ಭಾಗ ೪
ಸಂಜೆ ಗುರುಸಿದ್ದನಿಗೆ ಎತ್ತು ಎಮ್ಮೆಗಳಿಗೆ ಹುಲ್ಲು ತರಲು ಸಹಾಯ ಮಾಡಲು ರೊಪ್ಪಕ್ಕೆ ಹೋಗಿ ಬರುವಾಗ ಸತೀಶ ಯಾಕೊ ಇಂದು ಲವಲವಿಕೆ ಇಲ್ಲ ಎನೋ ಯೋಚನೆ ಮಾಡುತ್ತಿರುವುದನ್ನು ಗುರುಸಿದ್ದ ಗಮನಿಸಿದರೂ ಕೇಳಲಿಲ್ಲ .ರೊಪ್ಪದಿಂದ ಬಂದು ಉದ್ದವಿರುವ ಜೋಳದ ಸಪ್ಪೆಯನ್ನು ಒಂದು ಅಡಿಯಷ್ಟು ತುಂಡು ಮಾಡಲು ಮೊದಲೇ ಗೋಡೆಗೆ ಒಂದು ಕತ್ತರಿಯನ್ನು ಅಳವಡಿಸಿತ್ತು. ಅದರಲ್ಲಿ ಸತೀಶ ಸಪ್ಪೆಯನ್ನು ಇಟ್ಟರೆ ಗುರುಸಿದ್ದ ಮೇಲಿಂದ ಒತ್ತಿದರೆ ಕಟರ್ ಎಂಬ ಸದ್ದಿನೊಂದಿಗೆ ತುಂಡಾದ ಸಪ್ಪೆ ಕೆಳಗೆ ಬೀಳುತ್ತಿತ್ತು ಈಗೆ ಸಪ್ಪೆ ತುಂಡು ಮಾಡಿ ದನಗಳಿಗೆ ಹಾಕಲು ಗುರುಸಿದ್ದನಿಗೆ ಹೇಳಿ ಕೈಕಾಲು ಮುಖ ತೊಳೆದುಕೊಂಡು ದೇವರಿಗೆ ಕೈಮುಗಿದು ಎಂದಿನಂತೆ ಓದಲು ಕುಳಿತ .ಇಂಗ್ಲೀಷ್ ಪುಸ್ತಕ ತೆಗೆದು ಹೋಮ್ ವರ್ಕ್ ಬರೆಯಲು ಶುರುಮಾಡಿದರೆ ಪುಸ್ತಕದಲ್ಲಿ ಸುಜಾತಾಳ ನಗು ಮುಖ ಒಮ್ಮೆ,ಚಪ್ಪಾಳೆ ಹೊಡೆಯುವ ಮುಖ ಒಮ್ಮೆ ಕಂಡು ಅಚ್ಚರಿ ಪಟ್ಟ.ಆಕಡೆ ಈ ಕಡೆ ನೋಡಿದ ಯಾರೂ ಇಲ್ಲ .ಕಣ್ಣನ್ನು ಉಜ್ಜಿಕೊಂಡು ಮತ್ತೆ ಪುಸ್ತಕ ತೆಗೆದರೆ ಅದೇ ಮುಖ , ಓದಲು ಮನಸ್ಸಾಗುತ್ತಿಲ್ಲ ,ಎದ್ದು ಫಿಲಿಪ್ಸ್ ರೇಡಿಯೋ ಆನ್ ಮಾಡಿದ ಆಕಾಶವಾಣಿ ಪ್ರದೇಶ ಸಮಾಚಾರ ಓದುತ್ತಿರುವವರು ಬಸಪ್ಪ ಮಾದರ್..... ಎಂದು ಮುಂದುವರೆಯಿತು. " ಏ ಓದೋದು ಬಿಟ್ಟು ಅದೇನು ರೇಡಿಯೋ ಹಾಕಿದಿಯೊ ಆಪ್ ಮಾಡಿ ಓದೋ ಪರೀಕ್ಷೆ ಹತ್ತಿರ ಬರ್ತಾ ಐತೆ ಈ ವರ್ಸ ಎಸ್ಸೆಸ್ಸೆಲ್ಸಿ ನೀನು ಪ್ರಜ್ಞೆ ಇಲ್ವ " ಎಂದು ಘರ್ಜಿಸಿದರು ಮುಕುಂದಯ್ಯ. ರೇಡಿಯೋ ಆಪ್ ಮಾಡಿ ಪುಸ್ತಕ ಹಿಡಿದರೆ ಮತ್ತದೇ ಪಟ. ಒಮ್ಮೆ ಹೋಗಿ ಸುಜಾತಳ ನೋಡಿ ಬರಲೆ ಅವಳ ಮನೆಯೇನು ದೂರವಿಲ್ಲ ಮುಕುಂದಯ್ಯನ ಮನೆಯಿಂದ ಆರನೇ ಮನೆ ,ಮನೆಗೆ ಹೋದರೆ ಅವರಪ್ಪ ಬೀರಪ್ಪ ಮೇಸ್ಟ್ರು ಯಾಕೆ ಬಂದೆ ಎಂದರೆ ಏನು ಹೇಳುವುದು ? ಬೇಡ ಹೋಗುವುದು ಬೇಡ ಎಂದು ತೀರ್ಮಾನಕ್ಕೆ ಬಂದು ಕುಳಿತು ಬರೆಯಲು ಬೇರೆ ಪುಸ್ತಕ ತೆಗೆದ ,ಅಷ್ಟಕ್ಕೂ ಸುಜಾತ ಕಂಡರೆ ನನಗೇಕೆ ಈ ರೀತಿ ಆಸೆ? ಅದೇ ಕ್ಲಾಸಲ್ಲ ಅವಳಿಗಿಂತಲೂ ಬೆಳ್ಳಗಿನ ಸಾವಿತ್ರಿ ,ಅವಳಿಗಿಂತ ಸುಂದರವಾದ ರಾಧಾ ,ಮಾಲಾಶ್ರೀ ಎಂದು ಅವನ ಗೆಳೆಯರು ಕರೆವ ರೂಪ ಇದ್ದರೂ ಇವಳೇಕೆ ಈಗೆ ಕಾಡುವಳು ?ಅವಳ ನಗೆಯಲೊಂದು ಕಾಂತಿಇದೆ ಬಣ್ಣ ಎಣ್ಣೆಗೆಂಪು ಆದರೂ ನಕ್ಕರೆ ಮನೋಲಿಸಾ, ಮೂಗು ಗಿಣಿಮೂಗು ಆದರೂ ಆಕರ್ಷಕ, ಬಟ್ಟಲುಗಣ್ಣುಗಳಲ್ಲಿ ಏನೊ ಮಾತನಾಡುವ ಶಕ್ತಿ, ದಾಳಿಂಬೆಯಂತೆ ಜೋಡಿಸಿರುವ ಅವಳ ಹಲ್ಲುಗಳು ನಕ್ಕಾಗ ಇನ್ನೂ ಹೊಡೆಯುತ್ತವೆ ಯಾವ ಹಲ್ಲು ಪುಡಿ ಹಾಕಿ ಹಲ್ಲುಜ್ಜುವಳೋ......? "ಏ ಊಟಕ್ಕೆ ಬಾರೋ" ಎಂದು ತಿಮ್ಮಕ್ಕ ಕರೆದಾಗ ರಾತ್ರಿ ಎಂಟು ಮುಕ್ಕಾಲು ಮುಕುಂದಯ್ಯ ಎದ್ದು ಬಂದು ಯುವರಂಜನಿಯಲ್ಲಿ ಚಿತ್ರ ಗೀತೆ ಬರಬಹುದೆಂದು ರೇಡಿಯೋ ಹಾಕಿದರು.
"ಪ್ರೇಮ ಬರಹ ಕೋತಿ ತರಹ....... " ಎಂದು ಹಾಡು ಬರುತ್ತಿತ್ತು. ಊಟ ಮುಗಿಸಿ ದನಗಳಿಗೆ ಹುಲ್ಲು ಹಾಕಲು ಗುರುಸಿದ್ದನಿಗೆ ಸಹಾಯ ಮಾಡಿ .ಬಂದು ಪುಸ್ತಕ ಹಿಡಿದರೆ ಅದೇ ಕಥೆ.
"ಅಜ್ಜಿಗೆ ತಡಿ ಹಾಸಿ ಕೊಡೋ ಮನಿಕ್ಕಳ್ಳಿ" ಎಂದು ಮುಕುಂದಯ್ಯ ಹೇಳಿದಾಗ ತಡಿ ತಂದು ಮನೆಯ ಅಂಗಳದಲ್ಲಿ ಸಾಲಾಗಿ ಹಾಸಿದ ಫೆಬ್ರವರಿ ತಿಂಗಳಿಂದ ಮಳೆಗಾಲ ಆರಂಭವಾಗುವ ವರೆಗೆ ಮನೆಯವರೆಲ್ಲ ಅಂಗಳದಲ್ಲೇ ಮಲಗುವ ರೂಢಿ ತಿಮ್ಮಕ್ಕ ಮತ್ತು ಮುರಾರಿ ಇಬ್ಬರ ಬಿಟ್ಟು. ಜಂತೆ ಮನೆ ಕಿಟಕಿಗಳು ಕಡಿಮೆ ಇರುವ ಮನೆಯಲ್ಲಿ ಸೆಕೆಯಲ್ಲಿ ಅವರಿಗೂ ಮಲಗಲು ಇಷ್ಟವಿರಲಿಲ್ಲ ಆದರೂ ವಿಧಿ ಇಲ್ಲ ಕೆಲವೊಮ್ಮೆ ಸೆಕೆ ಹೆಚ್ಚಾಗಿ ರಾತ್ರಿ ಒಂದು ಗಂಟೆಗೋ ಎರಡು ಗಂಟೆಗೋ ಅವರು ಬಂದು ಅಂಗಳದಲ್ಲಿ ಮಲಗುತ್ತಿದ್ದರು. ಅಂದು ರಾತ್ರಿ ಅಂಗಾತ ಮಲಗಿ ಮಲಗಿ ಬಲವಂತವಾಗಿ ಕಣ್ಣು ಮುಚ್ಚಿದರೂ ನಿದ್ದೆ ಹತ್ತದೆ ನಕ್ಷತ್ರಗಳಲ್ಲೂ ಸುಜಾತ ಕಾಣುತ್ತಿದ್ದಳು. ಸತೀಶ ಅಂದು ಕೊಂಡ ಆ ಒಂದು ನಕ್ಷತ್ರ ನನಗೆ ಸಿಗುವುದೆ?
ಮೊದಲ ಬಾರಿಗೆ ಹದಿನೈದು ವರ್ಷದಲ್ಲೇ ನಿದ್ರೆ ಇಲ್ಲದ ರಾತ್ರಿ ಕಳೆದು ಬೆಳಿಗ್ಗೆ ಎದ್ದು ಎಲ್ಲಾ ತಡಿಗಳು ದುಪ್ಪಡಿಗಳನ್ನು ಒಳಗಿಟ್ಟು ಗುರುಸಿದ್ದನಿಗೆ ಸಗಣಿ ಬಾಸಲು ಸಹಾಯ ಮಾಡಿ ,ತೆಂಗಿನ ಗರಿಯ ಪರಕೆಯಲ್ಲಿ ದನದ ಅಕ್ಕೆಯನ್ನು ಗುಡಿಸಿ ,ಮುಖ ತೊಳೆದು ಕಾಪಿ ಕುಡಿದು ಯಥಾ ಪ್ರಕಾರ ಓದಲು ಕುಳಿತರೆ ಅದೇ ಸುಜಾತಳ ಮುಖ ಹಾಗೂ ಈಗೂ ಒಂಭತ್ತೂವರೆ ಯಾಯಿತು ರಾಗಿ ಮುದ್ದೆ ಉಂಡು ಗೋಡೆಗೆ ತಗುಲಿ ಹಾಕಿದ್ದ ಕನ್ನಡಿ ಬಳಿ ಹೋದ ಎತ್ತರವಿದ್ದ ಕನ್ನಡಿಯಲ್ಲಿ ಅವನ ಮುಖ ಕಾಣುತ್ತಿರಲಿಲ್ಲ, ಎರಡು ದಿಂಬು ತಂದು ಅವುಗಳ ಮೇಲೆ ನಿಂತ ಈಗ ಸ್ವಲ್ಪ ಮುಖ ಕಾಣುತ್ತಿತ್ತು, ಎಡಗಡೆಯ ಎರಡು ಬೆರಳಲ್ಲಿ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಸ್ಟೈಲ್ ಆಗಿ ಉದ್ದನೆಯ ಕೂದಲಿಗೆ ಬಳಿದುಕೊಂಡ ಬಲಗೈ ಎಡಗೈ ಹೋದಂತೆ ಹಿಂಬಾಲಿಸುತ್ತಿತ್ತು . ಎರಡು ಮೂರು ರೀತಿ ತಲೆಬಾಚಿಕೊಂಡು ನೋಡಿ ಕೊನೆಗೆ ಮೊದಲಿದ್ದ ರೀತಿಯಲ್ಲಿ ಬಾಚಿಕೊಂಡು ಕನ್ನಡಿಯಲ್ಲಿ ಮುಖ ನೋಡಿಕೊಂಡು ಚೀಲದಲ್ಲಿ ಪುಸ್ತಕ ಜೋಡಿಸುವಾಗ ರೇಡಿಯೋದಲ್ಲಿ ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ..... ಎಂಬ ಹಾಡು ಬರುತ್ತಿತ್ತು
"ಸ್ಕೂಲ್ ಗೆ ಹೋಗಿ ಬತ್ತೀನಿ ಅಕ್ಕ "ಎಂದು ತಿಮ್ಮಕ್ಕನಿಗೆ ಹೇಳಿ ಮನೆ ಬಿಟ್ಟವನು ನೋಡಿಯೂ ನೋಡದವನಂತೆ ಬೀರಪ್ಪ ಮೇಷ್ಟ್ರು ಮನೆ ಕಡೆ ನೋಡಿದ ಸುಜಾತ ಕಾಣಲಿಲ್ಲ. ಶಾಲೆಗೆ ಹೋಗಿರಬಹುದೆಂದು ಖಾತ್ರಿ ಪಡಿಸಿಕೊಂಡು ಹೆಜ್ಜೆಗಳನ್ನು ತುಸು ಜೋರಾಗಿಯೇ ಹಾಕಿದ "ಏ ಇರಲೇ ಸತೀಶ ಎನ್ ಇವತ್ ಇಷ್ಟು ಜೋರಾಗಿ ಹೋಗತಾ ಇದಿಯ ? ಎಂದು ಚಿದಾನಂದ ಕೂಗಿದ ಇಬ್ಬರೂ ನಡೆದು ಶಾಲೆ ಕಡೆ ನಡೆಯುವಾಗ ಚಿದಾನಂದ ಕೇಳೇ ಬಿಟ್ಟ "ಯಾಕೋ ಕಣ್ಣು ಹಂಗೆ ಕೆಂಪುಗವೆ ರಾತ್ರಿ ನಿದ್ದೆ ಮಾಡಲಿಲ್ಲೇನೋ ?ಎಂದು ಬಿಟ್ಟ ಇವನಿಗೆ ವಿಷ್ಯ ಹೇಳೋದಾ ಬ್ಯಾಡವೋ ಎಂದು ಎರಡು ಬಾರಿ ಯೋಚಿಸಿ ಇವನು ಬಾಯಿ ಬಿ ಬಿ ಸಿ ಇದ್ದ ಹಾಗೆ ಊರೆಲ್ಲ ಸಾರ್ತಾನೆ ಬೇಡ ಎಂದು " ರಾತ್ರಿ ಕಣ್ಣಾಕೆ ಮಣ್ಣು ಬಿದ್ದಿತ್ತು ಅಂದ " ಶಾಲೆ ಹತ್ತಿರ ಬಂದಂತೆಲ್ಲ ತನಗರಿವಿಲ್ಲದ ಹೃದಯ ಜೋರಾಗಿ ಬಡಿದುಕೊಳ್ಳುವುದನ್ನು ಗಮನಿಸಿದ ಸತೀಶ ಇದು ಮೊದಲ ಬಾರಿ ಹೀಗಾಗುತ್ತಿದೆ ಎಂದು ಗುರುತಿಸಿದ ಸತೀಶ. ಸ್ಕೂಲ್ ಪ್ರೇಯರ್ನಲ್ಲಿ ಸುಜಾತಳ ಮುಖ ಕಂಡಾಗ ಅವನಿಗರಿವಿಲ್ಲದೆ ಹೃದಯದ ಬಡಿತ ಸಾಧಾರಣವಾಯಿತು
ಮಹೇಶ್ ಸತೀಶನನ್ನು ಒಮ್ಮೆ ಸುಜಾತಳ ಒಮ್ಮೆ ನೋಡತೊಡಗಿದ ಇದು ಮುಂದೆ ಮಹೇಶನ ಮಹಾಸಂಚಿಗೆ ಮುನ್ನುಡಿ ಆಗಬಹುದು ಎಂದು ಸ್ವತಃ ಮಹೇಶನಿಗೇ ಗೊತ್ತಿರಲಿಲ್ಲ.

ಮುಂದುವರೆಯುವುದು....
ಸಿ ಜಿ ವೆಂಕಟೇಶ್ವರ
.
No comments:
Post a Comment