14 September 2017

ಹುಟ್ಟಿದ ಹಬ್ಬಕ್ಕೆ ದೇವರ ಭಜನೆ,ಆತ್ಮಾನಂದ ಸಂಪಾದನೆ.

                 ಇತ್ತೀಚಿಗೆ ನನ್ನ ಸಹೋದ್ಯೋಗಿಯೊಬ್ಬರ ಮಗನ ಹುಟ್ಟು ಹಬ್ಬದ ಪ್ರಯುಕ್ತ ಅವರ ಆಹ್ವಾನದ ಮೇರೆಗೆ ಹುಟ್ಟು ಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡಿದ್ದೆ ಆ ಹುಟ್ಟು ಹಬ್ಬ ಒಂದು ರೀತಿಯಲ್ಲಿ ವಿಶೇಷವಾಗಿತ್ತು 
ಅಂದು ಸಂಜೆ ಭಜನೆ ತಂಡವನ್ನು ಕರೆಸಿ ದೇವರ ಭಜನೆ ಮಾಡಿಸಲಾಯಿತು ಹಿರಿಕಿರಿಯರೆನ್ನದೇ ಎಲ್ಲರೂ ಭಜನೆ ಮಾಡುತ್ತಾ ಭಾವಪರವಶರಾದ ಪ್ರಸಂಗ ಅವರ್ಣನೀಯ 
ಭಜನೆಯ ನಂತರ ಹುಟ್ಟು ಹಬ್ಬದ ಮಹತ್ವ ಕುರಿತು ಹಿರಿಯರಿಂದ ಆಶೀರ್ವದಿಸಿ ಅಕ್ಷತೆ ಹಾಕಿ ಎಲ್ಲರೂ ಹರಸಿ‌ ಆಯರಾರೋಗ್ಯ ನೀಡಲು ಹರಸಿದರು .ಜೊತೆಗೆ ಅಲ್ಲಿ ನೆರೆದ ಪ್ರತಿಯೊಬ್ಬರೂ ಸತ್ಸಂಗ ಮಾಡಿ ಕೆಲ ಕಾಲ ಆಧುನಿಕ ಜೀವನದ ಜಂಜಡದಿಂದ ದೂರಾಗಿ ,ಮೊಬೈಲ್ ,ವಾಟ್ಸಪ್, ಫೇಸ್ಬುಕ್, ಸೀರಿಯಲ್ ಗೊಡವೆ ಇಲ್ಲದೇ ಆತ್ಮಕ್ಕೆ ಆನಂದವನ್ನು ಹೊಂದಿದ ಧನ್ಯತಾ ಭಾವ ಉಂಟಾಗಿದ್ದು ಸುಳ್ಳಲ್ಲ 
ಪಾಶ್ಚಾತ್ಯರ ಸಂಸ್ಕೃತಿಯು ಮಾತ್ರ ಉತ್ತಮ ಭಾರತೀಯ ಸಂಸ್ಕೃತಿಯು ಕೀಳು ಎಂಬ ಪೂರ್ವ ನಿರ್ಧರಿತ ,ಪೂರ್ವಾಗ್ರಹ ಪೀಡಿತ ಮನಸುಗಳು ಬದಲಾಗಬೇಕಿದೆ 
ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ಸಹ ಮಕ್ಕಳ ಹುಟ್ಟು ಹಬ್ಬಗಳನ್ನು ಕೇಕ್ ಕತ್ತರಿಸಿ ಕ್ಯಾಂಡಲ್ ಆರಿಸಿ ಹುಟ್ಟಿದ ಹಬ್ಬಗಳನ್ನು ಆಚರಿಸುತ್ತಾರೆ ಇದರ ಪರಿಣಾಮ ಗಲ್ಲಿಗಳಿಗೊಂದು ಬೇಕರಿಗಳ ಉಗಮ ,ಇದು ಹೊಸ ವರ್ಷ, ವಾಲೆಂಟೇನ್ ಡೇ ಆ ಡೇ ,ಈ ಡೇ ಗಳ ಭರಾಟೆಗಳಿಗೆ ಮಿತಿಇಲ್ಲದೇ ಆಚರಿಸುತ್ತಾರೆ, ಆದರೆ ಅದಕ್ಕಿಂತಲೂ ಉನ್ನತವಾದ ದ್ಯೇಯ ಸಾಂಸ್ಕೃತಿಕ ಮೌಲ್ಯವಿರುವ ಆಚರಣೆಗೆ ಮುಂದಾಗದಿರುವುದು ಶೋಚನೀಯ ಸಂಗತಿ .ಅಂದರೆ ನಾನು ಪಾಶ್ಚಿಮಾತ್ಯ ಅಥವಾ ಬೇರೆ ಸಂಸ್ಕೃತಿಯ ವಿರೋಧಿ ಅಲ್ಲ ,ಸಾಂಸ್ಕೃತಿಕ ಬದಲಾವಣೆ, ಸಾಂಸ್ಕೃತೀಕರಣದ ಬೇಕು  ಆದರೆ ಆ ಭರಾಟೆಗಳಿಗೆ ನಮ್ಮ ಸಂಸ್ಕೃತಿಯ ಪತನವಾಗಬಾರದು.ನಮ್ಮ ಹಿರಿಯರು ಮಾಡಿರುವ ಕೆಲ ಉನ್ನತವಾದ ಆಚರಣೆಗಳಲ್ಲಿ ವೈಜ್ಞಾನಿಕ ತಳಹದಿಯ ಉನ್ನತ ಚಿಂತನೆಯ ಅನುಭವ ಇದೆ ಅವುಗಳನ್ನು ಉಳಿಸಿ ಬೆಳೆಸಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯಬೇಕಿದೆ.

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು.

No comments: