02 July 2024

ಪಿನ್ ನಂಬರ್ ಗೊತ್ತಾ?

 


 ಪಿನ್ ನಂಬರ್ ಗೊತ್ತಾ?


ನಾವು ನಮ್ಮ ಪ್ರಮುಖ ದಾಖಲೆಗಳನ್ನು ಬರೆಯುವಾಗ , ಅರ್ಜಿಗಳನ್ನು ತುಂಬುವಾಗ ಪಿನ್ ಕೋಡ್ ಅಥವಾ ಜಿಪ್ ಕೋಡ್ ತುಂಬಲೇ ಬೇಕು.ಎಷ್ಟೋ ಜನರಿಗೆ ಈ ಪಿನ್ ಬಗ್ಗೆ ಗೊತ್ತೇ ಇರುವುದಿಲ್ಲ ‌ಕೆಲವರು ತಕ್ಷಣವೇ ಗೂಗಲಿಸಿ ಆ ಪಿನ್ ನಮೂದಿಸಿ ಮತ್ತೆ ಮರೆತುಬಿಡುವರು. ಇದು ಮರೆಯುವಂತದ್ದಲ್ಲ ನಮ್ಮ ನಾವಿರುವ ಸ್ಥಳದ ಮೂಲ ವಿಳಾಸ ಅದನ್ನು ಸದಾ ನೆನೆಪಿಟ್ಟುಕೊಳ್ಳುವುದು ಅಗತ್ಯ ಮತ್ತು ಅನಿವಾರ್ಯ. 

ಪಿನ್ ಕೋಡ್ ,ಪೋಸ್ಟಲ್ ಇಂಡೆಕ್ಸ್ ,ಅಂಚೆ ಸೂಚ್ಯಂಕ ಸಂಖ್ಯೆ (ಪಿನ್ ಕೋಡ್) ಎಂಬುದು ಆಂಗ್ಲ ಭಾಷೆಯ ಪೋಸ್ಟಲ್ ಇಂಡೆಕ್ಸ್ ನಂಬರ್ (Postal Index Number) ಎಂಬುದರ ಪಾರಿಭಾಷಿಕ ಪದ. ಅದು ಅಂಚೆ ಕಛೇರಿಗಳಿಗೆ ಭಾರತೀಯ ಅಂಚೆ ಇಲಾಖೆಯ ಆಡಳಿತವು ಬಳಸುವ ಸಂಖ್ಯಾ ವ್ಯವಸ್ಥೆ. ಅದು ಆರು ಅಂಕೆಗಳನ್ನು ಹೊಂದಿರುತ್ತದೆ. ಈ ವ್ಯವಸ್ಥೆಯನ್ನು 15 ಆಗಸ್ಟ್ 1962 ರಂದು ಜಾರಿಗೆ ತರಲಾಯಿತು.

ಎಂಟು ಪ್ರಾದೇಶಿಕ ವಲಯಗಳು ಮತ್ತು ಭಾರತೀಯ ಸೇನೆಗಾಗಿಯೇ ಒಂದು ಸಕ್ರಿಯವಾದ ವಲಯ ಸೇರಿದಂತೆ ಭಾರತದಲ್ಲಿ ಒಂಬತ್ತು ಪಿನ್ ಕೋಡ್ ವಲಯಗಳು ಇವೆ. ಪಿನ್ ಕೋಡ್ ಮೊದಲ ಅಂಕಿಯು "ವಲಯ"ವನ್ನೂ, ಎರಡನೇ ಅಂಕಿಯ "ಉಪವಲಯ"ವನ್ನೂ, ಮೂರನೇ ಅಂಕಿಯು ಅಂಚೆ-ವಿಂಗಡಣೆಯ "ಜಿಲ್ಲೆ"ಯನ್ನೂ ಸೂಚಿಸುತ್ತವೆ. ಕೊನೆಯ ಮೂರು ಅಂಕೆಗಳ ಗುಂಪು "ಅಂಚೆ ಕಛೇರಿ"ಯನ್ನು ನಿರ್ದೇಶಿಸುತ್ತದೆ.

ಭಾರತ ಸರ್ಕಾರದ ಸಂವಹನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀರಾಮ್ ಭಿಕಾಜಿ ವೆಲಂಕರ್ ಭಾರತದಲ್ಲಿ ಮೊದಲು ಪಿನ್ ವ್ಯವಸ್ಥೆ  ಪರಿಚಯಿಸಿದರು. ತಪ್ಪಾದ ವಿಳಾಸಗಳು, ಒಂದೇ ರೀತಿಯ ಸ್ಥಳದ ಹೆಸರುಗಳು ಮತ್ತು ಸಾರ್ವಜನಿಕರು ಬಳಸುವ ವಿವಿಧ ಭಾಷೆಗಳಲ್ಲಿ ಗೊಂದಲವನ್ನು ನಿವಾರಿಸಲು, ಹಸ್ತಚಾಲಿತ ವಿಂಗಡಣೆ ಮತ್ತು ಅಂಚೆ ವಿತರಣೆಯನ್ನು ಸರಳಗೊಳಿಸುವ ಈ ವ್ಯವಸ್ಥೆಯನ್ನು ಪರಿಚಯಿಸಲಾಯಿತು.


ಎಂಟು ಪ್ರಾದೇಶಿಕ ವಲಯಗಳು ಮತ್ತು ಒಂದು ಕ್ರಿಯಾತ್ಮಕ ವಲಯ (ಭಾರತೀಯ ಸೇನೆಗೆ) ಸೇರಿದಂತೆ ಭಾರತದಲ್ಲಿ ಒಂಬತ್ತು ಅಂಚೆ ವಲಯಗಳಿವೆ. 



ಸಿಹಿಜೀವಿ ವೆಂಕಟೇಶ್ವರ

ತುಮಕೂರು


No comments: