ಆಂತರಿಕ ಶಾಂತಿ ಹೊಂದುವುದು ಹೇಗೆ?
ಹೊರಗೆ ಅಶಾಂತಿಯ ವಾತಾವರಣವಿದ್ದರೂ ಸಾಧಕರು ತಮ್ಮ ಆಂತರಿಕ ಶಾಂತಿಯನ್ನು ಕಾಯ್ದುಕೊಂಡು ಸಂತಸದಿಂದ ಇರುವುದನ್ನು ಗಮನಿಸಿದ್ದೇವೆ.
ನಾವೂ ಆಂತರಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ಅದಕ್ಕೆ ನಮ್ಮ ಜೀವನದಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಸಾಕು.
ನಮ್ಮ ಜೀವನದಲ್ಲಿ ಕೆಲ ವಿಷಕಾರಿ ಜನರಿರುತ್ತಾರೆ ಅವರು ಸರ್ವರಿಗೂ ವಿಷ ಕಕ್ಕುವುದೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡಿರುತ್ತಾರೆ ಅಂತವರಿಂದ ಆದಷ್ಟೂ ದೂರವಿರೋಣ.
ಕೆಲವೊಮ್ಮೆ ನಮ್ಮಲ್ಲಿ ನಕಾರಾತ್ಮಕ ಆಲೋಚನೆಗಳು ಮೂಡುವುದು ಸಹಜ ಇದರ ಜೊತೆಯಲ್ಲಿ ನಕಾರಾತ್ಮಕ ಆಲೋಚನೆ ಮಾಡುವರು ನಮ್ಮ ಸುತ್ತುವರೆದರೆ ಮುಗಿಯಿತು. ಇವರು ನಮ್ಮನ್ನು ಎಂದಿಗೂ ಬೆಳೆಯಲು ಸಹಾಯ ಮಾಡುವುದಿಲ್ಲ. ಇಂಥವರಿಂದ ದೂರವಿರೋಣ.
ಜೀವನದಲ್ಲಿ ಕೆಲವೊಮ್ಮೆ ಸಂಘರ್ಷ ಮಾತಿನ ಚಕಮಕಿ ನಡೆಯುತ್ತದೆ. ನಮ್ಮ ಶಾಂತಿಗಾಗಿ ಎಲ್ಲರೊಂದಿಗೆ ಯುದ್ಧಕ್ಕೆ ಇಳಿಯುವುದನ್ನು ಕಡಿಮೆ ಮಾಡಿಕೊಂಡು ಬುದ್ಧಿವಂತಿಕೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳೋಣ. ಪ್ರತಿಯೊಂದಕ್ಕೂ ಅನಗತ್ಯವಾಗಿ ನಮ್ಮ ಶಕ್ತಿ ವ್ಯಯಮಾಡುತ್ತಾ ಪ್ರತಿಕ್ರಿಯೆಯನ್ನು ನೀಡುವ ಅಗತ್ಯವಿಲ್ಲ.
ನಾವೇನು ರೋಬೋ ಅಥವಾ ಯಂತ್ರಗಳಲ್ಲ ನಮಗೂ ದಣಿವು ಸಹಜ ಅಂತಹ ಸಂದರ್ಭದಲ್ಲಿ ವಿಶ್ರಾಂತಿ ಪಡೆಯೋಣ. ಬಹಳ ದಣಿದಂತೆ ಅನಿಸಲು ಪ್ರಾರಂಭಿಸಿದಾಗ ರಜೆಯ ತೆಗದುಕೊಂಡು ರಿಪ್ರೆಶ್ ಆಗೋಣ.
ನಮಗಾಗಿ ಸಮಯವನ್ನು ಮಾಡಿಕೊಳ್ಳೋಣ. ಜನಜಂಗುಳಿಯಿಂದ ಮನಸ್ಸಿಗೆ ಕಿರಿಕಿರಿಯಾಗಿ ಅಶಾಂತಿಯೆನಿಸಿದರೆ ಒಂಟಿಯಾಗಿರುವುದು ಕೆಲವೊಮ್ಮೆ ಚಿಕಿತ್ಸೆಯೆಂದು ಭಾವಿಸಿ ಒಂಟಿಯಾಗಿರಲು ಪ್ರಯತ್ನಿಸೋಣ
ಅತಿಯಾದ ಸಾಮಾಜಿಕ ಮಾಧ್ಯಮಗಳ ಬಳಕೆ ನಮ್ಮ ಶಾಂತಿಯುತ ಮನಸ್ಸನ್ನು ಕದಡಬಹುದು ಆದ್ದರಿಂದ ಅಗತ್ಯವಿರುವಾಗ ಮಾತ್ರ ಕಡಿಮೆ ಸಮಯ ಸಾಮಾಜಿಕ ಮಾಧ್ಯಮಗಳನ್ನು ಬಳಸಲು ಕಡಿವಾಣ ಹಾಕಿಕೊಳ್ಳೋಣ.ಮತ್ತು ಹೊಸ ಹವ್ಯಾಸಗಳು ಒತ್ತಡ ಕಡಿಮೆ ಮಾಡಿ ನಾವು ಸಂತಸದಿಂದ ಇರಲು ಪೂರಕವಾಗಿವೆ ಇಂತಹ ಉತ್ಪಾದಕ ಹವ್ಯಾಸಗಳನ್ನು ಹೆಚ್ಚು ರೂಪಿಸಿಕೊಳ್ಳೋಣ.
ಕೆಲವೊಮ್ಮೆ ಸಮಯ ಸಂದರ್ಭಕ್ಕೆ ಅನುಗುಣವಾಗಿ
ಬದಲಾವಣೆಗೆ ಹೊಂದಿಕೊಳ್ಳುವ ಗುಣವೂ ನಮ್ಮದಾಗಬೇಕು.
ಹೀಗೆ ನಮ್ಮ ಸಂತಸ ಆಂತರಿಕ ಶಾಂತಿಗೆ ಬಹುತೇಕ ನಾವೇ ಕಾರಣರಾಗಿರುವುದರಿಂದ ಸಂತಸದಿಂದ ಬಾಳೋಣ ಆಂತರಿಕ ಶಾಂತಿ ಅನುಭವಿಸೋಣ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
No comments:
Post a Comment