*ನವಯುಗದಲ್ಲಿ ತಾಯಿಯ ಪಾತ್ರ*
ಮಾತೃ ದೇವೋಭವ ...ಎಂದು ಆರಂಭವಾಗುವ ಶ್ಲೋಕದ ಆದಿಯಾಗಿ ಮಾತೆಗೆ ಜಗತ್ತಿನಲ್ಲೇ ಒಂದು ಪೂಜ್ಯ ಸ್ಥಾನ ನೀಡಿದೆ .ಯಾವುದೇ ವ್ಯಕ್ತಿಯ ಸಂಸ್ಕಾರ. ಸಂಘಟನೆ, ಶಿಸ್ತು, ಸಂಯಮ,ಮುಂತಾದ ಸದ್ಗುಣ ಗಳ ಹಿಂದೆ ತಾಯಿಯ ಛಾಪು ಇದ್ದೇ ಇರುತ್ತದೆ.
ಹಿಂದೆ ಮುಂದೆ ಎಂದೆಂದಿಗೂ ತಾಯಿಯ ಪಾತ್ರವನ್ನು ತಾಯಿಯೇ ನಿರ್ವಹಿಸಲು ಸಾದ್ಯ ಹಿಂದಿನ ಕಾಲದ ತಾಯಂದಿರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ತಮ್ಮ ಮಕ್ಕಳ ಬೆಳವಣಿಗೆಗೆ ಕಾರಣಕರ್ತರಾಗಿರುವುದನ್ನು ಕಂಡಿದ್ದೇವೆ ಇದಕ್ಕೆ ಕೆಲವು ಉದಾಹರಣೆ ನೀಡುವುದಾದರೆ .ಶಿವಾಜಿಯ ತಾಯಿ ಜೀಜಾಬಾಯಿ.ನೆಹರೂ ರವರ ತಾಯಿ ಸ್ವರೂಪರಾಣಿ ಈಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ.
ಬದಲಾದ ಕಾಲಘಟ್ಟದಲ್ಲಿ ಇಪ್ಪತ್ತೊಂದನೇ ಶತಮಾನದ, ತಂತ್ರಜ್ಞಾನ ಯುಗದಲ್ಲಿ ಮಾತೆಯರ ಪಾತ್ರ ಮತ್ತು ಅವರ ಜವಾಬ್ದಾರಿಗಳು ವಿವಿಧ ಆಯಾಮಗಳಲ್ಲಿ ವಿಸ್ತಾರಗೊಂಡಿವೆ ಎಂದರೆ ತಪ್ಪಲ್ಲ
*ನವಯುಗದಲ್ಲಿ ತಾಯಿಯ ಪಾತ್ರ*
ನವಯುಗದಲ್ಲಿ ತಾಯಿಯ ಪಾತ್ರವನ್ನು ಈ ಕೆಳಗಿನಂತೆ ವಿವರಿಸಬಹುದು
*1 ಮಕ್ಕಳ ಪಾಲನೆ*
ಹಿಂದಿನ ಕಾಲದಂತೆ ಕೇವಕ ಮಕ್ಕಳ ಡೈಪರ್ ಬದಲಾಯಿಸಿ, ಅವರ ತರಗತಿಯ ಪೋಷಕರ ಸಭೆಯಲ್ಲಿ ಪಾಲ್ಗೊಂಡರೆ ಬಹುತೇಕ ಕೆಲಸ ಮುಗಿದಂತಾಗುತ್ತಿತ್ತು ಆದರೆ ಇಂದಿನ ಆಧುನಿಕ ತಾಯಂದಿರು ತಮ್ಮ ಮಕ್ಕಳ ಸ್ನೇಹಿತರ ಹುಟ್ಟು ಹಬ್ಬದ ಆಚರೆಯಿಂದ ಹಿಡಿದು ಹೊಸದಾಗಿ ಮಾರುಕಟ್ಟೆಗೆ ಬಂದಿರುವ ಬೈಸಿಕಲ್, ಆಟಿಕೆಗಳು, ಕಂಪ್ಯೂಟರ್ ಗೇಮ್,ಮುಂತಾದವುಗಳ ಬಗ್ಗೆ ಅಪ್ಡೇಟ್ ಆಗಿ ಮಕ್ಕಳಿಗೆ ಮಗುವಾಗಿ ಹೊಂದಿಕೊಂಡು ಸಂಧರ್ಭಕ್ಕೆ ತಕ್ಕಂತೆ ಮಾರ್ಗದರ್ಶಕಳಾಗಿ ಮಕ್ಕಳ ಪಾಲನೆ ಮಾಡಬೇಕಾಗಿದೆ .
*2 ಆರೋಗ್ಯದ ಬಗ್ಗೆ ಕಾಳಜಿ*
ಜಾಗತೀಕರಣ ಪರಿಣಾಮವಾಗಿ ಇಂದು ನಮ್ಮ ಮನೆ ಬಾಗಿಲಿಗೆ ಪಿಜಾ ,ಬರ್ಗರ್,ಮಾಕ್ಡೊನಾಲ್ಡ್ ಲಗ್ಗೆ ಇಟ್ಟಿವೆ ಈ ಜಂಕ್ ಪುಡ್ಗಳಿಂದ ನಮ ಮಕ್ಕಳ ಅರೋಗ್ಯ ಕಾಪಾಡುವುದು ನವಯುಗದ ತಾಯಂದಿರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಮೊದಲು ತಾಯಂದಿರು ತಮ್ಮ ಆರೋಗ್ಯ ಕಾಪಾಡಿಕೊಂಡು ಮಕ್ಕಳ ಮತ್ತು ಕುಟುಂಬದ ಸದಸ್ಯರ ಆರೋಗ್ಯ ಕಾಪಾಡಲು ಪಣತೊಡಬೇಕು .
*3 ತಂತ್ರಜ್ಞಾನದ ತಿಳುವಳಿಕೆ*
ಇಂದಿನ ತಂತ್ರಜ್ಞಾನದ ಯುಗದಲ್ಲಿ ತಮ್ಮ ಮಕ್ಕಳು ವಿವಿಧ ವೀಡಿಯೋ ಆಡಿಯೋ ಡೌನ್ಲೋಡ್ ಮಾಡಿ ತಮ್ಮ ಮೊಬೈಲ್ ಐ ಪಾಡ್ ಗಳ ಬಳಕೆ ಮಾಡುತ್ತಿದ್ದರೆ ಕೊನೆ ಪಕ್ಷ ಅವರು ಯಾವ ವೀಡಿಯೋ, ನೋಡುತ್ತಿದ್ದಾನೆ ಎಂದು ತಿಳಿದು ಆ ಮಕ್ಕಳು ದಾರಿ ತಪ್ಪಿದಾಗ ಸೂಕ್ತ ಬುದ್ದಿ ಹೇಳಲು
ಹಾಗೂ ಕೆಲ ಸಮಸ್ಯೆಗಳನ್ನು ಬಗೆಹರಿಸಲು ಇಂದಿನ ಆಧುನಿಕ ತಾಯಿ ಈ ತಂತ್ರಜ್ಞಾನದ ಕನಿಷ್ಟ ತಿಳುವಳಿಕೆ ಪಡೆದಿರಬೇಕು.
*4 ಉತ್ತಮ ಸಂಬಂದ ಮತ್ತು ಸಂವಹನ*
ಇಂದಿನ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಸ್ವೇಚ್ಛೆಯಾಗಿ ಕಲಿಯಬಾರದ ಕೆಟ್ಟ ಆಟಗಳನ್ನು ಕಲಿತು ಮುಕ್ತ ಲೈಂಗಿಕ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಅನರ್ಥಗಳನ್ನು ಮಾಡಿಕೊಂಡು ಪೋಷಕರನ್ನು ಮತ್ತು ಸಮಾಜವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವುದನ್ನು ಕಾಣುವೆವು
ಇದನ್ನು ಪರಿಹರಿಸಲು ತಾಯಿಯ ಮುಕ್ತ ಮಾತಕತೆ ಉತ್ತಮ ಸಂವಹನ ಮಾರ್ಗದರ್ಶನ ಇಂದು ಅಗತ್ಯವಾದ ಅಂಶವಾಗಿದೆ
*5 ಸಮಯದ ಮಹತ್ವ*
ಇಂದಿನ ಅಧುನಿಕ ಯುಗದಲ್ಲಿ ಮಾನವ ಸಮಯ ಮತ್ತು ಹಣದ ಹಿಂದೆ ಅಕ್ಷರಶಃ ಓಡುತ್ತಾ ಇದ್ದಾರೆ. ಮನೆಯ ಎಲ್ಲಾ ಸದಸ್ಯರು ನಮಗೆ ಸಮಯವಿಲ್ಲ ಎಂದು ದೂರುವಾಗ ತಾಯಿ ಕೆಲವೊಮ್ಮೆ ಹೊರಗಡೆ ಕೆಲಸ ಮಾಡುತ್ತಿದ್ದರೂ ಮನೆಯಲ್ಲಿ ತನ್ನ ಮಕ್ಕಳು ಮತ್ತು ಕುಟುಂಬಕ್ಕೆ ಗುಣಾತ್ಮಕ ಸಮಯ ನೀಡಲೇಬೇಕು ಇದು ಕುಟುಂಬದ ಸಂಬಂಧಗಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ
ಒಟ್ಟಿನಲ್ಲಿ ಹೇಳುವುದಾದರೆ ಇಂದಿನ ನವಯುಗದ ತಾಯಂದಿರು ಅಷ್ಟದಿಕ್ಕುಗಳಲ್ಲೂ ಕಾರ್ಯನಿರ್ವಹಿಸುವ ಮೂಲಕ ದಶಕಂಠ ಮತ್ತು ದಶ ಹಸ್ತಗಳ ಪಡೆದರೂ ಅವರು ನಿರ್ವಹಣೆ ಮಾಡುವ ಕೆಲಸಗಳು ಬಾಕಿ ಇವೆಯೇನೊ ಅನಿಸುತ.ಆದರೂ ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪಾತ್ರ ನಿರ್ವಹಣೆ ಮಾಡಿದರೆ ನವಯುಗ ತಾಯಂದಿರು ನಮ್ಮ ಭವ್ಯ ಸಮಾಜ ನಿರ್ಮಾಣದ ಭದ್ರ ಬುನಾದಿಯನ್ನು ಹಾಕುವ ಶಕ್ತಿ ದೇವತೆಗಳೆಂದರೆ ತಪ್ಪಾಗಲಾರದು
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments:
Post a Comment