ಸನ್ಮಾರ್ಗ ಭಾಗ ೫
ರಸ್ತೆ ಅಗಲೀಕರಣ
ಕರ್ನಾಟಕ ಸರ್ಕಾರ ಎಂದು ಮುಂದೆ ಕಮಾನು ಆಕಾರದ ಬಿಲ್ಲೆ ಅದರ ಕೆಳಗೆ ತಹಶಿಲ್ದಾರರು ಮತ್ತು ತಾಲೂಕು ದಂಡಾದಿಕಾರಿಗಳು ಎಂಬ ಫಲಕ ಇರುವ ನೀಲಿ ಬಣ್ಣದ ಜೀಪು ನಿಧಾನವಾಗಿ ಬಂದು ನಿಂತಿತು. ರಾಜ್ಯ ಹೆದ್ದಾರಿ ಆದ್ದರಿಂದ ಆ ಊರಿನಲ್ಲಿ ದಿನವೂ ಅಂತಹ ನೂರಾರು ಜೀಪ್, ವ್ಯಾನ್ ,ಬಸ್ಸು,ಲಾರಿ ಬೈಕ್ ಓಡಾಡುವುದನ್ನು ನೋಡಿದ್ದ ಆ ಊರಿನವರಿಗೆ ಆ ನೀಲಿ ಸರ್ಕಾರದ ಜೀಪ್ ಅಂತಹ ಕುತೂಹಲ ಇರಲಿಲ್ಲ .
ಜೀಪಿನಿಂದ ಇಳಿದ ವ್ಯಕ್ತಿ ವಯಸ್ಸಿನಲ್ಲಿ ನಲವತ್ತೈದು ಐವತ್ತರ ಹಾಸುಪಾಸು ಇರಬೇಕು, ಲಿಬರ್ಟಿ ಕಪ್ಪು ಬಣ್ಣದ ಶೂ ಧರಿಸಿದ್ದರು, ತುಸು ದಪ್ಪವೇ ಎನ್ನಬಹುದಾದ ಸೋಡಾಗ್ಲಾಸ್ ಧರಿಸಿದ್ದರು, ಅರ್ಧದಷ್ಟು ಕೂದಲು ಬಿಳಿಯಾಗಿದ್ದು ಇನ್ನರ್ಧ ಹೇರ್ಡೈ ಮಾಡಿರುವುದನ್ನು ಗುರುತಿಸಬಹುದಾಗಿತ್ತು, ಬಲವಂತಕ್ಕೆ ಅಂಗಿಯನ್ನು ಪ್ಯಾಂಟ್ ನ ಹೊಳಗೆ ಸೇರಿಸಿ ಇನ್ಷರ್ಟ್ ಮಾಡಿದ್ದರೂ ಹೊಟ್ಟೆಗೆ ಕಟ್ಟಿದ ಬೆಲ್ಟ್ ಲೆಕ್ಕಿಸದೇ ಮುಂದೆ ಬಂದು ನಿಂತಿತ್ತು. ಎರಡು ಹೆಜ್ಜೆ ನಡೆದಾಗ ಅವರು ದೇಹದ ಭಾರದ ಪರಿಣಾಮವಾಗಿ ನಡೆಯಲು ಏದುಸಿರು ಬಿಡುವುದು ಎಲ್ಲರಿಗೂ ಕಾಣಿಸುತ್ತಿತ್ತು .
"ರೀ ರಮೇಶ್ ರೋಡ್ ಮಧ್ಯದಿಂದ ಅಳತೆ ಮಾಡಿ ಲಾಸ್ಟ್ ಟೈಂ ಮಾಡಿದ ಹಾಗೆ ತಪ್ಪು ಮಾಡಿದರೆ ಸಸ್ಪೆಂಡ್ ಆಗ್ತಿಯಾ" ಎಂದು ಆ ಅಧಿಕಾರಿ ಹೇಳಿದ ಮೇಲೆ ಆ ಊರಿನ ಜನರು ಕ್ರಮೇಣವಾಗಿ ಜೀಪಿನ ಹತ್ತಿರ ಬಂದರು . ಅವರ ಕೊನೆಯ ಮಾತು" ಲಾಸ್ಟ್ ಟೈಂ ಮಾಡಿದ ಹಾಗೆ ಮಾಡಿದರೆ ಸಸ್ಪೆಂಡ್ ಆಗ್ತಿರಾ" ಎಂಬುದನ್ನು ಕೇಳಿದ ಫಾಲಾಕ್ಷ ನಿನ್ನೆ ರಾತ್ರಿ ತೋಪಿನಲ್ಲಿರುವ ಕಂಬಣ್ಣನ ಹೆಂಡದ ಅಂಗಡಿಯಲ್ಲಿ ಹೆಚ್ಚು ಕೆಟ್ಟ ನಾತದಲ್ಲಿ ತುಸು ನಶೆಯಲ್ಲಿ ಹೋಟೆಲ್ ನಿಂಗಣ್ಣ ಆಡಿದ ಮಾತುಗಳು ತಟ್ಟನೆ ನೆನಪಾದವು.ಹೋಟೆಲ್ ನಿಂಗಣ್ಣ ಎಂದೇ ಚಿರಪರಿಚಿತ ನಿಂಗಣ್ಣ ಬ್ರಹ್ಮರಾಯಪ್ಪ ಅಲಿಯಾಸ್ ಬ್ರಮ್ಮಿಗೆ ವಿರುದ್ದವಾಗಿ ಆರಂಬಿಸಿದ ಮೇಲೆ ಅವರಿಗೆ ಹೋಟೆಲ್ ನಿಂಗಣ್ಣ ಎಂಬ ಹೆಸರು ಖಾಯಂ ಆಯಿತು.

ಬ್ರಮ್ಮಿ ಇಡ್ಲಿ,ಮೆಣಸಿನಕಾಯಿ ಬೋಂಡಾ,ಮಂಡಕ್ಕಿ ಉಸುಲಿ ಟೀ ಮುಂತಾದವುಗಳನ್ನು ಶುಚಿ ರುಚಿಯಾಗಿ ಮಾಡಿ ಹೆಚ್ಚೆನ್ನದ ಬೆಲೆಗೆ ಕೊಟ್ಟರೂ ಕ್ರಮೇಣವಾಗಿ ಗುಡಿಸಲಿನಿಂದ ಸಿಮೆಂಟ್ ಶೀಟ್ಮನೆ ನಂತರ ಅರ್ಸಿಸಿ ಮನೆ ಕಟ್ಟಿಸಿದ್ದು ಎಂತವರಿಗೂ ಮಾತ್ಸರ್ಯ ಹುಟ್ಟಿಸಿತ್ತು . ನಿಂಗಪ್ಪನಿಗೆ ಸ್ವಲ್ಪ ಜಾಸ್ತಿಯೇ ಹೊಟ್ಟೆ ಉರಿದು ನಾನೂ ಒಂದು ಹೋಟೆಲ್ ಮಾಡುವೆ ಎಂದು ಸರಿಯಾಗಿ ಬ್ರಮ್ಮಿ ಹೋಟೆಲ್ ಎದುರಿಗೆ ಪಶ್ಚಿಮಾಭಿಮುಖವಾಗಿ ರಸ್ತೆಗೆ ಸ್ವಲ್ಪ ಹತ್ತಿರಕ್ಕೆ ಸಿಮೆಂಟ್ ಶೀಟ್ ನ ಹೋಟೆಲ್ ಆರಂಭಮಾಡಿಯೇ ಬಿಟ್ಟಿದ್ದ .ತಿಂಡಿಯ ರುಚಿ ಕೊಂಚ ಕಡಿಮೆಯಿದ್ದರೂ ಸಾಲ ಕೊಡುವುದರಿಂದ ಬ್ರಮ್ಮಿಯ ಹೋಟೆಲ್ನಷ್ಟಲ್ಲದಿದ್ದರೂ ಸುಮಾರಾಗಿ ವ್ಯಾಪಾರವಾಗುತ್ತಿತ್ತು .ತಿಂಡಿ ತಿಂದ ನಂತರ ನಿಂಗಪ್ಪ ಸಾಲದ ಹಣ ಕೇಳಿದದರೆ , ಗಿರಾಕಿಗಳು ಪುನಃ ಬ್ರಮ್ಮಿಯ ಹೊಟೆಲ್ನಲ್ಲಿ ಆಸೀನರಾಗುತ್ತಿದ್ದರು .ಇದರಿಂದಾಗಿ ನಿಂಗಪ್ಪ ಹೊಟೆಲ್ ಇಟ್ಟು ತಲೆ ಮೇಲೆ ಟವಲ್ ಹಾಕಿಕೊಳ್ಳುವ ಕಾಲ ದೂರವಿಲ್ಲ ಎಂದು ಅವರಿವರು ಮಾತಾನಾಡುವುದು ನಿಂಗಪ್ಪನ ಕಿವಿಗೂ ಬಿದ್ದು ವ್ಯಾಘ್ರನಾಗಿ ಹೊಟೆಲ್ ನಲ್ಲಿ ದುಡಿದು ಹೇಗೆ ಸಂಪಾದನೆ ಮಾಡುತ್ತೇನೆ ನೋಡುತ್ತಿರಿ ಎಂದು ಜನರಿಗೆ ಚಾಲೆಂಜ್ ಹಾಕಿದ್ದ.
