ಆಫ್ಘನ್ ವಿದ್ಯಮಾನ ಮತ್ತು ಭಾರತ
ಇಂದು ವಿಶ್ವವೇ ಒಂದು ಹಳ್ಳಿಯಾಗಿದೆ . ಯಾವುದೇ ದೇಶದ ಸಣ್ಣ ವಿದ್ಯಮಾನಗಳು ಇತರೆ ದೇಶಗಳ ಮೇಲೆ ಸಕಾರಾತ್ಮಕ ಅಥವಾ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು. ಪ್ರಸ್ತುತ ಅಫ್ಘಾನಿಸ್ತಾನದ ಬೆಳವಣಿಗೆ ನಮ್ಮ ದೇಶದ ಮೇಲೆಯೂ ಪರಿಣಾಮ ಬೀರದೆ ಇರದು .
ಮೊದಲ ಪರಿಣಾಮ ಎಂದರೆ ನಮ್ಮ ದೇಶದ ಆಡಳಿತ ಮತ್ತು ನಾಯಕತ್ವದ ಬಗ್ಗೆ ನಮಗೆ ಹೆಮ್ಮೆ ಮೂಡುತ್ತದೆ. ದೇಶದಲ್ಲಿ ಎಡ,ಬಲ ಸಿದ್ದಾಂತಗಳ ಭಿನ್ನಾಭಿಪ್ರಾಯಗಳು , ಪಕ್ಷಗಳ ಕಿತ್ತಾಟ ಏನೇ ಇದ್ದರೂ ಉಗ್ರರ ನಿರಂತರವಾದ ಉಪಟಳ, ನೆರೆ ರಾಷ್ಟ್ರಗಳ ನರಿ ಬುದ್ಧಿಯ ತೊಂದರೆಗಳನ್ನು ಸ್ವಾತಂತ್ರ್ಯ ಬಂದಾಗಿನಿಂದಲೂ ಕೆಲವೊಮ್ಮೆ ತಾಳ್ಮೆಯಿಂದ ಸಹಿಸಿಕೊಂಡು ಕೆಲವೊಮ್ಮೆ ಮುಟ್ಟಿ ನೋಡಕೊಳ್ಳುವಂತೆ ಬಾರಿಸಿರುವ ನಮ್ಮ ಆಡಳಿತ ವ್ಯವಸ್ಥೆಗೆ ಮೆಚ್ಚುಗೆ ಸೂಚಿಸಲೇಬೇಕು ಎಂಬ ಭಾವನೆ ಬಂದಿದೆ . ತಾವು ಗಳಿಸಿದ ಆಸ್ತಿ ಪಾಸ್ತಿ ಸಂಪತ್ತು ಬಿಟ್ಟು ಜೀವ ಭಯದಿಂದ ದೇಶ ಬಿಟ್ಟು ಓಡಿಹೋಗಲು ಪಡಿಪಾಟಲು ಪಡುವ ಆಫ್ಘನ್ ಪ್ರಜೆಗಳ ನೋಡಿದಾಗ ನಮ್ಮ ದೇಶದಲ್ಲಿ ನಾವು ಎಷ್ಟು ಸುರಕ್ಷಿತವಾಗಿ ಮತ್ತು ನೆಮ್ಮದಿಯಿಂದ ಇರುವೆವು ಎಂಬುದನ್ನು ಅರ್ಥಮಾಡಿಕೊಂಡಿರುವೆವು. ಇಂತಹ ವಿದ್ಯಮಾನಗಳ ನೋಡಿದಾಗ ಭಾರತೀಯರಾದ ನಾವು ಹೆಮ್ಮೆಯಿಂದ ಜೋರಾಗಿ ಮತ್ತೊಮ್ಮೆ ಹೇಳಬಹುದು ಬೋಲೋ ಭಾರತ್ ಮಾತಾ...ಕಿ...
ಇದು ಸಕಾರಾತ್ಮಕ ಬೆಳವಣಿಗೆ ಆದರೆ ಕೆಲವು ನಕಾರಾತ್ಮಕ ಬೆಳವಣಿಗೆ ಕೂಡಾ ಆಗಬಹುದು
ಆರ್ಥಿಕವಾಗಿ ನಾವು ಅಫ್ಘಾನಿಸ್ತಾನದ ಮೇಲೆ ಅಷ್ಟಾಗಿ ಅವಲಂಬನೆ ಆಗದಿದ್ದರೂ ಡ್ರ್ರೈಪ್ರೂಟ್ ಮುಂತಾದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತೇವೆ ,ಪ್ರಸ್ತುತ ವಿದ್ಯಮಾನ ಡ್ರೈ ಪ್ರೂಟ್ ದರ ಆಕಾಶ ನೋಡುತ್ತಿದೆ.ಇದಕ್ಕೆ ಪರ್ಯಾಯ ಮಾರ್ಗ ಕಂಡುಹಿಡಿಯಲು ಭಾರತ ಸಶಕ್ತವಾಗಿದೆ.
ಇನ್ನೂ ಬಹಳಷ್ಟು ಜನ ಆತಂಕ ಪಡುವ ಅಂಶವೆಂದರೆ ಉಗ್ರರು ನಮ್ಮ ಗಡಿಯಲ್ಲಿ ತಂಟೆ ತೆಗೆಯುವರು ಮತ್ತು ದೇಶದ ಒಳನುಗ್ಗಿ ಅಶಾಂತಿ ಸೃಷ್ಟಿಸುವರು ಎಂಬುದು. ಇದು ಈಗ ಸಾದ್ಯವಿಲ್ಲದ ಮಾತು.
ಈಗ ಭಾರತದ ಸೇನೆ ಸಶಕ್ತವಾಗಿದೆ. ಗಡಿಯಲ್ಲಿ ತಂಟೆ ತೆಗೆದರೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ,ನಮ್ಮ ಕೆಣಕಿದರೆ ಮುಟ್ಟಿದರೆ ತಟ್ಟಿಬಿಡುವೆವು ಎಂಬುದನ್ನು ಅವರೂ ಅರಿತಿದ್ದಾರೆ.ಹಾಗೆಂದು ನಾವು ಮೈಮರೆತು ಕುಳಿತುಕೊಳ್ಳುವ ಕಾಲವಿದಲ್ಲ.
ಇಷ್ಟೆಲ್ಲಾ ಎಚ್ಚರಿಕೆಯಿಂದ ಇದ್ದರೂ ಕೆಲ ದೇಶದ್ರೋಹಿಗಳು ವಿದೇಶದ ಎಂಜಲು ಕಾಸಿಗೆ ಆಸೆ ಬಿದ್ದು ಉಗ್ರರಿಗೆ ಆಶ್ರಯ ನೀಡುವ ಕೆಲಸ ಅಲ್ಲಲ್ಲಿ ನಡೆದಿರುವುದು ದುರದೃಷ್ಟಕರ .
ಭಾರತಾಂಭೆಯ ಹೆಮ್ಮೆಯ ಮಕ್ಕಳಾದ ನಾವುಗಳು ಅಮ್ಮನ ಗೌರವ ಉಳಿಸಲು ಪಣ ತೊಡೋಣ ವಿದೇಶೀ ದುಷ್ಟ ಶಕ್ತಿಗಳ ವಿರುದ್ಧ ಒಗ್ಗಟ್ಟು ಸಾಧಿಸೋಣ .ಬೋಲೋ ಭಾರತ್ ಮಾತಾ ಕಿ......
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment