10 September 2017

ಪೇಸ್ ಬುಕ್‌ ಮತ್ತು ವಾಟ್ಸಪ್ ಸದ್ಬಳಕೆ ಹೇಗೆ?

ಸಾಹಿತ್ಯ ಕೃಷಿಗೆ ಮಾಹಿತಿ ತಂತ್ರಜ್ಞಾನದ ಉಪೋತ್ಪನ್ನ (byproducts)ಗಳಾದ ಮುಖ ಪುಸ್ತಕ (Face Book) ಮತ್ತು ವಾಟ್ಸ್ ಆ್ಯಪ್ಗಳ ಸದ್ಭಳಕೆ ಆಗುತ್ತಿದೆಯೇ..?*
ಹಿಂದೆ ಸಾಹಿತ್ಯ ಎಂದರೆ ಕೇವಲ ಕೆಲವರ ಸ್ಸತ್ತು, ಕನ್ನಡ ಎಮ್. ಎ.ಮಾಡಿದವರು ಮಾತ್ರ ಸಾಹಿತ್ಯ ಕೃಷಿ ಮಾಡಬಹುದು ಎಂಬ ಕಲ್ಪನೆಗಳನ್ನು ಹೊಂದಿದವರು ಬಹಳವಿದ್ದರು.
ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಮಾಹಿತಿಯ ಸ್ಪೋಟದೊಂದಿಗೆ ಸಾಹಿತ್ಯದ ಎಲ್ಲಾ ಪ್ರಕಾರಗಳು ಎಲ್ಲರಿಗೂ ಸುಲಭವಾಗಿ ದೊರೆತದ್ದು ಸಾಹಿತ್ಯದ ಆಸಕ್ತಿ ಇರುವ ರಿಗೆ ವರದಾನವಾಯಿತು.
ಇದರ ಜೊತೆಗೆ ವಾಟ್ಸಪ್, ಪೇಸ್ಬಕ್,ಬ್ಲಾಗ್,ಹೈಕ್,ಟೆಲಿಗ್ರಾಮ್, ಮುಂತಾದವು ಉದಯೋನ್ಮುಖ ಸಾಹಿತಿಗಳಿಗೆ ವರದಾನವಾಗಿವೆ .
ಹಿಂದಿನ ಕಾಲದಲ್ಲಿ ಹೊಗೆಸೊಪ್ಪು ಇಲ್ಲದ ಮನೆಗಳು ಇರಲಿಲ್ಲ ‌ಈಗಿನ ಕಾಲದಲ್ಲಿ ವಾಟ್ಸಪ್ ಇಲ್ಲದ ಮನೆ ಇಲ್ಲ ಎಂದರೆ ಅತಿಷಯೋಕ್ತಿಯಲ್ಲ .
ಮೊದಲು ಕೇವಲ ಚಾಟ್ ಮಾಡಲು ಬಳಸುತ್ತಿದ್ದ ವಾಟ್ಸಪ್ ಕ್ರಮೇಣ ಸಮಾನ ಮನಸ್ಕ ಸಾಹಿತ್ಯ ಆಸಕ್ತ ಮನಸು ಗಳು ಒಂದೆಡೆ ಸೇರಿ ಸದ್ದಿಲ್ಲದೆ ಸಾಹಿತ್ಯ ಕೃಷಿಯಲ್ಲಿ ತೊಡಗಿರುವುದು ಆಶಾದಾಯಕ ಬೆಳವಣಿಗೆ.
ಕೆಲ ವಾಟ್ಸಪ್ ತಂಡಗಳು ಸಾಹಿತ್ಯ ಪ್ರಕಾರಗಳಾದ ಕಥೆ, ಕವನ,ಹನಿಗವನ ಚಿತ್ರ ಸಾಹಿತ್ಯ, ಮುಂತಾದ ಪ್ರಕಾರದ ಸಾಹಿತ್ಯ ರಚನೆ ಮತ್ತು ಪ್ರಕಾಶನ ಮಾಡುವ ಅಮೂಲ್ಯವಾದ ಕೆಲಸ ಮಾಡಿಕೊಂಡು ಬರುತ್ತಿವೆ.ಈ ನಿಟ್ಟಿನಲ್ಲಿ, ಹೆಸರಿಸಬಹುದಾದ ಕೆಲ ಗುಂಪುಗಳೆಂದರೆ," ಹನಿ.ಹನಿ.ಇಬ್ಬನಿ." "ವಿಶ್ವ ವಾಣಿ ಕವಿಬಳಗ. " ವಿಶ್ವವಾಣಿ ಕವಿ ಬಳಗದ ನೇತೃತ್ವ ವಹಿಕೊಂಡಿರುವ.ಶ್ರೀ ವಿಶ್ವೇಶ್ವರ ಭಟ್. ಜೆ.ಡಿ ಧನ್ನೂರ್ .ಪ್ರಕಾಶ್ ಮಳಗಿ.  ಅಂಬಿಗೇರ.ಇವರು ವಾಟ್ಸಪ್ ಕವಿಬಳಗದ ಕವಿಗಳ ಅತ್ಯುತ್ತಮ ಕವನಗಳನ್ನು ಒಳಗೊಂಡ116ಕವಿಗಳ ಭಾವದೀಪ್ತಿ, ಎಂಬ ಕವನ ಸಂಕಲನ ಹೊರತಂದಿದ್ದಾರೆ. ಜೊತೆಗೆ ಕನ್ನಡ ಸಾರಸ್ವತ ಲೋಕದ ಹೊಸ ಪ್ರಯೋಗವಾಗಿ ಎಲ್ಲಾ ಕವನಗಳನ್ನು ವಾಚನ ಮಾಡಿಸಿ ಸಿ.ಡಿ.ಹೊರತಂದಿದ್ದಾರೆ. ರಾಜ್ಯ ಮಟ್ಟದಲ್ಲಿ ಕವಿಘೊಷ್ಟಿ ಹಮ್ಮಿಕೊಂಡು ಉದಯೋನ್ಮುಖ ಕವಿಗಳಿಗೆ ಉತ್ತೇಜನ ನೀಡಿದ್ದಾರೆ. ಮುಂದುವರೆದು ಪ್ರತಿವಾರ ಚಿತ್ರ ಆಧರಿತ  ರಾಜ್ಯಮಟ್ಟದ ಕವನ ಸ್ಪರ್ಧೆಯನ್ನು ಏರ್ಪಡಿಸಿ ಉತ್ತಮ ವಿಮರ್ಶೆ ಮಾಡಲಾಗುತ್ತದೆ. ಈಗ ಮುನ್ನೂರು ಕವಿಗಳ ಕವನಗಳನ್ನು ಹೊರತರುವ ಯೋಜನೆ ಹೊಂದಿರುವ ಇವರು ಸಾಹಿತ್ಯ ಕ್ಷೇತ್ರದಲ್ಲಿ ವಾಟ್ಸಪ್ ಗುಂಪುಗಳು ಮೂಲಕ ತಮ್ಮದೇ ಕೊಡಗೆ ನೀಡುತ್ತಿದ್ದಾರೆ.
ಬೆಳಿಗ್ಗೆ ಮುಖ ತೊಳೆಯುವ ಮುನ್ನ ಮುಖಪುಟ ತೆರೆಯುವ ಹವ್ಯಾಸವನ್ನು ನಮ್ಮ ಬಹುತೇಕ ಯುವಕರು ಹೊಂದಿದ್ದು ಅವರಲ್ಲಿ ಬಹುತೇಕ ಕೇವಲ ಸಮಯವನ್ನು ಕಳೆಯಲು ಈ‌ ಸಾಮಾಜಿಕ ಜಾಲತಾಣ ಬಳಿಸಿದರೆ ಇನ್ನೂ ಕೆಲವರು ತಾವು ಬರೆದ ಕಥೆ, ಕವನಗಳನ್ನು, ಹನಿಗವನಗಳನ್ನು ನೇರವಾಗಿ ಪ್ರಕಾಶಕರ ಹಂಗಿಲ್ಲದೇ ತಾವೆ ಪ್ರಕಾಶನ ಮಾಡಿ ಪ್ರಪಂಚದ ಮೂಲೆ ಮೂಲೆಗಳಲ್ಲಿ ತಮ್ಮ ಸಾಹಿತ್ಯ ಪಸರಿಸುವಂತೆ ಮಾಡಿದ್ದಾರೆ.
ಈಗೆ ಸಾಮಾಜಿಕ ಜಾಲತಾಣಗಳಾದ ಪೇಸ್ ಬುಕ್ ಮತ್ತು ವಾಟ್ಸಪ್ ಗಳು ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ .ಆದರೆಅತಿಯಾದರೆ ಅಮೃತ ವಿಷ ಎಂಬಂತೆ ಮಿತಿಯನ್ನು ಅರಿತು ಸಾಮಾಜಿಕ ಜಾಲತಾಣಗಳ ಸಮರ್ಪಕವಾದ ಬಳಕೆಯಿಂದ ಕನ್ನಡಾಂಬೆಯ ತೇರನ್ನೆಳೆಯೋಣ .

*ಸಿ.ಜಿ.ವೆಂಕಟೇಶ್ವರ*
ಗೌರಿಬಿದನೂರು

No comments: