ರಕ್ತದಾನ ಮಾಡಲೇಬೇಕು
ಅನ್ನದಾನ ,ವಿದ್ಯಾದಾನ ದಂತೆ ಬಹಳ ಪ್ರಮಖ ವಾದುದು ರಕ್ತದಾನ
ಕೋವಿಡ್ ನ ಈ ದುರಿತ ಕಾಲದಲ್ಲಿ ರಕ್ತದಾನಕ್ಕೆ ಇನ್ನಿಲ್ಲದ ಮಹತ್ವ ಬಂದಿದೆ ರಕ್ತದ ಕೊರತೆಯೂ ಉಂಟಾಗಿದೆ , ಇದಕ್ಕೆ ಪರಿಹಾರವೆಂದರೆ ಅರ್ಹ ವಯಸ್ಕರು ರಕ್ತದಾನ ಮಾಡಬೇಕು.
ಹಾಗಾದರೆ ಯಾರು ರಕ್ತದಾನ ಮಾಡಬಹುದು.
ಉಳಿಸಲಾಗುವುದಿಲ್ಲ
ಅಮೂಲ್ಯವಾದ ಪ್ರಾಣವ
ನಮ್ಮಲ್ಲಿ ಎಷ್ಟಿದ್ದರೂ
ಮನಿ|
ಜೀವವುಳಿವುದು
ಸೂಕ್ತ ಸಮಯದಲ್ಲಿ
ದೊರೆತರೆ ರಕ್ತದ
ಹನಿ|
ಎಂಬ ಹನಿಯು ರಕ್ತದ ಮಹತ್ವ ಸಾರುವುದು. ಆದ್ದರಿಂದ ಅರ್ಹರು ರಕ್ತದಾನ ಮಾಡಬಹುದು
ನಲವತ್ತೈದು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಆರೋಗ್ಯಕರವಾಗಿರುವವರು,
ರಕ್ತದ ಒತ್ತಡ ನಿಯಂತ್ರಣದಲ್ಲಿ ಇರುವವರು,ಕಳೆದ ಒಂದು ತಿಂಗಳುಗಳ ಯಾವುದೇ ಸಾಂಕ್ರಾಮಿಕ ರೋಗದಿಂದ ಬಳಲದೆ ಇರುವವರು ಮಾನಸಿಕವಾಗಿ ಸದೃಢವಾಗಿರುವ ಯಾರಾದರೂ ರಕ್ತದಾನ ಮಾಡಬಹುದು.ರಕ್ತ ದಾನ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ರೆಡ್ ಕ್ರಾಸ್ ಸಂಸ್ಥೆ ಅಮೂಲ್ಯವಾದ ಜೀವವುಳಿಸುವ ಕೈಂಕರ್ಯದಲ್ಲಿ ತೊಡಗಿದೆ.
ರಕ್ತ ದಾನದ ಉಪಯೋಗಗಳು
ಇತರರ ಅಮೂಲ್ಯವಾದ ಜೀವ ಉಳಿಸಲು ಸಾಧ್ಯವಾಗುತ್ತದೆ.
ಹೊಸರಕ್ತ ಉತ್ಪಾದನೆ ಆಗಲು ಸಾಧ್ಯವಾಗುತ್ತದೆ.
ರಕ್ತದಾನದಿಂದ ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಶೇ. 80ರಷ್ಟು ಹೃದಯಾಘಾತ ಕಡಿಮೆ.
ರಕ್ತದ ಒತ್ತಡ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳಿಂದಾಗುವ ತೊಂದರೆ ಸಮಸ್ಯೆಗಳು ಕಡಿಮೆಯಾಗುತ್ತವೆ.
ರಕ್ತದಾನ ಮಾಡಲು ದಾನ ಮಾಡುವ ವ್ಯಕ್ತಿಯ ರಕ್ತದ ಗುಂಪು A , B, AB, ಮತ್ತು ಮಾದರಿಯ ಯಾವುದಾದರೂ ಗುಂಪು ಆದರೂ ದಾನ ಮಾಡಬಹುದು ,ಅದನ್ನು ಸೂಕ್ತವಾಗಿ ಸಂಸ್ಕರಿಸಿ ಅಗತ್ಯವಿರುವ ರೋಗಿಗಳಿಗೆ ನೀಡುವರು.
ಕೆಲ ಸಹೃದಯರು ಐವತ್ತಕ್ಕೂ ಹೆಚ್ಚು ಬಾರಿ ರಕ್ತ ದಾನ ಮಾಡಿ ಮಾನವೀಯತೆ ಮೆರೆದಿರುವರು ನಮ್ಮ ಭಾಗದಲ್ಲಿ ಮಧುಗಿರಿ ಡಯಟ್ ನಲ್ಲಿ ಹಿರಿಯ ಉಪನ್ಯಾಸಕರಾಗಿ ಕಾರ್ಯ ನಿರ್ವಹಣೆ ಮಾಡುವ ಶ್ರೀಕೃಷ್ಣಪ್ಪ ರವರು ಈಗಾಗಲೇ 26 ಬಾರಿ ರಕ್ತದಾನ ಮಾಡಿ ನಿಮಗೆಲ್ಲಾ ಪ್ರೇರಣೆಯಾಗಿರುವರು.
ನಮ್ಮ ದೇಶದಲ್ಲಿ ಪ್ರತಿವರ್ಷ5 ಕೋಟಿ ಯುನಿಟ್ ರಕ್ತ ಅಗತ್ಯವಿದೆ,ಆದರೆ ಸಂಗ್ರಹವಾಗುವುದು ಕೇವಲ 2.5 ಕೋಟಿ ಯುನಿಟ್ ಅದರಲ್ಲೂ ಕೋವಿಡ್ ಸಮಯದಲ್ಲಿ ಇನ್ನೂ ಕಡಿಮೆ ಸಂಗ್ರಹವಾಗುತ್ತದೆ ಇದಕ್ಕೆ ಕಾರಣ
ರಕ್ತದಾನಕ್ಕೆ ಸಂಬಂದಿಸಿದ ಕೆಲವು ವದಂತಿಗಳು .
ರಕ್ತ ವೃದ್ಧಿಯಾಗಲು ಯಾವ ಆಹಾರವನ್ನು ಸೇವಿಸಬೇಕು.
ಆರೋಗ್ಯಕರವಾದ ಮತ್ತು ಸಮತೊಲನ ಅಹಾರವು ರಕ್ತ ವೃದ್ಧಿ ಗೆ ಸಹಾಯಕ ಇದರ ಜೊತೆಗೆ ದಾಳಿಂಬೆ ,ಬೆಳ್ಳುಳ್ಳಿ,ಅರಿಷಿಣ, ಸೊಪ್ಪು ತರಕಾರಿಗಳು,ಶುಂಠಿ, ವಿಟಮಿನ್ ಸಿ ಇರುವ ಹಣ್ಣುಗಳಾದ ಮೊಸಂಬಿ, ಕಿತ್ತಳೆ ಹಣ್ಣುಗಳು ರಕ್ತ ವೃದ್ಧಿ ಮಾಡುವವು.
ವೈಯಕ್ತಿಕವಾಗಿ ನಾನು ಈಗಾಗಲೇ ಎರಡು ಬಾರಿ ರಕ್ತ ದಾನ ಮಾಡಿರುವೆ, ಅವಕಾಶ ಸಿಕ್ಕಾಗ ಪುನಃ ರಕ್ತ ದಾನ ಮಾಡಲು ಸಿದ್ದನಿರುವೆ
ನಮ್ಮ ಬಾಂಧವರಿಗೆ
ಅಪಘಾತವಾದಾಗ
ಅನಾರೋಗ್ಯದಿಂದ
ಆಸ್ಪತ್ರೆಯಲ್ಲಿರುವಾಗ
ರಕ್ತ ಬೇಕೇ ಬೇಕು|
ಅದಕ್ಕಾಗಿ ಸಮಯ
ಸಂದರ್ಭಕ್ಕೆ ತಕ್ಕಂತೆ
ನಾವೂ ರಕ್ತದಾನ
ಮಾಡಲೇಬೇಕು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
No comments:
Post a Comment