16 May 2020

ಸಿಹಿಜೀವಿಯ ಆರು ಹನಿಗಳು

ಸಿಹಿಜೀವಿಯ ಆರು  ಹನಿಗಳು

*೧*

*ಪಿತೃಪ್ರಧಾನ*


ಮನೆಯವರು
ಕೇಳಿದಾಲೆಲ್ಲ
ನಮ್ಮಪ್ಪ
ಮಾಡುತ್ತಲೇ
ಇರಬೇಕು
ಹಣದ ದಾನ|
ಯಾಕೆಂದರೆ
ನಮ್ಮ ಕುಟುಂಬ
ಪಿತೃಪ್ರಧಾನ||


*೨*

*ಸಮಾಧಾನ*

ಲಟ್ಟಣಿಗೆಯಲಿ
ಹೊಡೆಯಲಿ
ವಾಚಾಮಗೋಚರ
ಬೈಯಲಿ
ಗಂಡ ಪಾಲಿಸುವನು
ಸಮಾಧಾನ|
ಕಾರಣ
ಅವನ ಕುಟುಂಬ
ಮಾತೃಪ್ರದಾನ||

*೩*

*ಶಾಂತ*

ಅವರದು ಶಾಂತ
ಕುಟುಂಬ |
ಈಗಾಗುವ ಮೊದಲು
ಅವನಿಗೆ ಬಿದ್ದಿವೆ
ಲಟ್ಟಣಿಗೆ ಏಟುಗಳು
ತುಂಬಾ||


*೪*

*ನಾರಿ*

ಮದುವೆಯಾದಾಗ
ಅವಳೂ
ಬಳ್ಳಿಯಂತೆ
ಬಳುಕುವ ನಾರಿ
ಈಗೀಗ
ತೂಗುತ್ತಿದ್ದಾಳೆ ಬಾರಿ

*೫*

*ಸಮರಸ*

ಆ ಕುಟುಂಬದಲ್ಲಿ
ಇದೆ ಸಮರಸ|
ಏಕೆಂದರೆ
ಗಂಡ ಎದುರಾಡಲ್ಲ
ಅವಳು ದಿನವೂ
ಮಾಡಿ ಬಡಿಸಿದರೆ
ಅನ್ನ ರಸ||

*೬*

*ಕೈಯಲ್ಲಿದೆ*

ಮನೆಯ ದೊಡ್ಡಣ್ಣ
ಮುಂಜಾನೆ ಹೇಳಿದ
ನಮ್ಮ ಮನೆಯ ಘನತೆ
ಕಾಪಾಡುವುದು
ನಮ್ಮ ಕೈಯಲ್ಲಿದೆ|
ಸಂಜೆ ಮದ್ಯದ
ಬಾಟಲ್ ಅವನ
ಕೈಯಲ್ಲಿದೆ||


*ಸಿ ಜಿ ವೆಂಕಟೇಶ್ವರ*







No comments: