ಬರಲಿದೆ ವರ್ಷ ಇಪ್ಪತ್ತು ಇಪ್ಪತ್ತೊಂದು |
ನಮ್ಮ ಬದುಕಲ್ಲಿ ಹರ್ಷ ತುಂಬಿರಲಿ ಎಂದೆಂದೂ||
ಹೊಸ ಕ್ಯಾಲೆಂಡರ್ ವರ್ಷದ ಹಾರ್ಧಿಕ ಶುಭಾಶಯಗಳು 💐💐
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಬರಲಿದೆ ವರ್ಷ ಇಪ್ಪತ್ತು ಇಪ್ಪತ್ತೊಂದು |
ನಮ್ಮ ಬದುಕಲ್ಲಿ ಹರ್ಷ ತುಂಬಿರಲಿ ಎಂದೆಂದೂ||
ಹೊಸ ಕ್ಯಾಲೆಂಡರ್ ವರ್ಷದ ಹಾರ್ಧಿಕ ಶುಭಾಶಯಗಳು 💐💐
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
*ಸಿಹಿಜೀವಿಯ ಅವಲೋಕನ ೨೦೨೦*
*ಆಪತ್ತು -ತಾಕತ್ತು*
ವರ್ಷ ಇಪ್ಪತ್ತು ಇಪ್ಪತ್ತು
ತಂದೊಡಿತು ಹಲವಾರು
ವಿಪತ್ತು ,ಆಪತ್ತು |
ಆದರೂ ಕುಗ್ಗದೇ
ಬದುಕುತ್ತಿರುವೆವು ನೋಡಿ
ಇದೇ ನಮ್ಮ ತಾಕತ್ತು ||
*ಏಟು*
ನಾನೂ ಕೂಡ ಪಾಠ ಮಾಡಲು
ಶುರುಮಾಡಿದೆ ಬಳಸಿಕೊಂಡು
ಜೂಮ್ ,ಗೂಗಲ್ ಮೀಟು|
ಮಕ್ಕಳು ತಪ್ಪು ಮಾಡಿದಾಗ
ಕೊಡಲಾಗಲಿಲ್ಲ ಪೋನ್
ಟ್ಯಾಬ್ ಗೆ ನಾಲ್ಕು ಏಟು ||
*ಮೀಟು*
ನನ್ನ ಗೆಳೆಯ ಪಾಠ
ಮಡಲೇ ಇಲ್ಲ
ಬಳಸಿಕೊಂಡು
ಗೂಗಲ್ ಮೀಟು|
ಕಾರಣವಿಷ್ಟೆ ಅವನಿಗೆ
ನೆನಪಾಯಿತು ನಟಿಯರು
ಹೇಳಿದ್ದು ಮೀಟು ||
*ಹರ್ಷ*
ಕಾಣದ ವೈರಾಣುವೊಂದು
ಕಸಿದುಕೊಂಡಿತು ಜನರ
ನೆಮ್ಮದಿಯನ್ನು ಕಳೆದ ವರ್ಷ|
ಬರುವ ೨೦೨೧ ನೇ ವರ್ಷ
ನೀಡುವುದೇ ನಮಗೆ ಹರ್ಷ ?||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಸಿಹಿಜೀವಿಯ ಅವಲೋಕನ ೨೦೨೦*
*ಆಪತ್ತು -ತಾಕತ್ತು*
ವರ್ಷ ಇಪ್ಪತ್ತು ಇಪ್ಪತ್ತು
ತಂದೊಡಿತು ಹಲವಾರು
ವಿಪತ್ತು ,ಆಪತ್ತು |
ಆದರೂ ಕುಗ್ಗದೇ
ಬದುಕುತ್ತಿರುವೆವು ನೋಡಿ
ಇದೇ ನಮ್ಮ ತಾಕತ್ತು ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
🍫🍬🍫🍬🍫🍬🍫
*ಪಿರಮಿಡ್ ಕವನಗಳು*
ಆ
ಕವಿ
ರಸ ಋಷಿ
ವಿಶ್ವಮಾನವ
ಕನ್ನಡದ ಕಟ್ಟಾಳು
ಅನಿಕೇತನ ಚೇತನ
ದೊ.
ಮಳೆ
ಸುರಿದು
ನಿಂತಾಗಿದೆ
ಮತ್ತೆ ಯಾವಾಗ?
ಈ
ತಂತಿ
ಮೀಟಿದೆ
ನಾದಮಯ
ವೀಣೆ ಸಾರ್ಥಕ.
ಈ
ಕೊಡೆ
ನಮಗೆ
ಉಪಕಾರಿ
ಬೇಸಿಗೆಯಲು
ಮಳೆಗಾಲದಲೂ
ಪ್ರಣಯದಾಟದಲೂ .
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಹೇಗೆ*
ಜೀರುಂಡೆ ಹಿಡಿದು
ಆಡಿದ ಆ ಬಾಲ್ಯದ
ನೆನಪ ಮರೆಯಲಿ ಹೇಗೆ?
ಅಂತಹ ಮಧುರ
ಮತ್ತೆ ಬಾಲ್ಯವನ್ನು
ಪಡೆಯಬೇಕಿದೆ
ಗೊತ್ತಿದ್ದವರು ಹೇಳಿ ಹೇಗೆ?
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಮಂಗನಾಟ*
🐒🐐🐒🐐🐒🐐🐒
ಕಾಡಲಿದ್ದ ಕೋತಿಯೊಂದು
ನಾಡಿಗೆ ಬಂದಿತು
ಯಜಮಾನನ ಅನುಮತಿಯಂತೆ
ಮೇಕೆಗಳ ಜೊತೆ ಸೇರಿತು.
ಮೊದಲು ಸುಮ್ಮನಿದ್ದ
ಕೋತಿ ಆಟ ತೋರಿತು
ಮೇಕೆ ಪಾಲಿನ ಆಹಾರವನ್ನು
ತಿಂದು ತೇಗಿತು .
ಮನೆಯ ಒಳಗೆ ನುಗ್ಗಿ
ಮೊಸರು ಬೆಣ್ಣೆ ತಿಂದಿತು
ಮೇಕೆ ಬಾಯಿಗೆ ಬೆಣ್ಣೆ
ಸವರಿ ಸುಮ್ಮನಿದ್ದಿತು.
ದಿನಕಳೆದಂತೆ ಕೋತಿಯಾಟ
ಯಜಮಾನ ಕಂಡನು
ಕೋತಿ ಹಿಡಿದು ಕಾಡಿಗೆ
ಬಿಟ್ಟು ಬಂದನು .
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
🐐🐒🐐🐒🐐🐒🐐🐒
*ಆತ್ಮವಿಶ್ವಾಸ*
ತಿಳಿ ನೀಲಿ ಬಾನಿನಲಿ
ಅಲ್ಲಲ್ಲಿ ಬಿಳಿಮೋಡ
ದಡದಲಿ ನಿಂತಿವೆ
ಬಣ್ಣದ ದೋಣಿಗಳ ನೋಡ
ಬಣ್ಣಗಳೇನೋ ಇವೆ
ಬದುಕು ಬರೀ ಕಪ್ಪು ಬಿಳುಪು
ದಡ ಸೇರುವುದು ಖಚಿತವಿಲ್ಲ
ಬಿರುಗಾಳಿಯದೇ ಕೆಟ್ಟ ನೆನಪು
ಕಳೆದ ದಿನಗಳಲಿ
ಹೀಗಿರಲಿಲ್ಲ ಕಷ್ಟಗಳು
ಈಗೇಕೋ ದಿನವೂ
ತೊಂದರೆ ತಾಪತ್ರಯಗಳು
ದೋಣಿ ನಡೆಸುವುದನ್ನು
ನಿಲ್ಲಿಸಲಾರೆ ಇಂದು
ಒಳಿತಾಗುವುದು ಮುಂದೆ
ಎಂಬ ಆತ್ಮವಿಶ್ವಾಸ ನಂದು
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಸಿಹಿಜೀವಿಯ ಹನಿ*
*ಮಂತ್ರಾಲಯ*
ಸಣ್ಣ ತೂತು
ದೊಡ್ಡ ದೋಣಿ
ಮುಳುಗಿಸಬಹುದು
ಸಣ್ಣ ಅಪನಂಬಿಕೆ
ಸುಂದರ ಸಂಸಾರವ
ನಾಶ ಮಾಡುವುದು|
ಪರಸ್ಪರ ನಂಬಿಕೆ
ಸಹಕಾರ ಇದ್ದರೆ
ಪ್ರತಿ ಮನೆಯು
ಮಂತ್ರಾಲಯವಾಗುವುದು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಬಿಡೆ*
⛱️🏖️⛱️⛱️⛱️
ಮಳೆಯಲಿ
ಇರುವುದೊಂದೆ
ಕೊಡೆ
ನೀ ಕೊಡೆ
ನಾ ಬಿಡೆ
ಇನ್ನೂ ಸನಿಹ
ಬಾರೆ ನಾ
ನಿನ್ನ ಬಿಡೆ
ಕೊಡೆಯಾಕೆ
ಬಿಡೆ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
🚤🏖️⛱️🚤🏖️🚤🏖️⛱️
*ಶುನಕ*
🐶🐶🐶🐶
ಸಾಮಾನ್ಯವಾದ
ಪ್ರಾಣಿ ನಾನು
ಶುನಕ|
ಅತಿಯಾಗಿ
ಆಸೆಪಡುವುದಿಲ್ಲ
ಅನ್ನವೊಂದಿದ್ದರೆ
ಕಣ್ಣೆತ್ತಿಯೂ
ನೋಡುವುದಿಲ್ಲ
ಕನಕ||
*ವಾಜಿ*
🐎🐎🐎🐎🐎
ಅಂದು
ರಥಗಳಲಿ
ರಥಿಕರು,ರಾಜರು
ಬಳಸಿದರು
ಹೆಮ್ಮೆಯಿತ್ತು ನನಗೆ
ನಾನು ವಾಜಿ|
ಇಂದು
ಬೇಸರವಾಗುತಿದೆ
ನನ್ನ ಬಳಸುವರು
ಕೇವಲ ಆಡಲು ಬಾಜಿ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
🐎🐶🐎🐶🐎🐶🐎🐶
ಇಂದು ವೈಕುಂಠ
ಏಕಾದಶಿ.
ತರೆದಿರುವುದಂತೆ
ಸ್ವರ್ಗದ ದ್ವಾರ|
ನಮ್ಮ ದುರ್ಗುಣಗಳ
ತೊಲಗಿಸೆಂದು ಬೇಡಲು
ಭಗವಂತನ ಸನ್ನಿಧಿಗೆ
ಹೋಗೋಣ ಬಾರಾ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ನೆನಪಾಗುವುದು*
ವರ್ಷ ಪೂರ್ತಿ ನಾವು
ಅಲ್ಯೂಮಿನಿಯಂ
ಸ್ಟೀಲ್, ಪ್ಲಾಸ್ಟಿಕ್ ಗಳನ್ನೇ
ಕೊಳ್ಳುವುದು ಮತ್ತು
ಬಳಸುವುದು |
ಬೇಸಿಗೆಯಲಿ
ದಾಹವಾದಾಗ ಮಾತ್ರ
ಕುಂಬಾರ ಮಾಡಿದ
ಮಡಿಕೆ ಕುಡಿಕೆ
ನೆನಪಾಗುವುದು ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಪಶುಸಮಾನ*
ತಪ್ಪದೇ ಮಾಡೋಣ
ನಾವೆಲ್ಲರೂ ಮತದಾನ|
ಹಕ್ಕಿದ್ದರೂ ಚಲಾಯಿಸದಿದ್ದರೆ
ನಾವು ಪಶುಸಮಾನ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
💐ಸಿಹಿಜೀವಿಯ ಹನಿ 💐
*ಕಾಂತ-ವಸಂತ*
ಎಲೆಗಳುದುರಿದ
ಮರದಂತೆ
ಮೊಗದಲೇಕೆ
ಬೇಸರ ಕಾಂತ|
ಚಿಂತಿಸದಿರು
ನಮ್ಮ ಬಾಳಲ್ಲೂ
ಬರುವುದು ವಸಂತ||
🥦🥦🥦🥦🥦🥦
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಸಿಡಿದೇಳು*
ನಮ್ಮಯ ನಾಡಿನ
ಹೆಮ್ಮೆಯ ತಂಗಿ ಎದ್ದೇಳು
ಅಕ್ರಮ ಅನ್ಯಾಯ
ಕಂಡರೆ ಸಿಡಿದೇಳು.
ಬಗ್ಗದೆ ಜಗ್ಗದೆ ಮುನ್ನುಗ್ಗು
ಲಜ್ಜೆತನವನು ಸರಿಸು
ಪೋಲಿ ಪೋಕರಿಗಳಿಗೆ
ನಿನ್ನ ಕೈ ರುಚಿ ತೋರಿಸು
ಕಲಿಯುತ ಕರಾಟೆ
ಸ್ವಯಂ ರಕ್ಷಣೆ ಮಾಡಿಕೊ
ನಲಿಯುತ ಜೀವಿಸು
ನಿನ್ನಯ ಭದ್ರತೆ ನೋಡಿಕೋ
ನಂಬದಿರು ಎಲ್ಲರ
ಎಚ್ಚರವಿರಲಿ ಸದಾಕಾಲ
ದಿಟ್ಟತನದಿ ಬದುಕು
ನೀ ಬರುವುದು ಸತ್ಕಾಲ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಇಂದು ವಿಶ್ವ ಕರಾಟೆ ದಿನ*
೧
ಚುಟುಕು
*ಬಾರಿಸುತಿರು*
ಅಬಲೆಯು ನಾನೆಂದು
ದುರ್ಬಲಳು ನಾನೆಂದು
ಎಂದಿಗೂ ಕೊರಗದಿರು
ಕರಾಟೆ ಕಲಿತು ನಿನಗೆ
ತೊಂದರೆ ಕೊಡುವವರಿಗೆ
ನಾಲ್ಕು ಬಾರಿಸುತಿರು
೨
ಹನಿಗವನ
*ಆಯುಧ*
ಓ ಮಹಿಳೆಯೆ
ಯಾರೂ ನನ್ನ
ರಕ್ಷಣೆ ಮಾಡುವುದಿಲ್ಲ
ಎಂದು ಕೊರಗಬೇಡ
ವಿಧ ವಿಧ|
ಕರಾಟೆ ಕಲಿತು
ನೀನೇ ಆಗು
ಆಯುಧ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಪಿಟಿ ಪಿಟಿ*
ಸಂಜೆ ಮನೆಗೆ ಬಂದ
ಗಂಡನಿಗೆ ಹೆಂಡತಿ
ಬೇಗನೆ ನೀಡದಿದ್ದರೆ
ಕಾಫಿ ಅಥವಾ ಟೀ|
ಗಂಡನ ಬಾಯಿ
ಒಂದೇ ಸಮನೆ
ಸದ್ದು ಮಾಡುವುದು
ಪಿಟಿ ಪಿಟಿ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಗುದ್ದು_ರದ್ದು*
ಸದನದಲ್ಲಿ
ನೋಡಲಾಗದು
ಜನಪ್ರತಿನಿಧಿಗಳ
ಸದ್ದು ಮತ್ತು ಗುದ್ದು|
ದಯವಿಟ್ಟು
ಮಾಡಿಬಿಡಿ
ವಿಧಾನ ಪರಿಷತ್ ರದ್ದು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ದಂಡ_ದೀರ್ಘದಂಡ*
ಲಾಕ್ಡೌನ್ ಸಮಯದಲ್ಲಿ
ನಗರದಿಂದ ಹಳ್ಳಿಗೆ
ಬರವವರನ್ನು ತಡೆದು
ಹಾಕಿದ್ದರು ಬಹಿಷ್ಕಾರ
ಮತ್ತು ದಂಡ|
ಗ್ರಾಮ ಪಂಚಾಯತಿ
ಚುನಾವಣೆಗೆ ಮತ
ಹಾಕಲು ಬರಲೇಬೇಕು
ಎಂದು ಹಾಕುತ್ತಿದ್ದರೆ
ಇಂದು ದೀರ್ಘದಂಡ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ನಲ್ಲೆ ಬರೆಯುವೆ
ಒಂದು ಪ್ರೇಮದ ಓಲೆ
ಮರೆಯದೇ ಬಂದು
ಸೇರು ಪ್ರೇಮದ ಶಾಲೆ
ಕಲಿಸುವೆ ನಿನಗೆ
ಪ್ರೇಮದ ಪಾಠಗಳ
ತಿನಿಸುವೆ ಸಿಹಿಗಳ
ಬಳಸಿ ಅಧರಗಳ
ತೋರಿಸುವೆ ನಿನಗೆ
ಮಧು ಚಂದ್ರವ
ಕತ್ತಲಾಟವ ಕಲಿಸುವೆ
ಆರಿಸುತಾ ಲಾಂದ್ರವ
ಕಾಯುತಿರುವೆ ದಾರಿಯ
ನೋಡುತಾ ನಿನಗಾಗಿ
ಬಂದು ಬಿಡು ಬೇಗನೆ
ನಮ್ಮ ಒಲವಿಗಾಗಿ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ನಮ್ಮ ರಾಜಕಾರಣಿಗಳಿಗೆ
ಯಾವುದೇ ಪ್ರಭಾವ
ಬೀರುವುದಿಲ್ಲ ಗ್ರಹಗಳು
ಮತ್ತು ಗ್ರಹಣ|
ಯಾವ ಮಾರ್ಗದಿಂದರೂ
ಮಾಡೇ ಮಾಡುವರು
ಹಗರಣ,ಹಣ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಸಾಲದರೆಡು ಕಣ್ಣು*
ಭುವಿಯಲಿ ಬ್ರಹ್ಮನ ಸೃಷ್ಟಿಯ
ಸೌಂದರ್ಯವೇ ಈ ಹೆಣ್ಣು
ಮೂಗುತಿ ಧರಿಸಿದ ಅವಳ
ನೋಡಲು ಸಾಲದೆರಡು ಕಣ್ಣು.
