ಸವಿ ಜೀವನಕ್ಕೆ ಸಿಹಿಜೀವಿಯ ಐದು ಹನಿಗಳು
೧
ಮಾನವ
ಸಮಾಜ ಜೀವಿ
ಸಂಘ ಜೀವಿ
ಸಂಸಾರ ಜೀವಿ
ಸಾಮರಸ್ಯದಿ ಬಾಳಿದರೆ
ಜೀವನವೇ ಸವಿ
ಸಮರಸ ತಪ್ಪಿದರೆ
ತೊಡಬೇಕು ಕಾವಿ!!
೨
ಬದುಕ ಬಂಡಿಯ ಪಯಣ
ಸಾಗಲು ದಂಪತಿಗಳು
ಜೋಡೆತ್ತಿನಂತೆ ಸಾಗಬೇಕು|
ಸಾಮರಸ್ಯವಿರದಿರೆ
ದಿನವೂ ಕಚ್ಚಾಟವಾದರೆ
ಅನಿಸಿಬಿಡುವುದು ಈ
ಜೀವನ ಸಾಕಪ್ಪ ಸಾಕು||
೩
ಗಂಡ ಹೆಂಡಿರ ನಡುವೆ
ಇರಬಾರದು ಮೇಲು ಕೀಳು|
ಅಹಂ ಬಿಟ್ಟು ಹೊಂದಾಣಿಕೆ
ಜೀವನ ನಡೆಸದಿದ್ದರೆ
ತಪ್ಪದು ಗೋಳು||
೪
ಪ್ರೀತಿ ,ಸ್ನೇಹ, ಸಹಬಾಳ್ವೆ
ಇವುಗಳ ತಳಹದಿಯಲ್ಲಿ
ಐವತ್ತು ವರ್ಷಗಳ ದಾಂಪತ್ಯ
ಸವೆಸಿದ ಅಜ್ಜ ಅಜ್ಜಿಯ ಕರೆದರು
ಬಾ ಇಲ್ಲಿ ನನ್ನ ಸ್ವೀಟಿ|
ಸಾಮರಸ್ಯದ ಕೊರತೆಯಿಂದ
ಅಹಂನ ಉಗಮದಿಂದ
ಮದುವೆಯಾದ ವಾರಕ್ಕೆ
ಯುವಜೋಡಿ ಪರಸ್ಪರ
ಕೊಟ್ಟರು ಸೋಡಾ ಚೀಟಿ||
೫
ನಮ್ಮನ್ನು ಅರ್ಥ ಮಾಡಿಕೊಂಡು
ಜೊತೆಗೆ ಹೆಜ್ಜೆ ಹಾಕಿದರೆ
ಅವರೇ ಜೀವನ ಸಂಗಾತಿ|
ಅಪಾರ್ಥ, ಅಪನಂಬಿಕೆ,
ತಲೆಯೆತ್ತಿದರೆ ಆರದೇ
ಇರದು ಸಂಸಾರ ಜ್ಯೋತಿ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment