30 September 2021

ಯೇಗ್ದಾಗೆಲ್ಲಾ ಐತೆ . ವಿಮರ್ಶೆ


 



ಯೇಗ್ದಾಗೆಲ್ಲಾ ಐತೆ 

ವಿಮರ್ಶೆ

ಬೆಳಗೆರೆ ಕೃಷ್ಣಶಾಸ್ತ್ರಿಗಳು


ಮುಕುಂದೂರು ಸ್ವಾಮಿಗಳೊಂದಿಗೆ ಕಳೆದ ಸುಮಧುರ ಕ್ಷಣಗಳು , ಅವರಿಂದ  ಅರಿವು  ಪಡೆದ  ಘಳಿಗೆಗಳನ್ನು ತಮ್ಮ ನೆನಪುಗಳ ಭಂಢಾರದಿಂದ  ಬುತ್ತಿಯನ್ನು ಬಿಚ್ಚಿ ಉಣಬಡಿಸಿದ ಪುಸ್ತಕವೇ ಏಗ್ದಾಗೆಲ್ಲಾ ಐತೆ. 

ಕಾಮದೇನು ಪುಸ್ತಕ ಭವನ ಪ್ರಕಾಶನ

ಸಂಸ್ಥೆ ಪ್ರಕಟಿಸಿದ ಈ ಪುಸ್ತಕ 1995 ರಿಂದ 2015 ರ ವೇಳೆಗೆ 

ಹನ್ನೊಂದು ಬಾರಿ ಮುದ್ರಣ ಕಂಡಿರುವುದು ಆ ಪುಸ್ತಕಕ್ಕೆ ಇರುವ ಬೇಡಿಕೆ ಮತ್ತು  ಮಹತ್ವ  ಸೂಚಿಸುತ್ತದೆ.


೫೪ ಚಿಕ್ಕ ಅಧ್ಯಾಯಗಳು ಇರುವ ಪುಟ್ಟ ಪುಸ್ತಕದಲ್ಲಿ ಏನುಂಟು ಏನಿಲ್ಲ?  ಇಡೀ ಜೀವನದ ರಹಸ್ಯವಿದೆ . ಆಧ್ಯಾತ್ಮ ಇದೆ, ಜೀವನ ಪ್ರೀತಿ ಇದೆ, ತಿಳುವಳಿಕೆ ಇದೆ, ಸಂದೇಶವಿದೆ ಒಟ್ಟಾರೆ ಸರ್ವರೂ ಈ ಪುಸ್ತಕ ಓದಿದರೆ ಸಾಲದು ,ಆಗಾಗ್ಗೆ ಅದರ ತಿರುಳನ್ನು ಚಿಂತನ ಮಂಥನ ಮಾಡಿಕೊಳ್ಳಬೇಕು.


ಮಧ್ಯ ಕರ್ನಾಟಕದ ಹಳ್ಳಿಯ ಭಾಷೆಯಲ್ಲಿ ಮಾತನಾಡುವ ಸ್ವಾಮೀಜಿ ಸರಳ ಪದಗಳಲ್ಲಿ  ಮಾತನಾಡುತ್ತಾ, ನಗುತ್ತಾ ನಗಿಸುತ್ತಾ, ಜೀವನ ದರ್ಶನ ಮಾಡಿಸಿಬಿಡುವರು.


ಒಮ್ಮೆ ಕೃಷ್ಣ ಶಾಸ್ತ್ರಿಗಳಿಗೆ ತೀವ್ರವಾದ ಅನಾರೋಗ್ಯ ಕಾಡಿದಾಗ ತಮ್ಮ ಶಿಷ್ಯ ನ ಕಾಣಲು ಬಂದು ಹೀಗೆ ಧೈರ್ಯ ಹೇಳುತ್ತಾರೆ

"ಆರೈಕೆ ಮಾಡೋರ ಮೈಯಾಗೆ ಆರು ತಿಂಗಳು ಇರ್ತೀನಿ ಅನ್ನುತ್ತೆ ಕಾಯಿಲೆ. ಏನೂ ಮಾಡಬೇಡ.ಅವನ್ಯಾರ್ ಕರೆದಿದ್ದು? ಮುತುವರ್ಜಿ ಮಾಡಿದಷ್ಟು ಮೇಲೇರುತ್ತಾನೆ .ತಿರುಗಿ ನೋಡದಂತೆ ಸುಮ್ನಿದ್ರೆ ,ಇವರ್ಯಾಕೋ ಮರ್ಯಾದೆ ಕೊಡೊಲ್ಲ ಅಂತ ಜಾಗ ಬಿಡ್ತಾನೆ ಅಷ್ಟೇ" ಎಂದು ಧೈರ್ಯ ಹೇಳಿದರು ಪವಾಡ ಸದೃಶವಾಗಿ ಕಾಯಿಲೆ ವಾಸಿಯಾಯಿತು.

ಈ ಪ್ರಕರಣ ಗಮನವಿಟ್ಟು ನೋಡಿದರೆ ಇಂದಿಗೂ ಪ್ರಸ್ತುತ. ಇತ್ತೀಚಿನ ದಿನಗಳಲ್ಲಿ ನಮ್ಮ ಬಾಧಿಸುವ ವಿವಿಧ ರೋಗಗಳಿಗೆ ಹೆದರಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ರೋಗಕ್ಕಿಂತ ಅವರಲ್ಲಿ ಇರುವ ಅವ್ಯಕ್ತ ಭಯ ಕೆಲವೊಮ್ಮೆ ರೋಗಿಗಳನ್ನು ಸಾವಿನ ಮನೆಗೆ ಕೊಂಡೊಯ್ಯುತ್ತದೆ.


ಕಾಡಿನ ಹೂಗಳೊಂದಿಗೆ ಸ್ವಾಮೀಜಿ ಮಾತನಾಡುವ ಬಗೆ ಸುಂದರ ಇದು ನಾವು ಪ್ರಕೃತಿಯ ಜೊತೆಗೆ ಹೊಂದಿಕೊಂಡು ಹೋಗಬೇಕು ಎಂಬ ಸಂದೇಶವನ್ನು ನೀಡುತ್ತದೆ.

"ಮನುಸ್ಯ ತಾನೇ ತಿರನಾಗಿ ಬಾಳೋನು ಅಂಬಂಗೆ ಕಣ್ಣಿಗೆ ಕಂಡದ್ದನ್ನೆಲ್ಲಾ ತನ್ನ ಸುಖಕ್ಕೇಂತ ಹಾಳು ಮಾಡೋದನ್ನು ಕಲಿತು ತಾನೂ ಹಾಳಾಗ್ತಾನೆ " ಎಂಬ ಸ್ವಾಮೀಜಿಯವರ ಮಾತಿನಲ್ಲಿ ಪರಿಸರದ ಬಗ್ಗೆ ಕಾಳಜಿ ಇದೆ ಇತರ ಜೀವಗಳ ಬಗ್ಗೆ ಸಹಾನುಭೂತಿ ಇದೆ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಬರೀ ಯೋಜನೆ ಮಾಡಿ ಭಾಷಣ ಬಿಗಿವ ನಾಯಕರು ಸ್ವಾಮೀಜಿ ರವರ ಈ ಸಂದೇಶಗಳನ್ನು ಅಳವಡಿಸಿಕೊಂಡು ಬಾಳಬೇಕಿದೆ.


ಇಂದಿನ ನಮ್ಮ ಬಹುತೇಕ ರೋಗಿಗಳಿಗೆ ನಮ್ಮ ಅಹಾರ ಪದ್ದತಿ, ಜೀವನ ಶೈಲಿ ಕಾರಣ ಎಂದು ಬಿಡಿಸಿ ಹೇಳಬೇಕಿಲ್ಲ  .ಇದರ ಹಿನ್ನೆಲೆಯಲ್ಲಿ ಸ್ವಾಮೀಜಿ ರವರ ಮಾತುಗಳು ಹೀಗಿವೆ

"ಮುದ್ದೆ ಅಂತ ಊಟ ಇಲ್ಲ ಸಿದ್ದಪ್ಪನಂತ ದೇವ್ರಿಲ್ಲ ಅಂತಾರೆ.ಆದ್ರೆ ಒಂದ್ಮಾತು ಈ ಮುದ್ದೆಗೆ ತಕ್ಕಷ್ಟು ಕಷ್ಟ ಮಾಡಿದ್ದೀನಿ ಅಂತ ನಿಮಗೆ ನೀವೇ ಹೇಳ್ಕಂಡು ಮುದ್ದೆ ಮುರೀರಪ್ಪಾ ಅದರಾಗೈತೆ ಮುಕುಂದೂರಿನ ಸೊಗಸು"

ಹಳ್ಳಿಯ ಜನರ ಆಧ್ಯಾತ್ಮಿಕ ಜೀವನದ ಕಡೆಗೆ ಗಮನ ನೀಡಿದ್ದ ಸ್ವಾಮೀಜಿ ರವರು

ಭಜನೆಯ ಮೂಲಕ ಸತ್ಸಂಗಗಳ ಮೂಲಕ   ಕುಂಡಲಿನಿ ಯೋಗದ ಬಗ್ಗೆ 

ವಿವಿಧ ಚಕ್ರ ಗಳ ಬಗ್ಗೆ ಆಂಗಿಕ ಅಭಿನಯ ಮಾಡಿ ಜನರಿಗೆ ಪ್ರವಚನ ನೀಡುತ್ತಿದ್ದ ಬಗ್ಗೆ ಕೃಷ್ಣ ಶಾಸ್ತ್ರಿಗಳು ತಮ್ಮ ಪುಸ್ತಕದಲ್ಲಿ ಚೆನ್ನಾಗಿ ವಿವರಗಳನ್ನು ನೀಡಿದ್ದಾರೆ.


ಅರಿಷಡ್ ವರ್ಗಗಳು ನಮ್ಮ ನಿಜವಾದ ಶತ್ರುಗಳು ಅವು ಒಂದಕ್ಕೊಂದು ಪೂರಕವಾಗಿ ನಮ್ಮ ನಾಶಮಾಡಲು ಹೊಂಚು ಹಾಕುತ್ತವೆ ಎಂಬುದನ್ನು ಸ್ವಾಮೀಜಿ ರವರು ಹೀಗೆ ಹೇಳಿದರು.

"ಅರಿಷಡ್ ವರ್ಗ ದಲ್ಲಿ ಕಾಮ ಎಂಬ ಒಂದನ್ನು ಹತ್ತಿರ ಕರೆದರೆ ಉಳಿದ ಐದು ಒಳಹೊಕ್ಕು ನಮ್ಮನ್ನು ನಾಶ ಮಾಡಿ ಬಿಡುತ್ತವೆ " 


ಅಹಂ ನಿಂದ ಏನೆಲ್ಲಾ ಅನಾಹುತಗಳಾಗಿವೆ ಎಂದು ನಾವು ನೋಡಿದ್ದೇವೆ ಅದನ್ನೇ ಸ್ವಾಮೀಜಿಯವರು ತಮ್ಮ ಭಾಷೆಯಲ್ಲಿ

"ಗರಾ ಬುಟ್ರೇನೆ ಗುರು ನೋಡಪ್ಪ

ಸಾವ್ಕಾರಂತಾವ ದುಡ್ಡಿರೋದು ಸಂನ್ಯಾಸಿತಾವ ಸಿದ್ದಿ ಇರೋದು ಎಳ್ಡು ಒಂದೇ ಕಣೋ ಮಗ ಅವ್ನಿಗೂ ಹಾಂಕಾರ ಬಿಟ್ಟಿಲ್ಲ ,ಇವ್ನಿಗೂ ಹಾಂಕಾರ ಬಿಟ್ಟಿಲ್ಲ" .ಎಂದು ಅರ್ಥ ನೀಡಿರುವರು.

"ಸಮಾಧಿ ಏನಿದ್ದರೂ ಬದುಕಿದ್ದಾಗಲೂ ಆಗೋದನ್ನು ಕಲೀಬೇಕು "ಎಂದು ಹೇಳುವ ಮೂಲಕ ಜೀವನವೇ ಯೋಗವಾಗಬೇಕು ,ನಾವು ಬದುಕಿರುವಾಗ ಸಮಾಧಿ ಸ್ಥಿತಿ ತಲುಪಬೇಕು ಎಂದು ಸೂಚ್ಯವಾಗಿ ಹೇಳಿರುವರು.

ಸ್ವಾಮೀಜಿರವರು ರಾಮಾಯಣ, ಮಹಾಭಾರತ, ಭಗವದ್ಗೀತೆ ಗಳ  ವಿವರಣೆಯನ್ನು ಬಹಳ ಸರಳವಾಗಿ ಎಲ್ಲರಿಗೂ ತಿಳಿಯುವ ಭಾಷೆಯಲ್ಲಿ ಅರ್ಥ ಮಾಡಿಸುತ್ತಿದ್ದರು.


ಮುಕುಂದೂರು ಸ್ವಾಮೀಜಿ ರವರ ಕುರಿತು ಕೃಷ್ಣ ಶಾಸ್ತ್ರಿಗಳು ಹೇಳುವಂತೆ

"ಅವರ ಒಂದೊಂದು ಮಾತಿಗೂ ವಿಶೇಷವಾದ ಅರ್ಥವುಂಟು ,ಹರವುಉಂಟು,ಆಳ ಎತ್ತರಗಳುಂಟು .ಅದೆಲ್ಲಾ ತಿಳಿಯುವವರ ಸಾಮರ್ಥ್ಯವನ್ನು ಅನುಸರಿಸಿ ಬಿಚ್ಚಿಕೊಳ್ಳುತ್ತವೆ " 

ಹೌದು ಈ ಮಾತು ಶತ ಪ್ರತಿಶತ ಸತ್ಯ ಈ ಅನುಭವ ನಿಮಗೆ ಆಗಬೇಕಾದರೆ ನೀವೂ ಒಮ್ಮೆ, ಅಲ್ಲ ಹಲವು ಬಾರಿ ಈ ಪುಸ್ತಕ ಓದಲೇಬೇಕು.


ಕೃತಿ: ಏಗ್ದಾಗೆಲ್ಲಾ ಐತೆ.

ಲೇಖಕರು: ಬೆಳಗೆರೆ ಕೃಷ್ಣಶಾಸ್ತ್ರಿಗಳು

ಪ್ರಕಾಶನ;ಕಾಮದೇನು ಪುಸ್ತಕ ಭವನ ಪ್ರಕಾಶನ

ಬೆಲೆ: ೬೦


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


ಕೊಳ್ಳುಬಾಕರಾಗದಿರೋಣ .


 


ಕೊಳ್ಳುಬಾಕ ಸಂಸ್ಕೃತಿ ತ್ಯಜಿಸೋಣ 


ಇಷ್ಟು ಇದ್ದರೆ ಮತ್ತಷ್ಟು ಬೇಕು, ಒಂದು ಕಾರು ಸಾಲದು ಮತ್ತೊಂದು ಬೇಕೇೆ ಬೇಕು  ಹೊಸ ಮಾಡೆಲ್ ವಾಷಿಂಗ್ ಮೆಷಿನ್ ಕೊಳ್ಳೋಣ , ಈಗ ಎರಡು ಆಂಡ್ರಾಯ್ಡ್ ಪೋನ್ ಇವೆ, ಇರಲಿ ಒಂದು ಐ ಪೋನ್ ಕೊಳ್ಳೋಣ, ಪಕ್ಕದ ಮನೆಯವನು ಬುಲೆಟ್ ಬೈಕ್ ತಂದ, ನನ್ನ ಹೀರೋ ಹೊಂಡಾ ಜೊತೆಗೆ ನಾನು ಒಂದು ಬುಲೆಟ್ ಬುಕ್ ಮಾಡುವೆ ....ಹೀಗೆ ಪಟ್ಟಿ ಬೆಳೆಯುತ್ತದೆ.

ಈ ರೀತಿಯಲ್ಲಿ ಬೇಕಿದ್ದರೂ ಬೇಡದಿದ್ದರೂ ಅನವಶ್ಯಕವಾಗಿ ತೋರ್ಪಡಿಕೆಗೆ ಮತ್ತು ಅಗತ್ಯವಿಲ್ಲದಿದ್ದರೂ  ಕೊಳ್ಳುವ ಕೆಟ್ಟ ಚಟವೇ ಕೊಳ್ಳುಬಾಕ ಸಂಸ್ಕೃತಿ .


ಕೆಲವೊಮ್ಮೆ ಅವನು

ಕೊಂಡ ವಸ್ತುಗಳ ಉಪಯೋಗ

ತಿಳಿಯದೇ ಅವನೇ ಪ್ರಶ್ನೆ ಮಾಡಿಕೊಂಡ ನಾನು ಈ

ವಸ್ತು ಕೊಂಡಿದ್ದು ಯಾಕ?|

ಇಂತವರಿಗೆ ನಮ್ಮ ಪರಮೇಶಿ

ಕರೆಯುವನು ಕೊಳ್ಳುಬಾಕ||


ಅವಶ್ಯಕತೆ ಇಲ್ಲದಿದ್ದರೂ ಅನುಕರಣೆ, ವಿದೇಶಿ ಸಂಸ್ಕೃತಿಗಳ ಪ್ರಭಾವ ,ಮಾಧ್ಯಮಗಳ ಜಾಹಿರಾತಿನ  ಭರಾಟೆ , ವಿವೇಚನೆಯ ಕೊರತೆ, ಸಂಪತ್ತು ಮತ್ತು ಪ್ರತಿಷ್ಠೆಯ ತೋರ್ಪಡಿಕೆ ಇವುಗಳು ಕೊಳ್ಳುಬಾಕ ಸಂಸ್ಕೃತಿಗೆ ನಾಂದಿ ಹಾಡಿವೆ .


ಜಾಹೀರಾತುಗಳಲ್ಲಿ ಹೊಸ

ವಸ್ತುಗಳು ಯಾವುದೇ ಬರಲಿ

ಖರೀದಿಸುವಳು ಚಿಂತಿಸದೇ

ಎಷ್ಟೇ ಆದರೂ ದುಬಾರಿ|

ಯಾಕೆಂದರೆ ನನ್ನವಳು

ಕೊಳ್ಳುಬಾಕ ಸಂಸ್ಕೃತಿಯ

ಅಂತರರಾಷ್ಟ್ರೀಯ ರಾಯಭಾರಿ||


ಕೊಳ್ಳುಬಾಕ ಸಂಸ್ಕೃತಿ ಮತ್ತು ಮಿತಿ ಮೀರಿದ ನಿರೀಕ್ಷೆಗಳನ್ನು ಹೊಂದುತ್ತಿರುವ ಮನುಷ್ಯ ಇಂದು ಬದುಕಿನಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಳೆದುಕೊಂದು ಖಿನ್ನತೆಗೆ ಒಳಗಾಗುತ್ತಿದ್ದೇವೆ.ಇದು ಕೌಟುಂಬಿಕ ಕಲಹಗಳಿಗೂ ಕಾರಣವಾಗುತ್ತದೆ

.

ಕೊಳ್ಳುಬಾಕ ಸಂಸ್ಕೃತಿಯು ಕುಟುಂಬದ ಆರ್ಥಿಕ ಪರಿಸ್ಥಿತಿಯ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ ಉದಾಹರಣೆಗೆ ಇಪ್ಪತ್ತು ಸಾವಿರಕ್ಕೂ ಹೆಚ್ಚು ಬೆಲೆಯ   ಒಂದು ಫೋನ್ ಕೊಂಡು ಒಂದು ವರ್ಷದ ಬಳಿಕ ನಾವು ಮಾರಲು ಹೋದರೆ ಸಾವಿರ ರೂಗೂ ಮಾರಲು ಆಗುವುದಿಲ್ಲ. ಅಷ್ಟು ಹಣ ನಮಗೆ ನಷ್ಟ ,ಆದರೂ ಅದು ಸುಸ್ಥಿತಿಯಲ್ಲಿದ್ದರೂ ಅದನ್ನು ಕೊಟ್ಟು ಮತ್ತೆ ಇಪ್ಪತ್ತು ಸಾವಿರಕ್ಕೂ ಹೆಚ್ಚು ಬೆಲೆಯ ಪೋನ್ ಕೊಳ್ಳುತ್ತೇವೆ ಹೇಗೂ ಡೆಬಿಟ್ ,ಕ್ರೆಡಿಟ್ ಕಾರ್ಡ್ ಇರುತ್ತವೆ ಉಜ್ಜಿ ತೆಗೆದುಕೊಂಡು ಬಿಲ್ ಕಟ್ಟಲು ಮತ್ತೆ ಸಾಲ ಮಾಡುವೆವು . ಇ. ಎಮ್.ಐ  ಕಟ್ಟಲು ಒದ್ದಾಡುವೆವು , ಆ ಸಾಲ ತೀರಿಸಲು  ಕ್ರಮೇಣ ಓ.ಟಿ ಮಾಡುವುದು ,ಚಿಂತೆ ಮಾಡುವುದು ,ಖಿನ್ನತೆಗೆ ಜಾರುವುದು ಇದರ ಪರಿಣಾಮವಾಗಿ ಬಿ. ಪಿ ಶುಗರ್ ಆಗಮನ !ಇದು  ಕೊಳ್ಳುಬಾಕ ಸಂಸ್ಕೃತಿಯ ವಿಷವರ್ತುಲ.


ಹಾಗಾದರೆ ಈ ರೋಗದಿಂದ ಹೊರಬರಲು ಸಾದ್ಯವಿಲ್ಲವೇ? 


ಏಕಿಲ್ಲ ಮನಸ್ಸಿದ್ದರೆ ಮಾರ್ಗ ಭಾರತೀಯ ಸನಾತನ ಪರಂಪರೆಯಲ್ಲಿ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ತತ್ವ ಇದೆ ಅದನ್ನು ಪಾಲಿಸಿದರೆ ಸಾಕು. ನಮ್ಮ ಅಂಕೆ ತಪ್ಪಿದ ಮನಸ್ಸಿನ ನಿಯಂತ್ರಣ ಮಾಡಿಕೊಳ್ಳಬೇಕು. ಆರ್ಥಿಕ ಶಿಸ್ತು ಬೆಳಸಿಕೊಳ್ಳಬೇಕು. ಸರಳತೆಯಲ್ಲಿ ಸೌಂದರ್ಯವಿದೆ ಎಂಬುದನ್ನು ಅರಿಯಬೇಕು.ಅಂಧವಾಗಿ ಇತರರ ಅನುಕರಿಸುವ ಗುಣವನ್ನು ಬಿಟ್ಟು ಸ್ವಂತ ಯೋಚಿಸಿ ನಿರ್ದಾಕ್ಷಿಣ್ಯವಾಗಿ ಉತ್ತಮ ತೀರ್ಮಾನ ತೆಗೆದುಕೊಳ್ಳುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು.


 ಕೊಳ್ಳುಬಾಕ ಸಂಸ್ಕೃತಿಯ ವಿರುದ್ಧ ಜಾಗೃತಿ ಮೂಡಿಸಿ ಅದನ್ನು ವಿರೋದಿಸುವೆವು ಅಂದ ಮಾತ್ರಕ್ಕೆ ಕಂಜೂಸ್ ಕೂಡಾ ಆಗಬಾರದು. ಯಾವುದು ಅಗತ್ಯ ಅದನ್ನು ಕೊಳ್ಳಲೇಬೇಕು .ಅಗತ್ಯ ಮತ್ತು ಅನಗತ್ಯದ ಮಧ್ಯದ ಸೂಕ್ಷವಾದ ಗೆರೆಯನ್ನು ಯಾರು ಚೆನ್ನಾಗಿ ಅರ್ಥ ಮಾಡಿಕೊಳ್ಳವರೋ ಅಂತವರು ಕೊಳ್ಳುಬಾಕರಾಗುವುದಿಲ್ಲ.

ಆದ್ದರಿಂದ ನಾವೆಲ್ಲರೂ ಕೊಳ್ಳುಬಾಕರಾಗದೇ ಬುದ್ದಿವಂತರಾಗೋಣ ಆರ್ಥಿಕ ಶಿಸ್ತು ರೂಢಿಸಿಕೊಂಡು ನೆಮ್ಮದಿಯ ಜೀವನ ಸಾಗಿಸೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

*ಇಂದಿನ ಜನಮಿಡಿತ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*೩೦/೯/೨೧


 

29 September 2021

ಬೆಳಕು ಕತ್ತಲೆಯ ನುಂಗಿ. ವಿಮರ್ಶೆ.


 



ಬೆಳಗು ಕತ್ತಲೆಯ ನುಂಗಿ 

ಸೂಫಿ ಕಥೆಗಳು . ವಿಮರ್ಶೆ

ಎಂ. ವಿ ಶಂಕರಾನಂದ ರವರ ಬೆಳಕು ಕತ್ತಲೆಯ ನುಂಗಿ ಎಂಬ ಕಥಾ ಸಂಕಲನದ ಶೀರ್ಷಿಕೆಯ ನೋಡಿ ಓದಲು ಆರಂಭ ಮಾಡಿದ ನನಗೆ ಪುಸ್ತಕ ಓದಿ ಮುಗಿಸಿದಾಗ ಹೊಸ ಚಿಂತನೆಗಳು, ಹೊಳವುಗಳು  ಗೋಚರಿಸಲಾರಂಬಿಸಿದವು.


ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೋಡ್ಲಾಪುರದಲ್ಲಿನ ಒಂದು ಪುರೋಹಿತ ಕುಟುಂಬದಲ್ಲಿ,ಜನಿಸಿದ ಶಂಕರಾನಂದ ರವರು ಹುಟ್ಟೂರಿನಲ್ಲೇ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ,ಮುಂದೆ ಮಧುಗಿರಿಯಲ್ಲಿ ಪಿಯುಸಿ, ಪದವಿ ವ್ಯಾಸಂಗ  ಮಾಡಿ  ಮೈಸೂರಿನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿದ್ದಾರೆ. ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನ ಬುಕ್ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ) ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಮಾಡಿರುವ ಇವರಿಗೆ 

ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ . ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ, ಜಿಲ್ಲಾ ಪತ್ರಿಕೆಗಳ ಉಪ ಸಂಪಾದಕರೂ, ಅಂಕಣಕಾರರೂ ಆಗಿ ಕಾರ್ಯ ನಿರ್ವಹಿಸಿದ್ದಾರೆ.


ಇವರ ಕೃತಿ ಬೆಳಗು ಕತ್ತಲೆಯ ನುಂಗಿ ಎಂಬ ಸೂಫಿ ಕಥಾ ಸಂಕಲನದಲ್ಲಿ 40 ಕಥೆಗಳಿವೆ ಪ್ರತಿ ಕಥೆಗಳು ವಿಭಿನ್ನ ,ಮಕ್ಕಳ ಆದಿಯಾಗಿ ಸರ್ವರಿಗೂ ಇಷ್ಟ ಆಗುವ ಕಥೆಗಳಿವೆ .

ಈ ಕಥೆಗಳನ್ನು ಓದಿದ ಮೇಲೆ ನಮ್ಮಲ್ಲಿ ಹೊಸ ಬೆಳಕು ಮೂಡುವುದರಲ್ಲಿ ಸಂದೇಹವಿಲ್ಲ.


ಮೊದಲ ಕಥೆಯಲ್ಲಿ

ಮೂಢನಂಬಿಕೆ ಎಂಬುದು ಒಂದು ಕೆಟ್ಟ ಅವಸ್ಥೆ ಒಳ್ಳೆಯ ಅಧ್ಯಯನ ಮತ್ತು ಚಿಂತನೆ ಮುಖಾಂತರ ಬಹಳ ಸುಲಭವಾಗಿ ಮೂಢನಂಬಿಕೆ ಆದಾರದ ಮೇಲೆ ನಡೆಯುವ ವಂಚನೆಗಳನ್ನು ತಡೆಯಬಹುದು ಎಂದು ಸೂಫಿ ಸಂತರ ಮಾತುಗಳಲ್ಲೇ ಹೇಳುತ್ತಾ ಪುಸ್ತಕದ ಶೀರ್ಷಿಕೆ ಯನ್ನು ಈ ಕಥೆ ನೆನಪಿಸುತ್ತದೆ.


ಪರ್ಷಿಯನ್ ಮೂಲದ ಸೂಫಿ ಸಂತರ ಕಥೆ "ಮರಣವಾರಿಗೂ ಮನ್ನಣೆಯಿಲ್ಲ "ಎಂಬ ಕಥೆಯಲ್ಲಿ ಮಾನವ ಜೀವನದ ಅನಿಶ್ಚಿತತೆಯ ಬಗ್ಗೆ ಬೆಳಕು ಚೆಲ್ಲಿರುವರು . 


"ಭವಿಯೆಂಬುದು ಹುಸಿ" ಎಂಬ ಕಥೆಯಲ್ಲಿ ಹಾವು ಮತ್ತು ನವಿಲಿನ ಜಗಳದ ಪ್ರತಿಮೆಗಳನ್ನು ಬಳಸಿಕೊಂಡು,

ಮನುಷ್ಯನು ಹಾವಿನಂತೆ ಭೂಮಿಗೆ ಅಂಟಿಕೊಂಡವನು ಎಂಬುದು ಎಷ್ಟು ನಿಜವೋ ಹಾಗೆಯೇ ನವಿಲಿನ ಕಲ್ಪನೆ ಮತ್ತು ಮಹತ್ವಾಕಾಂಕ್ಷೆಗಳು ಅವನಲ್ಲಿರುವುದು ಅಷ್ಟೇ ನಿಜ. ಆದರೆ ಅವನು ಹಾವಿನಂತೆ ಲೋಭಿ, ಭೂಮಿಯನ್ನು ನವಿಲಿನಂತೆ ಸ್ವಾರ್ಥ ಮತ್ತು ಆತ್ಮಪ್ರತ್ಯಯಗಳನ್ನು ಬಿಟ್ಟುಕೊಡಲಾರ. ಅವನಲ್ಲಿ ಅಹಂಭಾವ ಗರಿಗೆದರುತ್ತದೆ. ಬಿಂಕ ಮೆರೆಯುತ್ತಾನೆ. ಸಾಧ್ಯತೆಗಳನ್ನು ನಿರಾಕರಿಸುತ್ತಾನೆ. ಹಾವು ಪೊರೆ ಕಳಚುವ ಕ್ರಿಯೆಯಲ್ಲಿ ಸೌಂದರ್ಯದ ಸಾಧ್ಯತೆಯು ವ್ಯಕ್ತವಾದರೆ ನವಿಲಿನ ಆಡಂಬರದಲ್ಲಿ, ಆ ಸಾಧ್ಯತೆಯು ನಿರಸನಗೊಳ್ಳುತ್ತದೆ ಎಂದು ಸೂಫಿ ಸಂತರು ನಮ್ಮನ್ನು ಚಿಂತನ ಮಂತನ ಮಾಡುವಂತೆ ಮಾಡುತ್ತಾರೆ.


ಭಾರತದಲ್ಲಿ ಹೊಸ ಶಿಕ್ಷಣ ನೀತಿಯ ಜಾರಿಯ ಹಿನ್ನೆಲೆಯಲ್ಲಿ ಅಹ್ಮದ್ ಇಲ್ ಬೆದಾಮಿ ಎಂಬ ಸಂತರ "ಊರೊಳಗಣ ಕಿಚ್ಚು ಕಾನನದಲ್ಲಿ ಉರಿಯಿತು" ಎಂಬ ಕಥೆಯು ಇಂದಿಗೂ ಪ್ರಸ್ತುತ ಎನಿಸುತ್ತದೆ. ಈ ಕಥೆಯಲ್ಲಿ

 ಗುರುಗಳು ತನ್ನ ಶಿಷ್ಯರಿಗೆ: “ಮನುಷ್ಯನಿಗೆ ಕಲಿಯುವ ಇಚ್ಛೆ ಇಲ್ಲದಿರುವುದರಿಂದ ಆತನಿಗೆ ಹೇಗೆ ಕಲಿಸಬೇಕು ಎಂಬುದನ್ನು ನೀವು ಮೊದಲು ಕಲಿತುಕೊಳ್ಳಬೇಕು, ಮೊದಲನೇಯದಾಗಿ ಅವರು ಹೇಗೆ ಕಲಿಯಬಹುದು ಎಂಬುದನ್ನು ತೋರಿಸಿಕೊಡಬೇಕು. ಅದಕ್ಕೂ ಮುನ್ನ ಅವರೆಲ್ಲಾ ಕಲಿಯಬಹುದಾದದ್ದು ಇನ್ನೂ ಇದೆ ಎಂಬುದನ್ನು ಮನದಟ್ಟು ಮಾಡಬೇಕು. ಆಗ ಅವರೆಲ್ಲಾ ಕಲಿಯಲಿಕ್ಕೆ ಸಿದ್ಧರಾಗಿದ್ದೇವೆ ಎಂದು ಭಾವಿಸುತ್ತಾರೆ. ಆದರೆ ಅವರು ಕಲಿಸಬೇಕಾಗಿರುವುದಕ್ಕಿಂತ ಅವರು ಏನನ್ನು ಕಲಿಯಬೇಕು ಎಂದು ಭ್ರಮಿಸುತ್ತಾರೋ ಅದೇ ಅವರಿಗೆ ಮುಖ್ಯವಾಗಿರುತ್ತದೆ. ಇದನ್ನೆಲ್ಲಾ ನೀವು ಅರ್ಥ ಮಾಡಿಕೊಂಡ ನಂತರವೇ ಅವರಿಗೆ ಕಲಿಸುವ ಕ್ರಮವನ್ನು ನೀವು ಸಿದ್ಧಪಡಿಸಬೇಕು. ಜ್ಞಾನ ಮತ್ತು ಸಾಮರ್ಥ್ಯ ಇದ್ದರೆ ಮಾತ್ರ ಸಾಲದು, ಅದನ್ನು ಕಲಿಸಿಕೊಡುವ ವಿಶೇಷ ಶಕ್ತಿಯೂ ಬೇಕು” ಎಂದು ಹೇಳುವ ಮಾತನ್ನು ನಾವು ಪಾಲಿಸಬೇಕಿದೆ.


ಜೀವನದಲ್ಲಿ ಯಶಸ್ಸು ಗಳಿಸಲು ನಿರಂತರ ಶ್ರಮಕ್ಕೆ ಪರ್ಯಾಯ ಯಾವುದೂ ಇಲ್ಲ ಎಂಬ ಸಂದೇಶವನ್ನು ಕೃತಿಯ ಶೀರ್ಷಿಕೆಯ ಕಥೆ ಚೆನ್ನಾಗಿದೆ ಪ್ರತಿಧ್ವನಿಸುತ್ತದೆ.

"ಪ್ರತಿಯೊಂದಕ್ಕೂ ಇಂತಿಷ್ಟು ಪರಿಶ್ರಮ ಎಂಬುದೊಂದಿರುತ್ತದೆ. ಬೆಲೆಯುಳ್ಳ ಕೆಲಸ ಮಾಡಲು ಬೇಕಾಗುವ ಕನಿಷ್ಟ ಶ್ರಮವನ್ನು ನಾವೆಲ್ಲಾ ಹಾಕಲೇಬೇಕು".ಎಂದು ಸೂಫಿ ಸಂತರ ಹೇಳುವ ಮಾತು ನಮ್ಮ ಕಿವಿಯಲ್ಲಿ ಗುಯ್ ಗುಡುತ್ತವೆ.


"ಮನದ ಆಸೆಯೆ ಮಾಯೆ ಕಾಣಾ " ಎಂಬ ಕಥೆಯು ಅಬ್ದುಲ್ಲಾ ನ ಅತಿಯಾಸೆಯಿಂದ ದೊರೆತ ಸಂಪತ್ತನ್ನು ಸದುಪಯೋಗ ಪಡಿಸಿಕೊಳ್ಳದೇ ಬೆಪ್ಪನಾದ ಬಗೆಯನ್ನು  ತಿಳಿಸುತ್ತದೆ ಮತ್ತು ನಮಗೆಲ್ಲ ಉತ್ತಮ ಸಂದೇಶ ನೀಡುತ್ತದೆ.


"ವಿಚಾರವೆಂಬ ಹೂವಾಯಿತ್ತು " ಎಂಬ ಕಥೆಯಲ್ಲಿ 

ಸೂಫಿಯು, ಬಾದಶಹನಿಗೆ  ಕಲಿಯಲಾರದವರಿಗೆ ಕೊಡುವ ವಿದ್ಯೆ ವ್ಯರ್ಥ. ಹಾಗೇ ಆಹಾರದ ಹಿಂದಿನ ಉದ್ದೇಶ ಅನುಮಾನಿಸುವವರಿಗೆ ಅದನ್ನು ನೀಡುವುದೂ ಸಹ ವ್ಯರ್ಥ. ಆದ್ದರಿಂದ, 'ಏನನ್ನು ನೀಡಿದರೂ ಸೂಕ್ತವಾದದ್ದೇ' ಎಂದು ಹೇಳುವುದು ಸಮಂಜಸವಲ್ಲ ಎಂಬುದನ್ನು ಸಾಕ್ಷಿ ಸಮೇತ ತೋರಿಸುವರು .ಇದು ಅಪಾತ್ರರಿಗೆ ಏನನ್ನೂ ನೀಡಬಾರದು ಎಂಬ ಹಿರಿಯರ ಮಾತು ನೆನೆಯುವಂತೆ ಮಾಡುತ್ತದೆ.


"ಎನ್ನ ಮನವು ಅತ್ತಿಯ ಹಣ್ಣು ನೋಡಯ್ಯ" ಎಂಬ ಕಥೆಯಲ್ಲಿ ಬರುವ ಸೂಫಿಯು ರಾಜನಿಗೆ ದಾನ ಮಾಡಿ ಅಹಂ ನಿಂದ ತಾಳ್ಮೆ ಕಳೆದುಕೊಂಡ ಸುಲ್ತಾನ್ ನಿಗೆ ಹೇಳುವ ಮಾತು ನಮಗೂ ಅನ್ವಯಿಸುತ್ತದೆ. " ದಾನ ಮಾಡುವವನಿಗೆ ತಾನು ದಾನ ಕೊಡುತ್ತಿದ್ದೇನೆ ಎಂಬ ಭಾವನೆ ಇರಬಾರದು. ಇದು ದಾನದ ಮೊದಲ ಲಕ್ಷಣ, ತಾಳ್ಮೆ ಎರಡನೆ ಲಕ್ಷಣ, ಸಂಶಯ ಪಡದಿರುವುದು ಮೂರನೆ ಲಕ್ಷಣ, ಈ ಮೂರು ಲಕ್ಷಣಗಳಿಲ್ಲದ ಜಾಗದಲ್ಲಿ ದಾನವೆಂಬ ಗುಣವಿರದು" ಎಂತಹ ಸಾರ್ವಾಕಾಲಿಕ ಸತ್ಯ ಅಲ್ಲವೇ?


