world heritage day
ವಿಶ್ವ ಪರಂಪರೆ ದಿನದ ಬಗ್ಗೆ ಲೇಖನ.
ಸಾಮಾನ್ಯವಾಗಿ ನಾವು ಮಾತನಾಡುವಾಗ “ಅವನ ಪರಂಪರೆಯನ್ನು ನೀನು ತಿಳಿದಿಲ್ಲ” ಅವರ ಪರಂಪರೆ ವಿಶೇಷ ರೀತಿಯದಾಗಿತ್ತು “ಮುಂತಾದ ಮಾತುಗಳನ್ನು ನಾವು ಕೇಳುತ್ತಲೇ ಇರುತ್ತೇವೆ .
ಹಾಗಾದರೆ ಪರಂಪರೆ ಎಂದರೆ ಏನು ಅದರ ಮಹತ್ವವೇನು .?
ನಾವು ನಮ್ಮ ಪೂರ್ವಜರಿಂದ ಪಡೆದ ಆಸ್ತಿ, ಪ್ರಾಕೃತಿಕ, ಸಾಂಸ್ಕೃತಿಕ, ಸಂಪನ್ಮೂಲಗಳು ನಮ್ಮ ಪರಂಪರೆ ಎನಿಸಿಕೊಳ್ಳುತ್ತದೆ.
ಇನ್ನೊಂದು ಮಾತಿನಲ್ಲಿ ಹೇಳಬೇಕೆಂದರೆ ನಾವು ನಮ್ಮ ಪೂರ್ವಜರಿಂದ ಪಡೆದ ಸ್ಮಾರಕಗಳು ಮತ್ತು ಪ್ರಕೃತಿ ನಮಗೆ ಆನಂದ ಮತ್ತು ಸೌಂದರ್ಯ ಪ್ರಜ್ಞೆ ಉಂಟು ಮಾಡುವುದನ್ನು ಪರಂಪರೆ ಎಂದು ಕರೆಯಲಾಗುತ್ತದೆ.
ಈ ವಿಷಯದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರಲ್ಲಿ ಜಾಗೃತಿಮೂಡಲಾರಂಬಿಸಿದೆ
ಇದಕೆ ಕಾರಣ
ಯುನೆಸ್ಕೋ ಸಾಮಾನ್ಯ ಸಭೆಯಲ್ಲಿ ೧೯೮೩ ಏಪ್ರಿಲ್ ೧೮ರಂದು ಒಂದು ನಿರ್ಣಯ ಕೈಗೊಂಡು ಪ್ರತೀ ವರ್ಷ ಏಪ್ರಿಲ್ ೧೮ರಂದು ವಿಶ್ವಾದ್ಯಂತ ಪರಂಪರಾ ದಿನವನ್ನಾಗಿ ಆಚರಿಸಲಾಗುತ್ತದೆ. ಅದರಂತೆ ಈ ವರ್ಷ ಈ ದಿನಕ್ಕೆ ಘೋಷ ವಾಕ್ಯವನ್ನು( theme)ಈಗೆ ನಿಗದಿ ಪಡಿಸಲಾಗಿದೆ. “ಸಾಂಸ್ಕೃತಿಕ ಪರಂಪರೆ ಮತ್ತು ಸುಸ್ಥಿರ ಪ್ರವಾಸೋದ್ಯಮ ” ಇದು ವಿಶ್ವ ಸಂಸ್ಥೆಯ ೨೦೩೦ ರ ಸುಸ್ಥಿರ ಅಭಿವೃದ್ಧಿ ಗುರಿಗಳ ಆಧಾರದ ಮೇಲೆ ರೂಪಿತವಾಗಿದೆ.
ಪರಂಪರೆಯ ವಿಧಗಳು. :
ಪರಂಪರೆಯನ್ನು ವ್ಯಾಪಕವಾಗಿ ಎರಡು ವಿಧಗಳಲ್ಲಿ ವಿಂಗಡಿಸಬಹುದು ಅವೆಂದರೆ. ಸಾಂಸ್ಕೃತಿಕ ಪರಂಪರೆ ಮತ್ತು ಪ್ರಾಕೃತಿಕ ಪರಂಪರೆ.
ನಮ್ಮ ದೇಶದಲ್ಲಿ ಹಲವಾರು ರಾಜಮನೆತನದ ಆಳ್ವಿಕೆಯ ಪರಿಣಾಮವಾಗಿ ನಮಲ್ಲಿ ಹಲವಾರು. ದೇವಾಲಯಗಳು, ಅರಮನೆಗಳು, ಕೋಟೆ ಕೊತ್ತಲಗಳು ,ಬಾವಿಗಳು, ಕೆರೆಗಳು, ಮಿನಾರ್ ಗಳು ಮಹಲ್ ಗಳು ಕಾಲುವೆಗಳು. ಮುಂತಾದ ಸ್ಮಾರಕಗಳು ನಮ್ಮಲ್ವಿವೆ ಇವುಗಳು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಕುರುಹುಗಳು.
ನಮ್ಮ ದೇಶದ ನೆಲ .ಜಲ.ಪರಿಸರ ,ಬಂಡೆ ,ಮರ,ಗಿಡ,ಮುಂತಾದ ಪ್ರಾಕೃತಿಕ ಸೌಂದರ್ಯದ ಬೀಡು ಇದು ನಮ್ಮ ಪ್ರಾಕೃತಿಕ ಪರಂಪರೆ.
ನಮ್ಮ ಪರಂಪರೆಯ ವಿಶೇಷ:
ಪ್ರಪಂಚದಲ್ಲಿ ಇಂದು ಒಟ್ಟಾರೆ ೧೦೫೨ ವಿಶ್ವ ಪರಂಪರೆಯ ಸ್ಥಳ ಗಳಿವೆ ಎಂದು ಕೆಲ ಮಾನದಂಡಗಳ ಪ್ರಕಾರ ಯುನೆಸ್ಕೋ ಪಟ್ಟಿ ಮಾಡಿದೆ ಅದರಲ್ಲಿ ೮೧೪ ಸಾಂಸ್ಕೃತಿಕ. ೨೦೩ಪ್ರಾಕೃತಿಕ ಮತ್ತು ೩೫ ಮಿಶ್ರ ಪರಂಪರೆಯ ತಾಣವಾಗಿ ವಿಂಗಡಿಸಿದೆ.ಇದರಲ್ಲಿ ಭಾರತದಲ್ಲಿ ೩೪ ಕ್ಕಿಂತ ಹೆಚ್ಚು ವಿಶ್ವ ಪರಂಪರೆಯ ತಾಣಗಳಿರಯವುದು ಭಾರತೀಯರಾದ ನಾವು ಹೆಮ್ಮೆ ಪಡುವ ಸಂಗತಿ .ಇದು ಪ್ರಾನ್ಸ್. ಇಟಲಿಯ ನಂತರ ನಮಲ್ಲಿ ಹೆಚ್ಚು ಸ್ಮಾರಕಗಳು ಇರುವುದು ಗಮನಾರ್ಹ. ಇದರಲ್ಲಿ ಪ್ರಮುಖ ಸ್ಮಾರಕಗಳು ಈಕೆಳಗಿನಂತಿವೆ.ಅಜಂತಾ ಗುಹೆಗಳು, ಕೋನಾರ್ಕ್ ಸೂರ್ಯ ದೇವಾಲಯ, ಆಗ್ರಾದ ತಾಜ್ ಮಹಲ್, ಖಜುರಾಹೊ ದೇವಾಲಯಗಳು, ಸಾಂಚಿಯ ಬೌದ್ಧ ಸ್ತೂಪ, ಕುತುಬ್ ಮಿನಾರ್, ರಾಜಸ್ತಾನದ ಕೋಟೆ, ಆಗ್ರಾದ ಕೋಟೆ ಇತ್ಯಾದಿ. ಕರ್ನಾಟಕದ ಮೂರು ತಾಣಗಳನ್ನು ವಿಶ್ವ ಪರಂಪರೆಯ ಪಟ್ಟಿಯಲ್ಲಿ ಇರುವುದು ಕನ್ನಡಿಗರ ಹೆಮ್ಮೆ. ಅದರಲ್ಲಿ. ಹಂಪೆಯ ವಾಸ್ತುಶಿಲ್ಪ. ಪಟ್ಟದಕಲ್ಲು ದೇವಾಲಯಗಳು.ಮತ್ತು ಪಶ್ಚಿಮ ಘಟ್ಟಗಳು ಸೇರಿವೆ .
ಪರಂಪರೆ ಸ್ಥಳಗಳ ರಕ್ಷಣೆ.:
ವಿಶ್ವ ಸಂಸ್ಥೆಯ ಯುನೆಸ್ಕೋ ವರದಿಯ ಪ್ರಕಾರ ವಿಶ್ವ ದಲ್ಲಿ ೫೫ಪಾರಂಪರಿಕ ತಾಣಗಳು ಅಳಿವಿನ ಅಂಚಿನಲ್ಲಿದೆ ಎಂದರೆ ನಾವು ಹೇಗೆ ನಮ್ಮ ಪರಂಪರೆಯನ್ನು ಸಂರಕ್ಷಣೆ ಮಾಡತ್ತಿದೇವೆ ಎಂಬುದಕ್ಕೆ ಹಿಡಿದ ಕನ್ನಡಿ
ವಿವಿದ ಸರ್ಕಾರಗಳು ಪರಂಪರೆ ಸ್ಥಳಗಳ ರಕ್ಷಣೆ ಮಾಡಲು ಹಲವಾರು ಕಾನೂನಿನ ಮೂಲಕ ಪ್ರಯತ್ನ ಮಾಡುತ್ತಿವೆ ಆದರೂ ಪಾರಂಪರಿಕ ಕಟ್ಟಡಗಳ ವಿರೂಪ ಮಾಡಿದ ಮತ್ತು ಪರಿಸರಕ್ಕೆ ಹಾನಿಯನ್ನು ಉಂಟುಮಾಡುವ ಕಾರ್ಯಗಳು ಅವ್ಯಾಹತವಾಗಿ ನಡೆಯುತ್ತಿರುವುದು ದುರದೃಷ್ಟಕರ ಈ ನಿಟ್ಟಿನಲ್ಲಿ ನಮ್ಮ ಪರಂಪರೆಯನ್ನು ನಮ್ಮ ಪೂರ್ವಜರಿಂದ ನಾವು ಪಡೆದಂತೆ ಅದನ್ನು ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಆದ್ದರಿಂದ ನಮ್ಮ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಪರಂಪರೆಯನ್ನು ಸಂರಕ್ಷಿಸಲು ಇಂದೇ ಪಣ ತೊಡೋಣ.
ಸಿ.ಜಿ.ವೆಂಕಟೇಶ್ವರ
No comments:
Post a Comment