30 July 2018

ಮಿತಿ ಮೀರಿದ ಬಳಕೆ ದಿನ* (Earth over shoot day ) ಆಗಸ್ಟ್ 1 ಲೇಖನ

                         *ಮಿತಿ ಮೀರಿದ ಬಳಕೆ ದಿನ*
(Earth over shoot day )
ಆಗಸ್ಟ್ 1

ಏನೆಂದು ನಾ ಹೇಳಲಿ ...ಮಾನವನಾಸೆಗೆ ಕೊನೆ ಎಲ್ಲಿ‌.... ಎಂಬ ಅಣ್ಣಾವ್ರ ಹಾಡು  ಇಂದಿಗೂ ಎಂದಿಗೂ ಪ್ರಸ್ತುತ .ಆಸೆಯೇ ದುಃಖದ ಮೂಲ ಎಂದು ಬುದ್ದನಾದಿಯಾಗಿ ಹಲವು ಮಹಾಷಯರು ಪ್ರತಿಪಾದಿಸಿದರೂ ನಾವಿರುವುದೇ ಈಗೆ ಎಂಬ ಧೋರಣೆಯನ್ನು ಮುಂದುವರೆಸಿಕೊಂಡು ಬಂದ ಪರಿಣಾಮ ನಾವು ಈಗಾಗಲೇ ವೈಯಕ್ತಿಕ ವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಇದರ ಪರಿಣಾಮವಾಗಿ ನಮ್ಮ ಸಾಮಾಜಿಕ, ಆರ್ಥಿಕ, ಆರೋಗ್ಯ ದ ಮೇಲೆ ಹಲವಾರು ದುಷ್ಪರಿಣಾಮಗಳನ್ನು  ಅನುಭವಿಸುತ್ತಿದ್ದೇವೆ .
ಇದು ಇಲ್ಲಿಗೇ ನಿಂತಿಲ್ಲ  ನಾವು ಮಾಡಿರುವ ಅವಾಂತರಗಳಿಂದ  ಪರಿಸರ ಮತ್ತು ಜಗದ ಮೇಲೆ ಬೀರಿರುವ ಪರಿಣಾಮ ನೆನದರೆ ಹಗಲಿನಲ್ಲಿಯೂ ಬೆಚ್ಚಿ ಬೀಳುವಂತಾಗುತ್ತದೆ.
ಹಸಿರು ಮನೆ ಪರಿಣಾಮ ,ಎಲ್ ನಿನೊ ಲಾ ನಿನೊ ,ಜಾಗತಿಕ ತಾಪಮಾನ ,ಓಜೋನ್ ಪದರದ ಹಾನಿಯಾಗಿರುವುದು ಒಂದೇ ಎರಡೆ ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆದೀತು ,ಇವೆಲ್ಲವುಗಳ ಪರಿಣಾಮವಾಗಿ ಋತುವಿನಲ್ಲಿ ಅದಲು ಬದಲು ಅದಿಕ ತಾಪಮಾನ, ದಿನಕ್ಕೊಂದು ಹೊಸ ರೋಗಗಳ ಸೇರ್ಪಡೆ, ಅನ್ನಹಾರಕ್ಕೆ ಹಾಹಾಕಾರ ,ಪ್ರಾಣಿ ಮಾನವ ಸಂಘರ್ಷ, ಮಾಲಿನ್ಯದಂತಹ ಅಪಸವ್ಯಯಗಳು ಮಾಮೂಲಾಗಿಬಿಟ್ಟಿವೆ .
ಇವೆಲ್ಲದರ ಪರಿಣಾಮವಾಗಿ ಈಗ ಬರಲಿರುವ ಆಗಸ್ಟ್‌ ಒಂದನ್ನು ನಾವು
Earth over shoot day   (ಮಿತಿ ಮೀರಿದ ಬಳಕೆ ದಿನ ) ಆಚರಿಸುತ್ತಿದ್ದೇವೆ  ಹಾಗಾದರೆ

 ಮಿತಿಮೀರಿದ ಬಳಕೆ ದಿನ ಎಂದರೇನು?

ಜಗತ್ತಿನ ಎಲ್ಲಾ ಜನರು ನಾವು ಬಳಸಲು ಯೋಗ್ಯವಾದ ನೈಸರ್ಗಿಕ ಸಂಪನ್ಮೂಲಗಳಾದ ಜಲ ,ವಾಯು,ಮುಂತಾದವುಗಳನ್ನು ನಾವು ಮಿತಿ ಮೀರಿ ಬಳಸಿದ್ದೇವೆ ಹೇಗೆಂದರೆ ಒಂದು ವರ್ಷದಲ್ಲಿ ನಾವು ಬಳಸ ಬೇಕಿದ್ದ ಸಂಪನ್ಮೂಲಗಳನ್ನು ಇದೇ ಜುಲೈ ತಿಂಗಳ ಮೂವತ್ತೊಂದನೆ ತಾರೀಖಿಗೆ ಮುಗಿಸಿದ್ದೇವೆ ! ಇದರ ನೆನಪಿಗೆ ಮತ್ತು ಮುಂದೆ ನಮ್ಮ ಜೀವನದ ದುಃಸ್ತಿತಿ ನೆನೆದು ಎಚ್ಚರಿಕೆಯಿಂದ  Earth over shoot day   (ಮಿತಿ ಮೀರಿದ ಬಳಕೆ ದಿನ )   ಆಚರಣೆ ಮಾಡುತ್ತಿದ್ದೇವೆ .

1970 ರಿಂದ ನಾವು ಇಂತಹ ಮಿತಿಮೀರಿದ ಸಂಪನ್ಮೂಲಗಳ ಬಳಕೆಯನ್ನು ಅಳತೆ ಮಾಡಲಾರಂಭಿಸಿದೆವು ಆ ವರ್ಷ ಒಂದು ದಿನ ಮೊದಲೇ ನಾವು ನಮ್ಮ ಸಂಪನ್ಮೂಲಗಳನ್ನು ಬಳಕೆ ಮಾಡಿದರೆ 1976 ರಲ್ಲಿ ನವಂಬರ್ ನಲ್ಲಿ ನಮ್ಮ ವರ್ಷದ ಸಂಪನ್ಮೂಲಗಳನ್ನು ಬರಿದು ಮಾಡಿದೆವು. 1990 ರಲ್ಲಿ ಸೆಪ್ಟೆಂಬರ್ ಮೂವತ್ತಕ್ಕೆ ನಮ್ಮ ಸಂಪನ್ಮೂಲಗಳನ್ನು ದೋಚಿದೆವು  ಕಳೆದ ವರ್ಷ 2018 ರಲ್ಲಿ ಮೂರಕ್ಕೆ ನಮ್ಮ ಸಂಪನ್ಮೂಲಗಳನ್ನು ಮುಗಿಸಿದೆವು .ಈ ವರ್ಷ ಮೂರು ದಿನ ಮೊದಲೇ ನಮ್ಮ ಸಂಪನ್ಮೂಲಗಳನ್ನು ಬರಿದು ಮಾಡಿ ಆಗಸ್ಟ್ ಒಂದರಂದು ಮಿತಿ ಮೀರಿದ ಬಳಕೆ ದಿನ ಆಚರಣೆ ಮಾಡುವ ದುಃಸ್ತಿತಿ ಬಂದೊದಗಿದೆ .
ನಾವು ಈಗೆ ಪ್ರಾಕೃತಿಕ ಸಂಪನ್ಮೂಲಗಳನ್ನು ಮಿತಿ ಮೀರಿ ಬಳಕೆ ಮಾಡಿದರೆ ಮುಂದಿನ ವರ್ಷಗಳಲ್ಲಿ ಎರಡು ಮೂರು ತಿಂಗಳಲ್ಲಿ ನಮ್ಮ ಸಂಪನ್ಮೂಲಗಳನ್ನು ಮುಗಿಸಿ ಮುಂದಿನ ಪೀಳಿಗೆಯ ಸಂಪನ್ಮೂಲಗಳನ್ನು ಬರಿದು ಮಾಡುವ ಬಕಾಸುರರಾಗುವುದರಲ್ಲಿ ಸಂದೇಹವಿಲ್ಲ .

ಈಗಲೂ ಕಾಲ ಮಿಂಚಿಲ್ಲ ನಮ್ಮಂತೆ ಇತರೆ ಪ್ರಾಣಿ ಪಕ್ಷಿ ಗಳಿಗೂ ಜೀವಿಸಲು ಅವಕಾಶ ನೀಡಬೇಕು ಬದುಕು ಬದುಕಲು ಬಿಡು ಎಂಬ ನಿಯಮ ಪಾಲಿಸಬೇಕು  ನಾವು ವಿವೇಚನೆಯಿಂದ ನಮಗೆ ಲಬ್ಯವಿರುವ ಸಂಪನ್ಮೂಲಗಳನ್ನು ಬಳಕೆ ಮಾಡಿ ಸುಸ್ಥಿರ ಅಭಿವೃದ್ಧಿ ಮಾಡುವ ಅಗತ್ಯವಿದೆ ಇಲ್ಲವಾದರೆ ನಮ್ಮ ಭಯಾನಕ  ಅಂತ್ಯಕೆ  ನಾವೇ ಮುನ್ನುಡಿ ಬರೆದಂತಾಗುತ್ತದೆ  ಯೋಚಿಸಿ ಯೋಜಿಸಿ  ಜೀವಿಸೋಣ  ಮಹಾತ್ಮ ಗಾಂಧೀಜಿ ಯವರು ಹೇಳಿದಂತೆ "ಪ್ರಕೃತಿ ಇರುವುದು ನಮ್ಮ ಆಸೆ ಈಡೇರಿಲು ಮಾತ್ರ ಆದರೆ ದುರಾಸೆಯನ್ನಲ್ಲ " ಎಂಬುದನ್ನು ನಾವು ಮರೆಯಬಾರದು.

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

29 July 2018

ನೆನದೇವ ಕನ್ನಡದ ಹಿರಿಮೆ ( ಕವಿತೆ ) ಹಚ್ಚೇವು ಕನ್ನಡದ ದೀಪ ಮಾದರಿಯಲ್ಲಿ


               ನೆನೆದೇವೋ ಕನ್ನಡದ ಹಿರಿಮೆ
ಕನ್ನಡದ ಹಿರಿಮೆ ನಮ್ಮಯ ಗರಿಮೆ
ಎದೆಯುಬ್ಬಿ ಹೊಗಳುವ ನುಡಿಯ | ನೆನದೇವ|
                 ೧

ಆದಿಕಾಲದಿಂದ ಆದಿಪಂಪನಿಂದ
ಬೆಳದಂತ ಭಾಷೆ ನಮ್ಮ ಕನ್ನಡ
ಸುಲಿದ ಬಾಳೆಯ ಹಾಗೆ ಸಿಗುರಳಿದ ಕಬ್ಬಿನ ಹಾಗೆ
ಸುಂದರ ಭಾಷೆ ನಮ್ಮ ಕನ್ನಡ
ಹಳಗನ್ನಡವಿರಲಿ ಹೊಸಗನ್ನಡವಿರಲಿ
ಕನ್ನಡದ ಕಂಪ ಸವಿದೇವು
ಬಳಸುತ್ತ ನುಡಿಯ ಬೆಳಸುತ್ತ ಭಾಷೆಯ
ನಲಿಯೋಣ ,ಕಣ ಕಣಗಳಲ್ಲಿ ಮನ ಮನೆಗಳಲ್ಲಿ
ನೆನದೇವ ಕನ್ನಡದ ಹಿರಿಮೆ

                           | ನೆನದೇವ ಕನ್ನಡದ |

              ೨

ಶಾಸ್ತ್ರೀಯ ಭಾ಼ಷೆ ಶಾಸ್ತ್ರೋಕ್ತ ಭಾಷೆ
ವಿದೇಶಿಯರು ಮೆಚ್ಚಿದ ಭಾಷೆ
ಸ್ಪಟಿಕದಂತಹ ಉಚ್ಚಾರದ ನುಡಿಯ
ಪಟಪಟನೆ ಉಲಿದು ನಲಿವೇವು
ನಮ್ಮ ನುಡಿಬರದ ಅನ್ಯ ರಿಗೆ
ಪ್ರೀತಿಯಿಂದಲಿ ಭಾಷೆ ಕಲಿಸುವೆವು
ಕಣಕಣದಿ ಅಭಿಮಾನ
ಉಕ್ಕುತಿದೆ ಸ್ವಾಭಿಮಾನ
ಮುನ್ನೆಡೆಗೆ ತಡೆಯುಂಟೆ ತಾಯ್ನುಡಿಗೆ
ನಾಡಮಕ್ಕಳು ಸೇರಿ ಮಾತೃಭಾಷೆಗೆ ನಮಿಸಿ
ನೆನದೇವ ಕನ್ನಡದ ಹಿರಿಮೆ

                               |ನೆನದೇವ ಕನ್ನಡದ|

              ೩

ನಮ್ಮ ನುಡಿ ಮೆಚ್ಚಿ ನಮ್ಮ ನಾಡಿಗೆ
ಬಂದರೆ ಸ್ವಾಗತಿಸುವ
ರತ್ನಗಂಬಳಿ ಹಾಸಿ ರತ್ನದಂತಹ
ನುಡಿ ಕಲಿಸುವೆವು
ನಮ್ಮನ್ನವನುಂಡು ನುಡಿವಿರೋಧಿಸುವವರ
ನಡುಮುರಿಯಲು ಹಿಂಜರಿಯೆವು
ಮರೆಯಲ್ಲ ಛಲವ ನಿಲ್ಲಲ್ಲ
ನಾಡೋಲವುಅನವರತ
ನಾಲಿಗೆಯ ಸೀಳಿ ನರಕಕ್ಕೆ ಇಳಿಸಿದರೂ
ನೆನದೇವ ಕನ್ನಡದ ಹಿರಿಮೆ

                      |ನೆನದೇವ ಕನ್ನಡದ|


            ೪


ರನ್ನ ಜನ್ನರ ಚೆನ್ನ ನುಡಿಉಳಿಸಲು
ಎಲ್ಲರೂ ಒಂದುಗೂಡೋಣ
ನಮ್ಮಂತರಂಗದಿ ಕನ್ನಡಮ್ಮನ
ಪೂಜೆ ಮಾಡೋಣ
ಅನ್ಮವನು ನೀಡಿದ
ಕನ್ನಡಮ್ಮಗೆ ವಂದನೆಯ ಗೀತೆ ಹಾಡೋಣ
ತೊರೆದೇವು ಅನೇಕತೆ ಹೊಂದೋಣ ಏಕತೆ
ನಮ್ಮ ನುಡಿಗೆ ಒಗ್ಗೂಡೋಣ
ಅಂತರಂಗದ ನುಡಿಗೆ ಸಂತಸದಿ ನಮಿಸಿ
ನೆನದೇವ ಕನ್ನಡದ ಹಿರಿಮೆ

                                 |ನೆನದೇವ ಕನ್ನಡದ|


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*






ನಮ್ಮ ದೇಹದ42 ರಹಸ್ಯಗಳು (ಸಂಗ್ರಹ ಲೇಖನ)

                     *ನಮ್ಮ ದೇಹದ ಬಗ್ಗೆ ನಮಗೇ ಗೊತ್ತಿಲ್ಲದಿರೋ ವಿಚಿತ್ರ ಸತ್ಯಗಳು ಆದ್ಭುತಗಳು ಹೊರಗೆಲ್ಲೋ ಅಲ್ಲ, ನಿಮ್ಮ ದೇಹದಲ್ಲೇ ಇವೆ*

*ನಮ್ಮ ದೇಹದ ಬಗ್ಗೆ ತಿಳ್ಕೊಳಕ್ಕಬ್ರಹ್ಮಾಂಡದಷ್ಟಿದ ಮೊದಲು ಕೇಳಿದಾಗ ನಮಗೆ ಬಹಳ ಆಶ್ಚರ್ಯಆಯಿತು. ನಿಮಗೂ ಆಗೋದ್ರಲ್ಲಿ ಸಂದೇಹ ಇಲ್ಲ, ಓದ್ತಾ ಹೋಗಿ…*

*1. ಒಬ್ಬೊಬ್ಬರ ನಾಲಿಗೆ ಇನ್ನೊಬ್ಬರ ತರಹ ಇರಲ್ಲ - ಬೆರಳಚ್ಚು ಹೇಗೋ ಹಾಗೆ ಸೈನ್ ಹಾಕಕ್ಕೆ ಬರದೆ ಇರೋರು ಹೆಬ್ಬೆಟ್ಟು ಯಾಕೆ ಒತ್ತುತ್ತಾರೆ ಹೇಳಿ? ಯಾಕಂದ್ರೆ ಬೆರಳಚ್ಚು ಒಬ್ಬೊಬ್ಬರಿಗೂ ಬೇರ್ಬೇರೆ. ಹಾಗೇ ನಿಮ್ಮ ನಾಲಿಗೆ ಅಚ್ಚು ಕೂಡ ಬೇರೆಯೋರ ತರಹ ಇರಲ್ಲ.*

*2. ಒಂದು ಕೂದಲಲ್ಲಿ ಒಂದು ಸೇಬು ನೇತು ಹಾಕಬಹುದು. ಅಷ್ಟು ಶಕ್ತಿ ಇರುತ್ತೆ ಅದಕ್ಕೆ.*

*3. ಭೂಮಿ ಮೇಲೆ ಎಷ್ಟು ಜನ ಇರ್ತಾರೋ ಅಷ್ಟೇ ಬ್ಯಾಕ್ಟೀರಿಯಾಗಳು ನಿಮ್ಮ ಬಾಯಲ್ಲೂ ಇರುತ್ವೆ. ಆದ್ರೆ ಅವು ತೊಂದ್ರೆ ಮಾಡಲ್ಲ ಬಿಡಿ.*

*4. ನಿಮ್ಮ ಉಗುರಲ್ಲಿ ಈ ತರಹ ಅರ್ಧಚಂದ್ರಾಕಾರ ಕಾಣಿಸ್ತಾ ಇಲ್ಲದೆ ಹೋದ್ರೆ, ಅಥವಾ ಉಗುರು ತುಂಬ ಮೃದುವಾಗಿದ್ದು ಬೇಗ ಮುರಿದು ಹೋಗ್ತಿದ್ರೆ, ನಿಮ್ಮ ಥೈರಾಯಿಡ್ ಹಾರ್ಮೋನ್ ಹೆಚ್ಚಾಗಿದೆ ಅಂತರ್ಥ.*

*5. ನಿಮ್ಮ ಮೆದುಳಿಗೆ ತಲುಪೋ ವಿಚಾರಗಳು ಗಂಟೆಗೆ 400 ಕಿ.ಮಿ ವೇಗದಲ್ಲಿ ಚೆಲಿಸುತ್ತೆ.*

*6. ಮನುಷ್ಯನ ರಕ್ತದಲ್ಲಿ 29 ಬಗೆ. ಅತೀ ಅಪರೂಪದ್ದು ಜಪಾನಿನ ಒಂದು ಸಣ್ಣ ಕುಟುಂಬದಲ್ಲಿ ಸಿಗುತ್ತೆ.*

*7. ಒಂದ್ ದಿನಕ್ಕೆ ನಮ್ಮ ರಕ್ತ ಇಡೀ ದೇಹ ಸುತ್ತು ಹಾಕಿ 19,312 ಕಿ.ಮೀ ಚಲಿಸುತ್ತೆ.*

*8. ನಮ್ಮ ದೇಹದ ನರಗಳನ್ನೆಲ್ಲ ಒಟ್ತುಗೂಡಿಸಿ ನೋಡಿದ್ರೆ ಅದರ ಉದ್ದ 75 ಕಿ.ಮಿ ಆಗುತ್ತೆ.*

*9. ಒಂದು ದಿನಕ್ಕೆ ಸುಮಾರು 20,000 ಬಾರಿ ಉಸಿರಾಡ್ತೀವಿ.*

*10. ನಮ್ಮ ಕಣ್ಣುಗಳು ಸುಮಾರು 1 ಕೋಟಿ ಬಣ್ಣಗಳನ್ನ ಗುರುತಿಸುತ್ವೆ, ಆದ್ರೆ ನಮ್ಮ ಮೆದುಳಿಗೆ ಅವನ್ನೆಲ್ಲಾ ನೆನಪಿನಲ್ಲಿಟ್ಟುಕೊಳ್ಳೋ ಶಕ್ತಿ ಇಲ್ಲ.*

*11. ಮನುಷ್ಯ ಬದುಕಿರೋ ವರೆಗೂ ಅವನ ಕಿವಿ ಬೆಳೀತಾನೆ ಇರುತ್ತೆ - ವರ್ಷಕ್ಕೆ 0.25 mm ನಷ್ಟು*

*12. ನಮ್ಮ ಹೃದಯ ವರ್ಷಕ್ಕೆ 35 ಕೋಟಿ ಸಲ ಬಡಿಯುತ್ತೆ.*

*13. ಪ್ರತಿದಿನ ನಮ್ಮ ದೇಹ ಸುಮಾರು 1 ಕೋಟಿ ಚರ್ಮ ಕಣಗಳನ್ನ ಕಳೆದುಕೊಳ್ಳುತ್ವೆ. ಸರಿಯಾಗಿ ತೂಕ ಮಾಡಿ ನೋಡಿದ್ರೆ ವರ್ಷಕ್ಕ 2 ಕಿಲೋ ಗೊತ್ತಾ!*

*14. ನಮ್ಮ ಚರ್ಮದ 1 sq.cm ವಿಸ್ತೀರ್ಣದಲ್ಲಿ ನೂರಾರು ನೋವಿನ ಕೋಶಗಳಿರುತ್ತವೆ.*

*15. ಹೆಣ್ಣು ಮಕ್ಕಳ ನಾಲಿಗೇಲಿ ಗಂಡು ಮಕ್ಕಳಿಗಿಂತ ಜಾಸ್ತಿ ರುಚಿಯ ಕಣಗಳು ಇರುತ್ತವೆ.*

*16. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಟ್ಟು 35 ಟನ್ ತಿಂತಾನೆ.*

*17. ಒಬ್ಬ ಮನುಷ್ಯ ಕೇವಲ ಕಣ್ಣು ಮಿಟಿಕಿಸೋದ್ರಲ್ಲೇ 5 ವರ್ಷ ಕಳೀತಾನೆ. ಮಿಟುಕಿಸ್ತಾ ಕೆಲವರು ಬೇರೆ ಕೆಲಸಾನೂ ಮಾಡ್ತಾರೆ*

*18. ಒಂದು ಸೆಕೆಂಡಲ್ಲಿ ನಮ್ಮ ಮೆದುಳಲ್ಲಿ 1 ಲಕ್ಷ ರಾಸಾಯನಿಕ ಕ್ರಿಯೆಗಳಾಗುತ್ವೆ.*

*19. ನೀವು ಶೀತ ಆದಾಗ ಸೀನ್ತೀರಲ್ಲ ಅದರ ವೇಗ ಗಂಟೆಗೆ 160 ಕಿ. ಮೀ ಇರುತ್ತೆ.*

*20. ನಕ್ಕಾಗ ನಿಮ್ಮ ಮುಖದ 17 ಬೇರೆ ಬೇರೆ ಮಾಂಸ ಖಂಡಗಳು ಕೆಲ್ಸ ಮಾಡುತ್ತವೆ… ಅತ್ತಾಗ 43... ಅಂದ್ರೆ ಅಳಕ್ಕೆ ಕೆಲಸ ಜಾಸ್ತಿ ಮಾಡಬೇಕು*

*21. ಗಂಡಸರಿಗೆ ದಿನಕ್ಕೆ 40 ಕೂದಲು ಉದುರಿದರೆ ಹೆಂಗಸರಿಗೆ 70 ಉದುರುತ್ತೆ*

*22. ಮನುಷ್ಯನಿಗೆ ನೀರಿನಿಂದ ಸಿಗುವಷ್ಟು ಶಕ್ತಿ ಆಹಾರ ಪದಾರ್ಥಗಳಿಂದಸಿಗಲ್ಲ*   
                     
*23. ದೇಹದಲ್ಲಿ ಅತ್ಯಂತ ಶಕ್ತಿಯುಳ್ಳ ಸ್ನಾಯು ಅಂದ್ರೆ ನಾಲಿಗೆ*

*24. ಉಗುರು ಮತ್ತು ಕೂದಲು ಎರಡೂ ಒಂದೇ ವಸ್ತುವಿನಿಂದ ಕೂಡಿರುತ್ತವೆ*

*25. ನಾಲಿಗೆಯ ಟೇಸ್ಟ್ ಬಡ್ಸ್ ಜೀವಾವಧಿ ಸುಮಾರು 10 ದಿನ ಮಾತ್ರ. ನಂತರ ಬೇರೆ ಹುಟ್ಟುತ್ತವೆ.*

*26. ವಸಂತ ಋತುವಿನಲ್ಲಿ ಮಕ್ಕಳು ಹೆಚ್ಚು ಬೆಳೀತಾರೆ.*

*27. ಸೀನಿದಾಗ ದೇಹದ ಎಲ್ಲಾ ಕ್ರಿಯೆಗಳೂ ತಾತ್ಕಾಲಿಕವಾಗಿ ನಿಲ್ಲುತ್ತವೆ. ಎದೆ ಕೂಡ ಬಡಿದುಕೊಳ್ಳಲ್ಲ.*

*28. ತಲೆಬುರುಡೆಯಲ್ಲಿ 26 ಬೇರೆಬೇರೆ ಮೂಳೆಗಳಿರುತ್ತವೆ*

*29. ಬಿಸಿಲಲ್ಲಿ ಕೈ ಸುಡುತ್ತಿದ್ದರೆ ನಿಮ್ಮ ದೇಹದಲ್ಲಿ ಸಾಕಷ್ಟು ನೀರಿಲ್ಲ ಅಂತ ಅರ್ಥ. ಕುಡೀರಿ!*

*30. ಹೆಚ್ಚು ಉಪ್ಪು ತಿನ್ನುವುದರಿಂದ ಎಲ್ಲಾ ರೀತಿಯ ರೋಗಗಳು ಬರುತ್ತವೆ ಸಕ್ಕರೆ ಖಾಯಿಲೆ, ಶ್ವಾಸಕೋಶ ಮತ್ತು ಕಿಡ್ನಿ ಸಮಸ್ಯೆಗಳು...*

*31. ಮನುಷ್ಯನ ದೇಹದಲ್ಲಿ ಸರಾಸರಿ 10,000 ಕೋಟಿ ನರಕೋಶ (ನರ್ವ್ ಸೆಲ್ಸ್) ಇರುತ್ತೆ*

*32. ಬೇಯಿಸದ ಅಡುಗೆ (ಉದಾ: ಕೋಸಂಬರಿ) ಬೇಯಿಸಿದ ಅಡುಗೆಗಿಂತ ಎರಡರಷ್ಟು ಬೇಗ ಅರಗುತ್ತದೆ*

*33. ಮಂಡಿಚಿಪ್ಪು (ನೀ ಕ್ಯಾಪ್) ಹುಟ್ಟುತ್ತಲೇ ಇರೋದಿಲ್ಲ. 2-6 ವರ್ಷ ಆಗುವಷ್ಟರಲ್ಲಿ ಬೆಳೆಯುತ್ತದೆ.*

*34. ಹೃದಯ ದಿನಕ್ಕೆ ಸುಮಾರು 1,000 ಸಲ ರಕ್ತವನ್ನು ಸುತ್ತು ಹಾಕಿಸುತ್ತದೆ*

*35. ನಮ್ಮ ಮೂಳೆಗಳಿಗೆ ಮನೆ ಕಟ್ಟಕ್ಕೆ ಬಳಸುವ ಸಿಮೆಂಟ್ ಕಾಂಕ್ರೀಟಿನ 4ರಷ್ಟು ಶಕ್ತಿಯಿರುತ್ತದೆ*

*ಚುಕ್ಕುಬುಕ್ಕು*

*36. ತಿಂದಿದ್ದು ಬಾಯಿಂದ ಹೊಟ್ಟೆ ವರೆಗೆ ಹೋಗಕ್ಕೆ 7 ಸೆಕೆಂಡ್ ತೊಗೊಳ್ಳುತ್ತೆ*

*37. ನಮಗೆ ಹುಟ್ಟಿದಾಗ 300 ಮೂಳೆಗಳಿರುತ್ತವೆ. ದೊಡ್ಡವರಾಗುತ್ತಿದ್ದಂತೆ ಅದು 206 ಆಗುತ್ತದೆ.*

*38. ಒಂದು ಕಣ್ಣಿನ ರೆಪ್ಪೆ ಸುಮಾರು 5 ತಿಂಗಳಿರುತ್ತದೆ. ಆಮೇಲೆ ಉದುರಿ ಹೋಗುತ್ತದೆ.*

*39. ಎರಡು ಹುಬ್ಬೂ ಸೇರಿದರೆ ಸುಮಾರು 1,000 ಕೂದಲಿರುತ್ತೆ*

*40. ಕಿವಿಯಲ್ಲಿ ದೇಹದ ಅತ್ಯಂತ ಚಿಕ್ಕ ಮೂಳೆಯಿರುತ್ತದೆ*

*41. ಮಕ್ಕಳ ನಾಲಿಗೆಯಲ್ಲಿ ದೊಡ್ಡೋರಿಗಿಂತ ಜಾಸ್ತಿ ಟೇಸ್ಟ್ ಬಡ್ಸ್ ಇರುತ್ತವೆ*

*42. ವಯಸ್ಸಾಗುತ್ತಿದ್ದ ಹಾಗೆ ಕಣ್ಣು ದೊಡ್ಡದಾಗೋದಿಲ್ಲ. ಆದರೆ ಕಿವಿ ಮತ್ತು ಮೂಗು ಆಗುತ್ತಲೇ ಇರುತ್ತವೆ.*

*ಸಂಗ್ರಹ: ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 July 2018

ಜೀವಿಸು ಖುಷಿಯಲಿ ( ಕವನ)

        *ಜೀವಿಸು ಖುಷಿಯಲಿ*

ಸುಂದರ   ಬದುಕು
ನಿನ್ನದೆ ಕೈಲಿದೆ
ಸಾಗು ಮುಂದೆ
ಸ್ಚರ್ಗವು ಕಾದಿದೆ

ಕಲ್ಲಿದೆ ಮುಳ್ಳಿದೆ
ನಿನ್ನಯ ದಾರಿಯಲಿ
ಅಂಜದೆ ಅಳುಕದೆ
ನುಗ್ಗು ಖುಷಿಯಲಿ

ನೂರಾರು ತಿರುವು
ಬಾಳಲಿ ಬರುವುದು
ವಿಶ್ವಾಸ ಇದ್ದರೆ
ದಾರಿಯು ಕಾಣುವುದು

ನೋವು ನಲಿವು
ಸಾಮಾನ್ಯ ಜಗದಲಿ
ಗೆಲ್ಲಲಿ ಸೋಲಲಿ
ಜೀವಿಸು ಖುಷಿಯಲಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



25 July 2018

ದೇಶಭಕ್ತಿ ( ನ್ಯಾನೋ ಕಥೆ)

                 *ನ್ಯಾನೋ ಕಥೆ*

*ದೇಶಭಕ್ತಿ*

ಶಾಲೆಯ ಬೆಳಗಿನ ಪ್ರಾರ್ಥನೆ ವೇಳೆಯಲ್ಲಿ ಎಲ್ಲಾ ಮಕ್ಕಳು ರಾಷ್ಟಗೀತೆಯನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು  ಅಕ್ಕ ಪಕ್ಕದಲ್ಲಿ ನಡೆದಾಡುತ್ತಿದ್ದ ಸಾಮಾನ್ಯ ಜನರು ಕೆಲ ಕಾಲ ನಿಂತು ರಾಷ್ಟಗೀತೆಗೆ ಗೌರವ ಸೂಚಿಸಿದರು ಮಧ್ಯ ವಯಸ್ಕ ಒಬ್ಬ ವ್ಯಕ್ತಿ  ಮಾತ್ರ ರಾಷ್ಟಗೀತೆಗೆ ಗೌರವ ನೀಡದೆ   ನಡೆದು ಮಂದೆ ಹೋದರು ಆ ವ್ಯಕ್ತಿಯ ಗುರುತು ಹಿಡಿದ ಭಾರತಿ ಮನದಲ್ಲಿ ಅವರು ದೇಶಭಕ್ತಿಯ ಬಗ್ಗೆ ಕಳೆದ ದಿನ ಎರಡು ಗಂಟೆ ಮಾಡಿದ ಭಾಷಣ ನೆನಪಾಯಿತು ಅದರಲ್ಲೂ " ಎಂತಾ ಪರಿಸ್ಥಿತಿಯಲ್ಲೂ ದೇಶಭಕ್ತಿ ಮೆರಯಬೇಕು ನಮ್ಮ ರಾಷ್ಟ್ರಗೀತೆ ರಾಷ್ಟ್ರ ದ್ವಜಕ್ಕೆ ಗೌರವ ನೀಡಲೇಬೇಕು" ಈ ಶಬ್ಬಗಳು ಭಾರತಿಯ ಕಿವಿಯಲ್ಲಿ ಗುಯ್ ಗುಡುತ್ತಿದ್ದವು ,ಶಿಕ್ಷಕರು ಬೋಲೋಭಾರತ್ ಮಾತಾಕಿ ಎಂದಾಗ ಭಾರತಿಯು ಕೈಗಳನ್ನು ಮೇಲೆತ್ತಿ ಜೈ ಎಂದು ಹೆಮ್ಮೆಯಿಂದ ಹೇಳಿದಳು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

21 July 2018

ಗಜಲ್ ೩೯

ಗಜಲ್ ೩೯(ಕಂಡಿದ್ದೇನೆ )


ಗಜಲ್ ೩೯
ಪ್ರಖರ ಸೂರ್ಯ ಚಂದ್ರ ರಿಗೆ ಗ್ರಹಣ ಹಿಡಿದಿರುವುದನ್ನು ನಾನು ಕಂಡಿದ್ದೇನೆ
ಶಿಖರಗಳು ಕ್ಷಣಮಾತ್ರದಲ್ಲೇ ತರಗೆಲೆಯಂತೆ
ಧರೆಗುರುಳಿರುವುದನ್ನು ನಾನು ಕಂಡಿದ್ದೇನೆ

ಕೋಟಿ ಕಟ್ಡಿ ಕುಣಿದವರ ಬಗ್ಗೆ ಎಗರಿ ಹೇಳಬೇಡ
ಮೀಸೆ ತಿರುವಿ ಮೆರೆದವರು ಮಣ್ಣಾಗಿರುವುದನ್ನು ನಾನು ಕಂಡಿದ್ದೇನೆ

ಯಶಸ್ಸು ಪಡೆದವರ  ಕುರಿತು ಗರ್ವ ಪಡಬೇಡ
ಚುಕ್ಕಿಗಳು ಜಾರಿ ಬೀಳುವುದನ್ನು ನಾನು ಕಂಡಿದ್ದೇನೆ.
ಯಾರ  ಜ್ಞಾನದ ಆಳವನ್ನು ಕೊಂಡಾಡಬೇಡ
ಸಾಗರಗಳು ಬತ್ತಿರುವುದನ್ನು ನಾನು ಕಂಡಿದ್ದೇನೆ
ಬಾಹ್ಯ  ರೂಪದ ಬಗ್ಗೆ ಅಹಂಕಾರ ಪಡಬೇಡ
ಮೊನಾಲಿಸಾ ಮಣ್ಣು ಸೇರಿದ್ದನ್ನು ನಾನು ಕಂಡಿದ್ದೇನೆ
.
ಜೀವನದಲ್ಲಿ ಗೆದ್ದೆನೆಂದು ಸೀಜೀವಿಯ ಮುಂದೆ  ಬೀಗಬೇಡ
ಅಲೆಕ್ಸಾಂಡರ್ ಶರಣಾಗಿದ್ದನ್ನು ನಾನು ಕಂಡಿದ್ದೇನೆ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ರಾಜ್ಯಮಟ್ಟದ ಕವಿಗೋಷ್ಟಿಯಲ್ಲಿ ನನ್ನ ಕವನ ವಾಚನ


17 July 2018

ಗಜಲ್ ೪೦ (ಸಾವು)

      *ಗಜಲ್೪೦*

ಬೇಕೆಂದು ಬಯಸಿದರೆ ಬರುವುದಿಲ್ಲ ಸಾವು
ಬೇಡವೆಂದರೂ ನಿಲ್ಲುವುದಿಲ್ಲ ಸಾವು

ಬಹುಕೃತ ವೇಷಗಳುಂಟು   ಬದುಕಲು
ಯಾವ ನಾಟಕಕು ಜಗ್ಗುವುದಿಲ್ಲ ಸಾವು

ಸಂಬಂಧಗಳಲಿ ಬಂದಿಗಳು ನಾವು
ಬಂದು ಬಾಂಧವರ ಲೆಕ್ಕವಿಡುವುದಿಲ್ಲ ಸಾವು

ಬಡವ ಬಲ್ಲಿದ ಮೇಲು ಕೀಳುಗಳ ಮೇಲಾಟ
ಎಲ್ಲರ ಸಮ ಮಾಡದೆ ಬಿಡುವುದಿಲ್ಲ ಸಾವು

ಸೀಜೀವಿಗೆ ಆಸೆ ಸಜ್ಜನರು ಬದುಕುಳಿಯಲು
ಒಳ್ಳೆಯ ಕೆಟ್ಟವರೆಂದು ಭೇದ ತೋರುವುದಿಲ್ಲ ಸಾವು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

15 July 2018

ಪಣ ತೊಡುವೆವು (ಚಿತ್ರಕವನ)




*ಪಣತೊಡುವೆವು*



ಚಿಟ ಪಟ ಮಳೆಯಲ್ಲಿ
ಟಾರು‌ ರಸ್ತೆಯ ಇಳಿಜಾರಿನಲಿ
ಇಳಿದು ಸಾಗುತಿಹೆವು ನಾವು
ಕಂಬಳಿಯ ಕೊಪ್ಪೆ ಹೊದ್ದು
ನಿತ್ಯದ ಅನ್ನ ಅರುಸುತಲಿ

ಮಳೆ ಬಂದರೆ ಬಂತಲ್ಲ ಮಳೆ
ಜಡಿ‌ಮಳೆ ಯಾಕಾದರೋ ಬಂತೋ
ಎಂದು ಗೊಣಗುವ ನಗರದವರಲ್ಲ
ಮಳೆ ಹನಿಗೆ ಮಣ್ಣ ಪರಿಮಳ
ಸವಿಯುವವರು ನಾವೆಲ್ಲ

ರೈನುಕೋಟು ಅಂಬ್ರೆಲಾಗಳ
ಗೊಡವೆ ನಮಗೆ ಬೇಕಿಲ್ಲ
ಪ್ಲಾಸ್ಟಿಕ್ ಸಿಂಥೆಟಿಕ್ ಬಳಸುವುದಿಲ್ಲ
ಪರಿಸರ ಪೂರಕವಾದ
ಬಟ್ಟೆ ಕಂಬಳಿಗಳ ಬಿಡುವುದಿಲ್ಲ

ಕಾನನದ ಮಕ್ಕಳು ನಾವು
ವನದೇವತೆಯನು  ರಕ್ಷಿಸಲು
ಎಂದಿಗೂ ಬೆನ್ನ ತೋರೆವು
ಪರಿಸರದೊಂದಿಗೆ ಬಾಳುವ
ಪಣ ತೊಡುವೆವು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

11 July 2018

*ನಿಮ್ಮೊಳಗಿನ ನಿಮ್ಮನ್ನು ಎಬ್ಬಿಸಿರಿ.*(ಸಂಗ್ರಹ ಲೇಖನ)

              *ಬೆಳಿಗ್ಗೆ 8 ರೊಳಗೆ ಮಾಡುವ (S.A.V.E.R.S)... ಎನ್ನುವ ಈ 6 ಅಭ್ಯಾಸಗಳು ನಿಮ್ಮ ಜೀವನವನ್ನೇ ಬದಲಿಸಿತ್ತದೆ..!*

*ಹಲ್ ಎಲೋರ್ಡ ಎನ್ನುವ ಪ್ರಮುಖ ರಚನೆಕಾರ ಬರೆದ "ದ ಮಿರಾಕಿಲ್ ಮಾರ್ನಿಂಗ್" ಎನ್ನುವ ಪುಸ್ತಕದಲ್ಲಿ

ಬೆಳಿಗ್ಗೆ 8 ರೊಳಗೆ ಮಾಡುವ
 6 ಕೆಲಸಗಳು ನಿಮ್ಮ ಜೀವನವನ್ನೇ ಬದಲಿಸುತ್ತದೆ ಎಂದು ಬಹಳ ಸ್ಪಷ್ಟವಾಗಿ ತಿಳಿಸಿದ್ದಾರೆ*

*ಕಾರ್ ಆಕ್ಸಿಡೆಂಟ್ ಆಗಿ ಕೋಮಾದಿಂದ ಹೊರಬಂದ ಈ ರಚನೆಕಾರ ಈಗ ತನ್ನ ರಚನೆಗಳಿಂದ ಪ್ರಪಂಚವನ್ನು ಆಲೋಚಿಸುವಂತೆ ಮಾಡುತ್ತಿದ್ದಾನೆ.*

*ಆನಂದಕ್ಕೆ 6 ಅಂಶಗಳ ಸೂತ್ರ S.A.V.E.R.S.*

*🔺S- Silence (ನಿಶ್ಯಬ್ದ)...*

ನಮ್ಮ ಪ್ರತಿದಿನವನ್ನು ಬಹಳ ನಿಶ್ಯಬ್ದದಿಂದ ಆರಂಭಿಸಬೇಕು... ಅಂದರೆ ಪ್ರಶಾಂತತೆಯಿಂದ ಪ್ರಾರಂಭಿಸಬೇಕು...

 *ಏಳುವುದು ತಡವಾಯಿತು...ಅಯ್ಯೋ ಹೇಗೆ..? ಆಫಿಸ್ ಕೆಲಸ.. ಇಂದು ಆತನನ್ನು ಭೇಟಿಯಾಗುತ್ತೇನೆ ಎಂದು ಹೇಳಿದೆ... ಏನೇ... ಟಿಫಿನ್ ಆಯ್ತಾ... ಹೀಗೆಲ್ಲಾ ಗಾಬರಿಯಾಗಬೇಡಿ.. ಪ್ರಶಾಂತವಾಗಿ ಎದ್ದ ಕೂಡಲೇ... ಸ್ವಲ್ಪ ಹೊತ್ತು ಧ್ಯಾನ ಮಾಡಿರಿ ಅಥವಾ ಕಣ್ಣು ಮುಚ್ಚಿಕೊಂಡು ಪ್ರಶಾಂತತೆಯನ್ನು ನಿಮ್ಮ ಮನಸ್ಸಿನೊಳಗೆ ಆಹ್ವಾನಿಸಿರಿ. ಇಲ್ಲೇ ನಮ್ಮ ದಿನ ಹೇಗೆ ನಡೆಯುತ್ತದೆ ಎನ್ನುವುದು ಡಿಸೈಡ್ ಆಗಿ ಹೋಗುತ್ತದೆ.*

*🔺A-Affirmations*

( ನಿನ್ನೊಂದಿಗೆ ನೀನು ಮಾತನಾಡಿಕೊಳ್ಳುವುದು)... ಎಲ್ಲರ ಬಗ್ಗೆ, ಎಲ್ಲಾ ವಿಷಯಗಳ ಬಗ್ಗೆ ಅನರ್ಗಲವಾಗಿ ಮಾತನಾಡುವ ನಾವು.. ನಮ್ಮೊಂದಿಗೆ ನಾವು ಒಂದು ಬಾರಿಯೂ ಮಾತನಾಡಿಕೊಳ್ಳುತ್ತಿಲ್ಲ. ಅಷ್ಟಕ್ಕೂ ನಮ್ಮೊಳಗಿನ ನಮಗೆ ಏನು ಬೇಕು? ದೊಡ್ಡ ಮಟ್ಟಕ್ಕೆ ಬೆಳೆದವರಲ್ಲಿ ಖಚಿತವಾಗಿ ಈ ಲಕ್ಣವು ಇರುತ್ತದೆ. ಈ ಮೂರು ಪಾಯಿಂಟ್ಸ್ ಪ್ರತಿನಿತ್ಯವೂ ನಿಮ್ಮೊಂದಿಗೆ ನೀವು ಮಾತನಾಡಿಕೊಳ್ಳಿರಿ.
1. ನಾನು ಏನು ಆಗಬೇಕೆಂದುಕೊಳ್ಳುತ್ತಿದ್ದೇನೆ?
2. ಅದಕ್ಕಾಗಿ ನಾನು ಏನು ಪ್ರಯತ್ನಗಳನ್ನು ಮಾಡುತ್ತಿದ್ದೇನೆ?
3. ಅಂದುಕೊಂಡಿದ್ದನ್ನು ಸಾಧಿಸಲು ನಾನು ಏನ್ನನ್ನು ಬಿಟ್ಟು ಬಿಡಬೇಕು? ಯಾವುದನ್ನು ಹೊಸದಾಗಿ ಆಹ್ವಾನಿಸಬೇಕು? ಹೀಗೆ ಪ್ರತಿನಿತ್ಯವೂ ನಮ್ಮಲ್ಲಿ ನಾವು ಮಾತನಾಡಿ ಕೊಳ್ಳುತ್ತಾ... ನಮ್ಮಲ್ಲಿನ ಬದಲಾವಣೆಯನ್ನು ನಾವೇ ಲೆಕ್ಕ ಹಾಕಿಕೊಳ್ಳಬೇಕು!

*🔺 Visualisation* (ಆತ್ಮಸಾಕ್ಷಾತ್ಕಾರ)... ನಮ್ಮಲ್ಲಿನ ಭಾವನೆಗಳಿಗೆ ಮನಸ್ಸಿನಲ್ಲಿ ದೃಶ್ಯರೂಪ ನೀಡುವುದು. ಕಾನ್ಸಿಯಸ್ ನಿಂದ ಕನಸುಗಳನ್ನು ಕಾಣುವುದು! ಬೆಳಿಗ್ಗೆಯೇ ನಮ್ಮ ಲಕ್ಷ್ಯವು ನಮ್ಮ ಕಣ್ಣು ಮುಂದೆ ಕಾಣಿಸಿದರೆ... ಅದನ್ನು ಸೇರಿಕೊಳ್ಳುವುದಕ್ಕಾಗಿ ಎರಡರಷ್ಟು ಉತ್ಸಾಹದಿಂದ ಪ್ರಯತ್ನ ಮಾಡುತ್ತೇವೆ.

*🔺E-Exercise*

- ಇದು ಪ್ರತಿಯೊಬ್ಬರೂ ತಿಳಿದ ವಿಷಯವೇ... ಕಂಡಗಳು, ನರಗಳು ಉತ್ತೇಜನಗೊಂಡು ಹೊಸ ಶಕ್ತಿಯನ್ನು ಪ್ರೇರೇಪಿಸುತ್ತದೆ.

*🔺R-reading*

- ದಿನಕ್ಕೆ ಹತ್ತು ಪೇಜು ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು... ಇದು ನಮ್ಮೊಳಗಿನ ಅಂತರ್ಗತ ಶಕ್ತಿಯನ್ನು ಪ್ರೇರೇಪಿಸುತ್ತದೆ. ನಿರ್ದಿಷ್ಟವಾದ ಬುಕ್ ಅನ್ನೇ ಓದಬೇಕು ಅಂತ ಏನೂ ಇಲ್ಲ.. ನಿಮಗೆ ಇಷ್ಟವಾದ ಬುಕ್ ಅನ್ನು ಓದುತ್ತಾ ಇರಿ.

*🔺S-Scribing*

 (ಬರೆಯುವುದು) - ಬೆಳಿಗ್ಗೆ ಎದ್ದಕೂಡಲೇ... ನಿಮ್ಮ ಮನಸ್ಸಿಗೆ ಬಂದ ಲೈನ್ಸ್ ಬರೆಯಿರಿ... ಇದನ್ನು ಮಾರ್ನಿಂಗ್ ಪೇಜಸ್ ಎನ್ನುತ್ತಾರೆ. ಹೀಗೆ ನೀವು ಪ್ರತಿನಿತ್ಯವೂ ಬರೆಯುತ್ತಾ ಇದ್ದರೆ... ನಿಮ್ಮ ಆಟಿಟ್ಯೂಡ್ ನಲ್ಲಿ ನಿಮಗೆ ತಿಳಿಯದ ಪಾಸಿಟಿವ್ ವೇವ್ಸ್ ಬರುತ್ತದೆ.

*ಸೋ... ಈ ಎಲ್ಲಾ ಕೆಲಸಗಳನ್ನು ಬೆಳಿಗ್ಗೆ 8 ರೊಳಗೆ ಮಾಡಬೇಕು. ಆಲ್ ದಿ ಬೆಸ್ಟ್...*

*ನಿಮ್ಮೊಳಗಿನ ನಿಮ್ಮನ್ನು ಎಬ್ಬಿಸಿರಿ.*
ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

ಕೃಷಿ ಮಾಡಿ ಗೆದ್ದ ಮಹಿಳೆ(ಸಂಗ್ರಹ ಲೇಖನ)

          ಈ ಶಿಕ್ಷಿತ ರೈತ ಮಹಿಳೆಯ ಮಾತುಗಳನ್ನು ರೈತರಾದವರು, ರೈತರ ಮಕ್ಕಳು, ಹಳ್ಳಿಗಳಲ್ಲಿ ಭೂಮಿ ಇದ್ದರೂ ಪಟ್ಟಣಗಳಿಗೆ ವಲಸೆ ಬಂದವರು, ಕೃಷಿಯ ಬಗ್ಗೆ  ಆಸಕ್ತಿ ಇರುವವರು, ಸಾಲ ಮನ್ನಾ ಮಾಡಿ ಎಂದು ದೈನೇಸಿಯಾಗಿ ಬೇಡುವವರು, ಅನ್ನವನ್ನು ಉಣ್ಣುವ ಮತ್ತೆಲ್ಲರೂ ಆಲಿಸಬೇಕು. ಭೂಮಿ ಬಂಜೆಯಲ್ಲ, ಗೇಮಿ ಕೆಲಸ ನಷ್ಟದ್ದಲ್ಲ, ಸಮಸ್ಯೆ ಇರುವುದು ನಮ್ಮಲ್ಲಿಯ ಇಚ್ಛಾಶಕ್ತಿಯ ಕೊರತೆ. ಯುಕ್ತಿಯಿಂದ ಆಸಕ್ತಿಯಿಂದ ಉಳುಮೆ ಮಾಡಿದರೆ ಕೋಟ್ಯಾದಿಪತಿಗಳಾಗುವ ಸುವರ್ಣಾವಕಾಶ ಎಲ್ಲ ಭೂಮಿಪುತ್ರರಿಗಿದೆ ಎಂದು ಮನನ ಮಾಡುತ್ತಿದ್ದಾರೆ ಈ ಅಮ್ಮ. ಇದು ಅತಿಶಯದ ಮಾತಲ್ಲ. ಈ ವನಿತೆಯ ಹೆಸರು, ವಿವರಗಳು ಈಗ ಸಿಕ್ಕಿವೆ. ಅವುಗಳನ್ನು ಈ ಕೆಳಗೆ ಹಾಕುತ್ತಿರುವೆನು. ಇವರ ಮಾತುಗಳು ಸಾಧಕಿಯೆಂಬುದನ್ನು ಸಾಬೀತು ಮಾಡುತ್ತವೆ. ಒಂದು ಹೆಣ್ಣು ಇಂಥಹುದನ್ನು ಸಾಧಿಸಬಹುದಾದರೆ, ದೈಹಿಕವಾಗಿ ಹೆಚ್ಚು ಸಭಲರಾದ ಪುರುಷರಿಗೆ ಏಕೆ ಅಸಾಧ್ಯ ಹೇಳಿ.? 

*ಶ್ರೀಕಾಂತ ಪತ್ರೆಮರ*

°°°°°°°°°°°°°°°°°°°°°°°°°

🤔 ಈ ಮಹಿಳೆ - ಕೇಳರಿಯದ ಸಾಧನೆ!!!!!!🤔
======================

ಈಗ ನಾನು ಹೇಳ ಹೊರಟಿರುವುದು ವಿಷಯ ಒಬ್ಬ ಮಹಿಳೆ ಬಗ್ಗೆ!!

✍ ಅವರು ಸಾಧಾರಣ/ಸಾಮಾನ್ಯ ಮಹಿಳೆಯಾಗಿದ್ದರೆ ನ ನಗೂ ಅವರ ಬಗ್ಗೆ ಬರೆವ ಮನಸ್ಸಾಗುತ್ತಿರಲಿಲ್ಲ; & ಅದನ್ನ ನಿಮ್ಮ ಬಳಿ ಹೇಳುವ ಗೋಜಿಗೂ ಹೂಗುತ್ತಿರಲಿಲ್ಲವೇನೋ......

👉 ಈ ಮಹಿಳೆ ಓದಿದ್ದು :- ಕಂಪ್ಯೂಟರ್ ಸೈನ್ಸ್ ಡಿಪ್ಲೋಮಾ ಜೊತೆಗೆ ಎಂಎ ಸೈಕಾಲಜಿ!!!!

ಆದರೆ ಸಾರ್ಥಕತೆ ಕಂಡು ಕೊಂಡದ್ದು... ಕೃಷಿಯಲ್ಲಿ... !!!!

👉 20 ವರ್ಷಗಳ ಹಿಂದೆಯೇ.... ಪ್ರತಿಷ್ಟಿತ  Infosys  Rs. 40000 ಪಗಾರ ಕೊಡಲು ಮುಂದೆ ಬಂದಾಗ, ಅದನ್ನ  ಸಾರಾಸಗಟವಾಗಿ ದಿಕ್ಕರಿಸಿ ಕೃಷಿಯೇ ನನ್ನ ಜೀವಾಳ & ಬದುಕು ಎಂದು 'ಎದೆಯುಬ್ಬಿಸಿ,!!!!...... ಮುಂದೆ ನಡೆದ ಧೀರೆಯೇ..... ಈ ಮಹಿಳೆ!!!!!!

✍ಸ್ಥಳ :- ರಾಯಚೂರು,  50 ಡಿಗ್ರೀ ಸೆಲ್ಸಿಯಸ್ ತಾಪಮಾನ. ಈ ಊರು ಕೇಳಿದರೇ ಸಾಕು ಯಾರಾದರೂ ತಲೆ ಹಾಕಿಯೂ ಮಲಗರು.

👉 ಈ ಮಹಿಳೆ ಮದವೆಯಾಗಿ ಹೊಸತಾಗಿ ಗಂಡನ ಮನೆಗೆ ಬಂದಾಗ ಅರ್ಧ ಚೀಲ ಸಜ್ಜೆಯೂ ಬೆಳಯದಂತಹ
 ಬರಡು ಭೂಮಿ. ಅದರಲ್ಲಿ ಇಂದು   ಬಂಗಾರದ ಬೆಳೆ ಬೆಳೆಯುತಿದ್ದಾರೆ. !!!

👉 ಸರಕಾರಿ ಸವಲತ್ತುಗಳಿಗೆ ಜೋತು ಬಿದ್ದು;
 ಸೊಂಬೇರಿಗಳಾಗಿ; ವರುಷದಲ್ಲಿ ಒಂದುಷ್ಟು ಭೂಮಿ ಗೈದು ಉಳಿದೆಲ್ಲಾ.....  ದಿನ /  ವೇಳೆಯಲ್ಲಿ ...... ....ವ್ಯರ್ಥ ಕಳೆದು; ಚುನಾವಣೆ ವೇಳೆಯಲ್ಲಿ ರಾಜಕಾರಣಿಗಳ ಕೈಗೊಂಬೆಗಳಾಗಿ ಜೊಲ್ಲು ಸುರಿಸಿಕೊಂಡು ಬಾಳುವ ರೈತರಿಗೆ ನಮ್ಮಲ್ಲೇನು ಕಡಿಮೆಯಿಲ್ಲ.  ಇಂತಹ ದಿನಮಾನ ಗಳಲ್ಲಿ ಈ ಮಹಿಳೆಯ ಸಾಧನೆ & ಅವರು ರೈತರ ಕಿವಿಯಿಂಡಿ ಹೇಳುವ ಮಾತುಗಳು ಮನ ನಾಟುತ್ತವೆ!

👉 ಹೌದು, ಇವರೊಂದು ಚಿಲುಮೆಯ ಬುಗ್ಗೆಯೇ ಸರಿ. ವ್ಯವಸಾಯ ಯಾರೀಗೂ ಒಗ್ಗದ ಬದುಕು. ಆದರೆ ಇವರು ಕೃಷಿ ಪಯಣದಲ್ಲಿ & ಲಾಭದ ವಿಷಯವಾಗಿ  ಮಾತಾನಾಡುವುದು ನೂರರಲ್ಲಿ ಅಲ್ಲ; ಸಾವಿರದಲ್ಲೂ ಅಲ್ಲ; ಲಕ್ಷದಲ್ಲೂ......ಅಲ್ಲ; ಅವರು ಕೃಷಿ ಲಾಭದ ಲೆಕ್ಕ ಹೇಳುವುದು ಕೋಟಿಗಳಲ್ಲಿ!!!???🤔 ಆಗಲೇ.... ಅವರು ಎಲ್ಲರಿಗೂ...'ಭೇಷ್' ಎನಿಸುತ್ತಾರೆ.

✍ ಯಾರೀ.... ಮಹಿಳೇ???🤔🤔🤔

✍ 👰ಅವರೇ.....

 👏👏 ಶ್ರೀಮತಿ ಕವಿತಾ ಮಿಶ್ರ  👏👏

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕವಿತಾಳ ಗ್ರಾಮದ ನಿವಾಸಿ ಕವಿತಾ ಮಿಶ್ರಾ, ಕೃಷಿ ಕ್ಷೇತ್ರದಲ್ಲಿ ಸಾಧನೆಗೆ ಹಠ ಹಿಡಿದು ತಮ್ಮ 10 ಎಕರೆ ಬರಡು ಭೂಮಿಯಲ್ಲಿ ಸಾವಯವ ಕೃಷಿ ಹಾಗೂ ಹನಿ ನೀರಾವರಿ ಮೂಲಕ, ಆ ಬರಡು ಭೂಮಿಯನ್ನ ಸ್ವರ್ಗಮಾಡಿದ್ದಾರೆ!

✍ ಪ್ರಿಯ ರೈತ ಮಿತ್ರ ರೇ,
ಬದುವಿನಲ್ಲಿ ಒಂದು ಮರವಿದ್ದರೆ ನೆರಳಾಗಿ ಬೆಳೆಬಾರದು ಎಂಬ ತಪ್ಪು ನಂಬುಗೆಯಲ್ಲಿರುವ ರೈತರೇ ತುಂಬಿರುವ ಈ ಕಾಲದಲ್ಲಿ; ಕವಿತಾರವರು ಬೆಳೆಸಿರುವ ಗಿಡ-ಮರಗಳು, ಅವುಗಳ ವೇವಿಧ್ಯತೆ & ಲಾಭ ಕೇಳಿದರೆ...... ನೀವು ವಿಸ್ಮಯರಾದೀರಿ.

🌿2100 ಶ್ರೀಗಂಧ
🌿1500 ದಾಳಿಂಬೆ
🌿90 ಮಾವು
🌿300 ನಿಂಬೆ
🌿800 ಸೀಬೆ
🌿150 ನೇರಳೆ
🌿150 ಬೆಟ್ಟದ ನಲ್ಲಿಕಾಯಿ
🌿150 ನುಗ್ಗೆ
🌿100 ಕರಿಬೇವು
🌿100 ಮಲ್ಲಿಗೆ
🌿100 ತೆಂಗು
🌿450 ಸೀತಾಫಲ

ಅಷ್ಟೇ... ಅಲ್ಲ  ಮೂಸಂಬಿ, ಸಪೋಟ, ಬಾರೇಹಣ್ಣು, ಮತ್ತಿ,  ರಕ್ತಚಂದನ, ಕಾಫಿ, ಮೆಣಸು, ಅರಿಷಿಣ.....  ಸೇರಿದಂತೆ ನಾನಾ ಬಗೆಯ ಗಿಡಗಳನ್ನ ಬೆಳೆದಿದ್ದಾರೆ !!!

✍ಇಷ್ಟೇ ಅಲ್ಲದೇ ಕವಿತಾ ಅವರು ತೋಟದಲ್ಲೇ ಮನೆ ಮಾಡಿಕೊಂಡು ಹಸು, ಕುರಿ, ಕೋಳಿ ಸಾಕಾಣಿಕೆ ಮಾಡಿದ್ದಾರೆ. ವರ್ಷಕ್ಕೆ ಲಕ್ಷ-ಲಕ್ಷ  ಆದಾಯ ಗಳಿಸುತಿದ್ದಾರೆ.

✍ ಅಬ್ಬಾ..... ಅನಿಸೀತು ಅಲ್ಲವೇ?

✍ ಇತ್ತೀಚೆಗೆ ನಾನು ಕಂಡ ವಿಸ್ಮಯವೆಂದರೆ- ಕೆಲವು ಹಳ್ಳಿಗಳಲ್ಲಿ / ರೈತರು ಯುಗಾದಿ ಬಂದರೆ ಮಾವಿನ ಎಲೆ ಮಾರುಕಟ್ಟೆಯಲ್ಲಿ ಕೊಂಡುತರುವ ಹೀನಾಯ ಸ್ಥಿತಿಗೆ ಇಳಿದಿದ್ದಾರೆ; ಅಷ್ಟೇ.... ಏಕೆ ಒಗ್ಗರಣೆಯ ಕರಿಬೇವಿಗೂ....  ಅಂಗಡಿಗೆ ಓಡುತ್ತಾರೆಂದರೆ: ಕೃಷಿ ಯಾವ ದುಸ್ಥಿತಿ ತಲುಪಿದೆ ಊಹೆ ಮಾಡಿ.  ಹಾಗಾದರೆ ದೂಷಿಸುವುದಾದರೂ ಯಾರನ್ನ ??!!!

ನಮ್ಮನ್ನೇ ....
 ನಾವೇ... ಶಪಿಸಿ ಕೊಳ್ಳಬೇಕಿದೆ.  ಮೂಲತಃ ನಾವೆಲ್ಲಾ.... ಹಳ್ಳಿಗರೇ...

⚡ನಾವು ಕಲಿತ ವಿದ್ಯೆಗಳು ನಮ್ಮನ್ನು ದಾರಿ ತಪ್ಪಿಸಿದವು

⚡ಸುತ್ತಲಿನ ವ್ಯವಸ್ಥೆಗಳು ನಮ್ಮನ್ನ ತಪ್ಪು ದಾರಿಗೆಳದವು

⚡ Needy agriculture  ಹೋಗಿ Greedy agriculture ಪ್ರಾರಂಭವಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು!!😌

⚡ ಚಾಲೇಂಜಿಂಗ್    ಜೀವನಕ್ಕೆ ಬೆನ್ನು ಮಾಡಿ  ಸೆಕ್ಯುಲರ್ ಜೀವನಕ್ಕೆ ಅಂಟಿಕೊಂಡದ್ದಂತೂ... ಭರಿಸಲಾಗದ ನಷ್ಥಕ್ಕೆ ನಾಂದಿಯಾಯಿತು 🙁

⚡ ಹೀಗೆ.... ಹತ್ತು ಹಲವು ತಪ್ಪು ತಿಳುವಳಿಕೆಗಳು & ನಡೆಗಳು ರಿಪೇರಿಯಾಗದಷ್ಟು ನಷ್ಟಮಾಡಿವೆ

🚶Come back to Smt. Kavitha Mishra

 ✍ ಶ್ರೀಗಂಧ ಹಾಗೂ ರಕ್ತಚಂದನದ ಮರಗಳ ಮಾರಾಟಕ್ಕೆ ಕೆಎಸ್‍ಡಿಎಲ್ ಜೊತೆ ಒಪ್ಪಂದ ಮಾಡಿಕೊಂಡಿರುವ ಕವಿತಾರವರ ಲೆಕ್ಕಾಚಾರವಂತೂ... ನಿಬ್ಬೆರಗಾಗಿಸುತ್ತದೆ!!

✍ 🌴🌴ಕೇವಲ  ಅವರ   ಶ್ರೀಗಂಧ ಬೆಳೆಯ ಲೆಕ್ಕಚಾರ ಇಂತಿದೆ:-

👉ಒಂದೆ ಒಂದು ಎಕರೆಯಲ್ಲಿ 5 ರಿಂದ  6 ಕೋಟಿ ಲಾಭ!!?☹

👉 ಪರಾವಲಂಭಿ ಬೆಳೆಯಾದ ಶ್ರೀಗಂಧವನ್ನ ಇತರೆ ಮರಗಳ ಜೊತೆಗೆ ಬೆಳೆದರೆ 12 ರಿಂದ ರಿಂದ 15 ವರ್ಷಗಳ
ನಂತರ ಕಟಾವಿಗೆ ಬಂದೀತು.

 👉 1 kg  ಶ್ರೀಗಂಧ ದ ಬೆಲೆ  10 ರಿಂದ 15 ಸಾವಿರ!! ಇದು ಸರ್ಕಾರಿ ಬೆಲೆ.  ಹೊರಗಡೆ ಅದು ಇಪ್ಪತ್ತೂ.... ದಾಟೀತು... !!!

👉ಈ  ಗಣಿತದಲ್ಲೇ ನೋಡಿದರೆ ಒಂದು ಟನ್ ಗೆ ಬೆಲೆ 1 ಕೋಟಿ 60 ಲಕ್ಷ !!!!

⚡ಎಕರೆಗೆ ಕಡಿಮಯೆಂದರೂ 3 ರಿಂದ  4 ಟನ್ ಇಳುವರಿ ಗ್ಯಾರಂಟಿ!!

✍ 🕵‍♂ಗೆಳೆಯರೇ,

  ಶ್ರೀಗಂಧಕ್ಕೆ ಕಳ್ಳರ ಕಾಟ ಎಂಬ ಮಾತಿದೆ. ಅದಕ್ಕೆ ಕವಿತಾ ಅವರು ಕೊಡುಕೊಂಡ ಮಾರ್ಗ: E- protection.

✍  ಏನಿದು  E- protection?

- ಶ್ರೀಗಂಧ ಮರಗಳಿಗೆ ಒಂದು ಮೈಕ್ರೋಚಿಪ್ ಅಳವಡಿಸಲಾಗುವುದು. ಕಳ್ಳ ಕೇವಲ  2 ಅಡಿ  ಮರದ ಹತ್ತಿರ  ಸುಳಿದಾಡಿದರೂ ಸೈರನ್ ಕೂಗುತ್ತದೆ😁🤔

ಅಷ್ಟೇ ಅಲ್ಲ..... ಸಮೀಪದ ಪೊಲೀಸ್ ಠಾಣೆಗೂ ಲಿಂಕ್ ಹೊಂದಿ ಅಲ್ಲೂ ಸೈರನ್ನು ಹೊಡೆದು ಕೊಳ್ಳುತ್ತದೆ. ಮತ್ತೊಂದು ಪ್ರಯೋಜನವೆಂದರೆ- ಅಕಾಸ್ಮತ್ ಕಳ್ಳ ಕದ್ದೋಯ್ದರೂ..........ಕದ್ದ ಮಾಲು ಎಲ್ಲಿದೆ  ಎಂಬದನ್ನ ಕಾರಾರುವಕ್ಕಾಗಿ ಪತ್ತೆ ಹಚ್ಚಲೂಬಹುದು..

✍ ಮಿತ್ರರೇ,

 -⚡ಜಮೀನಿದೆ;  ಮಾಡುವವರಿಲ್ಲಾ;

 -⚡ಸಾಕಷ್ಟು... ಜಮೀನಿದೆ ಅಲ್ಪ ಮಟ್ಟಿಗೆ ಸಾಗುವಳಿ ನಡೆಯುತ್ತಿದೆ, ಆಳುಗಳ ಸಮಸ್ಯೆಯಿಂದ ಉಳಿದದ್ದು ಹಾಗೇ ಬಿದ್ದಿದೆ ಎನ್ನುವವರನ್ನು ಸಾಕಷ್ಟು ನೋಡಿದ್ದೇವೆ

ಅಲ್ಲದೆ

- ⚡ನನ್ನದಿನ್ನು ಹತ್ತಾರು ವರ್ಷ ಸರ್ವೀಸ್ ಇದೆ;  ಮುಂದೆ ಹಳ್ಳಿಗ್ಹೋಗಿ  ಜಮೀನು ನೋಡಿಕೊಂಡು ನಮ್ಮದಿಯ ಜೀವನ
ಕಂಡುಕೊಳ್ಳುವ ಹಂಬಲವನ್ನ ಬಲು ಮಂದಿ  ವ್ಯಕ್ತ ಪಡಿಸುವುದನ್ನ ನಾವು ಕಂಡಿದ್ದೇವೆ. ಇಂತವರಿಗೆ ಈ ತರಹದ  Tree based = ಮರ ಆಧಾರಿತ ಬೆಳೆ ಅನುಕೂಲ. ಒಬ್ಬ ಆಳು ಹತ್ತಾರು ಎಕರೆ ನಿಭಾಯಿಸಿಯಾನು.

✍ ಗೆಳೆಯರೇ,

ಗಮನಿಸಿ

"ಸಾಧನೆ ಸರಳವಲ್ಲ"

ಕವಿತಾರ ಈ ಚಮತ್ಕಾರ ಒಂದೇ ದಿನ ಆದದ್ದೂ ಅಲ್ಲ. ಹತ್ತಾರು ಬೋರ್ ತೆಗೆಸಿದರೂ ಒಂದು ಹನಿ ನೀರು ಬೀಳದಿದ್ದರೂ... ಹೆದರದೆ ಮನ್ನುಗ್ಗಿ ಮತ್ತೊಂದು ಕೊರೆಸಿ ಯಶಸ್ಸನ್ನ ಪಡೆದವರು !!🤔

✍ಮೊದ-ಮೊದಲಿಗೆ  ದಾಳಿಂಬೆ ಹಾಕಿ ಲಾಭ ಮಾಡಿದರು;  ಮೂರು ವರ್ಷಗಳ ನಂತರ 'ಅಂಗಮಾರಿ' ರೋಗ ಬಂದು ಹತ್ತಾರು  ಎಕರೆಯಲ್ಲಿ ಹೆತ್ತಮ್ಮನಂತೆ ಸಾಕಿ ಸಲುಹಿದ ಆ ಗಿಡಗಳನ್ನ ಕೈಯಾರೆ ಕೀಳಬೇಕಾದ ದುಸ್ಥಿತಿ ಬಂದು;  ಅವನ್ನ  ಕಿತ್ತು ಸುಡಬೇಕಾದ ಪ್ರಸಂಗ ಬಂದಾಗ  ಅವರು ಅನುಭವಿಸಿದ ನೋವು ಊಹೆಗೂ ಮೀರಿದ್ದು. ಅದು ತಾನೇ ಹೆತ್ತು- ಹೊತ್ತು, ಸಾಕಿ ಸಲುಹಿದ  ಕರುಳ ಕುಡಿ ಕಣ್ಮುಂದೆಯೇ ತೀರಿ ಮಣ್ಣಲ್ಲಿಡುವಾಗಿನ   ಸಂಕಟಕ್ಕಿಂತಲೂ ಸಂಕಟ.  ಹೀಗೆ ನೋವುಗಳ ಮಧ್ಯೆ ಜಯ ಪಡೆದವರು:- ಧೀರೆ ಮಹಿಳೆ ಶ್ರೀ ಕವಿತಾರವರು👌👌

✍ ಈ ನೋವಿನಿಂದ ಅವರು ಕಂಡುಕೊಂಡ ಪಾಠವೇ  'ಬಹು ಬೆಳೆ ಪದ್ದತಿ ' (Multi cropping). ಅತೀ ಸಾಂದ್ರಿಕೃತ ಬೇಸಾಯ ಪದ್ಧತಿ ಅಳವಡಿಸಿಕೊಂಡರು.
ಇದುವೇ ನಿಜವಾದ 'ಸುಸ್ಥಿರ ಕೃಷಿ' ಎಂದು ನಿರೂಪಿಸಿಯೂ ತೋರಿಸಿದರು.

✍ 'ಬಹುಬೆಳೆ ಪದ್ದತಿ' ಯಲ್ಲಿ  ವರ್ಷವಿಡೀ  ಆದಾಯ. ಪಸಲುಗಳು ತಿಂಗಳ ಅದಾಯ ನೀಡಿದರೆ;  ಮರಗಳು ಇನ್ಸ್ ರೆನ್ಸ್ ತರಹ.  ಬೆಳೆಗಳು ಕೈಕೊಟ್ಟಲ್ಲಿ ಆಸರೆಯಾಗುವವು. ಆಗ ನಷ್ಟವೂ ಇಲ್ಲ ಆತ್ಮಹತ್ಯೆಯೂ ಇಲ್ಲ, ಅಲ್ಲವೇ...?

✍ ಶ್ರೀಮತಿ ಕವಿತಾ ಅವರು ಕಳೆದ ಹಲವಾರು ವರ್ಷಗಳಲ್ಲಿಂದಲೂ ಪ್ರಗತಿಪರ ರೈತ ಮಹಿಳೆಯಾಗಿ ಗುರುತಿಸಿ ಕೊಂಡವರು; ಹಲವಾರು ಪ್ರಶಸ್ತಿಗಳನ್ನ & ಜನ ಮನ್ನಣೆ ಪಡೆದ ಹೆಮ್ಮೆಯ ಕನ್ನಡತಿ.

✍ ಇಂಗ್ಲಿಷ್, ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಗಳನ್ನ ಸುಲಲಿತವಾಗಿ ಮಾತನಾಡಬಲ್ಲ ಕವಿತಾರವರು ಇಂದಿನ    ರೈತರಿಗೆ &  ನಾಜೂಕಿನ ನಾರೀಮಣಿಗಳಿಗೆ  ಹೇಳುವ ಕಿವಿಮಾತುಗಳಂತೂ.... ವಿಸ್ಮಯ ಗೋಳಿಸುತ್ತವೆ.

"ನಮ್ಮ ಇಂದಿನ ಯುವತಿಯರು ಹೆತ್ತ ಮನೆಗೂ ಕೊಟ್ಟ ಮನೆಗೂ...ಕೀರ್ತಿ ತರಬೇಕು. ವಿದ್ಯೆ ವಿನಯ ತರಿಸಬೇಕು; ಕಾಣದ ಜಾಗದಲ್ಲಿ ಹೋಗಿ ನೌಕರಿಯ ಕೂಲಿಯ ಬದಲು ಸ್ವಾವಲಂಭಿ ಮತ್ತು  ನಮ್ಮದಿ ಜೀವನವನ್ನ ಹಳ್ಳಿಯಲ್ಲೆ..... ಕಂಡುಕೊಳ್ಳಬಹುದು.  ರೇತಾಪಿಯನ್ನ ರೈತರನ್ನ ಕೀಳಾಗಿ ಕಾಣುವುದನ್ನ ಹೆಣ್ಣು ಹೆತ್ತವರು & ಹುಡುಗಿಯರು ಬಿಡಬೇಕು.  ರೈತರ ಮಕ್ಕಳನ್ನ ಮದುವೆಯಾಗಿ ನಮ್ಮದಿಯ ಜೀವನ ಕಂಡುಕೊಳ್ಳಿ; ನಾನೂ... ಓದಿದವಳೇ..
.... ಬೇಕಿದ್ದರೆ ಸಿಟಿ ಸೇರಿ ಲಕ್ಷಗಳಿಸಬಹುದಿತ್ತು.... ಆದರೂ ನಾನು ರೈತನನ್ನೇ... ಮದುವೆಯಾದೆ..... ಈಗ ನಾನು ...... ..ಕೋಟಿಗಳಲ್ಲಿ ಮಾತನಾಡುತ್ತೇನೆ.... !!!!! ನಮ್ಮ ರೈತರಾದರೂ..... ಈ ಹಾಳು ಓಟಿನ ರಾಜಕಾರಣದಿಂದ ದೂರ ಉಳಿದು ತಮ್ಮ ಜಾಣ್ಮೆಯಲ್ಲಿ ರೈತಾಪಿ ಮಾಡಿದರೆ: ಈ ಸಾಲಮನ್ನವೇನು ಬಂತು, ಸರ್ಕಾರಕ್ಕೇ.... ಸಾಲ ನೀಡಬಲ್ಲ ತಾಕತ್ತು ರೈತನಿಗಿದೆ..!!"

ಕವಿತಾರವರ ಈ ಮಾತುಗಳನ್ನು ಕೇಳಿದಾಗ ಅವರ ಬಗ್ಗೆ  ಗೌರವ ತರಿಸುತ್ತದೆ &  "ವ್ಹಾ.....ಎಂತಹ ಮಾತು 🤔🤔🤔🤔 !!!!!!" ಎನಿಸುತ್ತದೆ.

✍ ಏನಾದರೂ ಸಾಧಿಸಲೇಬೇಕು ಅನ್ನೋ 'ಛಲ' ಇರುವವರು ಒಂದಲ್ಲ ಒಂದು ದಿನ ಎಂತಹ ಕಷ್ಟ ಇದ್ದರೂ..
ಸಾಧಿಸಿ ತೋರಿಸಬಹುದು ಎಂಬುದಕ್ಕೆ ಶ್ರೀಮತಿ ಕವಿತಾ ಮಿಶ್ರ ಅವರೇ ಸಾಕ್ಷಿ ಅಲ್ಲವೇ???

🙏🙏ಅವರಿಗೆ ನನ್ನ ಕಡೆಯಿಂದ ಶರಣು ಶರಣಾರ್ಥಿಗಳು🙏🙏🙏

ಓದಿ ನಿಮಗೆ ತಿಳಿದ ರೈತರಿಗೆ & ಕೃಷಿ ಆಸಕ್ತರಿಗೂ ತಲುಪಿಸಿ

ಸಂಗ್ರಹ: ಸಿ. ಜಿ.ವೆಂಕಟೇಶ್ವರ
ಗೌರಿಬಿದನೂರು
- Dr. B.M. Nagabhushana,
Professor & HOD Department of Chemistry
& Vice president of LSIKC

M.S. Ramaiah Institute of Technology (MSRIT)
Bangalore
M-09916030272

ಇಂದು ವಿಶ್ವ ಜನಸಂಖ್ಯಾ ದಿನ ಅದರ ಪ್ರಯುಕ್ತ ಈ ಹನಿಗಳು*



                   *ಇಂದು ವಿಶ್ವ ಜನಸಂಖ್ಯಾ ದಿನ ಅದರ ಪ್ರಯುಕ್ತ ಈ ಹನಿಗಳು*

*೧*

*ಯಾರು*

ಶಿಕ್ಷಕರು ಕೇಳಿದರು
ನಮ್ಮ ದೇಶದ
ಜನಸಂಖ್ಯೆ ಹೆಚ್ಚಳಕ್ಕೆ
ಕಾರಾಣರಾರು?
ಗುಂಡ ಉತ್ತರಿಸಿದ
ಆರಲ್ಲ ಸಾರ್
ನೂರಾರು ,ಸಾವಿರಾರು.

*೨*

*ಕಲ್ಯಾಣ*

ಜನಸಂಖ್ಯೆ ನಿಯಂತ್ರಣಕ್ಕೆ
ಒಂದೇ ಪರಿಹಾರ
ಕುಟುಂಬ ಕಲ್ಯಾಣ
ಆಗಲೇಬೇಕು
ಕನ್ಯೆ ಹುಡುಕುತ್ತಿದ್ದ
ಹುಡುಗನೆಂದ
ಹೌದು ಅಗಲೇಬೇಕು
ಕುಟುಂಬಕ್ಕೆ ಮೊದಲು
ಕಲ್ಯಾಣವಾಗಲೇಬೇಕು

*೩*


*ಮೊದಲ ಸ್ಥಾನ*

ಆರು ಮಕ್ಕಳ ಪಡೆದವ
ಹೇಳಿದ ಜನಸಂಖ್ಯೆ
ಹೆಚ್ಚಳಕ್ಕೆ ಕಾರಣ ನಾನೇನಾ?
ಯಜಮಾನರು ಹೇಳಿದರು
ನೀನು ಹೀಗೆ ಮಾಡಿದರೆ
ಜನಸಂಖ್ಯೆಯುಲ್ಲಿ   ಭಾರತ
ಹಿಂದೆ ಹಾಕುತ್ತೆ ಚೀನಾನಾ.


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


09 July 2018

ಸಾಮಾಜಿಕ ಕಳಕಳಿ (ಲೇಖನ)

               *ಸಾಮಾಜಿಕ ಕಳಕಳಿ*

ನಮ್ಮ ಮೆಟ್ರೋಗೆ ಇನ್ಪೋಸಿಸ್ ಫೌಂಡೇಷನ್200 ಕೋಟಿ ರೂಗಳ ದೇಣಿಗೆ ನೀಡಿರುವುದು ಶ್ಲಾಘನೀಯ.ಅದರಲ್ಲೂ ಸುಧಾ ಮೂರ್ತಿಯವರ ಸಾಮಾಜಿಕ ಕಳಕಳಿ ಅನುಕರಣೀಯ   ಕಾರ್ಪೊರೇಟ್ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆಯಲು ಈ‌ರೀತಿಯ ಸಹಾಯ ಮಾಡುವುದು ವಾಡಿಕೆಯಲ್ಲಿದ್ದರೂ ಕರ್ನಾಟಕ ಸರ್ಕಾರ ಕ್ಕೆ ಇಷ್ಟು ಮೊತ್ತದ ಚೆಕ್ ಒಮ್ಮೆಲೆ ನೀಡಿರುವುದು ಇದೇ ಮೊದಲು .ಕೆರೆಯ ನೀರನು‌ ಕೆರೆಗೆ  ಚೆಲ್ಲಿ ಎಂದು ದಾಸವರೇಣ್ಯರು ಹೇಳಿದಂತೆ ಕಾರ್ಪೊರೇಟ್ ಕಂಪನಿಗಳು ತಾವು ಪಡೆದ ಲಾಭಾಂಶ ದಲ್ಲಿ ಒಂದಷ್ಟು ಪಾಲು ಸಮಾಜಕ್ಕೆ ಮೀಸಲಿಟ್ಟರೆ  ಸರ್ವಜನರ ಕಲ್ಯಾಣ ಆಗುವುದು.ಈ ನಿಟ್ಟಿನಲ್ಲಿ ನಮ್ಮ ಕರ್ನಾಟಕ ಮತ್ತೋರ್ವ ಉದ್ಯಮಿ ಅಜೀಂ ಪ್ರೇಮ್ ಜೀ ರವರು  ಸಹ ಸಮಾಜದಲ್ಲಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರಪಂಚದ ನಂಬರ್ ಒನ್ ಶ್ರೀಮಂತ ರಾದ ವಾರ್ನ್ ಬಫೆಟ್ ರವರು ತಮ್ಮ ಆಸ್ತಿ ಯ ಅರ್ಧ ಸಂಪತ್ತನ್ನು ಸಮಾಜಕ್ಕೆ ದಾನ ಮಾಡಿರುವುದು ಇಲ್ಲಿ ಉಲ್ಲೇಖಾರ್ಹ.
ಇದೇ ರೀತಿ ಉಳ್ಳವರು ಇಲ್ಲದವರ ಒಳಿತಿಗೆ ಕೈ ಜೋಡಿಸಿದರೆ ಪ್ರಪಂಚದಲ್ಲಿ ಸರ್ವಜನ ಸಮಾನವಾಗಿ ಜೀವಿಸುವ ಸಂತರ ಕನಸು ನನಸಾದೀತು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

ನಾಲ್ಕು ಹನಿಗಳು

                 *ನಾಲ್ಕು ಹನಿಗಳು*

*೧*

*ಕಮಲಾಕರ*

ಈಗ ಏರಿಕೆಯಾಗಿದೆ
ಪೆಟ್ರೋಲ್ ಕರ
ವಿದ್ಯುತ್ ಕರ
ಆದಾಯ ಕರ
ನೀನೆ ಬಂದು ಇಳಿಸಬೇಕು
ಕಮಾಲಾಕರ

*೨*

*ಸೂರು*

ಯೋಜನೆಗಳು ನೂರಾರು
ಆಶ್ವಾಸನೆಗಳು ಸಾವಿರಾರು
ಭರವಸೆಗಳ ಕಾರುಬಾರು
ಸಮೀಕ್ಷೆ ಹೇಳಿತಿದೆ
ಲಕ್ಷಾಂತರ ಜನರಿಗಿಲ್ಲ ಸೂರು

*೩*

*ಸ್ವಂತಿ (Selfi)*

ವೃದ್ದರ ಹಳ್ಳಿಯಲ್ಲಿ ಬಿಟ್ಟು
ಪೇಟೆ ಸೇರಿ ಅವರಿಗೆ
ನೀಡಲಿಲ್ಲ ಅರೈಕೆ ಪ್ರೀತಿ
ವರ್ಷಕ್ಕೊಮ್ಮೆ ಬಂದು
ಹಲ್ಕಿರಿದು ಮೊಬೈಲ್ ನಲ್ಲಿ
ತೆಗೆದುಕೊಳ್ಳಲು ಮರೆಯುಲ್ಲ ಸ್ವಂತಿ


*೪*

*ನೆನಪು ಕೊಳ್ಳುವುದಿಲ್ಲ

ಹಳೆಪಾತ್ರೆ  ಹಳೇಕಬ್ಬಿಣದೊಂದಿಗೆ
ನಿನ್ನ ಹಳೆಯ ನೆನಪುಗಳ
ಮಾರಲು ಹೋದರೆ
ನಮ್ಮ ಗುಜರಿಯಲ್ಲಿ
ಹಳೆಯ ನೆನಪು
ಕೊಳ್ಲುವುದಿಲ್ಲ ಎಂದು ಬಿಟ್ಟ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


ವಿವೇಚನೆಯಿಂದ ಬಾಳು (ಕವನ)

            *ವಿವೇಚನೆಯಿಂದ ಬಾಳು*

ಬೆಟ್ಟ ನೀರು ಗಾಳಿ ಕಾಡನು ಕೊಟ್ಟೆ ನಿನಗೆ
ಬಾಳಿ ಬದುಕದೇ ನನ್ನ ಮೇಲೆ ದಬ್ಬಾಳಿಕೆಮಾಡಿದೆ
ತಾಳಲಾರೆ ನಿಮ್ಮುಪದ್ರವಗಳ ನಿಲ್ಲಿಸು ಇಂದೆ
ಇಲ್ಲವಾದರೆ ನಿನ್ನ ಅಂತ್ಯವಾಗಲಿದೆ ಮುಂದೆ

ಕ್ಷಮಯಾ ಧರಿತ್ರಿ ನಾನು ಆಸೆಬುರುಕ ನೀನು
ಆಸೆಗಳಿಗೆ ಬಲಿಯಾಗಿ  ಕಾಡು ನಾಶಗೈಯುತಿರುವೆ
ಕಾಂಕ್ರೀಟ್ ಕಾಡನು ಬೆಳಸಿ ಮೆರೆಯುತಿರುವೆ
ನನ್ನ ನೋವನು  ನೀನು ಮರೆಯುತಿರುವೆ

ಬಗೆದೆನ್ನಯ ಒಡಲನು ದೋಚಿದೆ  ಸಾಕು
ಇನ್ನಾದರೂ ಮರ ಗಿಡ ಬೆಳಸಿ ಬಾಳು
ಬದುಕು ಬದುಕಲು ಬಿಡು ಸಕಲ ಜೀವಿಗಳ
ಇಲ್ಲವಾದರೆ ನಿನ್ನ ಬಾಳಾಗುವುದು ಗೋಳು

ಮೌನವಾಗಿರುವೆನೆಂದು ಮೆರೆಯಬೇಡ
ನನ್ನ ತಾಳ್ಮೆಗೆ ಮಿತಿಯಿದೆಯೆಂದು ಮರೆಯಬೇಡ
ನಾ ಮೈಕೊಡವಿದರೆ ನಿನ್ನಳಿವು ನೋಡ
ಇದ ತಿಳಿದ ವಿವೇಚನೆಯಿಂದ ಬಾಳು ಮೂಢ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

08 July 2018

ಗಜಲ್ ೩೯(ಕಂಡಿದ್ದೇನೆ )


ಗಜಲ್ ೩೯

ಪ್ರಖರ ಸೂರ್ಯ ಚಂದ್ರ ರಿಗೆ ಗ್ರಹಣ ಹಿಡಿದಿರುವುದನ್ನು ನಾನು ಕಂಡಿದ್ದೇನೆ
ಶಿಖರಗಳು ಕ್ಷಣಮಾತ್ರದಲ್ಲೇ ತರಗೆಲೆಯಂತೆ
ಧರೆಗುರುಳಿರುವುದನ್ನು ನಾನು ಕಂಡಿದ್ದೇನೆ

ಕೋಟಿ ಕಟ್ಡಿ ಕುಣಿದವರ ಬಗ್ಗೆ ಎಗರಿ ಹೇಳಬೇಡ
ಮೀಸೆ ತಿರುವಿ ಮೆರೆದವರು ಮಣ್ಣಾಗಿರುವುದನ್ನು ನಾನು ಕಂಡಿದ್ದೇನೆ

ಯಶಸ್ಸು ಪಡೆದವರ  ಕುರಿತು ಗರ್ವ ಪಡಬೇಡ
ಚುಕ್ಕಿಗಳು ಜಾರಿ ಬೀಳುವುದನ್ನು ನಾನು ಕಂಡಿದ್ದೇನೆ.

ಯಾರ  ಜ್ಞಾನದ ಆಳವನ್ನು ಕೊಂಡಾಡಬೇಡ
ಸಾಗರಗಳು ಬತ್ತಿರುವುದನ್ನು ನಾನು ಕಂಡಿದ್ದೇನೆ

ಬಾಹ್ಯ  ರೂಪದ ಬಗ್ಗೆ ಅಹಂಕಾರ ಪಡಬೇಡ
ಮೊನಾಲಿಸಾ ಮಣ್ಣು ಸೇರಿದ್ದನ್ನು ನಾನು ಕಂಡಿದ್ದೇನೆ .

ಜೀವನದಲ್ಲಿ ಗೆದ್ದೆನೆಂದು ಸೀಜೀವಿಯ ಮುಂದೆ  ಬೀಗಬೇಡ
ಅಲೆಕ್ಸಾಂಡರ್ ಶರಣಾಗಿದ್ದನ್ನು ನಾನು ಕಂಡಿದ್ದೇನೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

07 July 2018

ನೆನಪಾಗುವುದು (ಕವನ)

*ನೆನಪಾಗುವುದು*


ಶಾಲೆಯಿಂದ ಮನೆಗೆ ಬಂದ
ನನ್ನ ಮಗಳು ಅಮ್ಮಾ ನನಗೆ
ಗೋಬಿ ಬೇಕು ಪಿಜಾ ಬೇಕು ಎಂದಾಗ
ನನ್ನಜ್ಜಿ ನನಗೆ ಕೊಟ್ಟ ಸಜ್ಜೆ ರೊಟ್ಟಿ
ಚಿನಕುರುಳಿ ನೆನಪಾಗುವುದು

ಮಳೆಯಲಿ ನೆನೆದು ಬಂದು
ಅಪ್ಪಾ ನನಗೆ ಕೊಡೆ ಬೇಕು
ಬಣ್ಣದ್ದಿರಬೇಕು ವಿಶಿಷ್ಠವಾಗಿರಬೇಕು
ಎಂದಾಗ ಮಳೆಯಲೂ ಚಳಿಯಲೂ ನನ್ನ
ಬೆಚ್ಚಗಿಟ್ಟ ಅಜ್ಜಿಯ  ಕೌದಿಯ ನೆನಪಾಗುವುದು

ಅಮ್ಮಾ ನನಗೆ ಪೋಕೆಮಾನ್ ಬೇಕು
ಚಿಂಟು ಟೀವಿ ನೋಡಬೇಕು ಎಂದು
ಮಗಳ ಹಟ ಮಾಡಿದಾಗ ಮುಸ್ಸಂಜೆ
ತಲೆ ನೇವರಿಸಿ ಕಥೆ ಹೇಳುವ ಅಜ್ಜಿಯ
ನೆನಪಾಗುವುದು .

ಇವನ್ನೆಲ್ಲಾ ನನ್ನ ಮಗಳಿಗೆ ಹೇಳಿ
ಗೋಬಿ ಬೇಡ ಸಿರಿಧಾನ್ಯ ನೋಡು
ಟಿವಿ ಮೊಬೈಲ್ ಕಡಿಮೆ ಮಾಡು
ಎಂದರೆ ನೀನಾವ ಕಾಲದಲ್ಲಿರುವೆ
ಎಂದು ಮಗಳು‌ ಜರಿದಾಗಲೂ
ನಮ್ಮಜ್ಹಿಯ ನೆನಪಾಗುವುದು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

06 July 2018

*ನಡುಗುತಿದೆ ಕಂದಮ್ಮ*(ಕವನ)

*ನಡುಗುತಿದೆ ಕಂದಮ್ಮ*

ತುಂಬಿದೂರು ನನ್ನದು
ಆಧುನಿಕತೆ ಗಂಧ ಸುಳಿದಿಲ್ಲ
ದೇವರು ನಮ್ಮಪ್ಪ ಅಮ್ಮದೇವತೆ
ಬೆಳೆಸಿದರು ನನ್ನ ಗಿಳಿಯಂತೆ
ಕಷ್ಷಗಳು ನನ್ನ ಬಳಿ ಸುಳಿಯದಂತೆ

ಕರುಬಿದರು ನೆರೆಹೊರೆಯವರು
ನನ್ನ ಗಂಡನ ನೋಡಿ
ಒಳಗೊಳಗೆ ನಮಿಸಿದೆ ಅಪ್ಪನಿಗೆ
ನೀಡಿದ್ದಕ್ಕೆ ಉತ್ತಮ ಜೋಡಿ

ವರುಷದೊಳಗೆ ನನ್ನ ಮಡಿಲು ತುಂಬಿ
ಸೀಮಂತ ಸಡಗರ ಮನೆಯಲಿ
ಬಯಸಿದ ಎಲ್ಲಾ ವಸ್ತುಗಳು ನೀಡಿ
ನನ್ನೆತ್ತವರು ಸಂತಸಗೊಂಡರು ಮನದಲಿ

ಹೆರಿಗೆಯ ದಿನ  ನೋವ ಸಹಿಸಿ
ಜನ್ಮ ಕೊಟ್ಟೆನು ಕರುಳ ಕುಡಿಗೆ
ಸೂತಕವೆಂದು ಮನೆಯಿಂದ ಹೊರಹಾಕಿದರು
ನಡುಗುತಿದೆ ಕಂದಮ್ಮ ಕೊರೆವ ಚಳಿಗೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


05 July 2018

ದೇವಾಲಯದಲ್ಲಿ ಎಲ್ಲಿ ನಮಸ್ಕಾರ ಮಾಡಬೇಕು (ಸಂಗ್ರಹ ಲೇಖನ)

............ನಮಸ್ಕಾರ....................

         ದೇವಾಲಯಗಳಲ್ಲಿ ಸಿಕ್ಕ ಸಿಕ್ಕ ಕಡೆ ನಮಸ್ಕರಿಸಬಾರದು. ಯಾವ ದೇವಸ್ಥಾನದಲ್ಲಿ ಯೇ ಆಗಲಿ ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು. ಅಥವಾ ನಮ್ಮ ಬಲಭಾಗಕ್ಕೆ ದೇವರು, ದೇವರ ಬಲಭಾಗಕ್ಕೆ ನಾವು ಇರುವಂತೆ ನಮಸ್ಕರಿಸಬೇಕು. ಏಕೆಂದರೆ

  ಅಗ್ರೇ ಪೃಷ್ಟೇ ವಾಮಭಾಗೇ ಸಮೀಪೇ ಗರ್ಭಮಂದಿರೇ |
  ಜಪಹೋಮನಮಸ್ಕಾರಾನ್ ನ ಕುರ್ಯಾತ್ ಕೇಶವಾಲಯೇ ||

 ಅಂದರೆ ವಿಷ್ಣುವಿನ ದೇವಾಲಯಗಳಲ್ಲಿ ದೇವರ ಎದುರುಗಡೆ, ಹಿಂಭಾಗದಲ್ಲಿ, ದೇವರ ಎಡಭಾಗದಲ್ಲಿ, ದೇವರ ಸಮೀಪದಲ್ಲಿ, ಗರ್ಭಗೃಹದಲ್ಲಿ ನಮಸ್ಕಾರ, ಜಪ, ಹೋಮಗಳನ್ನು ಮಾಡ ಬಾರದು.

ಏಕೆಂದರೆ ವಿಷ್ಣು, ಶಿವಾಲಯಗಳಲ್ಲಿ ದೇವರ ಎದುರುಗಡೆ ನಾವು ನಮಸ್ಕರಿಸಿದಾಗ ನಮ್ಮ ಕಾಲು ಗರುಡ, ನಂದಿಯ ಕಡೆಗೆ ಇರುತ್ತದೆ. ಇದರಿಂದ ದೇವರ ಮುಂದೆ ಇರುವ ಗರುಡ, ನಂದಿ, ಮೂಷಿಕಾದಿ ದೇವತೆಗಳಿಗೆ ನಾವು ಕಾಲು ತೋರಿಸಿ ಅವರನ್ನು ತಿರಸ್ಕರಿಸಿ ದಂತಾಗುತ್ತದೆ. ಇದರಿಂದ ಪಾಪದ ಲೇಪವಾಗುವುದು.

 ಏಕೆಂದರೆ `ದೊಡ್ಡವರನ್ನು ತಿರಸ್ಕರಿಸುವುದು ಮರಣಕ್ಕೆ ಆಹ್ವಾನ ಕೊಟ್ಟಂತೆ.` ಇದೇ ಮಾತನ್ನು ಈ ಪ್ರಮಾಣ ಹೀಗೆ ಹೇಳುತ್ತದೆ. `ಅಗ್ರೇ ಮೃತ್ಯುಮವಾಪ್ನೋತಿ` ಎಂಬುದಾಗಿ. ಅಲ್ಲದೇ ಬಲಿಪೀಠ, ಧ್ವಜ ಸ್ತಂಭಗಳಿಗೆ ಪಾದವನ್ನು ತೋರಿಸಬಾರದು. ಆದುದರಿಂದ ದೇವರ ಎದುರಿಗೆ ನಮಸ್ಕರಿಸಬಾರದು.

 ದೇವರ ಮುಂಭಾಗದಂತೆ ಹಿಂಭಾಗದಲ್ಲಿಯೂ ನಮಸ್ಕರಿಸಬಾರದು. ಏಕೆಂದರೆ ಅಲ್ಲಿ ದೇವರ ಪರಿವಾರದೇವತೆಗಳಿರುತ್ತಾರೆ. ಹಿಂಭಾಗದಲ್ಲಿ ನಮಸ್ಕರಿಸಿದಾಗ ಆ ದೇವತೆ ಗಳಿಗೆ ಪಾದ ತೋರಿಸಿದಂತಾಗುವುದರಿಂದ ನಾವು ಯಾವುದೇ ಕಾರ್ಯವನ್ನು ಮಾಡಲಿ ಅದರಲ್ಲಿ ಅಪಜಯ (ಸೋಲು) ವುಂಟಾಗುವುದು. ಆದುದರಿಂದ ದೇವರ ಹಿಂಭಾಗದಲ್ಲಿ ನಮಸ್ಕರಿಸಬಾರದು.
 ದೇವರ ಎಡಭಾಗದಲ್ಲಿಯೂ ನಮಸ್ಕರಿಸಬಾರದು. ಏಕೆಂದರೆ `ವಾಮಭಾಗೇ ಭವೇನ್ನಾಶಃ` ಎಂದು ಹೇಳಿರುವುದರಿಂದ ದೇವರ ಎಡಭಾಗದಲ್ಲಿ ನಮಸ್ಕರಿಸಬಾರದು.

 ಏಕೆಂದರೆ ದೇವರ ಎಡಕೈಯಲ್ಲಿ ಗದಾ, ತ್ರಿಶೂಲ ಮೊದಲಾದ ಆಯುಧಗಳಿರುತ್ತವೆ. ಆ ಆಯುಧಗಳನ್ನು ಪರಮಾತ್ಮನು ಧರಿಸಿರುವುದರ ಉದ್ದೇಶ ಶತ್ರುಗಳ ನಾಶಕ್ಕಾಗಿ. ಒಂದು ವೇಳೆ ನಾವು ದೇವರ ಎಡಭಾಗದಲ್ಲಿ ನಮಸ್ಕರಿಸುವುದರಿಂದ ಭಗವಂತನ ಆಯುಧ ಗಳಿಂದ ನಮ್ಮ ಶರೀರದ ನಾಶವಾಗುವ ಸಂಭವವಿರುವುದರಿಂದ ದೇವರ ಎಡಭಾಗದಲ್ಲಿ ನಮಸ್ಕರಿಸಬಾರದು ಎಂದು ಹೇಳಿ ಕೊನೆಗೆ ದೇವರ ಬಲಭಾಗದಲ್ಲಿಯೇ ನಮಸ್ಕರಿಸ ಬೇಕೆಂದು ಹೇಳುತ್ತಿದ್ದಾರೆ.

 `ದಕ್ಷಿಣೇ ಸರ್ವಕಾಮದಃ` ಎಂಬುದಾಗಿ. ಅಂದರೆ ನಾವು ಯಾವಾಗ ನಮಸ್ಕರಿಸಿದರೂ ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು. ಏಕೆಂದರೆ ದೇವರು ನಮಗೆಲ್ಲರಿಗೂ ಅಭಯವನ್ನು, ಜ್ಞಾನವನ್ನು ನೀಡುವುದು ಬಲಗೈಯಿಂದಲೇ. ಆದುದರಿಂದ ಭಗವಂತನ ಅನುಗ್ರಹ, ಅಭಯವನ್ನು ಪಡೆಯಬೇಕಾದ ನಾವು ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು.

ಸಂಗ್ರಹಲೇಖನ

ಎಂತಾ ಚೆನ್ನಾಗಿದ್ದೀಯಾ? (ಕವನ)


*ಎಂತಾ ಚೆಂದಾಗಿದ್ದೀಯಾ?*

ಬೊಚ್ಚುಬಾಯಿ ಬಿಟ್ಟು
ಹಾಲುಗಲ್ಲ ತೋರಿ
ಎಂತಾ ಚೆಂದಾಗಿದ್ದೀಯಾ
ಕಂದ ನೀ ಎಂತಾ ಚೆಂದಾಗಿದ್ದೀಯ

ಆಡಂಬರವು ಇಲ್ಲ
ಅಲಂಕಾರಗಳಿಲ್ಲ
ಲಕ್ಷ ಲಕ್ಷದ ಬೆಲೆಯ
ಬಟ್ಟೆ ಆಭರಣವಿಲ್ಲ
ಆದರೂ ನೀ ಎಂತಾ ಚೆನ್ನಾಗಿದ್ದೀಯಾ

ಬಟ್ಟಲುಗಣ್ಣು ಬಿಟ್ಟು
ಗಿಣಿಮೂಗು ತೋರುತ್ತ
ಮಂದಹಾಸ ಬೀರುತ
ಅಂದಕೆ ಹೆಸರಾದ ನೀ
ಎಂತಾ ಚೆನ್ನಾಗಿದ್ದೀಯಾ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*



04 July 2018

★★★ಜಪದಿಂದ ಮನಸ್ಸಿಗೆ ವ್ಯಾಯಾಮ ಮತ್ತು ಶಾಂತಿ★★★(ಸಂಗ್ರಹ ಲೇಖನ)

★★★ಜಪದಿಂದ ಮನಸ್ಸಿಗೆ ವ್ಯಾಯಾಮ ಮತ್ತು ಶಾಂತಿ★★★

"ಜಪ"
★ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ನಾನಿಗಳಾದ ಸಿದ್ದರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ.

★ಈ ಕಾರಣದಿಂದಲೇ ಇವರು ಯಾವಾಗಲೂ ತಮ್ಮ ಇಷ್ಟ ದೈವವನ್ನು ಜಪಿಸುತ್ತಲೇ ಇರುತ್ತಾರೆ.

★ಜಪ ಎಂಬ ಪದವು "ಜಪಿಸು" ಎನ್ನುವ ಪದದಿಂದ ಮೂಡಿ ಬಂದಿದೆ.

★ "ಜಪ" ಶಬ್ದವನ್ನು ವಿಶ್ಲೇಷಣೆ ಮಾಡಿದಾಗ,  ಸಂಸ್ಕೃತ ಭಾಷೆಯಲ್ಲಿ ಈ ರೀತಿ ತಿಳಿಸಲಾಗಿದೆ.

          “   "ಜ" ಕಾರೋ ಜನ್ಮ ವಿಚ್ಚೇಧನ
              "ಪ" ಕಾರೋ ಪಾಪನಾಶಕ
               ತಸ್ಮಾಜ್ಯಪ ಇತಿಪ್ರೊಕ್ತೋ
               ಜನ್ಮ ಪಾಪ ವಿನಾಶಕ          “

"ಜ"ಕಾರವು ಜನ್ಮ ವಿನಾಶಕವಾದದ್ದೆಂದೂ
"ಪ" ಕಾರವು ಪಾಪಗಳನ್ನು ನಾಶ ಮಾಡುವುದೆಂದೂ,
ಜನ್ಮ ಪವಿತ್ರವಾಗಬೇಕಾದರೆ "ಜಪ" ಅವ್ಶಕವೆಂದಾಗುತ್ತದೆ.

★"ಜಪ" ಅಂದರೇನು?
 ಪರಮಾತ್ಮನನ್ನು ಮಂತ್ರದ ರೂಪದಲ್ಲಾಗಲೀ, ನಾಮ ರೂಪದಲ್ಲಾಗಲೀ ಮನಸ್ಸನಲ್ಲಾಗಲಿ ಧ್ಯಾನಿಸುವುದೇ "ಜಪ",

 ಕೆಲವರು ಜೋರಾಗಿ ನಾಮ ಸ್ಮರಣೆ ಮಾಡುತ್ತಾ ಬೇರೆಯವರ ಕಿವಿಗೆ  ಕೇಳಿಸುವಂತೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಪಠಿಸುವವರಿಗೂ, ಕೇಳುವವರಿಗೂ ಏಕ ಕಾಲದಲ್ಲಿ ಫಲ ದೋರಕುತ್ತದೆ.

★ಜಪಿಸುವ ಮಂತ್ರ ಬೀಜಮಂತ್ರವಾಗಲೀ, ತಾರಕ ಮಂತ್ರವಾಗಲೀ ಅಥವಾ ಇಷ್ಟ ದೇವತಾ ಮಂತ್ರವಾಗಲೀ ಗುರುಗಳಿಂದ ಉಪದೇಶ ಪಡಯಬೇಕೆಂಬ ನಿಯಮವಿದೆ.

★ಜಪದಲ್ಲಿ ಮೂರು ವಿಧಾನಗಳಿವೆ.

"ವಾಚಿಕ" - ಬೇರೆಯವರ ಕಿವಿಗೆ ಕೇಳಿಸುವಂತೆ ಪಠಿಸುವುದು.

"ಉಪಾಂಶು" - ತುಟಿಗಳು ಅಲುಗಾಡುತ್ತಿದ್ದರೂ ಶಬ್ದವು ಹೊರಗೆ ಕೇಳಿಸದಂತೆ ಜಪ ಮಾಡುವುದು

"ಮಾನಸಿಕ  - ಮನಸ್ಸಿನಲ್ಲಿ ಧ್ಯಾನಿಸುವುದು.

★ "ವಾಚಿಕ" ಜಪಕ್ಕಿಂತಲೂ ಹತ್ತು ಪಾಲು ಶ್ರೇಷ್ಟವಾದುದ್ದು "ಉಪಾಂಶು", ಉಪಾಂಶುವಿಗಿಂಲೂ ಮೂರು ಪಟ್ಟು ಶ್ರೇಷ್ಟವಾದುದ್ದು, "ಮಾನಸಿಕ ಜಪ ಆದ್ದರಿಂದ ಮಾನಸಿಕ ಜಪವನ್ನು ಅಭ್ಯಸಿಸುವುದು ಸರ್ವಶ್ರೇಷ್ಟ.

★★★ಜಪವನ್ನು ಉಪದೇಶಿಸುವವನನ್ನು "ಗುರು" ಎಂದು ಕರೆಯಲಾಗುತ್ತದೆ. ★★★

*★★★ಗುರು ಎಂಬ ಶಬ್ದಕ್ಕೆ ಅರ್ಥ ★★★

★ "ಗು" ಎಂದರೆ ಕತ್ತಲು ಅಥವ ಅಜ್ನಾನ
★"ರು" ಎಂದರೆ ಅದನ್ನು ಪರಿಹರಿಸುವವನು ಎಂದಾಗುತ್ತದೆ.ಗುರುಉಪದೇಶ ಮಾಡುವುದರ ಜೊತೆಗೆಆಶಿರ್ವಾದವನ್ನೂ  ಮಾಡುತ್ತಾನೆ.

★ಜಪಸರದಲ್ಲಿ ೧೦೮ ಮಣಿಗಳಿರಬೇಕೆಂಬ ನಿಯಮವಿದೆ.

★ಈ ಮಣಿಗಳು ಉಪನಿಷತ್ತನ್ನು ಪ್ರತಿನಿಧಿಸುತ್ತವೆ.

★ಅಲ್ಲದೆ ಅಷ್ಟೋತ್ತರ ಅತ್ಯಂತ ಗೌರವವನ್ನು ಹೊಂದಿರುವ ಸಂಖ್ಯೆ.

ಭಗವಂತನಿಗೆ ಅಷ್ಟೋತ್ತರ ಪೂಜೆ ಅತ್ಯಂತ ಪ್ರಿಯವಾದುದ್ದು.

★★★ಜಪದಲ್ಲಿ ವಿಧಗಳಿವೆ★★★

★ ನಿತ್ಯಜಪ

★ ವೈಯಕ್ತಿಕ ಜಪ

★ ಪ್ರಾಯಶ್ಚಿತ ಜಪ

★ಅಚಲ ಜಪ

★ಜಲ ಜಪ

★ ಅಖಂಡ ಜಪ

★ ಪ್ರದಕ್ಷಿಣ ಜಪ

★ ಲಿಖಿತ ಜಪ

★ ಕಾಮ್ಯ ಜಪ

ಈ ಜಪಗಳು ಪ್ರತಿಯೊಂದೂ ವಿಶೇಷ ಅರ್ಥದಿಂದ ಕೂಡಿದ್ದು ಆಯಾ ಸಂರ್ಧಭಗಳಲ್ಲಿ ಪಠಿಸಲಾಗುತ್ತದೆ.

★★★ಜಪವನ್ನು ಮಾಡುವುದಕ್ಕೆ ಕೆಲವು ನಿಯಮ ನಿಬಂಧನೆಗಳಿವೆ.★★★

 ಅವುಗಳೆಂದರೆ,
★ಜಪ ಮಾಡುವ ಸ್ಥಳವು ಪರಿಶುದ್ದವಾಗಿರಯೂ, ಶಾಂತ ವಾತಾವರಣದಿಂದ ಕೂಡಿರಬೇಕು.

★ಬರೀ ನೆಲದ ಮೇಲೆ ಕೂತು ಜಪ ಮಾಡಬಾರದು.
ಮರದ ಮಣೆ, ಅಥವ ಚಾಪೆಯ ಮೇಲೆ ಪೂರ್ವಾಭಿಮುಖವಾಗಿ ಅಥವ ಉತ್ತರಾಭಿಮುಖವಾಗಿ ಕುಳಿತು ಕಾಮ, ಕ್ರೋದ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗದಿಂದ ಮುಕ್ತನಾಗಿ ಏಕ ಮನಸ್ಸಿನಿಂದ ಜಪಿಸಬೇಕು.

★ ಜಪ ಮಣಿ ಎಣಿಸುವಾಗ ಹೆಬ್ಬೆರಳು ಮೂರು ಮತ್ತು ನಾಲ್ಕನೆಯ ಬೆರಳುಗಳನ್ನು ಮಾತ್ರ ಉಪಯೊಗಿಸಬೇಕು.
★ ತೋರು ಬೆರಳು ಅಹಂಕಾರ ಸೂಚಕವೆಂದು ಪರಿಗಣಿಸಿ ಅದನ್ನು ಕೈಬಿಡಲಾಗಿದೆ.
★ಮಾಡುವ ಜಪವನ್ನು ಲೆಕ್ಕ ಮಾಡಿಕೊಳ್ಳಬೇಕು. "ಅಸಂಖ್ಯಾ ಮಸುರಂ ಯಸ್ಮಾತ್, ತಸ್ಮಾದತೆ ಗಣೀಯತೆ ದೈವಂ" ಎಂಬುದಾಗಿ ತಿಳಿಸಲಾಗಿದೆ.

★ಇದರ ಅರ್ಥವೆಂದರೆ ಲೆಕ್ಕವಿಲ್ಲದ ಜಪ ಅಸುರ (ರಾಕ್ಷಸ) ಜಪವೆಂದು ಪರಿಗಣಿಸಲ್ಪಡುತ್ತದೆ. ಆದ್ದರಿಂದ ಮಾಡುವ ಜಪಕ್ಕೆ ಲೆಕ್ಕವಿರಬೆಕು.★

★★ಪ್ರತಿನಿತ್ಯವೂ ಜಪ ಮಡುವುದರಿಂದ ★★

★ವಿಷಯ ವಸ್ತುಗಳತ್ತ ಹರಿದಾಡುವ ಮಾನಸಿಕ ಚಿಂತನೆಗಳನ್ನು ನಿಯಂತ್ರಿಸುತ್ತದೆ.

★ಮನಸ್ಸನ್ನು ಭಗವಂತನ ಕಡೆಗೆ ಒಲೆಯುವಂತೆ ಮಾಡು ತ್ತದೆ.

★ ದುಷ್ಕಾರ‍್ಯಗಳನ್ನು ಮಾಡದಂತೆ ತಡೆಹಿಡಿಯುತ್ತದೆ.

★ ಮನಸ್ಸಿಗೆ ಶಾಂತಿ ತರುತ್ತದೆ. ಜಪಿಸುವ ಪ್ರತಿಯೊಂದು  ಮಂತ್ರದಲ್ಲಿಯೂ ಚೈತನ್ಯ ಶಕ್ತಿ ಅಡಗಿದ್ದು, ಸಾಧಕನ ಶಕ್ತಿ ಕುಂದಿದಾಗ ಮಂತ್ರಶಕ್ತಿ ಸಾಧನಾ ಶಕ್ತಿಯಾಗಿ ನಿಂತು ಸಾಧಕನಿಗೆ ಹುರಿದುಂಬಿಸುತ್ತದೆ.

★ರಜೋಗುಣವನ್ನು ಸತ್ವ ಗುಣವನ್ನಾಗಿ ಪರಿವರ್ತಿಸುತ್ತದೆ.

★ ವ್ಯಾಯಾಮದಿಂದ ಶರೀರವು ದೃಢವಾಗಿ ಆರೋಗ್ಯವನ್ನು ಹೊಂದುವಂತೆ, ಜಪದಿಂದ ಮನಸ್ಸಿಗೆ ವ್ಯಾಯಾಮ ದೊರೆತು ಸ್ಥಿರವಾದ ಮನಸ್ಸನ್ನು ಪಡೆಯಲು ಸಹಾಯಕವಾಗುತ್ತದೆ.

★ ಸ್ಥಿರ ಚಿತ್ತದಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ.

★ ಆದರೆ ತೋರಾಣಿಕೆಗಾಗಿ ಮಾಡುವ ಜಪದಿಂದ ಯಾವುದೇ ಪುಣ್ಯಾವಾಗಲೀ, ಪುರುಷಾರ್ಥವಾಗಲೀ ದೊರಕುವುದಿಲ್ಲ.

★ಜಪ, ತಪ, ಧ್ಯಾನ, ಭಜನೆ, ನರ್ತನ, ಗಾನ, ಇವುಗಳೆಲ್ಲವೂ ಜಪದ ನಾನಾ ಮುಖಗಳು, ಅನುಸರಿಸುವ ರೀತಿ ಬೇರೆ ಬೇರೆಯಾಗಿವೆ.★

★ಎಲ್ಲಾ ನದಿಗಳೂ ಸಮುದ್ರವನ್ನು ಸೇರುವಂತೆ, ಪೂಜಿಸುವ ಪೂಜೆಗಳು, ಸಲ್ಲಿಸುವ ಪ್ರಾರ್ಥನೆಗಳು, ಯಾವುದೇ ಭಾಷೆಯಲ್ಲಿರಲಿ, ಯಾವುದೆ ಹೆಸರಿನಿಂದಿರಲಿ, ಎಲ್ಲವೂ ಸರ್ವಶಕ್ತನಾದ ಭಗವಂತನಿಗೇ ಸಲ್ಲುತ್ತದೆ.

ಸಂಗ್ರಹ : ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

ಜಗದ ಜನ ( ಕವನ)

*ಜಗದ ಜನ*

ನಾವೆಲ್ಲರೂ ದೇಶದಲಿರುವ  ಜಗದ ಜನ
ಮಾಡಲು ಪಣತೊಡೋಣ ಜಗವ ಹೂಬನ

ಬಿಳಿ‌‌ ಕರಿ ಬಣ್ಣಗಳೆನೇ ಇರಲಿ
ಉದ್ದ ಗಿಡ್ಡ  ಅಕಾರಗಳ ಗೊಡವೆಯೇಕೆ?
ಗಡಿಗಳ ಗೊಡವೆಯೇತಕೆ ಬೇಕು
ನಮ್ಮ ಮದ್ಯೆ ಜಗಳಗಳು ಬೇಕೆ?

ಇರಲಿ ನಮ್ಮ ದೇಶದ ಮೇಲೆ ಅಭಿಮಾನ
ಮರೆಯದಿರೋಣ ನಾವು ಜಗದ ಜನಗಳ
ನಮ್ಮ ಧರ್ಮ ನಮಗೆ ಮೇಲು
ಗೌರವಿಸೋಣ ಬೇರೆ ಧರ್ಮಗಳ

ಭಯೋತ್ಪಾದನೆ, ಪ್ರಾಂತೀಯತೆ  ತರವಲ್ಲ
ಪ್ರೀತಿ ವಿಶ್ವಾಸ ಮರೆವುದು ಬೇಕಿಲ್ಲ
ಜೊತೆಯಾಗಿ ಸಾಗೋಣ ಬೆಳೆಯೋಣ
ಭುವಿ ನಂದನವನ‌ ಮಾಡಿ ತಿನ್ನೋಣ ಸವಿ ಬೆಲ್ಲ

ಸ್ವರ್ಗ ಸಮಾನ ಜಗದ ಕನಸ ಕಾಣೋಣ
ಮಾನವ ಸಂಪನ್ಮೂಲ ಬೆಳೆಸೋಣ
ವಸುಧೈವಕುಟುಂಬ ಪರಿಕಲ್ಪನೆ ಬೆಳೆಸಿ
ಸರ್ವ ಜನಹಿತ ಕೋರೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


03 July 2018

ಹುಚ್ಚು ಬಿಡಿಸು(ಕವನ)

*ಹುಚ್ಚು ಬಿಡಿಸು*

ಸಂಜೆಯ  ವೇಳೆಯಲಿ
ಸಾಗರತೀರದಿ ನಡೆವಾಗ
ಸೂರ್ಯಾಸ್ತವಾದಾಗ
ನಿನ್ನ ನೆನಪಾಗುವುದು

ಬೇಸಿಗೆ ಕಾಲದಲಿ
ಮೈ ಬಿಸಿಯಾದಾಗ
ನನ್ನ ಪಕ್ಕದಲ್ಲಿ ನೀನಿರುವಂತೆ
ನಿನ್ನ ನೆನಪಾಗುವುದು

ಮಳೆ  ಬಿಲ್ಲು ಕಂಡಾಗ
ಮಳೆಯಲ್ಲಿ ನೆನೆದಾಗ
ಇಳೆಯು ತಂಪಾದಾಗ
ನಿನ್ನ ನೆನಪಾಗುವುದು

ಶಿಲಾಬಾಲಿಕೆಯರ ನೋಡಿದಾಗ
ಕಲೆಯ ಚಿತ್ರಪಟದಲೂ ನೀನೆ
ಭುವನಸುಂದರಿ ನೋಡಿ
ನಿನ್ನ ನೆನಪಾಗುವುದು

ಹಗಲಿರುಳು ನಿನದೇ ಕನವರಿಕೆ
ಮರುಳನಾಗಿರುವೆ ನಿನ್ನ ನೋಡದೆ
ಬಂದು ಸೇರು ನನಗೆ ಮೋಸ ಮಾಡದೆ
ಪ್ರೀತಿ ತೋರಿ  ನನ್ನ ಹುಚ್ಚು ಬಿಡಿಸು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

02 July 2018

ನನಸಾದೀತೇ?(ಭಾವಗೀತೆ)

*ನನಸಾದೀತೆ?*

ಹಸಿವಿನಿಂದ ಸಾಯುವರು ಲಕ್ಷ
ಅಜೀರ್ಣದಿಂದ ಸಾಯವರು ಲಕ್ಷ
ಆಹಾರದ ಪೋಲಾಗುತಿದೆ ಲಕ್ಷ ಲಕ್ಷ
ಆದರೂ ನಾವು ನೀಡಿಲ್ಲ ಅದರೆಡೆ ಲಕ್ಷ್ಯ

ಉದರ ನಿಮಿತ್ತ ಬಹುಕೃತ ವೇಷ
ಕೆಲ ನೀತಿ ನಿಯತ್ತು ಪ್ರಮಾಣಿಕ
ಮತ್ತೆ ಕೆಲವು .ಅನ್ಯಾಯ  ಅಕ್ರಮ
ಇವರ ಕುಲದೇವರೇ ವಂಚಕ

ಅನ್ನದ ಬೆಲೆ ತಿಳಿಯದೆ ಕಾಲಕಸವಾಗಿ
ನೋಡಿ  ತಿಪ್ಪೆಗೆ ಎಸೆಯುತಿಹರು
ಅನ್ನದಾತನು ಒಂದಗಳ ಪಡೆಯಲು
ಪಟ್ಟ ಕಷ್ಟಗಳ ಮರೆಯುತಿಹರು

ಹಸಿವು ಮುಕ್ತ ಕನಸು ನನಸಾದೀತೆ?
ಹಸಿವಿನಿಂದಾಗುವ ಸಾವುಗಳು ನಿಂತೀತೆ  ?
ಸಮುದಾಯಕೆ ಬುದ್ದಿ ಬಂದೀತೆ ?
ಸ್ವಂತಕ್ಕೆ ಸ್ವಲ್ಪ ಜಗಕೆ ಸರ್ವಸ್ವ ಅಂದೀತೆ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*