25 September 2017

ನಮಗೆ ತರವೆ?(ಕವನ)



                 *ನಮಗೆ ತರವೆ*

ಯಾರೇ ಸಿಗಲಿ ಕೇಳುವೆವು ಕ್ಷೇಮವೇ
ಈ ಪ್ರಶ್ನೆ ನಮಗೆ ತರವೆ?

ಕಾನನವ ನಾಶಮಾಡಿಹೆವು
 ಮರಗಳಹನನ ಮಾಡಿಹೆವು
 ಮಳೆಯಿಲ್ಲ ಬೆಳೆಯಿಲ್ಲ
ಕ್ಷೇಮದ ಮಾತಿಲ್ಲವೇ ಇಲ್ಲ /

ನಗರೀಕರಣ ಜಾಗತೀಕರಣ
ನಮ್ಮ ಸಂಸ್ಕೃತಿಗಳ ಹರಣ
ಮೌಲ್ಯಗಳಿಗೆ ಬೆಲೆಯಿಲ್ಲ
ಅನೀತಿಗಳಿಗೆ ಎಣೆಯಿಲ್ಲ /

ಅವ್ಯಾಹತವಾಗಿದೆ ಅನಾಚಾರ
ನಿರಂತರವಾಗಿ ನಡೆದಿವೆ ಅತ್ಯಾಚಾರ
ಆಧುನಿಕ ಅಮಾನವೀಯ ಲೋಕದಲಿ
ಎಲ್ಲಿ ಹುಡುಕಲಿ ನೆಮ್ಮದಿ ಈ ನರಕದಲಿ /

ಮತಧರ್ಮದ ನಡುವೆ ಕಚ್ಚಾಟ
ನಿಂತಿಲ್ಲ ಅಶಾಂತಿಯ ಹುಚ್ಚಾಟ
ತಿಳಿದಿಲ್ಲ  ಮಾನವೀಯ ಮೌಲ್ಯ
ಉಳಿಸು ಈ ಜಗ ಅಮೂಲ್ಯ /

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: