29 July 2018

ನೆನದೇವ ಕನ್ನಡದ ಹಿರಿಮೆ ( ಕವಿತೆ ) ಹಚ್ಚೇವು ಕನ್ನಡದ ದೀಪ ಮಾದರಿಯಲ್ಲಿ


               ನೆನೆದೇವೋ ಕನ್ನಡದ ಹಿರಿಮೆ
ಕನ್ನಡದ ಹಿರಿಮೆ ನಮ್ಮಯ ಗರಿಮೆ
ಎದೆಯುಬ್ಬಿ ಹೊಗಳುವ ನುಡಿಯ | ನೆನದೇವ|
                 ೧

ಆದಿಕಾಲದಿಂದ ಆದಿಪಂಪನಿಂದ
ಬೆಳದಂತ ಭಾಷೆ ನಮ್ಮ ಕನ್ನಡ
ಸುಲಿದ ಬಾಳೆಯ ಹಾಗೆ ಸಿಗುರಳಿದ ಕಬ್ಬಿನ ಹಾಗೆ
ಸುಂದರ ಭಾಷೆ ನಮ್ಮ ಕನ್ನಡ
ಹಳಗನ್ನಡವಿರಲಿ ಹೊಸಗನ್ನಡವಿರಲಿ
ಕನ್ನಡದ ಕಂಪ ಸವಿದೇವು
ಬಳಸುತ್ತ ನುಡಿಯ ಬೆಳಸುತ್ತ ಭಾಷೆಯ
ನಲಿಯೋಣ ,ಕಣ ಕಣಗಳಲ್ಲಿ ಮನ ಮನೆಗಳಲ್ಲಿ
ನೆನದೇವ ಕನ್ನಡದ ಹಿರಿಮೆ

                           | ನೆನದೇವ ಕನ್ನಡದ |

              ೨

ಶಾಸ್ತ್ರೀಯ ಭಾ಼ಷೆ ಶಾಸ್ತ್ರೋಕ್ತ ಭಾಷೆ
ವಿದೇಶಿಯರು ಮೆಚ್ಚಿದ ಭಾಷೆ
ಸ್ಪಟಿಕದಂತಹ ಉಚ್ಚಾರದ ನುಡಿಯ
ಪಟಪಟನೆ ಉಲಿದು ನಲಿವೇವು
ನಮ್ಮ ನುಡಿಬರದ ಅನ್ಯ ರಿಗೆ
ಪ್ರೀತಿಯಿಂದಲಿ ಭಾಷೆ ಕಲಿಸುವೆವು
ಕಣಕಣದಿ ಅಭಿಮಾನ
ಉಕ್ಕುತಿದೆ ಸ್ವಾಭಿಮಾನ
ಮುನ್ನೆಡೆಗೆ ತಡೆಯುಂಟೆ ತಾಯ್ನುಡಿಗೆ
ನಾಡಮಕ್ಕಳು ಸೇರಿ ಮಾತೃಭಾಷೆಗೆ ನಮಿಸಿ
ನೆನದೇವ ಕನ್ನಡದ ಹಿರಿಮೆ

                               |ನೆನದೇವ ಕನ್ನಡದ|

              ೩

ನಮ್ಮ ನುಡಿ ಮೆಚ್ಚಿ ನಮ್ಮ ನಾಡಿಗೆ
ಬಂದರೆ ಸ್ವಾಗತಿಸುವ
ರತ್ನಗಂಬಳಿ ಹಾಸಿ ರತ್ನದಂತಹ
ನುಡಿ ಕಲಿಸುವೆವು
ನಮ್ಮನ್ನವನುಂಡು ನುಡಿವಿರೋಧಿಸುವವರ
ನಡುಮುರಿಯಲು ಹಿಂಜರಿಯೆವು
ಮರೆಯಲ್ಲ ಛಲವ ನಿಲ್ಲಲ್ಲ
ನಾಡೋಲವುಅನವರತ
ನಾಲಿಗೆಯ ಸೀಳಿ ನರಕಕ್ಕೆ ಇಳಿಸಿದರೂ
ನೆನದೇವ ಕನ್ನಡದ ಹಿರಿಮೆ

                      |ನೆನದೇವ ಕನ್ನಡದ|


            ೪


ರನ್ನ ಜನ್ನರ ಚೆನ್ನ ನುಡಿಉಳಿಸಲು
ಎಲ್ಲರೂ ಒಂದುಗೂಡೋಣ
ನಮ್ಮಂತರಂಗದಿ ಕನ್ನಡಮ್ಮನ
ಪೂಜೆ ಮಾಡೋಣ
ಅನ್ಮವನು ನೀಡಿದ
ಕನ್ನಡಮ್ಮಗೆ ವಂದನೆಯ ಗೀತೆ ಹಾಡೋಣ
ತೊರೆದೇವು ಅನೇಕತೆ ಹೊಂದೋಣ ಏಕತೆ
ನಮ್ಮ ನುಡಿಗೆ ಒಗ್ಗೂಡೋಣ
ಅಂತರಂಗದ ನುಡಿಗೆ ಸಂತಸದಿ ನಮಿಸಿ
ನೆನದೇವ ಕನ್ನಡದ ಹಿರಿಮೆ

                                 |ನೆನದೇವ ಕನ್ನಡದ|


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*






No comments: