02 July 2024

ದೃಷ್ಟಿಹೀನರ ಬಾಳಿನ ಬೆಳಕು ಲೂಯಿಸ್ ಬ್ರೈಲ್

 






ಲೂಯಿಸ್ ಬ್ರೈಲ್ 


ಮೇದಾವಿಯ ಸ್ಪರ್ಶ (ದಿ ಟಚ್ ಆಫ್ ಜೀನಿಯಸ್)


ದೃಷ್ಟಿ ದೋಷವಿರುವವರಿಗಾಗಿ  ಸ್ಪರ್ಶ ಆಧಾರಿತ ಓದುವ ಮತ್ತು ಬರೆಯುವ ವ್ಯವಸ್ಥೆಗಾಗಿ 'ಸಾರ್ವಕಾಲಿಕ 100 ಉನ್ನತ ಆವಿಷ್ಕಾರಕರು'ಎಂದು   ಗುರುತಿಸಲ್ಪಟ್ಟ ಲೂಯಿಸ್ ಬ್ರೈಲ್ ರವರು ಜಗತ್ತಿಗೆ ಅತ್ಯಮೂಲ್ಯವಾದ ಕೊಡುಗೆ  ನೀಡಿದ್ದಾರೆ.


ಸಾಮಾನ್ಯ ಬಾಲಕ ಲೂಯಿಸ್ ಬ್ರೈಲ್‌ನನ್ನು  ನಾಯಕನನ್ನಾಗಿ ಮಾಡಿದ ದುರಂತದ ಕಥೆ ಇದು.  1812 ರಲ್ಲಿ ಮೂರು ವರ್ಷದ ಲೂಯಿಸ್ ಫ್ರಾನ್ಸ್‌ನ ಕೂಪ್ವ್ರೆಯಲ್ಲಿ ತನ್ನ ತಂದೆಯ ಚರ್ಮದ ಅಂಗಡಿಯಲ್ಲಿ ಆಡುತ್ತಿದ್ದನು. ಅವರ ತಂದೆ  ಕುದುರೆಗಾಡಿಗಳಿಗೆ ಚರ್ಮದ ವಸ್ತುಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದರು. ಈ  ಹುಡುಗನು ಗಟ್ಟಿಯಾದ ಚರ್ಮದಲ್ಲಿ ರಂಧ್ರಗಳನ್ನು ಚುಚ್ಚಲು ಬಳಸುವ  ಮೊನಚಾದ ಉಪಕರಣದೊಂದಿಗೆ ಆಟವಾಡುತ್ತಿದ್ದಾಗ ಅದು ಜಾರಿ ಅವನ ಕಣ್ಣಿಗೆ ಚುಚ್ಚಿತು!


ಗಾಯದಿಂ ಎರಡೂ ಕಣ್ಣುಗಳಿಗೆ ಸೋಂಕು ತಗುಲಿತು. ಲೂಯಿಸ್ಗೆ ಅವನ ಪ್ರಪಂಚವು ಇದ್ದಕ್ಕಿದ್ದಂತೆ ಏಕೆ ಕತ್ತಲೆಯಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು   ಸಾಧ್ಯವಾಗಲಿಲ್ಲ.


ಲೂಯಿಸ್ ತುಂಬಾ ಬುದ್ದಿವಂತ ಮತ್ತು ತ್ವರಿತವಾಗಿ ಪಾಠಗಳನ್ನು ಕಂಠಪಾಠ ಮಾಡುತ್ತಿದ್ದ ಆದರೆ ಸ್ಥಳೀಯ ಶಾಲೆಯಲ್ಲಿ ಕಲಿಕೆ ಸರಿಯಾಗಲಿಲ್ಲ.  

ಕೊನೆಗೆ ಪ್ಯಾರಿಸ್‌ನಲ್ಲಿರುವ ದೃಷ್ಟಿ ದೋಷವಿರುವವರಿಗೆ ಇರುವ  ವಿಶೇಷ ಶಾಲೆಗೆ ಸೇರಿದ. ಆದರೆ ಅದಕ್ಕೂ ಮಿತಿಗಳಿದ್ದವು. ಉದಾಹರಣೆಗೆ ಆ ತರಗತಿಯಲ್ಲಿ ಕೇವಲ ಹದಿನಾಲ್ಕು ಪುಸ್ತಕಗಳನ್ನು ಓದಬೇಕಿತ್ತು. ದೃಷ್ಟಿಹೀನರಿಗಾಗಿ ಪುಸ್ತಕಗಳನ್ನು ತಯಾರಿಸುವುದು ಕಷ್ಟಕರವಾಗಿತ್ತು ಮತ್ತು ತುಂಬಾ ದೊಡ್ಡ ಅಕ್ಷರಗಳನ್ನು ಬಳಸಿದ ಪರಿಣಾಮವಾಗಿ ಪುಸ್ತಕಗಳು ಭಾರವಾಗಿದ್ದವು. ದೊಡ್ಡ ಅಕ್ಷರಗಳ ಬಳಕೆಯ ಪರಿಣಾಮವಾಗಿ ಒಂದೊಂದು ಪುಟಕ್ಕೆ  ಕೆಲವೇ ವಾಕ್ಯಗಳು ಮಾತ್ರ ಇದ್ದವು.


"ವಿಶಾಲ ಅರ್ಥದಲ್ಲಿ ಸಂವಹನಕ್ಕೆ ಅವಕಾಶ ನೀಡಿದರೆ    ಜ್ಞಾನಕ್ಕೆ ಅವಕಾಶ ನೀಡಿದಂತೆ" 



ಲೂಯಿಸ್ ಒಬ್ಬ ಪ್ರತಿಭಾನ್ವಿತ ಸೆಲ್ಲೋ ಮತ್ತು ಆರ್ಗನ್ ಪ್ಲೇಯರ್ ಆಗಿದ್ದರು. ಅವರು ಪ್ಯಾರಿಸ್‌ನ ಕೆಲವು ದೊಡ್ಡ  ಚರ್ಚ್‌ಗಳಲ್ಲಿ ತಮ್ಮ ಸಂಗೀತದ ಪ್ರತಿಭೆ ಪ್ರದರ್ಶಿಸಿದ್ದರು. ಆದರೂ ಅವನ ಮನಸ್ಸು ದೃಷ್ಟಿ ಹೀನರಿಗೆ  ಸುಲಭವಾಗಿ ‘ಬೆರಳಿನಲ್ಲಿ ಓದಲು’ ಸಹಾಯ ಮಾಡಲು ಏನಾದರೂ ಮಾಡಬೆಕೆಂದು ಹಾತೊರೆಯುತ್ತಿತ್ತು.

ಮನಸ್ಸಿನಲ್ಲಿ ಅದೇ ವಿಷಯದ ಬಗ್ಗೆ ಚಿಂತನ ಮಂಥನ ಮಾಡುವಾಗ ಒಂದು

ರಜೆಯ ದಿನದಂದು ಮನೆಯಲ್ಲಿದ್ದಾಗ  ಲೂಯಿಸ್ ಮಹಾ ಹೊಳಹು  ಹೊಳೆಯಿತು!  ಶಾಲೆಯಲ್ಲಿ ಓದುವಾಗ  ಸೈನಿಕರು ಕತ್ತಲೆಯಲ್ಲಿ ಬಳಸುವ ರಹಸ್ಯ ಸಂಕೇತದ ಬಗ್ಗೆ ಕೇಳಿದ್ದರು. ಇದನ್ನು ಚಾರ್ಲ್ಸ್ ಬಾರ್ಬಿಯರ್ ಎಂಬ ಸೇನಾ ಕ್ಯಾಪ್ಟನ್ ಅಭಿವೃದ್ಧಿಪಡಿಸಿದ್ದರು.  ಕಾಗದದ ಮೇಲೆ ಸ್ಪರ್ಶಿಸಿ 'ಅನುಭವಿಸಬಹುದಾದ' ಡ್ಯಾಶ್‌ಗಳು ಮತ್ತು ಚುಕ್ಕೆಗಳ ಸರಣಿಯನ್ನು ಬಳಸಲಾಗಿತ್ತು. 

