ತಂಗಾಳಿಯು ಸುಳಿದಾಗ ನಿನದೆ ನೆನಪು
ಬೆಳದಿಂಗಳ ಹಾಲ್ಚೆಲ್ಲಿದಾಗ ನಿನದೆ ನೆನಪು
ತರುಲತೆಗಳು ಮರವ ತಬ್ಬಿವೆ ಮುದದಿ
ಸರಸದ ಸರಿಗಮ ನೆನದಾಗ ನಿನದೆ ನೆನಪು
ಗೊರವಂಕ ಕೋಗಿಲೆಗಳ ಇಂಪಾದ ಗಾನ
ಶಿವಶಿವೆಯರ ನಾಟ್ಯ ಕಂಡಾಗ ನಿನದೆ ನೆನಪು
ಧಮ್ಮಿಕ್ಕಿ ಹರಿಯುತಿದೆ ಹೃದಯದಿ ಪ್ರೇಮನದಿ
ಜುಳು ಜುಳು ಜಲದ ಸದ್ದು ಕೇಳಿದಾಗ ನಿನದೆ ನೆನಪು
ಸೀಜೀವಿಯು ತಡೆದರೂ ಕಾಲವು ನಿಲುತಿಲ್ಲ
ಬೆಳಗು ಬೈಯ್ಗು ಸರಿದಾಗ ನಿನದೆ ನೆನಪು
*ಸಿ .ಜಿ.ವೆಂಕಟೇಶ್ವರ*
*ಗೌರಿಬಿದನೂರು*
No comments:
Post a Comment