28 February 2018

ಮಾನವರಾಗೋಣ (ಕವನ)

*ಮಾನವರಾಗೋಣ*

ಮನವಿರುವ ಮಾನವ ಮರ್ಕಟವಾದೆ
ಮನವ ನಿಯಂತ್ರಿಸದೆ ಮಂಗನಾದೆ
ನರನ ರೂಪವ ಕಳಚಿ ನರಿಯಾದೆ
ವಂಚನೆ ಮೋಸಕೆ ಅರಸನಾದೆ

ವ್ಯಾಘ್ರತೆಗೆ ಹೆಸರಾಗಿ ಹುಲಿಯಾದೆ
ಎಲ್ಲರ ಮೇಲೆರಗಿ  ಕೊಲೆಗೈದೆ
ಪರಚುತ ಅರಚುತ ಕರಡಿಯಾದೆ
ಹಲಸು ಜೇನ ಮರೆತು ಹೊಲಸಾದೆ

ಕಚ್ಚಾಡುವ ಗುಣದಿ ನಾಯಿಯಾದೆ
ಪ್ರಾಮಾಣಿಕತೆಯ ಮರೆತುಹೋದೆ
ದ್ವೆಷದಿ ವಿಷದಿ ನಾಗರ ಹಾವಾದೆ
ತನ್ನವರ ಪರರನು ನಿತ್ಯವೂ ದ್ವೇಷಿಸಿದೆ

ಯಾವ ಪ್ರಾಣಿ ಕೊಲ್ಲದು ತನ್ನವರ
ಮಾನವನೊಬ್ಬ ಬಿಡನು ಎಲ್ಲರ
ಎಲ್ಲಾ ಪ್ರಾಣಿಗಳ ದುರ್ಗುಣ ಪಡೆದ
ಮಾನವತೆಯ ಸದ್ಗುಣ ತೊರೆದ

ಕೊಲ್ಲು ಕೊಚ್ಚು ಕುಟಿಲತೆ ತೊರೆಯೋಣ
ಸ್ನೇಹ ಸಹಬಾಳ್ವೆ ಸದ್ಗುಣ ಕಲಿಯೋಣ
ದ್ವೇಷ ವಿಷ ಮೋಸಗಳ ಬಿಡೋಣ
ಪ್ರೀತಿ ತುಂಬಿದ ಮಾನವರಾಗೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

27 February 2018

ಚಿಂತೆಯೇಕೆ ( ಹನಿಗವನ)

*ಚಿಂತೆಯೇಕೆ*

ಬೇಸರಿಸದಿರು ಗೆಳತಿ ನಗು ಈಗ
ಬಂದೆ ಬರುವನು ಶ್ಯಾಮ ಬೇಗ
ಮನದ ದುಗುಡ ದೂರ ಮಾಡು
ನಿನ್ನಿನಿಯ ಬರುವ ದಾರಿ ನೋಡು
ತೊರೆದು ಬಿಡು ಚಿಂತೆಯನೀಗ
ಕಂಗೊಳಿಸಲಿ ಮಂದಹಾಸದಿ ಮೊಗ
ನವಿಲುಗರಿ ಮುಡಿದವಮ ಬರುವ
ನಿನ್ನಾಸೆಗಳನೀಗಲೇ ಈಡೇರಿಸುವ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 February 2018

ನೆನಪುಗಳ ಪ್ರವಾಹ (ಕವನ)ಕನ್ನಡ ಸಾಹಿತ್ಯ ಲೋಕ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ಉತ್ತಮ ಕವನ ಎಂದು ಪುರಸ್ಕಾರವನ್ನು ಪಡೆದ ಕವನ



*ನೆನಪುಗಳ ಪ್ರವಾಹ*

ನೀನಿರದೆ ಈ ಜಗ ಸುಡುಗಾಡು
ಬೇಗ ಬಂದು ನೀ ನನ್ನ ಕೂಡು
ಬೇಡವೆಂದರು ದಾಂಗುಡಿಯಿಡುತಿವೆ
ಸುಡುವ ನೆನಪುಗಳ ಪ್ರವಾಹ

ಸತ್ತಂತೆ ಬದುಕಿಹೆನು ಬದುಕಿಸಲು ಬಾ
ಬರದ ನಾಡಲಿ  ವರತೆಯ ತಾ ನೀನು
ದಾರಿ ಕಾದು ಕಾದು ಬಸವಳಿದಿವೆ
ಕಣ್ಣ ಮುಚ್ಚಿದರೆ ನಿನ್ನ ಬಿಂಬ ಬರುತಿದೆ

ನೀನಿರದ ನನ್ನೆದೆಯ ಅರಮನೆ ಖಾಲಿ
ನನ್ನ ಕನಸಿಗೆ ಹಾಕಲಾರೆ ಬೇಲಿ
ಬಂದು ಅಲಂಕರಿಸು  ನನ್ನೆದೆಯ
ತಾಳಲಾರೆ ಮನದ ಬೇಗುದಿಯ

ಬದುಕುವೆ ನಿನ್ನ ನೆನಪಲಿ ನೋಡು
ತಡಮಾಡದೆ  ಅವಸರಿಸಿ ಬಂದು ಬಿಡು
ಕಳೆದ ಸವಿನೆನಪುಗಳ ನೆನೆಯೋಣ
ಗತವನೀಗ ವರ್ತಮಾನ ಮಾಡೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

25 February 2018

ಮಗು ನಗು (ಹನಿಗವನ)

*ಮಗು ನಗು*

ಪುಸ್ತಕವಿರಲಿ ಮಸ್ತಕವಿರಲಿ
ನಗುವೆಂದೆಂದಿಗೆ ಮಾಸದಿರಲಿ
ಪುಸ್ಕಕದಿಂದ ರಂಜೆನೆಯುಂಟು
ಮಸ್ತಕದಿ ಬುದ್ದಿಯು ಉಂಟು
ಪುಸ್ತಕ ಓದಿದ ನಮ್ಮ ಮಗು
ನಿಲ್ಲುವುದಿಲ್ಲ  ಅವನ ನಗು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಸ್ನೇಹಿತನ ನೋವು (ಕಿರುಗಥೆ)

ಕಿರುಗಥೆ

*ಸ್ನೇಹಿತನ ನೋವು*

"ರಮೇಶ್ ಈ ವರ್ಷ ಆದರೂ ನೀನು ಮದುವೆ ಆಗಬಹುದಾ?" ಎಂದು ಗೆಳೆಯ ಸತೀಶ್ ಕೇಳಿದಾಗ ಕೇವಲ ಮುಗಯಳುನಗೆಯ ಉತ್ತರ ನೀಡಿ ,ಎರಡನೇ ಪಿ.ಯು.ಸಿ ಉತ್ತರ ಪತ್ರಿಕೆ ಮೌಲ್ಯ ಮಾಪನ ಮಾಡಲು ಮುಂದಾದರೂ ಪುನಃ ಪ್ರಶ್ನೆಗಳ ಸುರಿಮಳೆ ಗರೆಯಲು ಸತೀಶ್ ಮುಂತಾದ." ನಿನ್ನ ನಾಲ್ಕು ತಂಗಿಯರ ಮದುವೆ ಮಾಡಿದೆಯಲ್ಲ ಈಗಾಗಲೆ ನಿನಗೆ ೪೦ ವರ್ಷ ದಾಟೊ  ದಾಟಿದೆ,ಜೊತೆಗೆ ಲೈನ್ ಕ್ಲಿಯರ್ ಅಗಿದೆ ಇನ್ನೂ ಯಾಕೆ ತಡ?" ಪ್ರಶ್ನೆ ಉತ್ತರ ಮುಗಿಯುವ ಮೊದಲೆ ಪ್ಯೂನ್  "ರಮೇಶ್ ಸರ್ ನಿಮ್ಮನ್ನು ಯಾರೋ ಹುಡುಕಿಕೊಂಡು ಬಂದಿದ್ದಾರೆ" ಎಂದ
ಅಜಾನುಭಾಹು ಗಿರಿಜಾ ಮೀಸೆ ಒರಟು ಮುಖ ನೋಡಿದ ಕೂಡಲೆ ಅವರು ಬಡ್ಡಿ ತಿಮ್ಮಪ್ಪ ಎಂದು ಗುರುತಿಸಿದ. ಹೊರಗೆ ಹೋಗಿ ತಿಮ್ಮಪ್ಪ ನ ಬಳಿ ರಮೇಶ್ ದೈನೇಸಿಯಾಗಿ ‌ಬೇಡಿಕೊಳ್ಳುವ ನೋಟ  ಸತೀಶ್ ನಿಗೆ ಆಶ್ಚರ್ಯಕರವಾಗಿ ಕಂಡಿತು ಕಾಲೇಜು ತರಗತಿಯಲ್ಲಿ ವಿದ್ಯಾರ್ಥಿಗಳ  ಮುಂದೆ ಸಿಂಹದಂತೆ ಗರ್ಜನೆ ಮಾಡಿ ಕಂಚಿನ ಕಂಠದಲ್ಲಿ ಪಾಠ ಗಳನ್ನು ಮಾಡುವ ರಮೇಶ್ ಇವರಾ? ಎಂದು ಮರುಗಲಾರಂಭಿಸಿದರು.
ಹಿಂತಿರುಗಿ ಬಂದ ರಮೇಶ್ ಮುಖದಲ್ಲಿ ದುಗುಡವಿದ್ದರೂ ತೋರ್ಪಡಿಸಿಕೊಳ್ಳದೇ "ಸತೀಶ್  ಟೀ ಕುಡಿಯಲು ಹೊರಗೆ ಹೋಗೋಣ ಬಾ " ಎಂದಾಗ ಸ್ನೇಹಿತನ ಕಷ್ಟ ಅರಿಯದ ನಾನು ಸುಮ್ಮನೆ ಮದುವೆಯ ಬಗ್ಗೆ ಅಸಂಬದ್ಧ ಪ್ರಶ್ನೆ ಕೇಳಿದೆನಲ್ಲ ಎಂದು ಸತೀಶ್ ಮನದಲ್ಲೇ ನೊಂದುಕೊಂಡನು .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

23 February 2018

ದಾರಾವಾಹಿಗಳ ದುಷ್ಪರಿಣಾಮಗಳು ( ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ನನ್ನ ಲೇಖನ)




ದಾರಾವಾಹಿಗಳ ದುಷ್ಪರಿಣಾಮಗಳು

ಮನುಷ್ಯ ನಿಗೆ ಅನ್ನ ನೀರು ವಸತಿಯಷ್ಟೆ ಮನರಂಜನೆಯು ಸಹ ಅಗತ್ಯ ,ಹಿಂದಿನ‌ ಕಾಲದಿಂದಲೂ ಮನರಂಜನೆ ವಿವಿಧ ಪ್ರಕಾರಗಳಲ್ಲಿ ಇತ್ತು ಸಂಗೀತ ,ಭರತನಾಟ್ಯ,ನಾಟಕ, ಯಕ್ಷಗಾನ ಕೋಲಾಟ,ಡೊಳ್ಳು ಕುಣಿತ ಅವುಗಳಿಂದ ನಮ್ಮ ಸಂಸ್ಕೃತಿ ಜ್ಞಾನ ಅರೋಗ್ಯ ಬೆಳವಣಿಗೆಗೆ ಜೊತೆಗೆ, ಸಮಯದ ಸದುಪಯೋಗ ಆಗುತ್ತಿತ್ತು ಬದಲಾದ ಕಾಲಘಟ್ಟದಲ್ಲಿ  ಚಲನಚಿತ್ರ, ದೂರದರ್ಶನ ಕ್ರಾಂತಿಯ ಪರಿಣಾಮವಾಗಿ ಮೊದಲು ಕೇವಲ ಸಾಮಾಜಿಕ, ಧಾರ್ಮಿಕ, ಪೌರಾಣಿಕ ಕಾರ್ಯಕ್ರಮ ಪ್ರಸಾರ ಮಾಡುತ್ತಿದ್ದರು.
ಬಬ್ರುವಾಹನ, ಮಯೂರ ಶ್ರೀನಿವಾಸ ಕಲ್ಯಾಣ, ಬಂಗಾರದ ಮನುಷ್ಯ ಮುಂತಾದ ಚಲನಚಿತ್ರ ನೋಡಿ ಬದಲಾದ ಎಷ್ಟೋ   ಕುಟುಂಬಗಳು. ವ್ಯಕ್ತಿಗಳು ಬದಲಾಗಿರುವುದನ್ನು ಕಂಡಿದ್ದೇವೆ .
ಜಾಗತೀಕರಣ. ಉದಾರೀಕರಣ,ಖಾಸಗೀಕರಣ ಯಾಂತ್ರೀಕರಣ ಮುಂತಾದ ಕರಣಗಳ ಪ್ರಭಾವದಿಂದಾಗಿ ಇಂದು ನಮ್ಮ ನಮ್ಮ ಮನೆಯ ದೂರದರ್ಶನದಲ್ಲಿ  ನೂರಾರು ವಾಹಿನಿಗಳು ದಾಂಗುಡಿ ಇಟ್ಟಿವೆ.
ಈ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಹುತೇಕ ಕಾರ್ಯಕ್ರಮ ಗಳು ನಮ್ಮ ಕೌಟುಂಬಿಕ ವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸುತ್ತಿವೆ.
ಈ ವಾಹಿನಿಗಳಲ್ಲಿ ಸಾಧ್ಯ?ರವಾಗುತ್ತಿರುವ ಬಹುತೇಕ ಧಾರವಾಹಿಗಳು  ನಮ್ಮನ್ನು ಹಿಂಸೆಗೆ ಪ್ರಚೋದಿಸುವ ಮತ್ತು ನೈತಿಕ ಅಧಃಪತನದೆಡೆಗೆ ಕೊಂಡೊಯ್ಯತ್ತಿವೆ ಎಂದರೆ ತಪ್ಪಾಗಲಾರದು.
ಇಂದಿನ ಎಲ್ಲಾ ಧಾರವಾಹಿಗಳಲ್ಲಿ ವಿಜೃಂಭಣೆಯಿಂದ ತೋರಿಸುತ್ತಿರುವುದು ಅತ್ತೆ ಸೊಸೆ ಜಗಳ, ಪತಿ ಪತ್ನಿಯರ ಅನೈತಿಕ ಸಂಬಂಧ, ಅವುಗಳ ಮುಚ್ಚಲು ಮಾಡುವ ಕೊಲೆ, ಅನ್ಯಾಯ, ಅಕ್ರಮ,ಇತ್ಯಾದಿ ಇತ್ಯಾದಿ ಇಂತಹ ಧಾರಾವಾಹಿ ನೋಡುವ ನಮ್ಮ ಮನಸು ಮತ್ತು ಮನಗಳು ಕಲುಷಿತ ಆಗದೇ ಇರಲು ಹೇಗೆ ಸಾಧ್ಯ?
ಇನ್ನೂ ಕೆಲವು ಧಾರಾವಾಹಿ ಗಳು ಅನ್ಯಾಯದ ಮಾರ್ಗದಲ್ಲಿ ಸಂಪಾದನೆ ಮಾಡಲು ಪ್ರೇರಣೆ ನೀಡುವ ದಿಡೀರ್ ಸಾಹುಕಾರರಾಗಲು ಅಕ್ರಮ ಮಾರ್ಗವನ್ನು ವಿಜೃಂಭಣೆಯಿಂದ ತೋರಿಸುವ ಮೂಲಕ ಜನರನ್ನು ಅನ್ಯಾಯದ ಕಡೆ ಪ್ರೇರೇಪಣೆ ಮಾಡುತ್ತವೆ..

ಹಾಗಾದರೆ ಇದಕ್ಕೆ ಪರಿಹಾರ ಏನು?

ಮೊದಲನೆಯದಾಗಿ ನಾವೆಲ್ಲರೂ ಇಂತಹ ಕ್ರೌರ್ಯ, ಹಿಂಸೆಯಿಂದ ಕೂಡಿದ ಧಾರಾವಾಹಿ ನೋಡುವುದು ನಿಲ್ಲಿಸಬೇಕು

ಧಾರಾವಹಿ ನೋಡಲೇಬೇಕಾದರೆ ಭಕ್ತಿ ಪ್ರಧಾನ ಜ್ಞಾನ ಪ್ರಧಾನ ಧಾರಾವಾಹಿಗಳನ್ನು ನೋಡಬಹುದು

ಧಾರವಾಹಿ ನಿರ್ಮಾಣ ಮಾಡುವವರು ನಮ್ಮ ಸಂಸ್ಕೃತಿ, ಪರಂಪರೆಯ ಬಗ್ಗೆ ತಿಳಿದು ಅವುಗಳ ಬೆಳವಣಿಗೆಗೆ ಪೂರಕವಾದ ಧಾರಾವಾಹಿ ನಿರ್ಮಾಣ ಮಾಡಬೇಕು.

ಧಾರವಾಹಿಗಳಲ್ಲಿ ಬಳಸು ಭಾಷೆ ಕುಟುಂಬದ ಎಲ್ಲರೂ ಕುಳಿತು‌ ಕೇಳುವಂತಿರಬೇಕು ಮತ್ತು ನಮ್ಮ ಭಾಷೆಯ ಬೆಳವಣಿಗೆಗೆ ಪೂರಕವಾಗಿರಬೇಕು.

ಒಟ್ಟಿನಲ್ಲಿ ಎಲ್ಲಾ ವಾಹಿನಿಯಲ್ಲಿ ಬರುವ ಬಹುತೇಕ ಧಾರಾವಾಹಿ ಗಳು ನಮ್ಮ ಮನ ಮನೆ ಒಡೆಯಲು‌ ಪೂರಕವಾಗಿವೆ .ಈಗ ನಾವು ಎಚ್ಚೆತ್ತು ಕೊಳ್ಳದಿದ್ದರೆ ಈಗಾಗಲೇ ವಿದೇಶಗಳಲ್ಲಿ ನಡೆವ ಅಕ್ರಮ ,ಕೊಲೆ ಹಿಂಸಾಚಾರ, ಮಕ್ಕಳ ಕೈಯಲ್ಲಿ ಗನ್ ,ಗಳಿಂದ ಅವಾಂತರ‌ ಲೈಂಗಿಕ ಸ್ವೇಚ್ಚಾಚಾರ,ಏಕಪಾಲಕ ಸಂಸಾರ ಮುಂತಾದ ಅನರ್ಥಗಳು ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರಲಿವೆ .ಇವನ್ನು ತಪ್ಪಿಸಲು ಮಾಧ್ಯಮದವರು ಜವಾಬ್ದಾರಿ ಪ್ರದರ್ಶನವನ್ನು ಮಾಡಲಿ ನಾವು ಎಚ್ಚೆತ್ತುಕೊಂಡು‌ ಸುಂದರ ಸಭ್ಯ ,ಮಾದರಿ ಸಮಾಜ ನಿರ್ಮಾಣ ಮಾಡಿ ಭಾರತವನ್ನು ಒಂದು ಮಾದರಿ ದೇಶವಾಗಿಸೋಣ

*ಸಿ.ಜಿ.ವೆಂಕಟೇಶ್ವರ*

ಶಿಕ್ಷಕರು.

ಹವ್ಯಾಸಿ ಬರಹಗಾರರು
*ಗೌರಿಬಿದನೂರು*

22 February 2018

ಏಳಿ ಎದ್ದೇಳಿ (ಕವನ)

*ಏಳಿ ಎದ್ದೇಳಿ*

ಮೂಡಣ ಬಾನಿಗೆ ನೇಸರ ಜಿಗಿದ
ಪಡುವಣ ದಿಕ್ಕಿಗೆ ಪಯಣ ನಡೆದ
ಲೋಕವನೆಲ್ಲ  ಬೆಳಗಲು ಬಂದ
ಏಳಿ ಎದ್ದೇಳಿ ಈಗಲೆ ಎದ್ದೇಳಿ


ತರುಲತೆಗಳಿಗೆ ಜೀವವ ತಂದ
ಗಿರಿಕಂದರವ ಬೆಳಗಲು ಬಂದ
ಅಂದಕಾರವ ನೀಗುವನೆಂದ
ಏಳಿ‌ಎದ್ದೇಳಿ ಈಗಲೆ ಎದ್ದೇಳಿ

ಶಕ್ತಿಯ ಮೂಲ ನಾನೇ ಎಂದ
ಭಕ್ತಿಯ ಪೂಜೆಗೆ ಫಲ ತಂದ
ಬಾನಾಡಿಗಳಿಗೆ ನೀಡಿದ ಆನಂದ
ಏಳಿ ಎದ್ದೇಳಿ ಈಗಲೆ ಎದ್ದೇಳಿ

ಜಗಕೆ ದೀಪವ ರವಿಯು ಹಚ್ಚಿದ
ತಪವ ಮಾಡಲು ಮುನಿಗೆ ಹೇಳಿದ
ಬೆಳಗಲು ಭುವಿಗೆ ಅಭಯ ನೀಡಿದ
ಏಳಿ‌ ಎದ್ದೇಳಿ‌ ಈಗಲೆ ಎದ್ದೇಳಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

21 February 2018

ನಮನ (ಕವನ)

*ನಮನ*

ಗೊಮ್ಮಟ ದೇವಗೆ ನಮನ
ಯುದ್ದವ ಗೆದ್ದವಗೆ  ನಮನ |ಪ|

ವೈರಾಗ್ಯ ಮೂರ್ತಿ ಹಬ್ಬಿದೆ
ಎಲ್ಲೆಡೆ ನಿನ್ನ ಕೀರುತಿ
ಭರತನ ಗೆದ್ದೆ ನೀನು
ಭಾರತದಾಚೆ ಬೆಳೆದೆ|೧|

ಕಾಮ ಕ್ರೋಧ ಮದಗಳ
ತ್ಯಜಿಸಿದ ನೀನು
ಅತಿಯಾಸೆ ಪಡುವವರಿಗೆ
ಮಾದರಿ ನೀನು|೨|

ಮನುಜನ ತೊರೆದು
ಬೆಟ್ಟದಿ ನೆಲೆಸಿದೆ
ಎಲ್ಲವ ತೊರೆದು
ಗೊಮ್ಮಟ ಮೂರುತಿಯಾದೆ|೩|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

20 February 2018

ಬರಿಮೈ ಪೋರ (ಹನಿಗವನ)


*ಬರಿಮೈಪೋರ*

ಬಾಲನ ಲೀಲೆ ಸುಂದರ
ಬಾಗಿದ ನಮ್ಮ ಚಂದಿರ
ಮಿನುಗಿವೆ ತಾರೆಗಳು
ಸುರಿದಿವೆ ಪುಷ್ಪಗಳು
ಆಟಿಕೆ ಗೊಂಬೆ ಬೇಕಿಲ್ಲ
ಮೋಡಗಳಿವೆ ನೋಡ ಲ್ಲಿ
ಬರಿಮೈ ಪೋರ ನಾನು
ಬೇಗನೆ ಬಾ ನೀನು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

19 February 2018

ಮಾರಿಹಬ್ಬ (ಕವನ)



*ಮಾರಿ ಹಬ್ಬ*


ಬರುತಲಿದೆ‌ ನಮ್ಮ ‌ಹಬ್ಬ
ಪ್ರಜಾಪ್ರಭುತ್ವದ ಹಬ್ಬ
ಸರ್ಕಾರ ರಚಿಸುವ ಹಬ್ಬ
ಚುನಾವಣಾ ಮಹಾಹಬ್ಬ

ಬರುವ ಚುನಾವಣೆ ಯುಗಾದಿ
ಇದರಲಿ ನಮಗೆ ಬೆಲ್ಲ ಹೆಚ್ಚಿರಲಿ
ಬೇವು ಕಡಿಮೆಯಿರಲಿ
ಅಂತವರ ಆಯ್ಕೆ ನಮ್ಮದಾಗಲಿ

ಬರುವ ಚುನಾವಣೆ ದೀಪಾವಳಿ
ಕತ್ತಲಿನಿಂದ ನಾವು ಮುಕ್ತವಾಗೋಣ
ಮತಿದೀವೀಗೆ ಬೆಳಗಿಸಿಕೊಳ್ಳೋಣ
ಯೋಗ್ಯರ ಆಯ್ಕೆ ಮಾಡೋಣ

ಮುಂದಿನ ಚುನಾವಣೆ ಹೋಳಿ
ಬಣ್ಣ ಬಣ್ಣದ ಕನಸ ಹೊಂದೋಣ
ಅದಕ್ಕೊಂದುವ ನಾಯಕರ ಆರಿಸೋಣ
ನಮ್ಮ ಬಣ್ಣದ ಬದುಕ ಕಟ್ಟೋಣ

ಮುಂಬರುವ ಚುನಾವಣೆ
ಸತ್ ನಾಯಕರಿಗೆ ಹಬ್ಬ
ಕೆಟ್ಟ ನಾಯಕರಿಗೆ ಆಗಲಿದೆ
ಮುಂದೈತೆ ಮಾರಿಹಬ್ಬ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

18 February 2018

ಯಾವಾಗ (ಕವನ)

*ಯಾವಾಗ*

ಅವಳೊಬ್ಬಳು ಮುಚ್ಚಿದಳು
ಒಂದು ಕಣ್ಣು
ಮಾದ್ಯಮ ದಲ್ಲಿ
ಅದೇ ಸುದ್ದಿ

ಲಕ್ಷಾಂತರ ಮಂದಿ ಬಾಳುತ್ತಿದ್ದಾರೆ
ಎರಡೂ ಕಣ್ಣು ಮುಚ್ಚಿ
ಮಾದ್ಯಮದವರಿಗೆ ಕಾಣಲೇ ಇಲ್ಲ
ಅದೇ ಅವರ ಬುದ್ದಿ

ಯುದ್ಧಗಳಲ್ಲಿ ಯೋಧರು
ಶಾಶ್ವತವಾಗಿ ಮುಚ್ಚುತ್ತಿದ್ದಾರೆ
ತಮ್ಮ ಕಣ್ಣುಗಳ
ಎಲ್ಲೂ ಇಲ್ಲ ಅದರ ಸದ್ದು

ಮನರಂಜನೆಯೇ ಇವರ
ಪ್ರಥಮ ಪ್ರಾಶಸ್ತ್ಯ
ಮಾನವೀಯತೆ
ಕೆಲವರಿಗೆ ಮಾತ್ರ ಸ್ವಂತ


ಟಿ ಆರ್ ಪಿ ಲೈಕುಗಳಿಂದ
ಹೊರಬರುವುದು ಯಾವಾಗ
ಮನರಂಜನೆಗಿಂತ  ಮಾನವತೆಗೆ
ಬೆಲೆಕೊಡುವುದು ಯಾವಾಗ?


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೨೬ (ಗೊತ್ತಿರಲಿಲ್ಲ)ಕವಿಬಳಗ ವಾಟ್ಸಪ್ ಗುಂಪಿನ ಗಜ಼ಲ್ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಗಜ಼ಲ್

*ಗಜ಼ಲ್ ೨೬*

ಮಂದಹಾಸ ಮುಖವಾಡದಿ ಕಾರ್ಕೋಟಕ ವಿಷವಿರುವುದು ಗೊತ್ತಿರಲಿಲ್ಲ
ತಿಳಿಗೊಳದ ಆಳದಲಿ ಬಗ್ಗಡದ ಕೆಸರಿರುವುದು ಗೊತ್ತಿರಲಿಲ್ಲ

ಕೈಕುಲಕುವ ಹಸ್ತವು  ಬಗಲಲ್ಲಿಟ್ಟುಕೊಂಡಿದೆ ಬಾಕು
ಒಲವ ನಗೆ ಬರೀ ಹಲ್ಲಿನಿಂದ ಬಂದಿರುವುದು ಗೊತ್ತಿರಲಿಲ್ಲ

ಆಡಂಬರ,ಸ್ವಾರ್ಥ,ತೋರ್ಪಡಿಕೆಯ ಪೂಜೆ ಪುರಸ್ಕಾರಗಳು
ದಿಟದ ಜನಾರ್ದನ ಸೇವೆಯ ಮರೆಯವರೆಂಬುದು ಗೊತ್ತಿರಲಿಲ್ಲ

ನೀರು ,ಜಲ,ನೆಲ ಗಾಳಿ ಮಣ್ಣಿನ  ಬಗ್ಗೆ ಭಾಷಣದ ಪ್ರವರ
ಕಾಸಿಗಾಗಿ ಭೂತಾಯಿಯ ಮಾರಿ ಕೊಳ್ಳವರೆಂದು ಗೊತ್ತಿರಲಿಲ್ಲ


ಸೀಜೀವಿಗೆ ಸರ್ವೇ ಜನಾಃ ಸುಖಿನೋಭವಂತು ಆಸೆ
ಸ್ವಾರ್ಥಿಗಳ ಕೂಟಗಳು ಜಗವ ಕೆಡಿಸುವರೆಂದು ಗೊತ್ತಿರಲಿಲ್ಲ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

17 February 2018

ಜೀವಿಸು(ಕವನ)

*ಜೀವಿಸು*

ಅವರ ಉಡುಪ ತುಂಡ
ಇವರದು ಉದ್ದ ಮತ್ಯಾರದೋ
ಮರ್ಯಾದೆಗೆಟ್ಟ ಬಟ್ಟೆ
ನಿನಗೇಕೆ ಅದರ ಉಸಾಬರಿ
ನಿನ್ನ ಬಟ್ಟೆ ನಿ‌ನ್ನದು .

ಅವರಿಗೆ ಬ್ರೆಡ್ ಆಹಾರ
ಇವರಿಗೆ ಮಾಂಸಾಹಾರ
ಸಸ್ಯಾಹಾರ ಮತ್ಯಾರಿಗೋ
ನಿನಗೇಕೆ ಬೇರೆಯವರ ಚಿಂತೆ
ನಿನ್ನ ಊಟ ನಿ‌ನ್ನದು .

ಒಬ್ಬನಿಗೆ  ಹಣ್ಣಿನ ಆಸೆ
ಮತ್ತೊಬ್ಬನಿಗೆ ಮಣ್ಣಿನಾಸೆ
ಹೊನ್ನು ವಜ್ರದ ಆಸೆ ಇನ್ನೊಬ್ಬಗೆ
ಯೋಚಿಸುವುದ ನಿಲ್ಲಿಸು
ಜೀವೀಸಲು ಆರಂಬಿಸು .


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


ಗಜ಼ಲ್ ೨೪ ( ನಿನದೆ ನೆನಪು)ನನ್ನ ಕವಿಬಳಗ ಗಜ಼ಲ್ ಸ್ಪರ್ಧೆಯಲ್ಲಿ *ಗಮನಾರ್ಹ ಉಲ್ಲೇಖ* ಪುರಸ್ಕೃತ ಗಜ಼ಲ್


*ಗಜ಼ಲ್ ೨೪*

ತಂಗಾಳಿಯು  ಸುಳಿದಾಗ ನಿನದೆ ನೆನಪು
ಬೆಳದಿಂಗಳ ಹಾಲ್ಚೆಲ್ಲಿದಾಗ ನಿನದೆ ನೆನಪು

ತರುಲತೆಗಳು ಮರವ ತಬ್ಬಿವೆ ಮುದದಿ
ಸರಸದ ಸರಿಗಮ ನೆನದಾಗ ನಿನದೆ ನೆನಪು

ಗೊರವಂಕ ಕೋಗಿಲೆಗಳ ಇಂಪಾದ ಗಾನ
ಶಿವಶಿವೆಯರ ನಾಟ್ಯ ಕಂಡಾಗ ನಿನದೆ ನೆನಪು

ಧಮ್ಮಿಕ್ಕಿ ಹರಿಯುತಿದೆ ಹೃದಯದಿ ಪ್ರೇಮನದಿ
ಜುಳು ಜುಳು ಜಲದ ಸದ್ದು ಕೇಳಿದಾಗ ನಿನದೆ ನೆನಪು

ಸೀಜೀವಿಯು ತಡೆದರೂ ಕಾಲವು ನಿಲುತಿಲ್ಲ
ಬೆಳಗು ಬೈಯ್ಗು ಸರಿದಾಗ   ನಿನದೆ ನೆನಪು

*ಸಿ .ಜಿ.ವೆಂಕಟೇಶ್ವರ*
*ಗೌರಿಬಿದನೂರು*



16 February 2018

*ಶಕುಂತಲಾ ಆಲಾಪ*(ಭಾವಗೀತೆ)


*ಶಕುಂತಲಾ ಆಲಾಪ*(ಭಾವಗೀತೆ)
ಯಾರಿಗೆ ಹೇಳಲಿ ನನ್ನಯ ನೋವ
ಹೇಗೆ ಜೀವಿಸಲಿ ಹೊತ್ತು ಈ ಜೀವ|ಪ|
ಯಾರ ತಪ್ಪಿಗೆ ಯಾರಿಗೆ ಶಿಕ್ಷೆ?
ನನ್ನ ಬಸಿರ ಕಂದಗೆಲ್ಲಿ ಶ್ರೀರಕ್ಷೆ?
ಶಾಪ ಯಾರಿಗೆ ನನಗೋ ?
ಭುವಿ ಕಾಣದ ಕಂದಗೋ?|೧|
ಹೇಗೆ ಉತ್ತರಿಸಲಿ ಈ ಸಮಾಜಕೆ
ಯಾರು ಅಪ್ಪನೆಂಬ ಪ್ರಶ್ನೆಗೆ
ದಿಕ್ಕಾರವಿರಲಿ ನನ್ನ ಮೈಮರೆವಿಗೆ
ನೆನಪು ಮರಳಲಿ ದುಷ್ಯಂತಭೂಪಗೆ|೨|
ಛತ್ರಿ ಚಾಮರದಡಿ ಇರಬೇಕಾದ ನಾನು
ಅರಮನೆಯಾಗಿದೆ ಈ ಭುವಿ ಭಾನು
ನಮ್ಮ ಈ ಕಷ್ಟಗಳಿಗೆ ಕೊನೆಯೆಂದು
ದಯೆತೋರು ಬಾ ಹರಿಯೆ ನೀಬಂದು.|೩|
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

15 February 2018

*ಬದುಕಲು ಕಲಿಯೋಣ* (ಸಂಗ್ರಹ ಲೇಖನ)

*ಬದುಕಲು ಕಲಿಯೋಣ* (ಸಂಗ್ರಹ ಲೇಖನ)

ಉಡುಪಾಯಿತು ತುಂಡು
ಎಲ್ಲಿ ಬರಬೇಕು ಮಾನ ಮರ್ಯಾದೆ?

ರೊಟ್ಟಿಯಾಯಿತು ಬ್ರೆಡ್
ಎಲ್ಲಿ ಬರಬೇಕು ತಾಕತ್ತು?

ಹೂವಾಯಿತು ಪ್ಲಾಸ್ಟಿಕ್
ಎಲ್ಲಿ ಬರಬೇಕು ಸುಗಂಧ?

ಮುಖವಾಯಿತು ಮೇಕಪ್
ಎಲ್ಲಿಂದ ಬರಬೇಕು ರೂಪ?

ಶಿಕ್ಷಣವಾಯಿತು ಟ್ಯೂಷನ್
ಇನ್ನೆಲ್ಲಿಂದ ಬರಬೇಕು ವಿದ್ಯೆ?

ಭೋಜನವಾಯಿತು ಹೋಟೆಲ್
ಇನ್ನೆಲ್ಲಿಂದ ಬರಬೇಕು ಆರೋಗ್ಯ?

ಮನರಂಜನೆಯಾಯಿತು ಕೇಬಲ್
ಇನ್ನೆಲ್ಲಿಂದ ಬರಬೇಕು ಸಂಸ್ಕಾರ?

ಮನುಷ್ಯನಾಗಿದ್ದಾನೆ ಕಾಸಿನ ಆಸೆಬುರುಕ
ಇನ್ನೆಲ್ಲಿಂದ ಬರಬೇಕು ದಯಾ ಅನುಕಂಪ?

ವ್ಯವಹಾರಗಳಾಗಿವೆ ಹೈ ಫೈ
ಇನ್ನೆಲಿಂದ ಬರಬೇಕು ನ್ಯಾಯ ನೀತಿ ಧರ್ಮ?

ಭಕ್ತಿ ಮಾಡುವನು ಆಗಿದ್ದಾನೆ ಸ್ವಾರ್ಥಿ
ಇನ್ನೆಲಿಂದ ಬರಬೇಕು ಭಗವಂತ?

ಸಂಭಂಧಿಗಳು ಇದ್ದಾರೆ ವಾಟ್ಸಾಪ್ ನಲ್ಲಿ
ಇನ್ನೆಲ್ಲಿಂದ ಬರಬೇಕು ಪರಸ್ವರ ಭೇಟಿ ಮಾಡಲು

ಪರಿಸ್ಥಿತಿಗಳು ಕಾಲಗಳು ಬದಲಾಗುತ್ತಿರುವೆ
ಯಾರನ್ನೂ ಅಪಮಾನ ಮಾಡಬೇಡ

ಹಕ್ಕಿಯು ಇರುವೆಯನ್ನು ತಿನ್ನುತ್ತದೆ
ಸತ್ತ ಮೇಲೆ ಹಕ್ಕಿಯನ್ನು ಇರುವೆ ತಿನ್ನುತ್ತದೆ

ಒಂದು ಮರದಿಂದ ಸಾವಿರಾರು ಬೆಂಕಿಕಡ್ಡಿಗಳನ್ನು ತಯಾರಿಸಬಹುದು
ಒಂದು ಬೆಂಕಿಕಡ್ಡಿ ಸಾವಿರಾರು ಮರಗಳನ್ನು ಸುಟ್ಟು ಭಸ್ಮ ಮಾಡಬಹುದು

ಒಂದೇ ಒಂದು ಭಾರಿ ಮಂದಿರಕ್ಕೆ ಹೋದ ಕಲ್ಲು ಭಗವಂತನಾಗಿಬಿಡುತ್ತದೆ
ಆದರೆ ಅನೇಕ ಭಾರಿ ಹೋದರು ನಾವು ಭಗವಂತನ ಹತ್ತಿರ ಹೋಗಲು ಸಾಧ್ಯವಿಲ್ಲ

ಉಪವಾಸ ಮಾಡುವುದರಿಂದ ಖುಷಿಯಾಗುವ ಹಾಗಿದ್ದರೆ
ನಿರ್ಗತಿಕ ದಿನಾ ಖುಷಿಯಾಗಿರಬೇಕಿತ್ತು

ಉಪವಾಸದಿಂದ ನಮ್ಮ ಆಚಾರ ವಿಚಾರಗಳು ಬದಲಾಗಬೇಕು
ಲೋಕ ಕಲ್ಯಾಣಕ್ಕಾಗಿ ನಾವು ಬದುಕಬೇಕು

ಇದು ನೀ ತಿಳಿಯೋ ಮನುಜ
ವರ್ತಿಸಬೇಡ ಮೃಗಗಳಂತೆ ಸಹಜ

________________
🤐ಸಾವು ಖಚಿತ ಆದರೆ ಸಾವು ಬಂದಾಗ ಯಾರಿಗೂ  ಸಾಯಬೇಕಂತ ಅನ್ನಿಸೋದಿ ಲ್ಲ .
 🆚ಊಟ ಎಲ್ಲರಿಗೂ ಬೇಕು ಆದರೆ ಯಾರೂ ವ್ಯವಸಾಯ ಮಾಡಬೇಕನ್ನುವುದಿಲ್ಲ
🆚‌‌‌‌‌‌‌‌ನೀರು ಎಲ್ಲರಿಗೂ ಬೇಕು ಆದರೆ ಅರಣ್ಯವನ್ನು ರಕ್ಷಿಸಬೇಕು ಅಂತ ಯಾರು ಪ್ರಯತ್ನಿಸುವುದಿಲ್ಲ
🆚ಪಾಲು ಎಲ್ಲರಿಗೂ ಬೇಕು ಆದರೆ ಅದನ್ನು ಪಾಲಿಸಬೇಕೆನ್ನುವ ಛಲ ಯಾರಿಗೂ ಇಲ್ಲ.
🆚ನೆರಳು ಎಲ್ಲರಿಗೂ ಬೇಕು ಆದರೆ ಮರಗಳನ್ನು ರಕ್ಷಿಸಬೇಕೆನ್ನುವ ಹಂಬಲ ಯಾರಿಗೂ ಇಲ್ಲ
🆚ಹೆಂಡತಿ ಎಲ್ಲರಿಗು ಬೇಕು ಆದರೆ ಹೆಣ್ಣು ಮಕ್ಕಳು ಯಾರಿಗು ಬೇಡ 

*ಸಂಗ್ರಹ: ಸಿ.ಜಿ.ವೆಂಕಟೇಶ್ವರ*
*ಕೃಪೆ: ವಾಟ್ಸಪ್*

14 February 2018

ಹೊಸ ತನದ ಹರಿಕಾರ ವಿಶ್ವೇಶ್ವರ ಭಟ್ ( ಲೇಖನ)

*ಹೊಸ ತನದ ಹರಿಕಾರ ಶ್ರೀ ವಿಶ್ವೇಶ್ವರ ಭಟ್*

 ಪತ್ರಿಕಾ  ಸಂಪಾದಕರಿಗೆ ಒಂದು ಖದರ್ ,ಇಮೇಜ್ ಸೃಷ್ಟಿ ಮಾಡಿ ಆನೆ ನಡೆದದ್ದೇ ದಾರಿ‌ ಎನ್ನುವಂತೆ ನಮ್ಮ ಮದ್ಯದಲ್ಲಿ ಬದುಕುತ್ತಿರುವ ಅಕ್ಷರ ಪರಿಚಾರಕರು, ಪದಗಳ ಜೊತೆ ಆಟವಾಡಿ ವಿಭಿನ್ನವಾದ ಅರ್ಥವನ್ನು ನೀಡುವ ಪತ್ರಿಕಾ ಹಣೆಬರಹ (ಹೆಡ್ಲೈನ್) ಬರೆಯುವ ಪದಗಾರುಡಿಗರು, ನನ್ನಂತಹ ಲಕ್ಷಾಂತರ ಬರಹಗಾರರ ಸ್ಪೂರ್ತಿಯ ಸೆಲೆ .ಕೋಟ್ಯಾಂತರ ಓದುಗರ ಮನಸ್ಸನ್ನು ಕದ್ದವರೇ ಸ್ಟಾರ್ ಸಂಪಾದಕರಾದ  ವಿಶ್ವೇಶ್ವರ ಭಟ್ ರವರು  . ಇಂದು ಬಹುತೇಕ ಸಂಪಾದಕರು ವಿಶ್ವೇಶ್ವರ ಭಟ್ ರವರನ್ನು ಅನುಸರಿಸಿದರೆ ಇನ್ನೂ ಕೆಲವರು ಅವರ ಬೆಳೆವಳಿಗೆ ಕಂಡು ಒಳಗೊಳಗೆ ಹೊಟ್ಟೆ ಕಿಚ್ಚು ಪಡುತ್ತಿರುವುದು ಸುಳ್ಳಲ್ಲ

*ಸರಳ ಸಜ್ಜನ*

ಎಲ್ಲರೊಂದಿಗೆ ಸರಳವಾಗಿ ಬೆರೆಯುವ ಮಕ್ಕಳ ಜೊತೆ ಮಕ್ಕಳಂತೆ ಕವಿಗಳ ಜೊತೆ ಕವಿಯಂತೆ ಕ್ರೀಡಾ ಪಟುಗಳ ಜೊತೆ ಕ್ರೀಡಾಪಟುವಾಗಿ ,ಬಾಡಿಬಿಲ್ಡರ್ ಜೊತೆ ಬಾಡಿಬಿಲ್ಡರ್ ಆಗಿ (ಪ್ರತಿದಿನ ಜಿಮ್ ಮಾಡಿ ಈಗ ಪಿಟ್ಆಗಿದ್ದಾರೆ)  ಅವರು ಬೆರೆವ ಪರಿ ನನ್ನ ಬೆರಗುಗೊಳಿಸಿದೆ ಇದಕ್ಕೆ ಉದಾಹರಣೆ ನನ್ನ ಮೊದಲ ಕವನ ಸಂಕಲನ ಭಾವದೀಪ್ತಿ ಬಿಡುಗಡೆ ಸಮಾರಂಭದಲ್ಲಿ ನನ್ನಂತಹ ಸಾಮಾನ್ಯ ನ ಜೊತೆ ಎಷ್ಟೋ ವರ್ಷಗಳ ಪರಿಚಯ ಇರುವವರಂತೆ ಆತ್ಮೀಯ ವಾಗಿ ಮಾತನಾಡಿಸಿದ ಪರಿ ನನ್ನ ಜೀವನದ ಮರೆಯಲಾಗದ ಕ್ಷಣ .ನನ್ನ ಮೊದಲ ಕವನ ಸಂಕಲನ ಇಂತಹ ಡೌನ್ ಟು ಅರ್ಥ್ ಸಂಪಾದಕರು ಬಿಡುಗಡೆಗೊಳಿಸಿ ನಮಗೆ ಹಿತವಚನ ನೀಡಿದ್ದು ನಮ್ಮ ಪುಣ್ಯ.

*ಹೊಸತನದ ಹರಿಕಾರ*

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಸಂಪಾದಕರಾಗಿ ಕೆಲಸ ಮಾಡುವಾಗ ಆಗಲೇ   ಗಗನಕ್ಕೇರಿದ್ದ  ಪತ್ರಿಕೆಯ ಬೆಲೆ ಇಳಿಸಲು ಪ್ರಕಾಶಕರ ಮನವೊಲಿಸಿ ಒಂದು ರೂ ಗೆ ಒಂದು ಪತ್ರಿಕೆ ಸಿಗುವಂತೆ ಮಾಡಿ ಕನ್ನಡದ  ಹೊಸ ಓದುಗರ ಸೇರ್ಪಡೆ ಮಾಡಿದ ಕೀರ್ತಿ ಭಟ್ ಸರ್ ರವರಿಗೆ ಸಲ್ಲಬೇಕು. ಕೇವಲ ಭಾನುವಾರ ಮಾತ್ರ ವಿಶೇಷ ಪುರವಣಿ ನೋಡಿದ ಓದುಗರಿಗೆ ಪ್ರತಿದಿನ ಒಂದು ವಿಶೇಷವಾದ ಪುರವಣಿ ನೀಡಿದರು, ಜೊತೆಗೆ ಕೆಲವೊಮ್ಮೆ ಪುರವಣಿ ಪುಸ್ತಕಗಳ ರೂಪದಲ್ಲಿ ಪ್ರಕಟವಾಗಿವೆ ಮತ್ತು ಓದುಗರಿಗೆ ಹಬ್ಬವಾಗಿವೆ . ಪತ್ರಿಕೆಯಲ್ಲಿ ಎಲ್ಲಾ ಪುಟಗಳ ವರ್ಣಮಯ ಮಾಡಿ ನೀಡಿದ್ದು ಮತ್ತೊಂದು ಹೊಸತನ .ಬಸ್‌ಗಳ ಪ್ರಯಾಣ ಮಾಡುವಾಗ ಪುಟ ತಿರುಗಿಸಿ ಓದಲು ಅನುಕೂಲವಾಗುವಂತೆ ಪತ್ರಿಕೆಯಲ್ಲಿ ವಿನ್ಯಾಸವನ್ನು ಬದಲಿಸಿದ ಕೀರ್ತಿ ಭಟ್ ರವರದು .ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡ ಪತ್ರಿಕೋದ್ಯಮದ ಹೊಸ ಪ್ರಯತ್ನ ಗಂಟೆಗೊಂದು ಪತ್ರಿಕೆಯ‌ ಆವೃತ್ತಿಯನ್ನು *ವಿಶ್ವ ವಾಣಿ ಟೈಮ್ಲಿ* ಎಂಬ ಗಂಟೆಗೊಮ್ಮೆ ಮೊಬೈಲ್ ಪತ್ರಿಕೆ ನೀಡುತ್ತಿದ್ದಾರೆ.


*ದೇಶ ಕೋಶಗಳ ಹುಚ್ಚು*

ದೇಶ ಸುತ್ತು ಕೋಶ ಓದು
ಎಂಬುದನ್ನು ಭಟ್ ಸರ್ ಬಹಳ ಉತ್ತಮವಾಗಿ ಅಳವಡಿಸಿ ಕೊಂಡಿದ್ದಾರೆ ಈಗಾಗಲೇ ಐವತ್ತಕ್ಕೂ ಹೆಚ್ಚು ದೇಶಗಳ ಸುತ್ತಿರುವ ಇವರು ಅಲ್ಲಿಂದಲೇ ಆ ದೇಶದ ಸಾಕ್ಷಾತ್ ನೇರ ಪ್ರಸಾರದಂತಹ ವರದಿ ನೀಡುವ ಅವರ ಪ್ರತಿಭೆಗೆ ಅವರೇ ಸಾಟಿ‌ ಪ್ರತ್ಯಕ್ಷವಾಗಿ ನಾವೇ ಅಲ್ಲಿ ಹೋಗಿ ಸ್ಥಳಗಳಲ್ಲಿ ಸಂಚರಿಸುವ ಅನುಭವ ನೀಡುವರು.
ಇವರ ಪ್ರತಿಭೆ ಗುರುತಿಸಿ ನಮ್ಮ ದೇಶದ ರಾಷ್ಟಪತಿ ಮತ್ತು ಪ್ರದಾನ ಮಂತ್ರಿ ಗಳು ವಿದೇಶೀ ಪ್ರವಾಸ ಕೈಗೊಂಡಾಗ ಇರುವ ವಿಶೇಷವಾಗಿ ಆಹ್ವಾನಿತ ಪತ್ರಕರ್ತರ ತಂಡದಲ್ಲಿ ಇವರು ಆಯ್ಕೆ ಯಾಗಿ ಪ್ರವಾಸ ಕೈಗೊಂಡು ಅದರ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ ಇದು ಕನ್ನಡಿಗರಾದ ನಮಗೆ ಹೆಮ್ಮೆಯ ಸಂಗತಿ.

*ಪ್ರತಿಭೆಗೆ ಬೆಲೆ*

ಇವರು ಕೇವಲ ಅವರು ಬೆಳೆಯದೇ ಪ್ರತಿಭಾವಂತ ರಿಗೆ ಬರೆಯಲು ಪ್ರೋತ್ಸಾಹ ನೀಡಿ ಗೌರವಿಸಲಾಯಿತು. ಅದರ ಪರಿಣಾಮವಾಗಿ ಶ್ರೀವತ್ಸ ಜೋಶಿ. ಪ್ರತಾಪ್ ಸಿಂಹ, ಷಡಕ್ಷರಿ ,ಮುಂತಾದವರು ಬೆಳೆಯಲು ಕಾರಣರು. ಈಗಲೂ ಅವರ ಗರಡಿಯಲ್ಲಿ ಹಲ ಹಿರಿ ಕಿರಿ ಲೇಖಕರು ಬರೆಯುತ್ತಾ ಬೆಳೆಯುತ್ತ ಇದ್ದಾರೆ.

*ತಂತ್ರಜ್ಞಾನದ ಬಳಕೆ*

ಹತ್ತು ವರ್ಷಗಳ ಹಿಂದೆ ಇ ಮೇಲ್ ಹೊಂದಿದ್ದ ಏಕೈಕ ಸಂಪಾದಕರಾಗಿ ಹೆಗ್ಗಳಿಕೆ ಪಡೆದಿದ್ದ ಭಟ್ ರವರು ಇಂದು ಸಾಮಾಜಿಕ ಮಾದ್ಯಮಗಳಾದ ಫೇಸ್ಬುಕ್ ,ಟ್ವಿಟರ್ ಮುಂತಾದ ಜಾಲತಾಣಗಳ ಮೂಲಕ ಸಕ್ರೀಯ ರಾಗಿ ಓದುಗರಿಗೆ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ ಒಂದು ರಾಜ್ಯದ ಮುಖ್ಮಿಗಿಂತ ಅವರ ಟ್ವಿಟರ್ ಹಿಂಬಾಲಕರ ಸಂಖ್ಯೆ ಹೆಚ್ಚಾಗಿರುವುದೇ ಇದಕ್ಕೆ ಸಾಕ್ಷಿ .

*ಓದುಗ ಮತ್ತು ಬರಹಗಾರ*

ಉತ್ತಮ ಕೇಳುಗ ಉತ್ತಮ ಮಾತುಗಾರನಾಗುತ್ತಾನೆ ಅದೇ ರೀತಿ ಉತ್ತಮ ಬರಹಗಾರನಾಗಲು‌‌ ಓದುಗನಾಗುವುದು ಅವಶ್ಯ ಈ ನಿಟ್ಟಿನಲ್ಲಿ ಭಟ್ ಸರ್ ಮೂರು ಹೆಜ್ಜೆ ಮುಂದೆ. ಅವರಿಗೆ ಯಾವಾಗ ಸಮಯ ಸಿಗುವುದೋ ವಾರದಲ್ಲಿ ಕನಿಷ್ಠ ಮೂರ್ನಾಲ್ಕು ಪುಸ್ತಕ ಓದಿ ಅವುಗಳ ಸಾರವನ ಓದುಗ ಪ್ರಭುಗಳಿಗೆ ಒಪ್ಪಿಸಿ ನನ್ನಂತವರಲ್ಲಿ ಓದುವ ಹುಚ್ಚು ಹಿಡಿಸಿಬಿಡುತ್ತಾರೆ ತನ್ಮೂಲಕ ನಮ್ಮನ್ನೂ ಬರೆಯಲು ಪ್ರೇರೇಪಿಸುತ್ತಾರೆ . ಅವರ ಬರವಣಿಗೆ ಓದಲು ಆರಂಬಿಸಿದರೆ ಸೂಜಿಗಲ್ಲಿನಂತೆ ಆಕರ್ಷಣೆ ಮಾಡಿ ಓದಿ ಮುಗಿಸಲು ಓದಿಸಿಕೊಂಡು ಹೋಗುತ್ತದೆ. ಇವರ ಹಲವಾರು ಪುಸ್ತಕಗಳು ಮರುಮುದ್ರಣ ಕಂಡು ಬಿಕರಿಯಾಗುತ್ತಿರುವುದೇ ಅವರ ಬರವಣಿಗೆಯ ಸತ್ವಕ್ಕೆ ಉದಾಹರಣೆ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


ಗಜ಼ಲ್ ೨೫ (ಹೇಳು ಶಿವ) ನನ್ನ ಬ್ಲಾಗ್ ನ 250 ನೇ ಪೋಸ್ಟ್ ಸಂಭ್ರಮ

*ಗಜ಼ಲ್ ೨೫*

ಅಜ್ಞಾನಿಗಳಿಗೆ ಎಂದು ಬುದ್ದಿ ನೀಡುವೆ ಹೇಳು ಶಿವ
ಅಧರ್ಮಿಯರಿಗೆ ಎಂದು ಬುದ್ದಿಕಲಿಸುವೆ ಹೇಳು ಶಿವ?

ಹಸುಳೆ ಮುದುಕಿಯರ ಬಿಡರು ದುಷ್ಟ ದೂರ್ತ ಕೀಚಕರು
ಅತ್ಯಾಚಾರ ಅನಾಚಾರಗಳ ಎಂದು ನಿಲಿಸುವೆ ಹೇಳು ಶಿವ?

ಮಣ್ಣು ನೀರು ಗಾಳಿ ಮನಗಳು ಮಲಿನವಾಗುತಿವೆ
ಉಳಿಸಿ ಬೆಳೆಸುವ ಮನವ ಎಂದು ಕೊಡುವೆ ಹೇಳು ಶಿವ?

ಕಾನನ ಖಗ ಮೃಗಗಳ ಮಾರಣ ಹೋಮ ನಿರಂತರವಾಗಿದೆ
ಸಹಬಾಳ್ವೆ ಜೀವನವನು  ಎಂದು ಕಲಿಸುವೆ ಹೇಳು ಶಿವ?

ಅನ್ನವಿಲ್ಲದೆ ಕೆಲವರು, ಅತಿಯಾಗಿ ಕೆಲವರ ಮರಣ ನಿರಂತರ
ಸೀಜೀವಿಯ ಪ್ರಭುದ್ದತೆ ಸಮಾಜ ಎಂದು ನೀಡುವೆ ಹೇಳು ಶಿವ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

13 February 2018

ಇಳಿದು ಬಾ (ಹನಿಗವನ)

ಇಳಿದು ಬಾ*

ಇಳಿದು ಬಾ ಓ ಮಳೆಯೆ
ತಂಪನೀಯು ಈ ಇಳೆಗೆ
ನೀ ಬಂದರೆ ನನಗಾನಂದ
ನನ್ನ  ಮೈ ಮನಕೆ ಆಹ್ಲಾದ
ನೆನೆಯುವೆ ಮಳೆಯಲ್ಲಿ
ಕಳೆದೋಗಲಿ ಕೊಳೆಯಿಲ್ಲಿ
ಮಳೆಹನಿಗಳು ನನ್ನುಸಿರು
ಮಾಡಲಿ ಭುವಿ ಹಸಿರು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಶಿವನಾಮಾವಳಿ ( ಕನ್ನಡ ಸಾಹಿತ್ಯ ಲೋಕ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ಉತ್ತಮ ಭಕ್ತಿ ಗೀತೆ ಪುರಸ್ಕಾರ ಪಡೆದ ಗೀತೆ)


*ಶಿವನಾಮಾವಳಿ*

ಶಿವನೊಲಿದರೆ ನಮಗೆ ಭಯವಿಲ್ಲ
ಶಿವ ನಾಮ ಭಜಿಸೋಣ ನಾವೆಲ್ಲ|ಪ|

ಶಂಕರ ಶಶಿಧರ  ಎನ್ನೋಣ
ಗೌರಿಯ ಪತಿಯನು ಭಜಿಸೋಣ
ಗಣೇಶನ ಪಿತನ ನನೆಯೋಣ
ಜಾಗರಣೆಯಲಿ ಪಾಲ್ಗೊಳ್ಳೋಣ|೧|

 ಹರ ನಮ್ಮನು ಕಾಯುವನು
ನಮ್ಮೆಲ್ಲರನು ಪೊರೆಯುವನು
ದುಷ್ಟರ ಶಿವನು ಸಂಹರಿಸುವನು
ಗಂಗೆಯ ಭುವಿಗೆ ಕಳಿಸಿಹನು|೨|

ನೀಡು   ಮುಕ್ಕಣ್ಣ ಅಭಯವ
ನಿನ್ನೊಲುಮೆಯಿದ್ದರೆ ಇಲ್ಲ ಭಯ
ನೀನಿದ್ದರೆ ಜಗವು ಸುಂದರವು
ನಮ್ಮಯ ಜೀವನ ಪಾವನವು|೩|


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

12 February 2018

ಹನಿಗವನ

*ಹನಿಗವನ*

*ಕಂಬನಿ ನಿಲಿಸು*

ಕಂಬನಿ ನಿಲಿಸು ನನ್ನಮ್ಮ
ನೋಯಿಸೆ ನಿನ್ನ ನಿಜವಮ್ಮ
ಹೇಳಿದ ಮಾತ ಕೇಳುವೆನು
ಸ್ನಾನವನೀಗಲೆ ಮಾಡುವೆನು
ಬಟ್ಟೆಗಳ ಧರಿಸಿ ನಲಿಯುವೆನು
ಮೊದಲು ಅಳುವನು ನಿಲ್ಲಿಸು
ಆನಂದಾಶೃಗಳ ಈಗಲೆ ಸುರಿಸು


*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

11 February 2018

ಹನಿಗವನಗಳು ( ವಿಶ್ವ ಮದುವೆ ದಿನದ ವಿಶೇಷ)



*ಹನಿಗವನಗಳು*

*೧*

ಅಭಿಶೇಕ್ ಮತ್ತು ಪ್ರಿಯ
ಪ್ರತಿದಿನ ತಪ್ಪದೇ ಶಿವನ
ದೇವಾಲಯ ದರ್ಶನ
ಮಾಡುತ್ತಿದ್ದರು
ಕಾರಣ
ನಮ್ಮ ಶಿವ
ಅಭಿಶೇಕ ಪ್ರಿಯ

*೨*

*ಹೇಗೆ?*
(ಇಂದು ವಿಶ್ವ ಮದುವೆ ದಿನ ಅದರ ಪ್ರಯುಕ್ತ)

ಹರಿಹರರೆ ನಿಮಗಿದೋ
ದೊಡ್ದ ನಮಸ್ಕಾರ
ಶಿವನೇ ತಿಳಿಸು ನನಗೆ
ಹೇಗೆ ಬಾಳಿಸಿದೆ
ಇಬ್ಬರು ಹೆಂಡಿರ
ಹರಿಯೆ ಅರುಯೆನಗೆ
ಹೇಗೆ ನಿಬಾಯಿಸಿದೆ
ಹದಿನಾರು ಸಾವಿರ

*೩*

*ಶಿವನಪಾದ*

ಇಂದು ವಿಶ್ವ ಗುಂಡಿಗೆ ಬಿದ್ದದಿನ
ಗುಂಡಿಗೆ ಇರುವ ಗಂಡಂದಿರು
ಗುಂಡಿಯನು ಎದುರಿಸಿ
ಬಾಳುತ್ತಿದ್ದಾರೆ .
ಗುಂಡಿಗೆ ದುರ್ಬಲವಾದ
ಗಂಡಂದಿರು ಗುಂಡಿನ
ಮೊರೆ ಹೋಗಿದ್ದಾರೆ.
ಗುಂಡಿಗೆ ಅತಿದುರ್ಬಲವಿರುವ
ಗಂಡಂದಿರು ಶಿವನಪಾದ
ಸೇರಿದ್ದಾರೆ .


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೨೩ (ಬಹಳವಿತ್ತು)



*ಗಜ಼ಲ್*

ಬೊಗಸೆ ಕಂಗಳಲಿ ಬತ್ತದ ಆಸೆಗಳು ಬಹಳವಿತ್ತು
ತುಂಟು ವಯಸಲಿ ತೀರದ ಚೇಷ್ಟೆಗಳು ಬಹಳವಿತ್ತು

ಮರಕೋತಿ ಅಡುತ್ತಿತ್ತು ಹುಚ್ಚುಕೋಡಿ ಮನಸು
ಕಟ್ಟಿದ ಮೇಲೆ ಬಿದ್ದ ಮರಳ ಮನೆಗಳು ಬಹಳವಿತ್ತು

ಹಗಲುಗನಸುಗಳಿಗೆ ಎಂದಿಗೂ  ಬರವಿರಲಿಲ್ಲ
ಇಲ್ಲದಿರುವುದು ಬೇಕೆಂಬ ಕನಸುಗಳು ಬಹಳವಿತ್ತು

ಈಗ ಆಡಲು ಯಾರಿಗೂ ಸಮಯವಿಲ್ಲ ಮನಸಿಲ್ಲ
ಆಗ ಚಿನ್ನಿ ದಾಂಡು ಲಗೋರಿ ಆಟಗಳು ಬಹಳವಿತ್ತು

ಸೀಜೀವಿಯ ಬಾಲ್ಯದ ಲೀಲೆಗಳೆಲ್ಲವೂ ಮಧುರ ಆಮರ
ಮೊಗೆದು ಕುಡಿದರೂ ಸಾಲದ ನೆನಪುಗಳು ಬಹಳವಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

10 February 2018

ಮನವಿ ( ಕಿರುಗವನ)

ಹನಿಗವನ

ಮನವಿ

ರಾಜಕೀಯ ಪಕ್ಷಗಳ
ಜಟಾಪಟಿ‌ ಆರಂಭವಾಗಿದೆ
ನಮ್ಮ ‌ಸರ್ಕಾರದಲ್ಲಿ
ಕಡಿಮೆ ಕೊಲೆಯಾಗಿವೆ
ನಿಮ್ಮ ಸರ್ಕಾರದಲ್ಲಿ
ಹೆಚ್ಚು ಕೊಲೆಯಾಗಿವೆ
ನಮ್ಮ ಸರ್ಕಾರದಲ್ಲಿ
ಕಡಿಮೆ ಸುಲಿಗೆಯಿತ್ತು
ನಿಮ್ಮ ಸರ್ಕಾರದಲ್ಲಿ
ಹೆಚ್ಚು ಸುಲಿಗೆಯಿತ್ತು
ನಮ್ಮನ್ನೆ ಮುಂದೆಯೂ
ಆಯ್ಕೆ ಮಾಡಿ
ನಿಮಗೆ ಗೊತ್ತಾಗದಂತೆ
ಭ್ರಷ್ಟಾಚಾರ ಮಾಡುವೆವು
ಕಡಿಮೆ ಸುಲಿಯುತ್ತೇವೆ
 ಕಡಿಮೆ ಲೂಟಿ ಮಡುವೆವು
ನಮ್ಮನ್ನು ನಂಬಿ
ನಮಗೊಂದು ಅವಕಾಶ ಕೊಡಿ

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

09 February 2018

*ಕೌಟುಂಬಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತಿರುವ ಸಾಮಾಜಿಕ ಜಾಲತಾಣಗಳು* ಕವಿಬಳಗ ವಾಟ್ಸಪ್ ಬಳಗದ ಸ್ಪರ್ಧೆಯಲ್ಲಿ ತೃತೀಯ ಪುರಸ್ಕಾರ ಪಡೆದ ಲೇಖನ



 *ಕೌಟುಂಬಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತಿರುವ  ಸಾಮಾಜಿಕ ಜಾಲತಾಣಗಳು*


ಆಧುನಿಕತೆಯು ಮುಂದುವರಿದಂತೆ ನಮ್ಮ ಸಾಮಾಜಿಕ ಸಂಬಂಧ ಗಳು ಸಂಕೀರ್ಣವಾಗಿ ನಾಟಕೀಯತೆ,ಕೃತಕತೆ, ಸಮಯಸಾಧಕತನ, ಸ್ವಾರ್ಥ ಪರತೆ ಇತ್ಯಾದಿಗಳ ವಿಜೃಂಭಣೆಯನ್ನು ಈಗ ಎಲ್ಲೆಲ್ಲೂ ಹೆಚ್ಚು ಕಾಣಬಹುದಾಗಿದೆ.
ಇದರ ಜೊತೆಗೆ ಸಾಮಾಜಿಕ ಜಾಲತಾಣಗಳು ಸೇರಿಕೊಂಡು ಕೌಟುಂಬಿಕ ವ್ಯವಸ್ಥೆಯ ಬೇರುಗಳನ್ನು ಅಲುಗಾಡಿಸಲಾರಂಬಿಸಿವೆ ಎಂದರೆ ತಪ್ಪಾಗಲಾರದು.
ಭಾರತದ ಇತ್ತೀಚಿನ ಸರ್ವೆಯ ಪ್ರಕಾರ ದೇಶದ ನಾಲ್ಕರಲ್ಲಿ ಮೂರು ಜನರು ತಮ್ಮ ಸಂಗಾತಿಯು ತಮ್ಮ ಬಳಿಯಿದ್ದರೂ ಈ ಸಾಮಾಜಿಕ ಜಾಲತಾಣಗಳಾದ ಪೇಸ್ ಬುಕ್ ,ವಾಟ್ಸಪ್, ಟ್ವಿಟರ್, ಇನಸ್ಟಾಗ್ರಾಮ್, ಮುಂತಾದ ವುಗಳಲ್ಲಿ ಮುಳುಗಿರುತ್ತಾರಂತೆ. ಇದರಿಂದಾಗಿ ದಂಪತಿಗಳಲ್ಲಿ ಅನ್ಯೋನ್ಯತೆ ಕಡಿಮೆ ಆಗಿ ಇವು ಕೆಲವೊಮ್ಮೆ ವಿಚ್ಛೇದನದ ಹಾದಿ ಹಿಡಿದ ಉದಾಹರಣೆಗೆ ಕಡಿಮೆಇಲ್ಲ .
ಇನ್ನೂ ಕೆಲವು ಕುಟುಂಬಗಳಲ್ಲಿ ಯಾರೋ  ಕಿಡಿಗೇಡಿಗಳು ಮಾಡಿದ ವಾಟ್ಸಪ್ ಮೆಸೇಜ್ ,ಅಥವಾ ಪೇಸ್ ಬುಕ್ ಪ್ರೆಂಡ್ ರಿಕ್ವೆಸ್ಟ್ ಗಳಿಂದ ಕುಟುಂಬದಲ್ಲಿ ಅಲ್ಲೋಲ ಕಲ್ಲೋಲಗಳಾಗಿ ನೆಮ್ಮದಿ ಕೆಡಿಸಿರುವ ಪ್ರಸಂಗಗಳನ್ನು ಆಗಾಗ್ಗೆ ನಾವು ನೋಡುತ್ತಿರುತ್ತೇವೆ . ಇನ್ನೂ ಹದಿಹರೆಯದ ಮಕ್ಕಳು ಮನೆಯಲ್ಲಿದ್ರೆ ಅವರಿಗೆ ಒಂದು ಪೇಸ್ಬುಕ್ ಅಕೌಂಟ್, ಗೂಗಲ್ ಅಕೌಂಟ್ ಇಲ್ಲದಿದ್ದರೆ ಅವರ ವಯಸ್ಸಿಗೆ ಅಪಮಾನ ಎಂದು ಬಗೆದ ಯುವಜನತೆ ಅಪ್ಪ ಅಮ್ಮನ ಜೊತೆ ಕಾಲ ಕಳೆಯದೇ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಮಗ್ನರಾಗಿರುತ್ತಾರೆ ಕ್ರಮೇಣವಾಗಿ ಇಂತಹವರು ತಂದೆ ತಾಯಿಗಳು, ಬಂಧುಗಳು, ಬಳಗ ಮುಂತಾದ ಸಾಮಾಜಿಕ ಸಂಬಂಧಗಳನ್ನು ತೊರೆದು ಜೀವಿಸಲು ಮುಂದಾಗುವರು .
ಇವರಿಗೆ ಕಣ್ಣಮುಂದಿರುವ ರಕ್ತ ಸಂಬಂಧ ಗಳಿಗಿಂತ ನೆಟಿಜನ್ ಸಂಬಂಧಗಳ ಕಡೆಗೆ ಹೆಚ್ಚು ಗಮನ ಈ ರೀತಿಯ ಸಂಬಂಧಗಳ ಬಗ್ಗೆ ಹಾಸ್ಯ ಸಾಹಿತಿಗಳಾದ ಗುಂಡಿ ರಾಜರು *ವಾಟ್ಸಪ್ ನಲ್ಲಿ ಪರಿಚಿತರಾಗಿ ,ಪೇಸ್ ಬುಕ್ ನಲ್ಲಿ ಎಂಗೆಜ್ ಆದ ಜೋಡಿಗೆ ಮಕ್ಕಳನ್ನು ಈ ಮೇಲ್ ನಲ್ಲಿ ಡೌನ್‌ಲೋಡ್ ಮಾಡಿಕೊಂಡು ನೆಟ್ಟಪ್ಪ. ಗೂಗಲಮ್ಮ ಎಂದು ಹೆಸರಿಟ್ಟರಂತೆ* ಎಂದು ವ್ಯಂಗವಾಗಿ ಹೇಳಿದರೂ ಇದರಲ್ಲಿ ಬಹುತೇಕ ಅಂಶಗಳು ವಾಸ್ತವಕ್ಕೆ ಹತ್ತಿರ ಎಂಬ ಕಹಿಸತ್ಯ ಒಪ್ಪಿಕೊಳ್ಳದೇ ವಿಧಿಯಿಲ್ಲ .

