*ಪಣತೊಡುವೆವು*
ಚಿಟ ಪಟ ಮಳೆಯಲ್ಲಿ
ಟಾರು ರಸ್ತೆಯ ಇಳಿಜಾರಿನಲಿ
ಇಳಿದು ಸಾಗುತಿಹೆವು ನಾವು
ಕಂಬಳಿಯ ಕೊಪ್ಪೆ ಹೊದ್ದು
ನಿತ್ಯದ ಅನ್ನ ಅರುಸುತಲಿ
ಮಳೆ ಬಂದರೆ ಬಂತಲ್ಲ ಮಳೆ
ಜಡಿಮಳೆ ಯಾಕಾದರೋ ಬಂತೋ
ಎಂದು ಗೊಣಗುವ ನಗರದವರಲ್ಲ
ಮಳೆ ಹನಿಗೆ ಮಣ್ಣ ಪರಿಮಳ
ಸವಿಯುವವರು ನಾವೆಲ್ಲ
ರೈನುಕೋಟು ಅಂಬ್ರೆಲಾಗಳ
ಗೊಡವೆ ನಮಗೆ ಬೇಕಿಲ್ಲ
ಪ್ಲಾಸ್ಟಿಕ್ ಸಿಂಥೆಟಿಕ್ ಬಳಸುವುದಿಲ್ಲ
ಪರಿಸರ ಪೂರಕವಾದ
ಬಟ್ಟೆ ಕಂಬಳಿಗಳ ಬಿಡುವುದಿಲ್ಲ
ಕಾನನದ ಮಕ್ಕಳು ನಾವು
ವನದೇವತೆಯನು ರಕ್ಷಿಸಲು
ಎಂದಿಗೂ ಬೆನ್ನ ತೋರೆವು
ಪರಿಸರದೊಂದಿಗೆ ಬಾಳುವ
ಪಣ ತೊಡುವೆವು
*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*
1 comment:
ಸತ್ಯ ಸರ್
Post a Comment