ಈಗೆ ಚಾಲೆಂಜ್ ಮಾಡಿ ಮೂರೆ ದಿನಕ್ಕೆ ರಸ್ತೆಯ ಅಗಲ ಮಾಡುವವರು ಬಂದು ಅಳತೆ ಮಾಡುವಾಗ ಶಂಕರಜ್ಜರ ಅಂಗಡಿ ಕಡೆಯಿಂದ ಅಳೆದು ನೋಡಿದಾಗ ರಸ್ತೆಗೆ ಹತ್ತಿರದ ಅಂಗಡಿ ಮತ್ತು ಹೋಟೆಲ್ ಕೆಲವು ಅರ್ಧ ಭಾಗ ಕೆಲವು ಪೂರಾ ಹೋಗುವವು ಎಂದು ಪುಕಾರಾಯಿತು. ಇದನ್ನು ಕೇಳಿದ ನಿಂಗಪ್ಪನಿಗೆ ಪುಕ ಪುಕ ಶುರುವಾಯಿತು. ಅಂದು ಅಳತೆಯ ಕಾರ್ಯನಡೆವ ಮಧ್ಯದಲ್ಲಿ ಟೇಪ್ ಹಿಡಿದು ಅಳತೆ ಮಾಡುವ ರಮೇಶ್ , ಒಮ್ಮೆ ಕಂಬಣ್ಣನ ಹೆಂಡದ ಅಂಗಡಿಗೆ ಹೋಗಿ ಬಂದಿದ್ದ ಗಮನಿಸಿದ ನಿಂಗಣ್ಣ, ಸಂಜೆ ರಮೇಶ್ ನನ್ನ ಕರೆದುಕೊಂಡು ಹೋಗಿ ತಾನೆ ಹಣ ಕೊಟ್ಟು ಚೆನ್ನಾಗಿ ಇಬ್ಬರೂ ಕುಡಿದು,ಮಧ್ಯ ಮಧ್ಯ ಬೋಟಿ ಮಾಂಸ ತಿನ್ನುತ್ತಾ ಪೀಠಿಕೆ ಶುರುಮಾಡಿದ ನಿಂಗಪ್ಪ .
ರಸ್ತೆಯ ಅಳತೆ ಮಾಡುವಾಗ ನಮ್ಮ ಹೋಟೆಲ್ ಕಡಿಮೆ ಹೋಗುವಂತೆ ಬ್ರಮ್ಮಿದು ಜಾಸ್ತಿ ಹೋಗುವಂತೆ ಅಳತೆ ಮಾಡಿದರೆ ದಿನವೂ ಹೆಂಡ ಜೊತೆಗೆ ಹಣ ಕೊಡುವುದಾಗಿ ಹೇಳಿದ, ಮೊದಲು ಆಗಲ್ಲ ಎನ್ನುತ್ತಿದ್ದ ರಮೇಶ್ ,ಹೆಂಡದ ಗುಡಿಸಲ ಹೊರಗೆ ಮಾದರ ಮಾದೇವ ಕುಡಿದು ಜೋರಾಗಿ ಕಿರುಚುತ್ತಿದ್ದ ಸದ್ದು ಕೇಳಿ ಒಳಗಿನಿಂದಲೇ ಏರಿದ ಧ್ವನಿಯಲ್ಲಿ "ಹೆ ಮುಚ್ಕೊಂಡ್ ಕುಡಿಯೋ ನನ್ ಮಗನೆ ಸೌಂಡ್ ಬಂದ್ರೆ ಜಾಡ್ಸಿ ಒದಿತಿನಿ" ಎಂದ ನಿಂಗಪ್ಪನ ಧ್ವನಿಗೆ ಮಾದೇವ ಸುಮ್ಮನಾದ . ಜೋರಾದ ನಿಂಗಪ್ಪನ ಧ್ವನಿ ನಿಧಾನವಾಗಿ ಏರಿದ ಹೆಂಡದ ನಶೆಯ ಪರಿಣಾಮ " ಆಯಿತು ಹಾಗೆ ಮಾಡ್ತೀನಿ " ಅಂದಿದ್ದ ರಮೇಶ. ನಿಂಗಪ್ಪ ರಮೇಶನ ಅಂಗಿಯ ಮೇಲಿನ ಜೇಬಿಗೆ ನೂರು ರೂಪಾಯಿ ತುರುಕಿದ.
ಕಳೆದ ಬಾರಿ ರಸ್ತೆಯ ಅಗಲೀಕರಣದ ಸಂಬಂಧ ಅಳೆಯುವಾಗ ಬ್ರಮ್ಮಿ ಹೋಟೆಲ್ ಜಾಸ್ತಿ ಹೋಗುವಂತೆ ರಸ್ತೆಗೆ ಹತ್ತಿರವಿರುವ ನಿಂಗಣ್ಣನ ಹೋಟೆಲ್ ಕಡಿಮೆ ಹೋಗುವ ವಿಚಾರದಲ್ಲಿ ಜನರಿಗೆ ಅನುಮಾನವಿದ್ದು ,ಮೇಲಾಧಿಕಾರಿಗಳಿಗೆ ದೂರು ಬಂದ ಪರಿಣಾಮವಾಗಿ ಇಂದು ಪುನಃ ಅಳೆಯಲು ಬಂದಿದ್ದಾರೆ. ಫಾಲಾಕ್ಷನಿಗೆ ನಿನ್ನೆ ರಾತ್ರಿ ನಶೆಯಲ್ಲಿ ನಿಂಗಪ್ಪ ಹೇಳಿದ ಎಲ್ಲಾ ಕುತಂತ್ರದ ಮಾತುಗಳು ಅಧಿಕಾರಿಗಳ ಎಚ್ಚರಿಕೆಯ ಮಾತಿಗೂ ತಾಳೆಯಾಯಿತು. ಅಧಿಕಾರಿಗಳು ಮುಂದೆ ನಿಂತು ಮೊದಲು ರಸ್ತೆ ಮಧ್ಯದಿಂದ ಬ್ರಮ್ಮಿ ಹೋಟೆಲ್ಗೆ ೧೫ ಅಡಿ ಟೇಪ್ ಹಿಡಿದಾಗ ಬ್ರಮ್ಮಿಹೋಟೆಲ್ ನಾಲ್ಕು ಅಡಿ ಹೊಡೆಯಲು ಮಾರ್ಕ್ ಮಾಡಿದರು. ಈಗ ಎದುರಿಗಿರುವ ನಿಂಗಪ್ಪನ ಹೋಟೆಲ್ ಸರದಿ ಟೇಪ್ ಹಿಡಿದಾಗ ನಿಂಗಪ್ಪನ ಹೋಟೆಲ್ ಹತ್ತು ಅಡಿ ಹೊಡೆಯಲು ಮಾರ್ಕ್ ಮಾಡಲಾಯಿತು.