*ಅತಿಯಾದ ಸಾಮಾಜಿಕ ಜಾಲತಾಣದ ಬಳಕೆಯ ದುಷ್ಪರಿಣಾಮಗಳು*

೧  ಕುಟುಂಬಕ್ಕೆ ಗುಣಮಟ್ಟದ ಸಮಯ ಕೊಡಲು ವಿಫಲವಾಗಿ ಕುಟುಂಬದ ವಿಘಟನೆ ಗೆ ನಾಂದಿಯಾಗುವುದು .

೨  ಮಕ್ಕಳಿಗೆ ಸುಲಭವಾಗಿ ಈ ಜಾಲತಾಣಗಳು ಹಿಂಸೆ ,ಲೈಂಗಿಕತೆಯ ಕೂಡಿದ ವಿಡಿಯೋ ಪೋಟೋ ನೋಡುವ ಪರಿಣಾಮವಾಗಿ ಮಕ್ಕಳಲ್ಲಿ ಹಿಂಸಾತ್ಮಕ ಮನೋಭಾವ ಬೆಳೆದು ತಂದೆ ತಾಯಿಗಳ ಮಾತು ಕೇಳದಿರಬಹುದು

೩ ಅತಿಯಾದ ಸಮಾಜಿಕ ಮಾಧ್ಯಮಗಳ ಬಳಕೆಯು ದಂಪತಿಗಳಲ್ಲಿ ಪರಸ್ಪರ ಅನುಮಾನ ಮನೋಭಾವ ಮೂಡಲು ಕಾರಣವಾಗಬಹುದು

*ಈ ಸಮಸ್ಯೆ ಯಿಂದ ಹೊರಬರುವುದು ಹೇಗೆ?*

೧ ಸ್ವಯ ನಿಯಂತ್ರಣ ವಿಧಿಸಿಕೊಂಡು ಅಗತ್ಯವಿದ್ದಾಗ ಮಾತ್ರ ಸಾಮಾಜಿಕ ಜಾಲತಾಣಗಳ ಬಳಕೆ ಮಾಡಬೇಕು

೨ ಮಕ್ಕಳಿಗೆ ಪೋಷಕರ ಮಾರ್ಗದರ್ಶನ ಮಾಡಿ ಕಡಿಮಡಯ ಜಾಲತಾಣಗಳ ಬಳಕೆ ಮಾಡಲು ತಿಳಿವಳಿಕೆ ನೀಡುವುದು

೩  ಜೀವವಿಲ್ಲದ ಪೋನ್ ,ಟಿವಿ ಮುಂತಾದ ವಸ್ತುಗಳಿಗಿಂತ   ಜೀವವಿರುವ ವ್ಯಕ್ತಿಗಳ ಜೊತೆ ಸಂವಹನ ಮಾಡಿ  ಸಂಬಂಧಗಳ ಬೆಳೆಸಿ ಉಳಿಸಬೇಕು.

೪ ದೂರವಿರುವ ಫೇಸ್ಬುಕ್ ಗೆಳೆಯನಿಗಿಂತ ಮನೆಯ ಅಪ್ಪ ಅಮ್ಮ ಮೊದಲು ಎಂದು ತಿಳಿದು ಬಾಳಬೇಕು

ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ಯಾಂತ್ರಿಕ ಯುಗದಲ್ಲಿ ಸಂಬಂಧಗಳು ಸಹ ಯಾಂತ್ರಿಕ ವಾಗುತ್ತಿದ್ದು ನಾವು ಈಗ ಎಚ್ಚೆತ್ತುಕೊಳ್ಳದಿದ್ದರೆ
ಈ ಸಾಮಾಜಿಕ ಜಾಲತಾಣಗಳಿಂದ ನಮ್ಮ ಕೌಟುಂಬಿಕ ವ್ಯವಸ್ಥೆ ಶಿಥಿಲಗೊಂಡು ವಿದೇಶಗಳಲ್ಲಿ ಹೆಚ್ಚಾಗಿರುವ ಸಿಂಗಲ್ ಕಪಲ್. ಲಿವ್ ಇನ್ ರಿಲೇಶನ್ಸ್, ಡೇಟಿಂಗ್ ಕಾರುಬಾರು ನಮ್ಮಲ್ಲಿ ಹೆಚ್ಚಾಗಬಹುದು ಆದ್ದರಿಂದ ನಾವೆಲ್ಲರೂ ಪ್ರಜ್ಞಾವಂತರಾಗಿ ನಿಯಮಿತವಾಗಿ ಈ ಜಾಲತಾಣಗಳ ಬಳಸಿ ಕೊಂಡು ನಮ್ಮ ಕುಟುಂಬ.ಮದುವೆ ಜಾತ್ರೆ, ಸಂಬಂಧ ಮುಂತಾದ ಸಾಮಾಜಿಕ ಸಂಸ್ಥೆಗಳ ಉಳಿಸಿ ಬೆಳಿಸಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಣೆ ಮಾಡೋಣ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

08 February 2018

ಹಿತವರಾರು? (ಕವನ) ಹನಿ ಹನಿ ಇಬ್ಬನಿ ವಾಟ್ಸಪ್ ಬಳಗದಲ್ಲಿ ಉತ್ತಮ ಎಂದು ಪುರಸ್ಕಾರ ಪಡೆದ ಕವನ

*ಹಿತವರಾರು?*

ನಿಮ್ಮನುಧ್ದರಿಸುವೆವು
ನಿಮ್ಮ ಬಾಳು‌ ಹಸನುಗೊಳಿಸುವೆವು
ಸ್ವರ್ಗ ತೊರುವೆವು
ಸಮಾನತೆ ಸಾರುವೆವು ಎಂದರು.


ತಮ್ಮನ್ನುಧ್ದರಿಸಿಕೊಂಡರು
ಅವರ ಮಕ್ಕಳ ಮೊಮ್ಮಕ್ಕಳ ಪೊರೆದರು
ನಮ್ಮ ಬಾಳ ನರಕ ಮಾಡಿದರು
ನಮ್ಮ ನಮ್ಮಲ್ಲೇ ತಂದಿಟ್ಟರು.


ನಾವು ಅಧಿಕಾರಕ್ಜೆ ಬಂದರೆ
ಕಡಿಮೆ ತಿನ್ನುವೆವು
ಕಡಿಮೆ ಸುಲಿಯುವೆವು
ಕಡಿಮೆ ಮೋಸಗೊಳಿಸುವೆವು ಎಂದರು.


ಅವರು ಸರಿ ಇಲ್ಲ
ನಾವೇ ಸಾಚಾಗಳೆಂದರು
ಇವರ ಜಾತಕ ಅವರು ಬಿಚ್ಚಿದರು
ಕೆಸರೆರಚಾಟ ಇನ್ನೂ ನಿಂತಿಲ್ಲ .


ನಾವೀಗ ಯಾರ ನಂಬಲಿ?
ಇವರನ್ನು ಹೇಗೆ ಸಹಿಸಲಿ ?
ಇದ್ದ ಮೂವರೊಳಗೆ ಹಿತವರಾರು?
ನಮ್ಮ ಕಾಪಾಡುವವರು ಯಾರು?


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

07 February 2018

ಎದ್ದೇಳು ( ಕವನ)


*ಎದ್ದೇಳು*

ನೀನೇ ನನ್ನ ಮನದರಸಿ
ನೀ ನನ್ನ ಕಲ್ಪನಾಸುಂದರಿ
ಹದಿನೆಂಟರ ಪೋರಿ
ಅನುಪಮ ಸುಂದರಿ


ಈಗಲೇ ನಿನ್ನ ವರಿಸುವೆ
ದಿನವೂ ಆರಾದಿಸುವೆ
ಬಳೆಗಳ ತೊಡಿಸುವೆ
ಕರಿಮಣಿ ಈಗಲೇ ತರುವೆ


ಬಂದು ನನ್ನ ಸೇರು
ಕಟ್ಟುವೆ ನಿನಗೆ ತೇರು
ನಿನಗೆ ನೀನೆ ಸಾಟಿ
ನನಗೆ ನೀನೆ ಕೋಟಿ


ಎಂದು ಹೊಗಳುತ್ತಿದ್ದೆ
ಅಮ್ಮ ಕೂಗಿದಾಗ ಎದ್ದೆ
ಬೈಯ್ದಳು ಅಮ್ಮ ಎದ್ದೇಳು
ಗಂಟೆ ಆಗಿದೆ ಆಗಲೇ ಏಳು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

06 February 2018

ಫರ್ದ್ ಗಳು ( ಬೆಳಕು ಮತ್ತು ಕತ್ತಲು) ಕವಿಬಳಗ ವಾಟ್ಸಪ್ ತಂಡದಿಂದ ಬಹಮಾನಿತ ಫರ್ದ್ಗಳು




*ಫರ್ದ್ ಗಳು*

ಹೃದಯ ಕತ್ತಲಾಗಿದೆ ನೀನಿರದೆ ಇಂದು
ಬರೀ  ದೀಪ ಹಚ್ಚಲು ಬರುವೆ ಎಂದು
**
ತಮವು ಕವಿದಿದೆ ನನ್ನ ಜೀವನದಿ
ನಿಂತಂತಾಗಿದೆ ಬಾಳಿನ ಜೀವನದಿ
**
ಕತ್ತಲಾದ ನನ್ನ ಬಾಳು ಮುದುಡಿತ್ತು
ಜಗ್ ಎಂದು ಬೆಳಗಿತು ನೀ ನಗಲು
**
ಎಲ್ಲವೂ ಸುಂದರ ಯುದ್ದ ಪ್ರೀತಿಯಲ್ಲಿ
ಬೆಳಕ ನೀಡಿ  ಬಾ ಕತ್ತಲಾದ  ಬಾಳಿನಲ್ಲಿ
**
ಎಲ್ಲಿದೆ ತೆಗೆದುಕೊಂಡು ಬಾ ದೀಪ
ಹುಡಕಬೇಕಿದೆ ಕತ್ತಲ ಕರಾಳ ಕೂಪ
**

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 February 2018

ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ನಮ್ಮ ಪಾತ್ರ (ಲೇಖನ)

ಲೇಖನ

ನಮ್ಮ ಸಂಸ್ಕೃತಿಯನ್ನು  ಉಳಿಸುವಲ್ಲಿ ನಮ್ಮ ಪಾತ್ರ


ಇತ್ತೀಚಿಗೆ ಯಾರನ್ನು ಕೇಳಿದರೂ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಬೇಕೆಂದು ಉದ್ದುದ್ದಾ ಭಾಷಣ ಮಾಡುವರು ವಿಪರ್ಯಾಸ ವೆಂದರೆ ಅಂತಹ ಬಹುತೇಕ ವ್ಯಕ್ತಿಗಳು ಸಣ್ಣ ಪುಟ್ಟದ್ದಕ್ಹೆಲ್ಲಾ ಸಿಟ್ಟಾಗಿ ರಾದ್ದಾಂತ ಮಾಡಿ ಮನೆಯಲ್ಲಿ ಅಪ್ಪ ಅಮ್ಮನನ್ನು ಅನಾಥಾಶ್ರಮಕ್ಕೆ ಕಳಿಸಿರುತ್ತಾರೆ.

ಹಾಗಾದರೆ ಸಂಸ್ಕೃತಿ ಎಂದರೇನು ?

