30 July 2018

ಮಿತಿ ಮೀರಿದ ಬಳಕೆ ದಿನ* (Earth over shoot day ) ಆಗಸ್ಟ್ 1 ಲೇಖನ

                         *ಮಿತಿ ಮೀರಿದ ಬಳಕೆ ದಿನ*
(Earth over shoot day )
ಆಗಸ್ಟ್ 1

ಏನೆಂದು ನಾ ಹೇಳಲಿ ...ಮಾನವನಾಸೆಗೆ ಕೊನೆ ಎಲ್ಲಿ‌.... ಎಂಬ ಅಣ್ಣಾವ್ರ ಹಾಡು  ಇಂದಿಗೂ ಎಂದಿಗೂ ಪ್ರಸ್ತುತ .ಆಸೆಯೇ ದುಃಖದ ಮೂಲ ಎಂದು ಬುದ್ದನಾದಿಯಾಗಿ ಹಲವು ಮಹಾಷಯರು ಪ್ರತಿಪಾದಿಸಿದರೂ ನಾವಿರುವುದೇ ಈಗೆ ಎಂಬ ಧೋರಣೆಯನ್ನು ಮುಂದುವರೆಸಿಕೊಂಡು ಬಂದ ಪರಿಣಾಮ ನಾವು ಈಗಾಗಲೇ ವೈಯಕ್ತಿಕ ವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಇದರ ಪರಿಣಾಮವಾಗಿ ನಮ್ಮ ಸಾಮಾಜಿಕ, ಆರ್ಥಿಕ, ಆರೋಗ್ಯ ದ ಮೇಲೆ ಹಲವಾರು ದುಷ್ಪರಿಣಾಮಗಳನ್ನು  ಅನುಭವಿಸುತ್ತಿದ್ದೇವೆ .
ಇದು ಇಲ್ಲಿಗೇ ನಿಂತಿಲ್ಲ  ನಾವು ಮಾಡಿರುವ ಅವಾಂತರಗಳಿಂದ  ಪರಿಸರ ಮತ್ತು ಜಗದ ಮೇಲೆ ಬೀರಿರುವ ಪರಿಣಾಮ ನೆನದರೆ ಹಗಲಿನಲ್ಲಿಯೂ ಬೆಚ್ಚಿ ಬೀಳುವಂತಾಗುತ್ತದೆ.
ಹಸಿರು ಮನೆ ಪರಿಣಾಮ ,ಎಲ್ ನಿನೊ ಲಾ ನಿನೊ ,ಜಾಗತಿಕ ತಾಪಮಾನ ,ಓಜೋನ್ ಪದರದ ಹಾನಿಯಾಗಿರುವುದು ಒಂದೇ ಎರಡೆ ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆದೀತು ,ಇವೆಲ್ಲವುಗಳ ಪರಿಣಾಮವಾಗಿ ಋತುವಿನಲ್ಲಿ ಅದಲು ಬದಲು ಅದಿಕ ತಾಪಮಾನ, ದಿನಕ್ಕೊಂದು ಹೊಸ ರೋಗಗಳ ಸೇರ್ಪಡೆ, ಅನ್ನಹಾರಕ್ಕೆ ಹಾಹಾಕಾರ ,ಪ್ರಾಣಿ ಮಾನವ ಸಂಘರ್ಷ, ಮಾಲಿನ್ಯದಂತಹ ಅಪಸವ್ಯಯಗಳು ಮಾಮೂಲಾಗಿಬಿಟ್ಟಿವೆ .
ಇವೆಲ್ಲದರ ಪರಿಣಾಮವಾಗಿ ಈಗ ಬರಲಿರುವ ಆಗಸ್ಟ್‌ ಒಂದನ್ನು ನಾವು
Earth over shoot day   (ಮಿತಿ ಮೀರಿದ ಬಳಕೆ ದಿನ ) ಆಚರಿಸುತ್ತಿದ್ದೇವೆ  ಹಾಗಾದರೆ

 ಮಿತಿಮೀರಿದ ಬಳಕೆ ದಿನ ಎಂದರೇನು?

ಜಗತ್ತಿನ ಎಲ್ಲಾ ಜನರು ನಾವು ಬಳಸಲು ಯೋಗ್ಯವಾದ ನೈಸರ್ಗಿಕ ಸಂಪನ್ಮೂಲಗಳಾದ ಜಲ ,ವಾಯು,ಮುಂತಾದವುಗಳನ್ನು ನಾವು ಮಿತಿ ಮೀರಿ ಬಳಸಿದ್ದೇವೆ ಹೇಗೆಂದರೆ ಒಂದು ವರ್ಷದಲ್ಲಿ ನಾವು ಬಳಸ ಬೇಕಿದ್ದ ಸಂಪನ್ಮೂಲಗಳನ್ನು ಇದೇ ಜುಲೈ ತಿಂಗಳ ಮೂವತ್ತೊಂದನೆ ತಾರೀಖಿಗೆ ಮುಗಿಸಿದ್ದೇವೆ ! ಇದರ ನೆನಪಿಗೆ ಮತ್ತು ಮುಂದೆ ನಮ್ಮ ಜೀವನದ ದುಃಸ್ತಿತಿ ನೆನೆದು ಎಚ್ಚರಿಕೆಯಿಂದ  Earth over shoot day   (ಮಿತಿ ಮೀರಿದ ಬಳಕೆ ದಿನ )   ಆಚರಣೆ ಮಾಡುತ್ತಿದ್ದೇವೆ .

1970 ರಿಂದ ನಾವು ಇಂತಹ ಮಿತಿಮೀರಿದ ಸಂಪನ್ಮೂಲಗಳ ಬಳಕೆಯನ್ನು ಅಳತೆ ಮಾಡಲಾರಂಭಿಸಿದೆವು ಆ ವರ್ಷ ಒಂದು ದಿನ ಮೊದಲೇ ನಾವು ನಮ್ಮ ಸಂಪನ್ಮೂಲಗಳನ್ನು ಬಳಕೆ ಮಾಡಿದರೆ 1976 ರಲ್ಲಿ ನವಂಬರ್ ನಲ್ಲಿ ನಮ್ಮ ವರ್ಷದ ಸಂಪನ್ಮೂಲಗಳನ್ನು ಬರಿದು ಮಾಡಿದೆವು. 1990 ರಲ್ಲಿ ಸೆಪ್ಟೆಂಬರ್ ಮೂವತ್ತಕ್ಕೆ ನಮ್ಮ ಸಂಪನ್ಮೂಲಗಳನ್ನು ದೋಚಿದೆವು  ಕಳೆದ ವರ್ಷ 2018 ರಲ್ಲಿ ಮೂರಕ್ಕೆ ನಮ್ಮ ಸಂಪನ್ಮೂಲಗಳನ್ನು ಮುಗಿಸಿದೆವು .ಈ ವರ್ಷ ಮೂರು ದಿನ ಮೊದಲೇ ನಮ್ಮ ಸಂಪನ್ಮೂಲಗಳನ್ನು ಬರಿದು ಮಾಡಿ ಆಗಸ್ಟ್ ಒಂದರಂದು ಮಿತಿ ಮೀರಿದ ಬಳಕೆ ದಿನ ಆಚರಣೆ ಮಾಡುವ ದುಃಸ್ತಿತಿ ಬಂದೊದಗಿದೆ .
ನಾವು ಈಗೆ ಪ್ರಾಕೃತಿಕ ಸಂಪನ್ಮೂಲಗಳನ್ನು ಮಿತಿ ಮೀರಿ ಬಳಕೆ ಮಾಡಿದರೆ ಮುಂದಿನ ವರ್ಷಗಳಲ್ಲಿ ಎರಡು ಮೂರು ತಿಂಗಳಲ್ಲಿ ನಮ್ಮ ಸಂಪನ್ಮೂಲಗಳನ್ನು ಮುಗಿಸಿ ಮುಂದಿನ ಪೀಳಿಗೆಯ ಸಂಪನ್ಮೂಲಗಳನ್ನು ಬರಿದು ಮಾಡುವ ಬಕಾಸುರರಾಗುವುದರಲ್ಲಿ ಸಂದೇಹವಿಲ್ಲ .

ಈಗಲೂ ಕಾಲ ಮಿಂಚಿಲ್ಲ ನಮ್ಮಂತೆ ಇತರೆ ಪ್ರಾಣಿ ಪಕ್ಷಿ ಗಳಿಗೂ ಜೀವಿಸಲು ಅವಕಾಶ ನೀಡಬೇಕು ಬದುಕು ಬದುಕಲು ಬಿಡು ಎಂಬ ನಿಯಮ ಪಾಲಿಸಬೇಕು  ನಾವು ವಿವೇಚನೆಯಿಂದ ನಮಗೆ ಲಬ್ಯವಿರುವ ಸಂಪನ್ಮೂಲಗಳನ್ನು ಬಳಕೆ ಮಾಡಿ ಸುಸ್ಥಿರ ಅಭಿವೃದ್ಧಿ ಮಾಡುವ ಅಗತ್ಯವಿದೆ ಇಲ್ಲವಾದರೆ ನಮ್ಮ ಭಯಾನಕ  ಅಂತ್ಯಕೆ  ನಾವೇ ಮುನ್ನುಡಿ ಬರೆದಂತಾಗುತ್ತದೆ  ಯೋಚಿಸಿ ಯೋಜಿಸಿ  ಜೀವಿಸೋಣ  ಮಹಾತ್ಮ ಗಾಂಧೀಜಿ ಯವರು ಹೇಳಿದಂತೆ "ಪ್ರಕೃತಿ ಇರುವುದು ನಮ್ಮ ಆಸೆ ಈಡೇರಿಲು ಮಾತ್ರ ಆದರೆ ದುರಾಸೆಯನ್ನಲ್ಲ " ಎಂಬುದನ್ನು ನಾವು ಮರೆಯಬಾರದು.

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

No comments: