ಸಂಗೀತ,,ಸುದ್ದಿ, ಮತ್ತು ಸಾಹಿತ್ಯ ಅಭಿಮಾನಿಗಳಿಗಾಗಿ ವಾಟ್ಸಪ್ ಗ್ರೂಪ್*
ಸಂಗೀತಕ್ಕೆ ಮನಸೋಲದ ಜೀವಿಗಳಿಲ್ಲ ಎಂದರೆ ತಪ್ಪಾಗಲಾರದು ಮೊದಲು
ಸಂಗೀತವೆಂದರ ಕೇವಲ ನಿರ್ದಿಷ್ಟ ಜಾತಿ ಮತ್ತು ಉನ್ನತವಾದ ವರ್ಗಕ್ಕೆ ಸೇರಿದ ಕಲೆಯಾಗಿ
ಮಾತ್ರ ಸೀಮಿತವಾಗಿತ್ತು ಕ್ರಮೇಣ ಸಿನಿಮಾ ನಾಟಕ ಮುಂತಾದ ಲಲಿತ ಕಲೆಗಳಿಗೆ ಸಂಬಂಧಿಸಿದಂತೆ
ದೊರೆತ ಪ್ರೊತ್ಸಾಹ ದಿಂದ ಸಂಗೀತವನ್ನು ಕೆಲವರು ಕಲಿತರು ಈಗ ಇಂಟರ್ನೆಟ್ ಅಗ್ಗವಾಗಿ
ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಂಗೀತ ಕಲಿಸುವ ಕಲಿಯುವ ಕಾರ್ಯ ಸುಪ್ತ ವಾಗಿ
ನಡೆಯುತ್ತಿದೆ ಅಂತಹ ಕಾರ್ಯಕ್ಕೆ “ವಾಟ್ಸಪ್ ಸಂಗೀತ ಗುಂಪುಗಳ” ಪಾತ್ರ ಪ್ರಮುಖಗಿದೆ.
ಸುದ್ದಿ ಎಂದರೆ ದಿನಪತ್ರಿಕೆ ಎಂಬ ಕಾಲವಿತ್ತು ಆದರೆ ಅದು ಸಂಜೆ ಪತ್ರಿಕೆ
ಬರುವ ಮೂಲಕ ಒಂದು ಬದಲಾವಣೆಗಳನ್ನು ನೋಡಿದೆವು ಈಗ ದೇಶದಲ್ಲಿಯೇ ಮೊದಲಿಗೆ ಕ್ರಿಯಾಶೀಲ,
ಸ್ಟಾರ್ ಸಂಪಾದಕ ರೆಂದು ಪರಿಚಿತ ಶ್ರೀ ವಿಶ್ವೇಶ್ವರ ಭಟ್ ಸರ್ ನೇತ್ರತ್ವದಲ್ಲಿ
“ವಿಶ್ವ ವಾಣಿ ಟೈಮ್ಲಿ”Vishwavani timely ಎಂಬ ಮೊಬೈಲ್ ಪತ್ರಿಕೆ ಆರಂಭವಾಗಿದೆ
ಈಗಾಗಲೇ15ಕ್ಕೂ ಹೆಚ್ಚು ವಾಟ್ಸಪ್ ಗುಂಪಿನ ಅಡ್ಮಿನ್ ಆಗಿ ಶ್ರೀ ವಿಶ್ವೇಶ್ವರ ಭಟ್ ಸರ್
ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀ ಜೆ.ಡಿ.ಧನ್ನೂರ್ ಹಾಗೂ ಸಿ.ಜಿ.ವೆಂಕಟೇಶ್ವರ ಅವರು
ಸಹ ಅಡ್ಮಿನ್ ಆಗಿ ಕೆಲಸ ಮಾಡುತ್ತಾ ಪ್ರತಿದಿನ 10am,12pm,2pm,4pm,6pm,ಹಾಗೂ 8pm
ಹೀಗೆ ದಿನಕ್ಕೆ ಆರು ಮೊಬೈಲ್ ಆವೃತ್ತಿಯನ್ನು ಪ್ರಕಾಶನ ಮಾಡಲಾಗುತ್ತದೆ ಈ ಗುಂಪುಗಳು
ಯಾವ ಪರಿ ಜನರನ್ನು ಆಕರ್ಷಿಸಿವೆ ಎಂದರೆ ಒಂದು ಆವೃತ್ತಿ 5ನಿಮಿಷ ಲೇಟಾದರೆ ಅಡ್ಮಿನ್ಗೆ
ಕರೆ ಮಾಡಿ ಕಾರಣ ಕೇಳುತ್ತಾರೆ.ಆಸಕ್ತ ಗುಂಪು ಸೇರಬಯಸುವವರು ಈ ನಂಬರ್ ಸಂಪರ್ಕ ಮಾಡಬಹುದು
(9900925529.9480177080)
ಒಂದು ಕಾಲದಲ್ಲಿ ಸಾಹಿತ್ಯ ಕೇವಲ ಪಂಡಿತರಿಗೆ ಸೀಮಿತ ,ಕವನ ದೊಡ್ಡ ಕವಿಗಳ
ಸ್ವತ್ತು ಎಂದು ನಂಬಲಾಗಿತ್ತು ಅದನ್ನು ಸುಳ್ಳು ಮಾಡಲು ಸಾಮಾನ್ಯರಲ್ಲಿರುವ ಕವಿ
ಭಾವನೆಗಳನ್ನು ಬಡಿದೆಬ್ಬಿಸಲು “ಕವಿ ಬಳಗ” ಎಂಬ ವಾಟ್ಸಪ್ ಗುಂಪು ರಚಿಸಲಾಗಿದೆ
ನಿಟ್ಟಿನಲ್ಲಿ ನೈಟಿಂಗೇಲ್ ರಾಜ್ಯ ಪ್ರಶಸ್ತಿಯನ್ನು ಪಡೆದ ಜೆ.ಡಿ
ಧನ್ನೂರ್ ಅವರ ಸಾರಥ್ಯದಲ್ಲಿ ನಡೆಯುತ್ತಿರುವ “ಸುಮಧುರ ಗೀತೆಗಳು” ಎಂಬ ಗುಂಪು ಉತ್ತಮ
ಹಾಡುಗಳನ್ನು ಗಾನರಸಿಕರಿಗೆ ಉಣಬಡಿಸುತ್ತಿದೆ. ಇದರ ಜೊತೆಗೆ “ಗಾನಗಾರುಡಿಗರು” ಎಂಬ
ಗುಂಪು ಮಾಡಿ ಅದರಲ್ಲಿ ಹವ್ಯಾಸಿ ಗಾಯಕರು ಕರೋಕೆ ಹಾಡುಗಳನ್ನು ಹಾಡಿದ್ದಾರೆ ಮತ್ತು
ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ವಿವಿಧ ಕಾರ್ಯ ಕ್ರಮಗಳಲ್ಲಿ ಹಾಡುವ ಅವಕಾಶ
ನೀಡಿದ್ದಾರೆ ನಾನು ಸಹ ಈ ಗುಂಪಿನ ಸದಸ್ಯನಾಗಿ ಇತ್ತೀಚೆಗೆ ಬಿಡುಗಡೆಯಾದ ರಾಜಕುಮಾರ
ಚಿತ್ರದ “ಬೊಂಬೆ ಹಾಡುತೈತೆ” ಎಂಬ ಹಾಡನ್ನು ಕರೋಕೆ ಹಾಡುವ ಮೂಲಕ ಅವರ ಮಾರ್ಗದರ್ಶನದಲ್ಲಿ
ಹವ್ಯಾಸಿ ಹಾಡುಗಾರನಾಗಿ ರೂಪುಗೊಂಡಿದ್ದೇನೆ. ಇದೇ ರೀತಿಯಲ್ಲಿ ಸಾಮಾಜಿಕ
ಜಾಲತಾಣಗಳನ್ನು ಕಲೆ ಸಂಸ್ಕೃತಿಯನ್ನು ಬೆಳೆಸಿಕೊಂಡು ಸುಪ್ತ ಪ್ರತಿಭೆಯನ್ನು ಗುರುತಿಸ
ಅವರಿಗೆ ಆತ್ಮವಿಶ್ವಾಸ ಮೂಡಿಸಿ ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಮಾಡುತ್ತಿರುವುದು
ಶ್ಲಾಘನೀಯ ಇಂತಹ ಪ್ರಯತ್ನಗಳಿಗೆ ಬೆಂಬಲ ನೀಡಿದರೆ ಸಾಮಾಜಿಕ ಜಾಲತಾಣಗಳ ದುರುಪಯೋಗ
ಸ್ವಲ್ಪಮಟ್ಟಿಗಾದರೂ ಕಡಿಮೆಯಾಗಬಹುದು..
ಜೆ.ಡಿ.ಧನ್ನೂರ್ ಸಾರಥ್ಯದಲ್ಲಿ ಕನ್ನಡ ಸುಮಧುರ ಗೀತೆಗಳು ಎಂಬ ಶೀರ್ಷಿಕೆಯ ೨೫ ಕ್ಕೂ ಹೆಚ್ಚು ಗುಂಪುಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿವೆ.ಈ ಗುಂಪಿನ ಆಯ್ದ ಹವ್ಯಾಸಿ ಹಾಡುಗಾರರನ್ನು ಗುರುತಿಸಿ ಅವರಿಗಾಗಿ “ಸಂಗೀತ ಬಳಗ” ಎಂಬ ಗುಂಪು ರಚಿಸಿ ಶ್ರೀಮಂತ.ಆವಟಿ ಎಂಬ ಸಂಗೀತ ಗುರುಗಳಿಂದ ಆನ್ಲೈನ್ ಸಂಗೀತ ಪಾಠಗಳನ್ನು ವ್ಯವಸ್ಥೆ ಮಾಡಿದ್ದಾರೆ. ಈ ಸಂಗೀತ ಗುಂಪುಗಳ ಕಲಾವಿದರ ಕಲೆ ಬಳಸಿಕೊಂಡು ಹಲವಾರು ಜಿಲ್ಲಾ ಮತ್ತು ರಾಜ್ಯ ಮಟ್ಟದ ಕಾರ್ಯ ಕ್ರಮ ಆಯೋಜನೆ ಮಾಡಲಾಗಿರುತ್ತದೆ. ಇದೇ ಕಲಾವಿದರನ್ನು ಬಳಸಿಕೊಂಡು “ದೀಪದಾರಿಣಿ”ಎಂಬ ಭಾವಗೀತೆಗಳ ಧ್ವನಿಸುರುಳಿ ಬಿಡುಗಡೆ ಮಾಡಲಾಗಿದೆ.

ಇತೀಚೆಗೆ ಜನರ ಅಭಿರುಚಿಗೆ ತಕ್ಕಂತೆ ವಿಭಾಗವಾರು ವಾಟ್ಸಪ್ ಗುಂಪು
ರಚಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ. ಭಾವಗೀತೆಗಳು”,ಜನಪದಗೀತೆಗಳು” ಹಿಂದಿಗೀತೆಗಳು
ಲಾವಣಿ. ನಾಟಕದ ಗೀತೆಗಳು ಇತ್ಯಾದಿ ಗಳನ್ನು ಗುಂಪುಗಳು ಮೂಲಕ ಹಂಚಿಕೊಳ್ಳುವ ಮೂಲಕ ಹಸಿದ
ಸಂಗೀತದ ಮನಸ್ಸುಗಳಿಗೆ ಸಂಗೀತದ ಮೃಷ್ಟಾನ್ನ ಉಣಬಡಿಸುತ್ತಿದ್ದಾರೆ…
ಇದರ ಜೊತೆಯಲ್ಲಿ ಅರ್ಹ ಸಂಗೀತ ಕಲಾವಿದರಿಗೆ ಚಲನಚಿತ್ರದಲ್ಲಿ ಹಾಡಲು
ಅವಕಾಶಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದೆ ಆನ್‌ಲೈನ್ ಸಂಗೀತ
ಸ್ಪರ್ದೆ.ಕರೋಕೆ ಸಂಗೀತ .ಸ್ಪರ್ಧಮಾಡುವ ಯೋಜನೆಗಳಿವೆ ಎಂದು ಶ್ರೀ ಧನ್ನೂರ್ ರವರು
ಆತ್ಮವಿಶ್ವಾಸದಿಂದ ಹೇಳುತ್ತಾರೆ.
“ಕವಿಬಳಗ” ವಾಟ್ಸಪ್ ಗುಂಪಿನಲ್ಲಿ ರಾಜ್ಯದ ವಿವಿಧ ಭಾಗದ ಕವಿಗಳು ತಮ್ಮ ಪರಸ್ಪರ ಕವನ ,ವಿಮರ್ಶೆ ವಿನಿಮಯ ಮಾಡಿಕೊಳ್ಳತ್ತಿದ್ದಾರೆ ಪ್ರತಿ ಭಾನುವಾರ ಚಿತ್ರ ಕವನ ಸ್ಪರ್ದೆ ಏರ್ಪಡಿಸಿ ಉತ್ತಮ ಕವನಗಳಿಗೆ ಪುಸ್ತಕ ರೂಪದಲ್ಲಿ ಬಹುಮಾನಗಳನ್ನು ನೀಡಲಾಗುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಗುಂಪಿನ ಕವಿಗಳಿಂದ ರಚಿಸಿರುವ “ಭಾವದೀಪ್ತಿ” ಎಂಬ 115ಕವಿಗಳ ಕವನ ಸಂಕಲನ ಹೊರತರಲು ಸಿದ್ದತೆ ಆರಂಭವಾಗಿದೆ
ಈ ಕವನ ಸಂಕಲನಕ್ಕೆ ವಿಶ್ವವಾಣಿ ಪತ್ರಿಕಾ ಸಂಪಾದಕರಾಗದ ಶ್ರೀ ವಿಶ್ವೇಶ್ವರ ಭಟ್ ಸರ್ ರವರು ಮುನ್ನುಡಿ ಬರೆಯುತ್ತಿರುವುದು ಹಾಗೂಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಒಪ್ಪಿರುವುದು ನಮಗೆ ಹೆಮ್ಮೆಯ ಸಂಗತಿ
ಮತ್ತೊಂದು ವಿಶೇಷವೆಂದರೆ ಈ ಎಲ್ಲಾ ಕವನಗಳನ್ನು ಡಿಜಿಟಲ್ ವಾಚನ ಮಾಡಿ ಒಂದು ದ್ವನಿಸಾಂದ್ರಿಕೆ ತಯಾರಿಸಲಾಗಿದೆ ಇದರ ರಾಜ್ಯ ಮಟ್ಟದ ಬಿಡುಗಡೆ ಸಮಾರಂಭ ಇದೇ ಆಗಸ್ಟ್ ತಿಂಗಳ 27 ರಂದು ಹಾಸನದ ಸಾಹಿತ್ಯ ಪರಿಷತ್ತಿನ ಭವನದಲ್ಲಿ ನಾಡಿನ ಹಿರಿಯ ಕವಿಗಳು ಮತ್ತು ಪತ್ರಕರ್ತರ ಸಮ್ಮುಖದಲ್ಲಿ ನಡೆಯಲಿದೆ ,ಸಾದ್ಯವಾದರೆ ತಾವೂ ಆಗಮಿಸಿ

No comments:
Post a Comment