ನಾವು ಹೇಗೆ ಇರುವೆವೋ ಅದೇ ನಮ್ಮ ಸಂಸ್ಕೃತಿ .
ಸಂಸ್ಕೃತಿ ಎಂಬುದು ಒಂದು ಜೀವನ ಕ್ರಮವಾಗಿದ್ದು ಅದು ಸಮಾಜದಲ್ಲಿ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾವಣೆ ಅಗುತ್ತಿರುತ್ತದೆ.
ಇ.ಬಿ.ಟೇಲರ್ ರವರ ಪ್ರಕಾರ *ಸಮಾಜಲ್ಲಿ ಸಂಕೀರ್ಣವಾದ ಜ್ಞಾನ ,ಕಲೆ ನಿಯಮ,ಮತ್ತು ಸಂಪ್ರದಾಯವನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹಸ್ತಾಂತರ ಮಾಡುವುದೇ ಸಂಸ್ಕೃತಿ*

*ಸಂಸ್ಕೃತಿಯ ವಿಧಗಳು*

ಮುಖ್ಯವಾಗಿ ಸಂಸ್ಕೃತಿ ಯನ್ನು ಎರಡು ವಿಧಗಳಲ್ಲಿ ವಿಂಗಡಿಸಬಹುದು ಅವೆಂದರೆ

*೧ ಭೌತಿಕ ಸಂಸ್ಕೃತಿ* ಇದರಲ್ಲಿ ನಮ್ಮ ಕಣ್ಣಿಗೆ ಕಾಣುವ ಮನೆ ದೇವಾಲಯ, ನಮ್ಮ ವೇಷಭೂಷಣ, ರಸ್ತೆ ಗಳು ಸ್ಮಾರಕಗಳು ಮುಂತಾದವುಗಳ ಸಂಗಮವಾಗಿದೆ

*೨ಅಭೌತಿಕ ಸಂಸ್ಕೃತಿ* ಯಲ್ಲಿ ಕಣ್ಣಿಗೆ ಕಾಣದ ನಮ್ಮ ಸಂಪ್ರದಾಯ, ಧಾರ್ಮಿಕ ಆಚರಣೆಗಳು,ಕಲೆ ಭಾಷೆ ಮುಂತಾದವುಗಳ ಒಳಗೊಂಡಿದೆ .

*ಸಂಸ್ಕೃತಿ ಯ ಲಕ್ಷಣಗಳು*

೧ ಸಂಸ್ಕೃತಿ ಯು ಒಂದು ಅಗೋಚರ ಮತ್ತು ಗೋಚರ ಜೀವನ ಕ್ರಮವಾಗಿದೆ
೨ ಸಂಸ್ಕೃತಿಯು ಸಾಮಾಜಿಕ ಜೀವನದಲ್ಲಿ ಕ್ರಮೇಣವಾಗಿ ಬೆಳವಣಿಗೆಯ ಹೊಂದುವುದು.
೩ ಸಂಸ್ಕೃತಿ ಕೊಡು ಕೊಳ್ಳುವಿಕೆಯ ಮೂಲಕ ಬೆಳೆಯುವುದು
೪ ಸಹಬಾಳ್ವೆ ಗೆ ಸಂಸ್ಕೃತಿ ಪೂರಕವಾಗಿದೆ
೫ ಸಂಸ್ಕೃತಿ ನಿರಂತರವಾಗಿ ಬೆಳೆಯುತ್ತದೆ.
೬ ಸಂಸ್ಕೃತಿ ವೈವಿಧ್ಯಮಯ ವಾಗಿರುತ್ತವೆ

*ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ನಮ್ಮ ಪಾತ್ರ*

೧ ಜ್ಞಾನ ದ ಆಗರವಾದ ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವ ಮೊದಲು ನಾವು ಆ ಸಂಸ್ಕೃತಿ ಯನ್ನು ಅನುಸರಿಸಿ ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗಿ ನಡೆಯಬೇಕು.

೨ಬರೀ ಮೌಲ್ಯ ಗಳ ಬಗ್ಗೆ ಮಾತಾನಾಡದೇ ಕೆಲ ಮೌಲ್ಯ ಗಳನ್ನು ಅಳವಡಿಸಿಕೊಂಡು ನಮ್ಮ ಮಕ್ಕಳಿಗೆ ಅವುಗಳ ಕಲಿಸಬೇಕು ಉದಾಹರಣೆಗೆ ಸತ್ಯ, ದಯೆ, ಸಹಕಾರ ಇತ್ಯಾದಿ...

೩ನಮ್ಮ ವರ್ತನೆಯ ಬದಲಾವಣೆಗೆ ಸಂಸ್ಕೃತಿ ಒಂದು ಉತ್ತಮ ಸಾಧನ ಉತ್ತಮ ಸಂಸ್ಕೃತಿ ಉಳ್ಳ ವ್ಯಕ್ತಿಗಳ ವರ್ತನೆಯು ಉತ್ತಮವಾಗಿರುತ್ತದೆ ಅವರನ್ನು ಅನುಸರಿಸುವ ಮೂಲಕ ಸಂಸ್ಕೃತಿ ಬೆಳೆಸಬಹುದು.

೪ ನಮ್ಮ ಜಾತ್ಯ, ಹಬ್ಬ ಹರಿದಿನ ಮದುವೆ ಸಂಪ್ರದಾಯವನ್ನು ನಾವು ಆಚರಿಸಿ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡಬೇಕು.

೫ ನಮ್ಮ ಭಾಷೆ, ಕಲೆ ,ಹಾಡು,ಜನಪದ ಅರ್ಥ ಪೂರ್ಣ ಸಂಪ್ರದಾಯವನ್ನು ನಾವು ಬೆಳೆಸಿ ಉಳಿಸಬೇಕಿದೆ

ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ಸಂಸ್ಕೃತಿ ಇಂದು ಪಾಶ್ಚಾತ್ಯ ಸಂಸ್ಕೃತಿ ಯಿಂದ ನಲುಗಿದೆ ದೇಶದ ಬಹುತೇಕ ಭಾಗಗಳಲ್ಲಿ ಆಧುನೀಕರಣ , ಪಾಶ್ಚಾತ್ಯೀಕರಣ ,ಜಾಗತೀಕರಣದ ಪರಿಣಾಮವಾಗಿ ನಮ್ಮ ಸಂಸ್ಕೃತಿ ಹಿಂಬೀಳುವಿಕೆ (cultural lag) ಕಂಡು ಬರುತ್ತದೆ ಇದನ್ನು ಹೋಗಲಾಡಿಸಲು ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಲು ನಾವೆಲ್ಲರೂ ಪಣ ತೊಡೋಣ .


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

04 February 2018

ನವಯುಗದಲ್ಲಿ ತಾಯಿಯ ಪಾತ್ರ (ಲೇಖನ)

*ನವಯುಗದಲ್ಲಿ ತಾಯಿಯ ಪಾತ್ರ*


ಮಾತೃ ದೇವೋಭವ ...ಎಂದು ಆರಂಭವಾಗುವ ಶ್ಲೋಕದ ಆದಿಯಾಗಿ ಮಾತೆಗೆ ಜಗತ್ತಿನಲ್ಲೇ ಒಂದು ಪೂಜ್ಯ ಸ್ಥಾನ ನೀಡಿದೆ .ಯಾವುದೇ ವ್ಯಕ್ತಿಯ ಸಂಸ್ಕಾರ. ಸಂಘಟನೆ, ಶಿಸ್ತು, ಸಂಯಮ,ಮುಂತಾದ ಸದ್ಗುಣ ಗಳ ಹಿಂದೆ ತಾಯಿಯ ಛಾಪು ಇದ್ದೇ ಇರುತ್ತದೆ.
ಹಿಂದೆ ಮುಂದೆ ಎಂದೆಂದಿಗೂ ತಾಯಿಯ ಪಾತ್ರವನ್ನು ತಾಯಿಯೇ ನಿರ್ವಹಿಸಲು ಸಾದ್ಯ ಹಿಂದಿನ ಕಾಲದ ತಾಯಂದಿರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ತಮ್ಮ ಮಕ್ಕಳ ಬೆಳವಣಿಗೆಗೆ ಕಾರಣಕರ್ತರಾಗಿರುವುದನ್ನು  ಕಂಡಿದ್ದೇವೆ ಇದಕ್ಕೆ ಕೆಲವು ಉದಾಹರಣೆ ನೀಡುವುದಾದರೆ .ಶಿವಾಜಿಯ ತಾಯಿ ಜೀಜಾಬಾಯಿ.ನೆಹರೂ ರವರ ತಾಯಿ ಸ್ವರೂಪರಾಣಿ ಈಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ.
ಬದಲಾದ ಕಾಲಘಟ್ಟದಲ್ಲಿ ಇಪ್ಪತ್ತೊಂದನೇ ಶತಮಾನದ, ತಂತ್ರಜ್ಞಾನ ಯುಗದಲ್ಲಿ ಮಾತೆಯರ ಪಾತ್ರ ಮತ್ತು ಅವರ ಜವಾಬ್ದಾರಿಗಳು ವಿವಿಧ ಆಯಾಮಗಳಲ್ಲಿ ವಿಸ್ತಾರಗೊಂಡಿವೆ ಎಂದರೆ ತಪ್ಪಲ್ಲ

*ನವಯುಗದಲ್ಲಿ ತಾಯಿಯ ಪಾತ್ರ*

ನವಯುಗದಲ್ಲಿ ತಾಯಿಯ ಪಾತ್ರವನ್ನು ಈ ಕೆಳಗಿನಂತೆ ವಿವರಿಸಬಹುದು

*1 ಮಕ್ಕಳ ಪಾಲನೆ*

ಹಿಂದಿನ ಕಾಲದಂತೆ ಕೇವಕ ಮಕ್ಕಳ ಡೈಪರ್ ಬದಲಾಯಿಸಿ, ಅವರ ತರಗತಿಯ ಪೋಷಕರ ಸಭೆಯಲ್ಲಿ ಪಾಲ್ಗೊಂಡರೆ ಬಹುತೇಕ ಕೆಲಸ ಮುಗಿದಂತಾಗುತ್ತಿತ್ತು ಆದರೆ ಇಂದಿನ ಆಧುನಿಕ ತಾಯಂದಿರು ತಮ್ಮ ಮಕ್ಕಳ ಸ್ನೇಹಿತರ ಹುಟ್ಟು ಹಬ್ಬದ ಆಚರೆಯಿಂದ ಹಿಡಿದು ಹೊಸದಾಗಿ ಮಾರುಕಟ್ಟೆಗೆ ಬಂದಿರುವ ಬೈಸಿಕಲ್, ಆಟಿಕೆಗಳು, ಕಂಪ್ಯೂಟರ್ ಗೇಮ್,ಮುಂತಾದವುಗಳ ಬಗ್ಗೆ ಅಪ್ಡೇಟ್ ಆಗಿ ಮಕ್ಕಳಿಗೆ ಮಗುವಾಗಿ ಹೊಂದಿಕೊಂಡು ಸಂಧರ್ಭಕ್ಕೆ ತಕ್ಕಂತೆ ಮಾರ್ಗದರ್ಶಕಳಾಗಿ ಮಕ್ಕಳ ಪಾಲನೆ ಮಾಡಬೇಕಾಗಿದೆ .

*2 ಆರೋಗ್ಯದ ಬಗ್ಗೆ ಕಾಳಜಿ*

ಜಾಗತೀಕರಣ ಪರಿಣಾಮವಾಗಿ ಇಂದು ನಮ್ಮ ಮನೆ ಬಾಗಿಲಿಗೆ ಪಿಜಾ ,ಬರ್ಗರ್,ಮಾಕ್ಡೊನಾಲ್ಡ್ ಲಗ್ಗೆ ಇಟ್ಟಿವೆ ಈ ಜಂಕ್ ಪುಡ್ಗಳಿಂದ ನಮ ಮಕ್ಕಳ ಅರೋಗ್ಯ ಕಾಪಾಡುವುದು ನವಯುಗದ ತಾಯಂದಿರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಮೊದಲು ತಾಯಂದಿರು ತಮ್ಮ ಆರೋಗ್ಯ ಕಾಪಾಡಿಕೊಂಡು ಮಕ್ಕಳ ಮತ್ತು ಕುಟುಂಬದ ಸದಸ್ಯರ ಆರೋಗ್ಯ ಕಾಪಾಡಲು ಪಣತೊಡಬೇಕು .

*3 ತಂತ್ರಜ್ಞಾನದ ತಿಳುವಳಿಕೆ*

ಇಂದಿನ‌ ತಂತ್ರಜ್ಞಾನದ ಯುಗದಲ್ಲಿ ತಮ್ಮ ಮಕ್ಕಳು ವಿವಿಧ ವೀಡಿಯೋ ಆಡಿಯೋ ಡೌನ್‌ಲೋಡ್ ಮಾಡಿ ತಮ್ಮ ಮೊಬೈಲ್ ಐ ಪಾಡ್ ಗಳ ಬಳಕೆ ಮಾಡುತ್ತಿದ್ದರೆ ಕೊನೆ ಪಕ್ಷ ಅವರು ಯಾವ ವೀಡಿಯೋ, ನೋಡುತ್ತಿದ್ದಾನೆ ಎಂದು ತಿಳಿದು ಆ ಮಕ್ಕಳು ದಾರಿ ತಪ್ಪಿದಾಗ ಸೂಕ್ತ  ಬುದ್ದಿ ಹೇಳಲು
ಹಾಗೂ ಕೆಲ ಸಮಸ್ಯೆಗಳನ್ನು ಬಗೆಹರಿಸಲು ಇಂದಿನ ಆಧುನಿಕ ತಾಯಿ ಈ ತಂತ್ರಜ್ಞಾನದ ಕನಿಷ್ಟ ತಿಳುವಳಿಕೆ ಪಡೆದಿರಬೇಕು.


