*ಕಾಲಿಲ್ಲದೇ ಕೈಯಲ್ಲೇ ಓಡಿದ ಕ್ಲಾರ್ಕ್*
ಒಲಿಂಪಿಕ್ಸ್ ನಲ್ಲಿ ಮೆಡಲ್ ಗಳಿಸಿದವರ ಹೆಮ್ಮೆಯಿಂದ ಕೊಂಡಾಡಿದ್ದೇವೆ ಪ್ಯಾರಲಿಂಪಿಕ್ಸನಲ್ಲಿ ವಿಶೇಷಚೇತನರು ಪದಕ ಗೆದ್ದದ್ದನ್ನು ಬೆರಗುಗಣ್ಣಿನಿಂದ ನೋಡಿ ಹಾರೈಸಿ ಅಭಿನಂದಿಸಿದ್ದೇವೆ .
ಇಲ್ಲೊಬ್ಬ ಸಾಧಕನಿರುವನು ಎರಡೂ ಕಾಲುಗಳಿಲ್ಲದಿದ್ದರೂ
ಇರುವ ಎರಡು ಕೈಗಳಿಂದಲೇ ಕೇವಲ 4.78 ಸೆಕೆಂಡ್ಗಳಲ್ಲಿ ಬರೋಬ್ಬರಿ 20 ಮೀಟರ್ಗಳನ್ನು ಕ್ರಮಿಸಿ, ಮೊನ್ನೆಯಷ್ಟೇ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದ ಛಲದಂಕ ಮಲ್ಲ!!
ಈ ಸಾಧಕನ ಹೆಸರು ಜ಼ಯ್ನ್ ಕ್ಲಾರ್ಕ್(Zion Clerk)!
ಅಪ್ರತಿಮ ಕುಸ್ತಿಪಟುವೂ ಆಗಿರುವ ಜ಼ಯ್ನ್ನ ಮಾತುಗಳು, ಆತನ ಜೀವನೋತ್ಸಾಹ ನಮ್ಮೆಲ್ಲರ ಬದುಕಿನಲ್ಲಿ ಏನನ್ನಾದರೂ ಸಾಧಿಸುವವರಿಗೆ ನವಚೈತನ್ಯ ತುಂಬಿಬಿಡುತ್ತವೆ.
23 ವರ್ಷದ ಕ್ರೀಡಾಪಟು ವ್ಯಕ್ತಿತ್ವ ವಿಕಸನ ಭಾಷಣಕಾರ, ಮತ್ತು ಕುಸ್ತಿ ಪಟು ಆಗಿರುವ ಇವರು ತನ್ನ ಸಾಧನೆಯು ಇತರ ವಿಶೇಷ ಚೇತನ ಮಕ್ಕಳಿಗೆ ದೊಡ್ಡ ಕನಸು ಕಾಣಲು ಪ್ರೇರೇಪಿಸಲಿ ಎಂಬ ಆಶಯ ಹೊಂದಿರುವರು.
ಯುಎಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಕಾಲುಗಳಿಲ್ಲದೆ ಜನಿಸಿದ ಕ್ಲಾರ್ಕ್, ಕಾಡಲ್ ರಿಗ್ರೆಷನ್ ಸಿಂಡ್ರೋಮ್ ಎಂದು ಕರೆಯಲ್ಪಡುವ ಕಾಯಿಲೆಯಿಂದ ಬಳಲುತ್ತಿದ್ದಾನೆ, ಅಪರೂಪದ ವೈದ್ಯಕೀಯ ಸ್ಥಿತಿಯಲ್ಲಿ ದೇಹದ ಕೆಳಗಿನ ಅರ್ಧದಷ್ಟು ಅಸಹಜ ಬೆಳವಣಿಗೆಯಿಂದ ಕ್ಲಾರ್ಕ್ ಇಂದು ಈ ಸ್ಥಿತಿಯಲ್ಲಿ ಇರುವರು.
ಅನಾಥರಾದ ಕ್ಲಾರ್ಕ್ ರವರನ್ನು ದತ್ತು ತೆಗೆದುಕೊಳ್ಳುಲು ಯಾರೂ ಮುಂದೆ ಬರಲಿಲ್ಲ.
ಕೊನೆಗೆ ಮಾತೃ ಹೃದಯದ ಪ್ರೀತಿಯ ತಾಯಿ ಕಿಂಬರ್ಲಿ ಹಾಕಿನ್ಸ್ ದತ್ತು ತೆಗೆದುಕೊಂಡರು.ಈಗಲೂ ಹಾಕಿನ್ಸ್ ಪ್ರೀತಿ ಮತ್ತು ಹಾರೈಕೆ ಕ್ಲಾರ್ಕ್ ನ್ನು ಗಟ್ಟಿ ಗೊಳಿಸಿ ಸಾಧನೆಗೆ ಪೂರಕವಾಗಿದೆ.
ಚಿಕ್ಕ ವಯಸ್ಸಿನಿಂದಲೂ, ಅವರ ಅಂಗವೈಕಲ್ಯವು ಅವರನ್ನು ದೃತಿಗೆಡುವಂತೆ ಮಾಡಲಿಲ್ಲ
ಅವರ ಪ್ರೌಢಶಾಲೆಯ ದಿನಗಳಲ್ಲಿ, ಅವರು ಕುಸ್ತಿಪಟುವಾಗಿದ್ದರು.ಶಾಲಾ ಜಿಮ್ಗೆ ಹಿಂದಿರುಗಿದ ಅವರು ಅದ್ಭುತವಾದ ಸಾಧನೆಯನ್ನು ಸಾಧಿಸಿದರು, ಈಗ ಪ್ರಸ್ತುತ 20 ಮೀಟರ್ ದೂರವನ್ನು ಕೇವಲ4.78 ಸೆಕೆಂಡುಗಳಲ್ಲಿ ಕೈಗಳ ಸಹಾಯದಿಂದ ಓಡಿ ವಿಶ್ವ ದಾಖಲೆಯನ್ನು ಮಾಡಿರುವರು
"ಗಿನ್ನಿಸ್ ವಿಶ್ವ ದಾಖಲೆಯನ್ನು ಮಾಡಿದ ಸಂಧರ್ಭದಲ್ಲಿ ಕ್ಲಾರ್ಕ್
ಅವರ ತಾಯಿ, ಸ್ನೇಹಿತರು ಮತ್ತು ಟ್ರ್ಯಾಕ್ ತರಬೇತುದಾರ, ಒಲಿಂಪಿಕ್ ಗೋಲ್ಡ್ ಮೆಡಲಿಸ್ಟ್ ಮತ್ತು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಬುಚ್ ರೆನಾಲ್ಡ್ಸ್ ಅವರ ಬೆಂಬಲಕ್ಕೆ ಧನ್ಯವಾದಗಳನ್ನು ಹೇಳಲು ಮರೆಯುವುದಿಲ್ಲ. ಕ್ಲಾರ್ಕ್
ಇಂದಿನ ಯುವಪೀಳಿಗೆಗೆ ಉತ್ತಮ ಮಾದರಿ ಕೂಡಾ ಅವರು ಯುವಕರಿಗೆ ಮತ್ತು ವಿಶೇಷಚೇತನರ ಕುರಿತು ಹೀಗೆ ಹೇಳುತ್ತಾರೆ
"ಜೀವನದಲ್ಲಿ ನನ್ನ ಗುರಿ ಏನೆಂದರೆ ಮಕ್ಕಳು ಜೀವನದಲ್ಲಿ ಏನಾಗಬೇಕೆಂಬುದನ್ನು ನಾವು ಪ್ರೇರೇಪಿಸಬೇಕು , ನೀವು ಏನು ಮಾಡಲು ಸಾಧ್ಯವಿಲ್ಲ ಎಂದು ಯಾರಿಗೂ ಹೇಳಬೇಡಿ ಅವರಲ್ಲಿ ಆತ್ಮ ವಿಶ್ವಾಸ ತುಂಬಿ " ಎಂಬ ಸಂದೇಶ ನೀಡುತ್ತಾರೆ.
ಬಾಲ್ಯದಲ್ಲಿ ಕಿರುಕುಳ ಮತ್ತು ನಿಂದನೆ, ಅನುಭವಿಸಿದ ಕ್ಲಾರ್ಕ್ ಗೆ ಅವರ ಸಾಧನೆ ಸುಲಭದ್ದಾಗಿರಲಿಲ್ಲ. ಆದರೆ ಅವರು ನಿರಂತರವಾಗಿ ತನ್ನ ಮಿತಿಯನ್ನು ಮೀರಿ ಸರಳವಾದ ಧ್ಯೇಯವಾಕ್ಯದೊಂದಿಗೆ ಸತತ ಪ್ರಯತ್ನ ಪಡುತ್ತಾ ಆತ್ಮವಿಶ್ವಾಸದಿಂದ ಈ ಸಾಧನೆ ಮಾಡಿದ್ದಾರೆ .
ತನ್ನ ನಿರಂತರ ಪ್ರಯತ್ನದ ಮೂಲಕ
2024 ರ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಅವರು ಎದುರು ನೋಡುತ್ತಿದ್ದಾರೆ. ಅವರು ಒಲಿಂಪಿಕ್ಸ್ (ಕುಸ್ತಿ) ಮತ್ತು ಪ್ಯಾರಾಲಿಂಪಿಕ್ಸ್ (ಗಾಲಿಕುರ್ಚಿ ರೇಸಿಂಗ್) ಗೇಮ್ಸ್ ಎರಡರಲ್ಲೂ ಭಾಗವಹಿಸುವ ಮೊದಲ ಅಮೇರಿಕನ್ ಅಥ್ಲೀಟ್ ಆಗಲು ಬಯಸುತ್ತಿದ್ದಾರೆ ತನ್ಮೂಲಕ ಕೋಟ್ಯಂತರ ಜನರ ಪ್ರೇರಕ ಶಕ್ತಿಯಾಗಿ ಹೊರಹೊಮ್ಮಲಿದ್ದಾರೆ
ಹ್ಯಾಟ್ಸಾಪ್ ಟು ಯೂ ಕ್ಲಾರ್ಕ್.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
No comments:
Post a Comment