ಇಪ್ಪತ್ತು ದಿನಗಳ ಉತ್ತರ ಭಾರತದ ಮತ್ತು ನೇಪಾಳ ಪ್ರವಾಸಕ್ಕಾಗಿ
ಸ್ನೇಹಿತರ ಜೊತೆಗೆ ಹೊರಟಾಗ ಪ್ರಾಕೃತಿಕ ಸೌಂದರ್ಯ ಮತ್ತು ದೈವದ ಆರಾಧನೆಯನ್ನು ಮಾಡಬಹುದು
ಎಂದು ನಿರೀಕ್ಷೆ ಇಟ್ಟುಕೊಂಡು ಹೋದ ನನಗೆ ನಿರಾಸೆ ಏನು ಆಗಲಿಲ್ಲ ಜಮ್ಮು ಕಾಶ್ಮೀರದ
ಪ್ರಾಕೃತಿಕ ಸೌಂದರ್ಯ ನನ್ನ ಮನಸೂರೆಗಂಡಿತು ಕಟ್ರಾದ ವೈಶ್ಣೋದೇವಿ ದರ್ಶನ ಪಡೆಯಲು
೧೪ಕಿಲೋಮೀಟರ್ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ರಾತ್ರಿಯಲ್ಲಿ ಕ್ರಮಿಸಿ ಬೆಳಗಿನ ಜಾವ
ತಾಯಿಯು ದರ್ಶನ ಯೋಗ ಎಲ್ಲಾ ಸುಸ್ತು ಮಾಯವಾಗಿ ಧನ್ಯತಾ ಭಾವ ಮನೆ ಮಾಡಿತ್ತು ದರ್ಶನದ
ತರುವಾಯ ಪುನಃ ೧೪ ಕಿಲೋಮೀಟರ್ ಬೆಟ್ಟ ಇಳಿದು ಹೋಟೆಲ್ ನಲ್ಲಿ ವಿಶ್ರಾಂತಿ ಪಡೆದು
ಕುರುಕ್ಷೇತ್ರದ ಕಡೆಗೆ ರಾತ್ರಿ ಪಯಣ ಆರಂಭಿಸಿದೆವು ಪ್ರಯಾಣದ ಆರಂಭದಲ್ಲಿ ದೇವಿಯ ಮತ್ತು
ಶೀಕೃಷ್ಣನ ಭಕ್ತಿ ಗೀತೆಗಳನ್ನು ಗುಂಪಿನಲ್ಲಿ ಹಾಡುತ್ತಾ ದಣಿದ ದೇಹ ನಿದ್ರೆಗೆ ಜಾರಿದ್ದೇ
ಗೊತ್ತಾಗಲಿಲ್ಲ .ರಾತ್ರಿಯ ೩ಗಂಟೆಗೆ ಬಸ್ಸಿನಲ್ಲಿ ನನ್ನ ಸಹಪ್ರಯಾಣಿಕರು ಗಾಬರಿಗೊಂಡು
ಅರಚುವ ಸದ್ದು ಕೇಳಿ ನಾನು ಎದ್ದು ನೋಡಿ ದರೆ ನಾವು ಪ್ರಯಾಣ ಮಾಡುತ್ತಿದ್ದ ಬಸ್ ಚಾಲಕ
ತೂಕಡಿಸಿದ ಪರಿಣಾಮ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಲಭಾಗದಲ್ಲಿ ಕಂದಕವನ್ನು
ನೋಡುತ್ತಿತ್ತು .ಇನ್ನೊಂದು ಅಡಿ ಬಸ್ ಚಲಿಸಿದ್ದರೆ ನಾನು ಇಂದು ಈ ಲೇಖನ
ಬರೆಯಲಾಗುತ್ತಿರಲಿಲ್ಲ .ತಾಯಿ ವೈಷ್ಣೋದೇವಿ ಕೃಪೆಯಿಂದ ಪುನರ್ ಜನ್ಮ ಪಡೆದ ನಾವು ಆ ಶಾಕ್
ನಿಂದ ಹೊರಬಂದು ಪರಸ್ಪರ ಸಮಾಧಾನ ಮಾಡಿಕೊಂಡು ಚಾಲಕನಿಗೆ ಬುದ್ದಿ ಹೇಳಿ ಪೋನಿನಲ್ಲಿ
ನನ್ನ ತಾಯಿಯೊಂದಿಗೆ ಮಾತನಾಡಿದಾಗ ದುಃಖ ತಡೆಯಲಾರದೆ ಗಳಗಳನೆ ಅತ್ತು ಅವರಿಗೆ ವಿಷಯ
ತಿಳಿಸಿ ನಾನೇ ಅವರಿಗೆ ಸಮಾಧಾನ ಮಾಡಿ .ನಂತರ ಕ್ರೇನ್ ಮೂಲಕ ಬಸ್ ಎತ್ತಿಸಿ .ಹೊಸ ಬಸ್
ಮೂಲಕ ಪ್ರವಾಸ ಮುಂದುವರಿಸಿದೆವು ಈಗ ಮತ್ತೊಮ್ಮೆ ವೈಷ್ಣೋದೇವಿಯ ದರ್ಶನಕ್ಕಾಗಿ ಮನ
ಹಾತೊರೆಯುತ್ತಿದೆ.
ಸಿ.ಜಿ.ವೆಂಕಟೇಶ್ವರ.
ಶಿಕ್ಷಕರು
ಗೌರಿಬಿದನೂರು
990092552
No comments:
Post a Comment