ಧರಿಸಿ ಬಂದರೆ ಯುವತಿಯರು
ಚಿನ್ನ, ಬೆಳ್ಳಿ ,ವಜ್ರದ ನತ್ತು
ನೋಡುವ ಸೌಂದರ್ಯೋಪಾಸಕರಿಗೆ
ಕಳೆದು ಹೋದದ್ದೆ ಗೊತ್ತಾಗೊಲ್ಲ ಹೊತ್ತು.
ಕಾಲ್ಬೆರಳಿಗೆ ಹಾಕಿದ ಕಾಲುಂಗುರ
ಮುತ್ತೈದೆಯರ ಪಾಲಿಗೆ ಸೌಭಾಗ್ಯ
ನೀರೆಯರ ಕಾಲ್ಬೆರಳ ಅಲಂಕರಿಸಿದ
ಕಾಲುಂಗುರದ ಭಾಗ್ಯವೋ ಭಾಗ್ಯ.
ಕಾಲಂದುಗೆಯ ಧರಿಸಿ ಘಲ್ ಘಲ್
ಸದ್ದು ಮಾಡಿ ನಾರಿ ಬಂದರೆ ಬೀದಿಯಲಿ
ಸಂಗೀತದ ಸರಿಗಮಗಳು ಉಲಿದಂತೆ
ಭಾಸವಾಗುವುದು ನಮ್ಮ ಕಿವಿಗಳಲಿ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ವಿದ್ಯಾಗಮ ಯೋಜನೆಯ ಸಾಧಕ ಭಾಧಕಗಳು*
ಪ್ರಪಂಚವನ್ನೇ ಅಲುಗಾಡಿಸಿದ ಕಣ್ಣಿಗೆ ಕಾಣದ ಅಣುವೊಂದು ಮಾಡಿದ ಅವಾಂತರಗಳ ಲೆಕ್ಕ ಹಾಕಲು ಸಾಧ್ಯವಿಲ್ಲ. ಸಕಲ ರಂಗಗಳಲ್ಲಿ ಹಿನ್ನಡೆಯನ್ನು ಎಲ್ಲಾ ದೇಶಗಳು ಅನುಭವಿಸಬೇಕಾಗಿ ಬಂದುದು ನಮಗೆಲ್ಲ ತಿಳಿದ ವಿಷಯವೇ ಸರಿ. ಶಾಲಾ ಶಿಕ್ಷಣ ವ್ಯವಸ್ಥೆಯು ಈ ಅವಧಿಯಲ್ಲಿ ಬಹಳ ತೊಂದರೆಗೊಳಗಾಗಿ ಸರ್ಕಾರ, ಪೋಷಕರು, ಮತ್ತು ವಿದ್ಯಾರ್ಥಿಗಳು ಬಹಳ ಚಿಂತೆಗೊಳಗಾದಾಗ ಆಶಾಕಿರಣವಾಗಿ ಬಂದ ಯೋಜನೆಯೇ ವಿದ್ಯಾಗಮ.
ಕರ್ನಾಟಕ ಸರ್ಕಾರದ ಬಹು ನಿರೀಕ್ಷಿತ ಮತ್ತು ತಕ್ಕಮಟ್ಟಿಗೆ ಯಶಸ್ಸು ಕಂಡು , ಸಂದಿಗ್ಧ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಕಲಿಕೆಯ ಕಡೆಗೆ ಗಮನಸೆಳೆಯುವಲ್ಲಿ ಈ ಯೋಜನೆ ಬಹಳ ಪ್ರಮುಖವಾದ ಪಾತ್ರವನ್ನು ವಹಿಸಿತು ಎಂಬುದನ್ನು ಯಾರೂ ಅಲ್ಲಗಳೆಯಲಾಗದು.
ಶಾಲಾ ವಾತಾವರಣವನ್ನು ಹೊರತು ಪಡಿಸಿ ಮಕ್ಕಳ ಸಾಮಾಜಿಕ ,ಆರ್ಥಿಕ, ಮತ್ತು ಭೌಗೋಳಿಕ ಹಿನ್ನೆಲೆಯಲ್ಲಿ ವಿವಿಧ ಕಾಲ್ಪನಿಕ ಕೋಣೆಗಳನ್ನು ಮಾಡಿಕೊಂಡು ಮಕ್ಕಳಿಗೆ ಕಲಿಕೆಯ ನಿರಂತರತೆ ಕಾಪಾಡಲು ವಿದ್ಯಾಗಮ ತರಗತಿಗಳು ಆರಂಭವಾದವು.
ಕೆಲವೆ ವಿದ್ಯಾರ್ಥಿಗಳು ಮೊಬೈಲ್ ಲ್ಯಾಪ್‌ಟಾಪ್ , ಕಂಪ್ಯೂಟರ್ ಮತ್ತು ಇಂಟರ್ನೆಟ್ ಸಂಪರ್ಕ ಹೊಂದಿದ್ದರು ಅಂತಹ ಮಕ್ಕಳಿಗೆ ಆನ್ಲೈನ್ ತರಗತಿ ಮಾಡುವುದು ಸವಾಲಿನ ಕೆಲಸವಾದರೂ ಅವರ ಇತಿಮಿತಿಗಳನ್ನು ಅರಿತು ನಮ್ಮ ಶಿಕ್ಷಕರು ಅವರಿಗೆ ಆನ್ಲೈನ್ ತರಗತಿಗಳನ್ನು ಮಾಡಿದರು ಇದು ಕೆಲವೆಡೆ ವಿದ್ಯಾರ್ಥಿಗಳು ಮೊಬೈಲ್ ಗಳನ್ನು ದುರುಪಯೋಗ ಮಾಡಿಕೊಳ್ಳಲು ದಾರಿಯಾಗಿದ್ದು, ಕೆಲ ಮಕ್ಕಳಿಗೆ ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣಿನ ತೊಂದರೆಗಳನ್ನು ಅನುಭವಿಸಿದ್ದು ಅಲ್ಲಲ್ಲಿ ವರದಿ ಆದವು , ಇವುಗಳ ನಡುವೆ ತಕ್ಕಮಟ್ಟಿಗೆ ಈ ತರಗತಿಗಳು ಯಶಸ್ವಿಯಾದವು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ ಆದರೆ ಈ ತರಗತಿಗಳು ಸಾಂಪ್ರದಾಯಿಕ ತರಗತಿಗಳಿಗೆ ಪೂರಕವೇ ಹೊರತು ಎಂದಿಗೂ ಪರ್ಯಾಯ ಅಲ್ಲ ಎಂಬುದು ಕೆಲವೇ ದಿನಗಳಲ್ಲಿ ಸಾಬೀತಾಯಿತು.
ಇನ್ನೂ ಟಿ ವಿ ಮೊಬೈಲ್ ಇಲ್ಲದ ಬಹುತೇಕ ಮಕ್ಕಳ ತಲುಪಲು ಶಿಕ್ಷಕರು , ದೇವಾಲಯ, ಮರಗಳ ನೆರಳು, ಸಮುದಾಯ ಭವನ, ಮುಂತಾದವುಗಳ ಬಳಿ ಐದರಿಂದ ಎಂಟು ಮಕ್ಕಳ ಗುಂಪುಗಳಿಗೆ ಸಾಮಾಜಿಕ ಮತ್ತು ದೈಹಿಕ ಅಂತರ ಕಾಪಾಡಿಕೊಂಡು ಪಾಠಗಳನ್ನು ಶುರು ಮಾಡಿದರು, ಈ ವೇಳೆಯಲ್ಲಿ ನಮ್ಮ ಮಹಿಳಾ ಶಿಕ್ಷಕರು ಹಲವಾರು ಮುಜುಗರ ಮತ್ತು ಸಮಸ್ಯೆಯನ್ನು ಅನುಭವಿಸಿದರೂ, ಕೆಲ ಶಿಕ್ಷಕರು ಕೋವಿಡ್ ಗೆ ಬಲಿಯಾದರೂ ಮಕ್ಕಳ ಕಲಿಕೆಗೆ ನೆರವಾಗಲು ಸರ್ಕಾರದ ಜೊತೆ ಟೊಂಕ ಕಟ್ಡಿ ನಿಂತಿದ್ದು ಶಿಕ್ಷಕ ಸಮುದಾಯದ ಬಗ್ಗೆ ಗೌರವ ಹೆಚ್ಚುವಂತೆ ಮಾಡಿತು.
ವಿದ್ಯಾಗಮ ಒಂದು ಒಳ್ಳೆಯ ಯೋಜನೆಯಾದರೂ ಅನುಷ್ಠಾನದ ದೃಷ್ಟಿಯಿಂದ ಕೆಲ ನ್ಯೂನತೆಗಳನ್ನು ಕಾಣಬಹುದು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಂದೆಡೆ ಸೇರಿ ಪಾಠ ಕಲಿಯಬಹುದು ಎಂದು ಒಪ್ಪುವುದಾದರೆ ಅದಕ್ಕೆ ದೇವಸ್ಥಾನ, ಸಮುದಾಯ ಭವನ ಬೀದಿ ಏಕೆ? ಶಾಲಾ ಆವರಣ ಏಕಾಗಬಾರದು? ಶಾಲಾ ಆವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಅದೇ ಪಾಠ ಪ್ರವಚನ ಮಾಡಬಹುದು.
ಕರೋನ ಎರಡನೇ ಮತ್ತು ಮೂರನೇಯ ಅಲೆಯ ಭೀತಿಯಲ್ಲಿರುವ ನಾವು ಶಾಲಾ ಕಾಲೇಜುಗಳು ಯಾವಾಗ ಆರಂಭವಾಗುವವು ಎಂಬ ಅನಿಶ್ಚಿತತೆಯ ನಡುವೆ ಪರಿಷ್ಕೃತ ವಿದ್ಯಾಗಮ ಯೋಜನೆಯೊಂದೆ ನಮ್ಮ ಮಕ್ಕಳಿಗೆ ಕಲಿಕೆಯ ದಾರಿ ತೋರುವ ಕೈಮರವಾಗಿದೆ. ಶಾಲಾ ಆವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ,ಮಾಡಿದರು ಹೆಚ್ಚಿನ ಸಂಖ್ಯೆಯ ಮಕ್ಕಳಿರುವಲ್ಲಿ ಪಾಳಿ ಪದ್ದತಿ ಮೂಲಕ ಕಲಿಕೆಯ ವಾತಾವರಣ ಮೂಡಿಸಬಹುದು , ತನ್ಮೂಲಕ ಮಕ್ಕಳು ಬಾಲ ಕಾರ್ಮಿಕರಾಗುವುದನ್ನು ತಪ್ಪಿಸಬಹುದು, ಬಾಲ್ಯವಿವಾಹ ಗಳನ್ನು ತಡೆಯಬಹುದು.ಮತ್ತು ಮಕ್ಕಳು ನಿರಂತರವಾಗಿ ಕಲಿಕೆಯ ವಾತಾವರಣದಲ್ಲಿ ಇರುವಂತೆ ಮಾಡಬಹುದು.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಮಹಾರಾಜು*
ಗ್ರಾಮ ಪಂಚಾಯತ್
ಚುನಾವಣೆಯಲ್ಲಿ
ಅಲ್ಲಲ್ಲಿ ನಡೆದಿದೆ
ಅಭ್ಯರ್ಥಿಗಳ ಹರಾಜು|
ಪ್ರಜಾಪ್ರಭುತ್ವ
ಪದ್ದತಿಯಿದ್ದರೂ
ದುಡ್ಡಿದ್ದವನೇ ಮಾಹಾರಾಜು|
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಅಧರ*
ಜನರು ಬೆದರಿಹರು
ಮಾರುಕಟ್ಟೆಯ ಜೇನಿಂದ
ತೊಂದರೆಗೊಳಗಾಗುವುದು
ತಮ್ಮ ಉದರ|
ನನಗಂತೂ ಭಯವಿಲ್ಲ
ನಾನೀಗಲೂ ಆಶ್ರಯಿಸಿರುವೆ
ಜೇನಿಗೆ ನನ್ನವಳ ಅಧರ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಹುಟ್ಟು ಗುಣ*
ಜೀವನದಿ ಬರೀ
ಸಿಹಿಯೇ ಬೇಕೆಂದು
ಕಿತ್ತು ತಿನ್ನುವ
ಸ್ವಾರ್ಥವ ಮಾನವ
ಬಿಡಲೇಇಲ್ಲ |
ಎಷ್ಟೇ ಕಿತ್ತರೂ
ಜೇನುಮಾತ್ರ ಗೂಡು
ಕಟ್ಟುವ ಭರವಸೆ
ಕಳೆದುಕೊಂಡಿಲ್ಲ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಸುಸಂಸ್ಕಾರ*
ಸಂಪೂರ್ಣ ಜಗವನ್ನೇ
ಗೆಲ್ಲಬಹುದು
ನಮ್ಮಲ್ಲಿ ಇದ್ದರೆ
ಸುಸಂಸ್ಕಾರ|
ಗೆದ್ದ ಸರ್ವವನ್ನು
ಕಳೆದುಕೊಳ್ಳುವೆವು
ಸುಳಿದರೆ ಸ್ವಲ್ಪ
ಅಹಂಕಾರ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಕುರ್ಚಿಗಳು _ ಭಾವನೆಗಳು
ಮದುವೆಯ ಸಂಭ್ರಮದಿ
ಮಸಣ ಯಾತ್ರೆಯ ನೋವಿನಲಿ
ದೇವರ ಜಾತ್ರೆಯ ಭಕ್ತಿಯಲಿ
ಅವೇ ಶಾಮಿಯಾನ ಕುರ್ಚಿಗಳು|
ಸಮಯ ಸನ್ನಿವೇಶದಲ್ಲಿ
ನಮಗೆ ಅರಿವಿಲ್ಲದೆ
ಬೇರೆಯಾಗುವವು ಭಾವನೆಗಳು||
೧
*ಮಣ್ಣಿಗೆ*
ನಮ್ಮೆಲ್ಲರ ಪಯಣ
ಮಣ್ಣಿನಿಂದ ಮಣ್ಣಿಗೆ
ಮರಳಿ ಮಣ್ಣಿಗೆ|
ಅದನ್ನರಿತೂ ನಾವು
ಹಪಹಪಿಸುತಿಹೆವು
ಹೆಣ್ಣು, ಹೊನ್ನು ಮಣ್ಣಿಗೆ||
೨
*ಪರಿಣಾಮ*
ಕಲುಷಿತ ಮಾಡುತಿಹೆವು
ನಮ್ಮ ಪವಿತ್ರ ಮಣ್ಣನ್ನು|
ಸಂರಕ್ಷಣೆ ಮಾಡದಿದ್ದರೆ
ತಿನ್ನಬೇಕಾದೀತು ಮಣ್ಣನ್ನು ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
https://quizzory.com/id/5fd0d987c66cf808ee739bea
ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ
ಆಂಗ್ಲ ಮಾಧ್ಯಮದಲ್ಲಿ ( English medium) 10 ಪ್ರಶ್ನೆಗಳ ರಸಪ್ರಶ್ನೆ. ರಾಜ್ಯದ ಯಾವುದೇ ಶಾಲೆಯ ಯಾವುದೇ ತರಗತಿಯ ವಿದ್ಯಾರ್ಥಿಗಳು ಉತ್ತರಿಸಬಹುದು. ವಿದ್ಯಾರ್ಥಿಗಳು ಪೂರ್ಣ ಹೆಸರು, ಶಾಲೆಯ ಹೆಸರು, ವರ್ಗ ಕಡ್ಡಾಯವಾಗಿ ನಮೂದಿಸಬೇಕು. ಶಿಕ್ಷಕರು ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ share ಮಾಡಿ 🙏.
ರಚನೆ: ಸಿ ಜಿ ವೆಂಕಟೇಶ್ವರ
ಸಹಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕ್ಯಾತಸಂದ್ರ
ತುಮಕೂರು .
ಬಂದು_ ಬಂದ್
ಮಾತುಕತೆ ಮೂಲಕ
ಬಗೆಹರಿಸುವುದ ಬಿಟ್ಟು
ಮಾತೆತ್ತಿದರೆ ಕೆಲವರು
ಬಡಬಡಿಸುವರು
ಬಂದು, ಬಂದು |
ದಿನಗೂಲಿ ಕೆಲಸಗಾರರ,
ಸಣ್ಣವ್ಯಾಪಾರಿಗಳ
ಕಷ್ಟ ಕೋಟಲೆಗಳ
ನೀವು ಒಮ್ಮೆ
ನೋಡಬಾರದೆ ಬಂದು||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ವಿಶ್ವ ವಿಕಲಚೇತನರ ದಿನದ ಶುಭಾಶಯಗಳು
೧೧೨
ಡಿಸೆಂಬರ್ ೩
ನಮಗೂ ಒಂದು ದಿನ
ದಿವ್ಯಾಂಗ ದಿನ
೧೧೩
ಕರುಣೆಯೇಕೆ?
ಅವಕಾಶವ ನೀಡಿ
ಸಾಧಿಸುವೆವು.
೧೧೪
ತೆಗಳಬೇಡಿ
ಹೀಯಾಳಿಸಬೇಡಿರಿ
ಬೇಕಿಲ್ಲ ಬೇಡಿ
೧೧೫
ಎಲ್ಲಾ ಜನಕೆ
ಗೋಚರಿಸುವುದಿಲ್ಲ
ವಿಕಲಾಂಗತೆ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು