Skip to content
ಚಿತ್ರಮಂದಿರಗಳಲ್ಲಿ ಎಳನೀರು
ಮೈಸೂರಿನ ಜಿಲ್ಲಾಧಿಕಾರಿ ಡಿ ರಂದೀಪ್ ರವರು ಜಿಲ್ಲೆಯ ಎಲ್ಲಾ ಚಿತ್ರ ಮಂದಿರಗಳು ಕಡ್ಡಾಯವಾಗಿ ಎಳನೀರು ಮಾರಬೇಕೆಂದು ಆದೇಶ ಮಾಡಿರುವುದು ಉತ್ತಮ ಬೆಳವಣಿಗೆ .ಇದೇ ರೀತಿ ಎಲ್ಲಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲು ಜನರಿಂದ ಒತ್ತಡ ಹೇರಬೇಕಿದೆ .ಈ ನಿಟ್ಟಿನಲ್ಲಿ ತಮಿಳು ನಾಡು ಮತ್ತು ಕೇರಳ ರಾಜ್ಯಗಳು ನಮಗೆ ಮಾದರಿಯಾಗಬೇಕು ಈ ರಾಜ್ಯಗಳಲ್ಲಿ ಆರೋಗ್ಯಕ್ಕೆ ಹಾನಿಕರವಾದ ಮತ್ತು ಬಹುರಾಷ್ಟ್ರೀಯ ಕಂಪನಿಗಳ ತಂಪು ಪಾನೀಯಗಳನ್ನು ನಿಷೇಧಿಸಲಾಗಿದೆ ಮತ್ತು ಎಳನೀರನ್ನು ಎಲ್ಲಾ ಮಾಲ್ ಮತ್ತು ಚಿತ್ರ ಮಂದಿರಗಳಲ್ಲಿ ಕಡ್ಡಾಯವಾಗಿ ಮಾರಲು ಆದೇಶಿಸಿ ಜಾರಿಗೆ ತರಲಾಗಿದೆ.ನಮ್ಮ ರಾಜ್ಯದಲ್ಲೂ ಈ ವಿಷಯವನ್ನು ಆಂದೋಲನದ ರೀತಿಯಲ್ಲಿ ಮುನ್ನೆಡೆಸಲು ಯುವ ಪೀಳಿಗೆಯ ಸಹಕಾರ ಅಗತ್ಯವಾಗಿದೆ. ಇದರಿಂದಾಗಿ ಪರೋಕ್ಷವಾಗಿ ಸಂಕಷ್ಟದಲ್ಲಿರುವ ನಮ್ಮ ರೈತರಿಗೆ ಅನುಕೂಲವಾಗುತ್ತದೆ. ಜೊತೆಗೆ ಭಾರತದ ಹಣ ಬಹುರಾಷ್ಟ್ರೀಯ ಕಂಪನಿಗಳ ಮೂಲಕ ವಿದೇಶಕ್ಕೆ ಹರಿದು ಹೋಗುವುದು ನಿಲ್ಲುತ್ತದೆ ತನ್ಮೂಲಕ ನಮ್ಮ ದೇಶದ ಸಂದಾಯ ಬಾಕಿ ಅಸಮತೋಲನ ನಿವಾರಣೆ ಆಗಿ ನಮ್ಮ ದೇಶ ಜಗತ್ತಿನ ಪ್ರಭಲವಾದ ಆರ್ಥಿಕ ಶಕ್ತಿ ಆಗಿ ಹೊರಹೊಮ್ಮಲಿದೆ.
ಈಗೆ ಒಂದು ಚಿಕ್ಕ ಕ್ರಮದ ಮೂಲಕ ಉತ್ತಮ ಫಲಿತಾಂಶ ದೊರೆಯುವಂತಾದರೆ ಬೇರೆ ಜಿಲ್ಲೆ, ಮತ್ತು ರಾಜ್ಯಗಳೇಕೆ ಈ ನಿಟ್ಟಿನಲ್ಲಿ ಯೋಜನೆ ಜಾರಿಗೆ ತರಬಾರದು.
ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು
ಸಿ.ಜಿ.ವೆಂಕಟೇಶ್ವರ. ಗೌರಿಬಿದನೂರು 9900925529
No comments:
Post a Comment