ದಯಾಳು
ಎಲ್ಲಿರುವೆ ಬಾ ರಾಯ ಮುಗಿಲೂರ ಮಳೆರಾಯ
ನೊಂದು ಬೆಂದಿಹೆ ನಾನು ಕಾಣದೆ ಈ ನೋವ
ಬಿರಿದಿಹ ಭುವಿ ನೋಡು ಬಿಡದೆ ಸುರಿದು
ತಂಪ ನೀಡು ಕಾಯುತಿಹಳು ಇಳೆ ನಿನ್ನಾಗಮಕೆ
ದನಕರುಗಳಿಗೆ ಮೇವಿಲ್ಲ ನೀರಿಲ್ಲ ಘನಮೋಡದಿಂದಿಳಿದು ಬರದಿ ಬಾರೋ
,ನೀ ಬರದಿರೆ ನಮಗೆ’ಬರ’ವೆ ನೋಡ
ಬಂದು ನಮ್ಮ ಬಾಳ ಹಸನು ಮಾಡ
ಆಸರೆಯ ಕೈಗೋಲು ಹಿಂದೆ ಬಿದ್ದಿದೆ ನೋಡು
ನೀ ಬಂದು ಆಸರಿಸಿ ನನ್ನ ಕಾಪಾಡು
ಮೈಮೇಲೆ ಅರಿವೆ ಇಲ್ಲ ಬದುಕಾಗಿದೆ ಮೂರಾಬಟ್ಟೆ
ನೀ ಬರದಿದ್ದರೆ ನಮ್ಮ ಬದುಕು ಬರಿ ಲೊಳಲೊಟ್ಟೆ
ಬಿರಿದಿಹಳು ಧರಣಿ ಬರಲಿಲ್ಲ ಭರಣಿ
ಅನ್ನವಿಲ್ಲದ ನನ್ನ ಬೆನ್ನು ಹೊಟ್ಟೆಗೆ ತಾಗಿದೆ
ಆದರೂ ಬರಲಿಲ್ಲ ನಿನಗೆ ಕರುಣೆ
ನೀನೇ ಹೇಳು ನನ್ನಿಂದ ತಪ್ಪೇನಾಗಿದೆ
ಹೌದು ಆಗಿದೆ ತಪ್ಪು ಸಾವಿರಾರು
ನೀನು ಬರದಿರೆ ನಮಗೆ ದಿಕ್ಕಿನ್ಯಾರು ನಿನಗಾಗಿ ನಾ ಈಗಲೂ ಕಾಯುತಿರುವೆ ಆಶಾಭಾವ ಸತ್ತಿಲ್ಲ ನೀ ದಯಾಳು ಸುಳ್ಳಲ್ಲ
ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು.
ಎಲ್ಲಿರುವೆ ಬಾ ರಾಯ ಮುಗಿಲೂರ ಮಳೆರಾಯ
ನೊಂದು ಬೆಂದಿಹೆ ನಾನು ಕಾಣದೆ ಈ ನೋವ
ಬಿರಿದಿಹ ಭುವಿ ನೋಡು ಬಿಡದೆ ಸುರಿದು
ತಂಪ ನೀಡು ಕಾಯುತಿಹಳು ಇಳೆ ನಿನ್ನಾಗಮಕೆ
ದನಕರುಗಳಿಗೆ ಮೇವಿಲ್ಲ ನೀರಿಲ್ಲ ಘನಮೋಡದಿಂದಿಳಿದು ಬರದಿ ಬಾರೋ
,ನೀ ಬರದಿರೆ ನಮಗೆ’ಬರ’ವೆ ನೋಡ
ಬಂದು ನಮ್ಮ ಬಾಳ ಹಸನು ಮಾಡ
ಆಸರೆಯ ಕೈಗೋಲು ಹಿಂದೆ ಬಿದ್ದಿದೆ ನೋಡು
ನೀ ಬಂದು ಆಸರಿಸಿ ನನ್ನ ಕಾಪಾಡು
ಮೈಮೇಲೆ ಅರಿವೆ ಇಲ್ಲ ಬದುಕಾಗಿದೆ ಮೂರಾಬಟ್ಟೆ
ನೀ ಬರದಿದ್ದರೆ ನಮ್ಮ ಬದುಕು ಬರಿ ಲೊಳಲೊಟ್ಟೆ
ಬಿರಿದಿಹಳು ಧರಣಿ ಬರಲಿಲ್ಲ ಭರಣಿ
ಅನ್ನವಿಲ್ಲದ ನನ್ನ ಬೆನ್ನು ಹೊಟ್ಟೆಗೆ ತಾಗಿದೆ
ಆದರೂ ಬರಲಿಲ್ಲ ನಿನಗೆ ಕರುಣೆ
ನೀನೇ ಹೇಳು ನನ್ನಿಂದ ತಪ್ಪೇನಾಗಿದೆ
ಹೌದು ಆಗಿದೆ ತಪ್ಪು ಸಾವಿರಾರು
ನೀನು ಬರದಿರೆ ನಮಗೆ ದಿಕ್ಕಿನ್ಯಾರು ನಿನಗಾಗಿ ನಾ ಈಗಲೂ ಕಾಯುತಿರುವೆ ಆಶಾಭಾವ ಸತ್ತಿಲ್ಲ ನೀ ದಯಾಳು ಸುಳ್ಳಲ್ಲ
ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು.
No comments:
Post a Comment