20 August 2017

*ಚಿತ್ರ ಕವನ* ರನ್ನ

*ರನ್ನ*

ನೀನೇ ನನ್ನ ರನ್ನ
ನಿನ್ನ ಮುಂದೆ ರವಿ ಸೊನ್ನೆ
ನೀ ನನ್ನ ಸೌಭಾಗ್ಯ
ನೀನಿಲ್ಲದಿದ್ದರೆ ದೌರ್ಭಾಗ್ಯ

ನನ್ನ ಕನಸು ಆಗಸದೆತ್ತೆರ
ನೀ ನನ್ನ ಸಂತಸದ ಆಗರ
ನಿನ್ನ ನಗು ಮನೋಹರ
ರೂಪ ನೋಡಲು ಅತಿಸುಂದರ

ಬೇಕಿಲ್ಲ ನನಗೆ ಸಂಪತ್ತು
ನೀ ಬಂಗಾರ ಬೆಳ್ಳಿ ಮುತ್ತು
ನಿನ್ನೊಂದಿಗಿನ ಈ ಹೊತ್ತು
ಸ್ವರ್ಗ  ಬೇಡದ ಸಿಹಿಹೊತ್ತು

ಬಂಜೆಯೆಂಬಪವಾದವ ನೀ ತೊರೆದೆ
ನಂಜು ಮಾತುಗಳ ದೂರ ತಳ್ಳಿದೆ
ಸಂಜೆಯಾಗುವ ಪರಿ ಅರಿವಿರದೆ
ರಂಜನೆಯ ಸಮಯ ನೀ ನೀಡಿದೆ

ನನ್ನ ಆಸೆಗಡಲಿನ ಕುಡಿ ನೀನು
ಚಿನ್ನದ ರನ್ನದ ಗೊಡವೆಯೇನು
ಎನ್ನರಸನ ಮುದ್ದಿನ ಸಿರಿನೀನು
ನಿನ್ನ ಬರುವಿಕೆಗೆ ನಾನು ಕಾದಿಲ್ಲವೇನು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: