11 September 2017

ಚಿತ್ರ ಕವನ *ನಿರೀಕ್ಷೆ*



                    ಚಿತ್ರ ಕವನ


                     *ನಿರೀಕ್ಷೆ*



ಇನಿಯ ಬರುವನೆ ?
ನನ್ನ ಮನವನ ಅರಿವನೆ ?
ಕತ್ತಲಾದ ನನ್ನ ಮನಕೆ
ಹೂ ಬೆಳಕ ತರುವನೆ?


ದಾರಿಕಾದೆನು ಸಮಯ ನೋಡದೆ
ಬಾರೀ ನಿರೀಕ್ಷೆಯಿದೆ ಇನಿಯ ಬರುವನೆ?
ದಂತದ ಬೊಂಬೆಯ ಮೈಮಾಟ ನನ್ನ ಸೌಂದರ್ಯ ಸವಿಯುವನೆ?


ಏಸುದಿನ ಕಾದು ಬೇಸರಗೊಂಡಿಹೆ
ಬೀಸುವ ಗಾಳಿ ನೀ ಹೇಳು ಅವ ಬರುವನೇ?
ಗಡಿಯಾರದ ಮುಳ್ಳು ನಿಲ್ಲದೆ ಓಡುತಿದೆ
ಅಡಿಗಡಿಗೆ ಮನ ಕೇಳುತಿದೆ ನಲ್ಲ ಬರುವನೆ?


ಕತ್ತಲಿನ ಬಾಳಿನಲಿ ಮತ್ತೆ ಬಂದು
ನನ್ನ ಸುತ್ತ ಬೆಳಗು ಮೂಡಿಸುವನೆ?
ಆಲಿಂಗನದ ಸುಖವ ಬಯಸಿಹೆ
ಇಂದಾದರೂ ನನ್ನ ರನ್ನ ಬರುವನೆ


ಒಂಟಿ ಬಾಳಿದು ಸಾಕು
ನೆಂಟನವನಿರಬೇಕು
ನನ್ನ ನಂಟು ತಿಳಿದ
ಸುಂದರಾಂಗ ಬರುವನೆ?


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: