ದಾರಾವಾಹಿಗಳ ದುಷ್ಪರಿಣಾಮಗಳು
ಮನುಷ್ಯ ನಿಗೆ ಅನ್ನ ನೀರು ವಸತಿಯಷ್ಟೆ ಮನರಂಜನೆಯು ಸಹ ಅಗತ್ಯ ,ಹಿಂದಿನ ಕಾಲದಿಂದಲೂ ಮನರಂಜನೆ ವಿವಿಧ ಪ್ರಕಾರಗಳಲ್ಲಿ ಇತ್ತು ಸಂಗೀತ ,ಭರತನಾಟ್ಯ,ನಾಟಕ, ಯಕ್ಷಗಾನ ಕೋಲಾಟ,ಡೊಳ್ಳು ಕುಣಿತ ಅವುಗಳಿಂದ ನಮ್ಮ ಸಂಸ್ಕೃತಿ ಜ್ಞಾನ ಅರೋಗ್ಯ ಬೆಳವಣಿಗೆಗೆ ಜೊತೆಗೆ, ಸಮಯದ ಸದುಪಯೋಗ ಆಗುತ್ತಿತ್ತು ಬದಲಾದ ಕಾಲಘಟ್ಟದಲ್ಲಿ ಚಲನಚಿತ್ರ, ದೂರದರ್ಶನ ಕ್ರಾಂತಿಯ ಪರಿಣಾಮವಾಗಿ ಮೊದಲು ಕೇವಲ ಸಾಮಾಜಿಕ, ಧಾರ್ಮಿಕ, ಪೌರಾಣಿಕ ಕಾರ್ಯಕ್ರಮ ಪ್ರಸಾರ ಮಾಡುತ್ತಿದ್ದರು.
ಬಬ್ರುವಾಹನ, ಮಯೂರ ಶ್ರೀನಿವಾಸ ಕಲ್ಯಾಣ, ಬಂಗಾರದ ಮನುಷ್ಯ ಮುಂತಾದ ಚಲನಚಿತ್ರ ನೋಡಿ ಬದಲಾದ ಎಷ್ಟೋ ಕುಟುಂಬಗಳು. ವ್ಯಕ್ತಿಗಳು ಬದಲಾಗಿರುವುದನ್ನು ಕಂಡಿದ್ದೇವೆ .
ಜಾಗತೀಕರಣ. ಉದಾರೀಕರಣ,ಖಾಸಗೀಕರಣ ಯಾಂತ್ರೀಕರಣ ಮುಂತಾದ ಕರಣಗಳ ಪ್ರಭಾವದಿಂದಾಗಿ ಇಂದು ನಮ್ಮ ನಮ್ಮ ಮನೆಯ ದೂರದರ್ಶನದಲ್ಲಿ ನೂರಾರು ವಾಹಿನಿಗಳು ದಾಂಗುಡಿ ಇಟ್ಟಿವೆ.
ಈ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಹುತೇಕ ಕಾರ್ಯಕ್ರಮ ಗಳು ನಮ್ಮ ಕೌಟುಂಬಿಕ ವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸುತ್ತಿವೆ.
ಈ ವಾಹಿನಿಗಳಲ್ಲಿ ಸಾಧ್ಯ?ರವಾಗುತ್ತಿರುವ ಬಹುತೇಕ ಧಾರವಾಹಿಗಳು ನಮ್ಮನ್ನು ಹಿಂಸೆಗೆ ಪ್ರಚೋದಿಸುವ ಮತ್ತು ನೈತಿಕ ಅಧಃಪತನದೆಡೆಗೆ ಕೊಂಡೊಯ್ಯತ್ತಿವೆ ಎಂದರೆ ತಪ್ಪಾಗಲಾರದು.
ಇಂದಿನ ಎಲ್ಲಾ ಧಾರವಾಹಿಗಳಲ್ಲಿ ವಿಜೃಂಭಣೆಯಿಂದ ತೋರಿಸುತ್ತಿರುವುದು ಅತ್ತೆ ಸೊಸೆ ಜಗಳ, ಪತಿ ಪತ್ನಿಯರ ಅನೈತಿಕ ಸಂಬಂಧ, ಅವುಗಳ ಮುಚ್ಚಲು ಮಾಡುವ ಕೊಲೆ, ಅನ್ಯಾಯ, ಅಕ್ರಮ,ಇತ್ಯಾದಿ ಇತ್ಯಾದಿ ಇಂತಹ ಧಾರಾವಾಹಿ ನೋಡುವ ನಮ್ಮ ಮನಸು ಮತ್ತು ಮನಗಳು ಕಲುಷಿತ ಆಗದೇ ಇರಲು ಹೇಗೆ ಸಾಧ್ಯ?
ಇನ್ನೂ ಕೆಲವು ಧಾರಾವಾಹಿ ಗಳು ಅನ್ಯಾಯದ ಮಾರ್ಗದಲ್ಲಿ ಸಂಪಾದನೆ ಮಾಡಲು ಪ್ರೇರಣೆ ನೀಡುವ ದಿಡೀರ್ ಸಾಹುಕಾರರಾಗಲು ಅಕ್ರಮ ಮಾರ್ಗವನ್ನು ವಿಜೃಂಭಣೆಯಿಂದ ತೋರಿಸುವ ಮೂಲಕ ಜನರನ್ನು ಅನ್ಯಾಯದ ಕಡೆ ಪ್ರೇರೇಪಣೆ ಮಾಡುತ್ತವೆ..
ಹಾಗಾದರೆ ಇದಕ್ಕೆ ಪರಿಹಾರ ಏನು?
ಮೊದಲನೆಯದಾಗಿ ನಾವೆಲ್ಲರೂ ಇಂತಹ ಕ್ರೌರ್ಯ, ಹಿಂಸೆಯಿಂದ ಕೂಡಿದ ಧಾರಾವಾಹಿ ನೋಡುವುದು ನಿಲ್ಲಿಸಬೇಕು
ಧಾರಾವಹಿ ನೋಡಲೇಬೇಕಾದರೆ ಭಕ್ತಿ ಪ್ರಧಾನ ಜ್ಞಾನ ಪ್ರಧಾನ ಧಾರಾವಾಹಿಗಳನ್ನು ನೋಡಬಹುದು
ಧಾರವಾಹಿ ನಿರ್ಮಾಣ ಮಾಡುವವರು ನಮ್ಮ ಸಂಸ್ಕೃತಿ, ಪರಂಪರೆಯ ಬಗ್ಗೆ ತಿಳಿದು ಅವುಗಳ ಬೆಳವಣಿಗೆಗೆ ಪೂರಕವಾದ ಧಾರಾವಾಹಿ ನಿರ್ಮಾಣ ಮಾಡಬೇಕು.
ಧಾರವಾಹಿಗಳಲ್ಲಿ ಬಳಸು ಭಾಷೆ ಕುಟುಂಬದ ಎಲ್ಲರೂ ಕುಳಿತು ಕೇಳುವಂತಿರಬೇಕು ಮತ್ತು ನಮ್ಮ ಭಾಷೆಯ ಬೆಳವಣಿಗೆಗೆ ಪೂರಕವಾಗಿರಬೇಕು.
ಒಟ್ಟಿನಲ್ಲಿ ಎಲ್ಲಾ ವಾಹಿನಿಯಲ್ಲಿ ಬರುವ ಬಹುತೇಕ ಧಾರಾವಾಹಿ ಗಳು ನಮ್ಮ ಮನ ಮನೆ ಒಡೆಯಲು ಪೂರಕವಾಗಿವೆ .ಈಗ ನಾವು ಎಚ್ಚೆತ್ತು ಕೊಳ್ಳದಿದ್ದರೆ ಈಗಾಗಲೇ ವಿದೇಶಗಳಲ್ಲಿ ನಡೆವ ಅಕ್ರಮ ,ಕೊಲೆ ಹಿಂಸಾಚಾರ, ಮಕ್ಕಳ ಕೈಯಲ್ಲಿ ಗನ್ ,ಗಳಿಂದ ಅವಾಂತರ ಲೈಂಗಿಕ ಸ್ವೇಚ್ಚಾಚಾರ,ಏಕಪಾಲಕ ಸಂಸಾರ ಮುಂತಾದ ಅನರ್ಥಗಳು ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರಲಿವೆ .ಇವನ್ನು ತಪ್ಪಿಸಲು ಮಾಧ್ಯಮದವರು ಜವಾಬ್ದಾರಿ ಪ್ರದರ್ಶನವನ್ನು ಮಾಡಲಿ ನಾವು ಎಚ್ಚೆತ್ತುಕೊಂಡು ಸುಂದರ ಸಭ್ಯ ,ಮಾದರಿ ಸಮಾಜ ನಿರ್ಮಾಣ ಮಾಡಿ ಭಾರತವನ್ನು ಒಂದು ಮಾದರಿ ದೇಶವಾಗಿಸೋಣ
*ಸಿ.ಜಿ.ವೆಂಕಟೇಶ್ವರ*
ಶಿಕ್ಷಕರು.
ಹವ್ಯಾಸಿ ಬರಹಗಾರರು
*ಗೌರಿಬಿದನೂರು*
No comments:
Post a Comment