21 September 2017

ಹಗಲಿರುಳು ಸಾಲದು( ಕವನ)



                  *ಹಗಲಿರುಳು ಸಾಲದು*

ನನ್ನವಳು  ಸೌಂದರ್ಯ ಲಾವಣ್ಯವತಿ
ನನ್ನದೆಯ ಅನುರೂಪ  ಸೌಭಾಗ್ಯವತಿ
ಉದಯಿಸುವ ಪೂರ್ಣ ಚಂದಿರನ ಬಣ್ಣ
ನನ್ನ ಲತಾಂಗಿಯ ಮೈಬಣ್ಣ

ಇವಳ ಹುಬ್ಬು ಮನ್ಮಥನ ಬಿಲ್ಲು
ಕಾಡುತ್ತಾಳೆ ಬಂದು ಕನಸಲ್ಲೂ
ಇವಳ ಕಣ್ಣು ಸುಂದರ ಮೀನು
ಕಾಯುತಿರುವೆನು ನಿನಗಾಗಿ ನಾನು

ಮೃಗರಾಜ ಸಿಂಹದಂತಹ ನಡುವು
ಸಮುದ್ರದ ತೆರೆ ನಿನ್ನ ಕೇಶವು
ದಾಳಿಂಬೆಫಲ ಇವಳ ದಂತಪಂಕ್ತಿಗಳು
ಇವಳ ವರ್ಣಿಸಲು ಸಾಲದು ಹಗಲಿರುಳು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: