ನೀರೆಯರಿಗೆ ಸೀರೆ ದಿನದ ಶುಭಾಶಯಗಳು.
ನಮ್ಮ ಸಹೋದ್ಯೋಗಿಗಳೊಂದಿಗೆ ಹೀಗೆ ಮಾತುಕತೆ ನಡೆಯುತ್ತಿತ್ತು. "ಅಯ್ಯೋ ನಮ್ ಮನೆ ಬೀರು ತುಂಬಾ ನಮ್ ಮನೇರ ಸೀರೇನೇ ಸರ್, ಆ ಬೀರ್ ನಲ್ಲಿ ಒಂದ್ ಮೂಲೇನಲ್ಲಷ್ಟೇ ನನ್ ಬಟ್ಟೆಗೆ ಜಾಗ" ಎಂದು ಅವರಿನ್ನೂ ಮಾತು ಮುಗಿಸಿರಲಿಲ್ಲ ಮತ್ತೊಬ್ಬ ಸಹೋದ್ಯೋಗಿ "ಅಯ್ಯೋ ನಮ್ ಮನೆ ಕಥೆನೂ ಅದೇ ಸಾ" ಎಂದರು.
ಇತ್ತೀಚಿನ ದಿನಗಳಲ್ಲಿ ನೈಟಿಯು ಸೀರೆಯ ಸ್ಥಾನ ಆಕ್ರಮಿಸಿಕೊಂಡಿದೆಯೇನೋ ಎಂಬ ಅನುಮಾನ ಮೂಡುತ್ತದೆ.
ನೀರೆಯರು
ಸೀರೆಯಿಂದ ದೂರ
ಪಾಶ್ಚಾತ್ಯ ಮೋಹ.
ಅವ್ಯಾವುದೋ ಪಾಶ್ಚಾತ್ಯ ಮಾದರಿಯ ಡ್ರೆಸ್ ಬಂದರೂ ನಮ್ಮ ಮಹಿಳೆಯರು ಸೀರೆ ಕೊಳ್ಳುವುದು ಮತ್ತು ಉಡುವುದು ಕಮ್ಮಿಯಾಗಿಲ್ಲ.
ಗಂಡ ಹೆಂಡಿರ ನಡುವೆ ಜಗಳ ಆಗಲು ಸಾಮನ್ಯ ಕಾರಣಗಳಲ್ಲಿ ಸೀರೆ ಕೊಳ್ಳುವ ಕಾರಣಕ್ಕೆ ಹೆಚ್ಚು ಜಗಳವಾಗುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.
ಇಂತಹ ಜಗಳ ನೋಡಿದ ಮೇಲೆ ನಾನು ಬರದ ಹನಿಗವನ...
ಪ್ರತಿ ಬಾರಿಯೂ
ನಾನು ಸೀರೆ ಕೊಡಿಸಿ
ಎಂದಾದಲೆಲ್ಲಾ ನಿರಾಕರಿಸುವಿರಿ
ನಿಮಗೆ ಅರ್ಥವಾಗುವುದಿಲ್ಲ
ನನ್ನ ಮನಸ್ಥಿತಿ|
ಅವನು ಗೊಣಗಿದ
ನಿನಗೂ ಅರ್ಥವಾಗುವುದಿಲ್ಲ
ನನ್ನ ಆರ್ಥಿಕ ಪರಿಸ್ಥಿತಿ||
ಸೀರೆ ಮಹತ್ವ ತಿಳಿದ ನಮ್ಮವರು ಸೀರೆಗೂ ಒಂದು ದಿನ ಮೀಸಲಿಟ್ಟಿದ್ದಾರೆ ಪ್ರತಿವರ್ಷ ಡಿಸೆಂಬರ್ 21 ನ್ನೂ ಸೀರೆ ದಿನವಾಗಿ ಆಚರಿಸಲಾಗುತ್ತದೆ.
ಸೀರೆಯ ವಿಧಗಳು ನೂರಾರು ಆಯಾ ಪ್ರಾಂತ್ಯ ಸಂಸ್ಕಾರ, ಸಂಪ್ರದಾಯದ ಆಧಾರದ ಮೇಲೆ ಹಲವಾರು ವಿಧಗಳಿವೆ.
ನಮ್ಮ ನಾಡಲ್ಲಿ ಸೀರೆ ಎಂದರೆ ತಟ್ಟನೆ ಹೊಳೆವುದು ಮೈಸೂರು ಸಿಲ್ಕ್ ಜೊತೆಯಲ್ಲಿ ಇಳಕಲ್ ಮೊಳಕಾಲ್ಮೂರು ಸೀರೆಗಳು ಪ್ರಖ್ಯಾತಿ ಪಡೆದಿವೆ.
ಆಂದ್ರ ಮತ್ತು ತೆಲಾಂಗಣದಲ್ಲಿ
ಪೋಚಂಪಲ್ಲಿ ಸೀರೆ, ವೆಂಕಟಕಿರಿ ಸೀರೆ, ಗಡ್ವಾಲ್ ಸೀರೆ, ಗುಂಟೂರ ಸೀರೆ, ನಾರಾಯಣ ಪೇಠ್ ಸೀರೆ,ಮಂಗಲಮುರಿ ಸೀರೆ ,ಧರ್ಮಾವರಂ ಸೀರೆ ಎಂಬ ವಿಧಗಳಿವೆ. ಬಿಹಾರ, ಚತ್ತೀಸ್ ಘಡ ದಲ್ಲಿ ಈರಿರೇಷ್ಮೆ ಸೀರೆ (ಕಾಡು ರೇಷ್ಮೆಯ ಸೀರೆ ) ಪ್ರಸಿದ್ಧ.
ಗುಜರಾತ್, ಹರ್ಯಾಣ, ಗಳಲ್ಲಿ
ತಾರಿನ್ ಜೋಯಿ ಬ್ರೋಕೇಡ್ಪ ,(ಪಟೋಲಾ ) ಟೋಲಾ ಸೀರೆ ,
ಕೇರಳದಲ್ಲಿ ಬಾಂಧಣಿ ಸೀರೆ , ಭಂದೇಜ ಸೀರೆ,ಬಕರಾಂಪುರಂ ಸೀರೆ ಹೆಚ್ಚು ಬಳಕೆಯಲ್ಲಿವೆ.
ಈಶಾನ್ಯ ರಾಜ್ಯಗಳಲ್ಲಿ
ಚಂದ್ರಗಿರಿ ಸೀರೆ , ಮಹೆಶ್ವರಿ ಸೀರೆ ಹೆಚ್ಚು ಜನಪ್ರಿಯ.
ತಮಿಳುನಾಡಿನಲ್ಲಿ
ಕಾಂಜೀವರಂ ಸೀರೆ, ಧರ್ಮಾವರಂ ಸೀರೆ, ಅರನಿ ಸೀರೆ, ಮಧುರೈ ಸೀರೆ, ಚಟ್ಟಿನಾಡು ಸೀರೆ, ಛಿನ್ನಲಪತ್ತಿ ಸೀರೆ, ಕೊಯಂಬತ್ತೋರ ಸೀರೆ ಬಹುಬೇಡಿಕೆ ಹೊಂದಿವೆ.
ಉತ್ತರ ಪ್ರದೇಶದಲ್ಲಿ
ಬನಾರಸಿ ಸೀರೆ (ಬಫ್ಟಾ ಮತ್ತು ಅಮೃ ಶೈಲಿ), ಶಾಲು ಸೀರೆ, ಕಿಂಕಾಬ್ ಸೀರೆ
ಪಶ್ಚಿಮ ಬಂಗಾಳದಲ್ಲಿ
ಜಾಮ್ದಾನಿ’ ಎಂಬ ಹೆಸರಿನ ಕುಸುರಿ ಕಲೆ ಹಾಗೂ ಜರಿಯುಳ್ಳ ಮಸ್ಲಿನ್ ಸೀರೆ, ಬಿರ್ ಭೌಮ್ ಸೀರೆ, ಕಲ್ಕತ್ತಾ ಕಾಟನ್ ಸೀರೆ ಧಾನಿಖಾಲಿ ಹತ್ತಿ, ಬುಲುಛರಿ, ಫುಲಿಯ ಮತ್ತು ಸಮುದ್ರಗಡದ ವಿಶಿಷ್ಟ ಸೀರೆಗಳು ಢಾಕಾ ಜಾಮ್ದಾನಿ, ಢಾಕಾ ಕಾಟನ್, ಢಾಕಾ ಸಿಲ್ಕ್, ಐದು ಗ್ರಾಂ ಸೀರೆ, ಕೈಯಿಂದ ನೇಯ್ದ ಫೂಲಿಯಾ, ತಾನ್‌ಚೂಡಿ ಸಿಲ್ಕ್, ಬಾಪಾ ಬುಟ್ಟಿ, ಓಂಕೈ ಕಾಟನ್, ಬನಾರಸಿ, ಟಾಂಗೈ ಬಾಲುಚೂಡಿ, ಮಲ್‌ಮಲೈ ಹೀಗೆ ಹಲವು ಬಗೆಯ ಸೀರೆಗಳು
ಅಬ್ಬಾ! ನಮ್ಮ ಭಾರತದಲ್ಲಿ ಇಷ್ಟೆಲ ಸೀರೆಗಳ ವಿಧಗಳಿವೆ. ಕರ್ನಾಟಕದ ಸೀರೆಗಳ ಕೊಂಡೇ ನಮ್ಮ ಮನೆಗಳ ಬೀರುಗಳು ತುಂಬಿವೆ ಇನ್ನೂ ಈ ಸೀರೆಗಳ ಮಾಹಿತಿ ನಮ್ಮ ನೀರೆಯರಿಗೆ ಸಿಕ್ಕರೆ ನಮ್ಮ ಪುರುಷರನ್ನು ದೇವರೇ ಕಾಪಾಡಬೇಕು.
ಇರಲಿ ಎಲ್ಲಾ ನೀರೆಯರಿಗೆ ಸೀರೆ ದಿನದ ಶುಭಾಶಯಗಳು...
ಸಿಹಿಜೀವಿ ವೆಂಕಟೇಶ್ವರ
ತುಮಕೂರು
No comments:
Post a Comment