23 August 2017

ಅಮ್ಮನಿಗೊಂದು ಪತ್ರ

 ಪ್ರೀತಿಯ ಅಮ್ಮ
ನೀನು ಇಷ್ಟು ದಿನ ನನ್ನ ಜೊತೆಗಿದ್ದು ಕಳೆದ ಕೆಲ ದಿನಗಳ ಹಿಂದೆ ನನ್ನ ಮಾವನ ಮನೆಗೆ ಹೋಗಿರುವೆ ನಿನ್ನ ಅನುಪಸ್ಥಿತಿಯು ನನ್ನ ಈಗ ಕಾಡತೊಡಗಿದೆ.

ಅಮ್ಮ ನಿನ್ನ ಹೆಸರೇ ನನಗೆ ಶ್ರೀರಕ್ಷೆ ,ನಮ್ಮ ಹಳ್ಳಿಯ ಸುತ್ತ ಮುತ್ತ ನಾನೆಂದರೆ ಅಷ್ಟು ಯಾರಿಗೂ ತಿಳಿದಿರಲಿಲ್ಲ ಶ್ರೀದೇವಮ್ಮನವರ ಮಗ ಎಂದರೆ ಎಲ್ಲರಿಗೂ  ಓ ಶ್ರೀದೇವಮ್ಮನ ಮಗನೇ ಎಂದು ಒಂದು ರೀತಿಯ ವಿಶೇಷಾಧಾರಿತವಾದ ಗೌರವ ನೀಡುವುದು ನೋಡಿ ಅಮ್ಮಾ ನಾನು ನಿನ್ನ ಮಗ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ .
ನಾನು ೬ ವರ್ಷದ ಮಗುವಾಗಿದ್ದಾಗ ನನ್ನ ತಂದೆ ತೀರಿಕೊಂಡರು ಆಗ ನನ್ನನು ತಂದೆ ತಾಯಿ‌ಎರಡೂ ಆಗಿ‌ನೀನು ಬೆಳೆಸಿದ ರೀತಿ ಅನನ್ಯ.
ಮನೆಯಲ್ಲಿ ತುತ್ತಿಗೆ ತತ್ವಾರವಿದ್ದರೂ ಕೂಲಿ ನಾಲಿ ಮಾಡಿ ನನ್ನ ನೀ ಬೆಳೆಸಿದೆ ಥೇಟ್  ಲಂಕೇಶರ ಕವನದ  ಅವ್ವನಂತೆ ಬದುಕಿ ನಮಗಿಂದು ಒಂದು ನೆಲೆ ಕಲ್ಪಿಸಿದೆ .ಆ ಕವನದಲ್ಲಿ ಬರುವಂತೆ ನೀನೆಂದಿಗೂ ಹೊಸ ಬಟ್ಟೆಗಳನ್ನು ಆಸೆ ಪಡಲಿಲ್ಲ, ಬಂಗಾರ ಕೇಳಲೇಇಲ್ಲ ನಮ್ಮಪ್ಪ ಮಾಡಿದ ಆಸ್ತಿ ಮಾರಲಿಲ್ಲ ಬದಲಿಗೆ ಕೂಲಿ‌ಮಾಡುತ್ತಲೇ ನನ್ನ ಸಾಕುತ್ತಲೇ ನಮ್ಮ ಆಸ್ತಿ ಇನ್ನೂ ಹೆಚ್ಚಸಿದೆ ನೀನು ತಿಳಿದಿರಬಹುದು ಅಮ್ಮ ನನ್ನ ಮಗ ಆಸ್ತಿಯನ್ನು ಇಷ್ಟಪಡುವನೆಂದು ,ನಿನ್ನ ಮುಂದೆ ಆ ಆಸ್ತಿ ನನಗೆ ತೃಣ ಅಮ್ಮಾ ನಿನೇ ನನ್ನ ಪ್ರಾಣ .
ನಾನು ಹದಿನೈದನೇ ವರ್ಷದ ಬಾಲಕನಾಗಿದ್ದಾಗ ನನಗೆ ಆರೋಗ್ಯ ಕೆಟ್ಟಾಗ ೨ ಕಿಲೋಮೀಟರಗಿಂತ ಹೆಚ್ಚು ನನ್ನನ್ನು ಚಿಕ್ಕ ಮಗುವಿನಂತೆ ಕಂಕುಳಲ್ಲಿ ಎತ್ತಿಕೊಂಡು ನಡೆದೆಯಲ್ಕ ತಾಯಿ ನಿನ್ನ ಶಕ್ತಿಗೆ ಪ್ರೀತಿಗೆ ಇದೋ ನನ್ನ ಕೋಟಿ ಪ್ರಣಾಮಗಳು 
ನನ್ನೊಂದಿಗೆ ಒಮ್ಮೆ ಕೂಲಿಕೆಲಸ ಮಾಡಲು ಹೊಲಕೊಯ್ಯುವ ಕೆಲಸದಲ್ಲಿದ್ದಾಗ ಅಕಸ್ಮಾತ್ ನನ್ನ ಕೈ ಕೊಯ್ದು ರಕ್ತ ಬಂದಾಗ ನೀನು ನೊಂದು ಕಣ್ಣೀರಿನ ಕೋಡಿ ಹರಿಸಿದ್ದು ನಾನು ಮತೆತಿಲ್ಲ ತಾಯಿ 
ಪರೋಪಕಾರಕ್ಕೆ ಮತ್ತೊಂದು ಹೆಸರೇ ನೀನಮ್ಮ ಸಹಾಯ ಬೇಡಿ ಮನೆಗೆ ಬಂದವರು ಬರಿಗೈಲಿ ಹಿಂದಿರುಗಿದ್ದ ನಾನು ನೋಡಿಲ್ಲ. ಅನಕ್ಷರಸ್ಥೆ ಆದರೂ ಪರೋಪಕಾರಾರ್ಥ ಇದ ಮಿತ್ತಂ ಶರೀರಂ ತತ್ವ ಚಾಚು ತಪ್ಪದೆ ಪಾಲಿಸಿದ್ದೆ ,ನಾನೀಗ ಅದೇ ನೀನು ಹಾಕಿ ಕೊಟ್ಡ ಹಾದಿಯಲ್ಲೇ ಸಾಗುತ್ತಾ ಇದ್ದೇನೆ ನಿನ್ನಷ್ಟು ಅಲ್ಲದಿದ್ದರೂ ಸಣ್ಣಪುಟ್ಟ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ.
ವೈದ್ಯಕೀಯ ಸೌಲಭ್ಯಗಳು ಕಡಿಮೆ ಇದ್ದ ಆ ದಿನಗಳಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಸೂತ್ರವಾಗಿ ಹೆರಿಗೆ ಮಾಡಿಸುತ್ತಿದ್ದ ನೀನು ಸೂಲಗಿತ್ತಿ ಶ್ರೀ ದೇವಮ್ಮನಾಗಿ ಚಿರಪರಿಚಿತವಾಗಿದ್ದೆ ನಿಜವಾಗಿ ಒಂದು ನಯಾಪೈಸೆ ಮುಟ್ಟದೇ ಉಚಿತವಾಗಿ ಹೆರಿಗೆ ಮಾಡಿಸಿ ಆ ತಾಯಿ ಮತ್ತು ಮಕ್ಕಳಿಗೆ ನಿಜಕ್ಕೂ "ದೇವಿಯಾಗಿ " ಸೇವೆ ಸಲ್ಲಿಸಿದ್ದೀಯ ಮಾತೆತ್ತಿದರೆ ಸಿಸೇರಿಯನ್ ಎನ್ನವ ಧನದಾಯಿ ವೈದ್ಯರಿಗಿಂತ ನೀನು ಮಹಾತಾಯಿಯಾಗಿ ಕಾಣುವುದು,ಆ ಕಾಲದಲ್ಲಿ ನೀನು ರಾತ್ರಿಯಲ್ಲಿ ಅವೇಳೆಯಲ್ಲಿ ಹೆರಿಗೆ ಮಾಡಿಸಲು  ಮನೆಯಿಂದ ಹೊರಹೋಗುವಾಗ ನಾನು ನಿನ್ನ ಮೇಲೆ ಕೋಪಿಸಿಕೊಂಡಿದ್ದೆ ಈಗ ನನಗೆ ಅರ್ಥವಾಗಿದೆ ನೀನೆಂಥಹ ಮಜತ್ಕಾರ್ಯ ಮಾಡಿರುವೆ ಎಂದು 
ಪಟ್ಡಿ ಮಾಡುತ್ತಾ ಹೋದರೆ ಒಂದೇ ಎರಡೆ ನಿನ್ನ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಮುಂದಿನ ಜನ್ಮದಲ್ಲೂ ನೀನೆ ನನಗೆ ತಾಯಿಯಾಗಬೇಕು . ನಿನಗೆ ಇಂಗ್ಲಿಷ್ ಅರ್ಥವಾಗದಿದ್ದರೂ ನನ್ನ ಅಸಮಾಧಾನಕ್ಕೆ ಹೇಳುತ್ತೇನೆ ಅಮಾ ಐ.ಲವ್ ಯು. 
ಮಾವನ ಮನೆಯಿಂದ ಬೇಗ ಬಂದು ಬಿಡು 
ಇಂತಿ
 ನಿನಗಾಗಿ ಕಾಯುವ ನಿನ್ನ ಮಗ ..

ಸಿ.ಜಿ.ವೆಂಕಟೇಶ್ವರ. ಗೌರಿಬಿದನೂರು      9900925529

No comments: