ಮಹಾರಾಜ .
ಮಲ್ಲಪ್ಪ ಗಾಯತ್ರಮ್ಮ ದಂಪತಿಗಳು ಅನಕ್ಷರಸ್ಥ ರಾದರೂ ಹಳ್ಳಿಯಲ್ಲಿ ಕೂಲಿ ಮಾಡುತ್ತಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು.
ಬಹಳ ದಿನಗಳ ನಂತರ ದಂಪತಿಗೆ ಗಂಡು ಮಗುವಾಯಿತು .
ಮಗನಿಗೆ ಮಹಾರಾಜ ಎಂದು ನಾಮಕರಣ ಮಾಡಿದರು.
ಮಗ ನಮ್ಮಂತೆ ಅನಕ್ಷರಸ್ಥರಾಗುವುದು ಬೇಡ ಅಕ್ಷರ ಕಲಿಯಲಿ ಎಂದು ಒಳ್ಳೆಯ ಶಾಲೆಗೆ ಸೇರಿಸಿದರು.
ಮಹಾರಾಜನಿಗೆ ವಿದ್ಯೆ ಹತ್ತಲಿಲ್ಲ ಎಸ್ಸೆಲ್ಸಿ ಪೇಲಾಗಿ ಊರಲ್ಲಿ ಅಲೆಯಲು ಶುರುಮಾಡಿದ .
ಸಹವಾಸ ದೋಷ, ಟೀನೇಜ್ ನ ವಯೋಸಹಜ ಕಾಮನೆಗಳ ಫಲವಾಗಿ ಲವ್ ನಲ್ಲಿ ಬಿದ್ದ ಮಗ ಅನ್ಯಜಾತಿಯ ಹುಡುಗಿಯನ್ನು ಕರೆದುಕೊಂಡು ಹೋಗಿ ಮದುವೆಯಾಗಿ ಬಂದ.
ಒಲ್ಲದ ಮನಸ್ಸಿನಿಂದ ಒಪ್ಪಿ ಸೊಸೆ ಯನ್ನು ಮನೆತುಂಬಿಸಿಕೊಂಡ ಅತ್ತೆಗೆ ಒಂದು ತಿಂಗಳಲ್ಲೇ ಆಘಾತ ಕಾದಿತ್ತು.ಮಗನಿರದ ವೇಳೆ ಜಗಳ ತೆಗೆದ ಸೊಸೆ ಅತ್ತೆಯ ಮೇಲೆ ಕುಡುಗೋಲು ಹಿಡಿದು ಹೊಡೆಯಲು ಹೋದಳು .
ಮಗ ಅಸಹಾಯಕತೆ ವ್ಯಕ್ತ ಪಡಿಸಿ ಅಪ್ಪ ಅಮ್ಮನ ತೊರೆದು ನಗರಕ್ಕೆ ವಲಸೆ ಹೋಗಲು ತೀರ್ಮಾನಿಸಿದ.
ಹೆಂಡತಿಯಿಂದ ಅಪ್ಪ ಅಮ್ಮನ ತೊರೆದ ಬಗ್ಗೆ ಚಿಂತಿಸಿ ಮಹಾರಾಜ ಕುಡಿತದ ದಾಸನಾದ.
ಇತ್ತ ವೃದ್ದ ದಂಪತಿಗಳು ಮಗ ಬರುವನು ಎಂದು ಈಗಲೂ ಆಸೆಗಣ್ಣಿನಿಂದ ದಾರಿ ನೋಡುತ್ತಿರುವರು.....
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment