಗುವವರೆಗೆ
ಓಡದಿರು ನಿಲ್ಲು

ದಯವಿಲ್ಲ ಪ್ರಾಣಿಗಳ ಮೇಲೆ
ಕಚ್ಚಾಡುತಿಹೆವು ಧರ್ಮದೆಸರಿನಲಿ
ದಯವೇ ಧರ್ಮದ ಮೂಲವಾಗುವವರೆಗೆ
ಓಡದಿರು ನಿಲ್ಲು.

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

14 September 2017

ಹುಟ್ಟಿದ ಹಬ್ಬಕ್ಕೆ ದೇವರ ಭಜನೆ,ಆತ್ಮಾನಂದ ಸಂಪಾದನೆ.

                 ಇತ್ತೀಚಿಗೆ ನನ್ನ ಸಹೋದ್ಯೋಗಿಯೊಬ್ಬರ ಮಗನ ಹುಟ್ಟು ಹಬ್ಬದ ಪ್ರಯುಕ್ತ ಅವರ ಆಹ್ವಾನದ ಮೇರೆಗೆ ಹುಟ್ಟು ಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡಿದ್ದೆ ಆ ಹುಟ್ಟು ಹಬ್ಬ ಒಂದು ರೀತಿಯಲ್ಲಿ ವಿಶೇಷವಾಗಿತ್ತು 
ಅಂದು ಸಂಜೆ ಭಜನೆ ತಂಡವನ್ನು ಕರೆಸಿ ದೇವರ ಭಜನೆ ಮಾಡಿಸಲಾಯಿತು ಹಿರಿಕಿರಿಯರೆನ್ನದೇ ಎಲ್ಲರೂ ಭಜನೆ ಮಾಡುತ್ತಾ ಭಾವಪರವಶರಾದ ಪ್ರಸಂಗ ಅವರ್ಣನೀಯ 
ಭಜನೆಯ ನಂತರ ಹುಟ್ಟು ಹಬ್ಬದ ಮಹತ್ವ ಕುರಿತು ಹಿರಿಯರಿಂದ ಆಶೀರ್ವದಿಸಿ ಅಕ್ಷತೆ ಹಾಕಿ ಎಲ್ಲರೂ ಹರಸಿ‌ ಆಯರಾರೋಗ್ಯ ನೀಡಲು ಹರಸಿದರು .ಜೊತೆಗೆ ಅಲ್ಲಿ ನೆರೆದ ಪ್ರತಿಯೊಬ್ಬರೂ ಸತ್ಸಂಗ ಮಾಡಿ ಕೆಲ ಕಾಲ ಆಧುನಿಕ ಜೀವನದ ಜಂಜಡದಿಂದ ದೂರಾಗಿ ,ಮೊಬೈಲ್ ,ವಾಟ್ಸಪ್, ಫೇಸ್ಬುಕ್, ಸೀರಿಯಲ್ ಗೊಡವೆ ಇಲ್ಲದೇ ಆತ್ಮಕ್ಕೆ ಆನಂದವನ್ನು ಹೊಂದಿದ ಧನ್ಯತಾ ಭಾವ ಉಂಟಾಗಿದ್ದು ಸುಳ್ಳಲ್ಲ 
ಪಾಶ್ಚಾತ್ಯರ ಸಂಸ್ಕೃತಿಯು ಮಾತ್ರ ಉತ್ತಮ ಭಾರತೀಯ ಸಂಸ್ಕೃತಿಯು ಕೀಳು ಎಂಬ ಪೂರ್ವ ನಿರ್ಧರಿತ ,ಪೂರ್ವಾಗ್ರಹ ಪೀಡಿತ ಮನಸುಗಳು ಬದಲಾಗಬೇಕಿದೆ 
ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ಸಹ ಮಕ್ಕಳ ಹುಟ್ಟು ಹಬ್ಬಗಳನ್ನು ಕೇಕ್ ಕತ್ತರಿಸಿ ಕ್ಯಾಂಡಲ್ ಆರಿಸಿ ಹುಟ್ಟಿದ ಹಬ್ಬಗಳನ್ನು ಆಚರಿಸುತ್ತಾರೆ ಇದರ ಪರಿಣಾಮ ಗಲ್ಲಿಗಳಿಗೊಂದು ಬೇಕರಿಗಳ ಉಗಮ ,ಇದು ಹೊಸ ವರ್ಷ, ವಾಲೆಂಟೇನ್ ಡೇ ಆ ಡೇ ,ಈ ಡೇ ಗಳ ಭರಾಟೆಗಳಿಗೆ ಮಿತಿಇಲ್ಲದೇ ಆಚರಿಸುತ್ತಾರೆ, ಆದರೆ ಅದಕ್ಕಿಂತಲೂ ಉನ್ನತವಾದ ದ್ಯೇಯ ಸಾಂಸ್ಕೃತಿಕ ಮೌಲ್ಯವಿರುವ ಆಚರಣೆಗೆ ಮುಂದಾಗದಿರುವುದು ಶೋಚನೀಯ ಸಂಗತಿ .ಅಂದರೆ ನಾನು ಪಾಶ್ಚಿಮಾತ್ಯ ಅಥವಾ ಬೇರೆ ಸಂಸ್ಕೃತಿಯ ವಿರೋಧಿ ಅಲ್ಲ ,ಸಾಂಸ್ಕೃತಿಕ ಬದಲಾವಣೆ, ಸಾಂಸ್ಕೃತೀಕರಣದ ಬೇಕು  ಆದರೆ ಆ ಭರಾಟೆಗಳಿಗೆ ನಮ್ಮ ಸಂಸ್ಕೃತಿಯ ಪತನವಾಗಬಾರದು.ನಮ್ಮ ಹಿರಿಯರು ಮಾಡಿರುವ ಕೆಲ ಉನ್ನತವಾದ ಆಚರಣೆಗಳಲ್ಲಿ ವೈಜ್ಞಾನಿಕ ತಳಹದಿಯ ಉನ್ನತ ಚಿಂತನೆಯ ಅನುಭವ ಇದೆ ಅವುಗಳನ್ನು ಉಳಿಸಿ ಬೆಳೆಸಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯಬೇಕಿದೆ.

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು.

12 September 2017

ವಿವೇಕಾನಂದರ ವಿವೇಕವಾಣಿ( ಕವನ )

ವಿವೇಕವಾಣಿ

ಓ ದೀರ ನರೇಂದ್ರ
ನೀನೆ ನಿಜ ದೇವೇಂದ್ರ

ದೀನರನು ಉದ್ದರಿಸಿ
ದಾನವನು ಬೆಳಗಿಸಿದೆ
ಆತ್ಮದರ್ಶನವ ಬೋಧಿಸಿದೆ
ಕರ್ಮ ಸಿದ್ಧಾಂತವ ದರ್ಶಿಸಿದೆ

ಶಕ್ತಿಯೇ ಜೀವನವೆಂದೆ
ನೆನಪಿಡುವೆವು ನಿಮ್ಮನೆಂದೆಂದೂ
ಎಲ್ಲಾ ಧರ್ಮದ ಸಾರ ನೀವು
ನಿಮ್ಮ ದಾರಿಯಲ್ಲೇ ನಡೆವೆವು ನಾವು


ಏಳಿ ಎದ್ದೇಳಿ‌‌ಎಂದು ಕರೆ ನೀಡಿದಿರಿ
ಎಲ್ಲರಾತ್ಮವ ಜಾಗೃತಗೊಳಿಸಿದಿರಿ
ನೆನೆದಾಗ  ವಿಶ್ವ ಧರ್ಮದ ಸಮ್ಮೇಳನ
ನಿಮ್ಮ ಅಗಾಧ ಜ್ಞಾನ ನಮಗೆ  ದರ್ಶನ

ಭಾರತಂಬೆಯ ಕೀರ್ತಿ ಪತಾಕೆ ಹಾರಿಸಿದಿರಿ
ಭಾರತ ತತ್ವ ದರ್ಶನ ಜಗಕೆ ತಿಳಿಸಿದಿರಿ
ನೀವು ಮಾರ್ಗದರ್ಶನದ  ವಿವೇಕವು
ನಮಗೆಲ್ಲರಿಗೆ  ಸದಾ  ಆನಂದವು

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

ಮಂತ್ರಿ ಮಂಡಲ ಹೇಗಿರಬೇಕು? (ಕೃಪೆ ವಿಜಯವಾಣಿ. ಕೆ.ಎಸ್ ನಾರಾಯಣಾಚಾರ್)

11 September 2017

ಚಿತ್ರ ಕವನ *ನಿರೀಕ್ಷೆ*



                    ಚಿತ್ರ ಕವನ


                     *ನಿರೀಕ್ಷೆ*



ಇನಿಯ ಬರುವನೆ ?
ನನ್ನ ಮನವನ ಅರಿವನೆ ?
ಕತ್ತಲಾದ ನನ್ನ ಮನಕೆ
ಹೂ ಬೆಳಕ ತರುವನೆ?


ದಾರಿಕಾದೆನು ಸಮಯ ನೋಡದೆ
ಬಾರೀ ನಿರೀಕ್ಷೆಯಿದೆ ಇನಿಯ ಬರುವನೆ?
ದಂತದ ಬೊಂಬೆಯ ಮೈಮಾಟ ನನ್ನ ಸೌಂದರ್ಯ ಸವಿಯುವನೆ?


ಏಸುದಿನ ಕಾದು ಬೇಸರಗೊಂಡಿಹೆ
ಬೀಸುವ ಗಾಳಿ ನೀ ಹೇಳು ಅವ ಬರುವನೇ?
ಗಡಿಯಾರದ ಮುಳ್ಳು ನಿಲ್ಲದೆ ಓಡುತಿದೆ
ಅಡಿಗಡಿಗೆ ಮನ ಕೇಳುತಿದೆ ನಲ್ಲ ಬರುವನೆ?


ಕತ್ತಲಿನ ಬಾಳಿನಲಿ ಮತ್ತೆ ಬಂದು
ನನ್ನ ಸುತ್ತ ಬೆಳಗು ಮೂಡಿಸುವನೆ?
ಆಲಿಂಗನದ ಸುಖವ ಬಯಸಿಹೆ
ಇಂದಾದರೂ ನನ್ನ ರನ್ನ ಬರುವನೆ


ಒಂಟಿ ಬಾಳಿದು ಸಾಕು
ನೆಂಟನವನಿರಬೇಕು
ನನ್ನ ನಂಟು ತಿಳಿದ
ಸುಂದರಾಂಗ ಬರುವನೆ?


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

10 September 2017

ಪೇಸ್ ಬುಕ್‌ ಮತ್ತು ವಾಟ್ಸಪ್ ಸದ್ಬಳಕೆ ಹೇಗೆ?

ಸಾಹಿತ್ಯ ಕೃಷಿಗೆ ಮಾಹಿತಿ ತಂತ್ರಜ್ಞಾನದ ಉಪೋತ್ಪನ್ನ (byproducts)ಗಳಾದ ಮುಖ ಪುಸ್ತಕ (Face Book) ಮತ್ತು ವಾಟ್ಸ್ ಆ್ಯಪ್ಗಳ ಸದ್ಭಳಕೆ ಆಗುತ್ತಿದೆಯೇ..?*
ಹಿಂದೆ ಸಾಹಿತ್ಯ ಎಂದರೆ ಕೇವಲ ಕೆಲವರ ಸ್ಸತ್ತು, ಕನ್ನಡ ಎಮ್. ಎ.ಮಾಡಿದವರು ಮಾತ್ರ ಸಾಹಿತ್ಯ ಕೃಷಿ ಮಾಡಬಹುದು ಎಂಬ ಕಲ್ಪನೆಗಳನ್ನು ಹೊಂದಿದವರು ಬಹಳವಿದ್ದರು.
ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಮಾಹಿತಿಯ ಸ್ಪೋಟದೊಂದಿಗೆ ಸಾಹಿತ್ಯದ ಎಲ್ಲಾ ಪ್ರಕಾರಗಳು ಎಲ್ಲರಿಗೂ ಸುಲಭವಾಗಿ ದೊರೆತದ್ದು ಸಾಹಿತ್ಯದ ಆಸಕ್ತಿ ಇರುವ ರಿಗೆ ವರದಾನವಾಯಿತು.
ಇದರ ಜೊತೆಗೆ ವಾಟ್ಸಪ್, ಪೇಸ್ಬಕ್,ಬ್ಲಾಗ್,ಹೈಕ್,ಟೆಲಿಗ್ರಾಮ್, ಮುಂತಾದವು ಉದಯೋನ್ಮುಖ ಸಾಹಿತಿಗಳಿಗೆ ವರದಾನವಾಗಿವೆ .
ಹಿಂದಿನ ಕಾಲದಲ್ಲಿ ಹೊಗೆಸೊಪ್ಪು ಇಲ್ಲದ ಮನೆಗಳು ಇರಲಿಲ್ಲ ‌ಈಗಿನ ಕಾಲದಲ್ಲಿ ವಾಟ್ಸಪ್ ಇಲ್ಲದ ಮನೆ ಇಲ್ಲ ಎಂದರೆ ಅತಿಷಯೋಕ್ತಿಯಲ್ಲ .
ಮೊದಲು ಕೇವಲ ಚಾಟ್ ಮಾಡಲು ಬಳಸುತ್ತಿದ್ದ ವಾಟ್ಸಪ್ ಕ್ರಮೇಣ ಸಮಾನ ಮನಸ್ಕ ಸಾಹಿತ್ಯ ಆಸಕ್ತ ಮನಸು ಗಳು ಒಂದೆಡೆ ಸೇರಿ ಸದ್ದಿಲ್ಲದೆ ಸಾಹಿತ್ಯ ಕೃಷಿಯಲ್ಲಿ ತೊಡಗಿರುವುದು ಆಶಾದಾಯಕ ಬೆಳವಣಿಗೆ.
ಕೆಲ ವಾಟ್ಸಪ್ ತಂಡಗಳು ಸಾಹಿತ್ಯ ಪ್ರಕಾರಗಳಾದ ಕಥೆ, ಕವನ,ಹನಿಗವನ ಚಿತ್ರ ಸಾಹಿತ್ಯ, ಮುಂತಾದ ಪ್ರಕಾರದ ಸಾಹಿತ್ಯ ರಚನೆ ಮತ್ತು ಪ್ರಕಾಶನ ಮಾಡುವ ಅಮೂಲ್ಯವಾದ ಕೆಲಸ ಮಾಡಿಕೊಂಡು ಬರುತ್ತಿವೆ.ಈ ನಿಟ್ಟಿನಲ್ಲಿ, ಹೆಸರಿಸಬಹುದಾದ ಕೆಲ ಗುಂಪುಗಳೆಂದರೆ," ಹನಿ.ಹನಿ.ಇಬ್ಬನಿ." "ವಿಶ್ವ ವಾಣಿ ಕವಿಬಳಗ. " ವಿಶ್ವವಾಣಿ ಕವಿ ಬಳಗದ ನೇತೃತ್ವ ವಹಿಕೊಂಡಿರುವ.ಶ್ರೀ ವಿಶ್ವೇಶ್ವರ ಭಟ್. ಜೆ.ಡಿ ಧನ್ನೂರ್ .ಪ್ರಕಾಶ್ ಮಳಗಿ.  ಅಂಬಿಗೇರ.ಇವರು ವಾಟ್ಸಪ್ ಕವಿಬಳಗದ ಕವಿಗಳ ಅತ್ಯುತ್ತಮ ಕವನಗಳನ್ನು ಒಳಗೊಂಡ116ಕವಿಗಳ ಭಾವದೀಪ್ತಿ, ಎಂಬ ಕವನ ಸಂಕಲನ ಹೊರತಂದಿದ್ದಾರೆ. ಜೊತೆಗೆ ಕನ್ನಡ ಸಾರಸ್ವತ ಲೋಕದ ಹೊಸ ಪ್ರಯೋಗವಾಗಿ ಎಲ್ಲಾ ಕವನಗಳನ್ನು ವಾಚನ ಮಾಡಿಸಿ ಸಿ.ಡಿ.ಹೊರತಂದಿದ್ದಾರೆ. ರಾಜ್ಯ ಮಟ್ಟದಲ್ಲಿ ಕವಿಘೊಷ್ಟಿ ಹಮ್ಮಿಕೊಂಡು ಉದಯೋನ್ಮುಖ ಕವಿಗಳಿಗೆ ಉತ್ತೇಜನ ನೀಡಿದ್ದಾರೆ. ಮುಂದುವರೆದು ಪ್ರತಿವಾರ ಚಿತ್ರ ಆಧರಿತ  ರಾಜ್ಯಮಟ್ಟದ ಕವನ ಸ್ಪರ್ಧೆಯನ್ನು ಏರ್ಪಡಿಸಿ ಉತ್ತಮ ವಿಮರ್ಶೆ ಮಾಡಲಾಗುತ್ತದೆ. ಈಗ ಮುನ್ನೂರು ಕವಿಗಳ ಕವನಗಳನ್ನು ಹೊರತರುವ ಯೋಜನೆ ಹೊಂದಿರುವ ಇವರು ಸಾಹಿತ್ಯ ಕ್ಷೇತ್ರದಲ್ಲಿ ವಾಟ್ಸಪ್ ಗುಂಪುಗಳು ಮೂಲಕ ತಮ್ಮದೇ ಕೊಡಗೆ ನೀಡುತ್ತಿದ್ದಾರೆ.
ಬೆಳಿಗ್ಗೆ ಮುಖ ತೊಳೆಯುವ ಮುನ್ನ ಮುಖಪುಟ ತೆರೆಯುವ ಹವ್ಯಾಸವನ್ನು ನಮ್ಮ ಬಹುತೇಕ ಯುವಕರು ಹೊಂದಿದ್ದು ಅವರಲ್ಲಿ ಬಹುತೇಕ ಕೇವಲ ಸಮಯವನ್ನು ಕಳೆಯಲು ಈ‌ ಸಾಮಾಜಿಕ ಜಾಲತಾಣ ಬಳಿಸಿದರೆ ಇನ್ನೂ ಕೆಲವರು ತಾವು ಬರೆದ ಕಥೆ, ಕವನಗಳನ್ನು, ಹನಿಗವನಗಳನ್ನು ನೇರವಾಗಿ ಪ್ರಕಾಶಕರ ಹಂಗಿಲ್ಲದೇ ತಾವೆ ಪ್ರಕಾಶನ ಮಾಡಿ ಪ್ರಪಂಚದ ಮೂಲೆ ಮೂಲೆಗಳಲ್ಲಿ ತಮ್ಮ ಸಾಹಿತ್ಯ ಪಸರಿಸುವಂತೆ ಮಾಡಿದ್ದಾರೆ.
ಈಗೆ ಸಾಮಾಜಿಕ ಜಾಲತಾಣಗಳಾದ ಪೇಸ್ ಬುಕ್ ಮತ್ತು ವಾಟ್ಸಪ್ ಗಳು ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ .ಆದರೆಅತಿಯಾದರೆ ಅಮೃತ ವಿಷ ಎಂಬಂತೆ ಮಿತಿಯನ್ನು ಅರಿತು ಸಾಮಾಜಿಕ ಜಾಲತಾಣಗಳ ಸಮರ್ಪಕವಾದ ಬಳಕೆಯಿಂದ ಕನ್ನಡಾಂಬೆಯ ತೇರನ್ನೆಳೆಯೋಣ .

*ಸಿ.ಜಿ.ವೆಂಕಟೇಶ್ವರ*
ಗೌರಿಬಿದನೂರು

ಬೂತನ್ ದೊರೆ ಕುರಿತು ಕೃಷ್ಣೇಗೌಡರ ಅಂಕಣ

09 September 2017

ಹನಿಗವನ *ಮೊಬೈಲ್*

*ಮೊಬೈಲ್*

ಎಲ್ಲರ ಕೈಲೂ ಮೊಬೈಲು
ಮನಸೆಲ್ಲಾ ಹೈಲು ಪೈಲು
ಬುದ್ದಿ ಇಲ್ಲ ಸ್ವಲ್ಪಾನೂ
ಕ್ಯುನಲ್ಲೂ ಬಿಡಲ್ಲ ಸೆಲ್ ಪೋನು

08 September 2017

NEPAL AND VAISHNO DEVI DARSHAN

ಇಪ್ಪತ್ತು ದಿನಗಳ ಉತ್ತರ ಭಾರತದ ಮತ್ತು ನೇಪಾಳ ಪ್ರವಾಸಕ್ಕಾಗಿ ಸ್ನೇಹಿತರ ಜೊತೆಗೆ ಹೊರಟಾಗ ಪ್ರಾಕೃತಿಕ ಸೌಂದರ್ಯ ಮತ್ತು ದೈವದ ಆರಾಧನೆಯನ್ನು ಮಾಡಬಹುದು ಎಂದು ನಿರೀಕ್ಷೆ ಇಟ್ಟುಕೊಂಡು ಹೋದ ನನಗೆ ನಿರಾಸೆ ಏನು ಆಗಲಿಲ್ಲ ಜಮ್ಮು ಕಾಶ್ಮೀರದ ಪ್ರಾಕೃತಿಕ ಸೌಂದರ್ಯ ನನ್ನ ಮನಸೂರೆಗಂಡಿತು ಕಟ್ರಾದ ವೈಶ್ಣೋದೇವಿ ದರ್ಶನ ಪಡೆಯಲು ೧೪ಕಿಲೋಮೀಟರ್  ಬೆಟ್ಟವನ್ನು ಕಾಲ್ನಡಿಗೆಯಲ್ಲಿ ರಾತ್ರಿಯಲ್ಲಿ ಕ್ರಮಿಸಿ  ಬೆಳಗಿನ ಜಾವ ತಾಯಿಯು ದರ್ಶನ ಯೋಗ ಎಲ್ಲಾ ಸುಸ್ತು ಮಾಯವಾಗಿ ಧನ್ಯತಾ ಭಾವ ಮನೆ ಮಾಡಿತ್ತು ದರ್ಶನದ ತರುವಾಯ ಪುನಃ ೧೪ ಕಿಲೋಮೀಟರ್ ಬೆಟ್ಟ ಇಳಿದು ಹೋಟೆಲ್ ನಲ್ಲಿ ವಿಶ್ರಾಂತಿ ಪಡೆದು ಕುರುಕ್ಷೇತ್ರದ ಕಡೆಗೆ ರಾತ್ರಿ ಪಯಣ ಆರಂಭಿಸಿದೆವು ಪ್ರಯಾಣದ ಆರಂಭದಲ್ಲಿ ದೇವಿಯ ಮತ್ತು ಶೀಕೃಷ್ಣನ ಭಕ್ತಿ ಗೀತೆಗಳನ್ನು ಗುಂಪಿನಲ್ಲಿ ಹಾಡುತ್ತಾ ದಣಿದ ದೇಹ ನಿದ್ರೆಗೆ ಜಾರಿದ್ದೇ ಗೊತ್ತಾಗಲಿಲ್ಲ .ರಾತ್ರಿಯ ೩ಗಂಟೆಗೆ ಬಸ್ಸಿನಲ್ಲಿ ನನ್ನ ಸಹಪ್ರಯಾಣಿಕರು ಗಾಬರಿಗೊಂಡು ಅರಚುವ ಸದ್ದು ಕೇಳಿ ನಾನು ಎದ್ದು ನೋಡಿ ದರೆ ನಾವು ಪ್ರಯಾಣ ಮಾಡುತ್ತಿದ್ದ ಬಸ್ ಚಾಲಕ ತೂಕಡಿಸಿದ ಪರಿಣಾಮ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಲಭಾಗದಲ್ಲಿ ಕಂದಕವನ್ನು ನೋಡುತ್ತಿತ್ತು .ಇನ್ನೊಂದು ಅಡಿ ಬಸ್ ಚಲಿಸಿದ್ದರೆ ನಾನು ಇಂದು ಈ ಲೇಖನ ಬರೆಯಲಾಗುತ್ತಿರಲಿಲ್ಲ .ತಾಯಿ ವೈಷ್ಣೋದೇವಿ ಕೃಪೆಯಿಂದ ಪುನರ್ ಜನ್ಮ ಪಡೆದ ನಾವು ಆ ಶಾಕ್ ನಿಂದ ಹೊರಬಂದು ಪರಸ್ಪರ ಸಮಾಧಾನ ಮಾಡಿಕೊಂಡು ಚಾಲಕನಿಗೆ ಬುದ್ದಿ ಹೇಳಿ ಪೋನಿನಲ್ಲಿ ನನ್ನ ತಾಯಿಯೊಂದಿಗೆ ಮಾತನಾಡಿದಾಗ ದುಃಖ ತಡೆಯಲಾರದೆ ಗಳಗಳನೆ ಅತ್ತು ಅವರಿಗೆ ವಿಷಯ ತಿಳಿಸಿ ನಾನೇ ಅವರಿಗೆ ಸಮಾಧಾನ ಮಾಡಿ .ನಂತರ ಕ್ರೇನ್ ಮೂಲಕ ಬಸ್ ಎತ್ತಿಸಿ .ಹೊಸ ಬಸ್ ಮೂಲಕ ಪ್ರವಾಸ ಮುಂದುವರಿಸಿದೆವು ಈಗ ಮತ್ತೊಮ್ಮೆ ವೈಷ್ಣೋದೇವಿಯ ದರ್ಶನಕ್ಕಾಗಿ ಮನ ಹಾತೊರೆಯುತ್ತಿದೆ.
ಸಿ.ಜಿ.ವೆಂಕಟೇಶ್ವರ.
ಶಿಕ್ಷಕರು
ಗೌರಿಬಿದನೂರು
990092552

ಯರಬಳ್ಳಿ ಮಾರಮ್ಮನ ಜಾತ್ರೆ

ಯರಬಳ್ಳಿ ಮಾರಮ್ಮನ ಜಾತ್ರೆ.
ಬೇಡಿದ ವರಗಳ ನೀಡಿ ಭಕ್ತರ ಅಭೀಷ್ಟೆಗಳನ್ನು ಅನಾದಿಕಾಲದಿಂದಲೂ ಈಡೇರಿಸುತ್ತಾ ಬಂದಿರುವ ಯರಬಳ್ಳಿ ಮಾರಮ್ಮನ ಜಾತ್ರೆಯು ಪ್ರತಿ ವರ್ಷ ಶ್ರದ್ದಾಭಕ್ತಿಯಿಂದ ವಿಜೃಂಭಣೆಯಿಂದ ನಡೆಯುತ್ತದೆ ರಾಜ್ಯದ ಹೊರರಾಜ್ಯದ ಭಕ್ತರು ದೇವಿಯ ಉತ್ಸವದ ಸಂದರ್ಭದಲ್ಲಿ ಹಾಜರಿದ್ದು ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಪ್ರತಿ ವರ್ಷವೂ ಒಂದು ವಾರಕ್ಕೆ ಮೊದಲು ತಳವಾರಯ್ಯನವರು "ಸಾರುವ "(ಹಳ್ಳಿಯಾದ್ಯಂತ ತಮಟೆ ಬಾರಿಸುತ್ತಾ ಜಾತ್ರೆಯ ಬಗ್ಗೆ ತಿಳಿಸುವುದು)ಮೂಲಕ ಜಾತ್ರೆ ಗೆ ಅಧಿಕೃತ ಚಾಲನೆ ಸಿಗುತ್ತದೆ. ಬುಧವಾರ ಸಾರು ಹೊರಟು ಹೋಗುವ ಶಾಸ್ತ್ರ ನಡೆಯುವುದು. ಗುರುವಾರ ದೇವಿಗೆ "ಜಲದಿ"ಉತ್ಸವ ನಡೆಯುತ್ತವೆ ಅಂದು ಮುಂಜಾನೆ ಗ್ರಾಮದಲ್ಲಿರುವ ಎಲ್ಲಾ ಭಕ್ತರು ದೇವಾಲಯಕ್ಕೆ ಆಗಮಿಸಿ ಉರುಮೆ. ಜಾಗಟೆ. ಶಂಖ ಮುಂತಾದ ಮಂಗಳ ವಾದ್ಯಗಳೊಂದಿಗೆ ಒಂದು ಕಿಲೋಮೀಟರ್ ದೂರದಲ್ಲಿರುವ ಜಲದಿ ಪ್ರದೇಶಕ್ಕೆ ತಾಯಿಯ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸುತ್ತಾರೆ. ಅಂದು ಬಹುಪಾಲು ಭಕ್ತರು ಉಪವಾಸವಿದ್ದು ದೇವಿಗೆ ಪೂಜಿಸುತ್ತಾರೆ. ಅಂದು ಸಾಯಿಂಕಾಲ ಜಲದಿ ಹೊಳೆಯಿಂದ ದೇವಾಲಯಕ್ಕೆ ತಾಯಿ ನಡೆದುಕೊಂಡು ಬರುವುದು ನೋಡಲು ಕಣ್ಣಿಗೆ ಹಬ್ಬ. ಈ ಸಂದರ್ಭದಲ್ಲಿ "ಸೂರುಬೆಲ್ಲ ಮೆಣಸು"(ವೀಳ್ಯದೆಲೆಯಲ್ಲಿ ಬುರುಗು. ಮೆಣಸು ಇಟ್ಟು ದೇವಿಗೆ ಅರ್ಪಿಸುವ ಶಾಸ್ತ್ರ) ದೇವಿಗೆ ಅರ್ಪಿಸುವ ಮೂಲಕ ಹರಕೆಯನ್ನು ತೀರಿಸುತ್ತಾರೆ.ಅಂದು ಸಂಜೆ ತಾಯಿಗೆ ಪ್ರಿಯವಾದ "ಬಾನಗುರಿ ಉತ್ಸವ" ನಡೆಯುತ್ತವೆ ಆಗ ದೇವಿಗೆ ಕುರಿ ಬಲಿ ನೀಡಿ ತಾಯಿಗೆ ಪ್ರಸಾದ ಅರ್ಪಿಸುತ್ತಾರೆ. ಶುಕ್ರವಾರ ಮಾರಮ್ಮನ ಆರತಿ ಉತ್ಸವ ನಡೆಯುತ್ತದೆ ಅಂದು ತಂಬಿಟ್ಟಿನಿಂದ ಮಾಡಿದ ಆರತಿಯಲ್ಲಿ ದೀಪಗಳನ್ನು ಹಚ್ಚಿ ದೇವಿಗೆ ಬೆಳಗುವರು ಅಂದು ಹರಕೆಯನ್ನು ಹೊತ್ತ ಕೆಲವರು "ಬೇವಿನ ಸೀರೆಯನ್ನು "ಉಟ್ಟು ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಅಂದು ಮದ್ಯ ರಾತ್ರಿಯಿಂದ ಕುರಿ ಮತ್ತು ಕೋಣಗಳ ಬಲಿ ಕೊಟ್ಟು ದೇವಿಯನ್ನು ಸಂತೃಪ್ತ ಪಡಿಸುತ್ತಾರೆ.ಅದೇ ಶುಕ್ರವಾರ ಪ್ರತೀವರ್ಷ" ಶ್ರೀ ದೇವಿ ಮಹಾತ್ಮೆ "ಎಂಬ ಪೌರಾಣಿಕ ನಾಟಕವನ್ನು ಶ್ರದ್ಧೆ ಭಕ್ತಿಯಿಂದ ಅಭಿನಯಿಸುವರು ಶನಿವಾರದಂದು" ಸಣ್ಣ ಸಿಡಿ ಉತ್ಸವ ",ಭಾನುವಾರ "ದೊಡ್ಡ ಸಿಡಿ ಉತ್ಸವ " ನಡೆಯುತ್ತದೆ ಸಿಡಿ ಮರಕ್ಕೆ ಸಿಡುಹಾಡುವವರನು ಕಟ್ಟಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಜಾತ್ರೆಯ ಕೊನೆಯಲ್ಲಿ ಪೋತರಾಜರು ಗಾವು ಸಿಗಿಯುವುದರ ಮೂಲಕ ಜಾತ್ರೆಗೆ ವಿದ್ಯುಕ್ತವಾಗಿ ತೆರ ಬೀಳುತ್ತದೆ ಈ ರೀತಿಯಲ್ಲಿ ಮದ್ಯ ಕರ್ನಾಟಕದಲ್ಲಿ ನಡೆಯುವ ಶ್ರೀ ಯರಬಳ್ಳಿ ಮಾರಮ್ಮನ ವಾರ್ಷಿಕ ಜಾತ್ರೆ   ಪ್ರತಿವರ್ಷ ಮೇ  ತಿಂಗಳಲ್ಲಿ     ನಡೆಯುತ್ತದೆ ದಯವಿಟ್ಟು ನಾವೆಲ್ಲರೂ ಜಾತ್ರೆಗೆ ಬಂದು ಮಾರಮ್ಮನ ಕೃಪೆಗೆ ಪಾತ್ರರಾಗಬೇಕೆಂದು ಗ್ರಾಮಸ್ಥರ ಪರವಾಗಿ ಆಹ್ವಾನಿಸುತ್ತಿದ್ದೇನೆ .
ಸಿ.ಜಿ.ವೆಂಕಟೇಶ್ವರ..
ಸಮಾಜ ವಿಜ್ಞಾನ ಶಿಕ್ಷಕರು
ಯರಬಳ್ಳಿ
9900925529

04 September 2017

ರಾಜ್ಯ ಮಟ್ಟದ ಕವಿ ಗೋಷ್ಠಿಯಲ್ಲಿ ನನ್ನ ಕವನ ವಾಚನ

ಹನಿಗವನಗಳು

*ನಾಯಿಪಾಡು*

ಪ್ರವಾಹ ಬಂದರೆ
ನಮ್ಮ ನೋಡು
ಹೇಳತೀರದು
ನಾಯಿಪಾಡು

*ರಕ್ಷಣೆ*

ಪ್ರತಿದಿನ ನಮ್ಮ ಕಾಯುವೆ
ನೀನು ಮನೆಯಲ್ಲಿ
ನಿನ್ನ ರಕ್ಷಿಸಬೇಡವೆ
ನಾವು ಮಳೆಯಲ್ಲಿ.

03 September 2017

ದೇವರ ಬಗ್ಗೆ ನಂಬಿಕೆ ಇರಲಿ ದೇವ ಮಾನವರ ಮೇಲಲ್ಲ.



*ಜನರ ಧಾರ್ಮಿಕ ನಂಬಿಕೆಗಳ ದುರ್ಬಳಕೆ ಕೆಲವು ಸ್ವಘೋಷಿತ ದೇವಮಾನವರಿಂದ ಆಗುತ್ತಿರುವುದ ಕೇಳಿರುವಿರಿ. ಇಂತಹ  ದುರ್ಬಳಕೆ ಸ್ವಸ್ಥ ಸಮಾಜದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರಿರುವುದು ಇತ್ತೀಚೆನ ರಾಮ್ ರಹೀಮ್ ಸಿಂಗ್ ನಂತಹ ದೇವಮಾನವರ ಶಿಕ್ಷೆ ಮತ್ತು ಅನಂತರದ ಹಿಂಸಾಚಾರ, ಹುಚ್ಚಾಟಗಳಿಂದ ಸಾಬೀತಾಗಿದೆ .
"ಈ ಭೂಮಿಗೆ ಮೊದಲು ದೇವರು ಬಂದ ನಂತರ ತನ್ನ ಬದಲು ತಾಯಿಯ ತಂದ" ಎಂಬ ಹಾಡು ಎಲ್ಲೋ ಕೇಳಿದ ನೆನಪು ದೈವ ಸ್ವರೂಪಿಯಾದ ಅಮ್ಮ ನಮಗೆ ಪ್ರೀತಿಯ ಜೊತೆಗೆ ತಿದ್ದಿ ತೀಡಿ ನಮ್ಮನ್ನು ಉತ್ತಮ ನಾಗರೀಕರನ್ನಾಗಿ ಮಾಡಲು ಬಹಳ ಪ್ರಮುಖ ಪಾತ್ರ ವಹಿಸುವಳು ಅದಕ್ಕೆ ಮಾತೃದೇವೋಭವ ,ಪಿತೃದೇವೋಭವ ,ಆಚಾರ್ಯ ದೇವೋಭವ ಎಂದರು. ಕೆಲವೊಮ್ಮೆ ಆಚಾರ್ಯ ಎಂಬ ಪದ ಗುರು ಎಂಬ ಅರ್ಥದ ಜೊತೆಗೆ ಧಾರ್ಮಿಕ ಮುಖಂಡ ಎಂಬ ಅರ್ಥವನ್ನು ಸಹ ಪ್ರತಿಧ್ವನಿಸುತ್ತದೆ.
ಮೊದಲು ಸಾಮಾನ್ಯವಾಗಿ ಸಾಕ್ಷರತೆಯ ಮಟ್ಟ ಕಡಿಮೆಯಿದ್ದ ಕಾಲದಲ್ಲಿ ಧರ್ಮದ ಕೆಲ ತತ್ವ, ಆದರ್ಶ, ಆಚರಣೆಗಳು ಎಲ್ಲರಿಗೂ ಸುಲಭವಾಗಿ ತಿಳಿಯದ ಕ್ಷಣಗಳಲ್ಲಿ ಸೂಕ್ತ ಮಾರ್ಗದರ್ಶನ ನೀಡಲು ಸ್ವಾಮಿಗಳು, ಬಾಬಾಗಳು ನಮಗೆ ಬೆಳಕು ತೋರಿರುವುದು ಕಂಡುಬಂದಿದೆ .
ಇದರಲ್ಲಿ ಹೆಸರಿಸಬಹುದಾದ ಪ್ರಾತಸ್ಮರಣೀಯರೆಂದರೆ,ರಮಣ ಮಹರ್ಷಿಗಳು, ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು ಇತ್ಯಾದಿ, ಇವರು ಜನರ ಮತ್ತು ಸಮಾಜದ ಓರೆ ಕೋರೆಗಳನ್ನು ತಿದ್ದಿ ನಮ್ಮನ್ನು ಸನ್ಮಾರ್ಗದಲ್ಲಿ ನಡೆಯಲು ದಾರಿ ದೀವಿಗೆಗಳಾಗಿದ್ದರು.
ಬದಲಾದ ಕಾಲಘಟ್ಟದಲ್ಲಿ ಜಾತಿಗೊಂದು ಮಠ,ಧಾರ್ಮಿಕ ಪಂಥಗಳು,ಅಧನಿಕ ಜೀವನಶೈಲಿ, ರಾಜಕೀಯ ಪಕ್ಷಗಳ ಒಡನಾಟದಿಂದ ಮಠಗಳ( ,ಎಲ್ಲಾ ಅಲ್ಲ) ಬಾಬಾಗಳ ಜೀವನ ಶೈಲಿ ,ಅವರ ಹಾವಭಾವ,ಮುಂತಾದವುಗಳ ಬದಲಾವಣೆಗಳನ್ನು ನಾವು ಕಾಣುವುದರ ಜೊತೆಯಲ್ಲಿ ನಕಲಿ ಬಾಬಾಗಳು ಸ್ವಯಂಘೋಷಿತ ದೇವಮಾನವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇವರ ಅನ್ಯಾಯ, ಅಕ್ರಮ, ಅನೈತಿಕ ಚಟುವಟಿಕೆಗಳು, ಎಗ್ಗಿಲ್ಲದೇ ನಡೆಯುತ್ತಿರುವುದು ದುರದೃಷ್ಟಕರ. ಅದಕ್ಕೆ ತಾಜಾ ಉದಾಹರಣೆಗಳೆಂದರೆ, ನಿತ್ಯಾನಂದ, ರಾಮ್ ರಹೀಮ್ ಸಿಂಗ್,ಬಾಬಾ ಇತ್ಯಾದಿ, ಬಾಬಾ ರಾಮ್ ರಹೀಮ್ ಸೀಂಗ್ ಗೆ ಜೈಲು ಶಿಕ್ಷೆಗೆ ಎರಡು ದಿನ ಮೊದಲು ಆರೋಪಿಯಾಗಿದ್ದ ಬಾಬಾಗೆ  ರಾಜಕೀಯ ಪಕ್ಷವೊಂದರ ಮಂತ್ರಿ ಐವತ್ತು ಲಕ್ಷ ಹಣ ನೀಡಿ ಆ ಸ್ವಯಂ ಘೋಷಿತ ದೇವಮಾನವನಿಗೆ ಪಾದಪೂಜೆ ಮಾಡಿಬಂದಿರುವುದು ಇಂತಹ ಕಳ್ಳ ಸ್ವಾಮಿಗಳೊಂದಿಗಿರುವ ಅಪವಿತ್ರ ಮೈತ್ರಿಗೆ ಉದಾಹರಣೆ.
ಇಂತಹ ದೇವ ಮಾನವರಿಗೆ ಡೋಂಗಿ ಜಾತ್ಯಾತೀತ ಬುದ್ದಿಜೀವಿಗಳು ಬೆಂಬಲಿಸುವ ಮೂಲಕ ತಮ್ಮ ಬಣ್ಣ ಬಯಲುಮಾಡಿಕೊಂಡಿದ್ದಾರೆ .ಈ ರೀತಿಯ ಬಾಬಾಗಳು ಕೇವಲ ಒಂದು ಧರ್ಮ, ಪಂತ ಕ್ಕೆ ಸೀಮಿತವಾಗಿಲ್ಲ ಬದಲಿಗೆ ಎಲ್ಕಾಧರ್ಮಗಳಲ್ಲೂ ವ್ಯಾಪಕವಾಗಿ ಬೆಳೆದಿದ್ದಾರೆ.
 ಮೊದಲಿಗೆ ಅಮಾಯಕರು ,ಅನಕ್ಷರಸ್ಥ ಜನರು ಇವರ ಅನುಯಾಯಿಗಳ ರೂಪದಲ್ಲಿ ಸೇರಿದರೆ ಕ್ರಮೇಣ ವಿದ್ಯಾವಂತರು ತಿಳಿದವರು ಸಮೂಹ ಸನ್ನಿಗೊಳಗಾಗಿ ಅವರ ಪಾಶಕ್ಕೆ ಬಿದ್ದು ಕುರುಡಾಗು ಅವರ ಅನ್ಯಾಯ ಅಕ್ರಮಗಳ ಸಮರ್ಥನೆ ಮಾಡುವುದು ದುರದೃಷ್ಟಕರ
ದೇವರು.ಆಚಾರ,ವಿಚಾರ ನಮ್ಮ ನಂಬಿಕೆ ಆದರೆ ಅದೇ ನಂಬಿಕೆಗಳು ಕುರುಡಾದಾಗ ,ಅದಕ್ಕೆ ಧರ್ಮದ ಲೇಪನವಾದಾಗ,ರಾಜಕೀಯ ಅಪವಿತ್ರ ಮೈತ್ರಿಯಾದಾಗ,ವೊಟ್ ಬ್ಯಾಂಕ್ ಪಾಲಿಟಿಕ್ಸ್ ಮುಖ್ಯವಾದಾಗ ಇಂತಹ ಸಾವಿರಾರು ಬಾಬಾಗಳು ಉದಯವಾಗಿ ಸಾಮಾಜಿಕ ಸ್ವಾಸ್ಥ್ಯ, ಸಾಮಾಜಿಕ ಶಾಂತಿಗೆ ಮಾರಕವಾಗುತ್ತಾರೆ.
ಮೊದಲು ಇಂತಹ ಬಾಬಾಗಳ ಎಲ್ಲಾ ಆಸ್ತಿಪಾಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ತಪ್ಪಿತಸ್ಥ ಬಾಬಾಗಳು ಯಾವದೇ ಧರ್ಮದವರಾದರೂ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು. ಧಾರ್ಮಿಕ ಆಚರಣೆಗಳು ಸ್ವಾಮೀಜಿಯವರ ಸಂದೇಶಗಳು  ಜನರ ಮನಸ್ಸನ್ನು ಅರಳಿಸಬೇಕೆ ಹೊರತು ಕೆರಳಿಸಿ ಸಾಮಾನ್ಯ ಜನರ ,ಸರ್ಕಾರದ ಆಸ್ತಿ ಪಾಸ್ತಿಗಳನ್ನು ನಾಶ ಮಾಡುವ ರಾಕ್ಷಸೀಯ ಗುಣಗಳನ್ನು ಪ್ರಚೋದಿಸಬಾರದು ಇನ್ನು ಮುಂದಾದರು ಯಾವದೇ ದಾರ್ಮಿಕ ಪುರುಷರ. ಸ್ವಾಮೀಜಿಯವರ ಬಗ್ಗೆ ಕುರುಡು ನಂಬಿಕೆ ಇಡುವ ಮುನ್ನ ಅವರ ಪೂರ್ವಾಪರ ತಿಳಿದು ಜಾಗೃತರಾಗಿರಬೇಕು ಅನುಮಾನ  ಬಂದರೆ ಡೊಂಗಿ ದೇವಮಾನವರ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಲು ಹಿಂಜರಿಯಬಾರದು.ಸರ್ಕಾರಗಳು ಇಂತವರ ಬಗ್ಗೆ ಮೃದು ದೋರಣೆ ಹೊಂದಬಾರದು  .ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ  ಒಬ್ಬರ ಮೇಲೊಬ್ಬರು ಜವಾಬ್ದಾರಿ ವರ್ಗಾಯಿಸದೇ   ನಾವೆಲ್ಲರೂ ಒಟ್ಟುಗೂಡಿ ಇಂತಹ ಡೊಂಗಿ ಬಾಬಾಗಳ ವಿರುದ್ಧ. ಹಾಗು ಸಮಾಜ ಸ್ವಾಸ್ಥ್ಯ ಕದಡುವ ಶಕ್ತಿಗಳ ವಿರುದ್ಧ ‌ಹೋರಾಡುವ  ಪಣತೊಡಬೇಕಿದೆ

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು.

ದಿಟ್ಟ ನಡೆ


ದಿಟ್ಟ ನಡೆ.


ಕಷ್ಟಗಳೆಂದು ದಿಕ್ಕೆಟ್ಟು ಓಡದಿರು
ದಿಟ್ಟತನದಲಿ ನಡೆ ಮುಂದೆ ನೀನು.

ನಿನ್ನ ಬಲ ನೀ ತಿಳಿದು 
ಮುನ್ನ ನಡೆ ಎಡೆಬಿಡದೆ
ಹುಡುಕುವುದು ಕಷ್ಟ ನೀ ಎಲ್ಲೆಂದು

ಇಟ್ಟಮುಂದಡಿ ಇಡದಿರು ಹಿಂದಕ್ಕೆ
ಅಡಿಗಡಿಗೆ ಒಳ್ಳೆಯದಾಗುವುದು 

ಅವಕಾಶ ಓದಗಿ ಬಂದಾಗ ಸಾವಕಾಶಿಸದಿರು
ಸಾಗು ಗುರಿಯೆಡೆಗೆ ಅಂಜದಿರು ಅಳುಕದಿರು

ಸಿಗಲಿಲ್ಲ ಜಯ ಎಲ್ಲರಿಗೂ ಸುಲಭದಿ
ಎದುರಿಸು ಕಷ್ಟವ ಬಲು ಮುದದಿ 

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು.

ಕೆಂಪೇಗೌಡರು


              
                  ಕೆಂಪೇಗೌಡರು

ಇವರೇ ನಮ್ಮ ಗೌಡರು 
ನಾಡಪ್ರಭು ಕೆಂಪೇಗೌಡರು

ಕಟ್ಟಿದರು ನಮಗೆ ಬೆಂಗಳೂರು
ನಮ್ಮ ನಮನ ನಿಮಗೆ ನೂರಾರು

ನಿಮ್ಮ ದೂರದೃಷ್ಟಿ ಅನನ್ಯ 
ಅದೇ ನಮಗೆ ಚೈತನ್ಯ

ನೀವು ಕಟ್ಟಿಸಿದಿರಿ ಬಹು ಕೆರೆ
ನಾವು ಇಂದು ಅವುಗಳಲ್ಲಿ ಬರುವಂತೆ ಮಾಡಿದ್ದೇವೆ ನೊರೆ

ನಿರ್ಮಾಣ ಮಾಡಿದ್ದಿರಿ ವೃತ್ತಿ ಆದಾರಿತ ಪೇಟೆಗಳು
ಈಗತಲೆ ಎತ್ತಿವೆ ಎಲ್ಲೆಂದರಲ್ಲಿ ಪ್ಲಾಟ್ಗಳು

ನೀವುಕಟ್ಟಿಸಿದ್ದಿರಿನೂರಾರು ಕಲ್ಯಾಣಿಗಳ
ಅವು ಮುಚ್ಚಿಸಿ ನಾವೆಲ್ಲರೂ ಜಲಕ್ಕಾಗಿ ನೋಡುತ್ತಿದ್ದೇವೆ ಪಾತಾಳ

ನೀವುಕಟ್ಟಿದ್ದಿರಿ ಅಂದು  ಬೆಂಗಳೂರು
ನಾವು ಕಟ್ಟಿದ್ದೇವೆ ಬೆಂಗಾಡಾದಊರು 

ಕ್ಷಮಿಸಿ ಬಿಡು ಕೆಂಪೇಗೌಡ ಎಂದು 
ಹೇಳಲುನಾವು ಬಯಸುವುದಿಲ್ಲ
ಏಕೆಂದರೆ ನಾವು ಮಾನವರಾಗಿ ಉಳಿದಿಲ್ಲ.

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು.

ನಾನಲ್ಲ ಸಾಹಿತಿ

           ನಾನಲ್ಲ ಸಾಹಿತಿ 

ನಾನಲ್ಲ ಸಾಹಿತಿ  
ನನಗೆ ಇದೆ ಇತಿಮಿತಿ

ಗೊತ್ತಿಲ್ಲ  ಪ್ರಸ್ತಾರ ಗುರುಲಘು   ಹೇಳುವೆ ಮೊದಲು ಮಾನವನಾಗು. 

ಓದಿಲ್ಲ ಉದ್ಗ್ರಂಥ ತಿಳಿದಿಲ್ಲ ಸಾಹಿತ್ಯ
ಪದಗಳಲೇ ಹಾಡವೆ ನಿಮಗೆ ಲಾಲಿತ್ಯ 

ತಿಳಿದಿಲ್ಲ ನಾನು ಅಷ್ಟಾದಶ ವರ್ಣನೆ
ಮರೆತಿಲ್ಲ ಪ್ರಕೃತಿ ತಾಯಿಯ ಬಣ್ಣನೆ 

ಕಲಿತಿಲ್ಲ ಷಟ್ಪದಿ ತ್ರಿಪದಿ ಅಲಂಕಾರ
ಕಟ್ಟಿಕೊಡುವೆ ನಿಮಗೆ ಜಗದ ವಿವರ 

ಇರಲಿ ನನಗೆ ನಮ್ಮೆಲ್ಲರ ಆಶೀರ್ವಾದ
ಎನಗಿಂತ ಕಿರಿಯನಿಲ್ಲ ಇದುವೇ ವಾದ 

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

02 September 2017

ಹೇ ಮನುಜ

ಹೇ ಮನುಜ ನೀನೇನು ಮಾಡಿರುವೆ ನೋಡು
ಅದರ ಫಲ ನೀನೆ ಉಣ್ಣುತಿರವೆ ನೋಡು

ಗಿಡ ಮರಗಳಿಂದ ಕಂಗೋಳಿಸಿತು ಧರೆ  ಅಂದು
ಮೃಗ ಖಗಗಳಿಂದ ನಲಿದಾಡಿತು ಇಳೆ ಅಂದು
ಬಡಬಾಗ್ನಿಯ ಜಳ ಸುಡುತಿದೆ ನಿನ್ನನಿಂದು
ಸ್ವಾರ್ಥ ಹೆಚ್ಚಿ ಮಾನವೀಯತೆ ಮಾಯವಿಂದು

ಇಂಗಾಲ ಮೀಥೇನ್ ಅಬ್ಬರಕೆ ನಲಯಗಿದೆ ದರೆ
ಜಾಗತಿಕ ತಾಪಮಾನಕೆ ಮಾನವ ಸೆರೆ
ಋತುಗಳೆಲ್ಲಾ ಈಗ ಹಿಂದು ಮುಂದು
ನೀರು ಗಾಳಿ ಕಲುಷಿತ ಎಂದೆಂದೂ

ಹುಲುಸಾದ ಕಾಡನ್ನು ಕಡಿದೆ ಸ್ವಾರ್ಥಕ್ಕೆ
ಸ್ವಚ್ಛಂದ ಪ್ರಾಣಿಗಳ ಬಡಿದೆ ನಿನ ಮೋಜಿಗೆ
ಖಗಮೃಗಗಳಿಂದ ಕೂಡಿದ ಕಾಡು
ಈಗ ಆಗಿದೆ ನೋಡು ನರಕದ ಬೀಡು

ಹಸಿರುಟ್ಟ ವನದೇವಿ ರಾರಾಜಿಸಿದಳು ಅಂದು
ಉಸಿರಾಡಲು ಕಷ್ಟಪಡುತಿಹೆ ಇಂದು
ನೀ ಬುದ್ದಿ ಕಲಿಯುವೆ ಎಂದು ?
ಪರಿಸರ ಉಳಿಸಲು ಪಣ ತೊಡು ಇಂದು

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

01 September 2017

ನೀತಿ ಆಯೋಗದ ಎಡವಟ್ಟು ಸಲಹೆಗಳು


ಎಪ್ಪತ್ತು ವರ್ಷಗಳ ಹಳೆಯದಾದ ಯೋಜನಾ ಆಯೋಗದ ಬದಲಿಗೆ "ನೀತಿ ಅಯೋಗ " ಜಾರಿಗೆ ಬಂದಾಗ ದೇಶದ ಪ್ರಜೆಗಳಿಗೆ ಹೊಸ ಬದಲಾವಣೆ ಬರುವುದೆಂಬ ಆಶಾ ಭಾವನೆಯಿತ್ತು  ನಾನೂ ಸಹ ಅದೇ ಅಭಿಪ್ರಾಯವನ್ನು ಹೊಂದಿದ್ದೆ .ಆದರೆ ನೀತಿ ಆಯೋಗದ ಕೆಲವು ಸಲಹೆ ಮತ್ತು ನಿರ್ಧಾರಗಳು ಅದರ ಸದಸ್ಯರ ವಾಸ್ತವ ಜ್ಞಾನವನ್ನು ಅನುಮಾನಿಸುವಂತಾಗಿದೆ , ಇತ್ತೀಚಿಗೆ ರೈತರಿಗೆ ಆದಾಯ ತೆರಿಗೆಯನ್ನು ಹೇರಬೇಕೆಂಬ ನೀತಿಆಯೋಗದ  ಅವಾಸ್ತವಿಕ ಮತ್ತು ಅನ್ಯಾಯದ ಸಲಹೆಗೆ ಇಡೀ ದೇಶಾದ್ಯಂತ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಯಿತು ಮೊದಲು ದೇಶದ ರೈತರ ಆದಾಯ ವೃದ್ದಿಯಾಗುವ ಕ್ರಮ ಕೈಗೊಂಡು ನಂತರ ತೆರಿಗೆ ಹೇರುವ ಮಾತನಾಡಲಿ ಎಂಬ ಆಗ್ರಹ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಕೈಬಿಡಲಾಯಿತು.
ಈಗ ದೇಶದ ಎಲ್ಲಾ ಶಾಲೆಗಳನ್ನು ಖಾಸಗೀಕರಣ ಮಾಡಲಿ ಎಂಬ ಅಸಂಬದ್ಧ ಸಲಹೆ ನೀಡುವ ಮೂಲಕ ಮತ್ತೊಂದು ಸುತ್ತಿನ ಚರ್ಚೆಗೆ ನೀತಿಆಯೋಗ ಎಡೆ ಮಾಡಿಕೊಟ್ಟಿದೆ ಅದರ ಪ್ರಕಾರ ದೇಶದ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕೇವಲ ಖಾಸಗಿ ಶಾಲೆಗಳು ಮಾತ್ರ ಅರ್ಹ ಎಂಬ ಏಕಮುಖ ವಾದವನ್ನು ಒಪ್ಪಲಾಗುವುದಿಲ್ಲ .ಅವರು ಮಾಡಿರುವ ಕೆಲ ಸಮೀಕ್ಷೆಯಲ್ಲಿ ಕೆಲ ಸರ್ಕಾರಿ ಶಾಲೆಗಳಲ್ಲಿ ಸಮಸ್ಯೆಗಳಿದ್ದರೆ ಅದನ್ನು ಸಾರ್ವತ್ರಿಕವಾಗಿ ಬಿಂಬಿಸುವುದು ಎಷ್ಟು ಸರಿ? ಬಹುತೇಕ ಸರ್ಕಾರಿ ಶಾಲೆಯಲ್ಲಿ ಖಾಸಗಿಯವರಿಗಿಂತ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದನ್ನು ನಾವು ಮರೆಯಬಾರದು.  ಈಗಾಗಲೆ ಆರ್ .ಟಿ.ಇ.ಯಿಂದ ಅನಧಿಕೃತವಾಗಿ ಖಾಸಗೀಕರಣ ಆರಂಭವಾಗಿದೆ ಇದು ಪರೋಕ್ಷವಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆಗೆ ಕಾರಣವಾಗಬಹುದು ಪ್ರಾಥಮಿಕ ಹಂತಗಳಲ್ಲಿ ಕಡ್ಡಾಯವಾಗಿ ಉತ್ತೀರ್ಣ ಮಾಡುವ ನಿಯಮವು ಸಹ ಗುಣಮಟ್ಟ ಕಡಿಮೆಯಾಗಲು ಕಾರಣವಾಗಬಹುದು  ಈ ನಿಟ್ಟಿನಲ್ಲಿ ನೀತಿ ಆಯೋಗವು ಕಾರ್ಯಸಾಧುವಾದ ಸಲಹೆಗಳನ್ನು ನೀಡಿ ಶಿಕ್ಷಣದ ಅಭಿವೃದ್ಧಿಗೆ ಸಲಹೆ ನೀಡಬೇಕೇ ವಿನಹ  ಶಾಲೆಗಳ ಖಾಸಗೀಕರಣ ಮಾಡಿ ಕಾರ್ಪೊರೇಟ್ ವಲಯದ ತೃಪ್ತಿ ಪಡಿಸಿ ಶಿಕ್ಷಣ ಕೇವಲ ಉಳ್ಳವರ ಆಸ್ತಿಯಾಗಲು ಬಿಡಬಾರದು

about physically challenged persons


about physically challenged persons


Recently railway department ordered to reserve lower berth’s to physically challenged persons. Really we welcome this decision its commendable job by central government it shows the government is running according to directive principles of state policy
I’m recent days all public buildings and places are accessible to these kind of people  and also measures are take to make all railway stations as physically challenged persons friendly but some state governments are not responding problems of these people  like reservation ,and promotion in jobs according to disabilities persons act each and every governments should work for these kind of persons then only we may talk about real inclusive growth.
C.g.venkateshwara
Gowribidanur
Bangalore
Karnataka
561208
Phone 9900925529

ವಿಶ್ವ ಜನಸಂಖ್ಯಾದಿನ



world population day


ಇಂದು ವಿಶ್ವ ಜನಸಂಖ್ಯಾ ದಿನ ತನ್ನಿಮಿತ್ತ ನಾನು ಬರೆದ ಲೇಖನ
ವಿಶ್ವ ಭೂಪಟದಲ್ಲಿ ಭಾರತದ ಜನಸಂಖ್ಯೆ
ಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ ಟಿ ಆರ್ ಮಾಲ್ಥಾಸ್ ರವರ ಹೇಳಿಕೆಯಂತೆ ಪ್ರಪಂಚದ ಜನಸಂಖ್ಯೆಯು ಗುಣಾಕಾರದಲ್ಲಿ ಬೆಳೆಯುತ್ತಿದ್ದರೆ ಸಂಪನ್ಮೂಲಗಳು ಸಂಕಲನ ರೂಪದಲ್ಲಿ ಬೆಳೆಯುತ್ತಿವೆ ಅದಕ್ಕೆ ಪ್ರಸ್ತುತ ನಮ್ಮ ಪ್ರಪಂಚದ ಜನಸಂಖ್ಯೆಯು ೭೫೦ ಕೋಟಿ ತಲುಪಿದ್ದು ೨೦೩೦ಕ್ಕೆ ೮೫೦ ಕೋಟಿ ತಲುಪುತ್ತಿರುವುದೇ ಸಾಕ್ಷಿ .
ಕಳೆದ ೧೭ವರ್ಷಗಳಿಂದ ಪ್ರತಿ ವರ್ಷವೂ ಜೂನ್ ೧೧ ರಂದು ವಿಶ್ವಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಆದರೂ ಬಹುತೇಕ ಜನರಿಗೆ ಈ ಜನಸಂಖ್ಯಾ ದಿನದ ಮಹತ್ವ ಮತ್ತು ಅದರ ಆಶೊತ್ತರಗಳನ್ನು ಅರಿಯದೇ ಹೋಗಿರುವುದು ದುರದೃಷ್ಟಕರ.
ಜಗತ್ತಿನ ಜನಸಂಖ್ಯೆ ಕ್ಷಣ ಕ್ಷಣವೂ ಹೆಚ್ಚುತ್ತಲೇಇದೆ ಇದು ಹಲವಾರು ಸಮಸ್ಯೆಗಳ ಮೂಲವಾಗಿದೆ . “ಸುರಕ್ಷಿತ ಮತ್ತು ಸ್ವಯಂಪ್ರೇರಿತವಾಗಿ ಕುಟುಂಬ ಯೋಜನೆ ಒಂದು ಮಾನವ ಹಕ್ಕು, ಇದು ಲಿಂಗಸಮಾನತೆ ಮತ್ತು ಮಹಿಳಾ ಸಬಲೀಕರಣದಲ್ಲಿಪ್ರಮುಖ ಅಂಶ ಹಾಗೂ ಬಡತನವನ್ನು ನಿರ್ಮೂಲನೆ ಮಾಡಲು ನಮಗಿರುವ ಅಸ್ತ್ರ” ಎಂದು ವೀಶ್ವ ಸಂಸ್ಥೆ ಘೋಷಣೆ ಮಾಡಿ ವರ್ಷಗಳೇ ಕಳೆದರೂ ನಿರೀಕ್ಷಿತ ಬದಲಾವಣೆ ಆಗಿಲ್ಲ ಇದನ್ನು ಮನಗಂಡು ಈ ವರ್ಷವೂ ವಿಶ್ವಸಂಸ್ಥೆಯ ಜನಸಂಖ್ಯೆ ದಿನದ ದ್ಯೇಯವಾಕ್ಯವಾಗಿ “ಕುಟುಂಬ ಯೋಜನೆ, ಜನರ ಸಬಲೀಕರಣ,ರಾಷ್ಟ್ರಗಳ ಅಭಿವೃದ್ಧಿ”(family planning empowering people, developing nations) ಎಂದು ಆಯ್ಕೆ ಮಾಡಿಕೊಂಡಿದೆ .
ಈಗಿನ ಆಧುನಿಕತೆಯ ಕಾಲದಲ್ಲಿ ನಾವೆಷ್ಟೆ ತಿಳುವಳಿಕೆ  ಹೊಂದಿದ್ದರೂ ಕುಟುಂಬ ಕಲ್ಯಾಣ ,ನಿರೋಧ್ ,ವಂಕಿ ಮುಂತಾದವುಗಳ ಬಗ್ಗೆ ಮಾತನಾಡುವಾಗ ಮುಜುಗರ ಅನುಭವಿಸುತ್ತಿರುವ ಉದಾಹರಣೆಗಳು ನಮ್ಮ ಮುಂದಿರುವಾಗ ಇನ್ನೂ ಅನಕ್ಷರಸ್ಥ ಜನರ ಪಾಡು ನೀವೆ ಊಹಿಸಿ.
ಕುಟುಂಬ ಯೋಜನೆಯು‌ ಜನರ ಸಬಲೀಕರಣ ಮಾಡುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿರುವುದು ಕೆಲ ಮುಂದುವರಿದ ದೇಶಗಳ ನೋಡಿದರೆ ನಮಗೆ ಅರಿವಾಗುತ್ತದೆ.
ಒಂದು ಕಾಲದಲ್ಲಿ ಜನಸಂಖ್ಯೆಯು ಆ ದೇಶದ ಎಲ್ಲಾ ಸಮಸಗಳಿಗೆ ಕಾರಣವೆಂದು ತಿಳಿಯಲಾಗಿತ್ತು  ಅದರಲ್ಲಿ ನಿರುದ್ಯೋಗವು ಒಂದು ಆದರೆ ಇಂದಿನ ಆಟೋಮೇಷನ್ ಯುಗದಲ್ಲಿ ಮತ್ತು ಕೃತಕ ಬುದ್ಧಿಮತ್ತೆ (artificial intelligence) ಪರಿಣಾಮವಾಗಿ  ನಿರುದ್ಯೋಗವು ಸೃಷ್ಟಿ ಆಗಿರುವುದು ಕಂಡುಬರುತ್ತದೆ
ಆದ್ದರಿಂದ ಜನಸಂಖ್ಯೆಯನ್ನು ಮಾನವ ಸಂಪನ್ಮೂಲ ಆಗಿ ಪರಿವರ್ತನೆ ಮಾಡಿದರೆ ಬಹುತೇಕ ಸಮಸ್ಯೆಗಳನ್ನು ಪರಿಹರಿಸಬಹುದು .ನಮ್ಮ ಪ್ರಸ್ತುತ ಪ್ರದಾನ ಮಂತ್ರಿಗಳಾದ ಮೋದೀಜಿಯವರು ಹೇಳುವಂತೆ ನಮ್ಮ ದೇಶದ ೧೨೭ ಕೋಟಿ ಜನಸಂಖ್ಯೆಯು ನಮ್ಮ ಶಕ್ತಿ  ಈ ಶಕ್ತಿಯನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡು ಇಂದಿನ ಸಮಾಜದಲ್ಲಿ ಇರುವ ಕೆಲ ಸಮಸ್ಯೆಗಳನ್ನು ಬಗೆಹರಿಸಲ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದರೆ ನಮ್ಮ ದೇಶದ ಜನಸಂಖ್ಯೆಯು ಶಾಪವಾಗುವ ಬದಲಿಗೆ ವರವಾಗುವುದರಲ್ಲಿ ಸಂದೆಹವಿಲ್ಲ .
ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು
೯೯೦೦೯೨೫೫೨೯

ಹೋರಾಟದ ಬದುಕು(ಕವನ


ಹೋರಾಟದ ಬದುಕು(ಕವನ)


ಹೋರಾಟದ ಬದುಕು
ಕಷ್ಟಗಳೆಂದು ದಿಕ್ಕೆಟ್ಟು ಓಡದಿರುನಮನ
ದಿಟ್ಟತನದಲಿ ನಡೆ ಮುಂದೆ ನೀನು.
ನಿನ್ನ ಬಲ ನೀ ತಿಳಿ ದು
ಮುನ್ನ ನಡೆ ಎಡೆಬಿಡದೆ
ಹುಡುಕುವುದು ಕಷ್ಟ ನೀ ಎಲ್ಲೆಂದು
ಇಟ್ಟಮುಂದಡಿ ಇಡದಿರು ಹಿಂದಕ್ಕೆ
ಅಡಿಗಡಿಗೆ ಒಳ್ಲೆಯದಾಗುವುದು
ಅವಕಾಶ ಓದಗಿ ಬಂದಾಗ ಸಾವಕಾಶಿಸದಿರು
ಸಾಗು ಗುರಿಯೆಡೆಗೆ
ಅಂಜದಿರು ಅಳುಕದಿರು
ಸಿಗಲಿಲ್ಲ ಜಯ ಎಲ್ಲರಿಗೂ ಸುಲಭದಿ
ಎದುರಿಸು ಕಷ್ಟವ ಬಲು ಮುದದಿ
ಆಗ ಮುಂದೆ ಬರುವೆ ನೀ ಜೀವನದಿ
ಆನೆಗೂ ಅಂತ್ಯ ತಪ್ಪಿಲ್ಲ
ಇನ್ನು ನಿನ್ನ ಇರವಿಕೆಗೆ ಖಾತ್ರಿಯಿಲ್ಲ
ಪರೋಪಕಾರಿಯಾಗು ಸಾವು ಬರುವುದರೊಳಗೆ
ಸಂಘರ್ಷ ನಿಂತಿಲ್ಲ ಜೀವನದಿ
ಬದುಕು ಒಳಿತು ಕೆಡುಕುಗಳ ಮಹಾನದಿ
ಸಾಗಬೇಕು ನೀನು ನಗುನಗುತಾ
ಹೋರಾಟ ಸಾಗಲಿ ಅನವರತ
,ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

ಅಹಮದಾಬಾದ್ ವಿಶ್ವ ಪರಂಪರೆ ನಗರ





world heritage city ahamadabad


ಅಹಮದಾಬಾದ್ ನಗರವನ್ನು ವಿಶ್ವ ಪರಂಪರೆಯ ನಗರಗಳ ಪಟ್ಟಿಯಲ್ಲಿ ಸೇರಿಸಿ ಅಧಿಸೂಚನೆಯನ್ನು  ಹೊರಡಿಸಿರುವದು ಭಾರತೀಯರಾದ ನಮಗೆಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ .ಈ ರೀತಿಯ ಗೌರವ ಪಡೆದ ಭಾರತದ ಪ್ರಥಮ ನಗರ ಅಹಮದಾಬಾದ್ ಆಗಲಿದೆ ಇದು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರಪಂಚಕ್ಕೆ ಪರಿಚಯಿಸುವ ಮತ್ತೊಂದು ಮಜಲಾಗಲಿದೆ. ಇಂತಹ ಇನ್ನೂ ಅನೇಕ ನಗರಗಳು ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದು ನಮ್ಮ ಪರಂಪರೆಯನ್ನು ವಿಶ್ವ ಕ್ಕ ತಿಳಿಸಲು ಸಹಾಕವಾಗಲೆಂದು ಭಾರತೀಯರಾದ ನಾವೆಲ್ಲರೂ ಆಶಿಸೋಣ
ಸಿ.ಜಿ. ವೆಂಕಟೇಶ್ವರ
ಗೌರಿಬಿದನೂರು