*4 ಉತ್ತಮ ಸಂಬಂದ ಮತ್ತು ಸಂವಹನ*

ಇಂದಿನ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಸ್ವೇಚ್ಛೆಯಾಗಿ ಕಲಿಯಬಾರದ ಕೆಟ್ಟ ಆಟಗಳನ್ನು ಕಲಿತು ಮುಕ್ತ ಲೈಂಗಿಕ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಅನರ್ಥಗಳನ್ನು ಮಾಡಿಕೊಂಡು ಪೋಷಕರನ್ನು ಮತ್ತು ಸಮಾಜವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವುದನ್ನು ಕಾಣುವೆವು
ಇದನ್ನು ಪರಿಹರಿಸಲು ತಾಯಿಯ ಮುಕ್ತ ಮಾತಕತೆ ಉತ್ತಮ ಸಂವಹನ ಮಾರ್ಗದರ್ಶನ ಇಂದು ಅಗತ್ಯವಾದ ಅಂಶವಾಗಿದೆ

*5 ಸಮಯದ ಮಹತ್ವ*

ಇಂದಿನ ಅಧುನಿಕ ಯುಗದಲ್ಲಿ ಮಾನವ ಸಮಯ ಮತ್ತು ಹಣದ ಹಿಂದೆ ಅಕ್ಷರಶಃ ಓಡುತ್ತಾ ಇದ್ದಾರೆ. ಮನೆಯ ಎಲ್ಲಾ ಸದಸ್ಯರು ನಮಗೆ ಸಮಯವಿಲ್ಲ ಎಂದು ದೂರುವಾಗ ತಾಯಿ ಕೆಲವೊಮ್ಮೆ ಹೊರಗಡೆ ಕೆಲಸ ಮಾಡುತ್ತಿದ್ದರೂ ಮನೆಯಲ್ಲಿ ತನ್ನ ಮಕ್ಕಳು ಮತ್ತು ಕುಟುಂಬಕ್ಕೆ ಗುಣಾತ್ಮಕ ಸಮಯ ನೀಡಲೇಬೇಕು ಇದು ಕುಟುಂಬದ ಸಂಬಂಧಗಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ

ಒಟ್ಟಿನಲ್ಲಿ ಹೇಳುವುದಾದರೆ ಇಂದಿನ ನವಯುಗದ ತಾಯಂದಿರು ಅಷ್ಟದಿಕ್ಕುಗಳಲ್ಲೂ ಕಾರ್ಯನಿರ್ವಹಿಸುವ ಮೂಲಕ ದಶಕಂಠ ಮತ್ತು ದಶ ಹಸ್ತಗಳ ಪಡೆದರೂ ಅವರು ನಿರ್ವಹಣೆ ಮಾಡುವ ಕೆಲಸಗಳು ಬಾಕಿ ಇವೆಯೇನೊ ಅನಿಸುತ.ಆದರೂ ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪಾತ್ರ ನಿರ್ವಹಣೆ ಮಾಡಿದರೆ ನವಯುಗ ತಾಯಂದಿರು ನಮ್ಮ ಭವ್ಯ ಸಮಾಜ ನಿರ್ಮಾಣದ ಭದ್ರ ಬುನಾದಿಯನ್ನು ಹಾಕುವ ಶಕ್ತಿ ದೇವತೆಗಳೆಂದರೆ ತಪ್ಪಾಗಲಾರದು


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

03 February 2018

ಶಿಕ್ಷಕರಿಗೆ ಶಿಕ್ಷಿಸಲು ಅವಕಾಶ ನೀಡದಿದ್ದರೆ ........?



💦ಜೇನಿನ ಹನಿ💦
..........................

ಅಧ್ಯಾಪಕರು ಬೆತ್ತ ಹಿಡಿಯೋದನ್ನು ಬಿಟ್ರು....
ಮಕ್ಕಳು ಶಿಸ್ತನ್ನು ಮರೆತರು....

 📍
ಅಧ್ಯಾಪಕರು ವಿಮರ್ಶಿಸೋದನ್ನು ಬಿಟ್ರು ...
ಮಕ್ಕಳು ಹೇಡಿಗಳಾದರು...

📍
ಅಧ್ಯಾಪಕರು ಬಯ್ಯೋದನ್ನು ಬಿಟ್ರು...
ಮಕ್ಕಳು ಅಹಂಕಾರಿಗಳಾದರು...

📍
ಅಧ್ಯಾಪಕರು ಕಲಿಯದವರನ್ನು ಗೆಲ್ಲಿಸಲು ನಿರ್ಬಂಧಿತರಾದರು....
ಮಕ್ಕಳು ಮೂರ್ಖರ ಸಮೂಹ ವಾಯಿತು..

📍
ಅಧ್ಯಾಪಕರು ಒಳ್ಳೆಯದಕ್ಕೆ ಏನಾದರೂ ಅಂದರೆ ಅತ್ಮಹತ್ಯೆ ಗೆಯ್ಯುವ ಮನಸನ್ನು ಸೃಷ್ಟಿಸಿದ್ದು ಪೋಷಕ ಸಮೂಹವೇ ಆಗಿದೆ..

📍
ಅಧ್ಯಾಪಕರ ಸಣ್ಣ ಸಣ್ಣ ಶಿಕ್ಷೆಗಳಿಗೆ ದೊಡ್ಡ ಬಾಯಿಯಲ್ಲಿ ದೂರು ದಾಖಲಿಸಿದವರು....

ನನ್ನ ಮಗು ತಪ್ಪು ಮಾಡೊಲ್ಲ ಎಂದು ಹೇಳಿ ಮಗುವಿನ ಎದುರಲ್ಲೇ ಅಧ್ಯಾಪಕನನ್ನು ಅಸಭ್ಯ ನುಡಿದ ಪೋಷಕರು....

📍
ನೀವು ಮಕ್ಕಳನ್ನು ಪ್ರೀತಿಸಿ ಲಾಲಿಸಿದಿರಿ...
ಅವರ ಆತ್ಮವಿಶ್ವಾಸಕ್ಕೆ ಕೊಡಲಿ ಏಟು ಹಾಕಿದಿರಿ...

ಹೆತ್ತ ತಾಯಿಯಲ್ಲೂ ,ತಂದೆಯಲ್ಲೂ ಹೇಳಲಾರದ ಯಾವ ದುಃಖ? ಏನು ಸಮಸ್ಯೆ ಒಂದು ಮಗುವಿಗೆ ಇರೋದು?

ಆತ್ಮಹತ್ಯೆ ಗೆ ಪ್ರೇರಣೆ ನೀಡಿದವರು ಯಾರು...?

ಜೀವನದಲ್ಲಿ ವಿದ್ಯೆಯೆಂಬ ದೀಪವನ್ನು ಬೆಳಗಿಸುವ ಅಧ್ಯಾಪಕರೋ...?

ಲಾಲಿಸಿ ಮುದ್ದಿಸಿ ಕೊಂದಿರಿ ಅಲ್ಲವೇ ಪೋಷಕರೇ....?

📍
ಯೋಚಿಸಿ....
ಅಧ್ಯಾಪಕರು ಶತ್ರುಗಳಲ್ಲ...

ಎಲ್ಲಾ ಮಕ್ಕಳು ಚೆನ್ನಾಗಿರಬೇಕು ಎಂದು ಪ್ರಾರ್ಥಿಸುವವರು ಮಾತ್ರ...

📍
ಹೃದಯದಲ್ಲಿ ಬೆಂಕಿಜ್ವಾಲೆ ಉರಿಯುತ್ತಿದ್ದರೂ  ಸಮಾಜಕ್ಕೆ ಪ್ರಕಾಶವನ್ನು ಮಾತ್ರ ನೀಡಿದವರು....
ಅಧ್ಯಾಪಕರು....

🕹
ದೀಪದ ಬೆಳಕಿನಂತೆ ಪ್ರಕಾಶ ಬೀರಿದವರು....

ಹೇ ಸಮಾಜವೇ....
ನೀವೆ ಅಧ್ಯಾಪಕರು ಸರಿಯಲ್ಲವೆಂದು ಮಕ್ಕಳಿಗೆ ಕಲಿಸಿಕೊಟ್ಟವರು...

೧೦೯೮....

ಬಾಲಾವಕಾಶ....

ಪೋಕ್ಸೋ.,...

ಚೈಲ್ಡ್ ಲೈನ್.....

ಎಂದು ಹೇಳಿ ಮಗುವಿಗೆ ಧೈರ್ಯ ತುಂಬಿದವರು....

🕹ಮಗುವಿನ ಎದುರಲ್ಲಿ ಏನೆಲ್ಲ ಅಂದಿರಿ ಪೋಷಕರೆ ನೀವು...

* ಆ ಅಧ್ಯಾಪಕರು ಕಲಿಸೋದಿಲ್ಲ

ಕಲಿಸಿದರೂ ಅರ್ಥವಾಗೋದಿಲ್ಲ

ಸುಮ್ಮನೆ ಹೊಡೆಯುತ್ತಾರೆ... ಬಯ್ಯುತ್ತಾರೆ....

ನಾಲಿಗೆ ಸರಿಯಿಲ್ಲ...

*ಪಿಟಿಎ ಮೀಟಿಂಗಿನಲ್ಲಿ ಬೊಬ್ಬಿಟ್ಟು ದೂರಲಿಲ್ಲವೇ ನೀವು....

ಮಗುವಿಗೆ ಅಧ್ಯಾಪಕನ ಮೇಲೆ ಗೌರವ,ಬೆಲೆಯಿಲ್ಲದಾಗಿಸಿದ್ದು ನೀವೇ ಪೋಷಕರೇ.....

ಪ್ರತಿಫಲ.....

ಯಾವುದಕ್ಕೂ ಯೋಗ್ಯವಲ್ಲದ ನ್ಯೂ ಜನ್ ಜನಾಂಗ....

ಎಲ್ಲಾ ಪಾಪಗಳ ತುಂಬಿಕೊಂಡಿರೋ ಯುವ ಜನಾಂಗ..

ದೊಡ್ಡವರನ್ನು ಗೌರವಿಸದವರು.....

ಪೋಷಕರೇ... ನಿಮ್ಮನ್ನು ಕೂಡ ಅನುಸರಿಸದ ಮಕ್ಕಳು...

ಹೆತ್ತವರೇ ಅನುಭವಿಸಿ....

📍
ಅಧ್ಯಾಪಕರಿಗೆ ಶಿಕ್ಷಿಸಲು ಅವಕಾಶ ಕೊಡದಿದ್ದರೆ....

೧- ಸಮಾಜ ಧಾರ್ಮಿಕತೆಯನ್ನು ಕಳೆದು ಕೊಳ್ಳುತ್ತದೆ

೨- ಆತ್ಮಹತ್ಯೆ ಹೆಚ್ಚುತ್ತದೆ...

೩- ಹೆತ್ತವರನ್ನು ಧಿಕ್ಕರಿಸುವ ಮಕ್ಕಳ ಸಮೂಹವು ಬೆಳೆಯುತ್ತದೆ...

೪- ಮದ್ಯ, ಅಮಲು ಪದಾರ್ಥ, ಮೊಬೈಲ್ ಗಳಿಗೆ ಬಲಿಯಾಗುವ ಯುವ ಸಮಾಜದ ಸೃಷ್ಟಿ ಯಾಗುತ್ತದೆ....

೫- ಪ್ರೀತಿ, ದಯೆ, ದಾಕ್ಷಿಣ್ಯ, ಗೌರವ ಇಲ್ಲದ ಕೌಮಾರ, ಯುವಕರ ಸೃಷ್ಟಿ ಯಾಗುತ್ತದೆ...

೬- ಕುಟುಂಬ ಜೀವನದಲ್ಲಿ ಏರುಪೇರು ಸಂಭವಿಸಬಹುದು

೭- ಅಶಾಂತಿ ತುಂಬಬಹುದು
ನ್ಯಾಯ, ನೀತಿ,ಧರ್ಮ ನಾಶವಾಗಬಹುದು

ಪ್ರತಿಯೊಬ್ಬ ಮನುಷ್ಯನ ಮನಸ್ಸಿನಲ್ಲೂ  ಕೆಟ್ಟದ್ದು ಮಾತ್ರ ತುಂಬಬಹುದು, ಕೆಟ್ಟದ್ದನ್ನು ಮಾತ್ರ ಯೋಚಿಸುವಂತಾಗಬಹುದು..

💦💦💦

ಪೋಷಕರೇ....
ಅಧಿಕಾರಿಗಳೇ....
ಜನಸಮೂಹವೇ.....
ಅನುಭವಿಸಿ...

💦 ತಾನು ತೋಡಿದ ಹಳ್ಳಕ್ಕೆ....
ತಾನೇ... ಬಿದ್ದಂತೆ....

*ಒಂದು ಕ್ಷಣ ಚಿಂತಿಸಿ
ಹೊಸ ಸಮಾಜದ ಸಂಕಲ್ಪ...
ಅದು ನಮ್ಮ ಕೈಯಲ್ಲಿ.... ಜೇನಿನ ಗೂಡಲ್ಲಿರುವ ಜೇನಹನಿಯಂತೆ.... ..
🎯🎯🎯🎯🎯


ಕೃಪೆ : ನಾ.ಪಿ‌ ಪೆರಡಾಲ
ಸಂಗ್ರಹ: ಸಿ.ಜಿ ವೆಂಕಟೇಶ್ವರ

ಹನಿಗವನಗಳು (ಸ್ನೇಹ)

ಹನಿಗವನಗಳು

*ಸ್ನೇಹಿತ*

ಅವಳೆಂದಳು
ಬಾ ನನ್ನನಾಲಂಗಿಸು
ನನ್ನ ಸ್ನೇಹಿತ
ಅವನಂದ
ಮೊನ್ನೆ ಹೀಗೇ
ಅಂದಿದ್ದಳು' ಹಿತಾ '


*ವಿಧಿಯಿಲ್ಲ*

ಸ್ನೇಹವನ್ನು ಹಣದಿಂದ
ಕೊಳ್ಳಲು ಸಾದ್ಯವಿಲ್ಲ
ಗೊತ್ತು ಅದರೆ ಅವನ
ಸ್ನೇಹ ಹೊರಗಡೆ ಬಂದರೆ
ಹಣ ಖರ್ಚು ಮಾಡದಿದ್ದರೆ
ಇವನಿಗೆ ವಿಧಿಯಿಲ್ಲ