01 September 2017

ನೀತಿ ಆಯೋಗದ ಎಡವಟ್ಟು ಸಲಹೆಗಳು


ಎಪ್ಪತ್ತು ವರ್ಷಗಳ ಹಳೆಯದಾದ ಯೋಜನಾ ಆಯೋಗದ ಬದಲಿಗೆ "ನೀತಿ ಅಯೋಗ " ಜಾರಿಗೆ ಬಂದಾಗ ದೇಶದ ಪ್ರಜೆಗಳಿಗೆ ಹೊಸ ಬದಲಾವಣೆ ಬರುವುದೆಂಬ ಆಶಾ ಭಾವನೆಯಿತ್ತು  ನಾನೂ ಸಹ ಅದೇ ಅಭಿಪ್ರಾಯವನ್ನು ಹೊಂದಿದ್ದೆ .ಆದರೆ ನೀತಿ ಆಯೋಗದ ಕೆಲವು ಸಲಹೆ ಮತ್ತು ನಿರ್ಧಾರಗಳು ಅದರ ಸದಸ್ಯರ ವಾಸ್ತವ ಜ್ಞಾನವನ್ನು ಅನುಮಾನಿಸುವಂತಾಗಿದೆ , ಇತ್ತೀಚಿಗೆ ರೈತರಿಗೆ ಆದಾಯ ತೆರಿಗೆಯನ್ನು ಹೇರಬೇಕೆಂಬ ನೀತಿಆಯೋಗದ  ಅವಾಸ್ತವಿಕ ಮತ್ತು ಅನ್ಯಾಯದ ಸಲಹೆಗೆ ಇಡೀ ದೇಶಾದ್ಯಂತ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಯಿತು ಮೊದಲು ದೇಶದ ರೈತರ ಆದಾಯ ವೃದ್ದಿಯಾಗುವ ಕ್ರಮ ಕೈಗೊಂಡು ನಂತರ ತೆರಿಗೆ ಹೇರುವ ಮಾತನಾಡಲಿ ಎಂಬ ಆಗ್ರಹ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಕೈಬಿಡಲಾಯಿತು.
ಈಗ ದೇಶದ ಎಲ್ಲಾ ಶಾಲೆಗಳನ್ನು ಖಾಸಗೀಕರಣ ಮಾಡಲಿ ಎಂಬ ಅಸಂಬದ್ಧ ಸಲಹೆ ನೀಡುವ ಮೂಲಕ ಮತ್ತೊಂದು ಸುತ್ತಿನ ಚರ್ಚೆಗೆ ನೀತಿಆಯೋಗ ಎಡೆ ಮಾಡಿಕೊಟ್ಟಿದೆ ಅದರ ಪ್ರಕಾರ ದೇಶದ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕೇವಲ ಖಾಸಗಿ ಶಾಲೆಗಳು ಮಾತ್ರ ಅರ್ಹ ಎಂಬ ಏಕಮುಖ ವಾದವನ್ನು ಒಪ್ಪಲಾಗುವುದಿಲ್ಲ .ಅವರು ಮಾಡಿರುವ ಕೆಲ ಸಮೀಕ್ಷೆಯಲ್ಲಿ ಕೆಲ ಸರ್ಕಾರಿ ಶಾಲೆಗಳಲ್ಲಿ ಸಮಸ್ಯೆಗಳಿದ್ದರೆ ಅದನ್ನು ಸಾರ್ವತ್ರಿಕವಾಗಿ ಬಿಂಬಿಸುವುದು ಎಷ್ಟು ಸರಿ? ಬಹುತೇಕ ಸರ್ಕಾರಿ ಶಾಲೆಯಲ್ಲಿ ಖಾಸಗಿಯವರಿಗಿಂತ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದನ್ನು ನಾವು ಮರೆಯಬಾರದು.  ಈಗಾಗಲೆ ಆರ್ .ಟಿ.ಇ.ಯಿಂದ ಅನಧಿಕೃತವಾಗಿ ಖಾಸಗೀಕರಣ ಆರಂಭವಾಗಿದೆ ಇದು ಪರೋಕ್ಷವಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆಗೆ ಕಾರಣವಾಗಬಹುದು ಪ್ರಾಥಮಿಕ ಹಂತಗಳಲ್ಲಿ ಕಡ್ಡಾಯವಾಗಿ ಉತ್ತೀರ್ಣ ಮಾಡುವ ನಿಯಮವು ಸಹ ಗುಣಮಟ್ಟ ಕಡಿಮೆಯಾಗಲು ಕಾರಣವಾಗಬಹುದು  ಈ ನಿಟ್ಟಿನಲ್ಲಿ ನೀತಿ ಆಯೋಗವು ಕಾರ್ಯಸಾಧುವಾದ ಸಲಹೆಗಳನ್ನು ನೀಡಿ ಶಿಕ್ಷಣದ ಅಭಿವೃದ್ಧಿಗೆ ಸಲಹೆ ನೀಡಬೇಕೇ ವಿನಹ  ಶಾಲೆಗಳ ಖಾಸಗೀಕರಣ ಮಾಡಿ ಕಾರ್ಪೊರೇಟ್ ವಲಯದ ತೃಪ್ತಿ ಪಡಿಸಿ ಶಿಕ್ಷಣ ಕೇವಲ ಉಳ್ಳವರ ಆಸ್ತಿಯಾಗಲು ಬಿಡಬಾರದು

No comments: