*ಸಿಹಿಜೀವಿಯ ಹತ್ತು ಹನಿಗಳು*
( ಇಂದು ವಿಶ್ವ ನಗುವಿನ ದಿನ)
*೧*
*ಜಗಜಟ್ಟಿ*
ಅವನೊಬ್ಬ
ಅಸಾಧಾರಣ
ಜಗಜಟ್ಟಿ |
ಮರೆತೇಹೋಗಿದ್ದಾನೆ
ಪಟ್ಟುಗಳನ್ನು
ಲಾಕ್ಡೌನ್ ನಲ್ಲಿ
ರೊಟ್ಟಿಗಳನ್ನು
ತಟ್ಟಿ ತಟ್ಟಿ||
*೨*
*ಬೇಡಿಕೆ*
ಮಹಿಳಾಮಣಿಗಳ
ಒಂದೇ ಬೇಡಿಕೆ
ಮುಂದುವರೆಸಲೇಬೇಕು
ಲಾಕ್ಡೌನನ್ನ|
ಕಾರಣ ಇನ್ನೂ ಸರಿಯಾಗಿ
ತೊಳೆಯುತ್ತಿಲ್ಲ
ನಮ್ಮ ಪತಿಯರು
ತಟ್ಟೆ ಲೋಟಗಳನ್ನ||
*೩*
*ಸಾಮಾಜಿಕ ಅಂತರ*
ನನ್ನವಳಿಗೆ ಮುತ್ತಿಕ್ಕಲು
ಅವಳೆಡೆ ಹೋದೆ
ತೋರುತ ಅವಸರ|
ನಿರಾಸೆ ಮಾಡುತ
ನುಡಿದಳು ಇನ್ನೂ
ಮುಗಿದಿಲ್ಲ ಲಾಕ್ಡೌನ್
ಪಾಲಿಸಿ ನೀವು
ಸಾಮಾಜಿಕ ಅಂತರ||
*೪*
*ಕಾಟ*
ಉಚಿತವಾಗಿ ಸಿಗುವ
ನಂದಿನಿ ಗಾಗಿ( ಹಾಲು)
ಎಲ್ಲಡೆ ಕಿತ್ತಾಟ|
ಮನದಲೆ
ಅಂದುಕೊಂಡಳು
ಅಮುಲ್
ನಾನು ದುಬಾರಿ
ಸದ್ಯ ತಪ್ಪಿತು
ಜನರ ಕಾಟ||
*೫*
*ಗಾಯನ*
ನಾನೂ ಶುರು
ಮಾಡೇ ಬಿಟ್ಟೆ
ಪಾಶ್ಚಾತ್ಯ ಗಾಯನ|
ಮನೆ ಮುಂದೆ
ಸದ್ದಾಯಿತು
ಗೆಳೆಯನ ನೋಡಲು
ಬಂದಿತ್ತು ಶ್ವಾನ||
*೬*
*ಬೇಡಿಕೆ*
ಬಾವಿ ಅಳಿಯನಿಗೆ
ಮಾವ ಕೇಳಿದರು
ಏನಾದರೂ ಬೇಡಿಕೆಯಿದ್ದರೆ
ಕೇಳಿ ಸಂಕೋಚ ಇರಬಾರದು|
ಒಂದೇ ಬೇಡಿಕೆ ನನ್ನದು ಮಾವ
ಮುಂದೇನಾದರೂ ಲಾಕ್ಡೌನ್
ಆದರೆ ನಿಮ್ಮ ಮಗಳು
ನನ್ನಿಂದ ಪಾತ್ರೆ ತೊಳೆಸಬಾರದು||
*೭*
*ಮನವಿ*
ಪ್ರಿಯೆ ಬೇಡಿಕೊಳ್ಳುವೆ
ನಿನ್ನಲಿ ಕೈಜೋಡಿಸಿ|
ದಯವಿಟ್ಟು ಹೇಳದಿರು
ಎರಡನೇ ಬಾರಿ ಗುಡಿಸಿ||
*೮*
*ಚುರುಮುರಿ*
ಮಗಳು ಹಠ ಹಿಡಿದಳು
ಬೇಕೇ ಬೇಕು
ಗೋಬಿಮಂಚೂರಿ|
ಅದು ಚೀನಾದವರದು ಅಂದೆ
ಮಗಳಂದಳು
ಬಾಳ ಚೆಂದಾಗಿರುತ್ತೆ
ನಮ್ಮ ಚುರುಮುರಿ||
*೯*
*ಗುಗ್ಗು*
ನೀನಗೆ ಸಂತಸವಾದರೆ
ನಗು
ಬೇಕಾದರೆ ಖುಷಿಯಿಂದ
ಗುನುಗು|
ಮುಖ ಗಂಟುಹಾಕಿಕೊಂಡು
ಅವರಿವರಿಂದ ಅನಿಸಿಕೊಳ್ಳದಿರು
ಗುಗ್ಗು||
*೧೦*
*ಗಾಂಧಿ ಮಾರ್ಗ*
ನನಗೂ ಆಸೆ
ಗಾಂಧಿ ಮಾರ್ಗದಲ್ಲಿ
(ಎಂ ಜಿ ರೋಡ್)
ನಡೆಯಲು|
ಏನು ಮಾಡಲಿ
ನನಗೆ ಬರುವುದಿಲ್ಲ
ಧಮ್ ಹೊಡೆಯಲು
ಮದ್ಯ ಕುಡಿಯಲು||
*ಸಿ ಜಿ ವೆಂಕಟೇಶ್ವರ*
*ತುಮಕೂರು*
No comments:
Post a Comment