20 September 2017

ಮರ್ಕಟ (ಕವನ)

             
               *ಮರ್ಕಟ*

ಮನಸ್ಸೆಂಬ ಮರ್ಕಟ
ನಿಲ್ಲುತಿಲ್ಲ ಒಂದೆಡೆ ಅಕಟಕಟ
ಒಮ್ಮೆ ಓಡುವದು ಅತಿವೇಗ
ಮತ್ತೊಮ್ಮೆ ಕೇಳುವುದು  ಏನೀ ಆವೇಗ

ಒಂದು ಬಾರಿ ಹೇಳುವುದು ಸರಿ ನೀನು
ಮೂದಲಿಸುವುದು ಒಮ್ಮೆ ಸಾಚಾ ನೀನು?
ಚಂಚಲತೆಗೆ ನೀನೇ ಸರದಾರ
ಗೊಂದಲಗಳಿಗೆಲ್ಲಾ ನೀನೇ ಸೂತ್ರದಾರ

ಮಹಾನುಭಾವರಾದರೆ ಅಂಕುಶದಲ್ಲಿರುವೆ
ನನ್ನಂತಹವರಾದರೆ ಸವಾರಿ ಮಾಡುವೆ
ನಿನ್ನ ಮಹಾತ್ಮೆ ಒಂದಲ್ಲ ಎರಡಲ್ಲ
ನೀನೆಂದು ನಿಯಂತ್ರಣದಲ್ಲಿರುವೆ ತಿಳಿದಿಲ್ಲ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: