,ಗರ್ಲ್ ಪ್ರೆಂಡ್ ಏಕೆ.ಸಂತೋಷ ಓಕೆ
ಡುಂಡಿರಾಜ್ ರವರ ಒಂದು ಚುಟುಕು ಹೀಗಿದೆ
"ಮದುವೆಯಾಗುವ ಮೊದಲು ನನಗಿದ್ದವುಎರಡು ಗುಂಡಿಗೆ ಮದೆವೆಯಾದ ಮೇಲೆ ಬಿದ್ದೆ ಗುಂಡಿಗೆ" ಎಂಬಂತೆ ಇನ್ನೂ ಕೆಲವರು ಮದುವೆ ಎಂಬ ಶಾಶ್ವತ ಬಂಧವನ್ನು ಟಾಯ್ಲೆಟ್ಗೆ ಹೋಲಿಸುವರು ಅದರಂತೆ ಟಾಯ್ಲೆಟ್ ರೂಂ ಹೊರಗಿರುವ ವರು ಹೊಳಹೋಗಲು ಪ್ರಯತ್ನಿಸಿದರೆ ಹೊಳಗಿರುವವರು ಹೊರಬರಲು ಪ್ರಯತ್ನಿಸುವ ಪರಿಸ್ಥಿತಿ ಮದುವೆ ಮತ್ತು ಗರ್ಲ್ ಪ್ರೆಂಡ್ ಹೊಂದುವುದಕ್ಕೆ ಹೋಲಿಸಿದ್ದಾರೆ
ಅದರಂತೆ ಬಹುತೇಕರು ಇಂದಿನ ದಿನಗಳಲ್ಲಿ ಗೆಳತಿಯರಿಲ್ಲದೇ ಕಾಲ ಕಳೆಯಲು ಇಚ್ಚೆಪಡುವರು ಹೆಚ್ಚಾಗುತ್ತಿದ್ದಾರೆ ಅದಕ್ಕೆ ಅವರು ಕೊಡುವ ಕಾರಣಗಳು ಈ ಕೆಳಕಂಡಂತಿವೆ
1.ಬಹುತೇಕ ಹುಡುಗರು ತಮ್ಮ ಪ್ರೀತಿ ಬ್ರೇಕ್ ಅಪ್ ಆಗುವುದೋ, ತಾವು ಪ್ರೀತಿಸಿದ ಹುಡುಗಿ ಎಲ್ಲಿ ಸಿಗದೇ ಬೇರೊಬ್ಬರ ಪಾಲಾಗುವಳೋ ಎಂಬ ಆತಂಕ ಇದ್ದೇ ಇರುತ್ತದೆ ಇಂತಹ ಒತ್ತಡದಿಂದ ಮುಕ್ತಿ ದೊರೆಯುತ್ತದೆ.
2.ಪ್ರೀತಿಯಲ್ಲಿ ಬಿದ್ದವರು ತನ್ನ ಗೆಳತಿಯೇ ಸರ್ವಸ್ವ ಎಂದು ಹೆತ್ತ ತಂದೆ ತಾಯಿ, ಅಣ್ಣ ತಮ್ಮ, ಬಂದು ಬಳಗ ,ಸ್ನೇಹಿತರ ಕಡೆ ಗಮನ ಕೊಡದೇ ಪ್ರೀತಿಯಲ್ಲಿ ಮುಳುಗಿರುವುದು ಕಂಡು ಬರುತ್ತದೆ, ಆದರೆ ಗೆಳತಿಯಿಲ್ಲದಿದ್ದರೆ ಇವರ ಜೊತೆ ಇನ್ನೂ ಹೆಚ್ಚಿನ ಬಾಂಧವ್ಯವನ್ನು ಹೊಂದಬಹುದು.
3.ನಿಮಗಿಷ್ಟವಾದುದನ್ನು ಮಾಡಬಹುದು.
ಒಂದು ಜೋಕ್ ಪ್ರಕಾರ ವಾಸ್ಕೋಡಗಾಮ ಭಾರತಕ್ಕೆ ಜಲಮಾರ್ಗ ಕಂಡುಹಿಡಿಯಲು ಹೊರಟಾಗ ಅವನಿಗೆ ಗರ್ಲ್ಪಪ್ರೆಂಡ್ ಇದ್ದಿದ್ದರೆ, ಎಲ್ಲಿಗೆ ಹೋಗ್ತಿಯಾ ? ಯಾಕೆ? ಹೋಕ್ತೀಯಾ? ಯಾವಾಗ ಬರ್ತೀಯಾ ಮುಂತಾದ ಸಾವಿರ ಪ್ರಶ್ನೆ ಕೇಳಿ ಅವನು ಅಲ್ಲೇ ಇರುತ್ತಿದ್ದ .
ಹಾಗೆ ಇಂದಿನ ಯುವಕರು ಅವರ ಇಷ್ಟದ ಹವ್ಯಾಸವನ್ನು ರೂಡಿಸಿಕೊಳ್ಳಲು ,ಪ್ರವಾಸ,ಬೈಕ್ ರೈಡಿಂಗ್, ಹೈಕಿಂಗ್ ಮುಂತಾದವುಗಳಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳಬಹುದು
3.ಕೆಲಸದಲ್ಲಿ ಮಗ್ನತೆ
ಗೆಳತಿಯರು ಇಲ್ಲದಿದ್ದರೆ ಕೆಲಸ ಮಾಡುವ ಯುವಕರು ಕೆಲಸದಲ್ಲಿ ಏಕಾಗ್ರತೆ ಸಾದಿಸಿ ಕೆಲಸವು ಹೆಚ್ಚು ಕ್ರಿಯಾಶೀಲ ಆಗುವುದು ಎಂಬುದು ಗೆಳತಿಯರಿಲ್ಲದಿರುವವರು ಮಾಡುವ ವಾದ
3 ಮುಖವಾಡಗಳನ್ನು ಧರಿಸುವುದು ಕಡಿಮೆ
ಕೆಲವೊಮ್ಮೆ ಗೆಳತಿಯರ ಸಂಪಾದಿಸುವುದರಿಂದ ಅವರ ಜೊತೆ ಒಡನಾಟ ಮಾಡುವಾಗ ಸಾವಿರಾರು ಮುಖವಾಡ ಧರಿ ಸುವುದು ಸಾಮಾನ್ಯವಾಗಿ ಕಂಡುಬರುತ್ತವೆ. ಗೆಳತಿಯರಿಲ್ಲದಿದ್ದರೆ ಈ ಮುಖವಾಡ ಹೊರತಾಗಿ ನೈಜ ನಡವಲಕಿಜೆಗಳಿಗೆ ಪ್ರೇರಕವಾಗುತ್ತದೆ ಎಂಬುದು ಬ್ರಹ್ಮಚಾರಿಗಳಾಗಿರುವವರ ಅಂಬೋಣ
4 ಉಳಿತಾಯಕ್ಕೆ ಪೂರಕ
ಕೆಲವರ ಪ್ರಕಾರ ಗರ್ಲ್ ಪ್ರೆಂಡ್ ಸಂಬಾಳಿಸುವುದು ಎರಡು ಸಂಸಾರ ನಡೆಸಿದಂತೆ ಅಂದರೆ ಅನವಶ್ಯಕ ಖರ್ಚು ಮಾಡಲು ಇದು ಒಂದು ದಾರಿ ಎಂದು ಭಾವಿಸುತ್ತಾರೆ. ಅದರ ಬದಲಿಗೆ ಉಳಿತಾಯ ಮಾಡಿದರೆ ಅದು ಅವರ ಸುಖಕರ ನಿವೃತ್ತಿ ಜೀವನಕ್ಕೆ ಸಹಕಾರಿ ಎಂದು ನಂಬಿದ್ದಾರೆ
5 ಕೌಶಲ್ಯ ಬೆಳವಣಿಗೆ ಆತ್ಮ ತೃಪ್ತಿ
ಗೆಳತಿಯರಿಲ್ಲದವರು ,ಅವರ ಬಿಡುವಿನ ಸಮಯದಲ್ಲಿ, ಕಲೆ ಸಂಸ್ಕೃತಿ, ಅವರ ಇಚ್ಚೆಯ ಹವ್ಯಾಸವನ್ನು ಬೆಳೆಸಿಕೊಂಡು ಆತ್ಮ ತೃಪ್ತಿ ಹೊಂದಲು ಸಹಕಾರಿ ಆಗುವದು ಅಂಬುದು ಬ್ರಹ್ಮ ಚಾರಿಗಳ ವಾದವಾಗಿದೆ
ಈ ಎಲ್ಲಾ ಅಂಶಗಳಲ ಆಧಾರದ ಮೇಲೆ ಕೆಲ ಯುವಕರು" don't marry be happy",ಏಕಾಂಗಿಯಾಗಿ ನೆಮ್ಮದಿಯಿಂದಿರಿ"
ಎಂಬ ಘೋಷಣೆ ನೀಡಿ ಅದಕ್ಕೆ ಎ.ಪಿ.ಜೆ .ಅಬ್ದುಲ್ ಕಲಾಂ. ಅಟಲ್ ಬಿಹಾರಿ ವಾಜಪೇಯಿ ಅವರ ಉದಾಹರಣೆ ನೀಡುವುದರಿಂದ ಈ ಗರ್ಲ್ ಪ್ರೆಂಡ್ ವಿರೋದಿಗಳ ಮಾತಿನಲ್ಲಿ ಸತ್ಯವಿದೆಯೇನೋ ಎನಿಸುವುದು ಸುಳ್ಳಲ್ಲ
ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು.

ಸಿ.ಜಿ.ವೆಂಕಟೇಶ್ವರ. ಗೌರಿಬಿದನೂರು 9900925529
No comments:
Post a Comment