ಹೀಗೆ ನಲವತ್ತು ಕಥೆಗಳು ಒಂದಕ್ಕಿಂತ ಒಂದು ಚಿಂತನೆಗೆ ಹಚ್ಚುವ ಬುದ್ಧಿ ಹೇಳುವ ಮತ್ತು ನಮ್ಮ ತಿದ್ದುವ ಕಥೆಗಳಾಗಿವೆ ಮತ್ತೊಮ್ಮೆ ಓದಲು ಪ್ರೇರಣೆ  ನೀಡುವ ಕಥೆಗಳು ಇನ್ನೊಂದು ಬಾರಿ ಓದುವಾಗ ಬೇರೆ ಹೊಳವು ಕಾಣುತ್ತದೆ.


ಈ ಕಥಾಸಂಕಲನದ ಕಥೆಗಳ ಶೀರ್ಷಿಕೆಗಳು ನನಗೆ ಬಹಳ ಇಷ್ಟ ಆದವು ಅವು ಕಥೆಗೆ ಅಷ್ಟೇ ಚೆನ್ನಾಗಿ ಹೊಂದಿಕೆಯಾಗಿವೆ .

 ಬೆಳಗಿನೊಳಗಣ ಬೆಳಗು, ಮರಣವಾರಿಗೂ, ಮನ್ನಣೆಯಿಲ್ಲ,ಭವಿಯೆಂಬುದು ಹುಸಿ, ಊರೊಳಗಣ ಕಿಚ್ಚು ಕಾನನದಲ್ಲಿ ಉರಿಯಿತ್ತು,ಬೆಳಗು ಕತ್ತಲೆಯ ನುಂಗಿ, ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು, ಆಗದಂತೆ ಆದೆನು , ಅವ ಕಾಯಕವಾದೊಡೂ ಒಂದೇ,

ಇದಂ ಮಿತ್ತಂ,

ನೆಲದ ಮುಂದಣ ಬಾಗಿಲು,

ಸಾವಿಗಿಂತ ಮುಂಚೆ ಸಾವು, ಆದಿಯ ಕಂಡೆ, ಅನಾದಿಯ ಕಂಡೆ,

ದೇವನ ಆಟ ಬಲ್ಲವರಾರು?ಹಿಂದನರಿಯದದು ಮುಂದೇನಬಲ್ಲುದೊ?

 ಬಯಲು ಆಲಯದೊಳಗೋ!

 ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ,

ಮನದ ಆಸೆಯೇ ಮಾಯೆ ಕಾಣಾ, ತನಗೆ ತಾನೇ ಪ್ರಮಾಣ,

ವಿಚಾರವೆಂಬ ಹೂವಾಯಿತ್ತು,

ನೀ ಮಾಯೆಯೋ ನಿನ್ನೊಳು ಮಾಯೆಯೋ?  


ಇಂತಹ ವಚನಗಳ ಸಾಲಿನ ಆಧಾರದ ಶೀರ್ಷಿಕೆಗಳ  ಕಥೆಯಲ್ಲಿರುವ  ಸಾರವನ್ನು ನೀವು ಓದಿಯೇ ಸವಿಯಬೇಕು.

ಇಂತಹ ಸದಭಿರುಚಿಯ ಪುಸ್ತಕ ಪ್ರಕಾಶನ ಮಾಡಿದ ಕಲ್ಪತರು ಪ್ರಕಾಶನ ಕ್ಕೆ ಮತ್ತು ಲೇಖಕರಾದ ಎಂ ವಿ . ಶಂಕರಾನಂದ ರವರಿಗೆ ಧನ್ಯವಾದಗಳು ಅವರ ಲೇಖನಿಯಿಂದ ಇನ್ನಷ್ಟು ಪುಸ್ತಕಗಳು ಕನ್ನಡಿಗರ ಮನೆ ಮನ ಸೇರಲಿ ಎಂದು ಹಾರೈಸುವೆ .


 ಪುಸ್ತಕ: ಬೆಳಗು ಕತ್ತಲೆಯ ನುಂಗಿ

ಸೂಫಿ ಕಥೆಗಳು

ಲೇಖಕರು: ಎಂ ವಿ ಶಂಕರಾನಂದ

ಪ್ರಕಾಶನ: ಕಲ್ಪತರು ಪ್ರಕಾಶನ. ತುಮಕೂರು.8971302974

ಬೆಲೆ:150


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529










ಇರುವುದೊಂದೇ ಹೃದಯ....


 



ಇರುವುದೊಂದೇ ಹೃದಯ.


ನಾವು ಜೀವಂತವಾಗಿರಲು 

ಸದಾ ಮಿಡಿಯುತಿರಬೇಕು 

ನಮ್ಮ ಹೃದಯ|

ಅದಕ್ಕೆ ಪ್ರತಿದಿನ ನಾವು

ದಂಡಿಸುತ್ತಿರಬೇಕು

ನಮ್ಮ ಕಾಯ ||


ಇಂದಿನ ಜೀವನ ಶೈಲಿ, ಆಹಾರ ಪದ್ಧತಿ ಇವುಗಳು ನಮ್ಮ ದೇಹದ ತೂಕದ ಮೇಲೆ ಗಣನೀಯವಾಗಿ ಪರಿಣಾಮ ಬೀರಿ ನಮ್ಮ ದೇಹ ಅಡ್ಡಡ್ಡ ಬೆಳೆಯಲು ಕಾರಣವಾಗಿವೆ .ಇದರ ಜೊತೆಯಲ್ಲಿ ನಾವೇ ಸೃಷ್ಟಿ ಮಾಡಿಕೊಂಡ ಅನವಶ್ಯಕ ಒತ್ತಡ ನಮ್ಮ ಹೃದಯ ಅಳುವಂತೆ ಮಾಡಿದೆ.ಇದು ಎಲ್ಲರಿಗೂ ಗೊತ್ತಿದ್ದೂ ಹೃದಯದ ಕರೆಗೆ ಕಿವುಡಾಗಿರುವೆವು ಇವೆಲ್ಲದರ ಪರಿಣಾಮ ಇಂದು ಭಾರತ ಹೃದಯಾಘಾತದ ರಾಜಧಾನಿಯಾಗಿ ಪರಿವರ್ತಿತವಾಗಿದೆ.


ಅಕಾಲಿಕವಾಗಿ ಯುವ ಮನಸುಗಳು ಹೃದಯ ಸ್ತಂಭನಕ್ಕೆ ಬಲಿಯಾಗುವ ಸುದ್ದಿ ಕೇಳಲು ಓದಲು ನಮ್ಮ ಹೃದಯಗಳು ಭಾರವಾಗುತ್ತವೆ .ಆ ಕ್ಷಣ ಮಾತ್ರ ನಮ್ಮ ಹೃದಯ ರಕ್ಷಣೆಗೆ ಪಣ ತೊಡುವವರಿಗೆ ಕಡಿಮೆಯೇನಿಲ್ಲ ಮರುಕ್ಷಣ .ಅದೆಲ್ಲ ಮರೆತು ಅದೇ ಕೆಟ್ಟ ಜೀವನ ಶೈಲಿ ,ಅವೇ ದುರಭ್ಯಾಸಗಳು, ಬೆಳಿಗ್ಗೆ ಎಂಟು ಗಂಟೆಯ ಮೇಲೆ ಏಳುವುದು, ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಚಿಂತೆ, ಅನವಶ್ಯಕ ಸ್ಪರ್ಧೆಗೆ ಇಳಿವುದು, ಅನೈತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಂದುವರೆದೇ ಇರುತ್ತದೆ. ಮತ್ತೊಮ್ಮೆ ನಮ್ಮ ಹೃದಯ ನಮಗೆ ನೆನಪಾಗುವುದು ನಮ್ಮ ಅತ್ಮೀಯರಿಗೆ ಯಾರಿಗಾದರೂ ಹೃದಯಾಘಾತ ಅದಾಗ ಅಥವಾ ಪತ್ರಿಕೆಯಲ್ಲಿ ವಿಶ್ವ ಹೃದಯ ದಿನ ಎಂಬ ಹೆಡ್ಲೈನ್ ಓದಿದಾಗ.


ಆತ್ಮೀಯರೆ ನಮ್ಮ ಹೃದಯ ನಮ್ಮ ಹೆಮ್ಮೆ .ನಮ್ಮ ಜೀವದ ಆಧಾರ. ತಿಳಿದು ತಿಳಿದೂ‌ ಇರುವ ನಮ್ಮ ಒಂದೇ ಹೃದಯವನ್ನು ‌ನಿರ್ಲಕ್ಷ್ಯ ಮಾಡದಿರೋಣ.

ದಿನದಲ್ಲಿ ಕನಿಷ್ಠ ಅರ್ಧ ಗಂಟೆ ದೈಹಿಕ ಚಟುವಟಿಕೆಗಳನ್ನು ಮಾಡೋಣ. ಅನವಶ್ಯಕ ಚಿಂತೆ ಮಾಡದಿರೋಣ ,ಹೃದಯ ಕಾಪಾಡುವ ಬಗ್ಗೆ, ನಮ್ಮ ಆರೋಗ್ಯ ಕಾಪಾಡುವ ಬಗ್ಗೆ ಚಿಂತನ ಮಂತನ ಮಾಡೋಣ.‌ಅನಾರೋಗ್ಯಕರ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳೋಣ. ಅನವಶ್ಯಕ ಒತ್ತಡ ಕಡಿಮೆ ಮಾಡಿಕೊಳ್ಳೋಣ. ಯೋಗ ಧ್ಯಾನದ ಕಡೆ ಮುಖ ಮಾಡೋಣ. ಸಮತೋಲನ ಮತ್ತು ಆರೋಗ್ಯಕರ ಆಹಾರದ ಕಡೆ ಮುಖ ಮಾಡೋಣ .ದುರಭ್ಯಾಸಗಳನ್ನು ತ್ಯಜಿಸೋಣ. ನಮ್ಮ ನಮ್ಮ ನಂಬಿದ ಹೃದಯಗಳೊಂದಿಗೆ  ದೀರ್ಘ ಕಾಲ ಬಾಳಿಗಾಗಿ, ಇರುವ ನಮ್ಮ ಹೃದಯ ಉಳಿಸಲು ಹೃದಯದ ಮಾತು ಕೇಳೋಣ .ಏಕೆಂದರೆ ನಮಗೆ ಇರುವುದೊಂದೇ ಹೃದಯ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಪ್ರಜಾಪ್ರಗತಿ ೨೯/೯/೨೧


 

26 September 2021

ಟೆಂಟ್


 


ಹನಿಗವನ

ಬೇಕಿಲ್ಲ ನನಗೆ ಬಂಧನದಂತೆ
ಕಾಣುವ ಅಪಾರ್ಟ್‌ಮೆಂಟ್|
ಸುಂದರ ಪರಿಸರದಲಿ
ಇದ್ದರೂ ಸುಖವಾಗಿರುವೆ
ಹಾಕಿಕೊಂಡು ಸಣ್ಣ ಟೆಂಟ್||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

ಚಿನ್ನಮ್ಮನ ಸೈಕಲ್ .ವಿಶ್ವ ಹೆಣ್ಣುಮಕ್ಕಳ ದಿನದ ನೆನಪಿಗೆ


 ಶಿಶುಗೀತೆ 




*ಚಿನ್ನಮ್ಮನ ಸೈಕಲ್*


ಮೂರು ಗಾಲಿಯ ಸೈಕಲ್

ತುಳಿಯುತ ಬಂದಳು ಚಿನ್ನಮ್ಮ

ಹಿಂದಕೆ ಮುಂದಕೆ ಚಲಿಸಿ 

ನಲಿಯುತ ಇದ್ದಳು ಕಂದಮ್ಮ||


ಟ್ರಿಣ್ ಟ್ರಿಣ್ ಬೆಲ್ಲು ಒತ್ತುತಾ 

ಮನೆಯಲ್ಲೆಲ್ಲಾ ಸುತ್ತಿದಳು

ಸಂತಸದಿಂದ ನಕ್ಕು ನಲಿಯುತ

ನಗುವಿನ ವದನ ತೋರಿದಳು||


ಜೋರಾಗಿ ತುಳಿಯುತ  ಮುಗುಚಿ

ಬಿದ್ದಿತು ಸೈಕಲ್ಲು

ಅಪ್ಪ ಎತ್ತಿದರು ನೋಡಿದರಾಗ

ಮುರಿದು ಬಿದ್ದಿತ್ತು ಒಂದಲ್ಲು||


ಅಳುತಲಿ ಅಮ್ಮನ ಮಡಿಲು

ಸೇರಿದಳು ಚಿನ್ನಮ್ಮ

ಕೋಲನು  ಎತ್ತುತಾ ಸೈಕಲ್ಗೆ

ಎರಡೇಟು ಕೊಟ್ಟರು ಅವರಮ್ಮ ||



ಅಪ್ಪ ಹೇಳಿದರು ಮತ್ತೆ ತುಳಿ

ಅದೇ ಸೈಕಲ್ಲು

ತಲೆಯಾಡಿಸುತಾ ಮಗಳು

ತೋರಿದಳು ಮುರಿದ ಹಲ್ಲು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ನನ್ನ ಪುತ್ರಿಯರು


 




ವಿಶ್ವ ಹೆಣ್ಣುಮಕ್ಕಳ ದಿನದ ನೆನಪಿಗಾಗಿ 


"ಚುಟುಕುಗಳು*



ನನಗೆ ಬಹಳ ಹೆಮ್ಮೆ

ನಮ್ಮನೆಯಲಿವೆ ಮುತ್ತು

ರತ್ನಗಳು |

ಅವರೇ ನನ್ನೆರಡು ಕಣ್ಣುಗಳಾದ 

ಹೆಣ್ಣು ಮಕ್ಕಳು ||



ಜ್ಞಾನ ,ವಿನಯ, ಭಕ್ತಿ ಸದ್ಗುಣದಲಿ

ಅವರಿಗೆ ಸಾಟಿ ಇನ್ನಾರು|

ಸಮಯ ಬಂದರೆ ಗುರುವಿಗೆ ಗುರು ನನ್ನ ಪುತ್ರಿಯರು ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ





ಕಾಲಿಲ್ಲದೇ ಕೈಯಲ್ಲೇ ಓಡಿದ ಕ್ಲಾರ್ಕ್ .ಲೇಖನ


 



*ಕಾಲಿಲ್ಲದೇ ಕೈಯಲ್ಲೇ ಓಡಿದ ಕ್ಲಾರ್ಕ್* 


ಒಲಿಂಪಿಕ್ಸ್ ನಲ್ಲಿ ಮೆಡಲ್ ಗಳಿಸಿದವರ ಹೆಮ್ಮೆಯಿಂದ ಕೊಂಡಾಡಿದ್ದೇವೆ ಪ್ಯಾರಲಿಂಪಿಕ್ಸನಲ್ಲಿ ವಿಶೇಷಚೇತನರು  ಪದಕ ಗೆದ್ದದ್ದನ್ನು ಬೆರಗುಗಣ್ಣಿನಿಂದ ನೋಡಿ ಹಾರೈಸಿ ಅಭಿನಂದಿಸಿದ್ದೇವೆ .

ಇಲ್ಲೊಬ್ಬ ಸಾಧಕನಿರುವನು  ಎರಡೂ ಕಾಲುಗಳಿಲ್ಲದಿದ್ದರೂ  

ಇರುವ ಎರಡು ಕೈಗಳಿಂದಲೇ ಕೇವಲ 4.78 ಸೆಕೆಂಡ್ಗಳಲ್ಲಿ ಬರೋಬ್ಬರಿ 20 ಮೀಟರ್ಗಳನ್ನು ಕ್ರಮಿಸಿ, ಮೊನ್ನೆಯಷ್ಟೇ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದ ಛಲದಂಕ ಮಲ್ಲ!! 

ಈ ಸಾಧಕನ ಹೆಸರು ಜ಼ಯ್ನ್ ಕ್ಲಾರ್ಕ್(Zion Clerk)!

ಅಪ್ರತಿಮ ಕುಸ್ತಿಪಟುವೂ ಆಗಿರುವ ಜ಼ಯ್ನ್ನ ಮಾತುಗಳು, ಆತನ ಜೀವನೋತ್ಸಾಹ ನಮ್ಮೆಲ್ಲರ ಬದುಕಿನಲ್ಲಿ ಏನನ್ನಾದರೂ ಸಾಧಿಸುವವರಿಗೆ  ನವಚೈತನ್ಯ ತುಂಬಿಬಿಡುತ್ತವೆ.


 23 ವರ್ಷದ ಕ್ರೀಡಾಪಟು ವ್ಯಕ್ತಿತ್ವ ವಿಕಸನ ಭಾಷಣಕಾರ, ಮತ್ತು ಕುಸ್ತಿ ಪಟು ಆಗಿರುವ ಇವರು ತನ್ನ ಸಾಧನೆಯು ಇತರ ವಿಶೇಷ ಚೇತನ ಮಕ್ಕಳಿಗೆ   ದೊಡ್ಡ ಕನಸು ಕಾಣಲು ಪ್ರೇರೇಪಿಸಲಿ  ಎಂಬ ಆಶಯ ಹೊಂದಿರುವರು.


 ಯುಎಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಕಾಲುಗಳಿಲ್ಲದೆ ಜನಿಸಿದ ಕ್ಲಾರ್ಕ್, ಕಾಡಲ್ ರಿಗ್ರೆಷನ್ ಸಿಂಡ್ರೋಮ್ ಎಂದು ಕರೆಯಲ್ಪಡುವ ಕಾಯಿಲೆಯಿಂದ ಬಳಲುತ್ತಿದ್ದಾನೆ, ಅಪರೂಪದ ವೈದ್ಯಕೀಯ ಸ್ಥಿತಿಯಲ್ಲಿ ದೇಹದ ಕೆಳಗಿನ ಅರ್ಧದಷ್ಟು ಅಸಹಜ ಬೆಳವಣಿಗೆಯಿಂದ ಕ್ಲಾರ್ಕ್ ಇಂದು ಈ ಸ್ಥಿತಿಯಲ್ಲಿ ಇರುವರು.

ಅನಾಥರಾದ ಕ್ಲಾರ್ಕ್ ರವರನ್ನು ದತ್ತು ತೆಗೆದುಕೊಳ್ಳುಲು ಯಾರೂ ಮುಂದೆ ಬರಲಿಲ್ಲ.

ಕೊನೆಗೆ ಮಾತೃ ಹೃದಯದ ಪ್ರೀತಿಯ ತಾಯಿ ಕಿಂಬರ್ಲಿ ಹಾಕಿನ್ಸ್ ದತ್ತು ತೆಗೆದುಕೊಂಡರು.ಈಗಲೂ ಹಾಕಿನ್ಸ್ ಪ್ರೀತಿ ಮತ್ತು ಹಾರೈಕೆ ಕ್ಲಾರ್ಕ್ ನ್ನು ಗಟ್ಟಿ ಗೊಳಿಸಿ ಸಾಧನೆಗೆ ಪೂರಕವಾಗಿದೆ.


 ಚಿಕ್ಕ ವಯಸ್ಸಿನಿಂದಲೂ, ಅವರ ಅಂಗವೈಕಲ್ಯವು ಅವರನ್ನು ದೃತಿಗೆಡುವಂತೆ ಮಾಡಲಿಲ್ಲ 

 ಅವರ ಪ್ರೌಢಶಾಲೆಯ ದಿನಗಳಲ್ಲಿ, ಅವರು ಕುಸ್ತಿಪಟುವಾಗಿದ್ದರು.ಶಾಲಾ ಜಿಮ್ಗೆ ಹಿಂದಿರುಗಿದ ಅವರು ಅದ್ಭುತವಾದ ಸಾಧನೆಯನ್ನು ಸಾಧಿಸಿದರು, ಈಗ ಪ್ರಸ್ತುತ 20 ಮೀಟರ್ ದೂರವನ್ನು ಕೇವಲ4.78 ಸೆಕೆಂಡುಗಳಲ್ಲಿ ಕೈಗಳ ಸಹಾಯದಿಂದ ಓಡಿ ವಿಶ್ವ ದಾಖಲೆಯನ್ನು ಮಾಡಿರುವರು


 "ಗಿನ್ನಿಸ್ ವಿಶ್ವ ದಾಖಲೆಯನ್ನು ಮಾಡಿದ ಸಂಧರ್ಭದಲ್ಲಿ ಕ್ಲಾರ್ಕ್

ಅವರ ತಾಯಿ, ಸ್ನೇಹಿತರು ಮತ್ತು ಟ್ರ್ಯಾಕ್ ತರಬೇತುದಾರ, ಒಲಿಂಪಿಕ್ ಗೋಲ್ಡ್ ಮೆಡಲಿಸ್ಟ್ ಮತ್ತು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಬುಚ್ ರೆನಾಲ್ಡ್ಸ್ ಅವರ ಬೆಂಬಲಕ್ಕೆ ಧನ್ಯವಾದಗಳನ್ನು ಹೇಳಲು ಮರೆಯುವುದಿಲ್ಲ. ಕ್ಲಾರ್ಕ್ 

ಇಂದಿನ ಯುವಪೀಳಿಗೆಗೆ ಉತ್ತಮ ಮಾದರಿ ಕೂಡಾ ಅವರು ಯುವಕರಿಗೆ ಮತ್ತು ವಿಶೇಷಚೇತನರ ಕುರಿತು ಹೀಗೆ ಹೇಳುತ್ತಾರೆ


 "ಜೀವನದಲ್ಲಿ ನನ್ನ ಗುರಿ ಏನೆಂದರೆ ಮಕ್ಕಳು ಜೀವನದಲ್ಲಿ ಏನಾಗಬೇಕೆಂಬುದನ್ನು ನಾವು  ಪ್ರೇರೇಪಿಸಬೇಕು , ನೀವು ಏನು ಮಾಡಲು ಸಾಧ್ಯವಿಲ್ಲ ಎಂದು ಯಾರಿಗೂ ಹೇಳಬೇಡಿ ಅವರಲ್ಲಿ ಆತ್ಮ ವಿಶ್ವಾಸ ತುಂಬಿ " ಎಂಬ ಸಂದೇಶ ನೀಡುತ್ತಾರೆ.

 


 ಬಾಲ್ಯದಲ್ಲಿ ಕಿರುಕುಳ ಮತ್ತು ನಿಂದನೆ, ಅನುಭವಿಸಿದ ಕ್ಲಾರ್ಕ್ ಗೆ ಅವರ ಸಾಧನೆ  ಸುಲಭದ್ದಾಗಿರಲಿಲ್ಲ.  ಆದರೆ ಅವರು ನಿರಂತರವಾಗಿ ತನ್ನ ಮಿತಿಯನ್ನು ಮೀರಿ ಸರಳವಾದ ಧ್ಯೇಯವಾಕ್ಯದೊಂದಿಗೆ ಸತತ ಪ್ರಯತ್ನ ಪಡುತ್ತಾ ಆತ್ಮವಿಶ್ವಾಸದಿಂದ ಈ ಸಾಧನೆ ಮಾಡಿದ್ದಾರೆ .

ತನ್ನ ನಿರಂತರ ಪ್ರಯತ್ನದ ಮೂಲಕ 

 2024 ರ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಅವರು ಎದುರು ನೋಡುತ್ತಿದ್ದಾರೆ.  ಅವರು ಒಲಿಂಪಿಕ್ಸ್ (ಕುಸ್ತಿ) ಮತ್ತು ಪ್ಯಾರಾಲಿಂಪಿಕ್ಸ್ (ಗಾಲಿಕುರ್ಚಿ ರೇಸಿಂಗ್) ಗೇಮ್ಸ್ ಎರಡರಲ್ಲೂ ಭಾಗವಹಿಸುವ ಮೊದಲ ಅಮೇರಿಕನ್ ಅಥ್ಲೀಟ್ ಆಗಲು ಬಯಸುತ್ತಿದ್ದಾರೆ ತನ್ಮೂಲಕ ಕೋಟ್ಯಂತರ ಜನರ ಪ್ರೇರಕ ಶಕ್ತಿಯಾಗಿ ಹೊರಹೊಮ್ಮಲಿದ್ದಾರೆ 

ಹ್ಯಾಟ್ಸಾಪ್ ಟು ಯೂ ಕ್ಲಾರ್ಕ್.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


 

*ಇಂದಿನ ಬೆವರ ಹನಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಗಜಲ್ ಮತ್ತು ಕೋಟೆ ಕುಮಾರ್ ಸರ್ ರವರ ರೇಖಾ ಚಿತ್ರ೨೬/೯.೨೧*


 

ಇಂದಿನ ಜನಮಿಡಿತ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ೩೬/೯/೨೧


 

25 September 2021

ವೈಬ್ರಂಟ್ ಮೈಸೂರು ೨೫/೯/೨೧


 

ಗಜಲ್


 


ಗಜಲ್ 


ನಿನ್ನೊಡನೆ ಕಳೆದ ನೆನಪುಗಳ ಬುತ್ತಿ ಬಿಚ್ಚಿ ಮೆಲುಕು ಹಾಕುತಿರುವೆ 

ನೀನಿತ್ತ ಉಡುಗೊರೆಗಳ ನೋಡುತಾ

ಮೈ ಮರೆಯುತಿರುವೆ.


ನೀನಿಲ್ಲದೆ ಸಾಯಲೂ ಮನಸಿಲ್ಲದೆ ಬದುಕುತಿರುವೆ 

ಭರವಸೆಯ ಜೋಕಾಲಿಯ ಕಟ್ಟಿ ಜೀಕುತಿರುವೆ 


ಒಲವ ಪಡೆಯಲು ಅವಸರ ಬೇಕಿಲ್ಲ

ಎಂದು ಕಲಿಯುತಿರುವೆ

ಚೆಲುವಾಗಿರುವುದೆಲ್ಲಾ ನಂಬಿಕೆಗೆ ಅರ್ಹವಲ್ಲ ಎಂದು ಅರಿಯುತಿರುವೆ


ಸವಿನೆನೆಪುಗಳ ಮೆಲುಕು ಹಾಕಲು

ಶುಲ್ಕ ಬೇಡವೆಂದು ತಿಳಿಯುತಿರುವೆ

ಮನದಲೊಂದು ಮಹಲು ಕಟ್ಟಿ

ನಿನ್ನನ್ನು ಕರೆಯುತಿರುವೆ 


ಬಾಳಲಿ ಸಿಹಿಜೀವಿ ಬರುವಳೆಂಬ ಆಸೆಯಲಿ ಬದುಕುತಿರುವೆ  

ಭರವಸೆಯ ಕಣ್ಗಳಲಿ ನಿನ್ನ  ಹಾದಿಯನೆ ನೋಡುತಿರುವೆ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ




ದೋತಿ


 ದೋತಿ!


ಸೀಡಿ, ಡೀವಿಡಿ ಪುರಾಣ

ನೋಡಿದ ಮೇಲೆಇ ಬೇಸರವಾಗಿ

ಜನರು  ತೀರ್ಮಾನಿಸಿದ್ದರು  ನೋಡಬಾರದೆಂದು

ರಾಜಕಾರಣಿಗಳ ಮೂತಿ|

ಸದನದಲ್ಲಾದರೂ ಗಂಭೀರವಾಗಿ

ಇರುವರೆಂದು ನಿರೀಕ್ಷೆ ಇತ್ತು

ಅಲ್ಲೂ ಉದುರಿಸಿಬಿಟ್ಟರು

ತಮ್ಮ ದೋತಿ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಜನಮಿಡಿತ ೨೫/೯.೨೧


 

*ಇಂದಿನ ಸಿಂಹಧ್ವನಿ ಪತ್ರಿಕೆಯಲ್ಲಿ*...೨೫/೯.೨೧


 

24 September 2021

ದುರ್ಗಾ ದೇವಿಗೆ ನಮನ


 

ದುರ್ಗಾ ದೇವಿಯೆ ನಿನಗೆ
ನನ್ನ ನಮನ
ದಯಮಾಡಿ ನೀಡು
ನಮ್ಮೆಡೆಗೆ ಗಮನ.

ಮನದಲೇನೋ ಬೇಗೆ
ನಿಂತಲ್ಲೆ ತಲ್ಲಣ
ದುಷ್ಷರ ಹಿಂಸೆ, ದುರ್ಗುಣಕೆ
ತಳಮಳಿಸಿದೆ ಜನಗಣ.

ರಕ್ಕಸರ ತರಿದವಳೆ
ಶಿಷ್ಟರ ರಕ್ಷಿಪಳೆ
ತರಿದು ಬಿಡು ಖೂಳರ
ಸ್ವಚ್ಚವಾಗಲಿ ಇಳೆ .

ಅಜ್ಞಾನಿಗಳಲಿ ಜ್ಞಾನ
ಬೀಜವ ಬಿತ್ತಿ ಬಿಡು
ಜಗವಾಗಲಿ ಸುಖ
ಶಾಂತಿಯ ಬೀಡು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


23 September 2021

ರೋಗ .ಹನಿ

ನಮ್ಮದು ಬಾಡಿಗೆ ಮನೆ ನೆಲ ಅಂತಸ್ತಿನ ಮನೆ ತಾರಸಿ ಲಭ್ಯವಿಲ್ಲ. ಮನೆ ಮುಂದೆ ಖಾಲಿ ಜಾಗವೂ ಇಲ್ಲ ಹಾಗಾಗಿ ತಾರಸಿ ತೋಟ ಮಾಡಲು ಅವಕಾಶ ಇಲ್ಲ .


ಜೊತೆಗೆ ಸ್ವಲ್ಪ ನಾನು ಸೋಮಾರಿ ಅದು ಕೂಡಾ ಕಾರಣ ಇರಬಹುದು .


ನನಗೂ ಆಸೆ 

ಬೆಳೆಸಲು ಕೈತೋಟ

ಬಳಸಿಕೊಂಡು ಮನೆಯ

ಖಾಲಿ ಜಾಗ|

ಇದುವರೆಗೂ ಅದು

ಜಾರಿಗೆ ಬಂದಿಲ್ಲ

ಏಕೆಂದರೆ ನನಗಿದೆ ತುಸು

ಮುಂದೂಡುವ ರೋಗ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ




 

20 September 2021

ಎಣ್ಣೆ ಬೆಲೆ ಯಾವಾಗ ಇಳಿಯುವುದು?


 ಎಣ್ಣೆ ಬೆಲೆ ಯಾವಾಗ ಇಳಿವುದು?

ಮಾದ್ಯಮಗಳಲ್ಲಿ ಯಾವಾಗಲೂ ಎಣ್ಣೆಯದೇ ಸುದ್ದಿ . ಅದು ತಲೆಗೆ ಹಾಕುವ ಎಣ್ಣೆ ಆಗಬಹುದು, ಹೊಟ್ಟೆಗೆ ಹಾಕುವ ಎಣ್ಣೆ ಆಗಬಹುದು, ಅಡುಗೆ ಎಣ್ಣೆ ಆಗಬಹುದು ..

ಬಜೆಟ್ ಅನಂತರ ಎಣ್ಣೆ ಬೆಲೆ ಏರಿಕೆ ಸಾಮಾನ್ಯ. ಆದರೆ ಈಗ ಅಕಾಲಿಕವಾಗಿ ಅಡುಗೆ ಎಣ್ಣೆ ಬೆಲೆ ಗಗನಚುಂಬಿಯಾಗಿದ್ದು ಸಾರ್ವಜನಿಕ ಜೀವನದ ಮೇಲೆ ದುಷ್ಪರಿಣಾಮ ಬೀರಿದ್ದು ಸುಳ್ಳಲ್ಲ.

ಇತ್ತೀಚಿನ ದಿನಗಳಲ್ಲಿ


ಅಡುಗೆ ತೈಲ ಬೆಲೆ ಗಗನಕ್ಕೇರಲು ಮೊದಲ ಕಾರಣ ಅಂತರರಾಷ್ಟ್ರೀಯ ಮಟ್ಟದಲ್ಲಿ ತಾಳೆ ಎಣ್ಣೆ ಬೆಲೆ ಏರಿಕೆ.

ಎರಡನೆಯ ಕಾರಣ ಭಾರತದ ಎಣ್ಣೆ ಕಾಳುಗಳ ಉತ್ಪಾದನೆ ಕಡಿಮೆ ಆಗಿರುವುದು.
   ಮೂರನೆಯದಾಗಿ ತೈಲಕ್ಕೆ   ಹೆಚ್ಚುತ್ತಿರುವ ಬೇಡಿಕೆ .
ಕೊನೆಯದಾಗಿ ಹಣದುಬ್ಬರ ಸಹ ತನ್ನ ಕೊಡುಗೆ ನೀಡಿದೆ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತದ ತಾಳೆ ಎಣ್ಣೆಯ ಆಮದು 8300 ಮೆಟ್ರಿಕ್ ಟನ್ , ಇದು 1964 ರಲ್ಲಿ ಕೇವಲ 7 ಮೆಟ್ರಿಕ್ ಟನ್ ಎಂದರೆ ನಮ್ಮ ಎಣ್ಣೆಯ  ಬೇಡಿಕೆ ಎಷ್ಟಿರಬಹುದು ಎಂಬುದು ತಿಳಿಯುತ್ತದೆ. ಇಂತಹ ಪರಿಸ್ಥಿತಿಯ ಲಾಭ ಪಡೆಯಲು ಇಂಡೋನೇಷ್ಯಾ ದಂತಹ ರಾಷ್ಟ್ರಗಳು ಬೆಲೆ ಹೆಚ್ಚಳ ಮಾಡಿ ನಮ್ಮ ದೇಶದ ಅಡುಗೆ ಕೋಣೆಗಳಲ್ಲಿ ಪರೋಕ್ಷವಾಗಿ ಆತಂಕ ಮೂಡಿಸುತ್ತವೆ.

ಇದಕ್ಕೆ ಪರಿಹಾರವಾಗಿ ನಾವೇ ತಾಳೆ ಎಣ್ಣೆಯನ್ನು ಹೆಚ್ಚು ಉತ್ಪಾದನೆ ಮಾಡಬಹುದು ಎಂದು ಸಲಹೆ ನೀಡುವವರ ಸಂಖ್ಯೆ ಏನೂ ಕಡಿಮೆಯಿಲ್ಲ . ಅದಕ್ಕಾಗಿ ಈ ಅಂಕಿ ಅಂಶ ನೋಡಿ. ಭಾರತ ತಾಳೆ ಎಣ್ಣೆ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಹದಿನೇಳನೇ ಸ್ಥಾನ ಪಡೆದಿದೆ, ವರ್ಷಕ್ಕೆ 2 ಲಕ್ಷ ಟನ್ ತಾಳೆ ಉತ್ಪಾದನೆ ಮಾಡಿದರೂ ಅದು ಪ್ರಪಂಚದ ಉತ್ಪಾದನೆಯ 0.5 % ಎಂದರೆ ನಮಗೆ ಅರ್ಥವಾಗುತ್ತದೆ ನಾವು ವಿದೇಶಗಳ ಮೇಲೆ ಹೇಗೆ ಅವಲಂಬಿತವಾಗಿದ್ದೇವೆ ಎಂದು.

ಹಾಗಾದರೆ ನಮ್ಮ ದೇಶದಲ್ಲಿ ಇದರ ಉತ್ಪಾದನೆ ಯಾಕೆ ಹೆಚ್ಚಾಗಿಲ್ಲ ? ಸರ್ಕಾರಗಳು ಏಕೆ ಕ್ರಮ ಕೈಗೊಂಡಿಲ್ಲ ? ಎಂದು ವಿತಂಡವಾದ ಮಾಡುವ ವೀರರಿಗೆ ಈ ಅಂಕಿ ಅಂಶ ಉತ್ತರ ನೀಡುತ್ತದೆ.ತಾಳೆ ಗಿಡಗಳ ಪೋಷಣೆಗೆ ಪ್ರಖ್ಯಾತಿ ಪಡೆದಿರುವ  ಇಂಡೋನೇಷ್ಯಾ, ಮಲೇಷ್ಯಾ ಗಳಲ್ಲಿ ವಾರ್ಷಿಕ ಮಳೆ ಪ್ರಮಾಣ2500 mm ಭಾರತದ ವಾರ್ಷಿಕ ಮಳೆ 1000 mm ಇಷ್ಟು ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಹೆಚ್ಚು ತಾಳೆ ಉತ್ಪಾದನೆ ಅಸಾಧ್ಯ.

ಇನ್ನೂ ಬೇಡಿಕೆಯ ವಿಷಯಕ್ಕೆ ಬಂದರೆ 2002 ನೇ ಇಸವಿಯಲ್ಲಿ ತಾಳೆ ಎಣ್ಣೆ ಗೆ 25% ಬೇಡಿಕೆ ಇದ್ದು 2014 ರಲ್ಲಿ 50% ಏರಿತ್ತು ಈಗ ಇನ್ನೂ ಹೆಚ್ಚಾಗಿದೆ.
ಅರ್ಥಶಾಸ್ತ್ರದ ಮೂಲಸಿದ್ದಾಂತದ ಪ್ರಕಾರ ಬೇಡಿಕೆ ಹೆಚ್ಚಾದರೆ ಬೆಲೆ ಹೆಚ್ಚಾಗುತ್ತದೆ ಎಂಬುದನ್ನು ತಿಳಿದ ವಿದೇಶಗಳು ಲಾಭದ ಆಸೆಗಾಗಿ ಬೆಲೆ ಏರಿಸಿವೆ ಅದಕ್ಕೆ ನಾವು ಬೆಲೆ ತೆರುತ್ತಿದ್ದೇವೆ.

ಹಾಗಾದರೆ ಸರ್ಕಾರಗಳು ಬೆಲೆ ನಿಯಂತ್ರಣ ಮಾಡದೇ ಸುಮ್ಮನೆ ಕುಳಿತಿವೆಯೇ? ಜನರ ಜೀವನದ ಬಗ್ಗೆ ಕಾಳಜಿ ಇಲ್ಲವೆ ? ಎಂಬ ಪ್ರಶ್ನೆ ಏಳುವುದು ಸಹಜ .
ಈ ದಿಸೆಯಲ್ಲಿ ಸರ್ಕಾರಗಳು ಸಹ ಕಾರ್ಯ ಪ್ರವೃತ್ತವಾಗಿವೆ ಆದರೆ ಇನ್ನೂ ಹೆಚ್ಚಿನ ಗಮನ ನೀಡುವುದು ಅಗತ್ಯ.
ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಸಂದರ್ಭದಲ್ಲಿ ತಾಳೆ ಬೆಳೆಯುವ ಬೆಳೆಗಾರರಿಗೆ ಹಲವಾರು ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಇದರ ಜೊತೆಗೆ ಸರ್ಕಾರಗಳು ಇತರೆ ಎಣ್ಣೆ ಕಾಳುಗಳ ಉತ್ಪಾದನೆ ಗೆ ರೈತರಿಗೆ ಪ್ರೋತ್ಸಾಹ ನೀಡಬೇಕಿದೆ.
ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ KOF(ಕರ್ನಾಟಕ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಲದ) ಕಾರ್ಯ ಶ್ಲಾಘನೀಯ. ಸರ್ಕಾರ ಇಂತಹ ಸಂಘಗಳಿಗೆ ಇನ್ನೂ ಹೆಚ್ಚಿನ ಬೆಂಬಲ ನೀಡಿ ಸೂರ್ಯಕಾಂತಿ, ಶೇಂಗಾ, ಕುಸುಬೆ , ಎಳ್ಳು ಮುಂತಾದ ಬೆಳೆಗಳನ್ನು ಹೆಚ್ಚು ಬೆಳೆಯಲು ಪ್ರೋತ್ಸಾಹ ಮಾಡಬೇಕು. ಇದರ ಜೊತೆಗೆ ಸರ್ಕಾರಗಳು ಹಣದುಬ್ಬರವನ್ನು ನಿಯಂತ್ರಿಸಲು ಸರ್ವ ಪ್ರಯತ್ನ ಮಾಡಬೇಕು. ಇದರ ಜೊತೆಗೆ ಸಾರ್ವಜನಿಕರಾದ ನಾವು ಯಾವುದೇ ವಸ್ತುಗಳ ಬೆಲೆ ಏರಿದಾಗ ಬರೀ ಸರ್ಕಾರಗಳ ಬಯ್ಯುತ್ತಾ ಕೂರದೆ ವಾಸ್ತವ ಪರಿಸ್ಥಿತಿ ಅರಿತು ಆ ಸಮಸ್ಯೆಗಳನ್ನು ಪರಿಹರಿಸಲು ನಾವೂ ಸಹ ಕೈಜೋಡಿಸಬೇಕಿದೆ.

ಒಟ್ಟಿನಲ್ಲಿ ಎಣ್ಣೆ ಸದಾ ಸುದ್ದಿಯಲ್ಲಿರುವುದು. ಖಾದ್ಯ ತೈಲ ಬೆಲೆ ಏರಿಕೆ ಯಿಂದ ಸುದ್ದಿ ಆಗದೆ ಇಳಿದು ಸುದ್ದಿಯಾಗಿ ನಮ್ಮ ಅರ್ಥವ್ಯವಸ್ಥೆಯು ವೃದ್ಧಿ ಆಗಲೆಂದು ಆಶಿಸೋಣ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

18 September 2021

ಬೆಳಗೆದ್ದು ಯಾರ ಮುಖವ .ಕಥೆ


 


*ಬೆಳಿಗೆದ್ದು ಯಾರ ಮುಖವ .......* 

ನ್ಯಾನೋ ಕಥೆ 

ಕಾರ್ ನಲ್ಲಿ ಒಬ್ಬನೇ ಹೋಗುತ್ತಿದ್ದ ವಿಲ್ಸನ್ ಕೊರಟಗೆರೆ ದಾಟಿ ಮೂರು ಕಿಲೋಮೀಟರ್ ಮುಂದೆ ಬಂದಿದ್ದ.  ದಾರಿಯ ಬದಿಯಲ್ಲಿ ಓರ್ವ ಮಹಿಳೆ ಮತ್ತು ಮದ್ಯ ವಯಸ್ಕ ಮಹಿಳೆ ಕಾರಿಗೆ ಅಡ್ಡ ಹಾಕಿ " ನಮ್ಮ ಬೈಕ್ ಕೆಟ್ಟಿದೆ,  ದಯಮಾಡಿ ಇವರನ್ನು ಮಧುಗಿರಿಗೆ ಬಿಡಿ , ನಾನು ಬೈಕ್ ರಿಪೇರಿ ಮಾಡಿಸಿಕೊಂಡು ಬರುವೆ" ಎಂದು ಕಾರಿನ ಡೋರ್ ತೆಗೆದು ಕಾರಿನಲ್ಲಿ ಕೂರಿಸಿಯೇ ಬಿಟ್ಟ. ಕಾರು ಚಲಿಸಿದಂತೆ ಆ ಹೆಂಗಸು ತನ್ನ ಮೈಮೇಲಿನ ಒಂದೊಂದೇ ಬಟ್ಟೆ ಬಿಚ್ಚಿ ವಿಲ್ಸನ್ ಜೊತೆ ಸೆಲ್ಪಿ ತೆಗೆದು .

"ಕಾರ್ ಸೈಡಿಗಾಕು, ನಿನ್ನಲ್ಲಿ ಹಣ ಒಡವೆ ಎಷ್ಟು ಇದೆ ತೆಗೆ ಎಂದಳು . ವಿಲ್ಸನ್ ಹೆದರಿ ಕಾರನ್ನು ರಸ್ತೆ ಪಕ್ಕ ನಿಲ್ಲಿಸಿದ"

ಅಷ್ಟೊತ್ತಿಗೆ ಬೈಕ್ ನಲ್ಲಿ ಬಂದ ಗಂಡಸು ಕಾರ್ ಬಳಿ ಬಂದು ಹಣ ಒಡವೆ ಪಡೆಯಲು ಹೆಂಗಸಿಗೆ ಸಹಾಯ ಮಾಡಿದ . 


ಈ ವಿಷಯ ಎಲ್ಲಾದ್ರೂ ಬಾಯಿ ಬಿಟ್ರೆ ರೇಪ್ ಕೇಸ್ ಹಾಕ್ತೀನಿ, ನಿನ್ ಮಾನ ಕಳೀತಿನಿ ಹಿಂದಕ್ಕೆ ನೋಡ್ದೇ ಸುಮ್ನೇ ನಡಿ" ಎಂದಳು ಹೆಂಗಸು .


ಭಯ, ಅಚ್ಚರಿ, ಆತಂಕದ ನಡುವೆ ಕಾರ್ ಸ್ಟಾರ್ಟ್ ಮಾಡಿದ ಕಾರ್ ನ ಮ್ಯೂಸಿಕ್ ಸಿಸ್ಟಮ್ ನಲ್ಲಿ 

" ಬೆಳಿಗೆದ್ದು ಯಾರ ಮುಖವ ನಾನು ನೋಡಿದೆ......"  ಹಾಡು ಬರುತ್ತಿತ್ತು...


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

16 September 2021

ಹೇಳಪ್ಪನ ಭಾಷಣ .


 


ಹೇಳಪ್ಪನ ಭಾಷಣ .ನ್ಯಾನೋ ಕಥೆ 


"ಇಂದು ವಿಶ್ವ ಓಜೋನ್ ದಿನ 

ನಾವೆಲ್ಲರೂ ಓಜೋನ್ ಪದರವನ್ನು ನಾಶ ಮಾಡುವ ಕಾರ್ಬನ್ ಡೈ ಆಕ್ಸೈಡ್ ಕಡಿಮೆ ಬಳಸಬೇಕು , ಡ್ಯೂಓಡರೆಂಟ್ ಬಳಸಲೇಬಾರದು, ತಂಗಳ ಪೆಟ್ಟಿಗೆಯಾದ ಪ್ರಿಡ್ಜ್ ಬಳಸಲೇಬಾರದು" ಎಂದು ಮಕ್ಕಳಿಗೆ ಹೇಳಪ್ಪನವರು  ಭಾಷಣ ಮಾಡುವಾಗ ಅವರ ಬಟ್ಟೆಯಿಂದ ಸೆಂಟ್ ವಾಸನೆ ಬರುತ್ತಿದ್ದುದನ್ನು ಮುಂದೆ ಕುಳಿತ ಸಹಾಸಿನಿ ಗಮನಿಸಿದಳು. ಭಾಷಣ ಮುಗಿಸಿ ಕುಳಿತ ಹೇಳಪ್ಪನವರು .ಕಾರ್ಯಕ್ರಮ ಸಂಘಕರಿಗೆ ಹೇಳಿದರು" ಒಂದು ಚಿಲ್ಡ್ ವಾಟರ್ ಬಾಟಲ್ ಕೊಡಪ್ಪ "   ಎಂದು ಕೇಳಿದಾಗ ಬಾಲಕಿ ಅಚ್ಚರಿಯಿಂದ ಹೇಳಪ್ಪನವರ ಕಡೆ ನೋಡಿದಳು....


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

13 September 2021

ಚಿತ್ರ ವಿಚಿತ್ರ ಹನಿ


 



ಚಿತ್ರ _ವಿಚಿತ್ರ ? ಹನಿ 


ಕಾಲ ಕಾಲಕ್ಕೆ ವ್ಯಕ್ತಿಗಳು ಹೇಗೆ ಬದಲಾಗುತ್ತಾರೆ?

ಹಾಗೂ ನಮ್ಮ ಮನಸ್ಥಿತಿ, ಮನೆ ಸ್ಥಿತಿ, ಮನಿ ಸ್ಥಿತಿ ಹೇಗೆ ಬದಲಾಗುತ್ತದೆ ಎಂದು ಹೋಲಿಕೆ ಮಾಡುವ ಕೆಟ್ಟ ಹವ್ಯಾಸ? ನನಗೆ.😀


ನಿಮಗೂ ಇರಬಹುದು😀😜


ಅದಕ್ಕೆ ಉದಾಹರಣೆ ಈ ಹನಿ 


ಮದುವೆಯಾದ ಹೊಸದರಲ್ಲಿ

ನನ್ನವಳ ನೋಡುತ್ತಿದ್ದರೆ

ಅವಳ ಮೊಗದಲಿ

ಕಾಣುತ್ತಿತ್ತು

ಒಮ್ಮೆ ನೋಡಿದರೆ

ಬಾಲಿವುಡ್, ಮತ್ತೊಮ್ಮೆ

ಸ್ಯಾಂಡಲ್ ವುಡ್ ನಟಿಯರ

ಸುಂದರ ಚಿತ್ರ|👸

ಕಾಲ ಕಳೆದಂತೆ

ವಿವಿಧ ಕೋನದಲಿ

ನೋಡಿದರೆ ಅವಳ

ಮುಖವೇಕೋ

ಚಿತ್ರ ವಿಚಿತ್ರ||👻



ಸಿಹಿಜೀವಿ

ಸಿ ಜಿ ವೆಂಕಟೇಶ್ವರ


ನಮ್ಮ ನೆರಳು ನಮ್ಮನ್ನು ಹಿಂಬಾಲಿಸುವುದಿಲ್ಲ.ಕಥೆ


 

ನಮ್ಮ ನೆರಳು ನಮ್ಮನ್ನು ಹಿಂಬಾಲಿಸುವುದಿಲ್ಲ. ಕಥೆ

ರವಿ ಪ್ರಾಮಾಣಿಕ , ಸತ್ಯಸಂಧ, ಉತ್ತಮ ನಡತೆಯ ವ್ಯಕ್ತಿ. ಯಾವುದೇ ಕೆಲಸವನ್ನು ಶ್ರದ್ದೆಯಿಂದ ಮಾಡುತ್ತಿದ್ದ .ಶಾಲೆ ಕಲಿಯದ ಅವನು ತಾನು ಕೂಲಿ ಮಾಡಿದ ಹಣವನ್ನು ಮಾಲೀಕರಿಂದ ಪಡೆಯುವಾಗ, ಅಂಗಡಿಯಲ್ಲಿ ಸಾಮಾನು ಖರೀದಿ ಮಾಡಿ ಚಿಲ್ಲರೆ ಪಡೆಯುವಾಗ ಲೆಕ್ಕ ಗೊತ್ತಾಗದೇ ಅವರು ಕೊಟ್ಟಷ್ಟೇ ಪಡೆದು ತನ್ನ ಅನಕ್ಷರತೆಗೆ ತಾನೇ ಕಾರಣವೆಂದು ತನ್ನನ್ನೆ ಅಳಿದುಕೊಂಡು, ಅಳಿದ ಅಮ್ಮನ ನೆನೆದು " ನಿನ್ನ ಮಾತು ಅಂದು ಕೇಳಿ ಶಾಲೆಗೆ ಹೋಗಿ ಕಲಿಯಬೇಕಿತ್ತವ್ವ " ಎಂದು ಮೇಲೆ ನೋಡುತ್ತಾ ಕ್ಷಮಿಸವ್ವ ಎಂದು ಆಗಾಗ್ಗೆ ಒಬ್ಬನೇ ಮಾತಾಡುತ್ತಿದ್ದ.

ಊರ ಸಾಹುಕಾರನ ಹೊಲದಲ್ಲಿ ಅಂದು ಕೂಲಿ ಕೆಲಸ ಮಾಡಿದ ರವಿ ಸಂಜೆ ಧಣಿಗಳ ಬಳಿ ತೆರಳಿದ ಐದು ನೂರು ರೂಗಳ ಎರಡು ನೋಟು ಕೊಟ್ಟ ಧಣಿಗಳು"  ರವಿ ಇಂದು ನೀನು ಮಾಡಿದ ಕೆಲಸ ಮೆಚ್ಚಿ ಜಾಸ್ತಿ ಕೂಲಿ ನೀಡಿರುವೆ, ಅದಕ್ಕೆ ಇಲ್ಲಿ ಒಂದು ಹೆಬ್ಬೆಟ್ಟು ಹಾಕು"  ಎಂದರು  ಧಣಿಗಳ ಮಾತು ಕೇಳಿ ಹಣ ಎಷ್ಟು ಜಾಸ್ತಿ ಇದೆ? ಯಾಕೆ ಹೆಬ್ಬಟ್ಟು?  ಎಂದು ತೋಚದೇ ಧಣಿಗಳ ಮೇಲಿನ ನಂಬಿಕೆಯಿಂದ ಹೆಬ್ಬಟ್ಟು ಒತ್ತಿದ.

ಮಾರನೇ ದಿನ ಪೋಲಿಸರು ಬಂದು ರವಿಯ ಅರೆಸ್ಟ್ ಮಾಡಿದರು . ರವಿಗೆ ಏನೂ ತೋಚದೆ ಅಳಲಾರಂಬಿಸಿದ. ನಾನೇನೂ ತಪ್ಪು ಮಾಡಿಲ್ಲ ಬಿಡಿ. ಧಣಿಗಳ ಕೇಳಿ ನಾನು ಧಣಿಗಳ ತೋಟ ಬಿಟ್ಟು ಎಲ್ಲೂ ಹೋಗಿಲ್ಲ ಎಂದು ಗೋಳಾಡಿದ"
.ಊರಲ್ಲಿ ಓದಿ ಬುದ್ದಿವಂತನಾದ ಸುರೇಶ್ " ನಿಮ್ಮ ಧಣಿಗಳ ಮಗ  ಎರಡು ದಿನದ ಹಿಂದೆ ಅಪ್ರಾಪ್ತ ಹುಡುಗಿ ಕೆಡಿಸಿ ಸಾಯಿಸಿದ್ದಾನೆ, ಅದನ್ನು ನಿನ್ನ ತಲೆಗೆ ಕಟ್ಟಲು ನಿನ್ನ ಧಣಿ ನಿನ್ನಿಂದ ಹೆಬ್ಬೆಟ್ಟು ಹಾಕಿಸಿಕೊಂಡು ನೀನೇ ಆ ಹುಡುಗಿ ಕೊಂದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ, ಈಗ ನೋಡು ಮಾಡದ ತಪ್ಪಿಗೆ ಜೈಲಲ್ಲಿ ಕೊಳೆಯಬೇಕು, ನಾಲ್ಕಕ್ಷರ ಕಲೀರಿ ಅಂದ್ರೆ ನಿಮ್ ತಲೇಗೇ ಹೋಗಲ್ಲ" ಎಂದು ಬೇಸರದಿಂದ ಟವಲ್ ಕೊಡವಿಕೊಂಡು ಮನೆ ಕಡೆ ಹೊರಟ.

ರವಿಗೆ ಕೈಕೊಳ ತೊಡಿಸಿ ಜೀಪ್ ನಲ್ಲಿ ಕೂರಿಸಿಕೊಂಡ ಪೋಲೀಸರು ಸ್ಟೆಷನ್ ಕಡೆ ಹೊರಟರು. ಪೋಲೀಸ್ ಜೀಪ್ ನಲ್ಲಿ ಕುಳಿತ ರವಿಗೆ ಬಾಲ್ಯದಲ್ಲಿ  ಅಪ್ಪ ಹೇಳಿದ ಮಾತುಗಳು ಕಿವಿಯಲ್ಲಿ ಪ್ರತಿಧ್ವನಿಸಿದವು" ಕತ್ತಲಿದ್ದಾಗ ನಮ್ಮ ನೆರಳೂ ನಮ್ಮನ್ನು  ಹಿಂಬಾಲಿಸುವುದಿಲ್ಲ...."

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ


12 September 2021

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ನಾನು ವಿಮರ್ಶೆ ಮಾಡಿರುವ ಕಾದಂಬರಿ "ವಾಡಿವಾಸಲ್ " ಪ್ರಕಟವಾಗಿದೆ*೧೨/೮/೨೧


 

*ಇಂದಿನ ಬೆವರ ಹನಿ ಪತ್ರಿಕೆಯಲ್ಲಿ ಪ್ರಕಟವಾದ ಕೋಟೆ ಕುಮಾರ್ ಸರ್ ರೇಖಾಚಿತ್ರ ಸಹಿತ ನನ್ನ ಗಜಲ್* ೧೨/೯/೨೧


 

ಎದೆಗಾರಿಕೆ


 


ಎದೆಗಾರಿಕೆ 


ಕಷ್ಟಗಳನ್ನು ಧೈರ್ಯವಾಗಿ

ಎದುರಿಸುವ ಗಂಡಿನ ಗುಣವೇ

ಎದೆಗಾರಿಕೆ|

ಬರೀ ಬೊಗಳೆ ಬಿಡುತ್ತಾ

ಪೋಸ್ ಕೊಟ್ಟು ಎದೆ

ಮೇಲೆ ಕೂದಲು ಮಾತ್ರ

ಬೆಳಿಸಿಕೊಂಡರೆ ಅದು

ಎದೆಗರಿಕೆ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


ಜನಮಿಡಿತ ೨/೯/೨೧


 

11 September 2021

ನಾನು ದುರ್ಗದ ಅರಸನಾದರೆ ...ಲೇಖನ



ನಾನು ದುರ್ಗದ ರಾಜನಾದರೆ. ಲೇಖನ 

ಮಹಾರಾಜನಾಗಿ ಆಳಲು ಅವಕಾಶ ಲಭಿಸಿದರೆ 

ಗಂಡು ಮೆಟ್ಟಿದ ನಾಡು ,ಏಳು ಸುತ್ತಿನ ಕೋಟೆಯ ನಾಡು ದುರ್ಗ ವನ್ನೇ ಆಳುವೆ .


ಅವಕಾಶ ಲಭಿಸಿದರೆ

ರಾಜನಾಗಲು 

ಆರಿಸಿಕೊಳ್ಳುವೆ 

ಚಿತ್ರದುರ್ಗ .||

ದಕ್ಷತೆಯಿಂದ 

ಆಡಳಿತ ಮಾಡುತ್ತಾ 

ಮಾಡುವೆ ಭುವಿಯ

ಮೇಲಿನ ಸ್ವರ್ಗ||


ನಾನು ಹೇಗೆ ಆಳ್ವಿಕೆ ಮಾಡುವೆ?



ಕುಮಾರವ್ಯಾಸ ಭಾರತದ ಆದಿಪರ್ವದ ನಾಲ್ಕನೆಯ ಸಂಧಿಯ ನಾಲ್ಕನೇ ಪದ್ಯ ಹೀಗಿದೆ.


"ಸೋಮಕುಲದವರಲಿ ಭವತ್ ಪ್ರಪಿತಾಮಹನವೊಲ್ ಧರ್ಮದಲಿ ಸಂಗ್ರಾಮದಲಿ ಸತ್ಯದಲಿ ಸಾಹಿತ್ಯದಲಿ ವಿನಯದಲಿಸಾಮದಲಿ ಶೌರ್ಯದಲಿ ಸುಜನಾಪ್ರೇಮದಲಿ ನೀತಿಯಲಿ ದೃಢದಲಿಭೂಮಿಯಲಿ ನಾ ಕಾಣೆನವನೀಪಾಲ ಕೇಳೆಂದ "



 ವೈಶಂಪಾಯನರು ಪಾಂಡುವಿನ ಗುಣಗಳ ವರ್ಣನೆ ಜನಮೇಜಯ ರಾಜನಿಗೆ ಈ ರೀತಿ ಮಾಡುತ್ತ.  ಪ್ರಪಿತಾಮಹ ರಾದ ಪಾಂಡು ಮಹಾರಾಜರು ಧರ್ಮದಲಿ, ಯುದ್ಧದಲಿ, ಸತ್ಯದಲಿ, ಸಾಹಿತ್ಯದಲಿ, ವಿನಯದಲಿ, ಸಾಮದಲಿ, ಶೌರ್ಯದಲಿ, ಸತ್ಸಂಗದಲಿ, ನೀತಿಯಲಿ, ದೃಢತೆಯಲಿ ಸೋಮಕುಲದಲ್ಲಿ ಮೆರೆದರು. ಇವರ ಸರಿಸಾಟಿಯಾದ ರಾಜರು ಇಡೀ ಭೂಮಿಯಲ್ಲಿ ನಾನು ಕಾಣೆನು ಎಂದರು .


ಎಂಬ ಆಶಯದಂತೆ ನನ್ನ ಆಳ್ವಿಕೆ ಇರಲಿದೆ.

ಅದರಂತೆ ನಾನೂ ಸಹ 

ನಿಯಮ, ಆಚಾರಗಳಂತೆ ಅಧಿಕಾರ ಮಾಡುವೆನು. ಅವಶ್ಯಕತೆ ಬಿದ್ದರೆ ಪ್ರಜೆಗಳು ಮತ್ತು ನಾಡಿನ ರಕ್ಷಣೆ ವಿಷಯ ಬಂದರೆ ಯುದ್ದಮಾಡಲೂ ಹಿಂಜರಿಯಲಾರೆ. ರಾಜನು ಸತ್ಯಸಂಧನಾದರೆ ಪ್ರಜೆಗಳು ಸಹ ಸತ್ಯದ ಹಾದಿ ತುಳಿವರು ಆದ್ದರಿಂದ ಮೊದಲು ನಾನು ಸತ್ಯವಂತನಾಗಿ ಬಾಳಿ ತೋರಿಸುವೆ.  ನಮ್ಮ ಸಂಸ್ಕೃತಿಯ ಪ್ರತೀಕವಾದ  ಕಾವ್ಯ, ನಾಟಕ ಮುಂತಾದ ಸೃಜನಾತ್ಮಕ ಬರವಣಿಗೆಯನ್ನು ಸ್ವತಃ ನಾನು ಕೈಗೊಳ್ಳುವ ಮೂಲಕ ರಾಜ್ಯದ ಲಲಿತ ಕಲೆಗಳ ಬೆಳವಣಿಗೆಗೆ ಕ್ರಮ ಕೈಗೊಳ್ಳುವೆ.ರಾಜ್ಯದ ಪ್ರಜೆಗಳಲ್ಲಿ ಒಳ್ಳೆತನ, ಸೌಜನ್ಯ, ಸಭ್ಯತೆ ಗುಣಗಳನ್ನು ಪ್ರೋತ್ಸಾಹ ಮಾಡುವೆನು. ಅಶೋಕ ಚಕ್ರವರ್ತಿ ಹೇಳಿದಂತೆ ಪ್ರಜೆಗಳ ಮೇಲೆ ಸದಾ ವಾತ್ಸಲ್ಯ ತೋರುತಲಿ ಮಾರ್ಗದರ್ಶನ ಮಾಡುತ್ತಾ ಹಗಲಿರುಳು ಅವರ ಕಲ್ಯಾಣ ಕ್ಕೆ ಶ್ರಮಿಸುವೆ.


ನೀರಾವರಿಯ ಭಾಗವಾಗಿ ಎಲ್ಲಾ ಆರು ತಾಲ್ಲೂಕುಗಳಾದ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ,ಹಿರಿಯೂರು, ಮೊಳಕಾಲ್ಮೂರು ಚಳ್ಳಕೆರೆ ಇವುಗಳಲ್ಲಿ ಕೆರೆ ಕಟ್ಟೆಗಳ ಮೂಲಕ ಶಾಶ್ವತವಾದ ನೀರಾವರಿ ಯೋಜನೆಗಳನ್ನು ಜಾರಿಗೆ ತರುವೆನು , ಗುಡಿಕೈಗಾರಿಗಳು ಮತ್ತು ಬೃಹತ್ ಕೈಗಾರಿಕೆಗಳ ನಡುವೆ ಸಮತೋಲನ ತರುವೆನು , ಗ್ರಾಮರಾಜ್ಯದ ಪರಿಕಲ್ಪನೆಯನ್ನು ಬಲಪಡಿಸುವೆನು . ವ್ಯಾಪಾರ ವಾಣಿಜ್ಯ ಬಲಪಡಿಸುವೆನು. ಸರ್ವ ಜನಾಂಗದ ಶಾಂತಿಯುತ ಸಹಬಾಳ್ವೆ ಗೆ ಮುನ್ನುಡಿ ಬರೆವೆ. 

ಶರಣರ ನುಡಿಯಂತೆ ಕಾಯಕ ತತ್ವ,ಸರ್ವೇ ಜನಾಃ ಸುಖಿನೋಭವಂತು , ನನ್ನ ನಾಡಿನ ಧ್ಯೇಯ ವಾಕ್ಯ ಆಗಲಿದೆ.


"ಆರಂಕುಷವಿಟ್ಟೊಡಂ ನೆನವುದೆನ್ನ ಮನಂ  ಬನವಾಸಿ ದೇಶಮಂ" ಎಂಬ  ಕವಿವಾಣಿಯಂತೆ 

ನನ್ನ ರಾಜ್ಯದ ಎಲ್ಲಾ ಸಿಹಿಜೀವಿಗಳು ದುರ್ಗದಲ್ಲೇ ಹುಟ್ಟಬೇಕೆಂದು ಬಯಸುವ ರೀತಿಯಲ್ಲಿ ಆಡಳಿತ ಮಾಡಿ ತೋರಿಸುವೆ.


ಜೈ ಚಾಮುಂಡೇಶ್ವರಿ

ಜೈ ಏಕನಾಥೇಶ್ವರಿ

ಜೈ ಉಚ್ಚಂಗಿ ತಾಯಿ



ಸಿಹಿಜೀವಿ

ಸಿ ಜಿ ವೆಂಕಟೇಶ್ವರ


 

10 September 2021

ವಾಡಿವಾಸಲ್ .ಕಾದಂಬರಿ ವಿಮರ್ಶೆ

 


ವಾಡಿವಾಸಲ್ .ಕಾದಂಬರಿ ವಿಮರ್ಶೆ


ಓದಿ ಓದಿ ಮರುಳಾಗಿ ಎಂಬ ಟ್ಯಾಗ್ ಲೈನ್ ಹೊಂದಿರುವ ಛಂದ ಪುಸ್ತಕ ಹೊರ ತಂದ ಹೊಸ ಪುಸ್ತಕ ವಾಡಿವಾಸಲ್ ಎಂಬ ಕಾದಂಬರಿ. ಒಂದೇ ಗುಕ್ಕಿಗೆ ಓದಿ ಮುಗಿಸಿದೆ . ಈ ಕಾದಂಬರಿ ಓದಿದಾಗ ನಮ್ಮ ಮುಂದೆ ಜಲ್ಲಿಕಟ್ಟು ನಡೆಯುತ್ತಿದೆ ಎಂಬಂತೆ ಚಿತ್ರಣ ಮೂಡುತ್ತದೆ.


ವಾಡಿವಾಸಲ್ ಮೂಲ  ಕಾದಂಬರಿಯ  ಲೇಖಕರಾದ 

ಚಿ.ಸು. ಚೆಲ್ಲಪ್ಪ  ರವರು 

ಹುಟ್ಟಿದ್ದು ಮದುರೈ ಜಿಲ್ಲೆಯ ವತ್ತಲಗುಂಡು ತಾಲೂಕಿನ ಚಿನ್ನಮಣೂರ್ ಗ್ರಾಮದಲ್ಲಿ. ಸಣ್ಣಕತೆ, ಕಾದಂಬರಿ, ವಿಮರ್ಶೆ, ಕವಿತೆ, ಅನುವಾದ ಮೊದಲಾದ ಕ್ಷೇತ್ರಗಳಿಗೆ ಚೆಲ್ಲಪ್ಪನವರ ಕೊಡುಗೆ ಅಪಾರ. ಚಂದ್ರೋದಯ, ದಿನಮಣಿ ಪತ್ರಿಕೆಗಳಲ್ಲಿ ಸಹಸಂಪಾದಕರಾಗಿ ಕೆಲಸ ಮಾಡಿದ್ದ ಚೆಲ್ಲಪ್ಪನವರು ರಚಿಸಿದ ವಾಡಿವಾಸಲ್ ಕಾದಂಬರಿಯು ಜಲ್ಲಿಕಟ್ಟು ಕುರಿತ ಮೊದಲ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನು ಕನ್ನಡಕ್ಕೆ ತಂದವರು 

ಸತ್ಯಕಿ. ಇತ್ತೀಚಿಗೆ ಕನ್ನಡ  ಕಿರುತೆರೆಯಲ್ಲಿ ಸಂಚಲನವನ್ನು ಮೂಡಿಸಿದ "ಜೊತೆ ಜೊತೆಯಲಿ" ಧಾರವಾಹಿಯ ಸಂಭಾಷಣೆಯಿಂದ ಮನೆ ಮಾತಾದವರು.

 ಅವರ ಜನ್ಮಭೂಮಿ, ಕರ್ಮಭೂಮಿ ಎರಡೂ ಬೆಂಗಳೂರೇ. ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್. ಸಿನಿಮಾ ಕ್ಷೇತ್ರದಲ್ಲಿ ಸಹಾಯಕ ನಿರ್ದೇಶಕನಾಗಿ, ಸಂಭಾಷಣೆಕಾರನಾಗಿ ವೃತ್ತಿಜೀವನ ಪ್ರಾರಂಭಿಸಿರುವ ಸತ್ಯಕಿ ರವರು ಬಹಳ ಸೊಗಸಾಗಿ ವಾಡಿವಾಸಲ್ ಕಾದಂಬರಿಯನ್ನು ಅದೇ ಹೆಸರಲ್ಲಿ ಕನ್ನಡಿಗರಿಗೆ ತಂದಿದ್ದಾರೆ .


ಸುಪ್ರೀಂ ಕೋರ್ಟ್ ತೀರ್ಮಾನ ಮತ್ತು ವಿವಾದದ ಹಿನ್ನೆಲೆಯಲ್ಲಿ ಈ ಕಾದಂಬರಿ ಗಮನ ಸೆಳೆಯುತ್ತದೆ. 1959 ರಲ್ಲಿ ಬರೆದ ಈ ಕಾದಂಬರಿ ಇಂದಿಗೂ ಪ್ರಸ್ತುತ ವಾಗಿದೆ.


ವಾಡಿವಾಸಲ್ ಎಂಬ ತಮಿಳು ಪದ ಜಲ್ಲಿಕಟ್ಟು ನಡೆವ ಸ್ಥಳದಲ್ಲಿ ಗೂಳಿಗಳನ್ನು ಕೂಡಿಹಾಕಿರುವ ಪ್ರದೇಶದಿಂದ ಮೊದಲ ಬಾರಿಗೆ ಹೊರ ಬರುವ ಸ್ಥಳ .

ಮನುಷ್ಯನಿಗೂ ಮೃಗಕ್ಕೂ ನಡೆಯುವ  ಕಾಳಗಕ್ಕೆ ಜಲ್ಲಿಕಟ್ಟು ಎಂದು ಹೆಸರು. ಅದು ನಡೆಯುವ ಜಾಗ  ವಾಡಿವಾಸಲ್ 


ಪಿಚ್ಚಿ ಮತ್ತು ಅವನ ಬಾಮೈದ ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸಲು ಬರುವ ಹಿನ್ನೆಲೆಯಲ್ಲಿ ಆರಂಭವಾಗುವ ಈ  ಕಾದಂಬರಿಯು ಜಲ್ಲಿಕಟ್ಟು ಕ್ರೀಡೆಯ ಸಣ್ಣ ಅಂಶಗಳನ್ನು ಸಹ ಕಣ್ಣಿಗೆ ಕಟ್ಟುವಂತೆ ಓದುಗರಿಗೆ ತೋರಿಸುತ್ತಾ ಹೋಗುತ್ತಾರೆ ಕಾದಂಬರಿಕಾರರು.


ತಂದೆಯ  ಸಾವಿಗೆ ಕಾರಣವಾದ ಕಾರಿ ಎಂಬ ಗೂಳಿಯ ಸೋಲಿಸಿ ತಂದೆಯ ಆಸೆ ಈಡೇರಿಸಲು ಪಿಚ್ಚಿ ತನ್ನ ಬಾಮೈದನೊಂದಿಗೆ ಬಂದು ಗುರಿ ಮುಟ್ಟಿದನೇ ಅಪ್ಪನ ಆಸೆ ಈಡೇರಿಸಿದನೇ ಎಂಬುದನ್ನು ನೀವು ಕಾದಂಬರಿ ಓದಿಯೇ ಎಂಜಾಯ್ ಮಾಡಬೇಕು.

ಕಾದಂಬರಿಯಲ್ಲಿ ಬರುವ ಕೆಲ ದೃಶ್ಯಗಳನ್ನು ಲೇಖಕರು ಕುತೂಹಲಕಾರಿ ಚಿತ್ರ ನೋಡುವಾಗ ಸೀಟಿನ ಮುಂಬಾಗದಲ್ಲಿ ಕುಳಿತು  ನೋಡುವಂತೆ ಉಸಿರು ಬಿಗಿ ಹಿಡಿದು ಓದುವಂತೆ ಮಾಡಿದ್ದಾರೆ 

ಅದಕ್ಕೆ ಕೆಲ ಉದಾಹರಣೆ ಎಂದರೆ


"ಒಂದು ಜಿಗಿತ, ಎರಡು ಜಿಗಿತ; ಮೂರನೇ ಜಿಗಿತಕ್ಕೆ ಆತ ನಿಂತು ಬಿಟ್ಟ, ಮೂರು ಬಾರಿಯೂ ಗೂಳಿಯು ಅವನನ್ನು ಎತ್ತಿ ಎಸೆಯಲು ಯತ್ನಿಸಿತ್ತು".


"ಅಪ್ಪನ ಬಯಕೆಗೆ ಮಾತ್ರವಲ್ಲ, ಬದುಕಿಗೆ ಯಮನಾಗಿ ನಿಂತ

ಕಾರಿಯ ಕೊಂಬಿನಲ್ಲಿ ಈಗಲೂ ತಂದೆಯ ರಕ್ತ ಅಂಟಿದಂತೆ ಭ್ರಮೆ ಉಂಟಾಯಿತು. ಆ ಭ್ರಮೆಯಿಂದ ಹೊರ ಬಂದು ತನ್ನ ಎದುರಿಗೆ ನೋಡಿದನು ಪಿಚ್ಚಿ, ಆತನ ಎದುರಿಗೆ ಕಾರಿ ನಿಂತಿತ್ತು".


ಕಾದಂಬರಿಯ ಕೊನೆಯ ವಾಕ್ಯಗಳನ್ನು ಓದುವಾಗ ಓದುಗರು ಬಾವುಕರಾಗುವುದು ಸುಳ್ಳಲ್ಲ 

“ಮೈಗಕ್ಕೆ ರೋಸ ಬಂದ್ರೂ ಅಸ್ಟೇ  ಮನುಸಂಗೆ ರೋಸ ಬಂದ್ರೂ ಅಸ್ಟೇ ,

ಏನೇಂದ್ರೂ  ಅದು ಮೃಗಾನೇ ಅಲ್ವಾ" ಎಂಬ ಹಳ್ಳಿಯ ಬನರು ಮಾತು ನಮ್ಮ ನ್ನು ಚಿಂತನೆಗೆ ಹಚ್ಚುತ್ತವೆ.


ಈ ಕಾದಂಬರಿಯಲ್ಲಿ ರಾಷ್ಟ್ರೀಯ ಚಿತ್ರಕಾರರಾದ ಕೆ ಎಂ ಆದಿ ಮೂಲನ್    ರವರ ರೇಖಾಚಿತ್ರಗಳು ಕಥೆಗೆ ಪೂರಕವಾಗಿ ಓದುಗರ ಮನ ಸೆಳೆಯುತ್ತವೆ .

ಒಟ್ಟಾರೆಯಾಗಿ ಒಂದು ಕ್ಲಾಸಿಕ್ ಕಾದಂಬರಿ ಓದಿದ ಅನುಭವ ಆಗಬೇಕಂದರೆ ನೀವೂ ಒಮ್ಮೆ ವಾಡಿವಾಸಲ್ ಓದಿ .


ಕಾದಂಬರಿಯ ಹೆಸರು: ವಾಡಿವಾಸಲ್

ಲೇಖಕರು: ಚಿ.ಸು. ಚೆಲ್ಲಪ್ಪ

ಅನವಾದ: ಸತ್ಯಕಿ.

ಪ್ರಕಾಶನ: ಛಂದ ಪ್ರಕಾಶನ

ಬೆಲೆ : 70 ರೂಗಳು


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ


ಗಣಪನ ಹಾಯ್ಕುಗಳು .


 ಗಣಪನ ಹಾಯ್ಕುಗಳು



ಗಜಾನನನು

ಮೂಷಿಕ ಏರಿದವ 

ವಿಘ್ನ ಕಳೆವ 



ಲಂಬೊದರನು

ಡೊಳ್ಳೊಟ್ಟೆಗೆ ಕಾರಣ

ಮೋದಕಪ್ರಿಯ 



ಅಗೋ ಬೆನಕ 

ಮೆರವಣಿಗೆ ಬಂತು 

ಮನದಿ ನೆನೆ 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಇಂದಿನ ವೈಬ್ರಂಟ್ ಮೈಸೂರು ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ ಸಂಪಾದಕರು ಮತ್ತು ಸಿಬ್ಬಂದಿ ಗೆ ಧನ್ಯವಾದಗಳು🙏🙏೧೦/೯/೨೧


 

ಗಣಪ


 #ಗಣೇಶಚತುರ್ಥಿ 

#ಸಿಹಿಜೀವಿಯ_ಹನಿ

ಅಂದು ಹಿಡಿದಿದ್ದೆವು

ಸ್ಲೇಟು ಬಳಪ| 

ವಿದ್ಯೆ ಬುದ್ದಿ

ಕೊಟ್ಟೇಬಿಟ್ಟ

ನಮ್ಮ ಗಣಪ| |


ಸಿಹಿಜೀವಿ

 ಸಿ ಜಿ ವೆಂಕಟೇಶ್ವರ

08 September 2021

ಸಿಹಿಜೀವಿಯ ನುಡಿ


 



ಸಿಹಿಜೀವಿಯ ನುಡಿ


ಜಗತ್ತಿನ ಎಲ್ಲಾ ಕೆಲಸಗಳು ಅತ್ಯದ್ಭುತ

ನಾವು ಆ ಕೆಲಸ ಮಾಡುವ ರೀತಿ

ಕೌಶಲ್ಯ ಪ್ರಾಮಾಣಿಕತೆ ಸೇವಾಮನೋಭಾವ ಇವುಗಳು ನಮ್ಮ ಕೆಲಸದ ದಕ್ಷತೆ ಹೆಚ್ಚಿಸಿ ನಮಗೆ ಆತ್ಮ ತೃಪ್ತಿ ನೀಡುತ್ತದೆ. ಗೀತಾಚಾರ್ಯ ಹೇಳಿದಂತೆ ಶ್ರದ್ಧೆಯಿಂದ ಪ್ರತಿಫಲಾಪೇಕ್ಷೆಯಿರದೇ ಯಾವುದೇ ಕಾರ್ಯ ಮಾಡಿದರೂ ಒಂದಲ್ಲ ಒಂದು ದಿನ ಅದಕ್ಕೆ ಸೂಕ್ತ ಪ್ರತಿಫಲ ಸಿಕ್ಕೇ ಸಿಗುವುದು ತನ್ಮೂಲಕ ಸಮಾಜ ನಮ್ಮನ್ನು ಗುರ್ತಿಸುತ್ತದೆ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಪ್ರಜಾಪ್ರಗತಿ ೮/೯/೨೧


 

ಸಿಂಹದ್ವನಿ .೮/೯/೨೧


 

06 September 2021

ಪಾಪ ಪುಣ್ಯ .ಲೇಖನ


 ಹೌದು ..

ಧರ್ಮ ,ಅದ್ಯಾತ್ಮ, ಒಳಿತು ಕೆಡುಕಿನ ಬಗ್ಗೆ ನಂಬಿಕೆ ಇರುವ ನಾನು ಪಾಪ ಪುಣ್ಯ ಗಳನ್ನು ನಂಬುತ್ತೇನೆ .

ಒಳಿತು ಮಾಡಿದರೆ ಪುಣ್ಯ ಸಂಪಾದನೆ ಕೆಡುಕುಗಳು ಪಾಪಕ್ಕೆ ಕಾರಣ ಎಂದು ನಂಬಿರುವ ಸನಾತನ ಪರಂಪರೆಯನ್ನು ನಾವು ಗೌರವಿಸಲೇಬೇಕು. ಅರಿಷಡ್ವರ್ಗಗಳ ನಿಯಂತ್ರಣ ದಲ್ಲಿ ಇಟ್ಟು ಕೊಂಡು ,ಧರ್ಮ ಅರ್ಥ ಕಾಮ ಮೋಕ್ಷ ಮಾರ್ಗ ಅನುಸರಿಸಿದರೆ ಪುಣ್ಯ ಸಂಪಾದನೆ ಸಾದ್ಯ.   ಇದಕ್ಕೆ ಪರೋಪಕಾರ   ದಾನ ಧರ್ಮ, ಸತ್ಸಂಗ ಮುಂತಾದವು ಸಹ ಸಹಕಾರಿ .


ಅನೈತಿಕ ಚಟುವಟಿಕೆಗಳಲ್ಲಿ ತೊಡಗುವುದು, ಹಿಂಸೆ ,  ಪರಪೀಡನೆ, ಪರನಿಂದೆ ಮುಂತಾದವು ಪಾಪದ ಕೊಡ ತುಂಬಲು ಕಾರಣವಾಗುತ್ತವೆ.


ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ನಮ್ಮ ಶಿಕ್ಷಕರು ನಾವು ಒಳ್ಳೆಯ ಕೆಲಸ ಮಾಡಿದರೆ ನಮ್ಮ ಬಲ ಭುಜ ದಲ್ಲಿ ಇರುವ ದೂತರು ‌ಲೆಕ್ಕ ಇಟ್ಟುಕೊಳ್ಳುವರು ಪಾಪಕಾರ್ಯ ಮಾಡಿದರೆ ಎಡಭುಜದ ದೂತರು ಲೆಕ್ಕ ಇಟ್ಟುಕೊಂಡು ಯಮನಿಗೆ ವರದಿ ನೀಡುವರು. ಪಾಪ ಜಾಸ್ತಿಯದರೆ ಕುದಿಯುವ ಎಣ್ಣೆ ಬಾಣಲೆಯಲ್ಲಿ ನಮ್ಮನ್ನು ತೇಲಿಸುವರು ಎಂದು ಹೇಳುತ್ತಿದ್ದುದು ನೆನಪಾಗುತ್ತದೆ.


ಜನರು ಅನೈತಿಕ ಚಟುವಟಿಕೆಗಳಲ್ಲಿ ಅಧರ್ಮದ ಕಾರ್ಯದಲ್ಲಿ ತೊಡುಗುವುದನ್ನು ತಡೆಯಲು ಇಂತಹ ಕಥೆಗಳು ಸ್ವಲ್ಪ ಮಟ್ಟಿಗಾದರೂ ಸಹಾಯಕ ಎಂಬುದರಲ್ಲಿ ಸಂದೇಹ ವಿಲ್ಲ. ಇತ್ತೀಚೆಗೆ ಅಧರ್ಮಿಗಳ ಸಂಖ್ಯೆ ಕ್ರಮೇಣವಾಗಿ ಹೆಚ್ಚಾಗಿ, ಪಾಪಕಾರ್ಯಗಳು ಹೆಚ್ಚಾಗುತ್ತಿವೆ ಎನಿಸುತ್ತದೆ. ಇದಕ್ಕೆ ಪೂರಕವಾಗಿ ನಾಸ್ತಿಕರ ವಾದ ಮುಗಿಲು ಮುಟ್ಟುತ್ತದೆ. ಅನ್ಯಾಯ ಅಕ್ರಮ ಮಾಡಿದವರು ಬಹಳ ಸುಖವಾಗಿರುವರು ಎಂಬ ಒಣ ಸಮರ್ಥನೆ ನೀಡುವರು. ಅದಕ್ಕೆ ಪ್ರತಿವಾದವಾಗಿ ಅವರು ಯಾವಾಗಲೋ ಮಾಡಿದ ಪುಣ್ಯ ಕಾರ್ಯಗಳು ಅವರ ಕಾಪಾಡುವವು ಎಂಬ  ಪ್ರತಿವಾದವೂ ಚಿಂತನಾರ್ಹ


ನಾಸ್ತಿಕರಿಗೆ ದೇವರು ಧರ್ಮ ಪಾಪ ಪುಣ್ಯ ದ  ಬಗ್ಗೆ  ನಂಬಿಕೆ ಇರದಿದ್ದರೆ 

ಸ್ವಾಮಿ ವಿವೇಕಾನಂದರ ವಾಣಿಯಂತೆ ಪರೋಪಕಾರವೇ ಪುಣ್ಯ ಪರಪೀಡನೆಯೇ ಪಾಪ  ಎಂಬ ಭಾವನೆ ಹೊಂದಿದರೆ ಸಮಾಜದ ಅಕ್ರಮಗಳು ಅನೈತಿಕ ಚಟುವಟಿಕೆಗಳು ಕಡಿಮೆಯಾಗಿ ಸರ್ವರೂ  ನೆಮ್ಮದಿಯ ಜೀವನ ನಡೆಸಬಹುದು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

05 September 2021

ಶಿಕ್ಷಕನಾಗಿ ಮಕ್ಕಳಿಗೆ ಹತ್ತು ಸಲಹೆಗಳು


 



ಶಿಕ್ಷಕರ ದಿನದ ಶುಭಾಶಯಗಳು



ಶಿಕ್ಷಕನಾಗಿ ಮಧ್ಯಮ ವಯಸ್ಸಿನ ಹಿರಿಯನಾಗಿ 

ಮಕ್ಕಳಿಗೆ ನೀಡುವ ೧೦  ಸಲಹೆಗಳು 


೧ ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ

೨ ಗುರು ಹಿರಿಯರ ಗೌರವಿಸಿ

೩ ಸುಲಭವಾಗಿ ಸೋಲು ಒಪ್ಪಬೇಡಿ

೪ ಯಶಸ್ವಿಯಾಗಿ ಮುಂದಡಿ ಇಡಿ

೫ ಯಶಸ್ಸಿಗೆ ಅಡ್ಡ ದಾರಿ ಇಲ್ಲ ಪರಿಶ್ರಮ ಮರೆಯದಿರಿ

೬ ನಿಮ್ಮಿಷ್ಟದ ಗುರಿ ಆರಿಸಿಕೊಂಡು ಅದನ್ನು ತಲುಪಲು ಪ್ರಾಮಾಣಿಕ ಪ್ರಯತ್ನ ಮಾಡಿ

೭ ಇತರರಿಂದ ಸ್ಪೂರ್ತಿ ಪಡೆಯಿರಿ ಆದರೆ ಹೋಲಿಕೆ ಮಾಡಿಕೊಳ್ಳಬೇಡಿ

೮ ನಾಡು ನುಡಿಯ ಬಗ್ಗೆ ಗೌರವವಿರಲಿ

೯ ನಮ್ಮ ಸಂಸ್ಕೃತಿ ಮತ್ತು ಪ್ರಕೃತಿ ಸಂರಕ್ಷಣೆ ಗೆ ಮುಂದಾಗಿ

೧೦ ಜವಾಬ್ದಾರಿಯುತ ನಾಗರಿಕರಾಗಿ


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಮಹಾರಾಜ ಕಿರುಕಥೆ

 

ಮಹಾರಾಜ .


ಮಲ್ಲಪ್ಪ ಗಾಯತ್ರಮ್ಮ ದಂಪತಿಗಳು ಅನಕ್ಷರಸ್ಥ ರಾದರೂ ಹಳ್ಳಿಯಲ್ಲಿ ‌ಕೂಲಿ ಮಾಡುತ್ತಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. 

ಬಹಳ ದಿನಗಳ ನಂತರ ದಂಪತಿಗೆ ಗಂಡು ಮಗುವಾಯಿತು . 

ಮಗನಿಗೆ ಮಹಾರಾಜ ಎಂದು ನಾಮಕರಣ ಮಾಡಿದರು.

ಮಗ ನಮ್ಮಂತೆ ಅನಕ್ಷರಸ್ಥರಾಗುವುದು ಬೇಡ ಅಕ್ಷರ ಕಲಿಯಲಿ ಎಂದು ಒಳ್ಳೆಯ ಶಾಲೆಗೆ ಸೇರಿಸಿದರು.

ಮಹಾರಾಜನಿಗೆ ವಿದ್ಯೆ ಹತ್ತಲಿಲ್ಲ ಎಸ್ಸೆಲ್ಸಿ ಪೇಲಾಗಿ ಊರಲ್ಲಿ ಅಲೆಯಲು ಶುರುಮಾಡಿದ .

ಸಹವಾಸ ದೋಷ, ಟೀನೇಜ್ ನ ವಯೋಸಹಜ ಕಾಮನೆಗಳ ಫಲವಾಗಿ ಲವ್ ನಲ್ಲಿ ಬಿದ್ದ ಮಗ ಅನ್ಯಜಾತಿಯ ಹುಡುಗಿಯನ್ನು ಕರೆದುಕೊಂಡು ಹೋಗಿ ಮದುವೆಯಾಗಿ ಬಂದ.

ಒಲ್ಲದ ಮನಸ್ಸಿನಿಂದ ಒಪ್ಪಿ ಸೊಸೆ ಯನ್ನು ಮನೆತುಂಬಿಸಿಕೊಂಡ ಅತ್ತೆಗೆ ಒಂದು ತಿಂಗಳಲ್ಲೇ ಆಘಾತ ಕಾದಿತ್ತು.ಮಗನಿರದ ವೇಳೆ ಜಗಳ ತೆಗೆದ ಸೊಸೆ ಅತ್ತೆಯ ಮೇಲೆ ಕುಡುಗೋಲು ಹಿಡಿದು ಹೊಡೆಯಲು ಹೋದಳು .

ಮಗ ಅಸಹಾಯಕತೆ ವ್ಯಕ್ತ ಪಡಿಸಿ ಅಪ್ಪ ಅಮ್ಮನ ತೊರೆದು ನಗರಕ್ಕೆ ವಲಸೆ ಹೋಗಲು ತೀರ್ಮಾನಿಸಿದ.

ಹೆಂಡತಿಯಿಂದ ಅಪ್ಪ ಅಮ್ಮನ ತೊರೆದ ಬಗ್ಗೆ ಚಿಂತಿಸಿ ಮಹಾರಾಜ ಕುಡಿತದ ದಾಸನಾದ.

ಇತ್ತ ವೃದ್ದ ದಂಪತಿಗಳು ಮಗ ಬರುವನು ಎಂದು ಈಗಲೂ ಆಸೆಗಣ್ಣಿನಿಂದ ದಾರಿ ನೋಡುತ್ತಿರುವರು.....


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


04 September 2021

ಹೊಳಲ್ಕೆರೆ ನರಭಕ್ಷಕ. ಕಥೆಗಳು. ಪುಸ್ತಕ ವಿಮರ್ಷೆ


 



ಹೊಳಲ್ಕೆರೆ ನರಭಕ್ಷಕ ಮತ್ತು ಇತರ  ಕಥೆಗಳು 

ವಿಮರ್ಶೆ 


ಕನ್ನಡದ ಓದುಗರಿಗೆ ಕೆನೆತ್  ಅಂಡರ್ಸನ್ ನ ಅತ್ಯುತ್ತಮ ಕಥೆಗಳಲ್ಲಿ  ಕೆಲವನ್ನು  ಲೇಖಕಿಯಾದ ಸಾಕ್ಷಿ ರವರು  ಕನ್ನಡಕ್ಕೆ ತಂದಿರುವರು. 

   ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ `ಕಾಡಿನ ಕಥೆಗಳು' ಸರಣಿಯನ್ನು ಓದಿದವರಿಗೆ ಈ ಪುಸ್ತಕ ಖಂಡಿತವಾಗಿ ಇಷ್ಟ ಆಗುವುದು. ಆಂಡರ್ಸನ್ ನಮ್ಮ ಕಾಲದ ಅದ್ಭುತ ಕಥೆಗಾರ ಮತ್ತು ಪರಿಸರ ಬರಹಗಾರ. ಅವನ ಬೇಟೆಯ ಕಥೆಗಳು ನಮ್ಮ ಪರಿಸರವನ್ನು ಸಮಗ್ರವಾಗಿ ಅರ್ಥೈಸಿಕೊಳ್ಳಲು ಅನುವುಮಾಡಿಕೊಡುತ್ತವೆ, ಚುರುಕಿನ ಬೇಟೆಗಾರ ಮತ್ತು ಬರಹಗಾರನಾಗಿದ್ದ ಆಂಡರ್ಸನ್ ಪರಿಚಯ ಇಲ್ಲದವರಿಗೆ, ದಕ್ಷಿಣ ಭಾರತದ ಕಾಡುಗಳಲ್ಲಿನ  ಅವನ ಬದುಕು ಮತ್ತು ಸಾಹಸಗಳನ್ನು ಅರಿಯಲು ಇದೊಂದು ಒಳ್ಳೆಯ ಅವಕಾಶ, ಸದಾ ಹಾಸ್ಯ ಮತ್ತು ಜೀವಂತಿಕೆ ತುಂಬಿರುವ ಇವನ ಬರವಣಿಗೆ ನಮ್ಮನ್ನು ಪ್ರಕೃತಿಯಲ್ಲಿ ಇನ್ನಷ್ಟು ಮುಳುಗೇಳಲು ಈ ಪುಸ್ತಕ ನಮ್ಮನ್ನು ಹುರಿದುಂಬಿಸುತ್ತದೆ.


ಕೆನೆತ್ ಅಂಡರ್ಸನ್ ಒಬ್ಬ ಮಾನವೀಯ ಅಂತಃಕರಣ ಉಳ್ಳ ಬೇಟೆಗಾರ . ಅವನು ಭಾರತದಲ್ಲಿ ಅದರಲ್ಲೂ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಕೆಲ ಅರೆಮಾಲೆನಾಡಿನ ಕಾಡುಗಳಲ್ಲಿ ಜನರಿಗೆ ತೊಂದರೆ ಕೊಡುವ ನರಭಕ್ಷಕ ಚಿರತೆ ಮತ್ತು ಹುಲಿಗಳ ಬೇಟೆಯ ಬಗ್ಗೆ ಈ ಪುಸ್ತಕದಲ್ಲಿ ಬಹಳ ಸೊಗಸಾಗಿ ಚಿತ್ರಿಸಿರುವರು.


ಮೊದಲ ಕಥೆಯಾದ"ನರಭಕ್ಷಕನ ಕಥೆ"ಇದರಲ್ಲಿ ಕೆನೆತ್ ರವರು ಗುಂಜೂರು ,ಜೋಳದಾಳು  ಸುತ್ತ ಮುತ್ತಲಿನ ಪರಿಸರದ ಬಗ್ಗೆ ವಿವರಣೆ ನೀಡುತ್ತಾ ಪರಿವೀಕ್ಷಣಾ ಬಂಗಲೆಯ ಮೇಟಿಯಾದ 

 ಅನಂತ ಸ್ವಾಮಿ ರವರ ಮಗಳು ನೀರು ತರಲು ಹೋದಾಗ ಹುಲಿ ಅವಳನ್ನು ಕೊಂದ ದಾರುಣ ಘಟನೆಯಿಂದ ಅನಂತಸ್ವಾಮಿಯು ಬಹಳ ಬೇಸರ ದಲ್ಲಿ ಇರುವನು . ಮಗಳ ಸಾವಿಗೆ ನ್ಯಾಯ ಒದಗಿಸಲು ಹುಲಿ ಸಾಯಲೇ ಬೇಕು ಎಂಬ ಹಠದಿಂದ ಅಂಡರ್ಸನ್ ಗೆ  ಮನವಿ ಮಾಡಿದ .

ಬಹಳ ತಯಾರಿಯಿಂದ ಮತ್ತು ಮುನ್ನೆಚ್ಚರಿಕೆಯಿಂದ ಪ್ಲಾನ್ ಮಾಡಿ ಆ ನರಭಕ್ಷಕ ಹುಲಿ ಬೇಟೆಯಾಡುವ ಪ್ರಯತ್ನ ಮೊದಲ ಬಾರಿ ಮಿಸ್ ಆಗಿದ್ದನ್ನು ನೀವು ಪುಸ್ತಕ ಓದಿಯೇ ಎಂಜಾಯ್ ಮಾಡಬೇಕು .

 ಕತ್ತಲಲ್ಲಿ ಟಾರ್ಚ್ ಬಿಡುವ ರೀತಿ  ,ಬಟ್ಟೆ ಆಕೃತಿ  ಮಾಡಿ ಮಾನವರ ರೀತಿ ನೀರ ಬಳಿ ನಿಲ್ಲಿಸಿ ಬೇಟೆಗೆ ಸಿದ್ದರಾದ ರೀತಿ ನಮಗೆ ಹೊಸತು ಎನಿಸದಿರದು.ನರಿಯ ,ಮತ್ತು ಇತರೆ ಪ್ರಾಣಿಗಳ ಕೂಗು. "

ಬ ಊ...ಅ"

"ವೀವ್ ವೀವ್ ...ಕೊಕ್ ಕೊಕ್ಕಾ"  ಮುಂತಾದ ವಿವರಣೆಯನ್ನು ಓದುವಾಗ ,ಯಾವುದೋ ಪ್ರಾಣಿಗಳ ಟಿ .ವಿ ಚಾನೆಲ್ ನೋಡುವಂತೆ ಭಾಸವಾಗುತ್ತದೆ.

ಮೂರನೆಯ ಕಥೆಯಲ್ಲಿ ತಲೈನೊವ್ವಿನ ನರದ್ವೇಷಿ. ಬಗ್ಗೆ ಚಿತ್ರಣ ಇದೆ .

ಚಿರತೆಯೊಂದು ತನ್ನ ಪಾಡಿಗೆ ಕಾಡಲ್ಲಿ ತನ್ನ ಮರಿಗಳೊಂದಿಗೆ  ಇತ್ತು ತನ್ನ 

ನಾಲ್ಕು ಮರಿಗಳನ್ನು ಸಾಯಿಸಿದ ಮಾನವರ ಹುಡುಕಿ ಹುಡುಕಿ ಕೊಲ್ಲಲು ಆರಂಭ ಮಾಡಿದಾಗ ಬೆದರಿದ ಊರ ಜನ ಆಂಡರ್ಸನ್ ಮೊರೆ ಹೋದಾಗ ಆ ಚಿರತೆ ಅಂತ್ಯ ಹೇಗಾಯಿತು ಎಂಬುದನ್ನು ಮಾನವ ಪ್ರಾಣಿಗಳ ಸಂಘರ್ಷ ದ ಹಿನ್ನೆಲೆಯಲ್ಲಿ ಬಹಳ ಸುಂದರವಾಗಿ ಬರೆದಿದ್ದಾರೆ ಆಂಡರ್ಸನ್ .ಅಷ್ಟೇ ಉತ್ತಮವಾಗಿ ಕನ್ನಡಕ್ಕೆ ತಂದಿದ್ದಾರೆ ಲೇಖಕಿ ಸಾಕ್ಷಿ ರವರು. 

 

ಆಂಡರ್ಸನ್ ಕೇವಲ ಕೋವಿ ಹಿಡಿದು ಪ್ರಾಣಿಗಳ ಬೇಟೆಯಾಡುವ ಕಟುಕನಾಗದೇ ಸೂಕ್ಷ್ಮ ಮನಸಿನ ಸಂಶೋದಕರು ಎಂಬುದನ್ನು  ಇದೇ ಪುಸ್ತಕದಲ್ಲಿ ಬರುವ ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು .

"ನರಭಕ್ಷಕ ಹುಲಿ ಅಥವಾ ಚಿರತೆ ಬರೀ ಮನುಷ್ಯ ಮಾಂಸವನ್ನು ನಂಬಿ ಕುಂತಿರುತ್ತದೆ ಎನ್ನುವುದು ಸುಳ್ಳಾದೀತು. ಹಾಗೇನಾದರೂ ಆದಲ್ಲಿ ಹುಲಿ ವಾರಕ್ಕೆರಡು ಬಾರಿ ಬೇಟೆಯಾಡಲೇಬೇಕಾಗಿರುವುದರಿಂದ,  ಸಾಯುವ ಜನರ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತದೆ.ಇದರಿಂದ ಜಾಗರೂಕವಾಗುವ ಜನರು ಹುಲಿಯ ಬಾಯಿಗೆ ಸಿಗದಂತೆ ಎಚ್ಚರವಹಿಸಿ, ನಂತರ ಹುಲಿಯೇ ಹೊಟ್ಟೆಗಿಲ್ಲದೆ ಸಾಯಬೇಕಾಗುತ್ತದೆ. ದೊಡ್ಡ ಪ್ರಾಣಿಗಳನ್ನು ಹಿಡಿಯಲು ಅಶಕ್ತವಾದ ಹುಲಿಗಳು ಮಾತ್ರ ನರಭಕ್ಷಕನಾಗುವುದು, ಯಾಕೆಂದರೆ ಮನುಷ್ಯನನ್ನು ಅಸಹಾಯಕ ಪ್ರಾಣಿ ಇನ್ನೊಂದಿಲ್ಲ! ಒಮ್ಮೆ ಹುಲಿಗೆ ರುಚಿ ಹತ್ತಿದಮೇಲೆ ಬೇರೆ ಪ್ರಾಣಿಯನ್ನು ಕಷ್ಟಪಟ್ಟು ಬೇಟೆಯಾಡಲ್ಲವಷ್ಟೆ! ಮಾನವ ಪ್ರಾಣಿಯೇನಾದರೂ ಸಿಗದೇ ಹೋದರೆ, ಅದು ತನ್ನ ಸಹಜ ಆಹಾರಗಳ ಕಡೆ ತಿರುಗುತ್ತದೆ, ಅವಕಾಶ ಸಿಕ್ಕಿದಾಗ ಮಾತ್ರ ನರಬೇಟೆಯಲ್ಲಿ ತೊಡಗುತ್ತದೆ. ಆದರೆ ಒಂದು ನರಭಕ್ಷಕ ಎಷ್ಟೇ ಪ್ರಾಣಿಗಳನ್ನು ಮನುಷ್ಯರನ್ನು ಹಿಡಿದು ತಿಂದರೂ, ಮನುಷ್ಯರ ಬಗೆಗಿನ ಮೂಲಭೂತವಾದ ಭಯ ಅದನ್ನು ಬಿಟ್ಟುಹೋಗುವುದೇ ಇಲ್ಲ. ಎಂಥ ಭೀಕರವಾದ ನರಭಕ್ಷಕನೇ ಆಗಲಿ, ಮಾನವರು ತಿರುಗಿಬಿದ್ದಾಗ ಬಾಲ ಮುದುರಿ ಓಡಿಹೋಗಿರುವ ಘಟನೆಗಳೇ ಹೆಚ್ಚು. ಆದರೆಂದೂ  ಆನೆಯನ್ನು ಹೊರತುಪಡಿಸಿ ದನಗಳಾಗಲಿ  ಬೇರೆ ಸಾಕು ಪ್ರಾಣಿಗಳಾಗಲಿ ಇವ್ಯಾವುದಕ್ಕೂ ನರಭಕ್ಷಕಗಳು ಹೆದರುವುದೇ ಇಲ್ಲ"


ಕೆನೆತ್ ಆಂಡರ್ಸನ್ ಕಥೆಗಳು ನಮಗೆ ಕಾಡಿನ ಚಿತ್ರಣ, ಮತ್ತು ಪ್ರಾಣಿ ಮಾನವ ಸಂಘರ್ಷದ ಹಿನ್ನೆಲೆಯಲ್ಲಿ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ . ಎಲ್ಲಾ ಹನ್ನೊಂದು ಕಥೆಗಳು ಬಹಳ ಸುಂದರವಾಗಿವೆ . ಇಂತಹ ಕಥೆಗಳನ್ನು ಕನ್ನಡಕ್ಕೆ ತಂದ ಸಾಕ್ಷಿ ರವರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು ಅವರಿಂದ ಇನ್ನೂ ಉತ್ತಮವಾದ ಕೃತಿಗಳು ಹೊರಹೊಮ್ಮಲಿ .


 ಪುಸ್ತಕದ ಹೆಸರು: ಕೆನೆತ್ ಆಂಡರ್ಸನ್ ಕಥೆಗಳು 

 ಅನುವಾದ:  ಸಾಕ್ಷಿ.

  ಪ್ರಕಾಶನ: ಆಕೃತಿ ಪುಸ್ತಕ ಬೆಂಗಳೂರು.

ಬೆಲೆ : ೨೭೫.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ


*ಇಂದಿನ ಜನಮಿಡಿತ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*


 

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಚಿತ್ರ ವಿಮರ್ಶೆ*೪/೯/೨೧


 

03 September 2021

ಇಂದಿನ ಸತ್ಯದ ಹೊನಲು ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಹನಿಗಳು . ೩/೯/೨೧


 

ಸಿಹಿಜೀವಿಯ ಹನಿಗಳು


 ಸವಿ ಜೀವನಕ್ಕೆ ಸಿಹಿಜೀವಿಯ ಐದು ಹನಿಗಳು



ಮಾನವ 

ಸಮಾಜ ಜೀವಿ

ಸಂಘ ಜೀವಿ

ಸಂಸಾರ ಜೀವಿ

ಸಾಮರಸ್ಯದಿ ಬಾಳಿದರೆ

ಜೀವನವೇ ಸವಿ

ಸಮರಸ ತಪ್ಪಿದರೆ 

ತೊಡಬೇಕು ಕಾವಿ!!



ಬದುಕ ಬಂಡಿಯ ಪಯಣ

ಸಾಗಲು ದಂಪತಿಗಳು 

ಜೋಡೆತ್ತಿನಂತೆ ಸಾಗಬೇಕು|

ಸಾಮರಸ್ಯವಿರದಿರೆ

ದಿನವೂ ಕಚ್ಚಾಟವಾದರೆ

ಅನಿಸಿಬಿಡುವುದು ಈ

ಜೀವನ ಸಾಕಪ್ಪ ಸಾಕು||



ಗಂಡ ಹೆಂಡಿರ ನಡುವೆ

ಇರಬಾರದು ಮೇಲು ಕೀಳು|

ಅಹಂ ಬಿಟ್ಟು ಹೊಂದಾಣಿಕೆ

ಜೀವನ ನಡೆಸದಿದ್ದರೆ 

ತಪ್ಪದು ಗೋಳು||



ಪ್ರೀತಿ ,ಸ್ನೇಹ, ಸಹಬಾಳ್ವೆ

ಇವುಗಳ ತಳಹದಿಯಲ್ಲಿ

ಐವತ್ತು ವರ್ಷಗಳ ದಾಂಪತ್ಯ

ಸವೆಸಿದ ಅಜ್ಜ ಅಜ್ಜಿಯ ಕರೆದರು

ಬಾ ಇಲ್ಲಿ ನನ್ನ ಸ್ವೀಟಿ|

ಸಾಮರಸ್ಯದ ಕೊರತೆಯಿಂದ

ಅಹಂನ ಉಗಮದಿಂದ

ಮದುವೆಯಾದ ವಾರಕ್ಕೆ

ಯುವಜೋಡಿ ಪರಸ್ಪರ

ಕೊಟ್ಟರು ಸೋಡಾ ಚೀಟಿ||




ನಮ್ಮನ್ನು ಅರ್ಥ ಮಾಡಿಕೊಂಡು

ಜೊತೆಗೆ ಹೆಜ್ಜೆ ಹಾಕಿದರೆ

ಅವರೇ ಜೀವನ ಸಂಗಾತಿ|

ಅಪಾರ್ಥ, ಅಪನಂಬಿಕೆ,

ತಲೆಯೆತ್ತಿದರೆ ಆರದೇ

ಇರದು ಸಂಸಾರ ಜ್ಯೋತಿ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


02 September 2021

ಬೋಲೋ ಭಾರತ್ ಮಾತಾ ಕಿ .....


 


ಆಫ್ಘನ್ ವಿದ್ಯಮಾನ ಮತ್ತು ಭಾರತ 


ಇಂದು ವಿಶ್ವವೇ ಒಂದು ಹಳ್ಳಿಯಾಗಿದೆ . ಯಾವುದೇ ದೇಶದ ಸಣ್ಣ ವಿದ್ಯಮಾನಗಳು ಇತರೆ ದೇಶಗಳ ಮೇಲೆ ಸಕಾರಾತ್ಮಕ ಅಥವಾ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು. ಪ್ರಸ್ತುತ ಅಫ್ಘಾನಿಸ್ತಾನದ ಬೆಳವಣಿಗೆ ನಮ್ಮ ದೇಶದ ಮೇಲೆಯೂ ಪರಿಣಾಮ ಬೀರದೆ ಇರದು .


ಮೊದಲ ಪರಿಣಾಮ ಎಂದರೆ ನಮ್ಮ ದೇಶದ ಆಡಳಿತ ಮತ್ತು ನಾಯಕತ್ವದ ಬಗ್ಗೆ ನಮಗೆ ಹೆಮ್ಮೆ ಮೂಡುತ್ತದೆ. ದೇಶದಲ್ಲಿ ಎಡ,ಬಲ ಸಿದ್ದಾಂತಗಳ ಭಿನ್ನಾಭಿಪ್ರಾಯಗಳು , ಪಕ್ಷಗಳ ಕಿತ್ತಾಟ ಏನೇ ಇದ್ದರೂ ಉಗ್ರರ ನಿರಂತರವಾದ ಉಪಟಳ, ನೆರೆ ರಾಷ್ಟ್ರಗಳ ನರಿ ಬುದ್ಧಿಯ ತೊಂದರೆಗಳನ್ನು ಸ್ವಾತಂತ್ರ್ಯ ಬಂದಾಗಿನಿಂದಲೂ ಕೆಲವೊಮ್ಮೆ ತಾಳ್ಮೆಯಿಂದ ಸಹಿಸಿಕೊಂಡು ಕೆಲವೊಮ್ಮೆ ‌ಮುಟ್ಟಿ ನೋಡಕೊಳ್ಳುವಂತೆ ಬಾರಿಸಿರುವ ನಮ್ಮ ಆಡಳಿತ ವ್ಯವಸ್ಥೆಗೆ ಮೆಚ್ಚುಗೆ ಸೂಚಿಸಲೇಬೇಕು ಎಂಬ ಭಾವನೆ ಬಂದಿದೆ . ತಾವು ಗಳಿಸಿದ ಆಸ್ತಿ ಪಾಸ್ತಿ ಸಂಪತ್ತು ಬಿಟ್ಟು ಜೀವ ಭಯದಿಂದ ದೇಶ ಬಿಟ್ಟು ಓಡಿಹೋಗಲು ಪಡಿಪಾಟಲು ಪಡುವ ಆಫ್ಘನ್ ಪ್ರಜೆಗಳ ನೋಡಿದಾಗ ನಮ್ಮ ದೇಶದಲ್ಲಿ ನಾವು ಎಷ್ಟು ಸುರಕ್ಷಿತವಾಗಿ ಮತ್ತು ನೆಮ್ಮದಿಯಿಂದ ಇರುವೆವು ಎಂಬುದನ್ನು ಅರ್ಥಮಾಡಿಕೊಂಡಿರುವೆವು. ಇಂತಹ ವಿದ್ಯಮಾನಗಳ ನೋಡಿದಾಗ ಭಾರತೀಯರಾದ ನಾವು ಹೆಮ್ಮೆಯಿಂದ ಜೋರಾಗಿ ಮತ್ತೊಮ್ಮೆ ಹೇಳಬಹುದು ಬೋಲೋ ಭಾರತ್ ಮಾತಾ...ಕಿ...

ಇದು ಸಕಾರಾತ್ಮಕ ಬೆಳವಣಿಗೆ ಆದರೆ ಕೆಲವು ನಕಾರಾತ್ಮಕ ಬೆಳವಣಿಗೆ ಕೂಡಾ ಆಗಬಹುದು


ಆರ್ಥಿಕವಾಗಿ ನಾವು ಅಫ್ಘಾನಿಸ್ತಾನದ ಮೇಲೆ ಅಷ್ಟಾಗಿ ಅವಲಂಬನೆ ಆಗದಿದ್ದರೂ ಡ್ರ್ರೈಪ್ರೂಟ್ ಮುಂತಾದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತೇವೆ ,ಪ್ರಸ್ತುತ ವಿದ್ಯಮಾನ ಡ್ರೈ ಪ್ರೂಟ್ ದರ ಆಕಾಶ ನೋಡುತ್ತಿದೆ.ಇದಕ್ಕೆ ಪರ್ಯಾಯ ಮಾರ್ಗ ಕಂಡುಹಿಡಿಯಲು ಭಾರತ ಸಶಕ್ತವಾಗಿದೆ.


ಇನ್ನೂ ಬಹಳಷ್ಟು ಜನ ಆತಂಕ ಪಡುವ ಅಂಶವೆಂದರೆ ಉಗ್ರರು ನಮ್ಮ ಗಡಿಯಲ್ಲಿ ತಂಟೆ ತೆಗೆಯುವರು ಮತ್ತು ದೇಶದ ಒಳನುಗ್ಗಿ ಅಶಾಂತಿ ಸೃಷ್ಟಿಸುವರು ಎಂಬುದು. ಇದು ಈಗ ಸಾದ್ಯವಿಲ್ಲದ ಮಾತು.

ಈಗ ಭಾರತದ ಸೇನೆ ಸಶಕ್ತವಾಗಿದೆ. ಗಡಿಯಲ್ಲಿ ತಂಟೆ ತೆಗೆದರೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ,ನಮ್ಮ ಕೆಣಕಿದರೆ ಮುಟ್ಟಿದರೆ ತಟ್ಟಿಬಿಡುವೆವು ಎಂಬುದನ್ನು ಅವರೂ ಅರಿತಿದ್ದಾರೆ.ಹಾಗೆಂದು ನಾವು ಮೈಮರೆತು ಕುಳಿತುಕೊಳ್ಳುವ ಕಾಲವಿದಲ್ಲ.

ಇಷ್ಟೆಲ್ಲಾ ಎಚ್ಚರಿಕೆಯಿಂದ ಇದ್ದರೂ ಕೆಲ ದೇಶದ್ರೋಹಿಗಳು ವಿದೇಶದ ಎಂಜಲು ಕಾಸಿಗೆ ಆಸೆ ಬಿದ್ದು ಉಗ್ರರಿಗೆ ಆಶ್ರಯ ನೀಡುವ ಕೆಲಸ ಅಲ್ಲಲ್ಲಿ ನಡೆದಿರುವುದು ದುರದೃಷ್ಟಕರ .


ಭಾರತಾಂಭೆಯ ಹೆಮ್ಮೆಯ ಮಕ್ಕಳಾದ ನಾವುಗಳು ಅಮ್ಮನ ಗೌರವ ಉಳಿಸಲು ಪಣ ತೊಡೋಣ ವಿದೇಶೀ ದುಷ್ಟ ಶಕ್ತಿಗಳ ವಿರುದ್ಧ ಒಗ್ಗಟ್ಟು ಸಾಧಿಸೋಣ .ಬೋಲೋ ಭಾರತ್ ಮಾತಾ ಕಿ......



ಸಿಹಿಜೀವಿ

ಸಿ ಜಿ ವೆಂಕಟೇಶ್ವರ