ಇದೇ ತಂತ್ರ ಬಳಸಿ ಅದ್ಭುತ ಸಾಧಿಸಲು ಹದಿನೈದು ವರ್ಷ ವಯಸ್ಸಿನ ಲೂಯಿಸ್ ಸಿದ್ದನಾದ  ಚುಕ್ಕೆಗಳ ಮಾದರಿಯನ್ನು ರೂಪಿಸಲು ಚರ್ಮದಲ್ಲಿ ರಂಧ್ರಗಳನ್ನು ಮಾಡಲು ತನ್ನ ಕಣ್ಣು ಶಾಶ್ವತ ಅಂಧತ್ವಕ್ಕೆ ಕಾರಣವಾದ  ಚೂಪಾದ ಆಯುಧ ಬಳಸಿದ!    ಹಲವಾರು ಸತತ ಪ್ರಯತ್ನದ ಫಲವಾಗಿ ವರ್ಣಮಾಲೆಯ ಅಕ್ಷರಗಳನ್ನು ಪ್ರತಿನಿಧಿಸಲು ಅವುಗಳನ್ನು ಮರುಜೋಡಿಸಿ  ಮರುಸ್ಥಾಪಿಸಿದ.


 1829 ರಲ್ಲಿ  ಅಧಿಕೃತವಾಗಿ 'ಬ್ರೈಲ್' ಎಂಬ ಈ ಹೊಸ ವ್ಯವಸ್ಥೆಯನ್ನು ಪ್ರಕಟಿಸಿದಾಗ ಲೂಯಿಸ್ ಬ್ರೈಲ್ ಗೆ  ಇಪ್ಪತ್ತು ವರ್ಷ ವಯಸ್ಸು.  ಮುಂದಿನ ಕೆಲವು ವರ್ಷಗಳ ಕಾಲ ಅದರ ಮೇಲೆ ಕೆಲಸ ಮಾಡಿದರು. ಬ್ರೈಲ್‌ನ ಚುಕ್ಕೆಗಳ ವ್ಯವಸ್ಥೆಯು ಬೆರಳಿನ ಸ್ಪರ್ಶದಿಂದ ಓದಲು ಹೆಚ್ಚು ಸುಲಭವಾಗಿತ್ತು. ಆದರೆ ಔಪಚಾರಿಕವಾಗಿ ಅಳವಡಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಂಡಿತು. 1870 ರ ಹೊತ್ತಿಗೆ ಇದು ಫ್ರಾನ್ಸ್ ಮತ್ತು ಇತರ ದೇಶಗಳಲ್ಲಿಯೂ ಬಳಕೆಗೆ ಬಂತು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಪಿನ್ ನಂಬರ್ ಗೊತ್ತಾ?

 


 ಪಿನ್ ನಂಬರ್ ಗೊತ್ತಾ?


ನಾವು ನಮ್ಮ ಪ್ರಮುಖ ದಾಖಲೆಗಳನ್ನು ಬರೆಯುವಾಗ , ಅರ್ಜಿಗಳನ್ನು ತುಂಬುವಾಗ ಪಿನ್ ಕೋಡ್ ಅಥವಾ ಜಿಪ್ ಕೋಡ್ ತುಂಬಲೇ ಬೇಕು.ಎಷ್ಟೋ ಜನರಿಗೆ ಈ ಪಿನ್ ಬಗ್ಗೆ ಗೊತ್ತೇ ಇರುವುದಿಲ್ಲ ‌ಕೆಲವರು ತಕ್ಷಣವೇ ಗೂಗಲಿಸಿ ಆ ಪಿನ್ ನಮೂದಿಸಿ ಮತ್ತೆ ಮರೆತುಬಿಡುವರು. ಇದು ಮರೆಯುವಂತದ್ದಲ್ಲ ನಮ್ಮ ನಾವಿರುವ ಸ್ಥಳದ ಮೂಲ ವಿಳಾಸ ಅದನ್ನು ಸದಾ ನೆನೆಪಿಟ್ಟುಕೊಳ್ಳುವುದು ಅಗತ್ಯ ಮತ್ತು ಅನಿವಾರ್ಯ. 

ಪಿನ್ ಕೋಡ್ ,ಪೋಸ್ಟಲ್ ಇಂಡೆಕ್ಸ್ ,ಅಂಚೆ ಸೂಚ್ಯಂಕ ಸಂಖ್ಯೆ (ಪಿನ್ ಕೋಡ್) ಎಂಬುದು ಆಂಗ್ಲ ಭಾಷೆಯ ಪೋಸ್ಟಲ್ ಇಂಡೆಕ್ಸ್ ನಂಬರ್ (Postal Index Number) ಎಂಬುದರ ಪಾರಿಭಾಷಿಕ ಪದ. ಅದು ಅಂಚೆ ಕಛೇರಿಗಳಿಗೆ ಭಾರತೀಯ ಅಂಚೆ ಇಲಾಖೆಯ ಆಡಳಿತವು ಬಳಸುವ ಸಂಖ್ಯಾ ವ್ಯವಸ್ಥೆ. ಅದು ಆರು ಅಂಕೆಗಳನ್ನು ಹೊಂದಿರುತ್ತದೆ. ಈ ವ್ಯವಸ್ಥೆಯನ್ನು 15 ಆಗಸ್ಟ್ 1962 ರಂದು ಜಾರಿಗೆ ತರಲಾಯಿತು.

ಎಂಟು ಪ್ರಾದೇಶಿಕ ವಲಯಗಳು ಮತ್ತು ಭಾರತೀಯ ಸೇನೆಗಾಗಿಯೇ ಒಂದು ಸಕ್ರಿಯವಾದ ವಲಯ ಸೇರಿದಂತೆ ಭಾರತದಲ್ಲಿ ಒಂಬತ್ತು ಪಿನ್ ಕೋಡ್ ವಲಯಗಳು ಇವೆ. ಪಿನ್ ಕೋಡ್ ಮೊದಲ ಅಂಕಿಯು "ವಲಯ"ವನ್ನೂ, ಎರಡನೇ ಅಂಕಿಯ "ಉಪವಲಯ"ವನ್ನೂ, ಮೂರನೇ ಅಂಕಿಯು ಅಂಚೆ-ವಿಂಗಡಣೆಯ "ಜಿಲ್ಲೆ"ಯನ್ನೂ ಸೂಚಿಸುತ್ತವೆ. ಕೊನೆಯ ಮೂರು ಅಂಕೆಗಳ ಗುಂಪು "ಅಂಚೆ ಕಛೇರಿ"ಯನ್ನು ನಿರ್ದೇಶಿಸುತ್ತದೆ.

ಭಾರತ ಸರ್ಕಾರದ ಸಂವಹನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀರಾಮ್ ಭಿಕಾಜಿ ವೆಲಂಕರ್ ಭಾರತದಲ್ಲಿ ಮೊದಲು ಪಿನ್ ವ್ಯವಸ್ಥೆ  ಪರಿಚಯಿಸಿದರು. ತಪ್ಪಾದ ವಿಳಾಸಗಳು, ಒಂದೇ ರೀತಿಯ ಸ್ಥಳದ ಹೆಸರುಗಳು ಮತ್ತು ಸಾರ್ವಜನಿಕರು ಬಳಸುವ ವಿವಿಧ ಭಾಷೆಗಳಲ್ಲಿ ಗೊಂದಲವನ್ನು ನಿವಾರಿಸಲು, ಹಸ್ತಚಾಲಿತ ವಿಂಗಡಣೆ ಮತ್ತು ಅಂಚೆ ವಿತರಣೆಯನ್ನು ಸರಳಗೊಳಿಸುವ ಈ ವ್ಯವಸ್ಥೆಯನ್ನು ಪರಿಚಯಿಸಲಾಯಿತು.


ಎಂಟು ಪ್ರಾದೇಶಿಕ ವಲಯಗಳು ಮತ್ತು ಒಂದು ಕ್ರಿಯಾತ್ಮಕ ವಲಯ (ಭಾರತೀಯ ಸೇನೆಗೆ) ಸೇರಿದಂತೆ ಭಾರತದಲ್ಲಿ ಒಂಬತ್ತು ಅಂಚೆ ವಲಯಗಳಿವೆ. 



ಸಿಹಿಜೀವಿ ವೆಂಕಟೇಶ್ವರ

ತುಮಕೂರು


01 July 2024

ವೈದ್ಯರಿಗೆ ನಮನಗಳು ...ಇಂದು ವೈದ್ಯರ ದಿನ

 




ವೈದ್ಯರ ದಿ‌ನ 

"ವೈದ್ಯೋ ನಾರಾಯಣ ಹರಿ"ಎಂಬಂತೆ ಡಾಕ್ಟರ್ ಗಳು ದೇವರ ಸಮಾನ.ಸಮಾಜದಲ್ಲಿ ಅವರಿಗೆ ತಮ್ಮದೇ ಆದ ಗೌರವವಿದೆ.ಅವರ ಸೇವೆಯನ್ನು ಎಷ್ಟು ಸ್ಮರಿಸಿ ‌ಕೃತಜ್ಞತೆ ಸಲ್ಲಿಸಿದರೂ ಸಾಲದು ಆದರೂ ಅವರಿಗಾಗಿ ರಾಷ್ಟ್ರ ಮಟ್ಟದಲ್ಲಿ ಒಂದು ದಿನವನ್ನು ಮೀಸಲಿಡಲಾಗಿದೆ ಮತ್ತು 
ಭಾರತದಲ್ಲಿ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ:

 ಮಾನವೀಯತೆಗೆ ಅವರ ನಿಸ್ವಾರ್ಥ ಸೇವೆಗಾಗಿ ವೈದ್ಯರು ಮತ್ತು ಆರೋಗ್ಯ ವೃತ್ತಿಪರರನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ.ಪ್ರಸಿದ್ಧ ವೈದ್ಯ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿಯಾಗಿದ್ದ ಡಾ. ಬಿಧನ್ ಚಂದ್ರ ರಾಯ್ ಅವರ ಜನ್ಮದಿನವನ್ನು ವೈದ್ಯರ ದಿನವೆಂದು ಆಚರಿಸಲಾಗುತ್ತದೆ. ಡಾ. ರಾಯ್ ಅವರು ಜುಲೈ 1, 1882 ರಂದು ಜನಿಸಿದರು
ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿ, ವೈದ್ಯರಾಗಿ ಬಿ ಸಿ ರಾಯ್ ವೈದ್ಯಕೀಯ ರಂಗಕ್ಕೆ ಅಮೋಘ ಕೊಡುಗೆಗಳನ್ನು ನೀಡಿದ್ದಾರೆ. ಜಾದವಪುರ್ ಟಿ ಬಿ ಆಸ್ಪತ್ರೆ, ಚಿತ್ತರಂಜನ್ ಸೇವಾ ಸದನ, ಕಮಲಾ ನೆಹರೂ ಮೆಮೋರಿಯಲ್ ಆಸ್ಪತ್ರೆ, ವಿಕ್ಟೋರಿಯಾ ಇನ್ಸ್ ಟಿಟ್ಯೂಶನ್, ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆ ಹಾಗೂ ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷವಾಗಿ ತೆರೆದಿರುವ ಚಿತ್ತರಂಜನ್ ಸೇವಾ ಸದನಗಳ ಸ್ಥಾಪನೆಯಲ್ಲಿ ಬಿ ಸಿ ರಾಯ್ ಪಾತ್ರ ಪ್ರಮುಖವಾಗಿದೆ. ಇವರ ಸೇವೆಯನ್ನು ಪರಿಗಣಿಸಿ 1961ರ ಫೆಬ್ರವರಿ 4ರಂದು ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಮ್ಮ 80 ನೇ ವಯಸ್ಸಿನಲ್ಲಿ 1962 ರಲ್ಲಿ ಹುಟ್ಟಿದ  ದಿನಾಂಕದಂದೇ  ನಿಧನರಾದರು. ನಮ್ಮ ಜೀವನದಲ್ಲಿ ಮತ್ತು ಸಮಾಜದಲ್ಲಿ ವೈದ್ಯರ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು  ಪ್ರತಿ ವರ್ಷ ವೈದ್ಯರ  ದಿನವನ್ನು ಆಚರಿಸಲಾಗುತ್ತದೆ.
2024 ರಲ್ಲಿ ರಾಷ್ಟ್ರೀಯ ವೈದ್ಯರ ದಿನದ ಥೀಮ್ "ಹೀಲಿಂಗ್ ಹ್ಯಾಂಡ್ಸ್, ಕೇರಿಂಗ್ ಹಾರ್ಟ್ಸ್."

ಸಿಹಿಜೀವಿ ವೆಂಕಟೇಶ್ವರ
ತುಮಕೂರು