31 May 2020

ಸಿಹಿಜೀವಿಯ ಹಾಯ್ಕುಗಳು (ಇಂದು ವಿಶ್ವ ತಂಬಾಕು ರಹಿತ ದಿನ)


*ಸಿಹಿಜೀವಿಯ
ಹಾಯ್ಕುಗಳು*

(ಇಂದು ವಿಶ್ವ ತಂಬಾಕು ವಿರೋಧಿ ದಿನ)

೨೬

ಮೇ ಮೂವತ್ತೊಂದು
ತೀರ್ಮಾನ ಕೈಗೊಳ್ಳೋಣ
ತಂಬಾಕು ಬೇಡ.

೨೭

ಹೊಗೆಯ ಸಂಗ
ಹೊಗೆ ಹಾಕಿಸಿ ಕೊಳ್ಳಿ
ಶಾಶ್ವತವಾಗಿ .

೨೮


ಮೋಜು ಮಾಡಲು
ಹೊಗೆ ಸೊಪ್ಪಿನ ಸಂಗ
ಪ್ರಾಣಕ್ಕೆ ಭಂಗ.

೨೯

ಜಗಿಯದಿರಿ
ಗುಟ್ಕಾ ಪಾನ್ ಮಸಾಲ
ನಿಮ್ಮೊಳಿತಿಗೆ.

೩೦

ಬೀಡಿಯೇತಕೆ
ಬಿಟ್ಟು ಬಿಡಿರಿ ಇಂದೇ
ಬೀದಿ ಸುಂದರ.

೩೧

ಅತಿಯಾದರೆ
ಸಿಗರೇಟ್ ಸೇವನೆ
ಸಿಗದು ಜೀವ.

೩೨

ತಂಬಾಕು ಏಕೆ
ತುಂಬು ಜೀವನ ಸಾಗಿಸು
ಜೀವ ಅಮೂಲ್ಯ

*ಸಿ ಜಿ ವೆಂಕಟೇಶ್ವರ*

30 May 2020

*ಪ್ರಗತಿ ಟಿ ವಿ ಯಲ್ಲಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಮಾರ್ಗದರ್ಶನ ಮಾಡಿದ ಕ್ಷಣಗಳು*




*ಪ್ರಗತಿ ಟಿ ವಿ ಯಲ್ಲಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ  ಮಾರ್ಗದರ್ಶನ ಮಾಡಿದ ಕ್ಷಣಗಳು* 

ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ನನ್ನ ಹನಿಗವನ

ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ನನ್ನ ಹನಿಗವನ

ರವಿಚಂದ್ರನ್ ಹುಟ್ಟು ಹಬ್ಬಕ್ಕೆ ಹಾಯ್ಕುಗಳು

*ಕ್ರೇಜಿ ಸ್ಟಾರ್ ಗೆ ಹಾಯ್ಕುಗಳ ಶುಭಾಶಯಗಳು*



ಪ್ರೇಮಲೋಕದ
ಹಠವಾದಿ ನಾಯಕ
ಕನಸುಗಾರ




ರವಿ ಚಂದಿರ
ಒಂದೆಡೆಯೆ ಇದ್ದರೆ
ರವಿಚಂದ್ರನ್



ಚಿತ್ರಗಳಲ್ಲಿ
ಹಂಸ ರವಿ ಮಿಲನ
ಸಂಗೀತೋತ್ಸವ


*ಸಿ‌ ಜಿ ವೆಂಕಟೇಶ್ವರ*
*ತುಮಕೂರು*

29 May 2020

ಅಂಬಿ ಹುಟ್ಟು ಹಬ್ಬಕ್ಕೆ ಹಾಯ್ಕುಗಳು


#ಕಲಿಯುಗ_ಕರ್ಣನ
ಹುಟ್ಟು ಹಬ್ಬಕ್ಕೆ
#ಸಿಹಿಜೀವಿಯ_ಹಾಯ್ಕುಗಳು
ಚಿತ್ರ ಕೃಪೆ: ಎಸ್ ತಿಪ್ಪೇಸ್ವಾಮಿ ಅಣ್ಣ
೧೪
ದಾನಕೆ ಮುಂದು
ಕಲಿಯುಗದ ಕರ್ಣ
ನೆನೆಪು ಇಂದು.
೧೫.
ಯಾರೇನೆಂದರು
ನೆನೆಯುವುದು ಮನ
ಅಂಬರೀಶನ .
೧೬
ಅಮರವಾದೆ
ಕಲಿಯುಗದ ಕರ್ಣ
ರೆಬಲ್ ಸ್ಟಾರ್.
೧೭
ಮಾತು ಒರಟು
ನೇರ ನುಡಿಯ ಧೀರ
ಅಂಬರೀಷಣ್ಣ.
೧೮
ಅಮರನಾಥ.
ಸುಮಗಳಲಿ ಇಂದು
ಅಭಿಷೇಕವೆ?
ಸಿ‌ ಜಿ ವೆಂಕಟೇಶ್ವರ
ತುಮಕೂರು

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ಕವನ

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ಕವನ 

27 May 2020

ರಕ್ಷಕರು ( ಕವನ)


*ರಕ್ಷಕರು*


ರಕ್ಷಕರು ನಾವು
ಆರಕ್ಷಕರು ನಾವು||

ಕಣ್ಣಿಗೆ ಕಾಣುವ ಕಳ್ಳರ
ದುರುಳರ ಹಿಡಿಯುವೆವು
ಕಣ್ಣಿಗೆ ಕಾಣದ ಅಣುಗಳ
ಮಣಿಸಲು ಹೋರಾಡುವೆವು||

ಹಗಲಿರುಳೆನ್ನದೆ ಜನಗಳ
ಸೇವೆಗೆ ಸಿದ್ದರು ನಾವು
ಕಾನೂನು ಸುವ್ಯವಸ್ಥೆ
ಕಾಪಾಡಲು ಬದ್ದರು ನಾವು||

ವೈರಾಣು ಮಣಿಸಲು
ಮನೆಯನು ತೊರೆದಿಹೆವು
ನಮ್ಮನೆ ಹೊಸ್ತಿಲಿ ನಿಂತು
ಹೆಂಡತಿ ಮಕ್ಕಳ ನೋಡುವೆವು.||

ತ್ಯಾಗವ ಮಾಡಿರುವೆವು ನಮ್ಮ
ಸುಖವ ನಿಮ್ಮೊಳಿತಿಗೆ
ಕೈ ಜೋಡಿಸಿ ನಮ್ಮೊಂದಿಗೆ
ನೀವು ಸಕಲರ  ಒಳಿತಿಗೆ.||

*ಸಿ ಜಿ ವೆಂಕಟೇಶ್ವರ*

ಸನ್ಮಾರ್ಗ (ಭಾಗ ೫)


ಸನ್ಮಾರ್ಗ  ಭಾಗ ೫

ರಸ್ತೆ ಅಗಲೀಕರಣ

ಕರ್ನಾಟಕ ಸರ್ಕಾರ ಎಂದು ಮುಂದೆ ಕಮಾನು ಆಕಾರದ ಬಿಲ್ಲೆ ಅದರ ಕೆಳಗೆ ತಹಶಿಲ್ದಾರರು ಮತ್ತು ತಾಲೂಕು ದಂಡಾದಿಕಾರಿಗಳು ಎಂಬ ಫಲಕ ಇರುವ ನೀಲಿ ಬಣ್ಣದ ಜೀಪು ನಿಧಾನವಾಗಿ ಬಂದು ನಿಂತಿತು. ರಾಜ್ಯ ಹೆದ್ದಾರಿ ಆದ್ದರಿಂದ ಆ ಊರಿನಲ್ಲಿ ದಿನವೂ ಅಂತಹ ನೂರಾರು ಜೀಪ್, ವ್ಯಾನ್ ,ಬಸ್ಸು,ಲಾರಿ ಬೈಕ್ ಓಡಾಡುವುದನ್ನು ನೋಡಿದ್ದ ಆ ಊರಿನವರಿಗೆ ಆ ನೀಲಿ ಸರ್ಕಾರದ ಜೀಪ್ ಅಂತಹ ಕುತೂಹಲ ಇರಲಿಲ್ಲ .
ಜೀಪಿನಿಂದ ಇಳಿದ ವ್ಯಕ್ತಿ ವಯಸ್ಸಿನಲ್ಲಿ ನಲವತ್ತೈದು ಐವತ್ತರ ಹಾಸುಪಾಸು ಇರಬೇಕು, ಲಿಬರ್ಟಿ ಕಪ್ಪು ಬಣ್ಣದ ಶೂ ಧರಿಸಿದ್ದರು, ತುಸು ದಪ್ಪವೇ ಎನ್ನಬಹುದಾದ ಸೋಡಾಗ್ಲಾಸ್ ಧರಿಸಿದ್ದರು, ಅರ್ಧದಷ್ಟು ಕೂದಲು‌ ಬಿಳಿಯಾಗಿದ್ದು ಇನ್ನರ್ಧ ಹೇರ್ಡೈ ಮಾಡಿರುವುದನ್ನು ಗುರುತಿಸಬಹುದಾಗಿತ್ತು, ಬಲವಂತಕ್ಕೆ ಅಂಗಿಯನ್ನು ಪ್ಯಾಂಟ್ ನ ಹೊಳಗೆ ಸೇರಿಸಿ ಇನ್ಷರ್ಟ್ ಮಾಡಿದ್ದರೂ ಹೊಟ್ಟೆಗೆ ಕಟ್ಟಿದ ಬೆಲ್ಟ್ ಲೆಕ್ಕಿಸದೇ ಮುಂದೆ ಬಂದು ನಿಂತಿತ್ತು. ಎರಡು ಹೆಜ್ಜೆ ನಡೆದಾಗ ಅವರು ದೇಹದ ಭಾರದ ಪರಿಣಾಮವಾಗಿ ನಡೆಯಲು ಏದುಸಿರು ಬಿಡುವುದು ಎಲ್ಲರಿಗೂ ಕಾಣಿಸುತ್ತಿತ್ತು  .
"ರೀ ರಮೇಶ್ ರೋಡ್ ಮಧ್ಯದಿಂದ ಅಳತೆ ಮಾಡಿ ಲಾಸ್ಟ್ ಟೈಂ ಮಾಡಿದ ಹಾಗೆ ತಪ್ಪು ಮಾಡಿದರೆ ಸಸ್ಪೆಂಡ್ ಆಗ್ತಿಯಾ"  ಎಂದು ‌ಆ ಅಧಿಕಾರಿ ಹೇಳಿದ ಮೇಲೆ ಆ ಊರಿನ ಜನರು ಕ್ರಮೇಣವಾಗಿ ಜೀಪಿನ ಹತ್ತಿರ ಬಂದರು . ಅವರ ಕೊನೆಯ ಮಾತು" ಲಾಸ್ಟ್ ಟೈಂ ಮಾಡಿದ ಹಾಗೆ ಮಾಡಿದರೆ ಸಸ್ಪೆಂಡ್ ಆಗ್ತಿರಾ" ಎಂಬುದನ್ನು ಕೇಳಿದ ಫಾಲಾಕ್ಷ ನಿ‌ನ್ನೆ ರಾತ್ರಿ ತೋಪಿನಲ್ಲಿರುವ ಕಂಬಣ್ಣನ ಹೆಂಡದ ಅಂಗಡಿಯಲ್ಲಿ ಹೆಚ್ಚು ಕೆಟ್ಟ ನಾತದಲ್ಲಿ ತುಸು ನಶೆಯಲ್ಲಿ ಹೋಟೆಲ್ ನಿಂಗಣ್ಣ ಆಡಿದ   ಮಾತುಗಳು ತಟ್ಟನೆ ನೆನಪಾದವು.ಹೋಟೆಲ್ ನಿಂಗಣ್ಣ ಎಂದೇ ಚಿರಪರಿಚಿತ ನಿಂಗಣ್ಣ ಬ್ರಹ್ಮರಾಯಪ್ಪ ಅಲಿಯಾಸ್ ಬ್ರಮ್ಮಿಗೆ ವಿರುದ್ದವಾಗಿ ಆರಂಬಿಸಿದ  ಮೇಲೆ ಅವರಿಗೆ ಹೋಟೆಲ್ ನಿಂಗಣ್ಣ ಎಂಬ ಹೆಸರು ಖಾಯಂ ಆಯಿತು.
ಬ್ರಮ್ಮಿ ಇಡ್ಲಿ,ಮೆಣಸಿನಕಾಯಿ ಬೋಂಡಾ,ಮಂಡಕ್ಕಿ ಉಸುಲಿ ಟೀ ಮುಂತಾದವುಗಳನ್ನು ಶುಚಿ ರುಚಿಯಾಗಿ ಮಾಡಿ ಹೆಚ್ಚೆನ್ನದ ಬೆಲೆಗೆ ಕೊಟ್ಟರೂ ಕ್ರಮೇಣವಾಗಿ ಗುಡಿಸಲಿನಿಂದ ಸಿಮೆಂಟ್ ಶೀಟ್ಮನೆ ನಂತರ ಅರ್ಸಿಸಿ ಮನೆ ಕಟ್ಟಿಸಿದ್ದು ಎಂತವರಿಗೂ ಮಾತ್ಸರ್ಯ  ಹುಟ್ಟಿಸಿತ್ತು . ನಿಂಗಪ್ಪನಿಗೆ ಸ್ವಲ್ಪ ಜಾಸ್ತಿಯೇ ಹೊಟ್ಟೆ ಉರಿದು ನಾನೂ ಒಂದು ಹೋಟೆಲ್‌ ಮಾಡುವೆ ಎಂದು ಸರಿಯಾಗಿ ಬ್ರಮ್ಮಿ ಹೋಟೆಲ್ ಎದುರಿಗೆ ಪಶ್ಚಿಮಾಭಿಮುಖವಾಗಿ  ರಸ್ತೆಗೆ ಸ್ವಲ್ಪ ಹತ್ತಿರಕ್ಕೆ ಸಿಮೆಂಟ್ ಶೀಟ್ ನ ಹೋಟೆಲ್ ಆರಂಭಮಾಡಿಯೇ ಬಿಟ್ಟಿದ್ದ .ತಿಂಡಿಯ ರುಚಿ ಕೊಂಚ ಕಡಿಮೆಯಿದ್ದರೂ ಸಾಲ ಕೊಡುವುದರಿಂದ ಬ್ರಮ್ಮಿಯ ಹೋಟೆಲ್ನಷ್ಟಲ್ಲದಿದ್ದರೂ ಸುಮಾರಾಗಿ ವ್ಯಾಪಾರವಾಗುತ್ತಿತ್ತು .ತಿಂಡಿ ತಿಂದ ನಂತರ ನಿಂಗಪ್ಪ  ಸಾಲದ ಹಣ ಕೇಳಿದದರೆ , ಗಿರಾಕಿಗಳು ಪುನಃ ಬ್ರಮ್ಮಿಯ ಹೊಟೆಲ್ನಲ್ಲಿ ಆಸೀನರಾಗುತ್ತಿದ್ದರು .ಇದರಿಂದಾಗಿ ನಿಂಗಪ್ಪ ಹೊಟೆಲ್ ಇಟ್ಟು ತಲೆ ಮೇಲೆ ಟವಲ್ ಹಾಕಿಕೊಳ್ಳುವ ಕಾಲ ದೂರವಿಲ್ಲ ಎಂದು ಅವರಿವರು ಮಾತಾನಾಡುವುದು ನಿಂಗಪ್ಪನ ಕಿವಿಗೂ ಬಿದ್ದು ವ್ಯಾಘ್ರನಾಗಿ ಹೊಟೆಲ್ ನಲ್ಲಿ ದುಡಿದು ಹೇಗೆ ಸಂಪಾದನೆ ಮಾಡುತ್ತೇನೆ ನೋಡುತ್ತಿರಿ ಎಂದು ಜನರಿಗೆ ಚಾಲೆಂಜ್ ಹಾಕಿದ್ದ.
ಈಗೆ ಚಾಲೆಂಜ್ ಮಾಡಿ ಮೂರೆ ದಿನಕ್ಕೆ ರಸ್ತೆಯ ಅಗಲ ಮಾಡುವವರು ಬಂದು ಅಳತೆ ಮಾಡುವಾಗ ಶಂಕರಜ್ಜರ ಅಂಗಡಿ ಕಡೆಯಿಂದ ಅಳೆದು ನೋಡಿದಾಗ ರಸ್ತೆಗೆ ಹತ್ತಿರದ ಅಂಗಡಿ ಮತ್ತು ಹೋಟೆಲ್ ಕೆಲವು ಅರ್ಧ ಭಾಗ ಕೆಲವು ಪೂರಾ  ಹೋಗುವವು ಎಂದು ಪುಕಾರಾಯಿತು. ಇದನ್ನು ಕೇಳಿದ ನಿಂಗಪ್ಪನಿಗೆ ಪುಕ ಪುಕ ಶುರುವಾಯಿತು. ಅಂದು ಅಳತೆಯ ಕಾರ್ಯನಡೆವ ಮಧ್ಯದಲ್ಲಿ ಟೇಪ್ ಹಿಡಿದು ಅಳತೆ ಮಾಡುವ ರಮೇಶ್ , ಒಮ್ಮೆ ಕಂಬಣ್ಣನ ಹೆಂಡದ ಅಂಗಡಿಗೆ  ಹೋಗಿ ಬಂದಿದ್ದ ಗಮನಿಸಿದ ನಿಂಗಣ್ಣ, ಸಂಜೆ ರಮೇಶ್ ನನ್ನ ಕರೆದುಕೊಂಡು ಹೋಗಿ ತಾನೆ ಹಣ ಕೊಟ್ಟು ಚೆನ್ನಾಗಿ ಇಬ್ಬರೂ ಕುಡಿದು,ಮಧ್ಯ ಮಧ್ಯ ಬೋಟಿ ಮಾಂಸ ತಿನ್ನುತ್ತಾ ಪೀಠಿಕೆ ಶುರುಮಾಡಿದ ನಿಂಗಪ್ಪ .
ರಸ್ತೆಯ ಅಳತೆ ಮಾಡುವಾಗ ನಮ್ಮ ಹೋಟೆಲ್ ಕಡಿಮೆ ಹೋಗುವಂತೆ ಬ್ರಮ್ಮಿದು ಜಾಸ್ತಿ ಹೋಗುವಂತೆ ಅಳತೆ ಮಾಡಿದರೆ ದಿನವೂ ಹೆಂಡ ಜೊತೆಗೆ ಹಣ ಕೊಡುವುದಾಗಿ ಹೇಳಿದ, ಮೊದಲು ಆಗಲ್ಲ ಎನ್ನುತ್ತಿದ್ದ ರಮೇಶ್ ,ಹೆಂಡದ ಗುಡಿಸಲ ಹೊರಗೆ ಮಾದರ ಮಾದೇವ ಕುಡಿದು ಜೋರಾಗಿ ಕಿರುಚುತ್ತಿದ್ದ ಸದ್ದು  ಕೇಳಿ ಒಳಗಿನಿಂದಲೇ ಏರಿದ ಧ್ವನಿಯಲ್ಲಿ "ಹೆ ಮುಚ್ಕೊಂಡ್ ಕುಡಿಯೋ ನನ್ ಮಗನೆ ಸೌಂಡ್ ಬಂದ್ರೆ ಜಾಡ್ಸಿ ಒದಿತಿನಿ" ಎಂದ ನಿಂಗಪ್ಪನ ಧ್ವನಿಗೆ  ಮಾದೇವ ಸುಮ್ಮನಾದ . ಜೋರಾದ ನಿಂಗಪ್ಪನ ಧ್ವನಿ ನಿಧಾನವಾಗಿ ಏರಿದ  ಹೆಂಡದ ನಶೆಯ ಪರಿಣಾಮ " ಆಯಿತು ಹಾಗೆ ಮಾಡ್ತೀನಿ " ಅಂದಿದ್ದ ರಮೇಶ. ನಿಂಗಪ್ಪ ರಮೇಶನ ಅಂಗಿಯ ಮೇಲಿನ ಜೇಬಿಗೆ ನೂರು ರೂಪಾಯಿ ತುರುಕಿದ.
  ಕಳೆದ ಬಾರಿ ರಸ್ತೆಯ ಅಗಲೀಕರಣದ ಸಂಬಂಧ ಅಳೆಯುವಾಗ ಬ್ರಮ್ಮಿ ಹೋಟೆಲ್ ಜಾಸ್ತಿ ಹೋಗುವಂತೆ ರಸ್ತೆಗೆ ಹತ್ತಿರವಿರುವ ನಿಂಗಣ್ಣನ ಹೋಟೆಲ್ ಕಡಿಮೆ ಹೋಗುವ ವಿಚಾರದಲ್ಲಿ ಜನರಿಗೆ ಅನುಮಾನವಿದ್ದು ,ಮೇಲಾಧಿಕಾರಿಗಳಿಗೆ ದೂರು ಬಂದ ಪರಿಣಾಮವಾಗಿ ಇಂದು ಪುನಃ ಅಳೆಯಲು ಬಂದಿದ್ದಾರೆ. ಫಾಲಾಕ್ಷನಿಗೆ ನಿನ್ನೆ ರಾತ್ರಿ ನಶೆಯಲ್ಲಿ ನಿಂಗಪ್ಪ ಹೇಳಿದ ಎಲ್ಲಾ ಕುತಂತ್ರದ ಮಾತುಗಳು ಅಧಿಕಾರಿಗಳ ಎಚ್ಚರಿಕೆಯ ಮಾತಿಗೂ ತಾಳೆಯಾಯಿತು. ಅಧಿಕಾರಿಗಳು ಮುಂದೆ ನಿಂತು ಮೊದಲು ರಸ್ತೆ ಮಧ್ಯದಿಂದ ಬ್ರಮ್ಮಿ ಹೋಟೆಲ್ಗೆ ೧೫  ಅಡಿ  ಟೇಪ್ ಹಿಡಿದಾಗ ಬ್ರಮ್ಮಿಹೋಟೆಲ್ ನಾಲ್ಕು ಅಡಿ ಹೊಡೆಯಲು ಮಾರ್ಕ್ ಮಾಡಿದರು. ಈಗ ಎದುರಿಗಿರುವ ನಿಂಗಪ್ಪನ ಹೋಟೆಲ್ ಸರದಿ ಟೇಪ್ ಹಿಡಿದಾಗ ನಿಂಗಪ್ಪನ ಹೋಟೆಲ್  ಹತ್ತು ಅಡಿ ಹೊಡೆಯಲು ಮಾರ್ಕ್ ಮಾಡಲಾಯಿತು.
"ನೋಡು ರಮೇಶ್ ಇದೇ ರೀತಿಯಲ್ಲಿ ಅಳತೆ ಮುಂದುವರೆಸು ನನಗೆ ಡಿ ಸಿ ಅಪೀಸ್ನಲ್ಲಿ ಮೀಟಿಂಗ್ ಇದೆ, ನಾನು ಹೊರಡುತ್ತೇನೆ , ಸಂಜೆ ರಿಪೋರ್ಟ್ ನನಗೆ ಕೊಡಬೇಕು" ಎಂದು ದಡೂತಿ ದೇಹ ಎಳೆದುಕೊಂಡು ಜೀಪಿನಲ್ಲಿ ಆಸಿನರಾದರು ಸಾಹೇಬರು. ಕೆಟ್ಟ ಸದ್ದಿನೊಂದಿಗೆ ಕಪ್ಪು ಹೊಗೆ ಉಗುಳುತ್ತಾ ಹರ್ತಿಕೋಟೆಯ ಕಡೆಗೆ ಜೀಪು ಹೊರಟಿತು.
ನಿಂಗಪ್ಪ ಒಳಗೊಳಗೆ ಕುದಿಯುತ್ತಿದ್ದ. ರಮೇಶನಿಗೆ ನಿಂಗಪ್ಪನನ್ನು ನೇರವಾಗಿ ನೋಡಲು ಒಳಗೊಳಗೆ ಏನೋ ಅಂಜಿಕೆ.
ಅಳತೆ ಮಾಡುತ್ತಾ ಸತ್ಯಪ್ಪನವರ ಮನೆಯ ಹತ್ತಿರ ಬಂದು ಅಳತೆ ಮಾಡಿದಾಗ ಕೇವಲ ಐದು ಅಡಿ ಮನೆ ಉಳಿದು ಇಡೀ ಮನೆ ಒಡೆಯುವರು ಎಂಬ ಸುದ್ದಿ ತಿಳಿದು ಸತ್ಯಪ್ಪ ಎದೆಯೊಡೆದು ಬಾಯಿ ಬಡಿದು ಕೊಳ್ಳತ್ತಾ . " ಮನೇಲಿ ನಮ್ಮೆಂಗುಸ್ರು ಕಾಯಿಲೆ ಬಿದ್ದವ್ಳೆ. ನನಗೆ ಮೂರು ಜನ ಹೆಣ್ಣು ಮಕ್ಕಳು ಇತ್ತೀಚಿನ ಅಂಗಡಿ ವ್ಯಾಪಾರನೂ ಕಮ್ಮಿ ಈಗ ಮನೆನೂ ಹೋದರೆ ನಾನು ಎಲ್ಲಿಗೆ ಹೊಗ್ಲಿ ,ಎನ್ರಪ್ಪ? ಇಂತ ಅನ್ಯಾಯ ಯಾರಿಗೆ ಬೇಕಪ್ಪ? ರಸ್ತೆ ಅಗಲ ಇಷ್ಟೇ ಇರಲಿ ಬಿಡ್ರಿ" ಎಂದು ಕಣ್ಣಲ್ಲಿ ನೀರು ಹಾಕುತ್ತಿದ್ದರೆ ನೋಡುತ್ತಿದ್ದವರ ಕಣ್ಣಾಲಿಗಳು ಒದ್ದೆಯಾದವು. ಒಳಗಡೆ ಸತ್ಯಪ್ಪನ ಹೆಂಡತಿ ಜೋರಾಗಿ ಕೆಮ್ಮವ ಸದ್ದು ಹೊರಗಡೆ  ಕೇಳುತ್ತಿತ್ತು, ಚಿಕ್ಕ ಮಗಳು ನೀರು ಕುಡಿ ಎಂದು ಅಮ್ಮನಿಗೆ  ನೀರು ಕೊಟ್ಟಳು
ಮುಂದುವರೆಯುವುದು
ಸಿ ಜಿ ವೆಂಕಟೇಶ್ವರ

26 May 2020

ಹಾಯ್ಕುಗಳು ೧೦


ಹಾಯ್ಕುಗಳು೬ ರಿಂದ ೧೦



ಕವಿತೆಗಳು
ಹೃದಯದ ಆಳದ
ಭಾವನೆಗಳು



ಮಳೆಯಾಗಿದೆ
ಒಳಿತಿಗಿಂತ ಹೆಚ್ಚು
ಕೊಚ್ಚಿಹೋಗಿದೆ


ಬಡಿದಾಡುವೆ
ಇಲ್ಲಿರುವೆ ಕೇವಲ
ಮೂರುದಿವಸ



ನಾನೆನ್ನದಿರು
ಹಮ್ಮಿನಲಿ‌ ಏನಿದೆ?
ನಾವೆಂದುನೋಡು

೧೦
ಮೊದಲಿದ್ದವು
ಕಡಲಿನಾಳದಲಿ
ಕೆನ್ನೆಸೇರಿವೆ


ಸಿ ಜಿ ವೆಂಕಟೇಶ್ವರ

25 May 2020

ನೆನಪು ಸುಂದರ ( ಕವನ)



*ನೆನಪು ಸುಂದರ*

ಸ್ಲೇಟು ಬಳಪ ಹಿಡಿದು
ಬರೆದ ನೆನಪು ಸುಂದರ
ಪಾಟಿ ಚೀಲ ಹೊತ್ತು
ನಡೆದ ಬಾಲ್ಯ ಸುಮಧುರ

ಪೆನ್ ಪೆನ್ಸಿಲ್ ಹಿಡಿದು
ಬರೆಯಲೇನೋ  ಆನಂದ
ನೆಲದ ಮೇಲೆ ಕುಳಿತು
ಓದಿದ್ದೆ ಬಲು ಚೆಂದ

ಗಡಿಗೆ ನೀರು ಇತ್ತು
ಅಂದು ತಣಿಸಲು ದಾಹ
ಪುಸ್ತಕದ ಬಗ್ಗೆ ನನಗೆ
ಇತ್ತು ಏನೋ ಮೋಹ

ಲಾಟೀನು‌ ನೀಡುತಿತ್ತು
ಓದಲು ರಾತ್ರಿ ಬೆಳಕು
ಇವೆಲ್ಲ ಸೇರಿ ರೂಪಿಸಿವೆ
ನನ್ನ ಸುಂದರ ಬದುಕು

ಸಿ ಜಿ ವೆಂಕಟೇಶ್ವರ
ತುಮಕೂರು

24 May 2020

ಮಹಾಸಂತ ( ಕವನ)


*ಮಹಾಸಂತ*
ಸ್ವಾಮಿ ವಿವೇಕಾನಂದ

ವಿಶ್ವವ ಬೆಳಗಿದ ಪುಣ್ಯಾತ್ಮ
ಜಾಗೃತವಾಯಿತು ನಮ್ಮಾತ್ಮ||

ವಿಶ್ವನಾಥ, ಭುವನೇಶ್ವರಿ
ದೇವಿಯ ವರದಾನ
ಜನರ ಸೇವೆಯ ಮಾಡುತ
ಕಂಡಿರಿ ಅವರಲೆ ಜನಾರ್ಧನ||

ನಮ್ಮ ಸಂಸ್ಕೃತಿಯನ್ನು
ವಿಶ್ವಕೆ ಸಾರಿದ ಧೀಮಂತ
ಆತ್ಮೋಧ್ದಾರಕೆ ಕರೆ ನೀಡಿದ
ಯುಗದ ಮಹಾ ಸಂತ||

ರಾಮಕೃಷ್ಣರ ಆಧ್ಯಾತ್ಮ
ಪಾಲಿಸಿ ತೊರಿಸಿದಿರಿ ಆನಂದ
ಜನಮನದಲ್ಲಿ ನೆಲೆಸಿದ
ನೀವೇ ಸ್ವಾಮಿ ವಿವೇಕಾನಂದ||

 *ಸಿ ಜಿ‌ ವೆಂಕಟೇಶ್ವರ*

23 May 2020

ಮರಳಿ ಗ್ರಾಮದೆಡೆಗೆ ( ಕಥೆ)


*ಮರಳಿ ಗ್ರಾಮದೆಡೆಗೆ*
" ಏ ಎದ್ದಾಳಪ್ಪ ಯಾರು ನೀನು? ಯಾವೂರು? ಯಾಕೆ ಇಲ್ಲಿ ಮಲಗಿದ್ದಿಯಾ?"
ಕಪ್ಪನೆಯ ಡಾಂಬರ್ ಕಾದು ರಸ್ತೆಯಿಂದ ಕೆಳಗಿಳಿಯುತ್ತಿತ್ತು,ಸ್ವಲ್ಪ ದೂರ ನೋಡಿದರೆ ಕಪ್ಪನೆಯ ರಸ್ತೆಯ ಮೇಲೆ ನೀರು ಕಂಡಂತಾಗುತ್ತಿತ್ತು, ಬಿಸಿಲಿನ ಜಳಕ್ಕೆ ರಸ್ತೆಯ ಪಕ್ಕದ ಮಾಗಿ ಮಾಡಿದ ಕೆಂಪುಮಣ್ಣು ಬಣ್ಣ ಕಳೆದುಕೊಂಡಿತ್ತು
ಮುಖದ ಮೇಲೆ ಹಾಕಿಕೊಂಡ ತೂತುಗಳಿರುವ ಬಣ್ಣ ಕಳೆದುಕೊಂಡ ಲುಂಗಿಯನ್ನು ಸರಿಸಿ ಮುಲುಕುತ್ತಾ, ಮಧ್ಯಾಹ್ನದ ಬಿರುಬಿಸಿಲಿನಲ್ಲೂ  ನಡುಗುತ್ತಾ  ಕಷ್ಟ ಪಟ್ಟು ಮೇಲೇಳಲು ಪ್ರಯತ್ನ ಪಟ್ಟರು ಆ ವ್ಯಕ್ತಿ,
ವಯಸ್ಸು ನಲವತ್ತರಿಂದ ಐವತ್ತು ಇರಬಹುದು, ಗಡ್ಡ ಮೀಸೆಗಳು ಉದ್ದವಾಗಿ ಬೆಳೆದಿದ್ದರಿಂದ ಮುಖದ ಆಕಾರ ಅಸ್ಪಷ್ಟ, ಕೆದರಿರುವ ಬಿಳಿಮಿಶ್ರಿತ  ಕಪ್ಪು ಕೂದಲನ್ನು ನೋಡಿದರೆ  ಎಷ್ಟೋ ದಿನಗಳಿಂದ ಸ್ನಾನ ಮಾಡಿಲ್ಲ ಎಂಬುದು ಗೊತ್ತಾಗುತ್ತಿತ್ತು.
ಚಿಗುರು ಮೀಸೆಯ, ಬೆಳ್ಳನೆಯ ಸುಂದರ ಮೈಕಟ್ಟಿನ, ಸಾಧಾರಣ ಆಳ್ತನದ ಸತೀಶನ ನೋಡಿ,
" ನಾನು ಮಾರಣ್ಣ ಕಣಪ್ಪ ನಮ್ಮ ಊರು ಬಳ್ಳಾರಿ ಹತ್ರ ತೋರಣಗಲ್ಲು ಕಣಪ್ಪ ."ಎಂದು ನಡುಗುತ್ತ ಉತ್ತರಿಸಿದ ಮಾರಪ್ಪ.
" ಅದು ಸರಿ ಈ ಬಿಸ್ಲಾಗೆ ಈ ಜಾಲಿ ಮರದ ಕೆಳಗೆ ಯಾಕೆ ಮಲ್ಗಿದಿಯಾ?
" ಅಯ್ಯೋ ನಮ್ಮಂತವ್ರಿಗೆ ಜಾಲಿ ಮರ ಅಲ್ದೆ ಇನ್ಯಾವ್ ಬಂಗ್ಲೆ ಸಿಗುತ್ತಪ್ಪ ಮಲ್ಗಾಕೆ"
ನೋವಿನಿಂದ ಮುಲುಕುತ್ತಾ , ಜೀವನದ ಮೇಲೆ , ಪ್ರಪಂಚದ ಮೇಲಿನ ಜಿಗುಪ್ಸೆಯಿಂದ ನುಡಿದ ಮಾರಪ್ಪ"
" ಅಣ್ಣಾ ಬೆಳಿಗ್ಗೆ ಊಟ ಗೀಟ ಮಾಡಿದ್ಯಾ ಇಲ್ವೊ?" ಕೇಳಿದ ಸತೀಶ
" ಅಯ್ಯೋ ನಿನ್ನೆ ಸಂಜೆ ಹಿರಿಯೂರಿನ ಟಿ ಬಿ ಸರ್ಕಲ್ ಹತ್ರ ಯಾರೋ ಪುಣ್ಯಾತ್ಮ ಒಂದ್ ಪ್ಲೇಟ್ ಇಡ್ಲಿ ಕೊಡಿಸಿದ್ದ ಕಣಪ್ಪ, ಅದನ್ನು ತಿಂದದ್ದೆ ಕೊನೆ ,ಹರ್ತಿಕೋಟೆ ಹತ್ತಿರ ಜಗ್ಗ ನಲ್ಲಿಲಿ ಈ ನೀರು ತುಂಬಿಸಿಕೊಂಡು ಕುಡಿತಿದಿನಿ " ಎಂದು
ಅರ್ಧದಷ್ಟು ತುಂಬಿದ   ನೀರಿನ ಬಾಟಲ್ ತೋರಿಸಿದರು ಮಾರಣ್ಣ.
"ಇಗ ಕೈ ತೊಳ್ಕ ಒಂದ್ ಅರ್ಧ ಮುದ್ದೆ ಸಾರು ಐತೆ ಉಣ್ಣು"  ಅಂದ ಸತೀಶ
" ಸತೀಶನ ಮಾವ ಬಿಳಿಯಪ್ಪ ಹೊಲದಲ್ಲಿ ನೇಗಿಲು ಹೊಡೆಯಲು ಬಂದಿದ್ದರು ಅವರಿಗೆ ಬುತ್ತಿ ತಂದಿದ್ದ ಸತೀಶ.ಹೊಲದಲ್ಲಿ ಉಳುವ ಕಷ್ಟಕರ ಕೆಲಸ ಮಾಡುವ ಬಿಳಿಯಪ್ಪ ಯಾವಾಗಲೂ ಮೂರು ಮುದ್ದೆ ಉಣ್ಣುತ್ತಿದ್ದರು, ಯಾಕೋ ಅಂದು ಎರಡೂವರೆ ಮುದ್ದೆ ಉಂಡು 
"ಸತೀಶ ನನಗೆ ಸಾಕು ನೀನೆ ಉಣ್ಣು" ಅಂದರಂತೆ
"ಬ್ಯಾಡ ಮಾವ ನಾನು ಮನೇಲೆ ಉಣ್ತೀನಿ" ಎಂದು ಬುತ್ತಿಯ ವೈರ್ ಬ್ಯಾಗ್ ನಲ್ಲಿ ಇಟ್ಟುಕೊಂಡು ದಾರಿಯಲ್ಲಿ ಸೈಕಲ್‌ ಮೇಲೆ ಬರುವಾಗ ಮಾರಪ್ಪನ ಕಂಡ.

ಕಷ್ಟ ಪಟ್ಟು ಎದ್ದು ತನ್ನ ಕೈಚೀಲದಲ್ಲಿದ್ದ ಅಲ್ಯೂಮಿನಿಯಂ ತಟ್ಟೆ ತೆಗೆದು ಅದಕ್ಕೆ ಸ್ವಲ್ಪ ನೀರು ಹಾಕಿ ತೊಳೆವ ಶಾಸ್ತ್ರ ಮಾಡಿ  ಮುದ್ದೆ ಸಾರು ಹಾಕಿಸಿಕೊಂಡು ಒಂದೇ ಸಮನೆ ಗಬಗಬನೆ ತಿನ್ನಲು ಶುರುಮಾಡಿದರು ಮಾರಣ್ಣ.
ಇದನ್ನು ನೋಡಿದ ಸತೀಶನಿಗೆ ಮೊದಲ ಬಾರಿ ಹಸಿವನ್ನು  ನೋಡಿದಂತಾಯಿತು. ಅವನ ಮಾವ ಮುಕುಂದಯ್ಯನವರು ಸತೀಶ ಒಮ್ಮೆ ಕಲ್ಲಿನ ಮುಸುರೆ ಬಾನಿಗೆ ತಟ್ಟೆಯಲ್ಲಿ ಹೆಚ್ಚಾಗಿ ಬಿಟ್ಟ ಮುದ್ದೆ ಬಿಸಾಕುವಾಗ ಹೇಳಿದ ಮಾತು ನೆನಪಾಯಿತು. " ಎಷ್ಟೋ ಜನ ಈ ಪ್ರಪಂಚದಲ್ಲಿ ಒಂದೊತ್ತು ಊಟ ಇಲ್ದೆ ಮಲಗ್ತಾರೆ ಇಂಗೆ ಉಣ್ಣೋ ಅನ್ನ ಪೋಲು ಮಾಡಬೇಡ"
"ಅದ್ಸರಿ ಮಾರಣ್ಣ ಇಂಗ್ಯಾಕೆ ಇಲ್ಲಿ ಮಲ್ಕಂಡಿದಿರಾ? ಇದು ಬಳ್ಳಾರಿ ರೋಡ್ ಅಲ್ವ ಯಾವುದಾದರೂ ಬಸ್ ಹತ್ತಿ ನಿಮ್ಮೂರ್ಗೆ ಹೋಗಾದಲ್ವ?
" ಅಯ್ಯೋ ,ಅಪ್ಪ ಬಸ್ ಗೆ ಹೋಗಾಕೆ ನನಗೂ ಆಸೆ , ಬಸ್ ಚಾರ್ಜು ಬೇಕಲ್ಲ? , "
"ಈಗ ನೀವು ಎಲ್ಲಿಂದ ಬಂದ್ರಿ?"
" ಬೆಂಗಳೂರಿನಿಂದ! "
ಕೇಳುತ್ತಲೆ ದಂಗಾದ ಸತೀಶ , ಸರಿ ಸುಮಾರು ನೂರಾ ಎಂಭತ್ತು ಕಿಲೋಮೀಟರ್ !.
" ಅಷ್ಟು ದೂರದಿಂದ ನಡೆದೇ ಬಂದಿರಾ?"
ಹೌದು ಎಂಬಂತೆ ತಲೆ ಆಡಿಸಿದರು ಮಾರಣ್ಣ.
"ಅದ್ಯಾಕೆ ಹೀಗೆ ನಡದೇ ಬಂದಿರಿ ದುಡ್ ಇರಲಿಲ್ಲವೆ?
" ಅಯ್ಯೋ ಅದೊಂದು ದೊಡ್ಡ ಕಥೆ ಕಣಪ್ಪ , ನಮ್ದು ಊರಾಗೆ ಜಮೀನೆಲ್ಲ ಇತ್ತು ,ಮಳೆ ಬೆಳೆ ಚೆನ್ನಾಗೆ ಆಗ್ತಿತ್ತು, ನಾನು ಬೇಸಾಯ ಮಾಡ್ಕೊಂಡು ಹೆಂಡ್ತಿ ,ಒಬ್ಬಳು ಮಗಳು, ಸುಖವಾಗಿ ಇದ್ವಿ.  ನಮ್ಮೂರ್ನಾಗೆ ಮೂರ್ನಾಲ್ಕು ಜನ ಬೆಂಗಳೂರಿನಲ್ಲಿ ಕೆಲ್ಸ ಮಾಡಿ ಚೆನ್ನಾಗಿ ದುಡಿದು ತಮ್ಮ ಮನೆಯನ್ನು ರಿಪೇರಿ ಮಾಡ್ಸಿ , ಸ್ವಲ್ಪ ದುಡ್ ಅವರ ಅಪ್ಪ ಅಮ್ಮನ ಕೈಗೆ ಕೊಟ್ಟು ಹೋದರು, ಅದನ್ನು ನೋಡಿದ ನನ್ ಹೆಂಡತಿ ,ನೀನೂ ಬೆಂಗಳೂರಿಗೆ ಹೋಗಿ ದುಡಿ ,ನನಗೆ ಬಂಗಾರದ ಒಡವೆ  ಮಾಡಿಸು, ಬೆಂಗಳೂರಿನಲ್ಲಿ ಚೆನ್ನಾಗಿ ದುಡಿದರೆ  ನಮ್ಮ ಮಗಳ  ಓದಿಗೆ ಅನುಕೂಲ ಆಗುತ್ತದೆ ಅಂದಳು. ನಾನು ಬೇಡ, ಇಲ್ಲೇ ನಮ್ಮ ಜಮೀನಿನ ಕೆಲಸ ಮಾಡುವೆ ದೇವರು ನಮಗೆ ಕೊಟ್ಟಿರೋದೆ ಸಾಕು ಎಂದರೂ ಕೇಳಲಿಲ್ಲ.
ಅಂತೂ ಬೆಂಗಳೂರು ಸೇರಿ ವಾಚ್ಮೆನ್ ಕೆಲಸಕ್ಕೆ ಸೇರಿ ಆರು ತಿಂಗಳಲ್ಲಿ ಎರಡು ಬಾರಿ ಊರಿಗೆ ಹೋಗಿ ಹಣ ಕೊಟ್ಟು ಬಂದಿದ್ದೆ ,ಹೆಂಡತಿಯೇನೋ ಸಂತಸ ಪಟ್ಟಳು ,ಮಗಳು ಮಾತ್ರ ಯಾಕೋ   "ಅಪ್ಪ ನೀನು ಬೆಂಗಳೂರಿಗೆ ಹೋಗ ಬೇಡ ಇಲ್ಲೇ ಇರು ಎಂದು ಕಣ್ಣೀರಾಕಿದ್ದಳು".
"ಅಯ್ತು ಮಗಳೆ   ಬೇಗ ಬರುವೆ "ಎಂದು ಪುನಃ ಬೆಂಗಳೂರಿಗೆ ಬಂದೆ .ನನ್ ಕೆಲಸ ನೋಡಿದ ಸಾವ್ಕಾರರು ನನಗೆ ಸಂಬಳ ಜಾಸ್ತಿ ಮಾಡಿ ,ಮೊದಲು ಕೆಲಸ ಮಾಡುವ ವಾಚ್ಮನ್ ಕೆಲಸದಿಂದ ತೆಗೆದರು.ಇದರಿಂದ ಸಿಟ್ಟಾದ ಆ ವಾಚ್ಮನ್ ನಾನಿಲ್ಲದಾಗ ನಮ್ ಕಂಪನಿಯಲ್ಲಿ ಕಳ್ಳತನ ಮಾಡಿ ಅದನ್ನು ನನ್ನ ಮೇಲೆ ಹೊರಿಸಿದ, ಸಾವ್ಕಾರರು  ನನ್ನನ್ನು ಕೆಲಸದಿಂದ ತೆಗೆದರು .
ಬೇರೆ ಕೆಲಸ ನೋಡುತ್ತಾ ಅಲೆದೆ ಕೆಲಸ ಸಿಗಲಿಲ್ಲ ,ಕೈಯಲ್ಲಿದ್ದ ಕಾಸು ಖಾಲಿಯಾಯಿತು .ಊರಿಗೆ ಹೋಗೋಣ ಎಂದು ಮೆಜೆಸ್ಟಿಕ್ ಗೆ ಬಂದು ಒಂದಿಬ್ಬರನ್ನು ಬಸ್ ಚಾರ್ಜ್ ಗೆ ಹಣ ಕೇಳಿದೆ ಅವರು ನನಗೆ ಅವಮಾನ ಮಾಡಿದರು ,ಇದರಿಂದ ಬೇಸತ್ತು ಅಲ್ಲಿಂದಲೆ ನಡೆದು ನಮ್ಮೂರು ಸೇರಲು ತೀರ್ಮಾನ ಮಾಡಿ ,ನಡೆಯುತ್ತಾ ಯಾರಾದರೂ ಏನಾದರೂ ಕೊಟ್ಟರೆ ತಿನ್ನುವೆ ,ಇಲ್ಲ ಅಂದರೆ ಇದೋ" ಎಂದು ನೀರಿನ ಬಾಟಲ್ ತೋರಿಸಿದರು ಮಾರಣ್ಣ
ಅವರ ಕಥೆ ಕೇಳಿ ಸತೀಶನಿಗೆ ಬಹಳ ಬೇಸರವಾಯಿತು.
" ಅಣ್ಣ ನಾನು ಸೈಕಲ್‌ ತಂದಿರುವೆ ,ನಿಮ್ಮನ್ನು ಯರಬಳ್ಳಿ ವರೆಗೆ ಸೈಕಲ್‌ ನಲ್ಲಿ ಕರೆದುಕೊಂಡು ಹೋಗುವೆ ಬನ್ನಿ " ಎಂದ ಸತೀಶ
ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಮತ್ತು   ಸಹಾಯ ಮಾಡುವ ಮಾಡುವ ಗುಣ ತಾಯಿ ಭೂದೇವಮ್ಮನಿಂದ ರಕ್ತಗತವಾಗಿ ಬಂದಂತಿತ್ತು ಸತೀಶನಿಗೆ.
ನಿಂತು‌ಕೊಳ್ಳಲು ಪ್ರಯತ್ನ ಪಟ್ಟ ಮಾರಣ್ಣ ನೋವಿಂದ ಬಳಲಿ ಬಿದ್ದರು ಅವರ ಎತ್ತಲು ಹೋದ ಸತೀಶ ನೋಡಿದ್ದು ಭಯಾನಕ,
ತನಗರಿವಿಲ್ಲದೆ ಕಣ್ಣಲ್ಲಿ ನೀರು ಹರಿಯಲಾರಂಬಿಸಿದವು.
ಅಂಗಾಲುಗಳಲ್ಲಿ ರಕ್ತ ಜಿನುಗುತಿದೆ ,ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿದೆ ,ಅಲ್ಲಲ್ಲಿ ಬೊಬ್ಬೆ ಬಂದಿವೆ ,ಕೆಲವೆಡೆ ಬಟ್ಟೆ ಕಟ್ಟಲಾಗಿದೆ.
" ಅಲ್ಲಾ ಅಣ್ಣ ಇಂತಹ ನೋವು ಎಂಗೆ ತಡ್ಕೊಂಡಿದಿರಿ "ಎಂದು ಬುತ್ತಿ ಬಟ್ಟೆ ಹರಿದು ಎರಡೂ ಕಾಲಿಗೆ ಕಟ್ಟಿ ಸೈಕಲ್ ಮೇಲೆ ಕೂರಿಸಿಕೊಂಡು ಯರಬಳ್ಳಿಯ ಮಾರಮ್ಮನ ಗುಡಿಯ ಬಳಿ ನಿಲ್ಲಿಸಿದ .
"ಯಾರಪ್ಪ ಸತೀಶ ಇವರು "
ಕೇಳಿದರು ಊರ ಪ್ರಮುಖ ಕಾಟಯ್ಯ
ಮಾರಣ್ಣನ ಕಥೆ ಕೇಳಿ ಆಗಲೆ ಯರಬಳ್ಳಿಯ ಆಸ್ಪತ್ರೆಗೆ ಸೈಕಲ್‌ ಮೇಲೆ ಕರೆದುಕೊಂಡು ಹೋಗಿ ಬ್ಯಾಂಡೇಜ್ ಹಾಕಿಸಿ ಇಂಜೆಕ್ಷನ್ ಕೊಡಿಸಿ , ಬಸ್ಚಾರ್ಜ್ ಗೆ ಸ್ವಲ್ಪ ಹಣ ಕೊಟ್ಟು , ಸಂಜೆಯ ಐದು ಗಂಟೆಯ  ನೀಲಕಂಠೇಶ್ವರ ಬಸ್ ಗೆ ಹತ್ತಿಸಿ
" ಕಂಡಕ್ಟರ್ ಇವರನ್ನು ಬಳ್ಳಾರಿ ಗೆ ಇಳಿಸಿ"ಎಂದರು ಕಾಟಯ್ಯ.
ಸತೀಶನನ್ನು ಒಮ್ಮೆ, ಕಾಟಯ್ಯ ನನ್ನು ಒಮ್ಮೆ ನೋಡುತ್ತಾ ಗಳಗಳನೆ ಅಳಲಾರಂಬಿಸಿದರು ಮಾರಣ್ಣ.
ನೀಲಕಂಠೇಶ್ವರ ಬಸ್ ಹೊಗೆ ಉಗುಳುತ್ತಾ
ಆಸ್ಪತ್ರೆಯ ದಿನ್ನೆ ಹತ್ತಿ ಚಳ್ಳಕೆರೆ ಕಡೆಗೆ ಚಲಿಸಿತು, ದೂರ ಹೋಗುವವರೆಗೂ ಕಿಟಕಿಯಾಚೆ ಮಾರಣ್ಣನ ಅಲ್ಲಾಡುವ ಕೈ ಕಾಣುತ್ತಿತು.....
*ಸಿ ಜಿ ವೆಂಕಟೇಶ್ವರ*
*ತುಮಕೂರು*

ಯಜಮಾನ ಚಿತ್ರದ ಗಾಯನ ಸಿ ಜಿ ವೆಂಕಟೇಶ್ವರ


ಭಾಷೆಯ ಶುಧ್ಧ ಕಲಿಕೆಯ ಬಗ್ಗೆ ನನ್ನ ಗಾಯನ . ಸಿ‌ ಜಿ ವೆಂಕಟೇಶ್ವರ


ದೇಶ ಭಕ್ತಿ ಗೀತೆ ಗಾಯನ. ಸಿ ಜಿ ವೆಂಕಟೇಶ್ವರ


22 May 2020

ನೇಪಾಳ _ತಾಳ (ಹನಿ)


*ನೇಪಾಳ_ತಾಳ*

ಭಾರತಾಂಬೆಯ
ನೆರೆಹೊರೆಯಲ್ಲಿ
ಹೊರೆಯಾಗದಂತೆ
ಇತ್ತು ನೇಪಾಳ|
ಈಗೀಗ ಅದು
ಕುಣಿಯುತ್ತಲಿದೆ
ಚೀನಾ ಹಾಕಿದಂತೆ ತಾಳ||

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ಹನಿಗವನ

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

ಸಿಹಿಜೀವಿಯ ತ್ರಿಪದಿ

*ಸಿಹಿಜೀವಿಯ ತ್ರಿಪದಿ*

ಕಾಸಗಲ ಕಣ್ಣೀನ ಬಾಸಿಂಗದ ಹಣೆಯ
ಏಸು ಚೆಂದದ ಜಾಣ| ನನ ಕಂದ
ಕಾಸಿ ನೀರೆರೆವ ಬಾರೋ ಸಿಹಿಜೀವಿ

*ಸಿ ಜಿ ವೆಂಕಟೇಶ್ವರ*

ಶಾಯರಿ


*ಶಾಯರಿ*

ಅಂದು ಕಾಲ್ತೆಗೆದು ಹೋದೆ ನೀ ನಿಲ್ಲದೆ
ಗಡಿಯಾರದ ಮುಳ್ಳೂ  ನಿಂತಿದೆ
ನೀನಿಲ್ಲದೆ
ಸರಿಸಬಹುದು ಗಡಿಯಾರದ ಮುಳ್ಳು
ನೀನೇ ಬರಬೇಕು ಕೀಳಲು ಎದೆಗೆ ಚುಚ್ಚಿದ ಮುಳ್ಳು

*ಸಿ ಜಿ ವೆಂಕಟೇಶ್ವರ*


20 May 2020

ಟಿಕೆಟ್ (ಹನಿಗವನ)

*ಟಿಕೆಟ್*

ಲಾಕ್ಡೌನ್ ಸಡಿಲಿಸಿ
ಬಹಳ‌‌ ದಿನಗಳ ನಂತರ
ಕಂಡಕ್ಟರ್ ಕೊಟ್ಟರು
ಟಿಕೆಟ್
ಮುನ್ನೆಚ್ಚರಿಕೆ ಮರೆತರೆ
ಎಲ್ಲರೂ ತೆಗೆದುಕೊಳ್ಳುವರು
ಟಿಕೆಟ್

ಸಿ ಜಿ‌ ವೆಂಕಟೇಶ್ವರ

ಸನ್ಮಾರ್ಗ (ಭಾಗ ೪)






ಭಾಗ ೪
ಸಂಜೆ  ಗುರುಸಿದ್ದನಿಗೆ ಎತ್ತು ಎಮ್ಮೆಗಳಿಗೆ ಹುಲ್ಲು ತರಲು ಸಹಾಯ ಮಾಡಲು ರೊಪ್ಪಕ್ಕೆ ಹೋಗಿ ಬರುವಾಗ ಸತೀಶ ಯಾಕೊ ಇಂದು ಲವಲವಿಕೆ ಇಲ್ಲ ಎನೋ ಯೋಚನೆ ಮಾಡುತ್ತಿರುವುದನ್ನು ಗುರುಸಿದ್ದ ಗಮನಿಸಿದರೂ ಕೇಳಲಿಲ್ಲ .ರೊಪ್ಪದಿಂದ  ಬಂದು ಉದ್ದವಿರುವ  ಜೋಳದ ಸಪ್ಪೆಯನ್ನು  ಒಂದು ಅಡಿಯಷ್ಟು ತುಂಡು ಮಾಡಲು ಮೊದಲೇ ಗೋಡೆಗೆ ಒಂದು ಕತ್ತರಿಯನ್ನು ಅಳವಡಿಸಿತ್ತು. ಅದರಲ್ಲಿ ಸತೀಶ ಸಪ್ಪೆಯನ್ನು ಇಟ್ಟರೆ ಗುರುಸಿದ್ದ ಮೇಲಿಂದ ಒತ್ತಿದರೆ ಕಟರ್ ಎಂಬ ಸದ್ದಿನೊಂದಿಗೆ ತುಂಡಾದ ಸಪ್ಪೆ ಕೆಳಗೆ ಬೀಳುತ್ತಿತ್ತು ಈಗೆ ಸಪ್ಪೆ ತುಂಡು ಮಾಡಿ ದನಗಳಿಗೆ ಹಾಕಲು ಗುರುಸಿದ್ದನಿಗೆ ಹೇಳಿ ಕೈಕಾಲು ಮುಖ ತೊಳೆದುಕೊಂಡು ದೇವರಿಗೆ ಕೈಮುಗಿದು‌ ಎಂದಿನಂತೆ ಓದಲು ಕುಳಿತ .ಇಂಗ್ಲೀಷ್ ಪುಸ್ತಕ ತೆಗೆದು ಹೋಮ್ ವರ್ಕ್ ಬರೆಯಲು ಶುರುಮಾಡಿದರೆ ಪುಸ್ತಕದಲ್ಲಿ ಸುಜಾತಾಳ ನಗು ಮುಖ  ಒಮ್ಮೆ,ಚಪ್ಪಾಳೆ ಹೊಡೆಯುವ ಮುಖ ಒಮ್ಮೆ ಕಂಡು ಅಚ್ಚರಿ ಪಟ್ಟ.‌ಆಕಡೆ ಈ ಕಡೆ ನೋಡಿದ ಯಾರೂ ಇಲ್ಲ .ಕಣ್ಣನ್ನು ಉಜ್ಜಿಕೊಂಡು ಮತ್ತೆ ಪುಸ್ತಕ ತೆಗೆದರೆ ಅದೇ ಮುಖ , ಓದಲು ಮನಸ್ಸಾಗುತ್ತಿಲ್ಲ ,ಎದ್ದು ಫಿಲಿಪ್ಸ್ ರೇಡಿಯೋ‌‌ ಆನ್ ಮಾಡಿದ ಆಕಾಶವಾಣಿ ಪ್ರದೇಶ ಸಮಾಚಾರ ಓದುತ್ತಿರುವವರು ಬಸಪ್ಪ ಮಾದರ್..... ಎಂದು ಮುಂದುವರೆಯಿತು. " ಏ ಓದೋದು ಬಿಟ್ಟು ಅದೇನು ರೇಡಿಯೋ ಹಾಕಿದಿಯೊ ಆಪ್ ಮಾಡಿ ಓದೋ ಪರೀಕ್ಷೆ ಹತ್ತಿರ ಬರ್ತಾ ಐತೆ ಈ ವರ್ಸ ಎಸ್ಸೆಸ್ಸೆಲ್ಸಿ ನೀನು  ಪ್ರಜ್ಞೆ ಇಲ್ವ " ಎಂದು ಘರ್ಜಿಸಿದರು ಮುಕುಂದಯ್ಯ. ರೇಡಿಯೋ ಆಪ್ ಮಾಡಿ ಪುಸ್ತಕ ಹಿಡಿದರೆ ಮತ್ತದೇ ಪಟ. ಒಮ್ಮೆ ಹೋಗಿ ಸುಜಾತಳ ನೋಡಿ ಬರಲೆ ಅವಳ ಮನೆಯೇನು ದೂರವಿಲ್ಲ ಮುಕುಂದಯ್ಯನ ಮನೆಯಿಂದ  ಆರನೇ ಮನೆ ,ಮನೆಗೆ ಹೋದರೆ ಅವರಪ್ಪ ಬೀರಪ್ಪ ಮೇಸ್ಟ್ರು ಯಾಕೆ ಬಂದೆ ಎಂದರೆ ಏನು ಹೇಳುವುದು ? ಬೇಡ ಹೋಗುವುದು ಬೇಡ ಎಂದು ತೀರ್ಮಾನಕ್ಕೆ ಬಂದು ಕುಳಿತು ಬರೆಯಲು ಬೇರೆ ಪುಸ್ತಕ ತೆಗೆದ ,ಅಷ್ಟಕ್ಕೂ ಸುಜಾತ ಕಂಡರೆ ನನಗೇಕೆ ಈ ರೀತಿ ಆಸೆ? ಅದೇ ಕ್ಲಾಸಲ್ಲ ಅವಳಿಗಿಂತಲೂ ಬೆಳ್ಳಗಿನ ಸಾವಿತ್ರಿ ,ಅವಳಿಗಿಂತ ಸುಂದರವಾದ ರಾಧಾ ,ಮಾಲಾಶ್ರೀ ಎಂದು ಅವನ ಗೆಳೆಯರು ಕರೆವ ರೂಪ ಇದ್ದರೂ ಇವಳೇಕೆ ಈಗೆ ಕಾಡುವಳು ?ಅವಳ ನಗೆಯಲೊಂದು ಕಾಂತಿ‌ಇದೆ ಬಣ್ಣ ಎಣ್ಣೆಗೆಂಪು ಆದರೂ ನಕ್ಕರೆ ಮನೋಲಿಸಾ, ಮೂಗು ಗಿಣಿಮೂಗು ಆದರೂ ಆಕರ್ಷಕ, ಬಟ್ಟಲುಗಣ್ಣುಗಳಲ್ಲಿ ಏನೊ ಮಾತನಾಡುವ ಶಕ್ತಿ, ದಾಳಿಂಬೆಯಂತೆ ಜೋಡಿಸಿರುವ ಅವಳ ಹಲ್ಲುಗಳು ನಕ್ಕಾಗ ಇನ್ನೂ ಹೊಡೆಯುತ್ತವೆ  ಯಾವ ಹಲ್ಲು ಪುಡಿ ಹಾಕಿ ಹಲ್ಲುಜ್ಜುವಳೋ......? "ಏ ಊಟಕ್ಕೆ ಬಾರೋ" ಎಂದು ತಿಮ್ಮಕ್ಕ ಕರೆದಾಗ ರಾತ್ರಿ ಎಂಟು ಮುಕ್ಕಾಲು  ಮುಕುಂದಯ್ಯ ಎದ್ದು ಬಂದು ಯುವರಂಜನಿಯಲ್ಲಿ ಚಿತ್ರ ಗೀತೆ ಬರಬಹುದೆಂದು ರೇಡಿಯೋ ಹಾಕಿದರು.
"ಪ್ರೇಮ ಬರಹ ಕೋತಿ ತರಹ....... " ಎಂದು ಹಾಡು ಬರುತ್ತಿತ್ತು. ಊಟ ಮುಗಿಸಿ ದನಗಳಿಗೆ ಹುಲ್ಲು ಹಾಕಲು ಗುರುಸಿದ್ದನಿಗೆ ಸಹಾಯ ಮಾಡಿ .ಬಂದು ಪುಸ್ತಕ ಹಿಡಿದರೆ ಅದೇ ಕಥೆ.
"ಅಜ್ಜಿಗೆ ತಡಿ ಹಾಸಿ ಕೊಡೋ ಮನಿಕ್ಕಳ್ಳಿ" ಎಂದು ಮುಕುಂದಯ್ಯ ಹೇಳಿದಾಗ ತಡಿ ತಂದು ಮನೆಯ ಅಂಗಳದಲ್ಲಿ ಸಾಲಾಗಿ ಹಾಸಿದ ಫೆಬ್ರವರಿ ತಿಂಗಳಿಂದ ಮಳೆಗಾಲ ಆರಂಭವಾಗುವ ವರೆಗೆ ಮನೆಯವರೆಲ್ಲ ಅಂಗಳದಲ್ಲೇ ಮಲಗುವ ರೂಢಿ ತಿಮ್ಮಕ್ಕ ಮತ್ತು ಮುರಾರಿ ಇಬ್ಬರ ಬಿಟ್ಟು. ಜಂತೆ ಮನೆ  ಕಿಟಕಿಗಳು ಕಡಿಮೆ ಇರುವ ಮನೆಯಲ್ಲಿ ಸೆಕೆಯಲ್ಲಿ ಅವರಿಗೂ ಮಲಗಲು ಇಷ್ಟವಿರಲಿಲ್ಲ ಆದರೂ ವಿಧಿ ಇಲ್ಲ ಕೆಲವೊಮ್ಮೆ ಸೆಕೆ ಹೆಚ್ಚಾಗಿ ರಾತ್ರಿ ಒಂದು ಗಂಟೆಗೋ ಎರಡು ಗಂಟೆಗೋ ಅವರು ಬಂದು ಅಂಗಳದಲ್ಲಿ ಮಲಗುತ್ತಿದ್ದರು. ಅಂದು ರಾತ್ರಿ ಅಂಗಾತ ಮಲಗಿ ಮಲಗಿ ಬಲವಂತವಾಗಿ ಕಣ್ಣು ಮುಚ್ಚಿದರೂ ನಿದ್ದೆ ಹತ್ತದೆ ನಕ್ಷತ್ರಗಳಲ್ಲೂ ಸುಜಾತ ಕಾಣುತ್ತಿದ್ದಳು. ಸತೀಶ ಅಂದು ಕೊಂಡ  ಆ ಒಂದು ನಕ್ಷತ್ರ ನನಗೆ ಸಿಗುವುದೆ?
ಮೊದಲ ಬಾರಿಗೆ ಹದಿನೈದು ವರ್ಷದಲ್ಲೇ ನಿದ್ರೆ ಇಲ್ಲದ ರಾತ್ರಿ ಕಳೆದು ಬೆಳಿಗ್ಗೆ ಎದ್ದು ಎಲ್ಲಾ ತಡಿಗಳು ದುಪ್ಪಡಿಗಳನ್ನು ಒಳಗಿಟ್ಟು ಗುರುಸಿದ್ದನಿಗೆ ಸಗಣಿ ಬಾಸಲು ಸಹಾಯ ಮಾಡಿ ,ತೆಂಗಿನ ಗರಿಯ ಪರಕೆಯಲ್ಲಿ ದನದ ಅಕ್ಕೆಯನ್ನು ಗುಡಿಸಿ ,ಮುಖ ತೊಳೆದು ಕಾಪಿ ಕುಡಿದು ಯಥಾ ಪ್ರಕಾರ ಓದಲು ಕುಳಿತರೆ ಅದೇ ಸುಜಾತಳ ಮುಖ ಹಾಗೂ ಈಗೂ ಒಂಭತ್ತೂವರೆ ಯಾಯಿತು ರಾಗಿ ಮುದ್ದೆ ಉಂಡು ಗೋಡೆಗೆ ತಗುಲಿ ಹಾಕಿದ್ದ ಕನ್ನಡಿ ಬಳಿ ಹೋದ ಎತ್ತರವಿದ್ದ ಕನ್ನಡಿಯಲ್ಲಿ ಅವನ ಮುಖ ಕಾಣುತ್ತಿರಲಿಲ್ಲ, ಎರಡು ದಿಂಬು ತಂದು ಅವುಗಳ ಮೇಲೆ ನಿಂತ ಈಗ ಸ್ವಲ್ಪ ಮುಖ ಕಾಣುತ್ತಿತ್ತು, ಎಡಗಡೆಯ ಎರಡು ಬೆರಳಲ್ಲಿ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಸ್ಟೈಲ್ ಆಗಿ ಉದ್ದನೆಯ ಕೂದಲಿಗೆ ಬಳಿದುಕೊಂಡ ಬಲಗೈ ಎಡಗೈ ಹೋದಂತೆ ಹಿಂಬಾಲಿಸುತ್ತಿತ್ತು . ಎರಡು ಮೂರು ರೀತಿ ತಲೆಬಾಚಿಕೊಂಡು ನೋಡಿ ಕೊನೆಗೆ ಮೊದಲಿದ್ದ ರೀತಿಯಲ್ಲಿ ಬಾಚಿಕೊಂಡು ಕನ್ನಡಿಯಲ್ಲಿ ಮುಖ ನೋಡಿಕೊಂಡು ಚೀಲದಲ್ಲಿ ಪುಸ್ತಕ ಜೋಡಿಸುವಾಗ ರೇಡಿಯೋದಲ್ಲಿ ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ..... ಎಂಬ ಹಾಡು ಬರುತ್ತಿತ್ತು
"ಸ್ಕೂಲ್‌ ಗೆ ಹೋಗಿ ಬತ್ತೀನಿ ಅಕ್ಕ "ಎಂದು ತಿಮ್ಮಕ್ಕನಿಗೆ  ಹೇಳಿ ಮನೆ ಬಿಟ್ಟವನು ನೋಡಿಯೂ ನೋಡದವನಂತೆ ಬೀರಪ್ಪ ಮೇಷ್ಟ್ರು ಮನೆ ಕಡೆ ನೋಡಿದ ಸುಜಾತ ಕಾಣಲಿಲ್ಲ. ಶಾಲೆಗೆ ಹೋಗಿರಬಹುದೆಂದು ಖಾತ್ರಿ ಪಡಿಸಿಕೊಂಡು ಹೆಜ್ಜೆಗಳನ್ನು ತುಸು‌ ಜೋರಾಗಿಯೇ ಹಾಕಿದ "ಏ ಇರಲೇ ಸತೀಶ ಎನ್ ಇವತ್ ಇಷ್ಟು ಜೋರಾಗಿ ಹೋಗತಾ ಇದಿಯ ? ಎಂದು ಚಿದಾನಂದ ಕೂಗಿದ  ಇಬ್ಬರೂ ನಡೆದು ಶಾಲೆ ಕಡೆ ನಡೆಯುವಾಗ ಚಿದಾನಂದ ಕೇಳೇ ಬಿಟ್ಟ "ಯಾಕೋ ಕಣ್ಣು ಹಂಗೆ ಕೆಂಪುಗವೆ ರಾತ್ರಿ ನಿದ್ದೆ ಮಾಡಲಿಲ್ಲೇನೋ ?ಎಂದು ಬಿಟ್ಟ ಇವನಿಗೆ ವಿಷ್ಯ ಹೇಳೋದಾ ಬ್ಯಾಡವೋ ಎಂದು ಎರಡು ಬಾರಿ ಯೋಚಿಸಿ ಇವನು ಬಾಯಿ ಬಿ ಬಿ ಸಿ ಇದ್ದ ಹಾಗೆ ಊರೆಲ್ಲ ಸಾರ್ತಾನೆ ಬೇಡ ಎಂದು " ರಾತ್ರಿ ಕಣ್ಣಾಕೆ ಮಣ್ಣು ಬಿದ್ದಿತ್ತು ಅಂದ " ಶಾಲೆ ಹತ್ತಿರ ಬಂದಂತೆಲ್ಲ ತನಗರಿವಿಲ್ಲದ ಹೃದಯ ಜೋರಾಗಿ ಬಡಿದುಕೊಳ್ಳುವುದನ್ನು ಗಮನಿಸಿದ ಸತೀಶ ಇದು ಮೊದಲ ಬಾರಿ ಹೀಗಾಗುತ್ತಿದೆ  ಎಂದು ಗುರುತಿಸಿದ ಸತೀಶ. ಸ್ಕೂಲ್ ಪ್ರೇಯರ್ನಲ್ಲಿ ಸುಜಾತಳ ಮುಖ ಕಂಡಾಗ ಅವನಿಗರಿವಿಲ್ಲದೆ ಹೃದಯದ ಬಡಿತ ಸಾಧಾರಣವಾಯಿತು
ಮಹೇಶ್ ಸತೀಶನನ್ನು ಒಮ್ಮೆ ಸುಜಾತಳ ಒಮ್ಮೆ ನೋಡತೊಡಗಿದ ಇದು ಮುಂದೆ ಮಹೇಶನ ಮಹಾಸಂಚಿಗೆ ಮುನ್ನುಡಿ ಆಗಬಹುದು ಎಂದು ಸ್ವತಃ ಮಹೇಶನಿಗೇ ಗೊತ್ತಿರಲಿಲ್ಲ.
ಮುಂದುವರೆಯುವುದು....
ಸಿ ಜಿ ವೆಂಕಟೇಶ್ವರ
.

ಮತ್ತೇರಿಸಿದೆ ( ಹನಿಗವನ)



*ಮತ್ತೇರಿಸಿದೆ*

ಅಷ್ಟೇನು ಹಿಡಿಸಲಿಲ್ಲ
ಇನಿಯ ಕಡಲಾಳದಿಂದ
ನೀ‌ ತಂದ ಮುತ್ತು|
ಸಿಹಿಯಾಗಿದೆ ಮತ್ತು
ಮತ್ತೇರಿಸಿದೆ ಮತ್ತೆ
ಕೆನ್ನೆಗಿತ್ತ ಮುತ್ತು||

ಸಿ ಜಿ ವೆಂಕಟೇಶ್ವರ

19 May 2020

*ಇಂದಿನ #ಉದಯವಾಣಿ ದಿನಪತ್ರಿಕೆಯಲ್ಲಿ ಒಂದೇ ನನ್ನ #ಎರಡು #ಲೇಖನಗಳು ಪ್ರಕಟವಾಗಿವೆ*


*ಇಂದಿನ #ಉದಯವಾಣಿ ದಿನಪತ್ರಿಕೆಯಲ್ಲಿ ಒಂದೇ  ನನ್ನ #ಎರಡು #ಲೇಖನಗಳು ಪ್ರಕಟವಾಗಿವೆ*

ತಾರೆಗಳು



"ತಾರೆಗಳು*

ತಾವರೆ ಕೊಳದ
ತಾರೆಗಳು ನಾವು
ಹೂಗಳ ನೋಡಿ
ಮೈಮರೆಯುವೆವು||

ದಿನಪನ‌ ಕಂಡ
ಕಮಲದ ಹಾಗೆ
ನಗುತಲಿ ನಾವು
ಬಾಳುವೆವು ಹೀಗೆ||

ಬಡವರೆ ಆದರೂ
ನಗುವೆವು ನಾವು
ನಮ್ಮಯ ಸಿರಿತನ
ನೋಡಿರಿ ನೀವು||

ನಮ್ಮಯ ಜೀವನ
ಹೂವಿನ ರೀತಿ
ಹೊಸಕಿ ಹಾಕದಿರಿ
ತೋರಿಸಿ ಪ್ರೀತಿ||

ಸಿ ಜಿ ವೆಂಕಟೇಶ್ವರ




18 May 2020

ಸಿಹಿಜೀವಿಯ "ರೀ... "ನಿಘಂಟು


*ನನ್ನವಳ ರೀ ನಿಘಂಟು*


1

ಗಾಡಿಯಲ್ಲಿ
ಹೋಗುತ್ತಿರುವಾಗ
"ರೀ"
ಎಂದರೆ
ಹೂವು ಬೇಕೂ'ರಿ'

2.

ಡೈನಿಂಗ್ ಟೇಬಲ್
ಹತ್ತಿರ ನಿಂತು
"ರೀ"
ಅಂದರೆ
ಊಟಕ್ಕೆ
ಬನ್ನಿ'ರಿ'

3.

ಊಟ ಮಾಡುವಾಗ
"ರೀ"
ಅಂದರೆ
ರುಚಿ ಹೇಗಿದ್ದರೂ
ತಿನ್ನಿ'ರಿ'


4.

ತಿಜೋರಿ  ಹತ್ತಿರ
ನಿಂತುಕೊಂಡು
"ರೀ"
ಅಂದರೆ
ನನ್ನ ಪರ್ಸ್ಗೆ
ಹಣ
ಸುರಿಯಿ'ರಿ'


5.

ಕನ್ನಡಿ ಮುಂದೆ
ನಿಂತುಕೊಂಡು
"ರೀ"
ಅಂದರೆ
ನಾನೇಗೆ ?
ಕಾಣುವೆ
ಹೇಳಿ'ರಿ'


6.

ಸ್ನಾನದ ಕೋಣೆಯಿಂದ
ಜೋರಾಗಿ
 "ರೀ"
ಎಂದರೆ
ಜಿರಲೆ,ಹಲ್ಲಿ
ಬಂದಿದೆ
ಹೊಡೆಯಿ'ರಿ'

7.

ಹೊಟೆಲ್ನಲ್ಲಿ
ತಿಂದ ಮೇಲೆ
 "ರೀ"
ಎಂದರೆ
ಬಿಲ್ಲುನ್ನು
ಪಾವತಿಸಿ'ರಿ'

*ಸಿ ಜಿ ವೆಂಕಟೇಶ್ವರ*

ನೀನೆಂದು ಬರುವೆ ? (ಭಾವಗೀತೆ)


*ನೀನೆಂದು ಬರುವೆ?* ‌ಭಾವಗೀತೆ

ನಲ್ಲೆ  ನೀನೆಂದು ಬರುವೆ
ಕರೆಯಲು ತರಂಗ ಕಳಿಸಿರುವೆ|ಪ|

ಹೃದಯದಾಳದಲಿ ಹುದುಗಿವೆ
ನೂರಾರು ಭಾವನೆಗಳ ಬಣವೆ
ಬಂದು ಬಿಡು ಈಗಲೆ
ಭಾವ ತರಂಗಗಳ ಕಳಿಸಿರುವೆ||

ನನ್ನ ದೇಹದ ಕಣಕಣದಲಿ
ಬರಿ ನೀನೆ ನೆಲೆಸಿರುವೆ
ಪ್ರೇಮಿಯ ಕೂಡಲು ಬಾ
ಪ್ರೇಮ ತರಂಗಗಳ ಕಳಿಸಿರುವೆ||

ನೀ ನನ್ನೆದೆಯ ಹೃದಯ
ವೀಣೆಯಲಿ ನೆಲೆಸಿರುವೆ
ನಿನ್ನ ಕರೆತರಲು ಈಗ
ನಾದತರಂಗಗಳ ಕಳಿಸಿರುವೆ||

*ಸಿ ಜಿ ವೆಂಕಟೇಶ್ವರ*


ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲಾಕ್ಡೌನ್ ಅನುಭವದ ಬರಹ ( ಭಾವ ಸಂಗಮದ ತೃತೀಯ ಬಹುಮಾನಿತ ಬರಹ)

 ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಮತ್ತು ಭಾವಸಂಗಮ ಬಳಗದ ಸ್ಪರ್ಧೆಯ ಮೂರನೆ ಬಹುಮಾನ ಪಡೆದ ಲೇಖನ

ಲಾಕ್ಡೌನ್ ನಲ್ಲಿ ನಾನೇನು ಮಾಡುತ್ತಿರುವೆ?



ಲಾಕ್ ಡೌನ್ ಸಮಯದ ಸದುಪಯೋಗ
ಲೇಖನ
ಕರೋನ ಪ್ರಯುಕ್ತ ಲಾಕ್ ಡೌನ್‌‌ ಇರುವ ಈ ಸಂಧರ್ಭದಲ್ಲಿ ನಾನು ನನ್ನ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಲಾಕ್ ಡೌನ್ ನನಗೆ ವರವಾಗಿದೆ ಎಂದು ಭಾವಿಸಿರುವೆ.
ಈ ಮೊದಲು ತಂದಿಟ್ಟು ಓದಲಾಗದ ಪುಸ್ತಕಗಳನ್ನು ಓದಲು ಆರಂಬಿಸಿ "ಸ್ವಾಮಿಜಗದಾತ್ಮಾನಂದಜಿ" ಅವರ ಬರೆದ "ಬದುಕಲು ಕಲಿಯಿರಿ" ಪುಸ್ತಕ ಓದಿ ಮುಗಿಸಿ ಈಗ  ರಿಚರ್ಡ್ ಕಾರ್ಲಸನ್ ಬರೆದಿರುವ "ಎಷ್ಟೊಂದು ಸೊಗಸು ಈ ಬದುಕು ಎಂಬ ಪುಸ್ತಕ ಓದಿದೆ.
"ಕಾನನ‌ ಕಥೆಗಳು" ಎಂಬ ಪರಿಸರದ ಕುರಿತಾದ ಕಥೆಗಳಿರುವ ಪುಸ್ತಕ ಓದಿದೆ. ನಾಗರಾಜ ಜಿ ನಾಗಸಂದ್ರ ರವರ "ಅಂತರ" ಕಾದಂಬರಿ ಓದಿದೆ. ವಿದ್ಯಾಧರ ದುರ್ಗೇಕರ್ ರವರ ಕಾದಂಬರಿ "ಜೀವಾತ್ಮಗಳ ವಿಕ್ರಯ ", ಕಂನಾಡಿಗ ನಾರಾಯಣ ರವರ ಕಾದಂಬರಿ " ದ್ವಾಪರ " ರವಿ ಬೆಳಗೆರೆ ರವರ ಕಾದಂಬರಿ " ಹೇಳಿ ಹೋಗು ಕಾರಣ " ಪು ತಿ ನರಸಿಂಹಾಚಾರ್ ರವರ ಗೀತನಾಟಕ  ಗೋಕುಲ ನಿರ್ಗಮನ ,ಕುವೆಂಪು ರವರ " ಚಿತ್ರಾಂಗಧ" ,ಶಿವರಾಮ ಕಾರಂತರ ಕಾದಂಬರಿ "ಚೋಮನ ದುಡಿ " ಜೋಗಿಯವರ " ಜೋಗಿ ಕಥೆಗಳು " ಇವುಗಳನ್ನು ಓದಿ ಕೆಲ ಪುಸ್ತಕಗಳಿಗೆ ನನ್ನ ಬ್ಲಾಗ್ ನಲ್ಲಿ ವಿಮರ್ಶೆ ಬರೆದಿರುವೆ.
ಲಾಕ್ಡೌನ್ ಇಲ್ಲದಿದ್ದರೆ ಇದೇ ತಿಂಗಳಲ್ಲಿ  ಯರಬಳ್ಳಿ ಮಾರಮ್ಮನ ಜಾತ್ರೆಯ ಸಮಯದಲ್ಲಿ ಶ್ರೀದೇವಿ ಮಹಾತ್ಮೆ ಎಂಬ ಪೌರಾಣಿಕ ನಾಟಕದಲ್ಲಿ ಮಹಿಷಾಸುರ ಪಾತ್ರ ಮಾಡುತ್ತಿದ್ದೆ ಈಗ ಮನೆಯಲ್ಲಿಯೇ ಆಗೊಂದು ಈಗೊಂದು ಡೈಲಾಗ್ ,ಹೇಳಿ ಮನೆಯವರ ಮನ ರಂಜಿಸುತ್ತಿರುವೆ .
ನಾನೊಬ್ಬ ಹವ್ಯಾಸಿ ಹಾಡುಗಾರ ಇತ್ತೀಚೆಗೆ ಬಿಡುಗಡೆಯಾದ ದರ್ಶನ್ ಅಭಿನಯದ ಯಜಮಾನ ಚಿತ್ರದ "ಯಾರೇ ಬಂದರೂ ಎದುರ್ಯಾರೆ ನಿಂತರೂ .....ಈ ಹಾಡಿನ ಕರೋಕೆಯೊಂದಿಗೆ ಹಾಡಿ ಫೇಸ್ಬುಕ್ ಮತ್ತು ಯೂಡೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಿದೆ. ನನ್ನ ಸ್ನೇಹಿತರು ನನ್ನ ಹಾಡು ಕೇಳಿ ಖುಷಿ ಪಟ್ಟರು,ನನಗೂ ಸಂತಸವಾಯಿತು.
ನಾನು ವೃತ್ತಿಯಲ್ಲಿ ಶಿಕ್ಷಕನಾಗಿದ್ದು  ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆ ಇನ್ನೂ ಮುಗಿದಿಲ್ಲ ಆದ್ದರಿಂದ ನನ್ನ ಶಾಲೆಯ ಹತ್ತನೆಯ ತರಗತಿಯ ಮಕ್ಕಳಿಗೆ ಆಗಾಗ್ಗೆ ಆನ್ಲೈನ್ ತರಗತಿಯ ಮೂಲಕ ಮಾರ್ಗದರ್ಶನ ಮಾಡುತ್ತಿರುವೆ.
ಜಿಲ್ಲಾ ಶಿಕ್ಷಣ ಮತ್ತು ತರಭೇತಿ ಸಂಸ ತುಮಕೂರು ಇವರ ಸಹಕಾರದಿಂದ ತುಮಕೂರು ಜಿಲ್ಲೆಯ ಎಲ್ಲಾ ಮಕ್ಕಳಿಗೆ  ಪರೀಕ್ಷೆ ಬರೆಯುವ ರೀತಿ ಮತ್ತು ವಿಷಯದ ಬಗ್ಗೆ ಪೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಪನ್ಮೂಲಗಳ ವ್ಯಕ್ತಿಯಾಗಿ ಪಾಲ್ಗೊಂಡು ಮಕ್ಕಳಿಗೆ ಮಾರ್ಗದರ್ಶನ ನೀಡಿದೆನು.
ಹಲವಾರು ಸಾಹಿತ್ಯದ ಗುಂಪುಗಳು ನಡೆಸುವ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಕಥೆ,ಕವನ, ಹನಿಗವನ,ಚುಟುಕುಗಳು, ಪುಸ್ತಕ ವಿಮರ್ಶೆ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿವಿಧ ಬಹುಮಾನವನ್ನು ಪಡೆದಿರುವೆನು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹೆಸರಿನ ವೇದಿಕೆಯ ಜಿಲ್ಲಾ ಕಾರ್ಯದರ್ಶಿಯಾಗಿ ರಾಜ್ಯ ಮಟ್ಟದ ಆನ್ಲೈನ್ ಕವನ ರಚನೆ ಮತ್ತು ವಾಚನ ಸ್ಪರ್ಧೆಯ ಸಂಘಟನೆ ಮಾಡಿ ವಿಜೇತರಿಗೆ ನಗದು ಬಹುಮಾನವನ್ನು ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.
ಮೊದಲು‌ ಯೋಗ ,ಧ್ಯಾನ, ಪ್ರಾಣಾಯಾಮ ಮಾಡಲು ಮನಸ್ಸಿದ್ದರೂ ಸಮಯದ ಅಭಾವದ ನೆಪವೊಡ್ಡಿ ಅದರಲ್ಲಿ ತೊಡಗಲು ಆಗಿರಲಿಲ್ಲ ,ಈಗ ಪ್ರತಿದಿನ ಯೋಗ, ಪ್ರಾಣಾಯಾಮ, ಧ್ಯಾನ ಮಾಡುವೆ.
ಮನೆಯವರು ಮತ್ತು ಮಕ್ಕಳ ಜೊತೆ ಪ್ರತಿದಿನ ಸಂಜೆ ಶಟಲ್ ಬ್ಯಾಡ್ಮಿಂಟನ್ ಆಟ ಆಡುವೆ.
ಹವ್ಯಾಸಿ ಲೇಖಕನಾದ ನಾನು ಈ ಲಾಕ್ಡೌನ್ ಅವಧಿಯಲ್ಲಿ ಹಲವಾರು ಲೇಖನಗಳನ್ನು ಬರೆದಿದ್ದು ಅವುಗಳು ಪ್ರಜಾವಾಣಿ, ವಿಶ್ವವಾಣಿ,ಪ್ರಜಾಪ್ರಗತಿ, ಪ್ರತಿನಿಧಿ, ಹಾಗೂ ಇತರೆ ಪತ್ರಿಕೆಗೆಳಲ್ಲಿ ಪ್ರಕಟವಾಗಿವೆ.
ನಾನೊಬ್ಬ ಹವ್ಯಾಸಿ  ಬ್ಲಾಗರ್ ಆಗಿರುವುದರಿಂದ ನನ್ನ ಬ್ಲಾಗ್ ನಲ್ಲಿ  ಕವನ, ನ್ಯಾನೋ ಕಥೆ,ಶೈಕ್ಷಣಿಕ ಲೇಖನ, ಗಜ಼ಲ್, ಶಿಶುಗೀತೆ,ಹನಿಗವನ,ಮುಂತಾದ ಸಾಹಿತ್ಯದ ರಚನೆ ಮಾಡಲು ನನಗೆ ಈ ಕಾಲ ಬಹಳ ಅನುಕೂಲವಾಯಿತು.ಲಾಕ್ ಡೌನ್ ನ ಈವರೆಗಿನ  ದಿನದಲ್ಲಿ ದಿನಕ್ಕೆ ಸರಾಸರಿ ಎರಡು ಸಾಹಿತ್ಯದ ರಚನೆ ಮಾಡಿರುವುದು, ಮತ್ತು ಇದಕ್ಕೆ ಪ್ರಪಂಚಾದ್ಯಂತ ಇರುವ ಓದುಗರು ಓದಿ ಆಸ್ವಾದಿಸಿ ಮೆಚ್ಚುಗೆ ಸೂಚಿಸಿರುವುದು  ಬಹಳ ಸಂತಸ ನೀಡಿದೆ. ಇತ್ತೀಚೆಗೆ ಒಂದು ಲಕ್ಷದ ಓದುಗರು ನನ್ನ ಬ್ಲಾಗ್ ಓದಿರುವುದು ಪ್ರಪಂಚದ ವಿವಿಧ ದೇಶದ ಕನ್ನಡಿಗರು ನನ್ನ ಬ್ಲಾಗ್ ವೀಕ್ಷಿಸಿ ಮೆಚ್ಚುಗೆ ಸೂಚಿಸಿರುವುದು ಮನಕಾನಂದ ನೀಡಿದೆ   ನೀವು ಲಾಕ್ ಡೌನ್ ಸಮಯದಲ್ಲಿ ನನ್ನ ಬ್ಲಾಗ್ ಗೆ ಭೇಟಿ ನೀಡಿ ನನ್ನ ಬರಹಗಳನ್ನು ಓದಬಹುದು.
ಬ್ಲಾಗ್ ವಿಳಾಸ sridevitanya.blogspot. com
ವಂದನೆಗಳೊಂದಿಗೆ
ಸಿ ಜಿ ವೆಂಕಟೇಶ್ವರ
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ
ಕ್ಯಾತಸಂದ್ರ
ತುಮಕೂರು
9900925529

17 May 2020

ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ನನ್ನ ವಿಮರ್ಶೆ ಪ್ರಕಟವಾಗಿದೆ

ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ನನ್ನ ವಿಮರ್ಶೆ ಪ್ರಕಟವಾಗಿದೆ

ಕಲಿಯುತಿರುವೆ (ಕವನ)

*ಕಲಿಯುತಿರುವೆ*

ನಾನೂ ಒಳ್ಳೆಯವನಾಗಬೇಕು
ಎಂಬ ಆಸೆಯೇನೋ ಇದೆ
ಏನು ಮಾಡಲಿ ?
ನನ್ನ ಹೃದಯದ ತುಂಬಾ
ಕಾಮ, ಕ್ರೋಧ, ಮೋಹ
ಲೋಭ, ಮದ ,ಮತ್ಸರ
ಇತ್ಯಾದಿ ಕಲ್ಮಶಗಳೇ
ತುಂಬಿ‌ ತುಳುಕುತ್ತಿವೆ.

ಈಗೀಗ ವೈರಾಣುವೊಂದು
ಬುದ್ದಿ ಕಲಿಸಿದೆ ಬಂದು
ತೊಳೆಯುತಿದೆ ನನ್ನ
ದುರ್ಗುಣಗಳ ಇಂದು

ಇನ್ನೂ ಕಲ್ಮಶ ಪೂರ್ಣ
ತೊಳೆಯಲಾಗಿಲ್ಲ
ಕ್ರಮೇಣ ಕಲಿಯುತಿರುವೆ
ನಾನೂ ಬದುಕಲು,
ಮತ್ತು ಇತರರರ
ಬದುಕಲು ಬಿಡಲು

ಇನ್ನೊಂದು ವೈರಾಣು ನನ್ನ
ಪೂರ್ಣ ಕಲ್ಮಶ ತೊಳೆದೀತೆ?




16 May 2020

ಸಿಹಿಜೀವಿಯ ಆರು ಹನಿಗಳು

ಸಿಹಿಜೀವಿಯ ಆರು  ಹನಿಗಳು

*೧*

*ಪಿತೃಪ್ರಧಾನ*


ಮನೆಯವರು
ಕೇಳಿದಾಲೆಲ್ಲ
ನಮ್ಮಪ್ಪ
ಮಾಡುತ್ತಲೇ
ಇರಬೇಕು
ಹಣದ ದಾನ|
ಯಾಕೆಂದರೆ
ನಮ್ಮ ಕುಟುಂಬ
ಪಿತೃಪ್ರಧಾನ||


*೨*

*ಸಮಾಧಾನ*

ಲಟ್ಟಣಿಗೆಯಲಿ
ಹೊಡೆಯಲಿ
ವಾಚಾಮಗೋಚರ
ಬೈಯಲಿ
ಗಂಡ ಪಾಲಿಸುವನು
ಸಮಾಧಾನ|
ಕಾರಣ
ಅವನ ಕುಟುಂಬ
ಮಾತೃಪ್ರದಾನ||

*೩*

*ಶಾಂತ*

ಅವರದು ಶಾಂತ
ಕುಟುಂಬ |
ಈಗಾಗುವ ಮೊದಲು
ಅವನಿಗೆ ಬಿದ್ದಿವೆ
ಲಟ್ಟಣಿಗೆ ಏಟುಗಳು
ತುಂಬಾ||


*೪*

*ನಾರಿ*

ಮದುವೆಯಾದಾಗ
ಅವಳೂ
ಬಳ್ಳಿಯಂತೆ
ಬಳುಕುವ ನಾರಿ
ಈಗೀಗ
ತೂಗುತ್ತಿದ್ದಾಳೆ ಬಾರಿ

*೫*

*ಸಮರಸ*

ಆ ಕುಟುಂಬದಲ್ಲಿ
ಇದೆ ಸಮರಸ|
ಏಕೆಂದರೆ
ಗಂಡ ಎದುರಾಡಲ್ಲ
ಅವಳು ದಿನವೂ
ಮಾಡಿ ಬಡಿಸಿದರೆ
ಅನ್ನ ರಸ||

*೬*

*ಕೈಯಲ್ಲಿದೆ*

ಮನೆಯ ದೊಡ್ಡಣ್ಣ
ಮುಂಜಾನೆ ಹೇಳಿದ
ನಮ್ಮ ಮನೆಯ ಘನತೆ
ಕಾಪಾಡುವುದು
ನಮ್ಮ ಕೈಯಲ್ಲಿದೆ|
ಸಂಜೆ ಮದ್ಯದ
ಬಾಟಲ್ ಅವನ
ಕೈಯಲ್ಲಿದೆ||


*ಸಿ ಜಿ ವೆಂಕಟೇಶ್ವರ*







ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಚುಟುಕು

ಇಂದಿನ  ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಚುಟುಕು 

15 May 2020

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಗಜ಼ಲ್

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಗಜ಼ಲ್

ಉಳಿಸೋಣ ಸಂಬಂಧ ( ಇಂದು ವಿಶ್ವ ಕುಟುಂಬ ದಿನ)

*ಉಳಿಸೋಣ ಸಂಬಂಧ*

(ಇಂದು ವಿಶ್ವ ಕುಟುಂಬ ದಿನ)

ಬೆಸೆಯೋಣ ಬಂಧ
ಉಳಿಸೋಣ ಸಂಬಂಧ|ಪ|

ತೊಲಗಲಿ‌ ಬೇಸರ
ಎಲ್ಲರ ಮನದಲಿ
ತುಂಬಲಿ ಸಂತಸ
ಎಲ್ಲರ ಮನೆಯಲಿ|೧|

ರಸವಿರಲಿ ಮಾತಲಿ
ದ್ವೇಷವ ಮರೆಯೋಣ
ಸಮರಸವಿರಲಿ ನಮ್ಮಲಿ
ಸಹಬಾಳ್ವೆ ಮಾಡೋಣ|೨|

ಬೆಳೆಯಲಿ ಎಲ್ಲೆಡೆ
ಮಾನವೀಯ  ಮೌಲ್ಯಗಳು
ಉಳಿಯಲಿ ಕೌಟುಂಬಿಕ
ಸಿಹಿ ಸಂಬಂಧಗಳು|೩

ನಿಸ್ವಾರ್ಥ ,ಒಗ್ಗಟ್ಟು
ಎಲ್ಲರೂ ಪಾಲಿಸೋಣ
ಸುಂದರ ಕುಟುಂಬಕ್ಕೆ
ಬುನಾದಿ ಹಾಕೋಣ|೪|

*ಸಿ‌ ಜಿ‌ ವೆಂಕಟೇಶ್ವರ*

14 May 2020

ಸನ್ಮಾರ್ಗ ( ಭಾಗ ೩)

ಭಾಗ ೩

ಮುಖ್ಯ ರಸ್ತೆಯಿಂದ ಮಾರಮ್ಮನ ಗುಡಿಯ ಪೌಳಿಯ ಬಲಪಕ್ಕದ ರಸ್ತೆಯಲ್ಲದ ರಸ್ತೆಯಲ್ಲಿ ಮನೆಯಿಂದ ಬರುವ ಚರಂಡಿಯ ನೀರನ್ನು ದಾಟಿ ಮುನ್ನೂರ ನಾನ್ನೂರು ಹೆಜ್ಜೆ ನಡೆದು ಎಡಕಯ ತಿರುಗಿದರೆ ಅದೇ ದೊಡ್ಡಪ್ಪಗಳ ಮನೆ .
ದಕ್ಷಿಣಾಭಿಮುಖವಾಗಿ ರಂಗಪ್ಪನ ಗುಡಿಯ ಪೌಳಿಗೆ ಹೊಂದಿಕೊಂಡಿರುವ ಮನೆ ಬಾಗಿಲು ದಾಟಿ ಒಳನಡೆದರೆ ಮೊದಲು ನಮ್ಮ ಸ್ವಾಗತ ಮಾಡುವುದು ಮುಸುರೆ ಬಾನಿ( ಕಲ್ಲಿನಿಂದ ಮಾಡಿದ ಪ್ರಾಣಿಗಳಿಗೆ ನೀರ ಕುಡಿಯಲು ಮಾಡಿದ್ದು)  ಅಲ್ಲದೆ ದನಗಳ ಕಟ್ಟಲು ಜಾಗ ಎಡಕ್ಕೆ ತಿರುಗಿದರೆ ಅಸಲಿ ಮನೆ ಆರಂಭ , ಕಟ್ಟಿಗೆ ಮಾಡಿನಿಂದ ಮಾಡಿದ ಹಳೆಯ ಕಾಲದ ಜಂತೆಮನೆ  ಎಡಕ್ಕೆ ಅಡುಗೆ ಕೋಣೆ ಬಲಕ್ಕೆ ವರಾಂಡ ,ಇನ್ನೂ. ಒಳಕ್ಕೆ ಹೋದರೆ ವಿಶಾಲವಾದ ಕೊಣೆ ಗೋಡೆಗೆ ದೇವರ ಮತ್ತು ಮಾನವರ ಚಿತ್ರಪಟಗಳನ್ನು ನೇತು ಹಾಕಲಾಗಿದೆ. "ಮದುವೆಯಾ ವಯಸು ಎಲ್ಲೆಲ್ಲೂ ಸೊಗಸು ಕಣ್ತುಂಬ ನೂರಾರು ಕನಸು" ಎಂದು ಫಿಲಿಪ್ಸ್ ರೇಡಿಯೋದಲ್ಲಿ ಹಾಡು ಬರುತ್ತಿತ್ತು ಪಕ್ಕದ ಮನೆಗೆ ಕೇಳಲೆಂದೇ ಸೌಂಡ್ ಜಾಸ್ತಿಯೇ ಇತ್ತು ಅದೇ ಕೋಣೆಯಲ್ಲಿ ಹತ್ತಿ ,ಕಡಲೇಕಾಯಿ,ಸೂರ್ಯಕಾಂತಿ, ಚೀಲಗಳನ್ನು ತುಂಬಿದ್ದರಿಂದ ಗೋಣಿ ಚೀಲ ಮಣ್ಣಿನ, ಮತ್ತು ಹತ್ತಿಯ ಅಷ್ಟೇನೂ ಕೆಟ್ಟದ್ದು ಅಲ್ಲದ ಸುವಾಸನೆಯೂ ಅಲ್ಲದ ವಾಸನೆ ಮೂಗಿಗೆ ಅಡರುತ್ತಿತ್ತು .ಆ ಕೋಣೆಯ ಬಲಕ್ಕೆ ತಿರುಗಿದರೆ ಅದೇ ದೇವರ ಮನೆ ,ದೇವರ ಮನೆಯೆಂದರೆ ಮೂರುಇಂಟು ನಾಕು ಅಡಿ ಚಿಕ್ಕದಲ್ಲ ಬರೊಬ್ಬರಿ ಎಂಟು ಇಂಟು ಹತ್ತು ಅಡಿ ಉದ್ದದ ದೇವರ ಮನೆ ಮನೆಯ ವಾಸ್ತುಶಿಲ್ಪಿ ಮತ್ತು ಮನೆ ಕಟ್ಟಿಸಿದವರ ದೈವಭಕ್ತಿಗೆ ಆ ದೇವರ ಕೋಣೆಯೇ ಸಾಕ್ಷಿ
ಅದೇ ಕೋಣೆಯಲ್ಲಿ ಪೂರ್ವಾಭಿಮುಖವಾಗಿ ಇರುವ ಗೋಡೆಯಲ್ಲಿ ಒಂದು ಗೂಡು ಗೂಡಲ್ಲಿ ದೀಪ ,ಪೂಜೆಯ ಸಾಮನುಗಳು ಮತ್ತು ಶ್ರೀ ದೇವಿ ಮಹಾತ್ಮೆಯ ಪುಸ್ತಕಗಳು ಕಣ್ಣಿಗೆ ಬೀಳುತ್ತವೆ.

ಮನೆಯ ಮುಂಬಾಗದ ಅಂಗಳ ಬಲಗಡೆ ಜಗುಲಿ ,ಇನ್ನೂ ಮುಂದೆ ಎತ್ತು ಎಮ್ಮೆ ಕಟ್ಟಲು ಗ್ವಾಂದಿಗೆ ( ಪ್ರಾಣಿಗಳ ಮುಂದೆ ಹುಲ್ಲು ಹಾಕುವ ಸ್ಥಳ) ಇದ್ದವು.ಮನೆಯ ಬಾಗಿಲ ನೇರಕ್ಕೆ ಒಂದು ಜಾಲಿಯ ಮರ ಬೇಕಂತಲೇ ಕಡಿಯದೆ ಬಿಟ್ಟಿದ್ದರು ಕಾರಣ ಜಾನುವಾರುಗಳಿಗೆ ನೆರಳಿರಲಿ ಎಂದು.

ಏ ಗುರುಸಿದ್ದ ಇನ್ನೂ ಸಗಣಿ ತಗದಿಲ್ಲ ದನ ಹೊಡ್ಕಂಡು ಮೇಸಾಕ ಯಾವಾಗಿನ್ನ ನೀನು ಹೋಗಾದು? ಎಂದು  ಮುಕುಂದಯ್ಯ ಏರುಧ್ವನಿಯಲ್ಲಿ ಗದರಿದ್ದನ್ನು ಕಂಡು ಅಣ್ಣ ಹೊರಟೆ ಎಂದು ದನಗಳ ಕಣ್ಣುಗಳನ್ನು (ಹಗ್ಗ) ಬಿಚ್ಚಿ  ದಕ್ಷಿಣಾಭಿಮುಖವಾಗಿ ಹತ್ತಕ್ಕೂ ಹೆಚ್ಚಿನ ದನಗಳನ್ನು ಹೊಡೆದುಕೊಂಡು ಹೋರಟನು ಧೂಳು ಅವನನ್ನು ಹಿಂಬಾಲಿಸಿತು.

 ಮಾದರ  ಗುರುಸಿದ್ದನ ತಂದೆ ಮುಕುಂದಯ್ಯನ  ಹತ್ತಿರ ಐದು ವರ್ಷಗಳ ಹಿಂದೆ  ಹದಿನೈದು ಸಾವಿರ ಸಾಲ ಮಾಡಿ  ಮನೆಯಲ್ಲಿ ಇಬ್ಬರು ಗಂಡು ಮಕ್ಕಳು ಮತ್ತು ವಯಸ್ಸಾದ ಹೆಂಡತಿಯನ್ನು ಸಾಕಲು ಸ್ವಲ್ಪ ಭಾಗ ಕೊಟ್ಟು ಪ್ರತಿದಿನ  ಹೆಂಡದ ಅಂಗಡಿಗೆ ಪೀಸು ಕಟ್ಟುತ್ತಿದ್ದ .ಕಳೆದವರ್ಷ ಕರುಳು ತೂತು ಬಿದ್ದು ಮುದಿ ಹೆಂಡತಿ ಇನ್ನೂ ವಯಸ್ಸಿಗೆ ಬರದ ಮಕ್ಕಳ ಮೇಲೆ ಸಾಲ ಹೊರೆ ಹೊರಿಸಿ ಶಿವನ ಪಾದ ಸೇರಿದ . ಒಂದು ವರ್ಷದ ಹಿಂದೆ ಮುಕುಂದಯ್ಯ ಏನಮ್ಮ ಸಿದ್ದಮ್ಮ ನಿನ್ನ ಗಂಡ ನಮ್ಮತ್ರ ಸಾಲ ತಕಂಡಿರೋದು ಗೊತ್ತಾಲ್ಲ ಎಲ್ಲಿ ಕೊಡು ಅಂದು ಬಿಟ್ಟರು ." ನಮ್ಮತ್ರ ದುಡ್ಡು ಎಲ್ಲೈತೆ ಸಾಮಿ ನಿಮಗೆ ಗೊತ್ತು" ಎಂದು ಸಿದ್ದಮ್ಮ ಮಾತು ಮುಗಿಸಿರಲಿಲ್ಲ ಅಲ್ಲಮ್ಮ ಇದೊಳ್ಳೆ ಕಥೆ ಆತಲ್ಲ ನಾವೇನು ಕಲ್ಲಳ್ಳು ಕೊಟ್ಟಿಲ್ಲ ಬಡ್ಡಿ ಎನೂ ಬ್ಯಾಡ ಅಸಲು ಕೊಡ್ರಿ ಸಾಕು " ಅಂದರು ಮುಕುಂದಯ್ಯ. ನಮ್ಮತ್ರ ಹತ್ತು ಪೈಸಾನೂ ಇಲ್ಲ ಸಾಮಿ ಇಗ ಇವನು ನನ್ನ ಎರಡನೆ ಮಗ ಗುರುಸಿದ್ದ ಇವನ್ನ ನಿಮ್ ಮನ್ಯಾಗೆ ಸಂಬಳ ಇಕ್ಕಳಿ ವರ್ಸಕ್ಕೆ ಮೂರು ಸಾವಿರ ಮುರ್ಕಳಿ ತೀರಾವರ್ಗೂ ಇವನು ನಿಮ್ಮನೇಲೆ ಇರ್ಲಿ ಅಂದಳು ಅಜ್ಜಿ , ಮುಕುಂದಯ್ಯನಿಗೆ ಅದೇ ಸರಿ ಎನಿಸಿ ಮನೆಯ ದನಗಳನ್ನು ನೋಡಿಕೊಳ್ಳಲು ಇವನಿದ್ದರೆ ಸರಿ ಎಂದು ಆತು ನಾಳೆ ಬಾರೊ ಗುರುಸಿದ್ದ ಅಂದು ಹೊರಟರು ಮುಕುಂದಯ್ಯ.

ದೇವ್ರೇ ಈ ಕರ್ಮ ನೋಡೋಕೆ ನನ್ನ ಯಾಕೆ ಬಿಟ್ಟೆ ,ಅವರೇನೋ ಸಾಲ ಮಾಡಿ ಕುಡ್ದು ,ಕುಡ್ದು ಇಂಗೆ ನಡಾ ನೀರಾಗೆ ನಮ್ಮ ಬಿಟ್ಟು ಹೋದರು ಈಗ ಇವರು ಮಾಡಿದ ಸಾಲ ತೀರಸಲಾ? ಜೀವನ ಹ್ಯಾಂಗ ಮಾಡ್ಲಿ? ಗುರುಸಿದ್ದ ಇನ್ನೂ ಕೂಸು ರೆಟ್ಟೇಲಿ ಸಕುತಿ ಇಲ್ಲ , ದೊಡ್ಡಪ್ಪಗಳ ಮನೇಲಿ   ಎಂಗೆ ಕೆಲಸ ಮಾಡ್ತಾನೋ? ಅವ್ರು ಹೆಂಗೆ ನೋಡ್ಕೋತಾರೋ? ಯಾಕೆ ದೇವ್ರೇ ನಮಗೆ ಯಾಕೆ ಇಂತಹ ಕಷ್ಟ ? ಹೀಗೆ  ಒಬ್ಬಳೆ ಯೋಚಿಸುತ್ತಾ ಕುಳಿತಾಗ ಅಸ್ಥಿಪಂಜರದ ಮೇಲಿರುವ ಸುಕ್ಕುಗಟ್ಟಿದ ತೊಗಲಿನ ಮೂಲಕ ಕಣ್ಣಿನಿಂದ ಹನಿಗಳು ಜಿನುಗಲಾರಂಭಿಸಿದವು."ಅಮ್ಮೋ ಉಮ್ಮಕ್ಕೆ ಇಕ್ಕು ಬಾ " ಎಂದು ದೊಡ್ಡ ಮಗ ಪೂಜಾರಿ ಕರೆದಾಗ ಎರಡೂ ಕೈಗಳನ್ನು ನೆಲಕ್ಕೂರಿ ನಿಧಾನವಾಗಿ ಎದ್ದು ಅಡಿಗೆ ಮನೆಗೆ ಹೋದಳು ರಂಗಮ್ಮ. ಅವರ ಪಕ್ಕದ ಮನೆಯ ಮಾದೇವ ಹೆಂಡ ಕುಡಿದು ಬಂದು ಹೆಂಡತಿ ಮಕ್ಕಳನ್ನು ನಡೆಯುತ್ತಾ ಕೆಟ್ಟ ಪದಗಳಲ್ಲಿ ಬೈಯುತ್ತಾ ಅರಚಾಡುವುದು ಕಂಡರೂ ಇದೇ ಮಾಮೂಲು ಎಂದು ಮಗನಿಗೆ ಮುದ್ದೆ ಇಕ್ಕಿ ತಾನೂ ತಿನ್ನುವ ಶಾಸ್ತ್ರ ಮಾಡಿದ ಹರಿದ ದುಪ್ಪಡಿ ಹೊದ್ದು ಮೂಲೆಯಲ್ಲಿ ಮಲಗಿದಳು " ಬುಡ್ಡಿ ಕೆಡಸಪ್ಪ ಸೀಮೆಣ್ಣೆ ಮುಗುದೈತೆ ನಾಳೆ ಹೊಯ್ಸಕೊಂಡು ಬಾ ಇಲ್ಲ ಅಂದರೆ ಕತ್ತಲಾಗಿರಬೇಕು ಮಕ್ಕ " ಅಂದು ಮಲಗುವ ಶಾಸ್ತ್ರ ಮಾಡದಳು ನಿದ್ರೆ ಬರಬೇಕಲ್ಲ. ನಿದ್ರೆ ಇಲ್ಲದ ರಾತ್ರಿ ಕಳೆಯುವುದು ರಂಗಜ್ಜಿಗೆ ರೂಢಿಯಾಗಿತ್ತು.


ಶಾಲೆಯಲ್ಲಿ ತಾನಾಯಿತು ತನ್ನ ಓದಾಯಿತು ಎಂದು ಓದಿನಲ್ಲಿ ಮಗ್ನನಾಗಿದ್ದ ಸತೀಶ್ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಇಡೀ ಹತ್ತನೇ ತರಗತಿಯ ವಿದ್ಯಾರ್ಥಿಗಳಲ್ಲಿ ಅತೀ ಹೆಚ್ಚು ಅಂಕ. ಪಡೆದು ಮಹೇಶ ನನ್ನು ಹಿಂದಿಕ್ಕಿದ್ದ ಅದಕ್ಕಿಂತ ಮೊದಲು ಎಂಟನೇ ತರಗತಿಯಿಂದ ಮಹೇಶ ಮೊದಲ ಸ್ಥಾನವನ್ನು ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ ಉತ್ತರ ಕರ್ನಾಟಕದಿಂದ ಈ ಊರಿನ ಶಾಲೆಗೆ ವರ್ಗಾವಣೆ ಆಗಿ ಬಂದಿದ್ದ ಇಂಗ್ಲೀಷ್ ಮೇಷ್ಟ್ರು ಶಿವಪ್ಪ ಮಲ್ಲಪ್ಪ ಸಾರಂಗಿ ಮಕ್ಕಳು ಅವರನ್ನು ಶಾರ್ಟ್ ಆಗಿ ಎಸ್ ಎಮ್ ಎಸ್ ಎಂದು ಕರೆಯುತ್ತಿದ್ದರು ಮಕ್ಕಳೇ ಎಲ್ಲ್ರೂ  ಸತೀಶನಿಗೆ ಚಪ್ಪಾಳಿ ಹೊಡೀರಿ ಎಂದಾಗ ಎಲ್ಲರೂ ಚಪ್ಪಾಳೆ ಹೊಡೆಯೋದು ನೋಡಿ " ಏ ಮಂಗ್ಯಾನ ಮಕ್ಕಳ ಹಂಗೇನ್ರಲಾ ಚಪ್ಪಾಳಿ ಹೊಡೆಯೋದು ಅವ್ನನವುನ್ ನಿಮಗೊಂದು ಶಿಸ್ತ್ ಇಲ್ಲ ನೋಡ್ರಿ .ಒಂಟೂತ್ರೀ  ಚಪ್ಪಾಳಿ ಹೊಡಿರಲೇ ಅಂದಾಗ ಎಸ್ಸಮ್ಮೆಸ್ ಮಾಸ್ಟರ್ ಭಾಷೆ ಕೇಳಿ ಮಕ್ಕಳಿಗೆ ನಗು ತಡೆಯಲಾಗದೇ ನಗುತ್ತಲೇ ಒನ್ಟೂತ್ತೀ ಚಪ್ಪಾಳೆ ಹೊಡೆದರು ಚಪ್ಪಾಳೆ ಹೊಡೆಯುವಾಗ  ಮುಂದಿನ ಸಾಲಿನಲ್ಲಿ ಕುಳಿತಿದ್ದ  ಸತೀಶ್ ನಿಧಾನವಾಗಿ ಹಿಂತಿರುಗಿ ನೋಡಿದ ಎಲ್ಲರೂ ಖುಷಿಯಿಂದ ಚಪ್ಪಾಳೆ ತಟ್ಟುತ್ತಿದ್ದರೆ ಮಹೇಶ್ ಮಾತ್ರ ವಿಚಿತ್ರ ಮುಖಭಾವದಿಂದ ತಟ್ಟಲೋ ಬೇಡವೋ ಎಂಬಂತೆ ತಟ್ಟುತ್ತಿದ್ದ.ಎಲ್ಲರೂ ಚಪ್ಪಾಳೆ ತಟ್ಟುವುದು ನಿಲ್ಲಿಸಿದರೂ ಅವಳು ಮಾತ್ರ ತಟ್ಟುತ್ತಲೇ ಇದ್ದಳು .ನಂತರ ಅರಿವಾಗಿ
ನಾಚಿಕೆಯಿಂದ ತಲೆತಗ್ಗಿಸಿದಳು ಸುಜಾತ
ಅವಳನ್ನು ನೋಡಿದ ಸತೀಶನಿಗೆ ಇಂದೇಕೋ ಅವಳು ಬಹಳ ಸುಂದರವಾಗಿ  ಕಾಣುತಿಹಳಲ್ಲ ದಿನಕ್ಕೊಂದು ಬಾರಿ ಬೇಕು ಅನ್ನದಿದ್ದರೂ ಸುಮ್ಮನೆ ನೋಡುವಾಗ ಸುಜಾತ ಈಗೆ ಕಂಡಿರಲಿಲ್ಲ ಅವಳು ಇಂದು ಮಹಾಚೆಲುವೆಯಂತೆ ಕಾಣುತಿಹಳಲ್ಲ ವಾವ್ ಎಂದು ಇನ್ನೂ ಎನೋ ಲಹರಿಯಲಿ ಮುಳುಗಿದ್ದ ಸತೀಶ " ನೋಡ್ಪ ಸತೀಶ ಇಂಗ ಓದು ನಿಂಗೆ ಒಳ್ಳೆ ಭವಿಷ್ಯ ಐತೆ " ಎಂದು ಎಸ್ಸೆಮ್ಮೆಸ್ ಮೇಷ್ಟು ಅಂದಾಗ ಎಚ್ಚರಗೊಂಡ ಸತೀಶ ಆತು ಸರ್ ಎಂದು ತೊದಲುತ್ತಲೆ ಹೇಳಿದ ಸತೀಶ.

ನೇಪಾಳ ಪ್ರವಾಸ ಲೇಖನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಮೂರು ವರ್ಷಗಳ ಹಿಂದೆ


ನೇಪಾಳ ಪ್ರವಾಸ ಲೇಖನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಮೂರು ವರ್ಷಗಳ ಹಿಂದೆ

13 May 2020

ದ್ವಾಪರ ಕಾದಂಬರಿ ವಿಮರ್ಶೆ

ಸಂಕೀರ್ಣ ಮಹಾಭಾರತಕ್ಕೊಂದು ವಿಭಿನ್ನ ವಿಶ್ಲೇಷಣೆ

ದ್ವಾಪರ

 ಕಾದಂಬರಿ

ಪುಸ್ತಕ ವಿಮರ್ಶೆ

ಕಂನಾಡಿಗ ನಾರಾಯಣ ರವರು ಬರೆದಿರುವ ದ್ವಾಪರ  ಪುಸ್ತಕ ಓದುತ್ತಾ ಹೋದಂತೆಲ್ಲಾ ನಮ್ಮಲ್ಲಿ ವೈಚಾರಿಕ ಚಿಂತನೆ ಜಾಗೃತವಾಗುತ್ತಾ ಹೋಗುತ್ತದೆ.
ಸಂಕೀರ್ಣ ಮಹಾಭಾರತಕ್ಕೊಂದು ವಿಭಿನ್ನ ವಿಶ್ಲೇಷಣೆ  ಎಂಬ ತಲೆ ಬರಹ ಓದುತ್ತಲೆ ಓದುಗರಿಗೆ ಕುತೂಹಲ ಮೂಡಿರುತ್ತದೆ.ಕಾದಂಬರಿಯ ಒಳಪುಟಗಳಲ್ಲಿ ಕಣ್ಣಾಡಿಸಿದಂತೆ ಓದುಗರಿಗೆ ನಿರಾಶೆ ಎನಿಸದು.

ರಾಮಾಯಣ, ಮಹಾಭಾರತ ,ಭಗವದ್ಗೀತೆ  ಕೃತಿಗಳು ಭಾರತದ ಶ್ರೇಷ್ಠ ಮಾಹನ್ ಗ್ರಂಥಗಳು ಎಂಬುದರಲ್ಲಿ  ಸಂಶಯವಿಲ್ಲ ನಾವೆಲ್ಲರೂ ಈ ಗ್ರಂಥಗಳನ್ನು ದೈವಿಕ ಹಿನ್ನೆಲೆಯಲ್ಲಿ, ಪವಾಡಗಳ ಹಿನ್ನೆಲೆಯಲ್ಲಿ, ಧಾರ್ಮಿಕ, ಹಿನ್ನೆಲೆಯಲ್ಲಿ ಐತಿಹಾಸಿಕವಾದ ಹಿನ್ನೆಲೆಯಲ್ಲಿ ವಿವಿಧ ಲೇಖಕರು ,ಕವಿಗಳು ಬರೆದ ಮಹಾಭಾರತಗಳನ್ನು ಓದಿದ್ದೇವೆ ,ಪ್ರತಿ ಬಾರಿ ಮಹಾಭಾರತವನ್ನು ಓದುವಾಗ ರಸಸ್ವಾಧನೆ ,ಭಕ್ತಿ ರಸವನ್ನು ಸವಿದಿದ್ದೇವೆ .

ಪ್ರಸ್ತುತ ಕಾದಂಬರಿಯಲ್ಲಿ ಕಾದಂಬರಿಕಾರರು ಚಿತ್ತಿತವಾಗಿರುವ  ಮಾಹಭಾರತವನ್ನು  ನಾಸ್ತಿಕರು ಕೂಡ ಓದಿ ಮೆಚ್ಚುಗೆ ವ್ಯಕ್ತಪಡಿಸಿವರು. ಅಂದರೆ ಆಸ್ತಿಕರು ಇದನ್ನು ಸಂಪೂರ್ಣವಾಗಿ ತಿರಸ್ಕರಿಸಲು ಆಗದು .

ಈಗಾಗಲೇ ಕಾಂಡ ಕಾದಂಬರಿಯ ಮೂಲಕ ರಾಮಾಯಣದ ಕೆಲವು ಮಿತ್ ಗಳನ್ನು ಒಡೆಯುವ ಪ್ರಯತ್ನ ಮಾಡಿದ್ದ ಕಂ ನಾಡಿಗ ನಾರಾಯಣ ರವರು ಅದರ ಮುಂದುವರೆದ ಭಾಗ ಎಂಬಂತೆ ಮಹಾಭಾರತದ ಕಾದಂಬರಿ ದ್ವಾಪರ ನಮ್ಮ ಕೈಗಿತ್ತಿದ್ದಾರೆ. ಇಲ್ಲಿ ಕೃಷ್ಣ ಅತೀಂದ್ರಿಯ ಶಕ್ತಿ ಇರುವ ದೇವರಲ್ಲ ಸಮಾನ್ಯವಾದ ಮಾನವ, ಅವನು ಮಾಡಿರುವ ಚಮತ್ಕಾರ, ಸಾಧನೆ ,ಅತೀಂದ್ರಿಯ ಶಕ್ತಿ,, ಇವುಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದ್ದಾರೆ.

ಕಾದಂಬರಿಕಾರರು ಮೊದಲ ಪುಟದಲ್ಲಿ ಹೇಳಿದಂತೆ " ಇಲ್ಲಿ ಯಾವುದು ಹೊಸತಲ್ಲ,ಯಾವುದು ಹಳೆಯದಲ್ಲ, ಇಲ್ಲಿ ಯಾವುದೂ ಆರಂಭವಲ್ಲ, ಯಾವುದೂ ಅಂತ್ಯವೂ ಅಲ್ಲ, ಇಲ್ಲಿ ಯಾವದೂ ಶಾಶ್ವತವಲ್ಲ, ಅಶಾಶ್ವತವೂ ಅಲ್ಲ,, ಆದರೆ ನಿರಂತರ ಬದಲಾವಣೆಯೊಂದೆ ಶಾಶ್ವತ "
ಎನ್ನುವ ಮಾತು ಕಾದಂಬರಿ ಓದಿದಂತೆ ಸ್ಪಷ್ಟವಾಗಿ ಅರ್ಥವಾಗುತ್ತದೆ.
ಕೆಲವು ಲೇಖಕರು ಕೆಲವರನ್ನು ಮಾತ್ರ ವಿಲನ್ ಆಗಿ ಚಿತ್ರಿಸಿದ್ದಾರೆ. ಇವರು ಆಗಲ್ಲ ಸುಯೋಧನ ಸಹ ಕೆಲ ಗುಣಗಳಲ್ಲಿ ಇತರರಿಗಿಂತ ಮೇಲು ಎಂಬುದನ್ನು ಚೆನ್ನಾಗಿ ಚಿತ್ರಿಸಿದ್ದಾರೆ.

ಮಹಾಭಾರತದಲ್ಲಿ ಕಥೆ ಹೇಳುವ ಬದಲು
ಪಾತ್ರಗಳೆ ಸ್ವಗತದಲಿ ಮಾತನಾಡುವ ತಂತ್ರದ ಮೂಲಕ ಕಥೆಯು ನಿರಂತರವಾಗಿ ಮುಂದುವರೆಯುವ ಕೌಶಲ್ಯ ಗಮನಸೆಳೆಯಿತು
ಗರ್ಭ, ಪ್ರಜ್ಞೆ,  ಖಾಂಡವ, ದಾಳ ,ಅಕ್ಷಯ, ಅಜ್ಞಾತ, ಸಂಧಾನ, ಜಯ, ಎಂಬ ವಿಭಾಗದಲ್ಲಿ ಕಾದಂಬರಿಯು ಮುಂದುವರೆಯುವುದು. ವ್ಯಾಸರಿಂದ ಆರಂಭವಾಗುವ ಕಾದಂಬರಿ ಸತ್ಯವತಿ, ಕುಂತಿ,ಗಾಂಧಾರಿ, ಭೀಷ್ಮ, ಪಾಂಡವರು ಕೌರವರು, ಕೃಷ್ಣ, ದ್ರೌಪದಿ ಇನ್ನೂ ಮುಂತಾದ ಎಲ್ಲಾ ಪಾತ್ರಗಳು ತಮ್ಮ ಅಂತರಾವಲೋಕನ ಮಾಡಿಕೊಂಡಂತೆ ನಮಗೆ ಭಾಸವಾಗುತ್ತದೆ.
ಒಟ್ಟಿನಲ್ಲಿ ಕಾದಂಬರಿಯನ್ನು ಓದಿ ಮುಗಿಸಿದಾಗ ಮಹಾಭಾರತದ ಬಗ್ಗೆ ಅಲ್ಲಿಯ ಪಾತ್ರಗಳ ಬಗ್ಗೆ ನಮ್ಮಲ್ಲಿ ವಿಶ್ಲೇಷಣೆ ಆರಂಭವಾಗುವುದರಲ್ಲಿ ಸಂಶಯವಿಲ್ಲ.

ಕಾದಂಬರಿ: ದ್ವಾಪರ
ಲೇಖಕರು: ಕಂ ನಾಡಿಗ ನಾರಾಯಣ
ಪ್ರಕಾಶನ: ನವಕರ್ನಾಟಕ
ಬೆಲೆ: ೨೯೦

ಸಿ ಜಿ ವೆಂಕಟೇಶ್ವರ
ತುಮಕೂರು


12 May 2020

ನಮನ ( ಇಂದು ವಿಶ್ವ ದಾದಿಯರ ದಿನ)


*ನಮನ*

(ಇಂದು ವಿಶ್ವ ಶುಶ್ರೂಷಾಧಿಕಾರಿ (nurses) ದಿನ)

ರೋಗಿಗಳ ಪಾಲಿಗೆಂದೂ  ಆಪ್ದ್ಭಾಂಧವರು
ಸೇವೆಗೆ ಮತ್ತೊಂದು ಹೆಸರೇ  ಶುಶ್ರೂಷಕರು
ಆಪ್ತವಾಗಿ ಆರೋಗ್ಯ ಕಾಪಾಡುವ ದಾದಿಯರು
ನಿಮಗಿದೋ ನಮ್ಮಗಳ ನಮನ ಸಾವಿರಾರು

ವಿಶ್ವ ಶುಶ್ರೂಷಾಧಿಕಾರಿ ದಿನದ ಶುಭಾಶಯಗಳು

*ಸಿ ಜಿ ವೆಂಕಟೇಶ್ವರ*

11 May 2020

ಸನ್ಮಾರ್ಗ ಭಾಗ೨

ಹೆದ್ದಾರಿ ಭಾಗ ,೨

ರಸ್ತೆಯ ಪಶ್ಚಿಮಾಭಿಮುಖವಾಗಿ ಇರುವ ಕಟ್ಟಡದ ಮೇಲೆ ಸರ್ಕಾರಿ ಪದವಿಪೂರ್ವ ಕಾಲೇಜು ಯರಬಳ್ಳಿ  ಎಂಬ ದೊಡ್ಡದಾದ ಬೋರ್ಡ್ ರಸ್ತೆಗೆ  ಕಾಣುತ್ತಿತ್ತು.ರಸ್ತೆಯಲ್ಲಿ  ವಾಹನಗಳಲ್ಲಿ ಓಡಾಡುವ ಜನ ಪರವಾಗಿಲ್ಲ ಈ ಊರಲ್ಲು ಜೂನಿಯರ್ ಕಾಲೇಜಿದೆ ಎಂದು ಆಶ್ಚರ್ಯಕರ ಮತ್ತು ಮೆಚ್ಚುಗೆ ಮಾತನಾಡಿಕೊಳ್ಳುತ್ತಿದ್ದರು.

ಕಾಂಪೌಂಡ್ ಇಲ್ಲದ ವಿಶಾಲವಾದ ಶಾಲಾ ಆವರಣ ಪ್ರವೇಶಿಸಿದ ತರ್ಲೇ ಹುಡುಗರು ಒಬ್ಬರನ್ನು ಕಂಡೊಡನೆ  ಇದ್ದಕ್ಕಿದ್ದಂತೆ ನಿಶ್ಯಬ್ದವಾಗಿ  ಸಾಲಾಗಿ ಬಂದು ವೃತ್ತಾಕಾರವಾಗಿ ಕುಳಿತು ಶಾಲೆಯಲ್ಲಿ ನಿನ್ನೆ ಮಾತ್ರ ತೆಗೆದಿದ್ದ ಪುಸ್ತಕಗಳನ್ನು ಮನಸ್ಸಿಲ್ಲದಿದ್ರೂ ಅವರ ಭಯಕ್ಕೆ ಮನದಲ್ಲೇ ಶಪಿಸುತ್ತಾ , ಗೊಣಗುತ್ತಾ  ತೆರೆದು ಓದುವ ನಾಟಕ ಶುರುಮಾಡಿದರು
ಯಾವನೆಲೇ ಅದು ಗೊನ ಗೊನ ಶಬ್ದ. ಮುಚ್ಕೊಂಡು ಹೋದ್ರೋ ಓದ್ರೋ ಅಂದಿತು ಕರ್ಕಶ ಸದ್ದು "ಮುಚ್ಚಿದರೆ ಓದಕಾಗಲ್ಲ ಸರ್"  ಚಿದಾನಂದ್ ನ ಗುಂಪು ಸಣ್ಣಗೆ ನಕ್ಕಿತು. ಅವರಿಗದು ಕೇಳಿಸಲಿಲ್ಲ ಹುಡುಗರು ಬಚಾವ್.

 ಶಾಲೆಯ ಶಿಸ್ತು ಕಾಪಾಡುವ ಗುತ್ತಿಗೆ ಪಡೆದವರಂತೆ  ಆಗಾಗ ಕಿರುಚುವ, ತರಲೆಗಳ ಪಾಲಿನ ಸಿಂಹ ಸ್ವಪ್ನ , ಅನವಶ್ಯಕವಾಗಿ ಶಾಲೆಯಿಂದ ಮಕ್ಕಳು ಕಾಲಿಟ್ಟರೆ  ಪೀಪೀ ಊದುವ ಪೀಟಿ ಮಾಸ್ಟರ್‌ ಕಾಡಪ್ಪ  ಮಾತಷ್ಟೇ ಒರಟು ಮಕ್ಕಳ ಬಗ್ಗೆ ಕಾಳಜಿ ಅತಿ ಮತ್ತು ಒಳ್ಳೆಯ ಹೃದಯ ವ್ಯಕ್ತಿ ಮೊನ್ನೆ ರೂಪ ತಲೆ ಸುತ್ತಿ ಪ್ರಜ್ಞೆ ತಪ್ಪಿ ಬಿದ್ದಾಗ ಎಲ್ಲಾ ‌ಶಿಕ್ಷಕರು ಬರೀ ನೋಡಿ ಕನಿಕರ ತೋರುತ್ತಿದ್ದಾಗ   ಕಾಡಪ್ಪ ಸರ್ ತಮ್ಮ ಮಗಳಂತೆ  ‌ಶಾಲೆಯ ಪಕ್ಕವೇ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು ಆಗಿನಿಂದ ಮಕ್ಕಳಿಗೆ ಕಾಡಪ್ಪ ಮೇಷ್ಟ್ರು ಬಗ್ಗೆ ಸ್ವಲ್ಪ ಗೌರವ ಹೆಚ್ಚಾಯಿತು ಆದರೆ ಅವರು  ಕಿರುಚುವ ಮತ್ತು ಹೊಡೆಯುವ ಗುಣ ನೋಡಿ ಚಿದಾನಂದ್ "ಯಾರೋ ಈಯಪ್ಪನಿಗೆ ಸರಿಯಾದ ಹೆಸರು ಇಟ್ಟವ್ರೆ ಇವರು ಕಾಡಪ್ಪನೂ ಹೌದು.ಕಾಟಪ್ಪನೂ ಹೌದು " ಏಯ್ ಸುಮ್ನೆ ಇರೋ ಈ ಕಡೆ ಬತ್ತಾರೆ ಸತೀಶ್   ಗಾಬರಿಯಿಂದ ಅಂದಾಗ ಎಲ್ಲರೂ ನಿಶ್ಯಬ್ದ. ಒಮ್ಮೆ ಪೊಲೀಸರಂತೆ ಎಲ್ಲರನ್ನೂ ನೋಡಿ ಮುಂದೆ ಹೋದರು ಕಾಡಪ್ಪ ಮೇಷ್ಟು.
ಶಾಲೆಯ ಬೆಲ್ ಕೇಳಿ ಮಕ್ಕಳು ಬೆಳಗಿನ ಪ್ರೆಯರ್ಗೆ ಸಾಲಾಗಿ   ಹೊರಟರು.
 ಹತ್ತನೆಯ ತರಗತಿಗೆ ಗಣಿತ ವಿಷಯದ
ಮೊದಲ ಅವಧಿ ಮುಗಿದು‌ ಎರಡು‌ ನಿಮಿಷವಾಗಿರಲಿಲ್ಲ  ತರಗತಿಯಲ್ಲಿ ಮಕ್ಕಳ ಗಲಾಟೆ ತಾರಕಕ್ಕೇರಿ ರಸ್ತೆ ದಾಟಿ ಊರ ತಲುಪುವುದರಲ್ಲಿತ್ತು.ಇದ್ದಕ್ಕಿದ್ದಂತೆ ತರಗತಿ ಸ್ತಬ್ಧ ,ಕಿಟಕಿಯ ಬಳಿ ಯಾರೊ ಬಂದು ನಿಂತಂತಾಯಿತು.ಐವತ್ತಕ್ಕೂ ಹೆಚ್ಚಿನ ವಯಸ್ಸಿನ ಕನ್ನಡಕದಾರಿ ,ಮೀಸೆಇಲ್ಲ ,ಬಾಯ್ದೆಗೆದರೆ ಎರಡು ಹಲ್ಲು ಉದುರಿರುವುದು  ಕಾಣಬಹುದು, ಅವರ ಕಂಡರೆ ಇಡೀ ಶಾಲೆಯಲ್ಲಿ ಮತ್ತು ಮಕ್ಕಳಿಗೆ ಏನೋ  ಒಂದು ರೀತಿಯ ಭಯಮಿಶ್ರಿತ ಗೌರವ ಅವರೆ ಬಿ ಎಸ್ ಬಿ‌ ಪೂರ್ಣ ಹೆಸರು ಬಷೀರ್ ಆದರೂ ಮಕ್ಕಳು ಬಿ‌ಎಸ್ ಬಿ ಎಂದೆ ಕರೆಯುತ್ತಿದ್ದರು. ತರಗತಿಯಲ್ಲಿ ಸೊಗಸಾದ ವಿಜ್ಞಾನ ಶಿಕ್ಷಕರು ಕಾಡಪ್ಪ ಮೇಷ್ಟ್ರು ತರಹ ಕಿರಚಾಟ, ಅರಚಾಟ, ಹೊಡೆಯುವುದು ಮಾಡದಿದ್ದರೂ ಅವರನ್ನು ಕಂಡರೆ ಮಕ್ಕಳಿಗೆ ಗೌರವ ಅವರ ಅತೀ ದೊಡ್ಡ ಬೈಗುಳ ಎಂದರೆ " ಎಂಗುಟ್ಟಿದ್ರೋ ನೀವು".

ತರಗತಿಯ ಪ್ರವೇಶಿಸಿ ಬಿಎಸ್ಬಿ ಮೇಷ್ಟ್ರು ಮಕ್ಕಳಿಗೆ ಎ ಪ್ಲಸ್ ಬಿ ಹೋಲ್ ಸ್ಸ್ಕ್ವೇರ್ ಸೂತ್ರ ‌ಏನು? ಯಾರು‌ ಹೇಳ್ತಿರಾ? ಎಂದಾಗ .ತರಗತಿಯಲ್ಲಿ ಮೌನ ಯಾರೂ ಬಾಯಿಬಿಡಲೇ ಇಲ್ಲ .ಇನ್ನೇನು ಬೈಯಲು‌ಶುರು ಮಾಡಬೇಕು ಎಂದು ಕೊಂಡಾಗ ಒಬ್ಬ ಹುಡುಗ ಕೈ ಎತ್ತಿದ " ವೆರಿ ಗುಡ್ ಬಾರೋ ಸತೀಶ ಬೋರ್ಡ್ ಮೇಲೆ ಬರಿ" ಎಂದರು ಮೇಷ್ಟ್ರು. ಬೋರ್ಡ್ ಮೇಲೆ ಸೂತ್ರ ಬರೆದು ನಿಂತ ಸತೀಶನ ಕಂಡು ಹೀಗೆ  ಓದಬೇಕು ಸುಮ್ಮನೆ ಗಲಾಟೆ ಮಾಡೋದಲ್ಲ ಎಂದು ಎಲ್ಲಾ ಮಕ್ಕಳಿಗೆ ಹೇಳುತ್ತಿರುವಾಗ ಹಿಂದಿ ಮೇಡಂ ಬಂದಿದ್ದ ನ್ನು ನೋಡಿ ತರಗತಿಯಿಂದ ಹೊರಬಂದರು.
ಶಿಕ್ಷಕರ ಕೊಠಡಿಯಲ್ಲಿ ಮತ್ತು ತರಗತಿಯಲ್ಲಿ ಸತೀಶನ ಗುಣ, ಓದುವ ರೀತಿಯ ಬಗ್ಗೆ ಸಕಾರಾತ್ಮಕವಾಗಿ ಚರ್ಚೆ ಆರಂಭವಾಗಿತ್ತು. ಯಾರು ಆ ಹುಡುಗ ಅಂದಾಗ ,ದೊಡ್ಡಪ್ಪಗಳ ಮನೆಯ ಹುಡುಗ ಪಡುವಲ ಸೀಮೆ ಹುಡುಗನಾದರೂ ಅವರ ಮಾವನ ಮನೆಯಲ್ಲಿ ಓದುತ್ತಿರುವ ಹುಡುಗ ಎಂದು ಅದೇ ಊರಿನ ಮೇಡಂ ಹೇಳಿದರು.

ಹಳ್ಳಿಯಲ್ಲಿ ಒಂದೆ ಹೆಸರಿನ ವ್ಯಕ್ತಿಗಳು ಬಹಳ ಇರುವಾಗ ಅವರ ಮನೆತನದ ಹೆಸರು ಸೇರಿಸಿ ವಿಳಾಸ ಹೇಳುವ ವಾಡಿಕೆ .ದೊಡ್ಡಪ್ಪಗಳ ಮನೆ ಮುಖ್ಯ ರಸ್ತೆಯ ಮಾರಮ್ಮನ ಗುಡಿಯ ಬಲಭಾಗದಲ್ಲಿ ಇನ್ನೂರು ಹೆಜ್ಜೆ ಹಾಕಿ ಎಡಕ್ಕೆ ತಿರುಗಿದರೆ ಸಿಗುವುದು. ಪಡುವಲ ಸೀಮೆಯ ಚೌಡಗೊಂಡನಹಳ್ಳಿಗೆ ಮದುವೆ ಮಾಡಿಕೊಟ್ಟಿದ್ದ ತಮ್ಮ ಅಕ್ಕನ ಮಗನನ್ನು ಇಲ್ಲೆ ಸಾಕಿ ಓದಿಸುತ್ತಿದ್ದರು ಸರಸ್ವತಜ್ಜಿ.

ದೊಡ್ಡಪ್ಪಗಳ ಮನೆಯಲ್ಲಿ ಸರಸ್ವತಜ್ಜಿ ಹಿರಿಯಳಾದರೂ ಮನೆಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದುದು ಆ ಕಾಲಕ್ಕೆ ಎಸ್ಸೆಸ್ಸೆಲ್ಸಿ ಪಾಸದ ಬುದ್ದಿವಂತನಾದ ಮುಕುಂದಯ್ಯ,ಮದುವೆ ಆಗಿ ಕೆಲ ದಿನಗಳಲ್ಲಿ ಹೆಂಡತಿಯು ತೀರಿಕೊಂಡರು ಮತ್ತೊಂದು ಮದುವೆಗೆ ಬಲವಂತ ಮಾಡಿದರೂ ಆಗಲಿಲ್ಲ. ಎರಡನೇ ಮಗ ಮುರಾರಿಗೆ ಹಿರಿಯೂರಿನ  ವಾಣಿ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ದೂರದ ಮದಕರಿ ಪುರದಿಂದ ಮದುವೆ ಮಾಡಿಕೊಂಡು ಬರಲಾಗಿತ್ತು.ಹೆಸರು ತಿಮ್ಮಕ್ಕ ಮನೆಯ ಅಡಿಗೆಯಿಂದ ಹಿಡಿದು‌ ಎಲ್ಲಾ ಜವಾಬ್ದಾರಿ ಅವರದೆ .ಮೂರನೆಯ ಮಗ ಬಿಳಿಯಪ್ಪ ಹೆಸರಿಗೆ ಮಾತ್ರ ಬಿಳಿಯಪ್ಪ ಆದರೆ ನಿಜವಾಗಿ ಕಪ್ಪು ಬಣ್ಣದ ಅಷ್ಟಾಗಿ ಓದಲು ಬರೆಯಲು ಬರದವನು ಆದರೆ ಬುದ್ದಿವಂತ ಮನೆಯ ಬೇಸಾಯ ಜವಾಬ್ದಾರಿ ಅವನದೇ ಮದುವೆಯ ವಯಸ್ಸಿಗೆ ಬಂದಿದ್ದರೂ ಮದುವೆಯಾಗಿರಲಿಲ್ಲ. ದೊಡ್ಡ ‌ಮಗಳನ್ನು ಹೊಳಲ್ಕೆರೆ ತಾ ಚೌಡಗೊಂಡನಹಳ್ಳಿಗೆ ಮದುವೆ ಮಾಡಿಕೊಡಲಾಗಿತ್ತು.

ಮದುವೆಯಾದ ಹದಿನಾರು ವರ್ಷಗಳ ಕಾಲ ಮಕ್ಕಳಾಗದ ಸರಸ್ವತಮ್ಮ ದೇವಿಯ ಪೂಜಿಸಲು ಆರಂಭಿಸಿದ ಫಲವಾಗಿ ಈ ಮೇಲಿನ ನಾಲ್ವರು ಮಕ್ಕಳನ್ನು ಪಡೆದ ಕಥೆಯನ್ನು ಆರಂಭದಲ್ಲಿ ಅವರು ಕೂಲಿ ಮಾಡಿದ ,ಕಷ್ಟ ಅನುಭವಿಸಿದ ರೀತಿಯನ್ನು ಸರಸ್ವತಜ್ಜಿ ಈಗ ಸ್ವಾರಸ್ಯಕರವಾಗಿ ಕತೆ ಹೇಳುವುದುಂಟು.

ಎರಡನೇ ಮಗನಿಗೆ ಇನ್ನೂ ಮಕ್ಕಳು ಆಗಿರಲಿಲ್ಲ ಅದಕ್ಕೆ ಚೌಡಗೊಂಡನಹಳ್ಳಿಯ ತನ್ನ ಅಕ್ಕನ ಮಗನಾದ ಸತೀಶನನ್ನು‌ ಕರೆದುಕೊಂಡು ಬಂದು ಇಲ್ಲೇ ಓದಿಸುತ್ತಿದ್ದರು. ಸತೀಶ ಚೆನ್ನಾಗಿ ಓದುವುದು ಅವನ ಗುಣ ನಡತೆಯನ್ನು ಇಡೀ ಶಾಲೆ ಮತ್ತು ಊರೇ ಮೆಚ್ಚಿತ್ತು. ಶಿಕ್ಷಕರ ಮೆಚ್ಚಿನ ಶಿಷ್ಯನಾಗಿದ್ದ ಸತೀಶ .

ಮುಂದುವರೆಯುವುದು.....

ಸಿ ಜಿ‌ ವೆಂಕಟೇಶ್ವರ

10 May 2020

ಸನ್ಮಾರ್ಗ ಭಾಗ _೧


*ಸನ್ಮಾರ್ಗ ಭಾಗ೧*

ಅಂದು ಮಂಗಳವಾರ ಬೆಳಿಗ್ಗೆ ಒಂಬತ್ತೋ ಒಂಭತ್ತುವರೆ ಇರಬಹುದು ಊರಿನ ಭಕ್ತಮಹಾಶಯರು ಸ್ನಾನ ಮಾಡಿ ಮಡಿ ಉಟ್ಟು ಅಮ್ಮನವರ ಗುಡಿಯ ಕಡೆ ಸಾಗುತ್ತಿದ್ದರು. ಗುಡಿಯಲ್ಲಿ ಆಯ್ತಾರಪ್ಪ ಅಮ್ಮನಿಗೆ ಗುಡಿಯ ಬಲಭಾಗದಲ್ಲೇ ಕಟ್ಟಿಗೆ ಒಲೆಯಲ್ಲಿ ತಳಿಗೆ ಅನ್ನ ಮಾಡುತ್ತಾ ಗರ್ಭಗುಡಿಯಲ್ಲಿ ಪೂಜೆಗೆ ಅಣಕ ಮಾಡುತ್ತಿದ್ದರು. ಗುಡಿಯ ಒಳಗೆ ಜನರು ಬಂದು ಕೈಮುಗಿದು ಮಂಗಳಾರತಿಗೆ ಕಾದು ಕುಳಿತರು ಗುಡಿಯ ಒಳಗಿದ್ದಕ್ಕಿಂತ ಸ್ವಲ್ಪ ಹೆಚ್ಚೇ ಗುಡಿಯಿಂದ ಹತ್ತು ಮೀಟರ್ ದೂರದಲ್ಲಿ ಕುಳಿತು ಕಾಣದಿರುವ ಪೂಜಾವಿಧಿಗಳನ್ನು ಕಾಣಲು ತವಕಿಸುತ್ತಿದ್ದರು .ಕೆಲವರು ನಾವೂ ಅವರಂತೆ ಗುಡಿಯ ಒಳಗೆ ಹೋಗಲಾಗುವುದಿಲ್ಲವಲ್ಲ ಎಂದು ಬೇಸರವಾದರೂ ಅಮ್ಮನ ನೆನದು ಭಯದಿಂದ ಅಲ್ಲೇ ಕೈಮುಗಿದು ‌ಕುಳಿತರು ಬಹುಶಃ ಅವರೆಲ್ಲರೂ ನಮಗೆ ಬೆಳಕಿನ ದಾರಿ ತೋರು ತಾಯಿ ಎಂದು ಬೇಡಿರಬೇಕು.
ಗುಡಿಯ ಮುಂದಿನ ಟಾರ್ ರೋಡ್ ದಾಟಿ ಇರುವ ಅಮ್ಮನ ಮರವೆಂದೇ ಹೆಸರಾದ ಬೇವಿನಮರದ ಕೆಳಗೆ ಚೌಕಾಬಾರ ಹಾಡುವ ನಾಲ್ಕು ಜನರ ತಂಡ ಹಾಜರಾಗಿ ಏನೊ ಸಾಧನೆ ಮಾಡಿದವರಂತೆ ಬೆವರು ವಾಸನೆ ಬರುವ ಟವಲ್ ಎತ್ತಿ ಗಾಳಿ  ಬೀಸಿಕೊಳ್ಳುತ್ತಾ ಆಟ ಮುಂದುವರೆಸಿದ್ದರು. ಇನ್ನೂ ಕೆಲವೇ ದಿನಗಳಲ್ಲಿ ಆ ಮರದ  ಆಯುಷ್ಯ ಮುಗಿಯಲಿದೆ ಎಂಬುದು ಅಮ್ಮನಿಗೆ ಗೊತ್ತಿತ್ತೇನೋ ಅವರಿಗೆ ಗೊತ್ತಿರಲಿಲ್ಲ.
ಗುಡಿಯಲ್ಲಿ ಗಂಟೆಗಳ ಶಬ್ಧ ಕೇಳಿತು ಅಲ್ಲಿಗೆ ಮಂಗಳಾರತಿ ಮುಗಿದಂತೆ ನಾಲ್ಕಾರು ಶಾಲಾ ಮಕ್ಕಳು ಸೇರಿದಂತೆ ಗುಡಿಯ ಒಳಗಿದ್ದವರಿಗೆ ಮಂಗಳಾರತಿ ತೀರ್ಥ ಪ್ರಸಾದ ಕೊಟ್ಟ ಮೇಲೆ  ಶಾಲಾ ಮಕ್ಕಳು ಚೀಲದೊಂದಿಗೆ   ಉತ್ತರದ ದಿಕ್ಕಿನಲ್ಲಿ ನಡೆಯಲು ಶುರು ಮಾಡಿದರು.

ಹೂಂ್ಞ ನೀವು ಬರ್ರಿ ತೀರ್ಥಕ್ಕೆ ಎಂದು ಫಣಿಭೂಷಣ ಗುಡಿಯ ಹೊರಗೆ ದೂರದಲ್ಲಿ ಇದ್ದ ಮಾದಿಗರಿಗೆ ಕರೆದ " ಇಲ್ಲ ಸಾಮಿ ನಾವು ಹತ್ರಕ್ಕೆ ಬರಾದಾ ? ಅವ್ವ ಸುಮ್ಮನಿರ್ತಾಳ ? ಬ್ಯಾಡ ಇಲ್ಲೇ ತಕಂಬನ್ನಿ ಭಂಡಾರ ತೀರ್ಥಾವಾ. ಅಂದರು ಫಣಿಭೂಷಣ ಗೊಣಗುತ್ತ ಅವರಿದ್ದಲ್ಲಿಗೆ ನಡೆದು ಬಂದು ಅವರ ಕೈ ತಾಗದಂತೆ ಮೇಲಿಂದ ಭಂಡಾರ ಉದುರಿಸಿ ಅವರು ತಂದಿದ್ದ ಲೋಟಗಳಿಗೆ ತೀರ್ಥ ಹಾಕಿ ಗುಡಿಯ ಒಳಗೆ ಹೋದ.

"ಏನ್ ಕಿಳ್ಳು ಹುಡುಗ್ರು ಮಾರಾಯ ಇವ್ರು ಅದೇನ್ ಓದ್ತಾವೋ ಏನೋ ? ಇದನ್ನೇನ್ರಲಾ ನಿಮ್ ಮೇಷ್ಟ್ರು ನಿಮಿಗೆ ಕಲ್ಸಿರೋದು" ಎಂದು ರಂಗಸ್ವಾಮಿಯವರು ಗದರಿಕೊಳ್ಳುವವರೆಗೆ ಆ ಹುಡುಗರು ಕೀಟಲೆ ಮಾಡುತ್ತಾ ,ಒಬ್ಬರಿಗೊಬ್ಬರು ಬೈದುಕೊಳ್ಳುತ್ತಾ ,ಜಗಳ ವಾಡುತ್ತಾ ರಸ್ತೆ ಎಲ್ಲಾ.... ನಮ್ಮದೇ ಎಂದುಕೊಂಡು ,ಕೆಲವೊಮ್ಮೆ ತಮ್ಮ ಕೈಚೀಲದಲ್ಲಿರುವ ಪುಸ್ತಕಗಳನ್ನು ಮೇಲೆಸೆದು ಕೆಳಗೆ ಬೀಳುವ ಮೊದಲೇ ಹಿಡಿಯುವ ಸಾಹಸ ಮಾಡುತ್ತಾ, ಜೋರಾಗಿ ಓಡೋ ಭರದಲ್ಲಿ ಮಹೇಶ ಮೈಲಿ ಕಲ್ಲಿಗೆ ಡಿಕ್ಕಿ ಹೊಡೆದ ಹುಡುಗರೆಲ್ಲ ಭಯದಿಂದ ಮಹೇಶನ ಹತ್ತಿರ ಹೋಗಿ ನೋಡಿದರು ತಲೆಯನ್ನು ಹಿಡಿದು  ಮಹೇಶ ಮಾತನಾಡದೇ ಸುಮ್ಮನೆ ಕುಳಿತಿದ್ದ.ಹತ್ತಿರ ಬಂದ ಸತೀಶ ಮಹೇಶನ‌ ತಲೆಸವರಿ ನೋಡಿದ ನೆತ್ತಿಯಲ್ಲಿ ಒಂದು ಉಂಡೆ ಗಾತ್ರದ ಉಬ್ಬು! ರಕ್ತ ಏನಾದರೂ ಬಂತಾ? ಚಿದಾನಂದ್ ಕೇಳಿದ ಇಲ್ಲ ಊದಿಕೊಂಡಿದೆ ಅಷ್ಟೇ.  ಸತೀಶ ಹೇ ಇವನ ತಲೆ ಕಬ್ಬಣ ಕಣಪ್ಪ ಅಂದ  ಚಿದಾನಂದ ಕಣ್ಣು ದಪ್ಪ ಮಾಡಿ ಉಬ್ಬು ಮೇಲೇರಿಸಿ ನುಡಿದ ,ಬರ್ರೋ ಸ್ಕೂಲ್ಗೆ ಟೈಮಾಗುತ್ತೆ ಅಂತ ಮತ್ತೆ‌ಅದೇ ತರಲೆ ಕೀಟಲೆ ಮಾಡುತ್ತಾ ರಾಜ್ಯ ಹೆದ್ದಾರಿ ೧೯ ರಲ್ಲಿ ನಡೆದು ಬಲಕ್ಕೆ ತಿರುಗಿ ಹೋದರು.

ಅದು ಯರಬಳ್ಳಿ ಅತೀ ಹೆಚ್ಚು ಎರೆಮಣ್ಣು ಇಲ್ಲದಿದ್ದರೂ ಎರೆ ಸೀಮೆ ಎಂದು ಕರೆಸಿಕೊಳ್ಳುವ ಈ ಹಳ್ಳಿ ಅತ್ತ ದೊಡ್ಡದೂ ಅಲ್ಲದ ಚಿಕ್ಕದೂ ಅಲ್ಲದ ಒಂದು ಸಾಧಾರಣವಾದ ಹಳ್ಳಿ .ಬೀದರ್ ಶ್ರೀರಂಗಪಟ್ಟಣ ‌ರಾಜ್ಯಹೆದ್ದಾರಿ ಹಾದು ಹೋದ ಪರಿಣಾಮ ಸುತ್ತಮುತ್ತಲಿನ ಹಳ್ಳಿಗಳಿಗಿಂತ ತುಸು ಬೆಳವಣಿಗೆ ಕಂಡ ಹಳ್ಳಿ ಎಂಭತ್ತರ ದಶಕವಾದರೂ ಇತರೆ ಹಳ್ಳಿಗಳಿಗಿಂತ ಹತ್ತು ವರ್ಷಗಳ ಕಾಲ ನಮ್ಮ ಹಳ್ಳಿ ಮುಂದಿದೆ ಎಂದು ಊರ ಮುಂದಿನ ಅರಳಿ  ಕಟ್ಟೆಯ  ಮೇಲೆ ಕುಳಿತವರು ಆಗಾಗ್ಗೆ ಕೊಚ್ಚಿಕೊಳ್ಳುತ್ತಿದ್ದರು.

  ಊರಿನ ಮುಂದೆ  ಪೂರ್ವ ಭಾಗದಲ್ಲಿ ರಸ್ತೆ ಹಾದು‌ ಹೋದ ಪರಿಣಾಮವಾಗಿ ಅದು ಅಲ್ಲಿನವರ ಭಾಷೆಯಲ್ಲಿ ಊರ ಮುಂದೆ ಎಂದು ಪ್ರಚಲಿತ. ರಸ್ತೆಯ ಇಕ್ಕೆಲಗಳಲ್ಲಿ ಪೈಪೋಟಿಗೆ ಎಂಬಂತೆ ಶೆಟ್ಟರ ಅಂಗಡಿಗಳು  ಬಣ್ಣ ಬಳಿದುಕೊಂಡು, ಮದುವಣಗಿತ್ತಿಯಂತೆ ಸಿಂಗರಿಸಕೊಂಡು ತಲೆಎತ್ತಿದ್ದವು.

ಅಲ್ಲೊಂದು‌ ಇಲ್ಲೊಂದು‌ ತುಂಬಾ ಹಳೆಯ ಬೇವಿನ ಮರಗಳು ಊರಿನ‌ ಮುಂದಕ್ಕೆ ನೈಸರ್ಗಿಕವಾಗಿ ತೋರಣ ಕಟ್ಟಿದಂತೆ ಊರಿನ ಅಂದ ಹೆಚ್ಚಿಸಿದ್ದವು ಅದರಲ್ಲೂ ಮಾರಮ್ಮನ ದೇವಾಲಯದ ಮುಂದೆ ಇದ್ದ ಮರಕ್ಕೆ ಒಂದು ವಿಶಿಷ್ಠವಾದ  ಸೊಬಗು ಮತ್ತು ಸೌಂದರ್ಯದ ಪರಿಣಾಮವಾಗಿ ಜನರು ಕೈಮುಗಿಯುವುದು ಪೂಜೆ ಮಾಡುವುದು ‌ನಡೆಯುತ್ತಲೇ ಇತ್ತು. ಈಗೀಗ ಜನರಲ್ಲಿ ಆ ಮರದ ಕುರಿತಾದ ಕಾಳಜಿ ಇನ್ನೂ ಹೆಚ್ಚಾಗಲು‌ ಶುರುವಾಯಿತು. ಹಿರಿಯೂರಿನ ಕೆಲ ಅಧಿಕಾರಿಗಳು ಬಂದು ಟೇಪ್ ಹಿಡಿದು ಅಳತೆ ಮಾಡಿ ಕೆಂಪು ಬಣ್ಣದ ಮೇಲೆ ಮನೆಗಳ ಮೇಲೆ ಪ್ಲಸ್ ರೀತಿಯಲ್ಲಿ ಗುರುತು ಮಾಡುವಾಗ ಕೆಲವರು ಯಾಕೆ ಎಂದು ವಿರೋಧಿಸಿ ಕೇಳಿದಾಗ "ನಮಗೇನು ಗೊತ್ತು ಸಾಹೇಬರು‌ ಹೇಳಿದರೆ ನಾವು ಹಾಕ್ತಿವಿ ಅಷ್ಟೇ" )ಊರಿನಲ್ಲಿ ಅಲ್ಪ ಸ್ವಲ್ಪ ಓದಿಕೊಂಡು ಪುಡಿರಾಜಕೀಯ ಮಾಡುವ  ರಾಜಶೇಖರ ಅಲಿಯಾಸ್ ರಾಜಿ ರಸ್ತೆ ಅಗಲ ಮಾಡುತ್ತಾರೆ (ಎನೊ ಯಾರೋ ಅಂಗಂದಿದ್ರ)ಈ ಶೆಟ್ಟರ ಅಂಗಡಿಗಳು ಮತ್ತು ಈ ಮರಗಳು ಹೋಗಬಹುದು ಅಂದ ಅಂದಿನಿಂದ .ಊರ‌ಮುಂದೆ ಕುಳಿತ ,ಮನೆಯಲ್ಲಿ ‌ಕುಳಿತ ಎಲ್ಲರ ಬಾಯಲ್ಲಿ ರಸ್ತೆಯ ಅಗಲ ಮಾಡುವ ಕುರಿತೇ ಮಾತು ಆಗಂತೆ ಈಗಂತೆ ಅವರ ಅಂಗಡಿ ಹೋಗುತ್ತಂತೆ ಇವರ ಅಂಗಡಿ ಅರ್ಧ ಹೋಗುತ್ತಂತೆ ಈ ಬೇವಿನ ಮರ ಹೋಗುತ್ತಂತೆ ಎಂದು ತಳ ಬುಡವಿಲ್ಲದ ಬರೀ ಅಂತೆ ಕಂತೆಗಳ ಸುದ್ದಿ ಯರಬಳ್ಳಿ ಮತ್ತು ಸುತ್ತ ಮುತ್ತಲಿನ ಜನರ ಬಾಯಲ್ಲಿ ‌ಹರಿದಾಡುತ್ತಿತ್ತು .ಅಂದಿನಿಂದ ಜನರಿಗೆ ಮಾರಮ್ಮನ ದೇವಾಲಯದ ಮುಂದಿರುವ ಮರದ ಮೇಲೆ ಒಂದು ರೀತಿಯ ಭಯ ಮತ್ತು ಭಕ್ತಿ ಮೂಡಿ ಜನರು ಆ ಮರದ ಹತ್ತಿರ ಹೋದಂತೆ ಭಾವುಕರಾಗುತ್ತಿದ್ದರು


ಮುಂದುವರೆಯುವುದು....

*ಸಿ ಜಿ ವೆಂಕಟೇಶ್ವರ*

ಅಮ್ಮನ ಕುರಿತು ಹಾಯ್ಕುಗಳು ( ಇಂದು ವಿಶ್ವ ಅಮ್ಮಂದಿರ ದಿನದ ಪ್ರಯುಕ್ತ)

ಅಮ್ಮನ ಕುರಿತು ಹಾಯ್ಕುಗಳು
*ಕರುಣಾಮೂರ್ತಿ*

ಕರುಣಾಮೂರ್ತಿ
ಸಹನೆಯ ಕಡಲು
ನಮ್ಮಯ ತಾಯಿ.

*ಮಾತೆ*

ದೇವರು ಇಲ್ಲಿ
ಕಣ್ಣಿಗೆ ಕಾಣುವಳು
ಅವಳೇ ಮಾತೆ .


ಸಿ ಜಿ ವೆಂಕಟೇಶ್ವರ

ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ *ಅಮ್ಮನಿಗೊಂದು ಪತ್ರ ,ಮತ್ತು ಕವನ* ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು💐💐 *ಸಿ ಜಿ ವೆಂಕಟೇಶ್ವರ*


ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ *ಅಮ್ಮನಿಗೊಂದು ಪತ್ರ ,ಮತ್ತು ಕವನ* ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು💐💐   *ಸಿ ಜಿ ವೆಂಕಟೇಶ್ವರ*

09 May 2020

ಮೂರು ಹಾಯ್ಕುಗಳು

ಮೂರು ಹಾಯ್ಕುಗಳು

*ತಮ*

ಮಹಾ ಗೌತಮ
ಆದರ್ಶವಾಗಿದ್ದರೆ
ಎಲ್ಲಿದೆ ತಮ

*ಸುಜ್ಞಾನ*

ಚರ್ಚೆ ಮಾಡಲು
ವಿಚಾರಗಳು ಬಂದು
ಸುಜ್ಞಾನ ಸಿರಿ

*ಜೋಡಿ*

ವಾಗ್ವಾದ ಮಾಡು
ಅಹಂಕಾರ ಜೊತೆಗೆ
ಅಜ್ಞಾನ ಜೋಡಿ

ಸಿ ಜಿ ವೆಂಕಟೇಶ್ವರ

ಪ್ರತಿನಿಧಿ ಪತ್ರಿಕೆಯಲ್ಲಿ ನನ್ನ ಹನಿಗಳು

ಪ್ರತಿನಿಧಿ ಪತ್ರಿಕೆಯಲ್ಲಿ ನನ್ನ ಹನಿಗಳು

05 May 2020

ಮುತ್ತು (ಇಂದು‌ ಕ ಸಾ ಪ ಸಂಸ್ಥಾಪನಾ ದಿನ)

*ಮುತ್ತು*

(ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ)

ಅದು ಕನ್ನಡಿಗರ ಮುತ್ತು
ಕನ್ನಡಕೆ ಪ್ರೋತ್ಸಾಹವಿತ್ತು
ತೋರಿಸಿದೆ ಕನ್ನಡದ ತಾಕತ್ತು
ಇದು ಕನ್ನಡಿಗರೆಲ್ಲರ  ಸ್ವತ್ತು
ಅದುವೆ ಕನ್ನಡ ಸಾಹಿತ್ಯ ಪರಿಷತ್ತು

*ಸಿ‌ ಜಿ ವೆಂಕಟೇಶ್ವರ*



ಕಾಪಾಡಿಕೊಳ್ಳಿರಿ ( ವಿಶ್ವ ಅಸ್ತಮಾ ದಿನದ ಪ್ರಯುಕ್ತ ಹನಿ)

*ಕಾಪಾಡಿಕೊಳ್ಳಿರಿ*

(ಇಂದು ವಿಶ್ವ ಅಸ್ತಮಾ ದಿನ)

ಧೂಳು ಗಾಳಿಯ ಸೇವಿಸದಿರಿ
ಧೂಮಲೀಲೆಗಳಿಂದ ದೂರವಿರಿ
ಬಾಳ ಪಯಣದಿ ಶ್ವಾಸಕೋಶಕೆ
ಮಹತ್ವ ನೀಡಿ ಕಾಪಾಡಿಕೊಳ್ಳಿರಿ
ಹೀಗಿದ್ದರೆ ಅಸ್ತಮಾ ನಿಮ್ಮ ಬಳಿ
ಎಂದೆಂದೂ ಸುಳಿಯದು ಕೇಳಿರಿ

*ಸಿ ಜಿ ವೆಂಕಟೇಶ್ವರ*

03 May 2020

ಸಿಹಿಜೀವಿಯ ಹತ್ತು ಹನಿಗಳು ( ಇಂದು ವಿಶ್ವ ನಗುವಿನ ದಿನ)


*ಸಿಹಿಜೀವಿಯ ಹತ್ತು ಹನಿಗಳು*

( ಇಂದು ವಿಶ್ವ ನಗುವಿನ ದಿನ)

*೧*

*ಜಗಜಟ್ಟಿ*

ಅವನೊಬ್ಬ
ಅಸಾಧಾರಣ
ಜಗಜಟ್ಟಿ |
ಮರೆತೇಹೋಗಿದ್ದಾನೆ
ಪಟ್ಟುಗಳನ್ನು
ಲಾಕ್ಡೌನ್ ನಲ್ಲಿ
ರೊಟ್ಟಿಗಳನ್ನು
ತಟ್ಟಿ ತಟ್ಟಿ||

*೨*

*ಬೇಡಿಕೆ*

ಮಹಿಳಾಮಣಿಗಳ
ಒಂದೇ ಬೇಡಿಕೆ
ಮುಂದುವರೆಸಲೇಬೇಕು
ಲಾಕ್ಡೌನನ್ನ|
ಕಾರಣ ಇನ್ನೂ ಸರಿಯಾಗಿ
ತೊಳೆಯುತ್ತಿಲ್ಲ
ನಮ್ಮ ಪತಿಯರು
ತಟ್ಟೆ ಲೋಟಗಳನ್ನ||


*೩*

*ಸಾಮಾಜಿಕ ಅಂತರ*

ನನ್ನವಳಿಗೆ ಮುತ್ತಿಕ್ಕಲು
ಅವಳೆಡೆ ಹೋದೆ
ತೋರುತ ಅವಸರ|
ನಿರಾಸೆ ಮಾಡುತ
ನುಡಿದಳು ಇನ್ನೂ
ಮುಗಿದಿಲ್ಲ ಲಾಕ್ಡೌನ್
ಪಾಲಿಸಿ ನೀವು
ಸಾಮಾಜಿಕ ಅಂತರ||

*೪*

*ಕಾಟ*

ಉಚಿತವಾಗಿ ಸಿಗುವ
ನಂದಿನಿ ಗಾಗಿ( ಹಾಲು)
ಎಲ್ಲಡೆ ಕಿತ್ತಾಟ|
ಮನದಲೆ
ಅಂದುಕೊಂಡಳು
ಅಮುಲ್
ನಾನು ದುಬಾರಿ
ಸದ್ಯ ತಪ್ಪಿತು
ಜನರ ಕಾಟ||

*೫*

*ಗಾಯನ*

ನಾನೂ ಶುರು
ಮಾಡೇ ಬಿಟ್ಟೆ
ಪಾಶ್ಚಾತ್ಯ ಗಾಯನ|
ಮನೆ ಮುಂದೆ
ಸದ್ದಾಯಿತು
ಗೆಳೆಯನ ನೋಡಲು
ಬಂದಿತ್ತು ಶ್ವಾನ||

*೬*

*ಬೇಡಿಕೆ*

ಬಾವಿ ಅಳಿಯನಿಗೆ
ಮಾವ ಕೇಳಿದರು
ಏನಾದರೂ ಬೇಡಿಕೆಯಿದ್ದರೆ
ಕೇಳಿ ಸಂಕೋಚ ಇರಬಾರದು|
ಒಂದೇ ಬೇಡಿಕೆ ನನ್ನದು ಮಾವ
ಮುಂದೇನಾದರೂ ಲಾಕ್ಡೌನ್
ಆದರೆ ನಿಮ್ಮ ಮಗಳು
ನನ್ನಿಂದ ಪಾತ್ರೆ ತೊಳೆಸಬಾರದು||

*೭*

*ಮನವಿ*

ಪ್ರಿಯೆ ಬೇಡಿಕೊಳ್ಳುವೆ
ನಿನ್ನಲಿ ಕೈಜೋಡಿಸಿ|
ದಯವಿಟ್ಟು ಹೇಳದಿರು
ಎರಡನೇ ಬಾರಿ ಗುಡಿಸಿ||



*೮*


*ಚುರುಮುರಿ*

ಮಗಳು ಹಠ ಹಿಡಿದಳು
ಬೇಕೇ ಬೇಕು
ಗೋಬಿಮಂಚೂರಿ|
ಅದು ಚೀನಾದವರದು ಅಂದೆ
ಮಗಳಂದಳು
ಬಾಳ ಚೆಂದಾಗಿರುತ್ತೆ
ನಮ್ಮ ಚುರುಮುರಿ||

*೯*

*ಗುಗ್ಗು*

ನೀನಗೆ ಸಂತಸವಾದರೆ
ನಗು
ಬೇಕಾದರೆ ಖುಷಿಯಿಂದ
ಗುನುಗು|
ಮುಖ ಗಂಟುಹಾಕಿಕೊಂಡು
ಅವರಿವರಿಂದ ಅನಿಸಿಕೊಳ್ಳದಿರು
ಗುಗ್ಗು||

*೧೦*

*ಗಾಂಧಿ ಮಾರ್ಗ*

ನನಗೂ ಆಸೆ
ಗಾಂಧಿ ಮಾರ್ಗದಲ್ಲಿ
(ಎಂ ಜಿ ರೋಡ್)
ನಡೆಯಲು|
ಏನು ಮಾಡಲಿ
ನನಗೆ ಬರುವುದಿಲ್ಲ
ಧಮ್ ಹೊಡೆಯಲು
ಮದ್ಯ ಕುಡಿಯಲು||


*ಸಿ ಜಿ ವೆಂಕಟೇಶ್ವರ*
*ತುಮಕೂರು*

ಹರಿತವಾಗಲಿ ಲೇಖನಿ ಇಂದು ವಿಶ್ವ ಪತ್ರಿಕೆಯ ಸ್ವಾತಂತ್ರ್ಯ ದಿನ

*ಹರಿತವಾಗಲಿ ಲೇಖನಿ*

ಹರಿತವಾಗಲಿ
ಲೇಖನಿ
ಒರೆಸಲಿ ಶೋಷಿತರ
ಕಂಬನಿ
ಮಾನವೀಯತೆಯು ತೊರೆಯಾಗಿ ಹರಿಯಲಿ
ಸೇರಿ ಹನಿ ಹನಿ
ಎಲ್ಲೆಡೆ ಅನುರಣಿಸಲಿ
ಸಮಾನತೆಯ ಧ್ವನಿ

*ಸಿ ಜಿ ವೆಂಕಟೇಶ್ವರ*

02 May 2020

ಬರುವನೆ ದೀನಬಂಧು (ಕವನ)

*ಬರುವನೇ ದೀನಬಂಧು*

ಮನೆ ಎಲ್ಲಿದೆ ಮಠ ಎಲ್ಲಿದೆ ನಮಗೆ
ಕೊನೆ ಎಲ್ಲಿದೆ ನೆಲೆ ಎಲ್ಲಿದೆ  ಬಾಳಿಗೆ
ಮಾಸಿರುವ ಬಟ್ಟೆಗಳೇ ವಸ್ತ್ರಗಳು
ಕಾಣುತಿಲ್ಲ ಬಟ್ಟೆ ತೋರುವ ಹಸ್ತಗಳು.

ಮುಖ ಮೇಲೆ ಮಾಡಿ ಕುಳಿತ ಅಪ್ಪ
ಮಕ್ಕಳಿಗೆ ಚಿಂತೆ ನಮಗೇಕಿಲ್ಲ ತುಪ್ಪ
ಅಮ್ಮನಿಗೋ ಮಕ್ಕಳ ಭವಿಷ್ಯದ ಚಿಂತೆ
ಒಳಗೊಳಗೆ ದಹಿಸುತಿದೆ ನೋವಿನ ಚಿತೆ.

ಟಾಕುಟೀಕಾಗಿಹರು ಮಹಲಿನವರು
ನಾವೇಕೆ ಇಲ್ಲಹೆವು ಊರಿಲ್ಲದವರು
ಕಾರಲೇ ಹೋಗುವ ಆ ಮನೆಯ ಪಾಪ
ಕಾರಿರುಳಲಿಹೆವು ನಮಗೇಕೆ ಈ ಶಾಪ

ಪಾತ್ರೆ ಪಗಡಗಳು ತುಂಬುವುದು ಎಂದು
ಎಲ್ಲಿಹರು ನಮ್ಮ ಸಲಹುವ ಬಂಧು
ಕನಸುಗಳು ಬತ್ತಿಲ್ಲ ನಮಗೆ ಇಂದು
ಕಾಯುತಿಹೆವು ಬರುವನೇ ದೀನಬಂಧು

*ಸಿ ಜಿ ವೆಂಕಟೇಶ್ವರ*
*ತುಮಕೂರು*