*ಕಾಪಾಡು ತಾಯೆ*
ಮಹಿಷನ ಮರ್ಧಿಸಿದ ತಾಯೆ
ನಮ್ಮನೆಲ್ಲಾ ಅನವರತ ಕಾಯೆ .
ತ್ರಿಮೂರ್ತಿಗಳ ಹೆತ್ತವಳೆ
ನಮ್ಮನೆಲ್ಲ ಹೊತ್ತವಳೆ
ಚಿಕ್ಷುರ ಬಿಡಾಲರ ವಧಿಸಿದೆ ನೀನು
ಅಷ್ಟ ದಿಕ್ಪಾಲಕರ ಪೊರೆದೆ ನೀನು .
ಶುಂಭ ನಿಶುಂಭರ ಶಿರವ ತರಿದೆ
ದುರುಳ ದೈತ್ಯರ ಸೊಕ್ಕನಡಗಿಸಿದೆ
ಚಂಡ ಮುಂಡರ ಸಂಹಾರ ಮಾಡಿದೆ
ಚಂಡಿ ಚಾಮುಂಡಿ ನಾಮ ಪಡೆದೆ .
ಕೂಳ ಮಧು ಕೈಟಬರ ಸಂಹರಿಸಿದೆ
ಕಾಳಿಕೆಯ ನಾಮದಿ ರಾರಾಜಿಸಿದೆ
ರಕ್ತ ಬೀಜನ ರಕ್ತವ ಕುಡಿದೆ
ಅಸುರರಿಂದ ಲೋಕವ ರಕ್ಷಿಸಿದೆ.
ನಿನ್ನ ದಯೆಯಿಲ್ಲದ ಜೀವನ ಬಿರುಗಾಳಿ
ನೀ ಹರಸಿದರೆ ನಮ್ಮ ಬಾಳು ತಂಗಾಳಿ
ಇಹಬಂಧನದಲಿ ಸಿಲುಕಿರುವೆವು ನಾವು
ಕಾಪಾಡು ಮರೆಸುತ ನಮ್ಮ ನೋವು
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು.*
No comments:
Post a Comment