ವಂಡರ ಕಿಡ್ಸ್ ೨
ಕಲ್ಪನಾ ಚಾವ್ಲಾ
ಅದ್ಭುತ ಗಗನಯಾತ್ರಿ
2 ಮೇ 1997 ರಂದು ಕಲ್ಪನಾ ಚಾವ್ಲಾ ಬಾಹ್ಯಾಕಾಶ ನೌಕೆ ಕೊಲಂಬಿಯಾ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಟೇಕಾಫ್ ಮಾಡಿದಾಗ ಇತಿಹಾಸವನ್ನು ಸೃಷ್ಟಿಸಿದರು. ಇವರು ಬಾಹ್ಯಾಕಾಶಕ್ಕೆ ಹೋದ ಮೊದಲ ಭಾರತೀಯ ಮೂಲದ ಮಹಿಳೆ.
ಕಲ್ಪನಾಳ ಬಾಲ್ಯವು ಹರಿಯಾಣದ ಚಿಕ್ಕ ಪಟ್ಟಣವಾದ ಕರ್ನಾಲ್‌ನಲ್ಲಿ ಕಳೆದಿತ್ತು. ಆಕೆಯ ತಂದೆ ಬನಾರಸಿ ಲಾಲ್ ಚಾವ್ಲಾ ಅವರು ಮೊದಲು ಸಣ್ಣ ಪ್ರಮಾಣದಲ್ಲಿ ಉದ್ಯಮ ಸ್ಥಾಪಿಸಿ ಕ್ರಮೇಣವಾಗಿ ಒಂದು ಟೈರ್ ಕಂಪನಿಯನ್ನು ಸ್ಥಾಪಿಸಿದರು. ಕಲ್ಪನಾ ಅವರ ಬೆಳವಣಿಗೆಯ ವರ್ಷಗಳಲ್ಲಿ ಅವರ ತಂದೆ ವ್ಯವಹಾರದಲ್ಲಿ ಬಿಡುವಿರದ ಕಾರ್ಯದೊತ್ತಡದ ನಡುವೆಯೂ ಆಗಾಗ್ಗೆ ತಮ್ಮ ಮಕ್ಕಳ ಶಿಕ್ಷಣದ ಕಡೆಗೆ ಗಮನ ನೀಡಿ ಪ್ರೋತ್ಸಾಹಿಸಿದರು. ಕಲ್ಪನಾರ ತಾಯಿ ಸಂಯೋಗಿತಾ ಕೂಡ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲೇಬೇಕೆಂದು ದೃಢವಾದ ನಿಶ್ಚಯಿಸಿದ್ದರು.ಆಕೆಯ ಅಕ್ಕ ಸುನೀತಾ ಮೊದಲು ಕಾಲೇಜಿಗೆ ಹೋಗುವ ಮೂಲಕ ಕುಟುಂಬದಲ್ಲಿನ ಸಂಪ್ರದಾಯವನ್ನು ಮುರಿದರು. ಕಲ್ಪನಾ ಅವರ ಮನೆಯ ಸಮೀಪದಲ್ಲಿರುವ ಕರ್ನಾಲ್ ಫ್ಲೈಯಿಂಗ್ ಕ್ಲಬ್‌ನಲ್ಲಿರುವ ಸಣ್ಣ ವಿಮಾನಗಳು ಮತ್ತು ಗ್ಲೈಡರ್‌ಗಳಿಂದ ಯಾವಾಗಲೂ ಆಕರ್ಷಿತರಾಗಿದ್ದರು. ಅವರು ತಮ್ಮ ಮನೆಯ ಮೇಲೆ ಹಾರುತ್ತಿರುವುದನ್ನು ಅವಳು ನೋಡುತ್ತಾ ಮತ್ತು ಆಗಾಗ್ಗೆ ಅವುಗಳೆಡೆಗೆ ಆಸಕ್ತಿ ಬೆಳೆಸಿಕೊಂಡಳು. ಶಾಲೆಯ ತರಗತಿಯಲ್ಲಿ ಇತರ ಮಕ್ಕಳು ಮನೆಗಳು, ಮರಗಳು, ಪರ್ವತಗಳು ಮತ್ತು ಕಾಡುಗಳು ಮುಂತಾದ ಹೆಚ್ಚು ಪರಿಚಿತ ವಸ್ತುಗಳನ್ನು ಚಿತ್ರಿಸುತ್ತಿದ್ದಾಗ ಕಲ್ಪನಾ ಏರೋಪ್ಲೇನ್ ನ ಚಿತ್ರಗಳನ್ನು ಬಿಡಿಸುತ್ತಿದ್ದರು.
