02 September 2017

ಹೇ ಮನುಜ

ಹೇ ಮನುಜ ನೀನೇನು ಮಾಡಿರುವೆ ನೋಡು
ಅದರ ಫಲ ನೀನೆ ಉಣ್ಣುತಿರವೆ ನೋಡು

ಗಿಡ ಮರಗಳಿಂದ ಕಂಗೋಳಿಸಿತು ಧರೆ  ಅಂದು
ಮೃಗ ಖಗಗಳಿಂದ ನಲಿದಾಡಿತು ಇಳೆ ಅಂದು
ಬಡಬಾಗ್ನಿಯ ಜಳ ಸುಡುತಿದೆ ನಿನ್ನನಿಂದು
ಸ್ವಾರ್ಥ ಹೆಚ್ಚಿ ಮಾನವೀಯತೆ ಮಾಯವಿಂದು

ಇಂಗಾಲ ಮೀಥೇನ್ ಅಬ್ಬರಕೆ ನಲಯಗಿದೆ ದರೆ
ಜಾಗತಿಕ ತಾಪಮಾನಕೆ ಮಾನವ ಸೆರೆ
ಋತುಗಳೆಲ್ಲಾ ಈಗ ಹಿಂದು ಮುಂದು
ನೀರು ಗಾಳಿ ಕಲುಷಿತ ಎಂದೆಂದೂ

ಹುಲುಸಾದ ಕಾಡನ್ನು ಕಡಿದೆ ಸ್ವಾರ್ಥಕ್ಕೆ
ಸ್ವಚ್ಛಂದ ಪ್ರಾಣಿಗಳ ಬಡಿದೆ ನಿನ ಮೋಜಿಗೆ
ಖಗಮೃಗಗಳಿಂದ ಕೂಡಿದ ಕಾಡು
ಈಗ ಆಗಿದೆ ನೋಡು ನರಕದ ಬೀಡು

ಹಸಿರುಟ್ಟ ವನದೇವಿ ರಾರಾಜಿಸಿದಳು ಅಂದು
ಉಸಿರಾಡಲು ಕಷ್ಟಪಡುತಿಹೆ ಇಂದು
ನೀ ಬುದ್ದಿ ಕಲಿಯುವೆ ಎಂದು ?
ಪರಿಸರ ಉಳಿಸಲು ಪಣ ತೊಡು ಇಂದು

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

No comments: