payana .journey my kannada poem
ನಮ್ಮಯ ಪಯಣ
ಓಡಿಹಾಡೋ ವೇಳೆ ಜವಾಬ್ದಾರಿಯ ಮಾಲೆ
ಒಡಲ ತುಂಬಿಸಲು ಕಷ್ಟಗಳ ಸರಮಾಲೆ
ದಿಕ್ಕಿಲ್ಲ ದೆಸೆಯಿಲ್ಲ ಸಾಗುವುದೆತ್ತ ಪಯಣ
ಹಕ್ಕಿನ ಕೂಳಿಗೆ ಹೋರಾಟ ಅನುದಿನ
ಒಡಲ ತುಂಬಿಸಲು ಕಷ್ಟಗಳ ಸರಮಾಲೆ
ದಿಕ್ಕಿಲ್ಲ ದೆಸೆಯಿಲ್ಲ ಸಾಗುವುದೆತ್ತ ಪಯಣ
ಹಕ್ಕಿನ ಕೂಳಿಗೆ ಹೋರಾಟ ಅನುದಿನ
ಸಮಾನತೆ ಸಹಕಾರ ಸಹಬಾಳ್ವೆ ಎಲ್ಲಿ
ನಿಮಗೆ ಮಹಲು ನಮಗೆ ಬೀದಿ ಇಲ್ಲಿ
ಸ್ವಚ್ಛ ಭಾರತವೆಂದು ಪೋಸು ಕೊಟ್ಟರು
ಚಿಂದಿ ಆಯ್ದು ಸ್ವಚ್ಛ ಮಾಡಿದ ನಮ್ಮ ಮರೆತರು
ನಿಮಗೆ ಮಹಲು ನಮಗೆ ಬೀದಿ ಇಲ್ಲಿ
ಸ್ವಚ್ಛ ಭಾರತವೆಂದು ಪೋಸು ಕೊಟ್ಟರು
ಚಿಂದಿ ಆಯ್ದು ಸ್ವಚ್ಛ ಮಾಡಿದ ನಮ್ಮ ಮರೆತರು
ಹೆಣ್ಣೊಂದು ಕಲಿತರೆ ಶಾಲೆ ತೆರೆದಂತೆ ಎನ್ನುವಿರಿ
ನೋಡಿ ನಮಗೆಲ್ಲಿದೆ ಶಾಲೆ ಅರಿಯಿರಿ
ಉಳ್ಳವರು ನಮ್ಮನ್ನು ಸಂಭೊದಿಸುವಿರಿ ಲಕ್ಷ್ಮಿ
ನಾವಿಲ್ಲಿ ಪರಿತಪಿಸುತ್ತಿದ್ದೇವೆ ಪಡೆಯಲು ಲಕ್ಷ್ಮಿ
ನೋಡಿ ನಮಗೆಲ್ಲಿದೆ ಶಾಲೆ ಅರಿಯಿರಿ
ಉಳ್ಳವರು ನಮ್ಮನ್ನು ಸಂಭೊದಿಸುವಿರಿ ಲಕ್ಷ್ಮಿ
ನಾವಿಲ್ಲಿ ಪರಿತಪಿಸುತ್ತಿದ್ದೇವೆ ಪಡೆಯಲು ಲಕ್ಷ್ಮಿ
ಮಕ್ಕಳನ್ನು ದೇವರೆನ್ನುವಿರಿ ಆಸ್ತಿ ಎನ್ನುವಿರಿ
ಇದೇ ನಿಮ್ಮ ಆಸ್ತಿ ,ದೇವರ ನೋಡುವ ಪರಿ
ಮಕ್ಕಳ ಹಕ್ಕು. ಹಕ್ಕೆಂದು ಬಡಬಡಾಯಿಸುವಿರಿ
ನಮ್ಮನ್ನು ನೋಡಿ ಏಕೆ ತಡಬಡಾಯಿಸುವಿರಿ.
ಇದೇ ನಿಮ್ಮ ಆಸ್ತಿ ,ದೇವರ ನೋಡುವ ಪರಿ
ಮಕ್ಕಳ ಹಕ್ಕು. ಹಕ್ಕೆಂದು ಬಡಬಡಾಯಿಸುವಿರಿ
ನಮ್ಮನ್ನು ನೋಡಿ ಏಕೆ ತಡಬಡಾಯಿಸುವಿರಿ.
ಸರ್ವರಿಗೂ ಸಮಬಾಳು ಸಮಪಾಲು ಏಕಿಲ್ಲ
ಸರ್ವರೂ ನಮ್ಮ ನೋಡಿಲ್ಲ ಮಿಡಿದಿಲ್ಲ
ಆದರೂ ಆತ್ಮವಿಶ್ವಾಸ ನಮ್ಮಲ್ಲಿ ಬತ್ತಿಲ್ಲ
ಬಾಳಿ ತೋರುವೆವು ನಾವು ಜಗಕೆಲ್ಲಾ.
ಸರ್ವರೂ ನಮ್ಮ ನೋಡಿಲ್ಲ ಮಿಡಿದಿಲ್ಲ
ಆದರೂ ಆತ್ಮವಿಶ್ವಾಸ ನಮ್ಮಲ್ಲಿ ಬತ್ತಿಲ್ಲ
ಬಾಳಿ ತೋರುವೆವು ನಾವು ಜಗಕೆಲ್ಲಾ.
ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು
ಗೌರಿಬಿದನೂರು
No comments:
Post a Comment