"ನೋಡು ರಮೇಶ್ ಇದೇ ರೀತಿಯಲ್ಲಿ ಅಳತೆ ಮುಂದುವರೆಸು ನನಗೆ ಡಿ ಸಿ ಅಪೀಸ್ನಲ್ಲಿ ಮೀಟಿಂಗ್ ಇದೆ, ನಾನು ಹೊರಡುತ್ತೇನೆ , ಸಂಜೆ ರಿಪೋರ್ಟ್ ನನಗೆ ಕೊಡಬೇಕು" ಎಂದು ದಡೂತಿ ದೇಹ ಎಳೆದುಕೊಂಡು ಜೀಪಿನಲ್ಲಿ ಆಸಿನರಾದರು ಸಾಹೇಬರು. ಕೆಟ್ಟ ಸದ್ದಿನೊಂದಿಗೆ ಕಪ್ಪು ಹೊಗೆ ಉಗುಳುತ್ತಾ ಹರ್ತಿಕೋಟೆಯ ಕಡೆಗೆ ಜೀಪು ಹೊರಟಿತು.
ನಿಂಗಪ್ಪ ಒಳಗೊಳಗೆ ಕುದಿಯುತ್ತಿದ್ದ. ರಮೇಶನಿಗೆ ನಿಂಗಪ್ಪನನ್ನು ನೇರವಾಗಿ ನೋಡಲು ಒಳಗೊಳಗೆ ಏನೋ ಅಂಜಿಕೆ.
ನಿಂಗಪ್ಪ ಒಳಗೊಳಗೆ ಕುದಿಯುತ್ತಿದ್ದ. ರಮೇಶನಿಗೆ ನಿಂಗಪ್ಪನನ್ನು ನೇರವಾಗಿ ನೋಡಲು ಒಳಗೊಳಗೆ ಏನೋ ಅಂಜಿಕೆ.
ಅಳತೆ ಮಾಡುತ್ತಾ ಸತ್ಯಪ್ಪನವರ ಮನೆಯ ಹತ್ತಿರ ಬಂದು ಅಳತೆ ಮಾಡಿದಾಗ ಕೇವಲ ಐದು ಅಡಿ ಮನೆ ಉಳಿದು ಇಡೀ ಮನೆ ಒಡೆಯುವರು ಎಂಬ ಸುದ್ದಿ ತಿಳಿದು ಸತ್ಯಪ್ಪ ಎದೆಯೊಡೆದು ಬಾಯಿ ಬಡಿದು ಕೊಳ್ಳತ್ತಾ . " ಮನೇಲಿ ನಮ್ಮೆಂಗುಸ್ರು ಕಾಯಿಲೆ ಬಿದ್ದವ್ಳೆ. ನನಗೆ ಮೂರು ಜನ ಹೆಣ್ಣು ಮಕ್ಕಳು ಇತ್ತೀಚಿನ ಅಂಗಡಿ ವ್ಯಾಪಾರನೂ ಕಮ್ಮಿ ಈಗ ಮನೆನೂ ಹೋದರೆ ನಾನು ಎಲ್ಲಿಗೆ ಹೊಗ್ಲಿ ,ಎನ್ರಪ್ಪ? ಇಂತ ಅನ್ಯಾಯ ಯಾರಿಗೆ ಬೇಕಪ್ಪ? ರಸ್ತೆ ಅಗಲ ಇಷ್ಟೇ ಇರಲಿ ಬಿಡ್ರಿ" ಎಂದು ಕಣ್ಣಲ್ಲಿ ನೀರು ಹಾಕುತ್ತಿದ್ದರೆ ನೋಡುತ್ತಿದ್ದವರ ಕಣ್ಣಾಲಿಗಳು ಒದ್ದೆಯಾದವು. ಒಳಗಡೆ ಸತ್ಯಪ್ಪನ ಹೆಂಡತಿ ಜೋರಾಗಿ ಕೆಮ್ಮವ ಸದ್ದು ಹೊರಗಡೆ ಕೇಳುತ್ತಿತ್ತು, ಚಿಕ್ಕ ಮಗಳು ನೀರು ಕುಡಿ ಎಂದು ಅಮ್ಮನಿಗೆ ನೀರು ಕೊಟ್ಟಳು
ಮುಂದುವರೆಯುವುದು
ಸಿ ಜಿ ವೆಂಕಟೇಶ್ವರ
No comments:
Post a Comment