"ನೀವು ಏನನ್ನಾದರೂ ಮಾಡಲು ಬಯಸಿದರೆ, ಅದನ್ನು ಪಡೆಯಲು ಯಾವ ಸ್ಥಾನದಲ್ಲಿದ್ದೀರಿ ಎಂಬುದು ಮುಖ್ಯ"
ಬೇಸಿಗೆಯ ರಾತ್ರಿಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ತಮ್ಮ ಟೆರೇಸ್ ಮೇಲೆ ಮಲಗಿದಾಗ ಕಲ್ಪನಾ ಸದಾ ಮಿನುಗುವ ನಕ್ಷತ್ರಗಳಿಂದ ಆಕರ್ಷಿತಳಾದಳು.
ಒಮ್ಮೆ ಕಲ್ಪನಾಳ ತಂದೆ ಅವಳನ್ನು ಕರ್ನಾಲ್ ಫ್ಲೈಯಿಂಗ್ ಕ್ಲಬ್ ಗೆ ಕರೆದುಕೊಂಡು ಹೋಗಿ ಲಘು ವಿಮಾನದಲ್ಲಿ ಕೂರಿಸಿದರು. ಟೇಕ್ ಆಫ್ ಆದ ಕ್ಷಣ ಅವಳ ಜೀವನದ ಅತ್ಯಂತ ರೋಮಾಂಚಕ ಕ್ಷಣವಾಗಿತ್ತು. ಅಂದಿನಿಂದ ಅವಳು "ಫ್ಲೈಟ್ ಇಂಜಿನಿಯರ್" ಎಂದು ನಿರ್ಧರಿಸಿಬಿಟ್ಟಳು.
ತನ್ನ ಗುರಿ ತಲುಪಲು ಓದಿದ ಕಲ್ಪನ ಬಹಳ ಬುದ್ದಿವಂತೆಯಾಗಿದ್ದಳು. ತನ್ನ ಕಾಲೇಜಿನಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಓದುತ್ತಿದ್ದ ಏಕೈಕ ಹುಡುಗಿ ಇವರಾಗಿದ್ದರು. ತನ್ನ ಪದವಿಯ ನಂತರ ಅವರು ಹೆಚ್ಚಿನ ಅಧ್ಯಯನಕ್ಕಾಗಿ USA ಗೆ ತೆರಳಿದರು. 1995 ರಲ್ಲಿ ಅವರು ಅಲ್ಲಿ ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಗೆ ಸೇರಿಕೊಂಡರು ಮತ್ತು ಗಗನಯಾತ್ರಿಯಾಗಿ ತರಬೇತಿಯನ್ನು ಪ್ರಾರಂಭಿಸಿದರು.
ಫೆಬ್ರವರಿ 2003 ರಲ್ಲಿ, ಬಾಹ್ಯಾಕಾಶ ನೌಕೆ ಕೊಲಂಬಿಯಾದಲ್ಲಿ ತನ್ನ ಎರಡನೇ ಕಾರ್ಯಾಚರಣೆಯಲ್ಲಿ ಕಲ್ಪನಾ ಮತ್ತು ಅವರ ಆರು ಸಿಬ್ಬಂದಿ ಸಹಚರರು ಭೂಮಿಗೆ ಹಿಂದಿರುಗುವಾಗ ನೌಕೆಯು ಅಸಮರ್ಪಕವಾಗಿ ಕಾರ್ಯನಿರ್ವಹಿಸಿದಾಗ ದುರಂತವಾಗಿ ಸಾವನ್ನಪ್ಪಿದರು. ಆಗ ಕಲ್ಪನಾಗೆ ಕೇವಲ ನಲವತ್ತೊಂದು ವರ್ಷ. ಅವರ ಧೈರ್ಯ ಮತ್ತು ಸಮರ್ಪಣೆಗಾಗಿ, ಅವರು USA ನಲ್ಲಿ ಉನ್ನತ ನಾಗರಿಕ ಗೌರವಗಳನ್ನು ಪಡೆದರು. ತನ್ನ ತಾಯ್ನಾಡಿನಲ್ಲಿ, ಕಲ್ಪನಾ ಚಾವ್ಲಾ ಸ್ಪೂರ್ತಿದಾಯಕ ತಾರೆಯಾಗಿ ಉಳಿದಿದ್ದಾರೆ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
No comments:
Post a Comment