31 August 2017

ಸರ್ಕಾರಿ ನೌಕರ ಕುರಿತು ದುಬೈ ದೊರೆ ಮಾತು.ವಿಶ್ವೇಶ್ವರ ಭಟ್ ರವರ ಅಂಕಣದಲ್ಲಿ


S.S.L.C ಮಕ್ಕಳಿಗೆ ಮಾರ್ಗದರ್ಶನ


  1. ಎಲ್ಲಾ ವಿದ್ಯಾರ್ಥಿಗಳ ಜೀವನದಲ್ಲಿ ಎಸ್ ಎಸ್ ಎಲ್ ಸಿ ಒಂದು ಪ್ರಮುಖ ಘಟ್ಟ ಮನೆಯಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳಿದ್ದರೆ ವರ್ಷದ ಆರಂಭದಿಂದ ಮಕ್ಕಳು ಮತ್ತು ಪೋಷಕರಲ್ಲಿ ಒಂದು ಅವ್ಯಕ್ತ ಆತಂಕ ಮನೆ ಮಾಡಿರುತ್ತದೆ ಹಗ್ಇ
    ದು ಅಪೇಕ್ಷಿತ ಅಲ್ಲದಿದ್ದರೂ ಅನಿವಾರ್ಯ ಎಂಬಂತಾಗಿ ಬಿಟ್ಟಿದೆ ಕ್ರಮಬದ್ಧವಾಗಿ ಅದ್ಯಯನ ಮಾಡಿದರೆ ಈ ಪರೀಕ್ಷೆಯಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಸೆಪ್ಟೆಂಬರ್ ತಿಂಗಳಲ್ಲಿ ಎಸ್ ಎಸ್ ಎಲ್ ಸಿ‌ ವಿದ್ಯಾರ್ಥಿಗಳು ಮದ್ಯವಾರ್ಷಿಕ ಪರೀಕ್ಷೆ ಎದುರಿಸಲು ಸಿದ್ದ ಆಗಬೇಕು ಈ ದಿಸೆಯಲ್ಲಿ.  ಪಾಲಕರ ಮತ್ತು ವಿದ್ಯಾರ್ಥಿಗಳ ಜವಾಭ‍್ದಾರಿ ಮತ್ತು ಪಾತ್ರ ಮಹತ್ತರವಾದುದು.          ವಿದ್ಯಾರ್ಥಿಗಳೇನುಮಾಡಬೇಕು
 1  ಪ್ರತಿದಿನವೂ ಸಂತೋಷದಿಂದಿರಿ          2  ಅವಸರ ಮತ್ತು ಆತುರದ ನಿರ್ಧಾರಗಳಿಂದ ನೀವು ಕಲಿತದ್ದು ಮರೆತು ಹೋಗಬಹುದು ಆದ್ದರಿಂಧ ಯಾವಾಗಲೂ ಶಾಂತತೆಯನ್ನು ಕಾಪಾಡಿಕೊಳ‍್ಳಿ.                 3  ಪ್ರತಿ ದಿನ ಯೋಗ ಧ‍್ಯಾನ,ಪ್ರಾರ್ಥನೆಮಾಡಿ ಏಕಾಗ್ರತೆಯನ್ನು ಸಾಧಿದಬಹುದು             
4 ಮನೆಯವರು ಸಿನಿಮಾ ಮಾರ್ಕೇಟ್ ,ಜಾತ್ರೆಗಳಿಗೆ ಹೋದರೆ ನೀವು ಅವರನ್ನು ಹಿಂಬಾಲಿಸಬೇಡಿ                                    5 ರಿಲ್ಯಾಕ್ಸ್ ಬೇಕೆಂದು ಹೆಚ್ಚು ಹೊತ್ತು ಹೊರಗೆ ಸುತ್ತ ಬೇಡಿ                               6 ಎಲ್ಲೇ ಹೋದರೂ ಸಮಯದ ಅರಿವಿರಲಿ                                            7 ನಿಮ್ಮ ಸಹನೆ ಪರೀಕ್ಷೆಯಾಗುವುದು ಪರೀಕ್ಷೆಯಕಾಲದಲ್ಲಿ ಅದಕ್ಕೆ ತಾಳ‍್ಮೆಯಿಂದಿರಿ                                    8 ವಿದ್ಯಾರ್ಥಿಗಳೆ ನಿಮ್ಮ ಭವಿಷ್ಯ ಹಾಳು ಮಾಡಿಕೊಳ‍್ಳದಿರಿ                                      9 ನಿಸ್ವಾರ್ಥ ಮನೋಭಾವವಿರಲಿ .                                                                          ಪಾಲಕರು ಮಾಡಬೇಕಾದುದು                                 1 ಸಮಯಕ್ಕೆ ಸರಿಯಾಗಿ ಮಕ್ಕಳಿಗೆ  ಪೌಷ್ಟಿಕ ಆಹಾರ ನೀಡಿ.                              2. ಓದಲು ಶಾಂತವಾಧ ವಾತಾವರಣ ಕಲ್ಪಿಸಿ ಕೊಡಿ                                         3ಎಲ್ಲಾ ಭಾವನೆಗಳನ್ನು ಹಂಚಿಕೊಳ‍್ಳಲು ನಾನಿದ್ದೇನೆಂದು ಭರವಸೆ ಕೊಡಿ.                4 ಓದಿದ ಮನಸಿಗೆ ವಿರಾಮ ನಿದ್ರೆ ಅವಶ್ಕಕ ಅದಕ್ಕೆ ಅವಕಾಶ ಮಾಡಿಕೊಡಿ                 
  5 ಎಲ್ಲಾ ಸಮಯದಲ್ಲಿ ಓದು ಓದು ಎಂದು “ಕಿರಿ ಕಿರಿ “ಮಾಡದಿರಿ                   6ಮತ್ತೆ ಮತ್ತೆ “ಪರೀಕ್ಷೆ ಹತ್ತಿರ ಬರುತ್ತಿದೆ “ಎಂದು ಭಯಪಡಿಸಬೇಡಿ .                      7 ಮಕ್ಕಳು ಪ್ರತಿನಿತ್ಯ ಇಷ್ಟಪಟ್ಟು ಓದುವಂತೆಪ್ರೇರೇಪಿಸಿ .                   ಪರೀಕ್ಷೆಯ ಹಿಂದಿನ ದಿನದ  ಸಿದ್ದತೆ          1 ತುಂಬಾನಿದ್ದೆಗೆಟ್ಟು ಓದಬೇಡಿ ಮೆದುಳು ವಿಪರೀತ ದಣದರೆ ನೆನಪಿನ ಶಕ್ತಿ ಕುಂಟಿತವಾಗುತ್ತದೆ                                    2 ಕಡ್ಡಾಯವಾಗಿ ಆರು ಗಂಟೆ ನಿದ್ರೆ ಮಾಡಿ.                                                3 ಪೆನ್ನು .ಪೆನ್ಸಿಲ್.ಇರೇಸರ್.ಜಾಮಿಟ್ರಿ ಬಾಕ್ಸ್,ಇತ್ಯಾಧೀ ಲೇಖನ ಸಾಮಗ್ರಿಗಳನ್ನು ಜೋಡಿಸಿಟ್ಟುಕೊಳ‍್ಳಿ,ಜೊತೆಗೆ ಹಾಲ್ ಟಿಕೆಟ್,ಗುರುತಿನ ಚೀಟಿ ಇರಲಿ                 4 ಮತ್ತೊಮ್ಮೆ ವೇಳಾಪಟ್ಟಿ ಪರೀಕ್ಷಿಸಿ         5 ನಾಳೆ ನಾನು ಪರೀಕ್ಷೆ ಖಂಡಿತವಾಗಿ ಚೆನ್ನಾಗಿ ಬರೆಯುತ್ತೇನೆಂದು ಸಂಕಲ್ಪ ಮಾಡಿಕೊಂಡು ಮಲಗಿ                                                                                    6 ಬೇಗ ಮಲಗಿ ಬೇಗ ಏಳಿ.                                                                                                                                          ಪರೀಕ್ಷೆಯದಿನ        .                     1 ಬೆಳಿಗ್ಗೆ ಬೇಗ ಎದ್ದು ನಿತ್ಯಕರ್ಮ ಮುಗಿಸಿ      ಹತ್ತು ನಿಮಿಷ ಧ್ಯಾನ ಮಾಡಿ ನಾನು ಪರೀಕ್ಷೆಯಲ್ಲಿ ಉತ್ತಮವಾಗಿ ಉತ್ತರಿಸಬಲ್ಲೆ ಎಂದು ಸಂಕಲ್ಪ ಮಾಡಿ      
2 ಹಿಂದಿನ  ದಿನ ಹೊಂದಿಸಿಟ್ಟುಕೊಂಡಿದ್ದ ಲೇಖನಸಾಮಗ್ರಿಗಳನ್ನು ನೋಡಿಕೊಳ‍್ಳಿ.               
  3ಬೆಳಿಗ್ಗೆ ತಿಂಡಿ ತಿನ್ನುವುದನ್ನು ಮರೆಯಬೇಡಿನಿಮ್ಮ .ಜೊತೆಗೆ ಪರಿಕ್ಷೆಗೆ ನೀರಿನ ಬಾಟಲ್ ತೆಗೆದುಕೊಂಡುಹೋಗಿ                                                               4ಮನೆ ಬಿಡುವ ಹೊತ್ತಿನಲ್ಲಿ ಓದುತ್ತಾ ಕುಳಿತುಕೊಳ‍್ಳಬೇಡಿ ಒಂದು ಗಂಟೆ ಮುಂಚಿತವಾಗಿ ನಿಲ್ಲಿಸಿ ಮೆದುಳು ವಿಶ್ರಾಂತ ಸ್ತಿತಿಯಲ್ಲಿರಬೇಕು.                               5 ಪರೀಕ್ಷಾ ಕೇಂದ್ರಕ್ಕೆ ಅರ್ದ ಗಂಟೆ ಮೊದಲೇ ತಲುಪಿ ನಿಮ್ಮರಿಜಿಸ್ತರ್ ನಂಬರ್ ಕೊಠಡಿ ಆಸನ ವ್ಯವಸ್ತೆ ನೋಡಿಕೊಳ‍್ಳಿ.         6 ಪರೀಕ್ಷಾ ಕೇಂದ್ರದ ಬಳಿನಿಮ್ಮ ಸ್ನೇಹಿತರ ಜೊತೆ ಅಂದಿನ ವಿಷಯದ ಬಗ್ಗೆ ಚರ್ಚೆ ಬೇಡ.           
                      ಪರೀಕ್ಷಾ        ಕೊಠಡಿಯಲ್ಲಿ                                     1 .15 ನಿಮಿಷ ಮೊದಲೇ ಪರೀಕ್ಷಾ ಖೋಠಡಿಯಲ್ಲಿ ಕುಳಿತುಕೊಳ‍್ಳಿ.                2. ಕೆಲ ಕಾಲ ಧೀರ್ಘ ಊಸಿರೆಳೆದು ಕೊಂಡು ಧ‍್ಯಾನ ಮಾಡಿ.                               3ಪ್ರಶ‍್ನೆ ಪತ್ರಿಕೆ ಮತ್ತು  ಉತ್ತರ ಪತ್ರಿಕೆ ಪಡೆದ ಬಳಿಕ ಎಲ್ಲಾ ಪುಟಗಳು ಮುದ್ರಿತವಾಗಿವೆಯೇ ಎಂದು ಪರೀಕ್ಷಿಸಿಕೊಳ‍್ಳಿ.                                       4ಪ್ರಶ್ನೆ ಪತ್ರಿಕೆಯನ್ನು ತಾಳ‍್ಮೆಯಿಂದ ಸಂಪೂರ್ಣವಾಗಿ ಒಮ್ಮೆ ಓದಿ ಅರ್ಥೈಸಿಕೊಳ‍್ಳಿ.                                                                                                 5 ಪರಿಕ್ಷೆ ಕೊಠಡಿಯಲ್ಲಿ ಯಾರೊಂದಿಗೂ ಮಾತನಾಡಬೇಡಿ.                                6 ಬಹುಆಯ್ಕೆ ಪ್ರಶ್ನೆಗಳಿಗೆ ಉತ್ತರಿಸುವಾಗ ಎಚ್ಚರವಾಗಿರಿ             
   7 ಉತ್ತರಗಳನ್ನು ನೇರವಾಗಿ , ನಿಖ ರವಾಗಿ ಸ್ಪಷ್ಟವಾಗಿ ಬರೆಯಿರಿ                  8 ಮುಖ್ಯವಾದ  ಅಂಶಗಳಿಗೆ ಅಂಡರ್ ಲೈನ್ ಮಾಡಿ                                          9 ಚಿತ್ರಗಳು.ಭೂಪಟಗಳು .ಮತ್ತು ರೇಖಾಚಿತ್ರಗಳನ್ನು ಸ್ಪಷ್ಟವಾಗಿ ಬರೆದು ಭಾಗಗಳನ್ನು ಗುರ್ತಿಸಿ.                                                                                       10 ಹೆಚ್ಚಿನ  ಉತ್ತರ ಹಾಳೆಗಳನ್ನು ತೆಗೆದುಕೊಂಡಿದ್ದರೆ ಅವುಗಳಿಗೆ ನಿಮ್ಮ ರಿಜಿಸ್ಟರ್ ನಂಬರ್ ಸರಿಯಾಗಿ ನಮೂದಿಸಿ ಸರಿಯಾಗಿ ಕಟ್ಟಿ  ಕೊನೆಯ 15 ನಿಮಿಷದಲ್ಲಿ ಬರೆದಿರುವ ಎಲ್ಲಾ ಪ್ರಶ್ನೆಗಳು ಮತ್ತು ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಿ ಕೊನೆಯಲ್ಲಿ ಕೊಠಡಿ ಮೇಲ್ವಿಚಾರಕರಿಗೆ ನೀಡಿ.                                                                           ನಿಮಗೆ ಶುಭವಾಗಲಿ                                                                               ನಿಮಗೆಲ್ಲಾ ಯಶಸ್ಸು ದೊರೆಯಲಿ                                                                                    ಸಿ.ಜಿ.ವೆಂಕಟೇಶ್ವರ.ಶಿಕ್ಷಕರು .                      ಎಸ್ .ಎಸ್ ಇ. ಎ. ಸರ್ಕಾರಿ ಪ್ರೌಢಶಾಲೆ 

29 August 2017

ಸೌಂದರ್ಯ ಸುಂದರಿ

ಸೌಂದರ್ಯ ಸುಂದರಿ

ಯಾರಿವಳು ಮೋಹಕ ಸುಂದರಿ
 ಇವಳ ಮೈಮಾಟ ತರಾವರಿ
ಇವಳ ಕಣ್ಣು ಸೂಜಿಮಲ್ಲೆ
ಕುಳಿತಿಹಳಲ್ಲ ಸರೋವರದ ಪಕ್ಕದಲ್ಲೇ

ಸಾಗರಿಯೋ ನಾಗಿಣಿಯೋ ತಿಳಿಯುತಿಲ್ಲ
ಇವಳ ಲಜ್ಜೆಯ ನೋಟಕೆ ಮಿತಿಯಿಲ್ಲ
ಅನುಮಾನ  ನನಗೆ ಇವಳುಎಲ್ಲೋರಾ ಶಿಲ್ಪ ?
ರಂಭಾ ಊರ್ವಶಿಯರು ಇವಳ ಮುಂದೆ ಅಲ್ಪ


ಕಾಯುತಿರಬಹುದು ಇನಿಯನ ಬರುವಿಕೆಗಾಗಿ
ಕೇಳಿ ಬರಲೇ ನಾನೀಗಲೆ  ಬೇಗನೆ ಹೋಗಿ
ಕೇಳಲೇ ಅವಳ ಏ ಕಾಂತೆ  ಏಕಾಂತವೇಕೆ?
ನಿಂದಿಸಬಹುದು ನನ್ನ ಆ ವಿಷಯ ನನಗೇಕೆ

ಕರದಲಿರುವುದು  ಕೋಮಲ ಮಯೂರ ಗರಿ
ಹಿನ್ನೆಲೆಯಲಿರುವುದು ಮೋಹಕ ಗಿರಿ
ಇವಳು ಮಯೂರಶರ್ಮನ ಪ್ರೇಯಸಿಯೋ?
ಗಿರಿರಾಜನ ಹಿರಿ ತನುಜೆಯೋ?

ನಿನ್ನಂದದಿಂದ ಸೊಬಗು ಆಭರಣಗಳಿಗೆ
ಚಂದಿರನೇ ನಾಚಿದ ನೋಡಿ ನಿನ್ನ ಹೂನಗೆ
ಕಮಲನಾಭನ ಪಟ್ಟದರಿಸಿಯೋ
ಬ್ರಹ್ಮ ದೇವನ ಹೃದಯ ವಾಸಿಯೋ

ಮಾತನಾಡಿ ಪರಿಹರಿಸು ನನ್ನ ಸಂದೇಹವ
ತಾಳಲಾರೆನು ನಾನು ಈ ನಿನ್ನ ಮೌನವ
ನೀನೇ ಪ್ರಕೃತಿ ಸೌಂದರ್ಯವೋ
ಅಥವಾ ಪ್ರಕೃತಿಯೇ ನಿನ್ನ ಸೌಂದರ್ಯವೋ?

ಸಿ.ಜಿ.ವೆಂಕಟೇಶ್ವರ
ಶಿಕ್ಷಕರು
ಗೌರಿಬಿದನೂರು

ತಾಯಿಯ ಹಾರೈಕೆ

ತಾಯಿಯ ಹಾರೈಕೆ

ಭಾರತಾಂಬೆಯ ಸೇವೆಗೈದ ಕಂದನೆ ಪವಡಿಸು ನನ್ನ ಮಡಿಲಲಿ ನಿದಿರಿಸುಕಣ್ತುಂಬ
ಎನಿತು ದಿನಗಳಾದವೋ ಸುಖ ನಿದಿರೆಗೈದು ಗಡಿಗಳ ಗೊಡವೆಯಲಿ


ಮಳೆ ಚಳಿಗಾಳಿ ಲೆಕ್ಕಿಸದೇ ಉಕ್ಕಿ ಬಹ ದೇಶಾಭಿಮಾನಕ್ಕೆ ನಿನಗೆ ನೀನೆ ಸಾಟಿ
 ನಮನ ನಿನಗೆ ನೂರು ಕೋಟಿ.


ಓ ನನ್ನ ಕಂದ ನಿನ್ನ ಕಂದನ ಗೊಡವೆ ನಿನಗೆ ಬೇಡ
ನಾನಿರುವೆನಲ್ಲಾ ಬೆಳೆಸಿ ತೋರುವೆ ನೋಡ


ಇರಬಹುದು ನಮಗೆ ಬಡತನ                     ನಮ್ಮ ತನುಮನದಲಿಹುದು ಸಿರಿತನ
ಯೋಧನಿಗೆ ದೇಶವೇ ಮನೆ ಮರಿಬೇಡ ಈ ತಾಯಿಮನೆ

ವಿಶ್ರಮಿಸದಿರು ಭಾರತಾಂಬೆಯ ಸೇವೆಗೆ ವಿಶ್ರಾಂತಿ ಮರೆಯದಿರು ಈ ತಾಯಿಯ ಮಡಿಲಿನಲಿ

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

ಮಾನವರಾಗುವಿರಾ?

ಮಾನವರಾಗುವಿರಾ?

ಮಾನವರಾಗುವಿರಾ ನೀವು
 ಮಾನವಾರಾಗುವಿರಾ?
ದಾನವತೆಯ ಹೀನ ಗುಣವ ಬಿಟ್ಟು.
 ಮಾನವರಾಗುವಿರಾ?

ಅಪ್ಪ ಅಮ್ಮನನು ತಪ್ಪದೆ ಪೂಜಿಸಿ
ತಪ್ಪು ಒಪ್ಪುಗಳ ಲೆಕ್ಕವ ಇಟ್ಟು
ಅಪ್ಪಿ ಮುದ್ದಾಡಿ ಸಲಹಿ ಅವರ //

ಅನ್ನ ದಾನವ ಮಾಡುವರಾಗಿ
ಅನ್ನ ಪೋಲನು ಇಂದೇ ನಿಲ್ಲಿಸಿ
ಇನ್ನು ಅನ್ನದ ಬೆಲೆಯನು ತಿಳಿಯಿರಿ//

ಪರಿಸರ ರಕ್ಷಣೆ ಮಾಡುವರಾಗಿ
ಪರಿ ಪರಿ ಮರಗಿಡ ಇಂದೇ ನೆಡಿರಿ
ಪರರ ಹಿತವನು ಅನುದಿನ ನೆನೆಯಿರಿ//

ಪ್ರಾಣಿ ಪಕ್ಷಿಗಳ ಮೇಲೆ ಕರುಣಿಸಿ
ಪ್ರಾಣದ ಬೆಲೆಯನು ತಪ್ಪದೆ ತಿಳಿಯಿರಿ
ಪರಹಿತ ಪರಮಾತ್ಮ ಎಂಬುದ ತಿಳಿಯಿರಿ //

ಜಾತಿ ಭೇಧದ ಬೀಜವ ಬಿತ್ತದೇ
ನೀತಿ ನೇಮದಿ ಜನರಲಿ ಬೆರೆಯುತ
ಪ್ರೀತಿಯಿಂದ ಎಲ್ಲರಲಿ ಬೆರೆ ನೀ //

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

ವರಮಾಹಾಲಕ್ಷ್ಮಿ

ವರಮಾಹಾಲಕ್ಷ್ಮಿ

ವರಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ
ನಿನ್ನ ಕರುಣೆಯ ಭಾಗ್ಯವ ನಮಗೆ ತೋರಮ್ಮ

ಸಕಾಲಕೆ ಮಳೆ ಬೆಳೆ ಬಂದು ರೈತರ ಮೊಗದಲಿ ಹರುಷದ ಕಳೆ ತಾರಮ್ಮ
ಮರ ಗಿಡಗಳಲ್ಲಿ ಜೀವ ಕಳೆ ತಂದು
ಇಳೆಯ ಜೀವಿಗಳಿಗೆ ನೆಮ್ಮದಿ ನೀಡಮ್ಮ

ನಮ್ಮನಾಳುವವರಿಗೆ    ಅರಿವ ವರ ನೀಡು
ಮತಧರ್ಮದೆಸರಲ್ಲಿ ಕಚ್ಚಾಟ ನಿಲ್ಲಿಸಲು
ನಮ್ಮ ನಮ್ಮಲ್ಲಿ ಭೇದ ಭಾವ ಮಾಡಿ ತಮ್ಮ
ಬೇಳೆ ಬೇಯಿಸಿಕೊಳ್ಳದಂತೆ  ಬುದ್ದಿ ನೀಡು

ವರವ ನೀಡು ಸಿರಿವಂತರಿಗೆ ಮಾಡದಿರಲು ಅತಿ ಸಂಪತ್ತು
ನೀಡು ಸರ್ವರಿಗೂ ಸರಿಸಮವಾದ ಆಯುರಾರೋಗ್ಯ ಸೌಲತ್ತು

ನೀಡು ವರವ ಜಗದ ನಾಯಕರಿಗೆ ಮಾಡದಿರುವಂತೆ ಅನಗತ್ಯ ಯುದ್ಧ
ಶಾಂತಿ ಸಹಬಾಳ್ವೆ ನಡೆಸಲು ನಾವೆಲ್ಲರೂ
ಎಂದೆಂದಿಗೂ ಬದ್ದ.

ಸಿ.ಜಿ ವೆಂಕಟೇಶ್ವರ
ಗೌರಿಬಿದನೂರು.

ವಿಶ್ವ ಪರಂಪರೆಯ ತಾಣಗಳಲ್ಲಿ ಭಾರತ




world heritage day

ವಿಶ್ವ ಪರಂಪರೆ ದಿನದ ಬಗ್ಗೆ ಲೇಖನ.
ಸಾಮಾನ್ಯವಾಗಿ ನಾವು ಮಾತನಾಡುವಾಗ “ಅವನ ಪರಂಪರೆಯನ್ನು ನೀನು ತಿಳಿದಿಲ್ಲ” ಅವರ ಪರಂಪರೆ ವಿಶೇಷ ರೀತಿಯದಾಗಿತ್ತು “ಮುಂತಾದ ಮಾತುಗಳನ್ನು ನಾವು ಕೇಳುತ್ತಲೇ ಇರುತ್ತೇವೆ .
ಹಾಗಾದರೆ ಪರಂಪರೆ ಎಂದರೆ ಏನು ಅದರ ಮಹತ್ವವೇನು .?
ನಾವು ನಮ್ಮ ಪೂರ್ವಜರಿಂದ ಪಡೆದ ಆಸ್ತಿ, ಪ್ರಾಕೃತಿಕ, ಸಾಂಸ್ಕೃತಿಕ, ಸಂಪನ್ಮೂಲಗಳು ನಮ್ಮ ಪರಂಪರೆ ಎನಿಸಿಕೊಳ್ಳುತ್ತದೆ.
ಇನ್ನೊಂದು ಮಾತಿನಲ್ಲಿ ಹೇಳಬೇಕೆಂದರೆ ನಾವು ನಮ್ಮ ಪೂರ್ವಜರಿಂದ ಪಡೆದ ಸ್ಮಾರಕಗಳು ಮತ್ತು ಪ್ರಕೃತಿ ನಮಗೆ ಆನಂದ ಮತ್ತು ಸೌಂದರ್ಯ ಪ್ರಜ್ಞೆ ಉಂಟು ಮಾಡುವುದನ್ನು ಪರಂಪರೆ ಎಂದು ಕರೆಯಲಾಗುತ್ತದೆ.
ಈ ವಿಷಯದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರಲ್ಲಿ ಜಾಗೃತಿಮೂಡಲಾರಂಬಿಸಿದೆ
ಇದಕೆ ಕಾರಣ
ಯುನೆಸ್ಕೋ ಸಾಮಾನ್ಯ ಸಭೆಯಲ್ಲಿ ೧೯೮೩ ಏಪ್ರಿಲ್ ೧೮ರಂದು ಒಂದು ನಿರ್ಣಯ ಕೈಗೊಂಡು ಪ್ರತೀ ವರ್ಷ ಏಪ್ರಿಲ್ ೧೮ರಂದು ವಿಶ್ವಾದ್ಯಂತ ಪರಂಪರಾ ದಿನವನ್ನಾಗಿ ಆಚರಿಸಲಾಗುತ್ತದೆ. ಅದರಂತೆ ಈ ವರ್ಷ ಈ ದಿನಕ್ಕೆ ಘೋಷ ವಾಕ್ಯವನ್ನು( theme)ಈಗೆ ನಿಗದಿ ಪಡಿಸಲಾಗಿದೆ. “ಸಾಂಸ್ಕೃತಿಕ ಪರಂಪರೆ ಮತ್ತು ಸುಸ್ಥಿರ ಪ್ರವಾಸೋದ್ಯಮ ” ಇದು ವಿಶ್ವ ಸಂಸ್ಥೆಯ ೨೦೩೦ ರ ಸುಸ್ಥಿರ ಅಭಿವೃದ್ಧಿ ಗುರಿಗಳ ಆಧಾರದ ಮೇಲೆ ರೂಪಿತವಾಗಿದೆ.
ಪರಂಪರೆಯ ವಿಧಗಳು. ‌:
ಪರಂಪರೆಯನ್ನು ವ್ಯಾಪಕವಾಗಿ ಎರಡು ವಿಧಗಳಲ್ಲಿ ವಿಂಗಡಿಸಬಹುದು ಅವೆಂದರೆ. ಸಾಂಸ್ಕೃತಿಕ ಪರಂಪರೆ ಮತ್ತು ಪ್ರಾಕೃತಿಕ ಪರಂಪರೆ.
ನಮ್ಮ ದೇಶದಲ್ಲಿ ಹಲವಾರು ರಾಜಮನೆತನದ ಆಳ್ವಿಕೆಯ ಪರಿಣಾಮವಾಗಿ ನಮಲ್ಲಿ ಹಲವಾರು. ದೇವಾಲಯಗಳು, ಅರಮನೆಗಳು, ಕೋಟೆ ಕೊತ್ತಲಗಳು ,ಬಾವಿಗಳು, ಕೆರೆಗಳು, ಮಿನಾರ್ ಗಳು ಮಹಲ್ ಗಳು ಕಾಲುವೆಗಳು. ಮುಂತಾದ ಸ್ಮಾರಕಗಳು ನಮ್ಮಲ್ವಿವೆ ಇವುಗಳು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಕುರುಹುಗಳು.
ನಮ್ಮ ದೇಶದ ನೆಲ .ಜಲ.ಪರಿಸರ ,ಬಂಡೆ ,ಮರ,ಗಿಡ,ಮುಂತಾದ ಪ್ರಾಕೃತಿಕ ಸೌಂದರ್ಯದ ಬೀಡು ಇದು ನಮ್ಮ ಪ್ರಾಕೃತಿಕ ಪರಂಪರೆ.
ನಮ್ಮ ಪರಂಪರೆಯ ವಿಶೇಷ:
ಪ್ರಪಂಚದಲ್ಲಿ ಇಂದು ಒಟ್ಟಾರೆ ೧೦೫೨ ವಿಶ್ವ ಪರಂಪರೆಯ ಸ್ಥಳ ಗಳಿವೆ ಎಂದು ಕೆಲ ಮಾನದಂಡಗಳ ಪ್ರಕಾರ ಯುನೆಸ್ಕೋ ಪಟ್ಟಿ ಮಾಡಿದೆ ಅದರಲ್ಲಿ ೮೧೪ ಸಾಂಸ್ಕೃತಿಕ. ೨೦೩ಪ್ರಾಕೃತಿಕ ಮತ್ತು ೩೫ ಮಿಶ್ರ ಪರಂಪರೆಯ ತಾಣವಾಗಿ ವಿಂಗಡಿಸಿದೆ.ಇದರಲ್ಲಿ ಭಾರತದಲ್ಲಿ ೩೪ ಕ್ಕಿಂತ ಹೆಚ್ಚು ವಿಶ್ವ ಪರಂಪರೆಯ ತಾಣಗಳಿರಯವುದು ಭಾರತೀಯರಾದ ನಾವು ಹೆಮ್ಮೆ ಪಡುವ ಸಂಗತಿ .ಇದು ಪ್ರಾನ್ಸ್. ಇಟಲಿಯ ನಂತರ ನಮಲ್ಲಿ ಹೆಚ್ಚು ಸ್ಮಾರಕಗಳು ಇರುವುದು ಗಮನಾರ್ಹ. ಇದರಲ್ಲಿ ಪ್ರಮುಖ ಸ್ಮಾರಕಗಳು ಈಕೆಳಗಿನಂತಿವೆ.ಅಜಂತಾ ಗುಹೆಗಳು, ಕೋನಾರ್ಕ್ ಸೂರ್ಯ ದೇವಾಲಯ, ಆಗ್ರಾದ ತಾಜ್ ಮಹಲ್, ಖಜುರಾಹೊ ದೇವಾಲಯಗಳು, ಸಾಂಚಿಯ ಬೌದ್ಧ ಸ್ತೂಪ, ಕುತುಬ್ ಮಿನಾರ್, ರಾಜಸ್ತಾನದ ಕೋಟೆ, ಆಗ್ರಾದ ಕೋಟೆ ಇತ್ಯಾದಿ. ಕರ್ನಾಟಕದ ಮೂರು ತಾಣಗಳನ್ನು ವಿಶ್ವ ಪರಂಪರೆಯ ಪಟ್ಟಿಯಲ್ಲಿ ಇರುವುದು ಕನ್ನಡಿಗರ ಹೆಮ್ಮೆ. ಅದರಲ್ಲಿ. ಹಂಪೆಯ ವಾಸ್ತುಶಿಲ್ಪ. ಪಟ್ಟದಕಲ್ಲು ದೇವಾಲಯಗಳು.ಮತ್ತು ಪಶ್ಚಿಮ ಘಟ್ಟಗಳು ಸೇರಿವೆ .
ಪರಂಪರೆ ಸ್ಥಳಗಳ ರಕ್ಷಣೆ.:
ವಿಶ್ವ ಸಂಸ್ಥೆಯ ಯುನೆಸ್ಕೋ ವರದಿಯ ಪ್ರಕಾರ ವಿಶ್ವ ದಲ್ಲಿ ೫೫ಪಾರಂಪರಿಕ ತಾಣಗಳು ಅಳಿವಿನ ಅಂಚಿನಲ್ಲಿದೆ ಎಂದರೆ ನಾವು ಹೇಗೆ ನಮ್ಮ ಪರಂಪರೆಯನ್ನು ಸಂರಕ್ಷಣೆ ಮಾಡತ್ತಿದೇವೆ ಎಂಬುದಕ್ಕೆ ಹಿಡಿದ ಕನ್ನಡಿ
ವಿವಿದ ಸರ್ಕಾರಗಳು ಪರಂಪರೆ ಸ್ಥಳಗಳ ರಕ್ಷಣೆ ಮಾಡಲು ಹಲವಾರು ಕಾನೂನಿನ ಮೂಲಕ ಪ್ರಯತ್ನ ಮಾಡುತ್ತಿವೆ ಆದರೂ ಪಾರಂಪರಿಕ ಕಟ್ಟಡಗಳ ವಿರೂಪ ಮಾಡಿದ ಮತ್ತು ಪರಿಸರಕ್ಕೆ ಹಾನಿಯನ್ನು ಉಂಟುಮಾಡುವ ಕಾರ್ಯಗಳು ಅವ್ಯಾಹತವಾಗಿ ನಡೆಯುತ್ತಿರುವುದು ದುರದೃಷ್ಟಕರ ಈ ನಿಟ್ಟಿನಲ್ಲಿ ನಮ್ಮ ಪರಂಪರೆಯನ್ನು ನಮ್ಮ ಪೂರ್ವಜರಿಂದ ನಾವು ಪಡೆದಂತೆ ಅದನ್ನು ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಆದ್ದರಿಂದ ನಮ್ಮ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಪರಂಪರೆಯನ್ನು ಸಂರಕ್ಷಿಸಲು ಇಂದೇ ಪಣ ತೊಡೋಣ.
ಸಿ.ಜಿ.ವೆಂಕಟೇಶ್ವರ

ನಮ್ಮಯ ಪಯಣ




payana .journey my kannada poem

ನಮ್ಮಯ ಪಯಣ
ಓಡಿಹಾಡೋ ವೇಳೆ ಜವಾಬ್ದಾರಿಯ ಮಾಲೆ
ಒಡಲ ತುಂಬಿಸಲು ಕಷ್ಟಗಳ ಸರಮಾಲೆ
ದಿಕ್ಕಿಲ್ಲ ದೆಸೆಯಿಲ್ಲ ಸಾಗುವುದೆತ್ತ ಪಯಣ
ಹಕ್ಕಿನ ಕೂಳಿಗೆ ಹೋರಾಟ ಅನುದಿನ
ಸಮಾನತೆ ಸಹಕಾರ ಸಹಬಾಳ್ವೆ ಎಲ್ಲಿ
ನಿಮಗೆ ಮಹಲು ನಮಗೆ ಬೀದಿ ಇಲ್ಲಿ
ಸ್ವಚ್ಛ ಭಾರತವೆಂದು ಪೋಸು ಕೊಟ್ಟರು
ಚಿಂದಿ ಆಯ್ದು ಸ್ವಚ್ಛ ಮಾಡಿದ ನಮ್ಮ ಮರೆತರು
ಹೆಣ್ಣೊಂದು ಕಲಿತರೆ ಶಾಲೆ ತೆರೆದಂತೆ ಎನ್ನುವಿರಿ
ನೋಡಿ ನಮಗೆಲ್ಲಿದೆ ಶಾಲೆ ಅರಿಯಿರಿ
ಉಳ್ಳವರು ನಮ್ಮನ್ನು ಸಂಭೊದಿಸುವಿರಿ ಲಕ್ಷ್ಮಿ
ನಾವಿಲ್ಲಿ ಪರಿತಪಿಸುತ್ತಿದ್ದೇವೆ ಪಡೆಯಲು ಲಕ್ಷ್ಮಿ
ಮಕ್ಕಳನ್ನು ದೇವರೆನ್ನುವಿರಿ  ಆಸ್ತಿ ಎನ್ನುವಿರಿ
ಇದೇ ನಿಮ್ಮ ಆಸ್ತಿ ,ದೇವರ ನೋಡುವ ಪರಿ
ಮಕ್ಕಳ ಹಕ್ಕು. ಹಕ್ಕೆಂದು ಬಡಬಡಾಯಿಸುವಿರಿ
ನಮ್ಮನ್ನು ನೋಡಿ ಏಕೆ ತಡಬಡಾಯಿಸುವಿರಿ.
ಸರ್ವರಿಗೂ ಸಮಬಾಳು ಸಮಪಾಲು ಏಕಿಲ್ಲ
ಸರ್ವರೂ ನಮ್ಮ ನೋಡಿಲ್ಲ ಮಿಡಿದಿಲ್ಲ
ಆದರೂ ಆತ್ಮವಿಶ್ವಾಸ ನಮ್ಮಲ್ಲಿ ಬತ್ತಿಲ್ಲ
ಬಾಳಿ ತೋರುವೆವು ನಾವು ಜಗಕೆಲ್ಲಾ.
ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು
ಸಿ.ಜಿ.ವೆಂಕಟೇಶ್ವರ. ಗೌರಿಬಿದನೂರು      9900925529



ಚಿತ್ರಮಂದಿರಗಳಲ್ಲಿ ಎಳನೀರು







ಚಿತ್ರಮಂದಿರಗಳಲ್ಲಿ ಎಳನೀರು

ಮೈಸೂರಿನ ಜಿಲ್ಲಾಧಿಕಾರಿ ಡಿ ರಂದೀಪ್ ರವರು ಜಿಲ್ಲೆಯ ಎಲ್ಲಾ ಚಿತ್ರ ಮಂದಿರಗಳು ಕಡ್ಡಾಯವಾಗಿ ಎಳನೀರು ಮಾರಬೇಕೆಂದು ಆದೇಶ ಮಾಡಿರುವುದು ಉತ್ತಮ ಬೆಳವಣಿಗೆ .ಇದೇ ರೀತಿ ಎಲ್ಲಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲು ಜನರಿಂದ ಒತ್ತಡ ಹೇರಬೇಕಿದೆ .ಈ ನಿಟ್ಟಿನಲ್ಲಿ ತಮಿಳು ನಾಡು ಮತ್ತು ಕೇರಳ ರಾಜ್ಯಗಳು ನಮಗೆ ಮಾದರಿಯಾಗಬೇಕು ಈ ರಾಜ್ಯಗಳಲ್ಲಿ ಆರೋಗ್ಯಕ್ಕೆ ಹಾನಿಕರವಾದ ಮತ್ತು ಬಹುರಾಷ್ಟ್ರೀಯ ಕಂಪನಿಗಳ ತಂಪು ಪಾನೀಯಗಳನ್ನು ನಿಷೇಧಿಸಲಾಗಿದೆ ಮತ್ತು ಎಳನೀರನ್ನು ಎಲ್ಲಾ ಮಾಲ್ ಮತ್ತು ಚಿತ್ರ ಮಂದಿರಗಳಲ್ಲಿ ಕಡ್ಡಾಯವಾಗಿ ಮಾರಲು ಆದೇಶಿಸಿ ಜಾರಿಗೆ ತರಲಾಗಿದೆ.ನಮ್ಮ ರಾಜ್ಯದಲ್ಲೂ ಈ ವಿಷಯವನ್ನು ಆಂದೋಲನದ ರೀತಿಯಲ್ಲಿ ಮುನ್ನೆಡೆಸಲು ಯುವ ಪೀಳಿಗೆಯ ಸಹಕಾರ ಅಗತ್ಯವಾಗಿದೆ. ಇದರಿಂದಾಗಿ  ಪರೋಕ್ಷವಾಗಿ ಸಂಕಷ್ಟದಲ್ಲಿರುವ ನಮ್ಮ ರೈತರಿಗೆ ಅನುಕೂಲವಾಗುತ್ತದೆ. ಜೊತೆಗೆ ಭಾರತದ ಹಣ ಬಹುರಾಷ್ಟ್ರೀಯ ಕಂಪನಿಗಳ ಮೂಲಕ ವಿದೇಶಕ್ಕೆ ಹರಿದು ಹೋಗುವುದು ನಿಲ್ಲುತ್ತದೆ ತನ್ಮೂಲಕ ನಮ್ಮ ದೇಶದ ಸಂದಾಯ ಬಾಕಿ ಅಸಮತೋಲನ ನಿವಾರಣೆ ಆಗಿ ನಮ್ಮ ದೇಶ ಜಗತ್ತಿನ ಪ್ರಭಲವಾದ ಆರ್ಥಿಕ ಶಕ್ತಿ ಆಗಿ ಹೊರಹೊಮ್ಮಲಿದೆ.
ಈಗೆ ಒಂದು ಚಿಕ್ಕ ಕ್ರಮದ ಮೂಲಕ ಉತ್ತಮ ಫಲಿತಾಂಶ ದೊರೆಯುವಂತಾದರೆ ಬೇರೆ ಜಿಲ್ಲೆ, ಮತ್ತು ರಾಜ್ಯಗಳೇಕೆ ಈ ನಿಟ್ಟಿನಲ್ಲಿ ಯೋಜನೆ ಜಾರಿಗೆ ತರಬಾರದು.
ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು
ಸಿ.ಜಿ.ವೆಂಕಟೇಶ್ವರ. ಗೌರಿಬಿದನೂರು      9900925529



27 August 2017

ನಾವು ಗೆಳೆಯರು (ಚಿತ್ರ ಕವನ)

           *ನಮ್ಮ ಒಗ್ಗಟ್ಟು*

ನಾವು ಎಳೆಯರು ನಾವು ಗೆಳೆಯರು
ನಮ್ಮ ಲೋಕವೆ ಸುಂದರ
ಗುಮ್ಮ ಬಂದರೂ ಹೆದರಲಾರೆವು
ನಮ್ಮ ಗೆಲುವು ನಿರಂತರ

ಚಿಂದಿ ಆಯ್ವೆವು ಚಂದ ಇರುವೆವು
ಬಂಧು‌ ಬಳಗ ಎಲ್ಲಾ ನಾವೆ
ನಮ್ಮ ಸ್ನೇಹಕೆ ಎಣೆಯು ಉಂಟೆ
ಜೀವಿಸುವೆವು ನೋಡಿ ನೀವೆ

ಅಪ್ಪ ಅಮ್ಮ ನಮಗೆ ಇಲ್ಲ
ಜಗವೆ ತಂದೆ ತಾಯಿ ಎಲ್ಲಾ
ಕೂಡಿ ಬಾಳ್ವೆವು ಕೂಡಿ ನಲಿವೆವು
ನೋಡಿ ಕಲಿಯಿರಿ ನಮ್ಮನಿಲ್ಲಿ

ಕಷ್ಟ ಸುಖಗಳ ಮೆಟ್ಟಿ ನಿಲ್ವೆವು
ದುಷ್ಟ ಬುದ್ದಿ ನಮಗೆ ಸುಳಿಯದು
ಕೂಡಿಬಾಳಲು ಸ್ವರ್ಗಸುಖವು
ಭವಿಷ್ಯದ ಭಾರತ ನಮ್ಮದು

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

26 August 2017

ವೀರಯೋಧರೆ ಕ್ಷಮಿಸಿಬಿಡಿ

ಕ್ಷಮಿಸಿ ಬಿಡಿ

    (ವೀರ ಯೋಧರಿಗೆ ಅರ್ಪಣೆ)

ಕಚ್ಚಾಡುತಿಹೆವು   ಗಡಿಯೊಳಗೆ
ಬೆಚ್ಚನೆಯ ಗುಡಿಯೊಳಗೆ
ಗಡಿಯಲಿರುವ ನಿಮ್ಮ ಕಷ್ಟಗಳ
ಅರಿವಿಲ್ಲದೇ   ಕ್ಷಮಿಸಿ ಬಿಡಿ

ದೊಂಬರಾಟವಾಡುತಿಹೆವು ಜಾತಿ
ಧರ್ಮದ ಹೆಸರಿನಲಿ
ಭಾರತಾಂಬೆಯ ಮರೆತಿಹೆವು
ನಮ್ಮೀ ಅಪರಾಧವ ಕ್ಷಮಿಸಿ ಬಿಡಿ

ಬಿಸಿಲು ಮಳೆ ಚಳಿ ಲೆಕ್ಕಿಸದೇ
ಶತೃಗಳಿಂದ ರಕ್ಷಣೆ ಮಾಡುವಿರಿ
ಗಡಿಯೊಳಗೆ ಪರಸ್ಪರ ನಾವೇ ಶತೃಗಳಾಗಿ
ಕಿತ್ತಾಡುತಿಹೆವು ಕ್ಷಮಿಸಿ ಬಿಡಿ

ದೇಶ ಭಕ್ತಿಗೆ ಪ್ರೇರಣೆ ನೀವು
ವೇಷ ಹಾಕಿ ದೇಶಭಕ್ತಿ ಹೆಸರಿನಲ್ಲಿ
ನಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದೇವೆ
ಸುಮ್ಮನೇ ನಮ್ಮ ಕ್ಷಮಿಸಿ ಬಿಡಿ

 ಸಿ‌.ಜಿ.ವೆಂಕಟೇಶ್ವರ
ಗೌರಿಬಿದನೂರು

25 August 2017

Violence in haryana regarding Ram rahim singh

Violence in haryana and Punjab is highly condemnable. The people must understand rule of law and respect our legal system.  they think their swami ram rahim is not did mistakes they may move to apex Court but they should not engage in violence. Who is responsible for loss of property and lives .we must have our own faith in any god or Godman  but we must not have faith blindly .in this modern century still we have such blind following ,we should think and act .not act by seeing mob .
Both center and state government government must take strict action and culprit and miscreants should be punished.

C.g.Venkateshwara
Gowribidnur

24 August 2017

ರಾಜ್ಯ ಮಟ್ಟದ ಕವಿ ಕಾವ್ಯ ಸಂಭ್ರಮ

ರಾಜ್ಯ ಮಟ್ಟದ ಕಾವ್ಯ ಸಂಭ್ರಮದಲ್ಲಿ ನನ್ನ ಕವನ ವಾಚನ ಹಾಗೂ ನನ್ನ ಕವನವಿರುವ ಪುಸ್ತಕ ಬಿಡುಗಡೆ ಮತ್ತು ಕವನವಾಚನ c.d, ಬಿಡುಗಡೆ ಕಾರ್ಯಕ್ರಮ ಹಮ್ಮಿ  ಕೊಳ್ಳಲಾಗಿದೆ ದಯವಿಟ್ಟು ಎಲ್ಲರೂ      ದಿನಾಂಕ 27-8-2017ರಂದು ಹಾಸನಕ್ಕೆ ಬನ್ನಿ .
ನಿಮ್ಮ ನಿರೀಕ್ಷೆಯಲ್ಲಿ ನಿಮ್ಮವ
ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು
https://m.facebook.com/story.php?story_fbid=504336006571425&id=138459919825704

ವಿಶ್ವೇಶ್ವರ ಭಟ್ ರವರ ಉತ್ತಮ ಅಂಕಣ ಬರಹ



ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಅತ್ಯುತ್ತಮ ಬ್ಲಾಗ್ .ಒಮ್ಮೆ ಭೇಟಿ ನೀಡಿ

My song kannada please listen ತುತ್ತು ಅನ್ಮ ತಿನ್ನೋಕೆ

*ಗೌರಮ್ಮ*

*ಗೌರಮ್ಮ*

ಗೌರಮ್ಮ ನೀ ನಮ್ಮ ಮನೆಗೆ ಬಾರಮ್ಮ
ನಮ್ಮಲ್ಲಿ ಹರುಷವ ತಾರಮ್ಮ

ಶ್ರೀ ಗೌರಿ ಗಜಗೌರಿ ನಾಮ ಹಲವು
ನಿನ್ನ ಭಜಿಸಿದರೆ ನಮ್ಮದೇ ಗೆಲುವು

ಬೇಡಿದ ವರಗಳ ನೀಡುವೆ
ಅನವರತ ನಮ್ಮ ಕಾಯುವೆ

ನಿನ್ನ  ಕಂದನ  ನಮ್ಮನೆಗೆ  ಕಳಿಸಮ್ಮ
ವಿಘ್ನಗಳ ದೂರ ಮಾಡಲು‌ ಹೇಳಮ್ಮ

ಸಿ.ಜಿ.ವೆಂಕಟೇಶ್ವರ.
ಗೌರಿಬಿದನೂರು

23 August 2017

ಅಮ್ಮನಿಗೊಂದು ಪತ್ರ

 ಪ್ರೀತಿಯ ಅಮ್ಮ
ನೀನು ಇಷ್ಟು ದಿನ ನನ್ನ ಜೊತೆಗಿದ್ದು ಕಳೆದ ಕೆಲ ದಿನಗಳ ಹಿಂದೆ ನನ್ನ ಮಾವನ ಮನೆಗೆ ಹೋಗಿರುವೆ ನಿನ್ನ ಅನುಪಸ್ಥಿತಿಯು ನನ್ನ ಈಗ ಕಾಡತೊಡಗಿದೆ.

ಅಮ್ಮ ನಿನ್ನ ಹೆಸರೇ ನನಗೆ ಶ್ರೀರಕ್ಷೆ ,ನಮ್ಮ ಹಳ್ಳಿಯ ಸುತ್ತ ಮುತ್ತ ನಾನೆಂದರೆ ಅಷ್ಟು ಯಾರಿಗೂ ತಿಳಿದಿರಲಿಲ್ಲ ಶ್ರೀದೇವಮ್ಮನವರ ಮಗ ಎಂದರೆ ಎಲ್ಲರಿಗೂ  ಓ ಶ್ರೀದೇವಮ್ಮನ ಮಗನೇ ಎಂದು ಒಂದು ರೀತಿಯ ವಿಶೇಷಾಧಾರಿತವಾದ ಗೌರವ ನೀಡುವುದು ನೋಡಿ ಅಮ್ಮಾ ನಾನು ನಿನ್ನ ಮಗ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ .
ನಾನು ೬ ವರ್ಷದ ಮಗುವಾಗಿದ್ದಾಗ ನನ್ನ ತಂದೆ ತೀರಿಕೊಂಡರು ಆಗ ನನ್ನನು ತಂದೆ ತಾಯಿ‌ಎರಡೂ ಆಗಿ‌ನೀನು ಬೆಳೆಸಿದ ರೀತಿ ಅನನ್ಯ.
ಮನೆಯಲ್ಲಿ ತುತ್ತಿಗೆ ತತ್ವಾರವಿದ್ದರೂ ಕೂಲಿ ನಾಲಿ ಮಾಡಿ ನನ್ನ ನೀ ಬೆಳೆಸಿದೆ ಥೇಟ್  ಲಂಕೇಶರ ಕವನದ  ಅವ್ವನಂತೆ ಬದುಕಿ ನಮಗಿಂದು ಒಂದು ನೆಲೆ ಕಲ್ಪಿಸಿದೆ .ಆ ಕವನದಲ್ಲಿ ಬರುವಂತೆ ನೀನೆಂದಿಗೂ ಹೊಸ ಬಟ್ಟೆಗಳನ್ನು ಆಸೆ ಪಡಲಿಲ್ಲ, ಬಂಗಾರ ಕೇಳಲೇಇಲ್ಲ ನಮ್ಮಪ್ಪ ಮಾಡಿದ ಆಸ್ತಿ ಮಾರಲಿಲ್ಲ ಬದಲಿಗೆ ಕೂಲಿ‌ಮಾಡುತ್ತಲೇ ನನ್ನ ಸಾಕುತ್ತಲೇ ನಮ್ಮ ಆಸ್ತಿ ಇನ್ನೂ ಹೆಚ್ಚಸಿದೆ ನೀನು ತಿಳಿದಿರಬಹುದು ಅಮ್ಮ ನನ್ನ ಮಗ ಆಸ್ತಿಯನ್ನು ಇಷ್ಟಪಡುವನೆಂದು ,ನಿನ್ನ ಮುಂದೆ ಆ ಆಸ್ತಿ ನನಗೆ ತೃಣ ಅಮ್ಮಾ ನಿನೇ ನನ್ನ ಪ್ರಾಣ .
ನಾನು ಹದಿನೈದನೇ ವರ್ಷದ ಬಾಲಕನಾಗಿದ್ದಾಗ ನನಗೆ ಆರೋಗ್ಯ ಕೆಟ್ಟಾಗ ೨ ಕಿಲೋಮೀಟರಗಿಂತ ಹೆಚ್ಚು ನನ್ನನ್ನು ಚಿಕ್ಕ ಮಗುವಿನಂತೆ ಕಂಕುಳಲ್ಲಿ ಎತ್ತಿಕೊಂಡು ನಡೆದೆಯಲ್ಕ ತಾಯಿ ನಿನ್ನ ಶಕ್ತಿಗೆ ಪ್ರೀತಿಗೆ ಇದೋ ನನ್ನ ಕೋಟಿ ಪ್ರಣಾಮಗಳು 
ನನ್ನೊಂದಿಗೆ ಒಮ್ಮೆ ಕೂಲಿಕೆಲಸ ಮಾಡಲು ಹೊಲಕೊಯ್ಯುವ ಕೆಲಸದಲ್ಲಿದ್ದಾಗ ಅಕಸ್ಮಾತ್ ನನ್ನ ಕೈ ಕೊಯ್ದು ರಕ್ತ ಬಂದಾಗ ನೀನು ನೊಂದು ಕಣ್ಣೀರಿನ ಕೋಡಿ ಹರಿಸಿದ್ದು ನಾನು ಮತೆತಿಲ್ಲ ತಾಯಿ 
ಪರೋಪಕಾರಕ್ಕೆ ಮತ್ತೊಂದು ಹೆಸರೇ ನೀನಮ್ಮ ಸಹಾಯ ಬೇಡಿ ಮನೆಗೆ ಬಂದವರು ಬರಿಗೈಲಿ ಹಿಂದಿರುಗಿದ್ದ ನಾನು ನೋಡಿಲ್ಲ. ಅನಕ್ಷರಸ್ಥೆ ಆದರೂ ಪರೋಪಕಾರಾರ್ಥ ಇದ ಮಿತ್ತಂ ಶರೀರಂ ತತ್ವ ಚಾಚು ತಪ್ಪದೆ ಪಾಲಿಸಿದ್ದೆ ,ನಾನೀಗ ಅದೇ ನೀನು ಹಾಕಿ ಕೊಟ್ಡ ಹಾದಿಯಲ್ಲೇ ಸಾಗುತ್ತಾ ಇದ್ದೇನೆ ನಿನ್ನಷ್ಟು ಅಲ್ಲದಿದ್ದರೂ ಸಣ್ಣಪುಟ್ಟ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ.
ವೈದ್ಯಕೀಯ ಸೌಲಭ್ಯಗಳು ಕಡಿಮೆ ಇದ್ದ ಆ ದಿನಗಳಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಸೂತ್ರವಾಗಿ ಹೆರಿಗೆ ಮಾಡಿಸುತ್ತಿದ್ದ ನೀನು ಸೂಲಗಿತ್ತಿ ಶ್ರೀ ದೇವಮ್ಮನಾಗಿ ಚಿರಪರಿಚಿತವಾಗಿದ್ದೆ ನಿಜವಾಗಿ ಒಂದು ನಯಾಪೈಸೆ ಮುಟ್ಟದೇ ಉಚಿತವಾಗಿ ಹೆರಿಗೆ ಮಾಡಿಸಿ ಆ ತಾಯಿ ಮತ್ತು ಮಕ್ಕಳಿಗೆ ನಿಜಕ್ಕೂ "ದೇವಿಯಾಗಿ " ಸೇವೆ ಸಲ್ಲಿಸಿದ್ದೀಯ ಮಾತೆತ್ತಿದರೆ ಸಿಸೇರಿಯನ್ ಎನ್ನವ ಧನದಾಯಿ ವೈದ್ಯರಿಗಿಂತ ನೀನು ಮಹಾತಾಯಿಯಾಗಿ ಕಾಣುವುದು,ಆ ಕಾಲದಲ್ಲಿ ನೀನು ರಾತ್ರಿಯಲ್ಲಿ ಅವೇಳೆಯಲ್ಲಿ ಹೆರಿಗೆ ಮಾಡಿಸಲು  ಮನೆಯಿಂದ ಹೊರಹೋಗುವಾಗ ನಾನು ನಿನ್ನ ಮೇಲೆ ಕೋಪಿಸಿಕೊಂಡಿದ್ದೆ ಈಗ ನನಗೆ ಅರ್ಥವಾಗಿದೆ ನೀನೆಂಥಹ ಮಜತ್ಕಾರ್ಯ ಮಾಡಿರುವೆ ಎಂದು 
ಪಟ್ಡಿ ಮಾಡುತ್ತಾ ಹೋದರೆ ಒಂದೇ ಎರಡೆ ನಿನ್ನ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಮುಂದಿನ ಜನ್ಮದಲ್ಲೂ ನೀನೆ ನನಗೆ ತಾಯಿಯಾಗಬೇಕು . ನಿನಗೆ ಇಂಗ್ಲಿಷ್ ಅರ್ಥವಾಗದಿದ್ದರೂ ನನ್ನ ಅಸಮಾಧಾನಕ್ಕೆ ಹೇಳುತ್ತೇನೆ ಅಮಾ ಐ.ಲವ್ ಯು. 
ಮಾವನ ಮನೆಯಿಂದ ಬೇಗ ಬಂದು ಬಿಡು 
ಇಂತಿ
 ನಿನಗಾಗಿ ಕಾಯುವ ನಿನ್ನ ಮಗ ..

ಸಿ.ಜಿ.ವೆಂಕಟೇಶ್ವರ. ಗೌರಿಬಿದನೂರು      9900925529

20 August 2017

*ಚಿತ್ರ ಕವನ* ರನ್ನ

*ರನ್ನ*

ನೀನೇ ನನ್ನ ರನ್ನ
ನಿನ್ನ ಮುಂದೆ ರವಿ ಸೊನ್ನೆ
ನೀ ನನ್ನ ಸೌಭಾಗ್ಯ
ನೀನಿಲ್ಲದಿದ್ದರೆ ದೌರ್ಭಾಗ್ಯ

ನನ್ನ ಕನಸು ಆಗಸದೆತ್ತೆರ
ನೀ ನನ್ನ ಸಂತಸದ ಆಗರ
ನಿನ್ನ ನಗು ಮನೋಹರ
ರೂಪ ನೋಡಲು ಅತಿಸುಂದರ

ಬೇಕಿಲ್ಲ ನನಗೆ ಸಂಪತ್ತು
ನೀ ಬಂಗಾರ ಬೆಳ್ಳಿ ಮುತ್ತು
ನಿನ್ನೊಂದಿಗಿನ ಈ ಹೊತ್ತು
ಸ್ವರ್ಗ  ಬೇಡದ ಸಿಹಿಹೊತ್ತು

ಬಂಜೆಯೆಂಬಪವಾದವ ನೀ ತೊರೆದೆ
ನಂಜು ಮಾತುಗಳ ದೂರ ತಳ್ಳಿದೆ
ಸಂಜೆಯಾಗುವ ಪರಿ ಅರಿವಿರದೆ
ರಂಜನೆಯ ಸಮಯ ನೀ ನೀಡಿದೆ

ನನ್ನ ಆಸೆಗಡಲಿನ ಕುಡಿ ನೀನು
ಚಿನ್ನದ ರನ್ನದ ಗೊಡವೆಯೇನು
ಎನ್ನರಸನ ಮುದ್ದಿನ ಸಿರಿನೀನು
ನಿನ್ನ ಬರುವಿಕೆಗೆ ನಾನು ಕಾದಿಲ್ಲವೇನು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

*ನೇಪಾಳ ಪ್ರವಾಸ *



  1. ಇಪ್ಪತ್ತು ದಿನಗಳ ಉತ್ತರ ಭಾರತದ ಮತ್ತು ನೇಪಾಳ ಪ್ರವಾಸಕ್ಕಾಗಿ ಸ್ನೇಹಿತರ ಜೊತೆಗೆ ಹೊರಟಾಗ ಪ್ರಾಕೃತಿಕ ಸೌಂದರ್ಯ ಮತ್ತು ದೈವದ ಆರಾಧನೆಯನ್ನು ಮಾಡಬಹುದು ಎಂದು ನಿರೀಕ್ಷೆ ಇಟ್ಟುಕೊಂಡು ಹೋದ ನನಗೆ ನಿರಾಸೆ ಏನು ಆಗಲಿಲ್ಲ ಜಮ್ಮು ಕಾಶ್ಮೀರದ ಪ್ರಾಕೃತಿಕ ಸೌಂದರ್ಯ ನನ್ನ ಮನಸೂರೆಗಂಡಿತು ಕಟ್ರಾದ ವೈಶ್ಣೋದೇವಿ ದರ್ಶನ ಪಡೆಯಲು ೧೪ಕಿಲೋಮೀಟರ್  ಬೆಟ್ಟವನ್ನು ಕಾಲ್ನಡಿಗೆಯಲ್ಲಿ ರಾತ್ರಿಯಲ್ಲಿ ಕ್ರಮಿಸಿ  ಬೆಳಗಿನ ಜಾವ ತಾಯಿಯು ದರ್ಶನ ಯೋಗ ಎಲ್ಲಾ ಸುಸ್ತು ಮಾಯವಾಗಿ ಧನ್ಯತಾ ಭಾವ ಮನೆ ಮಾಡಿತ್ತು ದರ್ಶನದ ತರುವಾಯ ಪುನಃ ೧೪ ಕಿಲೋಮೀಟರ್ ಬೆಟ್ಟ ಇಳಿದು ಹೋಟೆಲ್ ನಲ್ಲಿ ವಿಶ್ರಾಂತಿ ಪಡೆದು ಕುರುಕ್ಷೇತ್ರದ ಕಡೆಗೆ ರಾತ್ರಿ ಪಯಣ ಆರಂಭಿಸಿದೆವು ಪ್ರಯಾಣದ ಆರಂಭದಲ್ಲಿ ದೇವಿಯ ಮತ್ತು ಶೀಕೃಷ್ಣನ ಭಕ್ತಿ ಗೀತೆಗಳನ್ನು ಗುಂಪಿನಲ್ಲಿ ಹಾಡುತ್ತಾ ದಣಿದ ದೇಹ ನಿದ್ರೆಗೆ ಜಾರಿದ್ದೇ ಗೊತ್ತಾಗಲಿಲ್ಲ .ರಾತ್ರಿಯ ೩ಗಂಟೆಗೆ ಬಸ್ಸಿನಲ್ಲಿ ನನ್ನ ಸಹಪ್ರಯಾಣಿಕರು ಗಾಬರಿಗೊಂಡು ಅರಚುವ ಸದ್ದು ಕೇಳಿ ನಾನು ಎದ್ದು ನೋಡಿ ದರೆ ನಾವು ಪ್ರಯಾಣ ಮಾಡುತ್ತಿದ್ದ ಬಸ್ ಚಾಲಕ ತೂಕಡಿಸಿದ ಪರಿಣಾಮ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಲಭಾಗದಲ್ಲಿ ಕಂದಕವನ್ನು ನೋಡುತ್ತಿತ್ತು .ಇನ್ನೊಂದು ಅಡಿ ಬಸ್ ಚಲಿಸಿದ್ದರೆ ನಾನು ಇಂದು ಈ ಲೇಖನ ಬರೆಯಲಾಗುತ್ತಿರಲಿಲ್ಲ .ತಾಯಿ ವೈಷ್ಣೋದೇವಿ ಕೃಪೆಯಿಂದ ಪುನರ್ ಜನ್ಮ ಪಡೆದ ನಾವು ಆ ಶಾಕ್ ನಿಂದ ಹೊರಬಂದು ಪರಸ್ಪರ ಸಮಾಧಾನ ಮಾಡಿಕೊಂಡು ಚಾಲಕನಿಗೆ ಬುದ್ದಿ ಹೇಳಿ ಪೋನಿನಲ್ಲಿ ನನ್ನ ತಾಯಿಯೊಂದಿಗೆ ಮಾತನಾಡಿದಾಗ ದುಃಖ ತಡೆಯಲಾರದೆ ಗಳಗಳನೆ ಅತ್ತು ಅವರಿಗೆ ವಿಷಯ ತಿಳಿಸಿ ನಾನೇ ಅವರಿಗೆ ಸಮಾಧಾನ ಮಾಡಿ .ನಂತರ ಕ್ರೇನ್ ಮೂಲಕ ಬಸ್ ಎತ್ತಿಸಿ .ಹೊಸ ಬಸ್ ಮೂಲಕ ಪ್ರವಾಸ ಮುಂದುವರಿಸಿದೆವು ಈಗ ಮತ್ತೊಮ್ಮೆ ವೈಷ್ಣೋದೇವಿಯ ದರ್ಶನಕ್ಕಾಗಿ ಮನ ಹಾತೊರೆಯುತ್ತಿದೆ.
    ಸಿ.ಜಿ.ವೆಂಕಟೇಶ್ವರ.
    ಶಿಕ್ಷಕರು
    ಗೌರಿಬಿದನೂರು
    9900925529
    0

    Add a comment



    Loading

    *ಒಳಿತಿಗಾಗಿ ಗೆಳತಿ ಏಕೆ*


    ,ಗರ್ಲ್ ಪ್ರೆಂಡ್ ಏಕೆ.ಸಂತೋಷ ಓಕೆ 

    ಡುಂಡಿರಾಜ್ ರವರ ಒಂದು ಚುಟುಕು ಹೀಗಿದೆ
    "ಮದುವೆಯಾಗುವ ಮೊದಲು ನನಗಿದ್ದವುಎರಡು ಗುಂಡಿಗೆ ಮದೆವೆಯಾದ ಮೇಲೆ ಬಿದ್ದೆ ಗುಂಡಿಗೆ" ಎಂಬಂತೆ ಇನ್ನೂ ಕೆಲವರು ಮದುವೆ ಎಂಬ ಶಾಶ್ವತ ಬಂಧವನ್ನು ‌ಟಾಯ್ಲೆಟ್ಗೆ ಹೋಲಿಸುವರು ಅದರಂತೆ ಟಾಯ್ಲೆಟ್ ರೂಂ ಹೊರಗಿರುವ ವರು ಹೊಳಹೋಗಲು ಪ್ರಯತ್ನಿಸಿದರೆ ಹೊಳಗಿರುವವರು ಹೊರಬರಲು ಪ್ರಯತ್ನಿಸುವ ಪರಿಸ್ಥಿತಿ ಮದುವೆ ಮತ್ತು ಗರ್ಲ್ ಪ್ರೆಂಡ್ ಹೊಂದುವುದಕ್ಕೆ ಹೋಲಿಸಿದ್ದಾರೆ
    ಅದರಂತೆ ಬಹುತೇಕರು ಇಂದಿನ ದಿನಗಳಲ್ಲಿ ಗೆಳತಿಯರಿಲ್ಲದೇ ಕಾಲ ಕಳೆಯಲು ಇಚ್ಚೆಪಡುವರು  ಹೆಚ್ಚಾಗುತ್ತಿದ್ದಾರೆ ಅದಕ್ಕೆ ಅವರು ಕೊಡುವ ಕಾರಣಗಳು ಈ ಕೆಳಕಂಡಂತಿವೆ
    1.ಬಹುತೇಕ ಹುಡುಗರು ತಮ್ಮ ಪ್ರೀತಿ ಬ್ರೇಕ್ ಅಪ್ ಆಗುವುದೋ, ತಾವು  ಪ್ರೀತಿಸಿದ ಹುಡುಗಿ ಎಲ್ಲಿ ಸಿಗದೇ ಬೇರೊಬ್ಬರ ಪಾಲಾಗುವಳೋ ಎಂಬ ಆತಂಕ ಇದ್ದೇ ಇರುತ್ತದೆ ಇಂತಹ ಒತ್ತಡದಿಂದ ಮುಕ್ತಿ ದೊರೆಯುತ್ತದೆ.
    2.ಪ್ರೀತಿಯಲ್ಲಿ ಬಿದ್ದವರು ತನ್ನ ಗೆಳತಿಯೇ ಸರ್ವಸ್ವ ಎಂದು ಹೆತ್ತ ತಂದೆ ತಾಯಿ, ಅಣ್ಣ ತಮ್ಮ, ಬಂದು ಬಳಗ ,ಸ್ನೇಹಿತರ ಕಡೆ ಗಮನ ಕೊಡದೇ ಪ್ರೀತಿಯಲ್ಲಿ ಮುಳುಗಿರುವುದು ಕಂಡು ಬರುತ್ತದೆ, ಆದರೆ ಗೆಳತಿಯಿಲ್ಲದಿದ್ದರೆ ಇವರ ಜೊತೆ ಇನ್ನೂ ಹೆಚ್ಚಿನ ಬಾಂಧವ್ಯವನ್ನು ಹೊಂದಬಹುದು.
    3.ನಿಮಗಿಷ್ಟವಾದುದನ್ನು ಮಾಡಬಹುದು.

    ಒಂದು ಜೋಕ್ ಪ್ರಕಾರ ವಾಸ್ಕೋಡಗಾಮ ಭಾರತಕ್ಕೆ ಜಲಮಾರ್ಗ ಕಂಡುಹಿಡಿಯಲು ಹೊರಟಾಗ ಅವನಿಗೆ ಗರ್ಲ್ಪಪ್ರೆಂಡ್ ಇದ್ದಿದ್ದರೆ, ಎಲ್ಲಿಗೆ ಹೋಗ್ತಿಯಾ ? ಯಾಕೆ? ಹೋಕ್ತೀಯಾ? ಯಾವಾಗ ಬರ್ತೀಯಾ ಮುಂತಾದ ಸಾವಿರ ಪ್ರಶ್ನೆ ಕೇಳಿ ಅವನು ಅಲ್ಲೇ ಇರುತ್ತಿದ್ದ .
    ಹಾಗೆ ಇಂದಿನ ಯುವಕರು ಅವರ ಇಷ್ಟದ ಹವ್ಯಾಸವನ್ನು ರೂಡಿಸಿಕೊಳ್ಳಲು ,ಪ್ರವಾಸ,ಬೈಕ್ ರೈಡಿಂಗ್, ಹೈಕಿಂಗ್ ಮುಂತಾದವುಗಳಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳಬಹುದು
    3.ಕೆಲಸದಲ್ಲಿ ಮಗ್ನತೆ

    ಗೆಳತಿಯರು ಇಲ್ಲದಿದ್ದರೆ ಕೆಲಸ ಮಾಡುವ ಯುವಕರು ಕೆಲಸದಲ್ಲಿ ಏಕಾಗ್ರತೆ ಸಾದಿಸಿ ಕೆಲಸವು ಹೆಚ್ಚು ಕ್ರಿಯಾಶೀಲ ಆಗುವುದು ಎಂಬುದು ಗೆಳತಿಯರಿಲ್ಲದಿರುವವರು ಮಾಡುವ ವಾದ
    3 ಮುಖವಾಡಗಳನ್ನು ಧರಿಸುವುದು ಕಡಿಮೆ

    ಕೆಲವೊಮ್ಮೆ ಗೆಳತಿಯರ ಸಂಪಾದಿಸುವುದರಿಂದ ಅವರ ಜೊತೆ ಒಡನಾಟ ಮಾಡುವಾಗ ಸಾವಿರಾರು ಮುಖವಾಡ ಧರಿ ಸುವುದು  ಸಾಮಾನ್ಯವಾಗಿ ಕಂಡುಬರುತ್ತವೆ. ಗೆಳತಿಯರಿಲ್ಲದಿದ್ದರೆ ಈ ಮುಖವಾಡ ಹೊರತಾಗಿ ನೈಜ ನಡವಲಕಿಜೆಗಳಿಗೆ ಪ್ರೇರಕವಾಗುತ್ತದೆ ಎಂಬುದು ಬ್ರಹ್ಮಚಾರಿಗಳಾಗಿರುವವರ ಅಂಬೋಣ
    4 ಉಳಿತಾಯಕ್ಕೆ ಪೂರಕ

    ಕೆಲವರ ಪ್ರಕಾರ ಗರ್ಲ್ ಪ್ರೆಂಡ್ ಸಂಬಾಳಿಸುವುದು ಎರಡು ಸಂಸಾರ ನಡೆಸಿದಂತೆ ಅಂದರೆ ಅನವಶ್ಯಕ ಖರ್ಚು ಮಾಡಲು ಇದು ಒಂದು ದಾರಿ ಎಂದು ಭಾವಿಸುತ್ತಾರೆ. ಅದರ ಬದಲಿಗೆ ಉಳಿತಾಯ ಮಾಡಿದರೆ ಅದು ಅವರ ಸುಖಕರ ನಿವೃತ್ತಿ ಜೀವನಕ್ಕೆ ಸಹಕಾರಿ ಎಂದು ನಂಬಿದ್ದಾರೆ
    5 ಕೌಶಲ್ಯ ಬೆಳವಣಿಗೆ ಆತ್ಮ ತೃಪ್ತಿ

    ಗೆಳತಿಯರಿಲ್ಲದವರು ,ಅವರ ಬಿಡುವಿನ ಸಮಯದಲ್ಲಿ, ಕಲೆ ಸಂಸ್ಕೃತಿ, ಅವರ ಇಚ್ಚೆಯ ಹವ್ಯಾಸವನ್ನು  ಬೆಳೆಸಿಕೊಂಡು ಆತ್ಮ ತೃಪ್ತಿ ಹೊಂದಲು ಸಹಕಾರಿ ಆಗುವದು ಅಂಬುದು ಬ್ರಹ್ಮ ಚಾರಿಗಳ ವಾದವಾಗಿದೆ
    ಈ ಎಲ್ಲಾ ಅಂಶಗಳಲ ಆಧಾರದ ಮೇಲೆ ಕೆಲ ಯುವಕರು" don't marry be happy",ಏಕಾಂಗಿಯಾಗಿ ನೆಮ್ಮದಿಯಿಂದಿರಿ"
    ಎಂಬ ಘೋಷಣೆ ನೀಡಿ ಅದಕ್ಕೆ ಎ.ಪಿ.ಜೆ .ಅಬ್ದುಲ್ ಕಲಾಂ. ಅಟಲ್ ಬಿಹಾರಿ ವಾಜಪೇಯಿ ಅವರ ಉದಾಹರಣೆ ನೀಡುವುದರಿಂದ ಈ ಗರ್ಲ್ ಪ್ರೆಂಡ್ ವಿರೋದಿಗಳ ಮಾತಿನಲ್ಲಿ ಸತ್ಯವಿದೆಯೇನೋ ಎನಿಸುವುದು ಸುಳ್ಳಲ್ಲ

    ಸಿ.ಜಿ.ವೆಂಕಟೇಶ್ವರ
    ಗೌರಿಬಿದನೂರು.
    ಸಿ.ಜಿ.ವೆಂಕಟೇಶ್ವರ. ಗೌರಿಬಿದನೂರು      9900925529



    19 August 2017

    ದಯಾಳು
    ಎಲ್ಲಿರುವೆ ಬಾ ರಾಯ ಮುಗಿಲೂರ ಮಳೆರಾಯ
    ನೊಂದು ಬೆಂದಿಹೆ ನಾನು ಕಾಣದೆ ಈ ನೋವ
    ಬಿರಿದಿಹ ಭುವಿ ನೋಡು ಬಿಡದೆ ಸುರಿದು
    ತಂಪ ನೀಡು ಕಾಯುತಿಹಳು ಇಳೆ ನಿನ್ನಾಗಮಕೆ
    ದನಕರುಗಳಿಗೆ ಮೇವಿಲ್ಲ ನೀರಿಲ್ಲ ಘನಮೋಡದಿಂದಿಳಿದು ಬರದಿ ಬಾರೋ
    ,ನೀ ಬರದಿರೆ ನಮಗೆ’ಬರ’ವೆ ನೋಡ
    ಬಂದು ನಮ್ಮ ಬಾಳ ಹಸನು ಮಾಡ
    ಆಸರೆಯ ಕೈಗೋಲು ಹಿಂದೆ ಬಿದ್ದಿದೆ ನೋಡು
    ನೀ ಬಂದು ಆಸರಿಸಿ ನನ್ನ ಕಾಪಾಡು
    ಮೈಮೇಲೆ ಅರಿವೆ ಇಲ್ಲ ಬದುಕಾಗಿದೆ ಮೂರಾಬಟ್ಟೆ
    ನೀ ಬರದಿದ್ದರೆ ನಮ್ಮ ಬದುಕು ಬರಿ ಲೊಳಲೊಟ್ಟೆ
    ಬಿರಿದಿಹಳು ಧರಣಿ ಬರಲಿಲ್ಲ ಭರಣಿ
    ಅನ್ನವಿಲ್ಲದ ನನ್ನ ಬೆನ್ನು ಹೊಟ್ಟೆಗೆ ತಾಗಿದೆ
    ಆದರೂ ಬರಲಿಲ್ಲ ನಿನಗೆ ಕರುಣೆ
    ನೀನೇ ಹೇಳು ನನ್ನಿಂದ ತಪ್ಪೇನಾಗಿದೆ
    ಹೌದು ಆಗಿದೆ ತಪ್ಪು ಸಾವಿರಾರು
    ನೀನು ಬರದಿರೆ ನಮಗೆ ದಿಕ್ಕಿನ್ಯಾರು ನಿನಗಾಗಿ ನಾ ಈಗಲೂ ಕಾಯುತಿರುವೆ ಆಶಾಭಾವ ಸತ್ತಿಲ್ಲ ನೀ ದಯಾಳು ಸುಳ್ಳಲ್ಲ
    ಸಿ.ಜಿ.ವೆಂಕಟೇಶ್ವರ
    ಗೌರಿಬಿದನೂರು.
    ಸಂಗೀತ,,ಸುದ್ದಿ, ಮತ್ತು ಸಾಹಿತ್ಯ ಅಭಿಮಾನಿಗಳಿಗಾಗಿ ವಾಟ್ಸಪ್ ಗ್ರೂಪ್*
    ಸಂಗೀತಕ್ಕೆ ಮನಸೋಲದ ಜೀವಿಗಳಿಲ್ಲ ಎಂದರೆ ತಪ್ಪಾಗಲಾರದು ಮೊದಲು ಸಂಗೀತವೆಂದರ ಕೇವಲ ನಿರ್ದಿಷ್ಟ ಜಾತಿ ಮತ್ತು ಉನ್ನತವಾದ ವರ್ಗಕ್ಕೆ ಸೇರಿದ ಕಲೆಯಾಗಿ ಮಾತ್ರ ಸೀಮಿತವಾಗಿತ್ತು ಕ್ರಮೇಣ ಸಿನಿಮಾ ನಾಟಕ ಮುಂತಾದ ಲಲಿತ ಕಲೆಗಳಿಗೆ ಸಂಬಂಧಿಸಿದಂತೆ ದೊರೆತ ಪ್ರೊತ್ಸಾಹ ದಿಂದ ಸಂಗೀತವನ್ನು ಕೆಲವರು ಕಲಿತರು ಈಗ ಇಂಟರ್ನೆಟ್ ಅಗ್ಗವಾಗಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಂಗೀತ ಕಲಿಸುವ ಕಲಿಯುವ ಕಾರ್ಯ ಸುಪ್ತ ವಾಗಿ ನಡೆಯುತ್ತಿದೆ ಅಂತಹ ಕಾರ್ಯಕ್ಕೆ “ವಾಟ್ಸಪ್ ಸಂಗೀತ ಗುಂಪುಗಳ” ಪಾತ್ರ ಪ್ರಮುಖಗಿದೆ.
    ಸುದ್ದಿ ಎಂದರೆ ದಿನಪತ್ರಿಕೆ ಎಂಬ ಕಾಲವಿತ್ತು ಆದರೆ ಅದು ಸಂಜೆ ಪತ್ರಿಕೆ ಬರುವ ಮೂಲಕ ಒಂದು ಬದಲಾವಣೆಗಳನ್ನು ನೋಡಿದೆವು ಈಗ ದೇಶದಲ್ಲಿಯೇ ಮೊದಲಿಗೆ ಕ್ರಿಯಾಶೀಲ, ಸ್ಟಾರ್‌ ಸಂಪಾದಕ ರೆಂದು ಪರಿಚಿತ ಶ್ರೀ ವಿಶ್ವೇಶ್ವರ ಭಟ್ ಸರ್ ನೇತ್ರತ್ವದಲ್ಲಿ  “ವಿಶ್ವ ವಾಣಿ ಟೈಮ್ಲಿ”Vishwavani timely ಎಂಬ ಮೊಬೈಲ್ ಪತ್ರಿಕೆ ಆರಂಭವಾಗಿದೆ ಈಗಾಗಲೇ15ಕ್ಕೂ ಹೆಚ್ಚು ವಾಟ್ಸಪ್ ಗುಂಪಿನ ಅಡ್ಮಿನ್ ಆಗಿ ಶ್ರೀ ವಿಶ್ವೇಶ್ವರ ಭಟ್ ಸರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀ ಜೆ.ಡಿ.ಧನ್ನೂರ್ ಹಾಗೂ ಸಿ.ಜಿ.ವೆಂಕಟೇಶ್ವರ ಅವರು ಸಹ ಅಡ್ಮಿನ್ ಆಗಿ ಕೆಲಸ ಮಾಡುತ್ತಾ ಪ್ರತಿದಿನ 10am,12pm,2pm,4pm,6pm,ಹಾಗೂ 8pm ಹೀಗೆ ದಿನಕ್ಕೆ ಆರು ಮೊಬೈಲ್ ಆವೃತ್ತಿಯನ್ನು ಪ್ರಕಾಶನ ಮಾಡಲಾಗುತ್ತದೆ  ಈ ಗುಂಪುಗಳು ಯಾವ ಪರಿ ಜನರನ್ನು ಆಕರ್ಷಿಸಿವೆ ಎಂದರೆ ಒಂದು  ಆವೃತ್ತಿ 5ನಿಮಿಷ ಲೇಟಾದರೆ ಅಡ್ಮಿನ್ಗೆ ಕರೆ ಮಾಡಿ ಕಾರಣ ಕೇಳುತ್ತಾರೆ.ಆಸಕ್ತ ಗುಂಪು ಸೇರಬಯಸುವವರು ಈ ನಂಬರ್ ಸಂಪರ್ಕ ಮಾಡಬಹುದು (9900925529.9480177080)
    ಒಂದು ಕಾಲದಲ್ಲಿ ಸಾಹಿತ್ಯ ಕೇವಲ ಪಂಡಿತರಿಗೆ ಸೀಮಿತ ,ಕವನ ದೊಡ್ಡ ಕವಿಗಳ ಸ್ವತ್ತು ಎಂದು ನಂಬಲಾಗಿತ್ತು ಅದನ್ನು ಸುಳ್ಳು ಮಾಡಲು ಸಾಮಾನ್ಯರಲ್ಲಿರುವ ಕವಿ ಭಾವನೆಗಳನ್ನು ಬಡಿದೆಬ್ಬಿಸಲು “ಕವಿ ಬಳಗ” ಎಂಬ ವಾಟ್ಸಪ್ ಗುಂಪು ರಚಿಸಲಾಗಿದೆ
    ನಿಟ್ಟಿನಲ್ಲಿ ನೈಟಿಂಗೇಲ್ ರಾಜ್ಯ ಪ್ರಶಸ್ತಿಯನ್ನು ಪಡೆದ ಜೆ.ಡಿ ಧನ್ನೂರ್ ಅವರ ಸಾರಥ್ಯದಲ್ಲಿ ನಡೆಯುತ್ತಿರುವ “ಸುಮಧುರ ಗೀತೆಗಳು” ಎಂಬ ಗುಂಪು ಉತ್ತಮ ಹಾಡುಗಳನ್ನು ಗಾನರಸಿಕರಿಗೆ ಉಣಬಡಿಸುತ್ತಿದೆ. ಇದರ ಜೊತೆಗೆ “ಗಾನಗಾರುಡಿಗರು” ಎಂಬ ಗುಂಪು ಮಾಡಿ ಅದರಲ್ಲಿ ಹವ್ಯಾಸಿ ಗಾಯಕರು ಕರೋಕೆ ಹಾಡುಗಳನ್ನು ಹಾಡಿದ್ದಾರೆ ಮತ್ತು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ  ವಿವಿಧ ಕಾರ್ಯ ಕ್ರಮಗಳಲ್ಲಿ ಹಾಡುವ ಅವಕಾಶ ನೀಡಿದ್ದಾರೆ ನಾನು ಸಹ ಈ ಗುಂಪಿನ ಸದಸ್ಯನಾಗಿ ಇತ್ತೀಚೆಗೆ ಬಿಡುಗಡೆಯಾದ ರಾಜಕುಮಾರ ಚಿತ್ರದ “ಬೊಂಬೆ ಹಾಡುತೈತೆ” ಎಂಬ ಹಾಡನ್ನು ಕರೋಕೆ ಹಾಡುವ ಮೂಲಕ ಅವರ ಮಾರ್ಗದರ್ಶನದಲ್ಲಿ ಹವ್ಯಾಸಿ ಹಾಡುಗಾರನಾಗಿ ರೂಪುಗೊಂಡಿದ್ದೇನೆ.  ಇದೇ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಕಲೆ ಸಂಸ್ಕೃತಿಯನ್ನು ಬೆಳೆಸಿಕೊಂಡು ಸುಪ್ತ ಪ್ರತಿಭೆಯನ್ನು ಗುರುತಿಸ  ಅವರಿಗೆ ಆತ್ಮವಿಶ್ವಾಸ ಮೂಡಿಸಿ ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಮಾಡುತ್ತಿರುವುದು ಶ್ಲಾಘನೀಯ ಇಂತಹ ಪ್ರಯತ್ನಗಳಿಗೆ ಬೆಂಬಲ ನೀಡಿದರೆ ಸಾಮಾಜಿಕ ಜಾಲತಾಣಗಳ ದುರುಪಯೋಗ ಸ್ವಲ್ಪಮಟ್ಟಿಗಾದರೂ ಕಡಿಮೆಯಾಗಬಹುದು..
    ಜೆ.ಡಿ.ಧನ್ನೂರ್ ಸಾರಥ್ಯದಲ್ಲಿ ಕನ್ನಡ ಸುಮಧುರ ಗೀತೆಗಳು ಎಂಬ ಶೀರ್ಷಿಕೆಯ ೨೫ ಕ್ಕೂ ಹೆಚ್ಚು ಗುಂಪುಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿವೆ.ಈ ಗುಂಪಿನ ಆಯ್ದ ಹವ್ಯಾಸಿ ಹಾಡುಗಾರರನ್ನು ಗುರುತಿಸಿ ಅವರಿಗಾಗಿ “ಸಂಗೀತ ಬಳಗ” ಎಂಬ ಗುಂಪು ರಚಿಸಿ ಶ್ರೀಮಂತ.ಆವಟಿ ಎಂಬ ಸಂಗೀತ ಗುರುಗಳಿಂದ ಆನ್ಲೈನ್ ಸಂಗೀತ ಪಾಠಗಳನ್ನು ವ್ಯವಸ್ಥೆ ಮಾಡಿದ್ದಾರೆ. ಈ ಸಂಗೀತ ಗುಂಪುಗಳ ಕಲಾವಿದರ ಕಲೆ ಬಳಸಿಕೊಂಡು ಹಲವಾರು ಜಿಲ್ಲಾ ಮತ್ತು ರಾಜ್ಯ ಮಟ್ಟದ ಕಾರ್ಯ ಕ್ರಮ ಆಯೋಜನೆ ಮಾಡಲಾಗಿರುತ್ತದೆ. ಇದೇ ಕಲಾವಿದರನ್ನು ಬಳಸಿಕೊಂಡು “ದೀಪದಾರಿಣಿ”ಎಂಬ ಭಾವಗೀತೆಗಳ ಧ್ವನಿಸುರುಳಿ ಬಿಡುಗಡೆ ಮಾಡಲಾಗಿದೆ.
    ಇತೀಚೆಗೆ ಜನರ ಅಭಿರುಚಿಗೆ ತಕ್ಕಂತೆ ವಿಭಾಗವಾರು  ವಾಟ್ಸಪ್ ಗುಂಪು ರಚಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ.  ಭಾವಗೀತೆಗಳು”,ಜನಪದಗೀತೆಗಳು”  ಹಿಂದಿಗೀತೆಗಳು ಲಾವಣಿ. ನಾಟಕದ ಗೀತೆಗಳು ಇತ್ಯಾದಿ ಗಳನ್ನು ಗುಂಪುಗಳು ಮೂಲಕ ಹಂಚಿಕೊಳ್ಳುವ ಮೂಲಕ ಹಸಿದ ಸಂಗೀತದ ಮನಸ್ಸುಗಳಿಗೆ ಸಂಗೀತದ ಮೃಷ್ಟಾನ್ನ ಉಣಬಡಿಸುತ್ತಿದ್ದಾರೆ…
    ಇದರ ಜೊತೆಯಲ್ಲಿ ಅರ್ಹ ಸಂಗೀತ ಕಲಾವಿದರಿಗೆ ಚಲನಚಿತ್ರದಲ್ಲಿ ಹಾಡಲು ಅವಕಾಶಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದೆ ಆನ್‌ಲೈನ್ ಸಂಗೀತ ಸ್ಪರ್ದೆ.ಕರೋಕೆ ಸಂಗೀತ .ಸ್ಪರ್ಧಮಾಡುವ ಯೋಜನೆಗಳಿವೆ ಎಂದು ಶ್ರೀ ಧನ್ನೂರ್ ರವರು ಆತ್ಮವಿಶ್ವಾಸದಿಂದ ಹೇಳುತ್ತಾರೆ.
    “ಕವಿಬಳಗ” ವಾಟ್ಸಪ್ ಗುಂಪಿನಲ್ಲಿ ರಾಜ್ಯದ ವಿವಿಧ ಭಾಗದ ಕವಿಗಳು ತಮ್ಮ ಪರಸ್ಪರ ಕವನ ,ವಿಮರ್ಶೆ ವಿನಿಮಯ ಮಾಡಿಕೊಳ್ಳತ್ತಿದ್ದಾರೆ  ಪ್ರತಿ ಭಾನುವಾರ ಚಿತ್ರ ಕವನ ಸ್ಪರ್ದೆ ಏರ್ಪಡಿಸಿ ಉತ್ತಮ ಕವನಗಳಿಗೆ ಪುಸ್ತಕ ರೂಪದಲ್ಲಿ ಬಹುಮಾನಗಳನ್ನು ನೀಡಲಾಗುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಗುಂಪಿನ ಕವಿಗಳಿಂದ ರಚಿಸಿರುವ “ಭಾವದೀಪ್ತಿ” ಎಂಬ 115ಕವಿಗಳ ಕವನ ಸಂಕಲನ ಹೊರತರಲು ಸಿದ್ದತೆ ಆರಂಭವಾಗಿದೆ
    ಈ ಕವನ ಸಂಕಲನಕ್ಕೆ ವಿಶ್ವವಾಣಿ  ಪತ್ರಿಕಾ ಸಂಪಾದಕರಾಗದ ಶ್ರೀ ವಿಶ್ವೇಶ್ವರ ಭಟ್ ಸರ್ ರವರು ಮುನ್ನುಡಿ ಬರೆಯುತ್ತಿರುವುದು ಹಾಗೂಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಒಪ್ಪಿರುವುದು  ನಮಗೆ ಹೆಮ್ಮೆಯ ಸಂಗತಿ
    ಮತ್ತೊಂದು ವಿಶೇಷವೆಂದರೆ ಈ ಎಲ್ಲಾ ಕವನಗಳನ್ನು ಡಿಜಿಟಲ್ ವಾಚನ ಮಾಡಿ ಒಂದು ದ್ವನಿಸಾಂದ್ರಿಕೆ ತಯಾರಿಸಲಾಗಿದೆ ಇದರ ರಾಜ್ಯ ಮಟ್ಟದ ಬಿಡುಗಡೆ ಸಮಾರಂಭ ಇದೇ ಆಗಸ್ಟ್ ತಿಂಗಳ 27 ರಂದು ಹಾಸನದ ಸಾಹಿತ್ಯ ಪರಿಷತ್ತಿನ ಭವನದಲ್ಲಿ ನಾಡಿನ ಹಿರಿಯ ಕವಿಗಳು ಮತ್ತು ಪತ್ರಕರ್ತರ ಸಮ್ಮುಖದಲ್ಲಿ ನಡೆಯಲಿದೆ ,ಸಾದ್ಯವಾದರೆ ತಾವೂ ಆಗಮಿಸಿ
    ಸಿ.ಜಿ.ವೆಂಕಟೇಶ್ವರ
    ಶಿಕ್ಷಕರು
    ಗೌರಿಬಿದನೂರು.
    ೯೯೦೦೯೨೫೫೨೯


    Posts navigation

    Page 1 Page 2 Page 3 Page 4 Page 16