ಭಾಗ ೩
ಮುಖ್ಯ ರಸ್ತೆಯಿಂದ ಮಾರಮ್ಮನ ಗುಡಿಯ ಪೌಳಿಯ ಬಲಪಕ್ಕದ ರಸ್ತೆಯಲ್ಲದ ರಸ್ತೆಯಲ್ಲಿ ಮನೆಯಿಂದ ಬರುವ ಚರಂಡಿಯ ನೀರನ್ನು ದಾಟಿ ಮುನ್ನೂರ ನಾನ್ನೂರು ಹೆಜ್ಜೆ ನಡೆದು ಎಡಕಯ ತಿರುಗಿದರೆ ಅದೇ ದೊಡ್ಡಪ್ಪಗಳ ಮನೆ .
ದಕ್ಷಿಣಾಭಿಮುಖವಾಗಿ ರಂಗಪ್ಪನ ಗುಡಿಯ ಪೌಳಿಗೆ ಹೊಂದಿಕೊಂಡಿರುವ ಮನೆ ಬಾಗಿಲು ದಾಟಿ ಒಳನಡೆದರೆ ಮೊದಲು ನಮ್ಮ ಸ್ವಾಗತ ಮಾಡುವುದು ಮುಸುರೆ ಬಾನಿ( ಕಲ್ಲಿನಿಂದ ಮಾಡಿದ ಪ್ರಾಣಿಗಳಿಗೆ ನೀರ ಕುಡಿಯಲು ಮಾಡಿದ್ದು) ಅಲ್ಲದೆ ದನಗಳ ಕಟ್ಟಲು ಜಾಗ ಎಡಕ್ಕೆ ತಿರುಗಿದರೆ ಅಸಲಿ ಮನೆ ಆರಂಭ , ಕಟ್ಟಿಗೆ ಮಾಡಿನಿಂದ ಮಾಡಿದ ಹಳೆಯ ಕಾಲದ ಜಂತೆಮನೆ ಎಡಕ್ಕೆ ಅಡುಗೆ ಕೋಣೆ ಬಲಕ್ಕೆ ವರಾಂಡ ,ಇನ್ನೂ. ಒಳಕ್ಕೆ ಹೋದರೆ ವಿಶಾಲವಾದ ಕೊಣೆ ಗೋಡೆಗೆ ದೇವರ ಮತ್ತು ಮಾನವರ ಚಿತ್ರಪಟಗಳನ್ನು ನೇತು ಹಾಕಲಾಗಿದೆ. "ಮದುವೆಯಾ ವಯಸು ಎಲ್ಲೆಲ್ಲೂ ಸೊಗಸು ಕಣ್ತುಂಬ ನೂರಾರು ಕನಸು" ಎಂದು ಫಿಲಿಪ್ಸ್ ರೇಡಿಯೋದಲ್ಲಿ ಹಾಡು ಬರುತ್ತಿತ್ತು ಪಕ್ಕದ ಮನೆಗೆ ಕೇಳಲೆಂದೇ ಸೌಂಡ್ ಜಾಸ್ತಿಯೇ ಇತ್ತು ಅದೇ ಕೋಣೆಯಲ್ಲಿ ಹತ್ತಿ ,ಕಡಲೇಕಾಯಿ,ಸೂರ್ಯಕಾಂತಿ, ಚೀಲಗಳನ್ನು ತುಂಬಿದ್ದರಿಂದ ಗೋಣಿ ಚೀಲ ಮಣ್ಣಿನ, ಮತ್ತು ಹತ್ತಿಯ ಅಷ್ಟೇನೂ ಕೆಟ್ಟದ್ದು ಅಲ್ಲದ ಸುವಾಸನೆಯೂ ಅಲ್ಲದ ವಾಸನೆ ಮೂಗಿಗೆ ಅಡರುತ್ತಿತ್ತು .ಆ ಕೋಣೆಯ ಬಲಕ್ಕೆ ತಿರುಗಿದರೆ ಅದೇ ದೇವರ ಮನೆ ,ದೇವರ ಮನೆಯೆಂದರೆ ಮೂರುಇಂಟು ನಾಕು ಅಡಿ ಚಿಕ್ಕದಲ್ಲ ಬರೊಬ್ಬರಿ ಎಂಟು ಇಂಟು ಹತ್ತು ಅಡಿ ಉದ್ದದ ದೇವರ ಮನೆ ಮನೆಯ ವಾಸ್ತುಶಿಲ್ಪಿ ಮತ್ತು ಮನೆ ಕಟ್ಟಿಸಿದವರ ದೈವಭಕ್ತಿಗೆ ಆ ದೇವರ ಕೋಣೆಯೇ ಸಾಕ್ಷಿ
ಅದೇ ಕೋಣೆಯಲ್ಲಿ ಪೂರ್ವಾಭಿಮುಖವಾಗಿ ಇರುವ ಗೋಡೆಯಲ್ಲಿ ಒಂದು ಗೂಡು ಗೂಡಲ್ಲಿ ದೀಪ ,ಪೂಜೆಯ ಸಾಮನುಗಳು ಮತ್ತು ಶ್ರೀ ದೇವಿ ಮಹಾತ್ಮೆಯ ಪುಸ್ತಕಗಳು ಕಣ್ಣಿಗೆ ಬೀಳುತ್ತವೆ.
ಮನೆಯ ಮುಂಬಾಗದ ಅಂಗಳ ಬಲಗಡೆ ಜಗುಲಿ ,ಇನ್ನೂ ಮುಂದೆ ಎತ್ತು ಎಮ್ಮೆ ಕಟ್ಟಲು ಗ್ವಾಂದಿಗೆ ( ಪ್ರಾಣಿಗಳ ಮುಂದೆ ಹುಲ್ಲು ಹಾಕುವ ಸ್ಥಳ) ಇದ್ದವು.ಮನೆಯ ಬಾಗಿಲ ನೇರಕ್ಕೆ ಒಂದು ಜಾಲಿಯ ಮರ ಬೇಕಂತಲೇ ಕಡಿಯದೆ ಬಿಟ್ಟಿದ್ದರು ಕಾರಣ ಜಾನುವಾರುಗಳಿಗೆ ನೆರಳಿರಲಿ ಎಂದು.
ಏ ಗುರುಸಿದ್ದ ಇನ್ನೂ ಸಗಣಿ ತಗದಿಲ್ಲ ದನ ಹೊಡ್ಕಂಡು ಮೇಸಾಕ ಯಾವಾಗಿನ್ನ ನೀನು ಹೋಗಾದು? ಎಂದು ಮುಕುಂದಯ್ಯ ಏರುಧ್ವನಿಯಲ್ಲಿ ಗದರಿದ್ದನ್ನು ಕಂಡು ಅಣ್ಣ ಹೊರಟೆ ಎಂದು ದನಗಳ ಕಣ್ಣುಗಳನ್ನು (ಹಗ್ಗ) ಬಿಚ್ಚಿ ದಕ್ಷಿಣಾಭಿಮುಖವಾಗಿ ಹತ್ತಕ್ಕೂ ಹೆಚ್ಚಿನ ದನಗಳನ್ನು ಹೊಡೆದುಕೊಂಡು ಹೋರಟನು ಧೂಳು ಅವನನ್ನು ಹಿಂಬಾಲಿಸಿತು.
ಮಾದರ ಗುರುಸಿದ್ದನ ತಂದೆ ಮುಕುಂದಯ್ಯನ ಹತ್ತಿರ ಐದು ವರ್ಷಗಳ ಹಿಂದೆ ಹದಿನೈದು ಸಾವಿರ ಸಾಲ ಮಾಡಿ ಮನೆಯಲ್ಲಿ ಇಬ್ಬರು ಗಂಡು ಮಕ್ಕಳು ಮತ್ತು ವಯಸ್ಸಾದ ಹೆಂಡತಿಯನ್ನು ಸಾಕಲು ಸ್ವಲ್ಪ ಭಾಗ ಕೊಟ್ಟು ಪ್ರತಿದಿನ ಹೆಂಡದ ಅಂಗಡಿಗೆ ಪೀಸು ಕಟ್ಟುತ್ತಿದ್ದ .ಕಳೆದವರ್ಷ ಕರುಳು ತೂತು ಬಿದ್ದು ಮುದಿ ಹೆಂಡತಿ ಇನ್ನೂ ವಯಸ್ಸಿಗೆ ಬರದ ಮಕ್ಕಳ ಮೇಲೆ ಸಾಲ ಹೊರೆ ಹೊರಿಸಿ ಶಿವನ ಪಾದ ಸೇರಿದ . ಒಂದು ವರ್ಷದ ಹಿಂದೆ ಮುಕುಂದಯ್ಯ ಏನಮ್ಮ ಸಿದ್ದಮ್ಮ ನಿನ್ನ ಗಂಡ ನಮ್ಮತ್ರ ಸಾಲ ತಕಂಡಿರೋದು ಗೊತ್ತಾಲ್ಲ ಎಲ್ಲಿ ಕೊಡು ಅಂದು ಬಿಟ್ಟರು ." ನಮ್ಮತ್ರ ದುಡ್ಡು ಎಲ್ಲೈತೆ ಸಾಮಿ ನಿಮಗೆ ಗೊತ್ತು" ಎಂದು ಸಿದ್ದಮ್ಮ ಮಾತು ಮುಗಿಸಿರಲಿಲ್ಲ ಅಲ್ಲಮ್ಮ ಇದೊಳ್ಳೆ ಕಥೆ ಆತಲ್ಲ ನಾವೇನು ಕಲ್ಲಳ್ಳು ಕೊಟ್ಟಿಲ್ಲ ಬಡ್ಡಿ ಎನೂ ಬ್ಯಾಡ ಅಸಲು ಕೊಡ್ರಿ ಸಾಕು " ಅಂದರು ಮುಕುಂದಯ್ಯ. ನಮ್ಮತ್ರ ಹತ್ತು ಪೈಸಾನೂ ಇಲ್ಲ ಸಾಮಿ ಇಗ ಇವನು ನನ್ನ ಎರಡನೆ ಮಗ ಗುರುಸಿದ್ದ ಇವನ್ನ ನಿಮ್ ಮನ್ಯಾಗೆ ಸಂಬಳ ಇಕ್ಕಳಿ ವರ್ಸಕ್ಕೆ ಮೂರು ಸಾವಿರ ಮುರ್ಕಳಿ ತೀರಾವರ್ಗೂ ಇವನು ನಿಮ್ಮನೇಲೆ ಇರ್ಲಿ ಅಂದಳು ಅಜ್ಜಿ , ಮುಕುಂದಯ್ಯನಿಗೆ ಅದೇ ಸರಿ ಎನಿಸಿ ಮನೆಯ ದನಗಳನ್ನು ನೋಡಿಕೊಳ್ಳಲು ಇವನಿದ್ದರೆ ಸರಿ ಎಂದು ಆತು ನಾಳೆ ಬಾರೊ ಗುರುಸಿದ್ದ ಅಂದು ಹೊರಟರು ಮುಕುಂದಯ್ಯ.
ದೇವ್ರೇ ಈ ಕರ್ಮ ನೋಡೋಕೆ ನನ್ನ ಯಾಕೆ ಬಿಟ್ಟೆ ,ಅವರೇನೋ ಸಾಲ ಮಾಡಿ ಕುಡ್ದು ,ಕುಡ್ದು ಇಂಗೆ ನಡಾ ನೀರಾಗೆ ನಮ್ಮ ಬಿಟ್ಟು ಹೋದರು ಈಗ ಇವರು ಮಾಡಿದ ಸಾಲ ತೀರಸಲಾ? ಜೀವನ ಹ್ಯಾಂಗ ಮಾಡ್ಲಿ? ಗುರುಸಿದ್ದ ಇನ್ನೂ ಕೂಸು ರೆಟ್ಟೇಲಿ ಸಕುತಿ ಇಲ್ಲ , ದೊಡ್ಡಪ್ಪಗಳ ಮನೇಲಿ ಎಂಗೆ ಕೆಲಸ ಮಾಡ್ತಾನೋ? ಅವ್ರು ಹೆಂಗೆ ನೋಡ್ಕೋತಾರೋ? ಯಾಕೆ ದೇವ್ರೇ ನಮಗೆ ಯಾಕೆ ಇಂತಹ ಕಷ್ಟ ? ಹೀಗೆ ಒಬ್ಬಳೆ ಯೋಚಿಸುತ್ತಾ ಕುಳಿತಾಗ ಅಸ್ಥಿಪಂಜರದ ಮೇಲಿರುವ ಸುಕ್ಕುಗಟ್ಟಿದ ತೊಗಲಿನ ಮೂಲಕ ಕಣ್ಣಿನಿಂದ ಹನಿಗಳು ಜಿನುಗಲಾರಂಭಿಸಿದವು."ಅಮ್ಮೋ ಉಮ್ಮಕ್ಕೆ ಇಕ್ಕು ಬಾ " ಎಂದು ದೊಡ್ಡ ಮಗ ಪೂಜಾರಿ ಕರೆದಾಗ ಎರಡೂ ಕೈಗಳನ್ನು ನೆಲಕ್ಕೂರಿ ನಿಧಾನವಾಗಿ ಎದ್ದು ಅಡಿಗೆ ಮನೆಗೆ ಹೋದಳು ರಂಗಮ್ಮ. ಅವರ ಪಕ್ಕದ ಮನೆಯ ಮಾದೇವ ಹೆಂಡ ಕುಡಿದು ಬಂದು ಹೆಂಡತಿ ಮಕ್ಕಳನ್ನು ನಡೆಯುತ್ತಾ ಕೆಟ್ಟ ಪದಗಳಲ್ಲಿ ಬೈಯುತ್ತಾ ಅರಚಾಡುವುದು ಕಂಡರೂ ಇದೇ ಮಾಮೂಲು ಎಂದು ಮಗನಿಗೆ ಮುದ್ದೆ ಇಕ್ಕಿ ತಾನೂ ತಿನ್ನುವ ಶಾಸ್ತ್ರ ಮಾಡಿದ ಹರಿದ ದುಪ್ಪಡಿ ಹೊದ್ದು ಮೂಲೆಯಲ್ಲಿ ಮಲಗಿದಳು " ಬುಡ್ಡಿ ಕೆಡಸಪ್ಪ ಸೀಮೆಣ್ಣೆ ಮುಗುದೈತೆ ನಾಳೆ ಹೊಯ್ಸಕೊಂಡು ಬಾ ಇಲ್ಲ ಅಂದರೆ ಕತ್ತಲಾಗಿರಬೇಕು ಮಕ್ಕ " ಅಂದು ಮಲಗುವ ಶಾಸ್ತ್ರ ಮಾಡದಳು ನಿದ್ರೆ ಬರಬೇಕಲ್ಲ. ನಿದ್ರೆ ಇಲ್ಲದ ರಾತ್ರಿ ಕಳೆಯುವುದು ರಂಗಜ್ಜಿಗೆ ರೂಢಿಯಾಗಿತ್ತು.
ಶಾಲೆಯಲ್ಲಿ ತಾನಾಯಿತು ತನ್ನ ಓದಾಯಿತು ಎಂದು ಓದಿನಲ್ಲಿ ಮಗ್ನನಾಗಿದ್ದ ಸತೀಶ್ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಇಡೀ ಹತ್ತನೇ ತರಗತಿಯ ವಿದ್ಯಾರ್ಥಿಗಳಲ್ಲಿ ಅತೀ ಹೆಚ್ಚು ಅಂಕ. ಪಡೆದು ಮಹೇಶ ನನ್ನು ಹಿಂದಿಕ್ಕಿದ್ದ ಅದಕ್ಕಿಂತ ಮೊದಲು ಎಂಟನೇ ತರಗತಿಯಿಂದ ಮಹೇಶ ಮೊದಲ ಸ್ಥಾನವನ್ನು ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ ಉತ್ತರ ಕರ್ನಾಟಕದಿಂದ ಈ ಊರಿನ ಶಾಲೆಗೆ ವರ್ಗಾವಣೆ ಆಗಿ ಬಂದಿದ್ದ ಇಂಗ್ಲೀಷ್ ಮೇಷ್ಟ್ರು ಶಿವಪ್ಪ ಮಲ್ಲಪ್ಪ ಸಾರಂಗಿ ಮಕ್ಕಳು ಅವರನ್ನು ಶಾರ್ಟ್ ಆಗಿ ಎಸ್ ಎಮ್ ಎಸ್ ಎಂದು ಕರೆಯುತ್ತಿದ್ದರು ಮಕ್ಕಳೇ ಎಲ್ಲ್ರೂ ಸತೀಶನಿಗೆ ಚಪ್ಪಾಳಿ ಹೊಡೀರಿ ಎಂದಾಗ ಎಲ್ಲರೂ ಚಪ್ಪಾಳೆ ಹೊಡೆಯೋದು ನೋಡಿ " ಏ ಮಂಗ್ಯಾನ ಮಕ್ಕಳ ಹಂಗೇನ್ರಲಾ ಚಪ್ಪಾಳಿ ಹೊಡೆಯೋದು ಅವ್ನನವುನ್ ನಿಮಗೊಂದು ಶಿಸ್ತ್ ಇಲ್ಲ ನೋಡ್ರಿ .ಒಂಟೂತ್ರೀ ಚಪ್ಪಾಳಿ ಹೊಡಿರಲೇ ಅಂದಾಗ ಎಸ್ಸಮ್ಮೆಸ್ ಮಾಸ್ಟರ್ ಭಾಷೆ ಕೇಳಿ ಮಕ್ಕಳಿಗೆ ನಗು ತಡೆಯಲಾಗದೇ ನಗುತ್ತಲೇ ಒನ್ಟೂತ್ತೀ ಚಪ್ಪಾಳೆ ಹೊಡೆದರು ಚಪ್ಪಾಳೆ ಹೊಡೆಯುವಾಗ ಮುಂದಿನ ಸಾಲಿನಲ್ಲಿ ಕುಳಿತಿದ್ದ ಸತೀಶ್ ನಿಧಾನವಾಗಿ ಹಿಂತಿರುಗಿ ನೋಡಿದ ಎಲ್ಲರೂ ಖುಷಿಯಿಂದ ಚಪ್ಪಾಳೆ ತಟ್ಟುತ್ತಿದ್ದರೆ ಮಹೇಶ್ ಮಾತ್ರ ವಿಚಿತ್ರ ಮುಖಭಾವದಿಂದ ತಟ್ಟಲೋ ಬೇಡವೋ ಎಂಬಂತೆ ತಟ್ಟುತ್ತಿದ್ದ.ಎಲ್ಲರೂ ಚಪ್ಪಾಳೆ ತಟ್ಟುವುದು ನಿಲ್ಲಿಸಿದರೂ ಅವಳು ಮಾತ್ರ ತಟ್ಟುತ್ತಲೇ ಇದ್ದಳು .ನಂತರ ಅರಿವಾಗಿ
ನಾಚಿಕೆಯಿಂದ ತಲೆತಗ್ಗಿಸಿದಳು ಸುಜಾತ
ಅವಳನ್ನು ನೋಡಿದ ಸತೀಶನಿಗೆ ಇಂದೇಕೋ ಅವಳು ಬಹಳ ಸುಂದರವಾಗಿ ಕಾಣುತಿಹಳಲ್ಲ ದಿನಕ್ಕೊಂದು ಬಾರಿ ಬೇಕು ಅನ್ನದಿದ್ದರೂ ಸುಮ್ಮನೆ ನೋಡುವಾಗ ಸುಜಾತ ಈಗೆ ಕಂಡಿರಲಿಲ್ಲ ಅವಳು ಇಂದು ಮಹಾಚೆಲುವೆಯಂತೆ ಕಾಣುತಿಹಳಲ್ಲ ವಾವ್ ಎಂದು ಇನ್ನೂ ಎನೋ ಲಹರಿಯಲಿ ಮುಳುಗಿದ್ದ ಸತೀಶ " ನೋಡ್ಪ ಸತೀಶ ಇಂಗ ಓದು ನಿಂಗೆ ಒಳ್ಳೆ ಭವಿಷ್ಯ ಐತೆ " ಎಂದು ಎಸ್ಸೆಮ್ಮೆಸ್ ಮೇಷ್ಟು ಅಂದಾಗ ಎಚ್ಚರಗೊಂಡ ಸತೀಶ ಆತು ಸರ್ ಎಂದು ತೊದಲುತ್ತಲೆ ಹೇಳಿದ ಸತೀಶ.

No comments:
Post a Comment