25 February 2018

ಸ್ನೇಹಿತನ ನೋವು (ಕಿರುಗಥೆ)

ಕಿರುಗಥೆ

*ಸ್ನೇಹಿತನ ನೋವು*

"ರಮೇಶ್ ಈ ವರ್ಷ ಆದರೂ ನೀನು ಮದುವೆ ಆಗಬಹುದಾ?" ಎಂದು ಗೆಳೆಯ ಸತೀಶ್ ಕೇಳಿದಾಗ ಕೇವಲ ಮುಗಯಳುನಗೆಯ ಉತ್ತರ ನೀಡಿ ,ಎರಡನೇ ಪಿ.ಯು.ಸಿ ಉತ್ತರ ಪತ್ರಿಕೆ ಮೌಲ್ಯ ಮಾಪನ ಮಾಡಲು ಮುಂದಾದರೂ ಪುನಃ ಪ್ರಶ್ನೆಗಳ ಸುರಿಮಳೆ ಗರೆಯಲು ಸತೀಶ್ ಮುಂತಾದ." ನಿನ್ನ ನಾಲ್ಕು ತಂಗಿಯರ ಮದುವೆ ಮಾಡಿದೆಯಲ್ಲ ಈಗಾಗಲೆ ನಿನಗೆ ೪೦ ವರ್ಷ ದಾಟೊ  ದಾಟಿದೆ,ಜೊತೆಗೆ ಲೈನ್ ಕ್ಲಿಯರ್ ಅಗಿದೆ ಇನ್ನೂ ಯಾಕೆ ತಡ?" ಪ್ರಶ್ನೆ ಉತ್ತರ ಮುಗಿಯುವ ಮೊದಲೆ ಪ್ಯೂನ್  "ರಮೇಶ್ ಸರ್ ನಿಮ್ಮನ್ನು ಯಾರೋ ಹುಡುಕಿಕೊಂಡು ಬಂದಿದ್ದಾರೆ" ಎಂದ
ಅಜಾನುಭಾಹು ಗಿರಿಜಾ ಮೀಸೆ ಒರಟು ಮುಖ ನೋಡಿದ ಕೂಡಲೆ ಅವರು ಬಡ್ಡಿ ತಿಮ್ಮಪ್ಪ ಎಂದು ಗುರುತಿಸಿದ. ಹೊರಗೆ ಹೋಗಿ ತಿಮ್ಮಪ್ಪ ನ ಬಳಿ ರಮೇಶ್ ದೈನೇಸಿಯಾಗಿ ‌ಬೇಡಿಕೊಳ್ಳುವ ನೋಟ  ಸತೀಶ್ ನಿಗೆ ಆಶ್ಚರ್ಯಕರವಾಗಿ ಕಂಡಿತು ಕಾಲೇಜು ತರಗತಿಯಲ್ಲಿ ವಿದ್ಯಾರ್ಥಿಗಳ  ಮುಂದೆ ಸಿಂಹದಂತೆ ಗರ್ಜನೆ ಮಾಡಿ ಕಂಚಿನ ಕಂಠದಲ್ಲಿ ಪಾಠ ಗಳನ್ನು ಮಾಡುವ ರಮೇಶ್ ಇವರಾ? ಎಂದು ಮರುಗಲಾರಂಭಿಸಿದರು.
ಹಿಂತಿರುಗಿ ಬಂದ ರಮೇಶ್ ಮುಖದಲ್ಲಿ ದುಗುಡವಿದ್ದರೂ ತೋರ್ಪಡಿಸಿಕೊಳ್ಳದೇ "ಸತೀಶ್  ಟೀ ಕುಡಿಯಲು ಹೊರಗೆ ಹೋಗೋಣ ಬಾ " ಎಂದಾಗ ಸ್ನೇಹಿತನ ಕಷ್ಟ ಅರಿಯದ ನಾನು ಸುಮ್ಮನೆ ಮದುವೆಯ ಬಗ್ಗೆ ಅಸಂಬದ್ಧ ಪ್ರಶ್ನೆ ಕೇಳಿದೆನಲ್ಲ ಎಂದು ಸತೀಶ್ ಮನದಲ್ಲೇ ನೊಂದುಕೊಂಡನು .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

No comments: