ಹೆದ್ದಾರಿ ಭಾಗ ,೨
ರಸ್ತೆಯ ಪಶ್ಚಿಮಾಭಿಮುಖವಾಗಿ ಇರುವ ಕಟ್ಟಡದ ಮೇಲೆ ಸರ್ಕಾರಿ ಪದವಿಪೂರ್ವ ಕಾಲೇಜು ಯರಬಳ್ಳಿ ಎಂಬ ದೊಡ್ಡದಾದ ಬೋರ್ಡ್ ರಸ್ತೆಗೆ ಕಾಣುತ್ತಿತ್ತು.ರಸ್ತೆಯಲ್ಲಿ ವಾಹನಗಳಲ್ಲಿ ಓಡಾಡುವ ಜನ ಪರವಾಗಿಲ್ಲ ಈ ಊರಲ್ಲು ಜೂನಿಯರ್ ಕಾಲೇಜಿದೆ ಎಂದು ಆಶ್ಚರ್ಯಕರ ಮತ್ತು ಮೆಚ್ಚುಗೆ ಮಾತನಾಡಿಕೊಳ್ಳುತ್ತಿದ್ದರು.
ಕಾಂಪೌಂಡ್ ಇಲ್ಲದ ವಿಶಾಲವಾದ ಶಾಲಾ ಆವರಣ ಪ್ರವೇಶಿಸಿದ ತರ್ಲೇ ಹುಡುಗರು ಒಬ್ಬರನ್ನು ಕಂಡೊಡನೆ ಇದ್ದಕ್ಕಿದ್ದಂತೆ ನಿಶ್ಯಬ್ದವಾಗಿ ಸಾಲಾಗಿ ಬಂದು ವೃತ್ತಾಕಾರವಾಗಿ ಕುಳಿತು ಶಾಲೆಯಲ್ಲಿ ನಿನ್ನೆ ಮಾತ್ರ ತೆಗೆದಿದ್ದ ಪುಸ್ತಕಗಳನ್ನು ಮನಸ್ಸಿಲ್ಲದಿದ್ರೂ ಅವರ ಭಯಕ್ಕೆ ಮನದಲ್ಲೇ ಶಪಿಸುತ್ತಾ , ಗೊಣಗುತ್ತಾ ತೆರೆದು ಓದುವ ನಾಟಕ ಶುರುಮಾಡಿದರು
ಯಾವನೆಲೇ ಅದು ಗೊನ ಗೊನ ಶಬ್ದ. ಮುಚ್ಕೊಂಡು ಹೋದ್ರೋ ಓದ್ರೋ ಅಂದಿತು ಕರ್ಕಶ ಸದ್ದು "ಮುಚ್ಚಿದರೆ ಓದಕಾಗಲ್ಲ ಸರ್" ಚಿದಾನಂದ್ ನ ಗುಂಪು ಸಣ್ಣಗೆ ನಕ್ಕಿತು. ಅವರಿಗದು ಕೇಳಿಸಲಿಲ್ಲ ಹುಡುಗರು ಬಚಾವ್.
ಶಾಲೆಯ ಶಿಸ್ತು ಕಾಪಾಡುವ ಗುತ್ತಿಗೆ ಪಡೆದವರಂತೆ ಆಗಾಗ ಕಿರುಚುವ, ತರಲೆಗಳ ಪಾಲಿನ ಸಿಂಹ ಸ್ವಪ್ನ , ಅನವಶ್ಯಕವಾಗಿ ಶಾಲೆಯಿಂದ ಮಕ್ಕಳು ಕಾಲಿಟ್ಟರೆ ಪೀಪೀ ಊದುವ ಪೀಟಿ ಮಾಸ್ಟರ್ ಕಾಡಪ್ಪ ಮಾತಷ್ಟೇ ಒರಟು ಮಕ್ಕಳ ಬಗ್ಗೆ ಕಾಳಜಿ ಅತಿ ಮತ್ತು ಒಳ್ಳೆಯ ಹೃದಯ ವ್ಯಕ್ತಿ ಮೊನ್ನೆ ರೂಪ ತಲೆ ಸುತ್ತಿ ಪ್ರಜ್ಞೆ ತಪ್ಪಿ ಬಿದ್ದಾಗ ಎಲ್ಲಾ ಶಿಕ್ಷಕರು ಬರೀ ನೋಡಿ ಕನಿಕರ ತೋರುತ್ತಿದ್ದಾಗ ಕಾಡಪ್ಪ ಸರ್ ತಮ್ಮ ಮಗಳಂತೆ ಶಾಲೆಯ ಪಕ್ಕವೇ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು ಆಗಿನಿಂದ ಮಕ್ಕಳಿಗೆ ಕಾಡಪ್ಪ ಮೇಷ್ಟ್ರು ಬಗ್ಗೆ ಸ್ವಲ್ಪ ಗೌರವ ಹೆಚ್ಚಾಯಿತು ಆದರೆ ಅವರು ಕಿರುಚುವ ಮತ್ತು ಹೊಡೆಯುವ ಗುಣ ನೋಡಿ ಚಿದಾನಂದ್ "ಯಾರೋ ಈಯಪ್ಪನಿಗೆ ಸರಿಯಾದ ಹೆಸರು ಇಟ್ಟವ್ರೆ ಇವರು ಕಾಡಪ್ಪನೂ ಹೌದು.ಕಾಟಪ್ಪನೂ ಹೌದು " ಏಯ್ ಸುಮ್ನೆ ಇರೋ ಈ ಕಡೆ ಬತ್ತಾರೆ ಸತೀಶ್ ಗಾಬರಿಯಿಂದ ಅಂದಾಗ ಎಲ್ಲರೂ ನಿಶ್ಯಬ್ದ. ಒಮ್ಮೆ ಪೊಲೀಸರಂತೆ ಎಲ್ಲರನ್ನೂ ನೋಡಿ ಮುಂದೆ ಹೋದರು ಕಾಡಪ್ಪ ಮೇಷ್ಟು.
ಶಾಲೆಯ ಬೆಲ್ ಕೇಳಿ ಮಕ್ಕಳು ಬೆಳಗಿನ ಪ್ರೆಯರ್ಗೆ ಸಾಲಾಗಿ ಹೊರಟರು.
ಹತ್ತನೆಯ ತರಗತಿಗೆ ಗಣಿತ ವಿಷಯದ
ಮೊದಲ ಅವಧಿ ಮುಗಿದು ಎರಡು ನಿಮಿಷವಾಗಿರಲಿಲ್ಲ ತರಗತಿಯಲ್ಲಿ ಮಕ್ಕಳ ಗಲಾಟೆ ತಾರಕಕ್ಕೇರಿ ರಸ್ತೆ ದಾಟಿ ಊರ ತಲುಪುವುದರಲ್ಲಿತ್ತು.ಇದ್ದಕ್ಕಿದ್ದಂತೆ ತರಗತಿ ಸ್ತಬ್ಧ ,ಕಿಟಕಿಯ ಬಳಿ ಯಾರೊ ಬಂದು ನಿಂತಂತಾಯಿತು.ಐವತ್ತಕ್ಕೂ ಹೆಚ್ಚಿನ ವಯಸ್ಸಿನ ಕನ್ನಡಕದಾರಿ ,ಮೀಸೆಇಲ್ಲ ,ಬಾಯ್ದೆಗೆದರೆ ಎರಡು ಹಲ್ಲು ಉದುರಿರುವುದು ಕಾಣಬಹುದು, ಅವರ ಕಂಡರೆ ಇಡೀ ಶಾಲೆಯಲ್ಲಿ ಮತ್ತು ಮಕ್ಕಳಿಗೆ ಏನೋ ಒಂದು ರೀತಿಯ ಭಯಮಿಶ್ರಿತ ಗೌರವ ಅವರೆ ಬಿ ಎಸ್ ಬಿ ಪೂರ್ಣ ಹೆಸರು ಬಷೀರ್ ಆದರೂ ಮಕ್ಕಳು ಬಿಎಸ್ ಬಿ ಎಂದೆ ಕರೆಯುತ್ತಿದ್ದರು. ತರಗತಿಯಲ್ಲಿ ಸೊಗಸಾದ ವಿಜ್ಞಾನ ಶಿಕ್ಷಕರು ಕಾಡಪ್ಪ ಮೇಷ್ಟ್ರು ತರಹ ಕಿರಚಾಟ, ಅರಚಾಟ, ಹೊಡೆಯುವುದು ಮಾಡದಿದ್ದರೂ ಅವರನ್ನು ಕಂಡರೆ ಮಕ್ಕಳಿಗೆ ಗೌರವ ಅವರ ಅತೀ ದೊಡ್ಡ ಬೈಗುಳ ಎಂದರೆ " ಎಂಗುಟ್ಟಿದ್ರೋ ನೀವು".
ತರಗತಿಯ ಪ್ರವೇಶಿಸಿ ಬಿಎಸ್ಬಿ ಮೇಷ್ಟ್ರು ಮಕ್ಕಳಿಗೆ ಎ ಪ್ಲಸ್ ಬಿ ಹೋಲ್ ಸ್ಸ್ಕ್ವೇರ್ ಸೂತ್ರ ಏನು? ಯಾರು ಹೇಳ್ತಿರಾ? ಎಂದಾಗ .ತರಗತಿಯಲ್ಲಿ ಮೌನ ಯಾರೂ ಬಾಯಿಬಿಡಲೇ ಇಲ್ಲ .ಇನ್ನೇನು ಬೈಯಲುಶುರು ಮಾಡಬೇಕು ಎಂದು ಕೊಂಡಾಗ ಒಬ್ಬ ಹುಡುಗ ಕೈ ಎತ್ತಿದ " ವೆರಿ ಗುಡ್ ಬಾರೋ ಸತೀಶ ಬೋರ್ಡ್ ಮೇಲೆ ಬರಿ" ಎಂದರು ಮೇಷ್ಟ್ರು. ಬೋರ್ಡ್ ಮೇಲೆ ಸೂತ್ರ ಬರೆದು ನಿಂತ ಸತೀಶನ ಕಂಡು ಹೀಗೆ ಓದಬೇಕು ಸುಮ್ಮನೆ ಗಲಾಟೆ ಮಾಡೋದಲ್ಲ ಎಂದು ಎಲ್ಲಾ ಮಕ್ಕಳಿಗೆ ಹೇಳುತ್ತಿರುವಾಗ ಹಿಂದಿ ಮೇಡಂ ಬಂದಿದ್ದ ನ್ನು ನೋಡಿ ತರಗತಿಯಿಂದ ಹೊರಬಂದರು.
ಶಿಕ್ಷಕರ ಕೊಠಡಿಯಲ್ಲಿ ಮತ್ತು ತರಗತಿಯಲ್ಲಿ ಸತೀಶನ ಗುಣ, ಓದುವ ರೀತಿಯ ಬಗ್ಗೆ ಸಕಾರಾತ್ಮಕವಾಗಿ ಚರ್ಚೆ ಆರಂಭವಾಗಿತ್ತು. ಯಾರು ಆ ಹುಡುಗ ಅಂದಾಗ ,ದೊಡ್ಡಪ್ಪಗಳ ಮನೆಯ ಹುಡುಗ ಪಡುವಲ ಸೀಮೆ ಹುಡುಗನಾದರೂ ಅವರ ಮಾವನ ಮನೆಯಲ್ಲಿ ಓದುತ್ತಿರುವ ಹುಡುಗ ಎಂದು ಅದೇ ಊರಿನ ಮೇಡಂ ಹೇಳಿದರು.
ಹಳ್ಳಿಯಲ್ಲಿ ಒಂದೆ ಹೆಸರಿನ ವ್ಯಕ್ತಿಗಳು ಬಹಳ ಇರುವಾಗ ಅವರ ಮನೆತನದ ಹೆಸರು ಸೇರಿಸಿ ವಿಳಾಸ ಹೇಳುವ ವಾಡಿಕೆ .ದೊಡ್ಡಪ್ಪಗಳ ಮನೆ ಮುಖ್ಯ ರಸ್ತೆಯ ಮಾರಮ್ಮನ ಗುಡಿಯ ಬಲಭಾಗದಲ್ಲಿ ಇನ್ನೂರು ಹೆಜ್ಜೆ ಹಾಕಿ ಎಡಕ್ಕೆ ತಿರುಗಿದರೆ ಸಿಗುವುದು. ಪಡುವಲ ಸೀಮೆಯ ಚೌಡಗೊಂಡನಹಳ್ಳಿಗೆ ಮದುವೆ ಮಾಡಿಕೊಟ್ಟಿದ್ದ ತಮ್ಮ ಅಕ್ಕನ ಮಗನನ್ನು ಇಲ್ಲೆ ಸಾಕಿ ಓದಿಸುತ್ತಿದ್ದರು ಸರಸ್ವತಜ್ಜಿ.
ದೊಡ್ಡಪ್ಪಗಳ ಮನೆಯಲ್ಲಿ ಸರಸ್ವತಜ್ಜಿ ಹಿರಿಯಳಾದರೂ ಮನೆಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದುದು ಆ ಕಾಲಕ್ಕೆ ಎಸ್ಸೆಸ್ಸೆಲ್ಸಿ ಪಾಸದ ಬುದ್ದಿವಂತನಾದ ಮುಕುಂದಯ್ಯ,ಮದುವೆ ಆಗಿ ಕೆಲ ದಿನಗಳಲ್ಲಿ ಹೆಂಡತಿಯು ತೀರಿಕೊಂಡರು ಮತ್ತೊಂದು ಮದುವೆಗೆ ಬಲವಂತ ಮಾಡಿದರೂ ಆಗಲಿಲ್ಲ. ಎರಡನೇ ಮಗ ಮುರಾರಿಗೆ ಹಿರಿಯೂರಿನ ವಾಣಿ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ದೂರದ ಮದಕರಿ ಪುರದಿಂದ ಮದುವೆ ಮಾಡಿಕೊಂಡು ಬರಲಾಗಿತ್ತು.ಹೆಸರು ತಿಮ್ಮಕ್ಕ ಮನೆಯ ಅಡಿಗೆಯಿಂದ ಹಿಡಿದು ಎಲ್ಲಾ ಜವಾಬ್ದಾರಿ ಅವರದೆ .ಮೂರನೆಯ ಮಗ ಬಿಳಿಯಪ್ಪ ಹೆಸರಿಗೆ ಮಾತ್ರ ಬಿಳಿಯಪ್ಪ ಆದರೆ ನಿಜವಾಗಿ ಕಪ್ಪು ಬಣ್ಣದ ಅಷ್ಟಾಗಿ ಓದಲು ಬರೆಯಲು ಬರದವನು ಆದರೆ ಬುದ್ದಿವಂತ ಮನೆಯ ಬೇಸಾಯ ಜವಾಬ್ದಾರಿ ಅವನದೇ ಮದುವೆಯ ವಯಸ್ಸಿಗೆ ಬಂದಿದ್ದರೂ ಮದುವೆಯಾಗಿರಲಿಲ್ಲ. ದೊಡ್ಡ ಮಗಳನ್ನು ಹೊಳಲ್ಕೆರೆ ತಾ ಚೌಡಗೊಂಡನಹಳ್ಳಿಗೆ ಮದುವೆ ಮಾಡಿಕೊಡಲಾಗಿತ್ತು.
ಮದುವೆಯಾದ ಹದಿನಾರು ವರ್ಷಗಳ ಕಾಲ ಮಕ್ಕಳಾಗದ ಸರಸ್ವತಮ್ಮ ದೇವಿಯ ಪೂಜಿಸಲು ಆರಂಭಿಸಿದ ಫಲವಾಗಿ ಈ ಮೇಲಿನ ನಾಲ್ವರು ಮಕ್ಕಳನ್ನು ಪಡೆದ ಕಥೆಯನ್ನು ಆರಂಭದಲ್ಲಿ ಅವರು ಕೂಲಿ ಮಾಡಿದ ,ಕಷ್ಟ ಅನುಭವಿಸಿದ ರೀತಿಯನ್ನು ಸರಸ್ವತಜ್ಜಿ ಈಗ ಸ್ವಾರಸ್ಯಕರವಾಗಿ ಕತೆ ಹೇಳುವುದುಂಟು.
ಎರಡನೇ ಮಗನಿಗೆ ಇನ್ನೂ ಮಕ್ಕಳು ಆಗಿರಲಿಲ್ಲ ಅದಕ್ಕೆ ಚೌಡಗೊಂಡನಹಳ್ಳಿಯ ತನ್ನ ಅಕ್ಕನ ಮಗನಾದ ಸತೀಶನನ್ನು ಕರೆದುಕೊಂಡು ಬಂದು ಇಲ್ಲೇ ಓದಿಸುತ್ತಿದ್ದರು. ಸತೀಶ ಚೆನ್ನಾಗಿ ಓದುವುದು ಅವನ ಗುಣ ನಡತೆಯನ್ನು ಇಡೀ ಶಾಲೆ ಮತ್ತು ಊರೇ ಮೆಚ್ಚಿತ್ತು. ಶಿಕ್ಷಕರ ಮೆಚ್ಚಿನ ಶಿಷ್ಯನಾಗಿದ್ದ ಸತೀಶ .
ಮುಂದುವರೆಯುವುದು.....
ಸಿ ಜಿ ವೆಂಕಟೇಶ್ವರ

No comments:
Post a Comment